POLICE BHAVAN KALABURAGI

POLICE BHAVAN KALABURAGI

25 November 2012

GULBARGA DISTRICT REPORTED CRIMES


ಹೋಟೆಲ್ ಮುಸುರಿ ಟ್ಯಾಂಕ್ ಖಾಲಿ ಮಾಡಲು ಹೋಗಿದ್ದ ಕಾರ್ಮಿಕನ ಸಾವು:
ಸ್ಟೇಷನ ಬಜಾರ ಪೊಲೀಸ ಠಾಣೆ: ಮಂಗಲಾ ಗಂಡ ಪಂಡರಿ ವಾಗಮೊರೆ ಸಾ|| ಎಡೂರ ತಾ|| ದೇಗಲೂರ್ ಜಿ|| ನಾಂದೇಡ ಹಾ|| ವ|| ತಾರಪೈಲ್ ಗುಲಬರ್ಗಾ ರವರು ನನ್ನ ಗಂಡ ಪಂಡರಿ ಹಾಗು ಸೀಮನ್ ಬಾಲ್ಕೆ ದಿನಾಂಕ: 24-11-2012 ರಂದು ರಾತ್ರಿ ಇಬ್ಬರೂ ಮುಸುರಿ ನೀರಿನ ಟ್ಯಾಂಕನ್ನು ಖಾಲಿ ಮಾಡುವಾಗ ಉಸಿರುಗಟ್ಟಿ ಬೇಹುಸ್ ಆಗಿದ್ದು ಸದರಿಯವರಿಬ್ಬರಿಗೆ ಚಿರಾಯು ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಅಷ್ಟರಲ್ಲಿ ನನ್ನ ಗಂಡನು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದಾಗ ನಾನು ಮತ್ತು ಎಲಿಜಿಬತ ಗಂಡ ಸಿಮನ್ ಹೋಗಿ ನೋಡಲಾಗಿ ನನ್ನ ಗಂಡನು ಚಿರಾಯು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು ಮತ್ತು ಸಿಮನ್ ಇವನು ಪ್ರಜ್ಞೆ ತಪ್ಪಿರುತ್ತಾನೆ ಶಶಿಕುಮಾರ ಇವರಿಗೆ ವಿಚಾರಿಸಲು ನಿನ್ನ ಗಂಡ ಪಂಡರಿ ಮತ್ತು ಸಿಮನ್ ಇವರಿಗೆ ಶ್ರೀ ಸಾಯಿ ವೆಂಕಟೇಶ್ವರ ಟೀಪನ್ ಸೇಂಟರ ಮಾಲಿಕನಾದ ಸಾಯಿನಾಥ ತಂದೆ ಲಿಂಗಮ ಚಿದ್ರಿ ಇತನು ಮುಸುರಿನ ಟ್ಯಾಂಕಿನಲ್ಲಿ ಇಳಿದಾಗ ಉಸಿರುಗಟ್ಟಿ ಸಾಯಬಹುದು ಅಂತಾ ಗೊತ್ತಿದ್ದರೂ ಸಹ ಯಾವುದೇ ಮುಂಜಾಗೃತೆ ಸಾದನಾ ನೀಡದೇ ಟ್ಯಾಂಕ ಖಾಲಿ ಮಾಡಿ ಹೋಗಿ ಅಂತಾ ಹೇಳಿದಾಗ ಸದರಿಯವರು ಮುಸುರಿ ಟ್ಯಾಂಕಿನ ಕಬ್ಬಿಣದ ಮುಚ್ಚಳಿಕೆಯನ್ನು ತಗೆದು ಒಳಗೆ ಪ್ಲಾಸ್ಟಿಕ್ ಸ್ಟೂಲ ಇಟ್ಟು ಇಳಿಯುವಾಗ ಜಾರಿ ಬಿದ್ದು ಸದರಿಯವರಿಬ್ಬರೂ ಉಸಿರುಗಟ್ಟಿ ಬೆಹೋಶ ಆದಾಗ ಸದರಿ ಸಾಯಿನಾಥ , ಶಶಿಕುಮಾರ ಮತ್ತು ಶ್ರೀಕಾಂತ ಇವರು ಕೂಡಿ ಸದರಿಯವರಿಬ್ಬರಿಗೆ ಟ್ಯಾಂಕಿನಿಂದ ಹೊರತಗೆದು ಉಪಚಾರ ಕುರಿತು ಚಿರಾಯು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಅಷ್ಟರಲ್ಲಿ  ನನ್ನ ಗಂಡನು ಮೃತಪಟ್ಟಿರುತ್ತಾನೆ ಸದರಿ ಶ್ರೀ ಸಾಯಿವೆಂಕಟೇಶ್ವರ ಟೀಪನ್ ಸೇಂಟರ ಮಾಲಿಕನಾದ ಸಾಯಿನಾಥ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕು ಅಂತಾ  ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.145/2012 ಕಲಂ.304(ಎ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಜಾತಿ ನಿಂದನೆ ಪ್ರಕರಣ:
ಮುಧೋಳ ಪೊಲೀಸ್ ಠಾಣೆ: ಶ್ರೀ  ಬಾಲಪ್ಪಾ ತಂದೆ ಬುಗ್ಗಪ್ಪಾ ಜೋಗಿ ಸಾ|| ಪಾಕಲಗ್ರಾಮ ನಾನು ದಿನಾಂಕ:24-11-2012 ರಂದು ರಾತ್ರಿ 10-30 ಗಂಟೆಗೆ ನಮ್ಮ ಜಾತಿಯವರಾದ ನಾಗಪ್ಪಾ ತಂದೆ ನಾಗಪ್ಪಾ ಮ್ಯಾತರ ಇತರು ನಮ್ಮುರ ಮಜೀದ ಹತ್ತಿರ ಅಲೈ ಆಡಲು ಹೋಗಿದ್ದಾಗ ಅಲ್ಲಿದ್ದ ನಮ್ಮೂರ ನರಸಿಂಮಲು ತಂದೆ ದೊಡ್ಡ ಭೀಮಶಪ್ಪಾ, ಬಸಪ್ಪಾ ತಂದೆ ಸಣ್ಣ ಭೀಮಶಪ್ಪ, ಚೆಂದ್ರಪ್ಪಾ ತಂದೆ ಸಾಯಪ್ಪಾ, ಮತ್ತು ಬಸಂತ ತಂದೆ ಸಾಯಪ್ಪ ಚಿಟಕನಪಲ್ಲಿ ಇವರುಗಳು ನಮಗೆ ಭೋಸಡಿ ಮಕ್ಕಳೆ ನೀವು ಇಲ್ಲಿ ಯಾಕೇ ಬಂದಿದ್ದಿರಿ ಇಲ್ಲಿ ನಿವು ಅಲೈ ಆಡಬೇಡಿರಿ ಅಂತಾ ನಮಗೆ ತಕರಾರು ಮಾಡಿದ್ದರಿಂಖದ ನಾವು ವಾಪಸ ಮನೆಗೆ ಬಂದೆವು. ದಿನಾಂಕ 25-11-2012 ರಂದು ಮುಂಜಾನೆ 6-00 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ಜಾತಿಯವನಾದ ನಾಗಪ್ಪಾ ತಂದೆ ನಾಗಪ್ಪ ಮ್ಯಾತರ ರಾಜು ತಂದೆ ಕಿಷ್ಟಪ್ಪಾ ಬುದ್ದಾ ಮೂರು ಜನರು ಚಹ ಕುಡಿಯಲು ನಮ್ಮುರ ಸಾಯಪ್ಪಾ ಇಳಿಗೆರ ಇವರ ಹೊಟಲಕ್ಕೆ ಹೋಗುತಿದ್ದಾಗ ದಾರಿಯಲ್ಲಿ ನರಸಿಂಮಲು,ಬಸಪ್ಪಾ,ಚೆಂದ್ರಪ್ಪಾ ಮತ್ತು ಬಸಂತ ತಂದೆ ಸಾಯಪ್ಪ ಚಿಟಕನಪಲ್ಲಿ ಕೂಡಿಕೊಂಡು ಜಾತಿ ನಿಂದನೆ ಮಾಡಿ  ಕೈಯಿಂದ ಹೊಡೆಬಡೆ ಮಾಡಿ ನೀವು ಈ ಕಡೆ ಬರಬಾರದು ಅಂತಾ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:149/2012 ಕಲಂ, 341,323,504,506, ಸಂ. 34 ಐ.ಪಿ.ಸಿ ಮತ್ತು 3(1) (10) ಎಸ್.ಸಿ, ಎಸ್.ಟಿ ಪಿ.ಎ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀಮತಿ ರಿಯಾನಾ ಬೇಗಂ ಗಂಡ ನಜೀರ ಅಹ್ಮದ ಶೇಖ ಸಾ:ಕೊಳಸಾಫೈಲ ಶಹಾಬಾದ ರವರು ನನ್ನ ಗಂಡನು ನನ್ನ ಮೇಲೆ ಸಂಶಯದಿಂದ ನೋಡುತ್ತಿದ್ದು ದಿನಾಂಕ:22/11/2012 ರಂದು 1.30 ಎಎಂ ಕ್ಕೆ ಸುಮಾರಿಗೆ ನನ್ನ ಗಂಡ ಹಾಗೂ ತನ್ನ ಮಕ್ಕಳೊಂದಿಗೆ ಮನೆಯಲ್ಲಿ ಮಲಗಿಕೊಂಡಾಗ ನನಗೆ ನನ್ನ ಗಂಡನು ಎಬ್ಬಿಸಿ ವಿನಾಃಕಾರಣ ನನ್ನ ಮೇಲೆ ಸಂಶಯ ಪಟ್ಟು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ  ನನ್ನ ಕುತ್ತಿಗೆ  ಹಿಡಿದು ಹಿಚುಕಿ  ನೆಲಕ್ಕೆ ಒತ್ತುತ್ತಿರುವಾಗ ನನ್ನ ಮಗಳು ಸಪ್ಪಳ ಕೇಳಿ ಎದ್ದು ಅಳುತ್ತಿರುವಾಗ ಬಾಜು ಮನೆಯ ನನ್ನ ಭಾವನಾದ ಜಹೀರ ಅಹ್ಮದ ಇವರು ಬಂದು ಬಿಡಿಸಿರುತ್ತಾರೆ  ನನಗೆ ವಿನಾಕಾರಣ ಸಂಶಯದಿಂದ ನೋಡಿ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಹಿಚುಕಿದ್ದು ಇರುತ್ತದೆ ನನ್ನ ಎರಡು ಕಣ್ಣುಗಳು ಕೆಂಪಾಗಿದ್ದು ನನ್ನ ಕುತ್ತಿಗೆ ಮೇಲೆ ಗಾಯದ ಗುರುತು ಬಿದ್ದಿರುತ್ತವೆ ಅಂತಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 155/2012 ಕಲಂ:324,504,307 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.     

