POLICE BHAVAN KALABURAGI

POLICE BHAVAN KALABURAGI

29 December 2012

GULBARGA DISTRICT



:: ಪತ್ರಿಕಾ ಪ್ರಕಟಣೆ ::
ಈಶಾನ್ಯ ವಲಯ ಪೊಲೀಸ್ ಮತ್ತು ಅಡ್ವೊಕೇಟ್ ಜನರಲ್ ಕಛೇರಿ ಸಹಯೊಗದೊಂದಿಗೆ ಗೂಂಡಾ ಕಾಯಿದೆ ಅನುಷ್ಟಾನಕ್ಕಾಗಿ ಒಂದು ದಿನದ ವಲಯ ಮಟ್ಟದ ಕಾರ್ಯಗಾರವನ್ನು  ಜಿಲ್ಲಾಧಿಕಾರಿಗಳ ಕಛೇರಿಯ ಸಂಭಾಗಣ ಗುಲಬರ್ಗಾದಲ್ಲಿ,
 ದಿನಾಂಕ:29-12-2012 ರಂದು ನಡೆದ ಗೂಂಡಾ ಕಾಯಿದೆ ಅನುಷ್ಟಾನ ಕಾರ್ಯಗಾರ.
ದಿನಾಂಕ:29-12-2012 ರಂದು ಜಿಲ್ಲಾಧಿಕಾರಿಗಳ ಕಛೇರಿಯ ಸಂಭಾಗಣ ಗುಲಬರ್ಗಾದಲ್ಲಿ ಗೂಂಡಾ ಕಾಯಿದೆ ಅನುಷ್ಟಾನಕ್ಕಾಗಿ ಕಾರ್ಯಗಾರವನ್ನು ಈಶಾನ್ಯ ವಲಯ ಪೊಲೀಸ್ ಇಲಾಖೆ ಮತ್ತು ಅಡ್ವೊಕೇಟ್ ಜನರಲ್ ಕಛೇರಿ ಸಹಯೊಗದೊಂದಿಗೆ ಏರ್ಪಡಿಸಿದ್ದು, ಈ ಕಾರ್ಯಕ್ರಮ ಬೆಳಿಗ್ಗೆ 10-00 ಗಂಟೆಗೆ ಪ್ರಾರಂಭವಾಗಿದ್ದು, ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಕೆ. ಎಮ್.ನಟರಾಜನ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕರ್ನಾಟಕ ರಾಜ್ಯ ಬೆಂಗಳೂರರವರು, ಮುಖ್ಯ ಅಥಿತಿಗಳಾಗಿ, ಶ್ರೀ,ಆರ.ಎಚ್.ಔರಾದಕರ್.,ಭಾ.ಪೊ.ಸೇ. ಪ್ರಧಾನ ಕಾರ್ಯದರ್ಶಿಗಳು  ಗೃಹ ಇಲಾಖೆ ಬೆಂಗಳೂರು, ಶ್ರೀ ಈ. ಇಂದ್ರೇಶ ಸರ್ಕಾರಿ ಅಬಿಯೋಜಕರು, ಹೈಕೊರ್ಟ ಬೆಂಗಳೂರು ರವರು ಆಗಮಿಸಿದ್ದು, ಬೆಳಿಗ್ಗೆ 10-30 ಗಂಟೆಗೆ ಶ್ರೀ ಕೆ.ಎಮ್ ನಟರಾಜನ್  ಕಾರ್ಯಗಾರವನ್ನು ಉದ್ಘಾಟಿಸಿದ್ದು, ಶ್ರೀ ಮಹಮದ್ ವಜೀರ ಅಹಮದ್ ಐ.ಪಿ.ಎಸ್,. ಪೊಲೀಸ್ ಮಹಾ ನಿರೀಕ್ಷಕರು, ಈಶಾನ್ಯ ವಲಯ ಗುಲಬರ್ಗಾರವರು ಸ್ವಾಗತ ಭಾಷಣವನ್ನು ಮಾಡಿದ್ದು, ನಂತರ ಶ್ರೀ ಕೆ.ಎಮ್ ನಟರಾಜನ್ ರವರು ಗೂಂಡಾ ಕಾಯಿದೆಯ ಅನುಷ್ಟಾನ ಮತ್ತು ಕಾಯಿದೆಯಲ್ಲಿ ಇರುವ ಕಲಂಗಳ  ಬಗ್ಗೆ ಮತ್ತು ಕಾಯಿದೆಯನ್ನು ಅಳವಡಿಸುವ ರೀತಿ ವಿಧಾನ ಹಾಗೂ ಈ ಕಾಯಿದೆ ಅನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸುವದು, ಹಾಗು ಜಿಲ್ಲಾ ದಂಡಾಧಿಕಾರಿಯವರಿಗೆ ಇರುವ ಅಧಿಕಾರ ಮತ್ತು ಈ ಕಾಯಿದೆಯನ್ನು ಜಾರಿಗೆ ತರುವಾಗ ಪಾಲಿಸಬೇಕಾದ ರೀತಿ ನೀತಿಗಳಲ್ಲಿ ಯಾವ ತರಹದ ಲೋಪ ದೋಷಗಳು ಆಗುತ್ತವೆ, ಆದ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಪ್ರಸ್ತಾವನೆಯನ್ನು ಸಲ್ಲಿಸುವ ಮತ್ತು ಗೂಂಡಾ ಕಾಯಿದೆಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆಯವರು ಯಾವ ಯಾವ ದಾಖಲಾತಿಗಳನ್ನು ಸಂಗ್ರಹಿಸಬೇಕು ಎಂಬುವದರ ಕುರಿತು ವಿಸ್ತ್ರುತವಾಗಿ ಉಪನ್ಯಾಸವನ್ನು ನೀಡಿರುತ್ತಾರೆ.
ಅದೇ ರೀತಿಯಾಗಿ ಶ್ರೀ,ಈ.ಇಂದ್ರೇಶ ಸರ್ಕಾರಿ ವಕೀಲರು ಹೈಕೊರ್ಟ ಬೆಂಗಳೂರು ರವರು ಈ ಗೂಂಡಾ ಕಾಯಿದೆ ಅಳವಡಿಸುವಾಗ ಅಥವಾ ಅಳವಡಿಸಿದ ನಂತರ ಹೈಕೊರ್ಟನಲ್ಲಿ ವಾದ ಮಂಡಿಸುವ ಬಗ್ಗೆ ಮತ್ತು ಈ ಗೂಂಡಾ ಕಾಯಿದೆಗೂ ಹಾಗೂ ಸಂವಿಧಾನದಲ್ಲಿ ಅಳವಡಿಸಿರುವ ಪರಿಚ್ಚೇದಗಳ ಬಗ್ಗೆ ಇರುವ ಸಂಭಂದದ ಕುರಿತು ವಿವರವಾದ ಉಪನ್ಯಾಸವನ್ನು ನೀಡಿದರು.  
ಅದೇ ರೀತಿಯಾಗಿ ಶ್ರೀ. ಆರ್.ಎಚ್.ಔರಾದಕರ್ ಪ್ರಧಾನ ಕಾರ್ಯದರ್ಶಿಗಳು ಗೃಹ ಇಲಾಖೆ ಬೆಂಗಳೂರು ರವರು ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಕ್ರಮಬದ್ದವಾಗಿ ನಿರ್ವಹಿಸುವ ಬಗ್ಗೆ ಹಾಗೂ ಗೂಂಡಾ ಕಾಯಿದೆಯ ರೀತಿ ನಿಯಮಗಳು ಮತ್ತು ಯಾವ ರೀತಿ ಪ್ರಸ್ತಾವನೆಯನ್ನು ಜಿಲ್ಲಾ ದಂಡಾಧಿಕಾರಿಗಳಿಗೆ ಸಲ್ಲಿಸಬೇಕೆಂಬುದರ ಕುರಿತು ಉಪನ್ಯಾಸ ನೀಡಿ, ಗುಲಬರ್ಗಾ ಜಿಲ್ಲೆಗೆ ಮಾನವ ಕಳ್ಳ ಸಾಗಾಣಿಕೆ ತಡೆಯಲು ವಿಶೇಷ ಘಟಕ ಮಂಜೂರಾಗಿರುವ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ.
ಶ್ರೀ ಮಹಮದ್ ವಜೀರ ಅಹಮದ ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ ಗುಲಬರ್ಗಾ ರವರು ಈ ಕಾರ್ಯಗಾರವನ್ನು ಉದ್ದೇಶಿಸಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಈ ಕಾರ್ಯಗಾರವನ್ನು ನಡೆಸುವ ಉದ್ದೇಶ ಹಾಗೂ ಗೂಂಡಾ ಕಾಯಿದೆಯ ಸದ್ಬಳಕೆ ಅನುಷ್ಟಾನ ಬಗ್ಗೆಹಾಗೂ ಸಮಾಜದಲ್ಲಿ ಸಮಾಜ ಘಾತುಕ ಶಕ್ತಿಗಳ ವಿರುದ್ದ ಕ್ರಮ ಕೈಕೊಳ್ಳುವ ಬಗ್ಗೆ ವಿವರವಾದ ಉಪನ್ಯಾಸವನ್ನು ನೀಡಿದರು.
ಶ್ರೀ ಎನ್, ಸತೀಷಕುಮಾರ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಈ ಕಾರ್ಯಕ್ರಮ ಉದ್ದೇಶಿಸಿ ಕರ್ನಾಟಕ ರಾಜ್ಯ ಹೊರತು ಪಡಿಸಿ ನೇರೆ ರಾಜ್ಯಗಳಲ್ಲಿ ಗೂಂಡಾ ಕಾಯಿದೆ ಪರಿಣಾಮಕಾರಿಯಾಗಿ  ಜಾರಿಗೊಳಿಸುತ್ತಿದ್ದು, ಅದೇ ರೀತಿಯಾಗಿ ಪೊಲೀಸ್ ಅಧಿಕಾರಿಗಳು ನಮ್ಮ ರಾಜ್ಯದಲ್ಲಿಯೂ ಸಹ ಪರಿಣಾಮಕಾರಿಯಾಗಿ ಗೂಂಡಾ ಕಾಯಿದೆಯನ್ನು ಜಾರಿಗೊಳಿಸಲು ಉಪನ್ಯಾಸ ಈ ಕಾರ್ಯಗಾರದಲ್ಲಿ ಹಾಜರಿದ್ದ ಗಣ್ಯರಿಗೆ ವಂದನಾರ್ಪಣೆಯನ್ನು ಸಲ್ಲಿಸಿ ನೆನಪಿನ ಕಾಣಿಕೆಯನ್ನು ನೀಡಿದರು.  
ಈ ಕಾರ್ಯಗಾರಕ್ಕೆ ಈಶಾನ್ಯ ವಲಯದ ಜಿಲ್ಲೆಗಳಾದ ಶ್ರೀ,ಪ್ರಸನ್ನ ಕುಮಾರ ಐ.ಎ.ಎಸ್., ಜಿಲ್ಲಾಧಿಕಾರಿಗಳು ಗುಲಬರ್ಗಾ, ಶ್ರೀಮತಿ, ಲತಾಕುಮಾರಿ  ಅಪರ್ ಜಿಲ್ಲಾಧಿಕಾರಿಗಳು ಗುಲಬರ್ಗಾ, ಶ್ರೀ ತ್ಯಾಗರಾಜನ್ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಬೀದರ , ಶ್ರೀ ಸಿ.ಕೆ.ಜಾಫರ್ ಐ.ಎ.ಎಸ್. ಜಿಲ್ಲಾಧಿಕಾರಿಗಳು ಬೀದರ, ಶ್ರೀ, ಬಿಸನಳ್ಳಿ ಐ.ಪಿ.ಎಸ್. ಪೊಲೀಸ್ ಅದೀಕ್ಷಕರು ರಾಯಚೂರು, ಶ್ರೀ, ಬಿ.ಎಸ್. ಪ್ರಕಾಶ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಕೊಪ್ಪಳ, ಹಾಗೂ ಸರ್ಕಾರಿ ಅಭಿಯೊಜಕರು, ಹಾಗು ಶ್ರೀ ಕಾಶೀನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಶ್ರೀ ಭೂಷಣೆ ಬೋರಸೆ ಐ.ಪಿ.ಎಸ್. (ಎ) ಉಪ-ವಿಭಾಗ ಗುಲಬರ್ಗಾ, ಹಾಗು ಈಶಾನ್ಯ ವಲಯ, ಪೊಲೀಸ್ ಉಪಾಧೀಕ್ಷಕರಗಳು, ಮತ್ತು  ಪೊಲೀಸ್ ಇನ್ಸಪೇಕ್ಟರ ರವರುಗಳು ಹಾಜರಿದ್ದರು.
ಶ್ರೀ ಮಹಮದ್ ವಜೀರ ಅಹಮದ ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ ಗುಲಬರ್ಗಾ, ಹಾಗೂ ಶ್ರೀ ಎನ್, ಸತೀಷಕುಮಾರ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಅವಿರತವಾಗಿ ಶ್ರಮಿಸಿ ಕಾರ್ಯಗಾರವನ್ನು ಆಯೋಜಿಸಿ ಸಂಪೂರ್ಣವಾಗಿ ಯಶ್ವಿಸಿಗೊಳಿಸಿರುತ್ತಾರೆ. 

No comments: