POLICE BHAVAN KALABURAGI

POLICE BHAVAN KALABURAGI

15 November 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ:ಶ್ರೀ.ಮಹಾಂತೇಶ ತಂದೆ ಭಗವಂತರಾಯ ಮಡಿವಾಳ, ವಯ|| 36,ಜಾತಿ|| ಅಗಸರ, || ನರ್ತಕಿಬಾರದಲ್ಲಿಸಾ|| ಗೌಡಗಾಂವ, ಹಾ|||| ಜಿ.ಆರ್ ನಗರ ಆಳಂದ ರೋಡ ಗುಲಬರ್ಗಾ ರವರು ನಾನು ದಿನಾಂಕ:12/11/2012 ರಂದು ರಾತ್ರಿ 9-30 ಗಂಟೆಗೆ ನರ್ತಕಿ ಬಾರಿನಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡುತ್ತಿರುವಾಗ ಕರಣ ಗಾಯಕವಾಡ ಸಂಗಡ 4-5 ಜನರು ಬಂದು ಮದ್ಯ ಸೇವನೆ ಮಾಡಿ ಹಾಗೆ ಹೋಗುತ್ತಿರುವಾಗ ನಮ್ಮ ವೇಟರಗಳು ಅವರಿಗೆ ಬಿಲ್ಲ ಕೇಳಿದಕ್ಕೆ ಬೊಸಡಿ ಮಕ್ಕಳೆ ನಮಗೆ ಬಿಲ್ಲ ಕೇಳುತ್ತಿರಾ ಅಂತಾ ತಕರಾರು ಮಾಡುತ್ತಿದ್ದರು. ನಾನು, ನೀವು ರೀತಿ ಮಾಡುವದು ಸರಿಯಲ್ಲ ಕುಡಿದ ಮೇಲೆ ಬಿಲ್ಲು ಕೊಟ್ಟು ಹೋಗಬೇಕು ಅಂತಾ ಅಂದಿದ್ದಕ್ಕೆ ಅವರುಗಳು ಪ್ರೀಜಿನಲ್ಲಿದ್ದ ಬೀರ ಬಾಟಲಿ ತೆಗೆದುಕೊಂಡು ಕೌಂಟರಗೆ ತಂದು ಒಡೆದು ಸುಮಾರು 500-600 ರೂಪಾಯಿ ಹಾನಿ ಮಾಡಿದ್ದು ಅಲ್ಲದೆ ಬಾರ ಅಂಗಡಿಯ ಶೇಟರ ಎಳೆದು ನಮಗೆ ಹೊರಗೆ ಬರದಂತೆ ತಡೆದು ನಿಮ್ಮಲ್ಲರಿಗೆ ಹೊಡೆದು ಖಲಾಸ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿ,  ಕೆಲವು ಗ್ರಾಹಕರು ಕೂಡ ಬಿಲ್ಲು ಕೊಡದೆ ಓಡಿ ಹೋಗಿದ್ದು ಇದರಿಂದ ಸುಮಾರು 10,000/- ರೂಪಾಯಿ ಲುಕ್ಸಾನ ಆಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 117/2012 ಕಲಂ: 143, 147, 341, 427, 504, 506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ ಠಾಣೆ : ಶ್ರೀ. ಪ್ರಸನ್ನಜೀತ ತಂದೆ ಚಂದ್ರಕಾಂತ ಗಾಯಕವಾಡ ಸಾ: ಕಾಂತಾ ಕಾಲೋನಿ ಗುಲಬರ್ಗಾ ರವರು ದಿನಾಂಕ:14/11/2012 ರಂದು ರಾತ್ರಿ 8-15 ಗಂಟೆ ಸುಮಾರಿಗೆ ಗುಲಬರ್ಗಾ ಬಸ ಸ್ಟ್ಟ್ಯಾಂಡದಿಂದ  ನನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ  ಕಾಂತಾ ಕಾಲೋನಿಯ ವೆಲ್ಡಿಂಗ ಅಂಗಡಿ ಸ್ವಲ್ಪ ದೂರದಲ್ಲಿ  ಸ್ಮಶಾನ ಭೂಮಿ ಕಡೆಗೆ ಹೋಗುವ ಕಚ್ಚಾ ರಸ್ತೆಯಲ್ಲಿ 3 ಜನ ಅಪರಿಚಿತ ಹುಡುಗರು ಬಂದು ನನಗೆ ನಿಲ್ಲಿಸಿ  ತಲವಾರ ತೊರಿಸಿ ಜಬರ ದಸ್ತಿಯಿಂದ ನನ್ನ ಶರ್ಟ ಜೇಬಿನಲ್ಲಿ ಕೈ ಹಾಕಿ  100/- ರೂಪಾಯಿಯ ನೋಟುಗಳುಳ್ಳ ಒಟ್ಟು 500/- ರೂಪಾಯಿ ಮತ್ತು ನನ್ನ ಎಸ್‌.ಬಿ.ಐ ಖಾತೆಯ ಎ.ಟಿ.ಎಂ ಕಾರ್ಡನ್ನು ಕಸಿದುಕೊಂಡು ಹೋಗಿರುತ್ತಾರೆ.  ನಾನು ಚಿರಾಡುತ್ತಿರುವಾಗ  ಸ್ಮಶಾನ ಭೂಮಿ ಕಡೆಗೆ ಎಳೆದುಕೊಂಡು ಹೋಗಿ ಕೈಯಿಂದ ಮುಖಕ್ಕೆ  ಹೊಡೆದು ಗಾಯಗೊಳಿಸಿರುತ್ತಾರೆ. ಆ 3 ಜನ ಹುಡುಗರನ್ನು ಲೈಟಿನ ಬೇಳಕಿನಲ್ಲಿ ನೋಡಿರುತ್ತೆನೆ.  ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 101/2012 ಕಲಂ. 397 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:14/11/2012 ರಂದು  ಸಾಯಂಕಾಲ 7-00  ಗಂಟೆ ಸುಮಾರಿಗೆ ಶಹಾಬಾದ ನಗರದ ಶ್ರೀ ಗುರು ಏಜನ್ಸಿ ಎದರುಗಡೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಣಪತಿ ತಂದೆ ಮೇಲಗೀರಿ ಪವಾರ ಸಂಗಡ ಇನ್ನೂ 4 ಜನರು ಸಾ:ಎಲ್ಲರೂ ಶಹಾಬಾದ ಇವರು ಅಂದರ-ಬಾಹರ ಎಂಬ ಇಸ್ಪೀಟ ಜೂಜಾಟದಲ್ಲಿ ನಿರತರಾಗಿದ್ದವರ ಮೇಲೆ ಶ್ರೀ ಎಸ್‌.ಎಸ್‌.ಹುಲ್ಲೂರ ಪಿಐ ಡಿಸಿಐಬಿ ಗುಲಬರ್ಗಾ ರವರು  ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ 5 ಜನರ ಮೇಲೆ ದಾಳಿ ಮಾಡಿ ಅವರಿಂದ ನಗದು 23030/-ರೂ ಮತ್ತು ಇಸ್ಪೀಟ ಎಲೆಗಳು ಜಪ್ತಿ ಪಡಿಸಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 150/2012 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.    

14 November 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ನಿಂಗಣ್ಣ ತಂದೆ ಮಲ್ಲಿಕಾರ್ಜುನ  ಜಗತ, ಶಿಕ್ಷಕರು ಬಿದ್ದಾಪೂರ ಕಾಲನಿ ಗುಲಬರ್ಗಾ ರವರು ನಾವು ದಿನಾಂಕ:11/11/2012 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ನಮ್ಮ  ಸ್ವಂತ ಊರಾದ ಬಸವನ ಬಾಗೇವಾಡಿಗೆ ಹೋಗಿದ್ದು ಪಕ್ಕದ ಮನೆಯವರಿಗೆ ಮನೆಯನ್ನು ನೋಡಿಕೊಳ್ಳಲು ಹೇಳಿರುತ್ತೆವೆ.ದಿನಾಂಕ:13/11/2012 ರಂದು ಮಧ್ಯರಾತ್ರಿ 3 ಗಂಟೆಯಿಂದ ಬೆಳಿಗ್ಗೆ 5 ಗಂಟೆ ಅವಧಿಯಲ್ಲಿ  ಯಾರೋ ಕಳ್ಳರು ಮನೆಯಲ್ಲಿಟ್ಟಿದ್ದ 45000/- ಕಿಮ್ಮತ್ತನಿನ ಬಂಗಾರದ ಸಾಮಾನು, 12000/- ರೂ ಕಿಮ್ಮತ್ತಿನ ಬೆಳ್ಳಿ ಸಾಮಾನು ಹಾಗೂ 3 ಸೀರೆಗಳು 3000/- ರೂ ಕಿಮತ್ತಿನವುಗಳು ಯಾರು ಕಳ್ಳರು ಕಳವು  ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 364/12 ಕಲಂ 457 380  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಕರಣ ತಂದೆ ಭೀಮಶಾ ಗಾಯಕವಾಡ ಸಾ|| ಗಾಜೀಪೂರ ಗುಲಬರ್ಗಾ ಇತನು ನಾನು ದಿನಾಂಕ:12-11-2012 ರಂದು ರಾತ್ರಿ 9-30  ಗಂಟೆಗೆ ಮದ್ಯ ಸೇವನೆ ಮಾಡಲು ನರ್ತಕಿ ವೈನ್ಯ ಶಾಪಗೆ ಹೋಗಿ ಕೌಂಟರ ಹತ್ತಿರ ನಿಂತು ಮ್ಯಾನೇಜರ ನಾಗಭೂಷಣ ಇವರಿಗೆ ವ್ಯಾಟ-69 ಕೊಡು ಅಂತಾ ಕೇಳಿದೇನು. ಅಷ್ಟರಲ್ಲಿ ಕೆಲಸ ಮಾಡುವ ಒಬ್ಬ ವೇಟರ ಬಂದು ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡಿದನು. ಆಗ ನಾನು ಸದರಿ ವೇಟರನಿಗೆ ಯಾಕಪ್ಪ ಸರಿಯಾಗಿ ಮಾತಾಡು ಅಂತಾ ಹೇಳಿದೇನು. ಆಗ ವೇಟರನು ಅವಾಚ್ಯ ಶಬ್ದಗಳಿಂದ ಬೈದನು. ಆಗ ನರ್ತಕಿ ಬಾರ ಮ್ಯಾನೇಜರ ನಾಗಭೂಷಣ ಇವರಿಗೆ ನಾನು ನಿಮ್ಮ ವೇಟರ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾನೆ ಅವನಿಗೆ ಹೇಳಲು ಬರುವದಿಲ್ಲ ಅಂತಾ ಕೇಳಿದಾಗ ಸದರಿ ಮ್ಯಾನೇಜರ ಕೌಂಟರದಿಂದ ಹೊರಗೆ ಬಂದು ಶೆಟರ ಹಾಕರಿ ಅಂತಾ ಎಲ್ಲಾ ವೇಟರಗಳಿಗೆ ಕರೆಯಿಸಿ ಬಾರಿನ ಶೆಟರ ಮುಚ್ಚಿ ಜಾತಿ  ನಿಂದನೆ ಮಾಡಿ ನಮ್ಮ ವೇಟರಗಳ ಜೊತೆ ಜಗಳ ಮಾಡುತ್ತಿಯಾ ಅಂತಾ ಜಾತಿ ಎತ್ತಿ ಬೈದು, ಕೈಯಿಂದ ಬಾಯಿ ಮತ್ತು ಮೂಗಿನ ಮೇಲೆ ಹೊಡೆದು ತರಚಿದ ರಕ್ತಗಾಯ ಪಡಿಸಿದನು. ನಂತರ  7  ಜನ ವೇಟರಗಳು ಬಂದು ನನಗೆ ವೈನ್ಯ ಶಾಪಿನಲ್ಲಿ ಇದ್ದ ರಾಡುಗಳು ತೆಗೆದುಕೊಂಡು ನನ್ನ ಎಡಗೈ ರಟ್ಟೆಯ ಮೇಲೆ, ಭುಜದ ಮೇಲೆ, ಮೊಣಕೈಗೆ,ತಲೆಯ ಹಿಂಭಾಗದಲ್ಲಿ, ಮತ್ತು ಎಡಗೈ ಬಲ ಕೆಳಭಾಗದಲ್ಲಿ ಹೊಡೆದು ಒಳಗುಪ್ತ ಗಾಯ ಮತ್ತು ತರಚಿದ ರಕ್ತಗಾಯ ಪಡಿಸಿರುತ್ತಾರೆ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 116/2012 ಕಲಂ, 143, 147, 148, 323, 324, 504, 506 ಸಂಗಡ 149 ಐಪಿಸಿ  ಮತ್ತು  3(1) (10) ಎಸ.ಸಿ / ಎಸಟಿ ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗಿ ಕಾಣೆಯಾದ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ಚಂದ್ರಶೇಖರ ತಂದೆ ಬಸಪ್ಪ ಅಲ್ಲೂರ ರವರು ನನ್ನ ಮಗಳಾದ ಕು. ಆಶಾರಾಣಿ ಇವಳು ಬಿ.ಹೆಚ್.ಎಮ್.ಎಸ್ ವಿದ್ಯಾರ್ಥಿನಿ ಗುಲಬರ್ಗಾದಲ್ಲಿದ್ದು, ಚಿತ್ತಾಪುರಕ್ಕೆ ಬಂದು ಹೋಗುತ್ತಿದ್ದಳು,ದಿನಾಂಕ:08/11/2012 ರಂದು ಕಾಲೇಜಿನಲ್ಲಿ ಕೆಲಸ ಇದೆ ನಾಳೆ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದಳು. ಅಂದು ನಾನೂ ಕೂಡಾ ಊರಲ್ಲಿ ಇರಲಿಲ್ಲ ಮರುದಿನ ಮಗಳು ಮನೆಗೆ ಬಾರದೇ ಇದ್ದಾಗ ಅವಳ ಮೊಬೈಲಿಗೆ ಸಂಪರ್ಕಿಸಲು ಮೊಬೈಲ ಸ್ವಿಚ್ ಆಫ್ ಆಗಿರುತ್ತದೆ. ನಾನು ಎಲ್ಲಾ ಕಡೆ ಹುಡುಕಾಡಿ ಅವಳ ಗೆಳತಿಯರ ಹತ್ತಿರ ಹಾಗು ಸಂಬಂದಿಕರ ಹತ್ತಿರ ಸಂಪರ್ಕಿಸಿದರು ಎಲ್ಲಿಯೂ ಸಿಗಲಿಲ್ಲಾ ಕಾರಣ ಕಾಣೆಯಾದ ನಮ್ಮ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಸದರಿಯವರ ಚಹರೆ ಪಟ್ಟಿ ಈ ರೀತಿಯಾಗಿರುತ್ತದೆ. ಹೆಸರು:ಕು. ಆಶಾರಾಣಿ ತಂದೆ ಚಂದ್ರಶೇಖರ ಅಲ್ಲೂರ ವ-25 ಉ-ವಿಧ್ಯಾರ್ಥಿನಿ ಸಾ~ಚಿತ್ತಾಪೂರ ಎತ್ತರ: 4 9’’ ದುಂಡು ಮುಖ, ದಪ್ಪ ಮೂಗು ಕೆಂಪು ಬಣ್ಣ, ಕರಿಯ ಬಣ್ಣದ ಕೂದಲು, ಮಾತನಾಡುವ ಭಾಷೆ:ಕನ್ನಡ ಮತ್ತು ಇಂಗ್ಲೀಷ ಪಿಂಕ್ ಬಣ್ಣದ ಚೂಡಿದಾರ ಧರಿಸಿರುತ್ತಾರೆ ಇವರುಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಠಾಣೆ ಫೋನ ನಂ: 08474-236123 ಮೊಬೈಲ ನಂ 9480803573 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಬಸ್ಸ ಕಂಡಕ್ಟರನ ಮೇಲೆ ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮಹ್ಮದ ಮಕಸೂದ ಅಲಿ ತಂದೆ ಮಹ್ಮದ ಜಿಲಾನಿ ಉ|| ನಿರ್ವಾಹಕ 3ನೇ ಘಟಕ ಗುಲಬರ್ಗಾ, ರವರು ನಾನು ಮತ್ತು ಬಸ್ಸಿನ ಚಾಲಕ ಅಬ್ದುಲ್ ನಾಸೀರ ರವರು ದಿನಾಂಕ:13-11-2012 ರಂದು ಬೆಳಿಗ್ಗೆಯಿಂದ ಕೆ-32 ಎಫ್-1795 ನೃಪತುಂಗ ನಗರ ಸಾರಿಗೆ ಬಸ್ಸಿನಲ್ಲಿ ಗುಲಬರ್ಗಾ ನಗರದ ಖಾಜಾ ಬಂದೆನವಾಜ ದರ್ಗಾದಿಂದ ಮದಿನಾ ಕಾಲೋನಿ ವರೆಗೆ ಕರ್ತವ್ಯ ನಿರ್ವಹಿಸುತ್ತಿರುವಾಗ ಮಧ್ಯಾಹ್ನ 12-30 ಗಂಟೆಗೆ ಬಸ್ಸು ಕೆಬಿಎನ್ ದರ್ಗಾದಿಂದ ಬಸ್ಸು ಬಿಟ್ಟಿದ್ದು ನ್ಯಾಷನಲ್ ಕಾಲೇಜ ಎದುರುಗಡೆ ಅಲ್ಲಿ ಕೆಲವು ವಿದ್ಯಾರ್ಥಿಗಳು ಬಸ್ಸಿನಲ್ಲಿ ಹತ್ತಿದ್ದು ಅವರು ಬಸ್ಸಿನ ಬಾಗಿಲಿನಲ್ಲಿ ನಿಂತಿದ್ದಾಗ ಅವರಿಗೆ ನಿರ್ವಾಹಕ ಇತನು ಒಳಗಡೆ ಬನ್ನಿ ಅಂತಾ ಹೇಳಿದಾಗ ಆತನ ಜೊತೆಯಲ್ಲಿ ಬಾಯಿ ಮಾತಿನ ತಕರಾರು ಮಾಡುತ್ತಾ ಹೊರಟರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಸ್ಸು ಮದಿನಾ ಕಾಲೋನಿಯ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜು ಹತ್ತಿರ ಹೋದಂತೆ ಬಸ್ಸಿನಲ್ಲಿದ್ದ 7-8 ಜನ ಹುಡುಗರು ಒಟ್ಟಿಗೇ ಸೇರಿ ನನಗೆ ಬಸ್ಸಿನಿಂದ ಕೆಳಗೆ ದಬ್ಬಿಕೊಂಡು ಹೋಗಿ ಕೈಯಿಂದ ಹೊಡೆ ಬಡೆ ಮಾಡಿ ನೆಲಕ್ಕೆ ಹಾಕಿ ಕಾಲಿನಿಂದ ತುಳಿದಿದ್ದು ಅಲ್ಲದೆ ನನ್ನ ಜೇಬಿನಲ್ಲಿ ಇದ್ದ ಬಸ್ಸಿನ ಟಿಕೇಟ ದರದ ಹಣ 3318/-ರೂ ಮತ್ತು ಎರಡು ವೇ ಬಿಲ್ಲ ಬಿದ್ದು ಕಳೆದಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:82/2012 ಕಲಂ 143, 147, 341, 323, 353, 504 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