24 November 2012

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:23/11/2012 ರಂದು ನಸುಕಿನ ವೇಳೆ 4-00 ಗಂಟೆಗೆ ಸ್ವತ್ತಿನ ಅಪರಾಧಗಳು ತಡೆಯುವ ನಿಮಿತ್ಯ ನಾನು ಮತ್ತು  ಸಿಬ್ಬಂದಿಯವರಾದ ಗುರುಮೂರ್ತಿ,ಚಂದ್ರಕಾಂತ,ಮಹ್ಮದ ರಫೀಯೋದ್ದಿನ,ದೇವಿಂದ್ರ ಪಿಸಿರವರೊಂದಿಗೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋದುತಾಯಿ ಕಾಲೋನಿ ಮದರಾ ತೇರಿಸಾ ಶಾಲೆಯ ಹತ್ತಿರ ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ಮೋಟಾರ ಸೈಕಲ್ ಅಲ್ಲಿಯೆ ಬಿಟ್ಟು ರೇಲ್ವೆ ಹಳಿಗಳ ಕಡೆಗೆ ಓಡಿ ಹೋಗುತ್ತಿದ್ದಾಗ  ಸಂಶಯ ಬಂದು ಆತನನ್ನು ಹಿಡಿದು ಹೆಸರು ಇತ್ಯಾದಿ ವಿಚಾರಿಸಲು ಆನಂದ ತಂದೆ ಹಣಮಂತ ರಾಮದುರ್ಗ ಸಾ:ಕಾಂತಾ ಕಾಲೋನಿ ಗುಲಬರ್ಗಾ ಇತನಿಗೆ ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ತಾನು ಸುಮಾರು ದಿನಗಳ ಹಿಂದೆ ನನಗೆ ಯಾವುದೇ ಕೆಲಸ ಇಲ್ಲದಕ್ಕೆ ನನ್ನ ಖರ್ಚಿನ ಹಣಕ್ಕಾಗಿ ಮತ್ತು ಕೆಲಸಕ್ಕಾಗಿ ಒಂದು ಮೋಟಾರ ಸೈಕಲ್ ನಂದಿಕೂರ ದಾಬಾದ ಹತ್ತಿರದಿಂದ ತೆಗೆದುಕೊಂಡು ಬಂದು ನನ್ನ ಕೆಲಸಕ್ಕಾಗಿ ಉಪಯೋಗಿಸುತ್ತಿದ್ದೇನೆ. ಆ ಮೋಟಾರ ಸೈಕಲ್ ಸಹ ಚಾಲು ಆಗದಕ್ಕೆ ಸೂಪರ ಮಾರ್ಕೆಟ ಹತ್ತಿರದಿಂದ ಒಂದು ಮೋಟಾರ ಸೈಕಲ ತೆಗೆದುಕೊಂಡು ಬಂದು ಇಲ್ಲಿಯೇ ಇಟ್ಟಿದ್ದು ಸದರಿ ಮೋಟಾರ ಸೈಕಲ ನಂ: ಕೆಎ-01 ವಾಯ್=4974 ಹಿರೋ ಹೊಂಡಾ ಸ್ಪೇಲಂಡರ್ ಪ್ಲಸ್ ಇಂಜನ ನಂ:06ಇ15ಎಂ31246 ಚೆಸ್ಸಿ ನಂ:05ಇ16ಸಿ30335  ನೀಲಿ ಮತ್ತು ಕರಿ ಬಣ್ಣದ್ದು ಅ.ಕಿ. 25,000/-ರೂಪಾಯಿಗಳದ್ದು ಮತ್ತು ಹಿರೋ ಹೊಂಡಾ ಪ್ಯಾಶನ ಪ್ರೋ  ಮೋಟಾರ ಸೈಕಲ್ ನಂ.ಕೆಎ-32 ವಾಯ-8033 ಚೆಸ್ಸಿನ ನಂ: MBLHA10EWBGF27757 ಇಂಜನ್ ನಂ:HA10EDBGF55424 ಕೆಂಪ್ಪು ಮತ್ತು ಕರಿಯ ಬಣ್ಣದ್ದು ಅ.ಕಿ. 30,000/- ರೂಪಾಯಿಗಳು   ಹೀಗೆ ಸುಮಾರು 55,000/- ರೂ ಬೆಲೆ ಬಾಳುವ  ಮೋಟಾರ ಸೈಕಲ ಮತ್ತು ಆರೋಪಿಯೊಂದಿಗೆ ಕರೆ ತಂದಿದ್ದರಿಂದ ಗುನ್ನೆ ನಂ:105/2012 ಕಲಂ 41(ಡಿ) 102 ಸಿ.ಆರ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.