ಹಲ್ಲೆ
ಪ್ರಕರಣ:
ಬ್ರಹ್ಮಪೂರ
ಪೊಲೀಸ ಠಾಣೆ:ಶ್ರೀ.ಮಹಾಂತೇಶ
ತಂದೆ ಭಗವಂತರಾಯ ಮಡಿವಾಳ, ವಯ|| 36,ಜಾತಿ|| ಅಗಸರ, ಉ|| ನರ್ತಕಿಬಾರದಲ್ಲಿಸಾ|| ಗೌಡಗಾಂವ, ಹಾ||ವ|| ಜಿ.ಆರ್ ನಗರ ಆಳಂದ ರೋಡ ಗುಲಬರ್ಗಾ
ರವರು ನಾನು ದಿನಾಂಕ:12/11/2012 ರಂದು ರಾತ್ರಿ 9-30 ಗಂಟೆಗೆ ನರ್ತಕಿ
ಬಾರಿನಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡುತ್ತಿರುವಾಗ ಕರಣ ಗಾಯಕವಾಡ ಸಂಗಡ 4-5 ಜನರು ಬಂದು ಮದ್ಯ
ಸೇವನೆ ಮಾಡಿ ಹಾಗೆ ಹೋಗುತ್ತಿರುವಾಗ ನಮ್ಮ ವೇಟರಗಳು ಅವರಿಗೆ ಬಿಲ್ಲ ಕೇಳಿದಕ್ಕೆ ಬೊಸಡಿ ಮಕ್ಕಳೆ
ನಮಗೆ ಬಿಲ್ಲ ಕೇಳುತ್ತಿರಾ ಅಂತಾ ತಕರಾರು ಮಾಡುತ್ತಿದ್ದರು. ನಾನು, ನೀವು ರೀತಿ ಮಾಡುವದು
ಸರಿಯಲ್ಲ ಕುಡಿದ ಮೇಲೆ ಬಿಲ್ಲು ಕೊಟ್ಟು ಹೋಗಬೇಕು ಅಂತಾ ಅಂದಿದ್ದಕ್ಕೆ ಅವರುಗಳು
ಪ್ರೀಜಿನಲ್ಲಿದ್ದ ಬೀರ ಬಾಟಲಿ ತೆಗೆದುಕೊಂಡು ಕೌಂಟರಗೆ ತಂದು ಒಡೆದು ಸುಮಾರು 500-600 ರೂಪಾಯಿ
ಹಾನಿ ಮಾಡಿದ್ದು ಅಲ್ಲದೆ ಬಾರ ಅಂಗಡಿಯ ಶೇಟರ ಎಳೆದು ನಮಗೆ ಹೊರಗೆ ಬರದಂತೆ ತಡೆದು ನಿಮ್ಮಲ್ಲರಿಗೆ
ಹೊಡೆದು ಖಲಾಸ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿ, ಕೆಲವು ಗ್ರಾಹಕರು ಕೂಡ ಬಿಲ್ಲು ಕೊಡದೆ ಓಡಿ ಹೋಗಿದ್ದು
ಇದರಿಂದ ಸುಮಾರು 10,000/- ರೂಪಾಯಿ ಲುಕ್ಸಾನ ಆಗಿದ್ದು
ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 117/2012 ಕಲಂ: 143, 147, 341, 427, 504, 506 ಸಂಗಡ 149 ಐ.ಪಿ.ಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ
ಪ್ರಕರಣ:
ಅಶೋಕ
ನಗರ ಪೊಲೀಸ ಠಾಣೆ : ಶ್ರೀ. ಪ್ರಸನ್ನಜೀತ
ತಂದೆ ಚಂದ್ರಕಾಂತ ಗಾಯಕವಾಡ ಸಾ: ಕಾಂತಾ ಕಾಲೋನಿ ಗುಲಬರ್ಗಾ ರವರು ದಿನಾಂಕ:14/11/2012 ರಂದು
ರಾತ್ರಿ 8-15 ಗಂಟೆ ಸುಮಾರಿಗೆ ಗುಲಬರ್ಗಾ ಬಸ ಸ್ಟ್ಟ್ಯಾಂಡದಿಂದ ನನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಕಾಂತಾ ಕಾಲೋನಿಯ ವೆಲ್ಡಿಂಗ ಅಂಗಡಿ ಸ್ವಲ್ಪ ದೂರದಲ್ಲಿ ಸ್ಮಶಾನ ಭೂಮಿ ಕಡೆಗೆ ಹೋಗುವ ಕಚ್ಚಾ ರಸ್ತೆಯಲ್ಲಿ 3 ಜನ ಅಪರಿಚಿತ ಹುಡುಗರು ಬಂದು ನನಗೆ ನಿಲ್ಲಿಸಿ ತಲವಾರ ತೊರಿಸಿ ಜಬರ ದಸ್ತಿಯಿಂದ ನನ್ನ ಶರ್ಟ ಜೇಬಿನಲ್ಲಿ
ಕೈ ಹಾಕಿ 100/- ರೂಪಾಯಿಯ ನೋಟುಗಳುಳ್ಳ ಒಟ್ಟು 500/- ರೂಪಾಯಿ ಮತ್ತು ನನ್ನ ಎಸ್.ಬಿ.ಐ ಖಾತೆಯ
ಎ.ಟಿ.ಎಂ ಕಾರ್ಡನ್ನು ಕಸಿದುಕೊಂಡು ಹೋಗಿರುತ್ತಾರೆ. ನಾನು ಚಿರಾಡುತ್ತಿರುವಾಗ ಸ್ಮಶಾನ ಭೂಮಿ ಕಡೆಗೆ ಎಳೆದುಕೊಂಡು ಹೋಗಿ ಕೈಯಿಂದ
ಮುಖಕ್ಕೆ ಹೊಡೆದು ಗಾಯಗೊಳಿಸಿರುತ್ತಾರೆ. ಆ 3 ಜನ ಹುಡುಗರನ್ನು ಲೈಟಿನ ಬೇಳಕಿನಲ್ಲಿ ನೋಡಿರುತ್ತೆನೆ. ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 101/2012 ಕಲಂ. 397 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ
ಪ್ರಕರಣ:
ಶಹಾಬಾದ
ನಗರ ಪೊಲೀಸ ಠಾಣೆ: ದಿನಾಂಕ:14/11/2012
ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಶಹಾಬಾದ ನಗರದ ಶ್ರೀ ಗುರು ಏಜನ್ಸಿ
ಎದರುಗಡೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಣಪತಿ ತಂದೆ ಮೇಲಗೀರಿ ಪವಾರ ಸಂಗಡ ಇನ್ನೂ
4 ಜನರು ಸಾ:ಎಲ್ಲರೂ ಶಹಾಬಾದ ಇವರು ಅಂದರ-ಬಾಹರ ಎಂಬ ಇಸ್ಪೀಟ ಜೂಜಾಟದಲ್ಲಿ ನಿರತರಾಗಿದ್ದವರ ಮೇಲೆ
ಶ್ರೀ ಎಸ್.ಎಸ್.ಹುಲ್ಲೂರ ಪಿಐ ಡಿಸಿಐಬಿ ಗುಲಬರ್ಗಾ ರವರು ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ 5 ಜನರ ಮೇಲೆ ದಾಳಿ
ಮಾಡಿ ಅವರಿಂದ ನಗದು 23030/-ರೂ ಮತ್ತು ಇಸ್ಪೀಟ ಎಲೆಗಳು ಜಪ್ತಿ ಪಡಿಸಿಕೊಂಡು ವರದಿ ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 150/2012 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು
ಮಾಡಿಕೊಂಡಿರುತ್ತಾರೆ.
No comments:
Post a Comment