13 November 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರಿ ಹಣಮಂತ ತಂದೆ ಯಲ್ಲಪ್ಪಾ ಯಾಳಗಿ ವ:35 ಜಾ:ಭೋವಿ ವಡ್ಡರ ಉ:ಖಣಿ ಕೆಲಸ ಸಾ:ಶೀಬರ ಕಟ್ಟಾ ಶಹಾಬಾದ ರವರು ನನ್ನ ಅಳಿಯ ನರೇಶ ತಂದೆ ಹುಲಗಪ್ಪಾ ವ:18 ಇತನ ಸಂಗಡ ತಿರುಪತಿ, ಭೀಮಣ್ಣಾ, ಹಳ್ಳೆಪ್ಪಾ ಇವರು ಪರ್ಶಿ ತುಂಬಲು ಲಾರಿ ನಂ.ಎಮ್‌ಹೆಚ್‌‌-09/ಎಲ್‌-8555 ನೇದ್ದರಲ್ಲಿ ದಿನಾಂಕ:12/11/2012 ರಂದು ಮುಂಜಾನೆ  ಲಾರಿಯ ಕ್ಯಾಬಿನ ಮೇಲೆ ಕುಳಿತುಕೊಂಡು ಶೀಬರ ಕಟ್ಟಾದಿಂದ ತರನಳ್ಳಿ ಗ್ರಾಮಕ್ಕೆ ಹೋಗುತ್ತಿದ್ದರು ಸದರಿ ಲಾರಿಯನ್ನು ಮೌಲಾಲಿ ತಂದೆ ಹಸನಸಾಬ ಇತನು ಚಲಾಯಿಸುತ್ತಿದ್ದನು.ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಳೆ ಶಹಾಬಾದದ ಫಕೀರಪ್ಪಾ ಹೊತಿನ ಮಡ್ಡಿ ರವರ ಮನೆಯ  ಎದರುಗಡೆ ರೋಡಿನ ಮೇಲೆ ಜಂಪಿನಲ್ಲಿ ಒಮ್ಮಲೆ ಬ್ರೇಕ ಹಾಕಿದ್ದರಿಂದ ಅಳಿಯ ನರೇಶ ಇತನು ಲಾರಿಯ ಕ್ಯಾಬಿನ ಮೇಲಿಂದ ಕೆಳಗೆ ಬಿದ್ದಿದ್ದರಿಂದ ಸದರಿಯವನಿಗೆ ಬಲಗಾಲ ತೊಡೆಗೆ ಒಳಪೆಟ್ಟಾಗಿರುತ್ತದೆ. ಮತ್ತು ಬಲಗೈಗೆ ಒಳಪೆಟ್ಟು  ಮತ್ತು ರಕ್ತಗಾಯವಾಗಿರುತ್ತದೆ. ಮತ್ತು ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ  ಉಳಿದವರಿಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲಾ.ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 148/2012 ಕಲಂ:279,337 ಐಪಿಸಿ ಸಂ:187 ಐಎಮ್‌ವಿ ಆಕ್ಟ್‌‌  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಡಾ. ಗೌಸುದ್ದಿನ ಆರೀಫ್ ಸಾ|| ಮನೆ ನಂ. 1-406 ಓನ್ ವೆ ಸ್ಟೇಷನ್ ರೋಡ ಸ್ಟೇಷನ್ ಬಜಾರ ಗುಲಬರ್ಗಾ ರವರು ನಾನು ದಿನಾಂಕ.05.11.2012 ರಂದು 3.00 ಗಂಟೆಯ ಸುಮಾರಿಗೆ ನಮ್ಮ ಆಸ್ಪತ್ರೆಯ ಮುಂದೆ ನನ್ನ ಮಾರುತಿ ಎ-ಸ್ಟಾರ್ ಕಾರ್ ನಂ. ಕೆಎ-32-ಎಮ್-7825 ನೆದ್ದು ನಿಲ್ಲುಗಡೆ ಮಾಡಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಉಪಚಾರ ಮಾಡಿ ನಂತರ 4.30 ಪಿ.ಎಂ ಗೆ ಹೊರಗಡೆ ಬಂದು ನೋಡಲು ನನ್ನ ಕಾರ್ ಇರಲಿಲ್ಲ ಇಲ್ಲಿಯ ವರೆಗೆ ಎಲ್ಲಾ ಕಡೆ ಹುಡುಕಾಡಿದರು ನನ್ನ ಕಾರ್ ಸಿಕ್ಕಿರುವುದಿಲ್ಲ ಯಾರೋ ಕಳ್ಳರು ನನ್ನ ಕಾರ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಮಾರುತಿ ಎ-ಸ್ಟಾರ್ ಕಾರ್ ನಂ. ಕೆಎ-32-ಎಮ್-7825  ಮಾಡಲ್-2009 , ಚೆಸ್ಸಿ ನಂ.148129, ಅಂದಾಜು ಕಿಮತ್ತು . 2,50,000/- ರೂ ಇರುತ್ತದೆ. ಕಾರಣ ನನ್ನ ಆಸ್ಪತ್ರೆ ಮುಂದುಗಡೆ ನಿಲುಗಡೆ ಮಾಡಿದ್ದ ಕಾರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.138/2012 ಕಲಂ.138/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ವಿನಾಯಕ ತಂದೆ ತುಳಜಾರಾಮ  ನಾಯಿಂದ್ರಕರ ವಯ;31 ಸಾ; ಬಂಬೂಬಜಾರ ಹುಮನಾಬಾದ ಬೇಸ್ ಗುಲಬರ್ಗಾ ರವರು  ನಾನು ದಿನಾಂಕ. 09-11-2012 ರಂದು 9-30 ಪಿ.ಎಂ. ಗಂಟೆಯ ಸುಮಾರಿಗೆ ಇಂಡಸ್ಟ್ರೀಯಲ್ ಏರಿಯಾದಿಂದ ಮನೆಗೆ ಬರುವಾಗ ಹುಮನಾಬಾದ ರೋಡಿನ  ಟಿ.ವಿ. ಸ್ಟೇಶನ ಎದರುಗಡೆ ರೋಡಿನ ಮೇಲೆ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ವೇಗದಲ್ಲಿ ನಡೆಯಿಸಿಕೊಂಡು ಬಂದು ಒಬ್ಬ ಪಾದ ಚಾರಿಗೆ ಡಿಕ್ಕಿ ಹೊಡೆದು ಹೋಗಿದ್ದು ,ಆ ವ್ಯಕ್ತಿಯ ತಲೆಗೆ ಭಾರಿ ಪೆಟ್ಟಾಗಿ ಮೆದಳು ಹೊರ ಬಿದ್ದು ಭಾರಿ ರಕ್ತಸ್ರಾವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ  ಮೇಲಿಂದ ಠಾಣೆ ಗುನ್ನೆ ನಂ.362/12 ಕಲಂ.279,304(ಎ)ಐಪಿಸಿ ಸಂಗಡ 187 ಐಎಂವಿ ಎಕ್ಟ ನೆದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ಸದರಿ ವ್ಯಕ್ತಿಯ ಚಹರೆ ಪಟ್ಟಿ ,ಅಪರಿಚಿತ ಗಂಡು ಮನುಷ್ಯ, ಎತ್ತರ 5 5 ತೆಳುವಾದ ಮೈಕಟ್ಟು, ಸಾದಾಗಪ್ಪು  ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ ಕೂದಲು, ಬಡಕಲು ಶರೀರ ಒಂದು ಬಿಳಿ ಪ್ಯಾಂಟು, ಒಂದು ಕಪ್ಪು ಪ್ಯಾಂಟ ಇರುತ್ತದೆ. ಸದರಿ ವ್ಯಕ್ತಿಯ ವಾರಸುದಾರರು ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ 08472263631,  ಅಥವಾ ಸಿಪಿಐ ಗ್ರಾಮೀಣ 08472263630 ಅಥವಾ ಕಂಟ್ರೋಲ್ ರೂಮ 08472263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.