POLICE BHAVAN KALABURAGI

POLICE BHAVAN KALABURAGI

24 October 2012

GULBARGA DISTRICT REPORTED CRIMES


ವರದಕ್ಷಿಣೆ ಕಿರಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ಶ್ರೀಮತಿ, ಇಂದುಮತಿ ಗಂಡ ಅರುಣಕುಮಾರ ಚವ್ಹಾಣ ವಯ:28  ವರ್ಷ ಉ:ಸಹಶಿಕ್ಷಕಿ ಸಾ:ಅಂಬಿಕಾನಗರ  ಹಾವ: ಶರಣ ಕೃಪಾ ಕುವೆಂಪುನಗರ   ಗುಲಬರ್ಗಾ ರವರು ನನ್ನ ಮದುವೆಯು ದಿನಾಂಕ:18-11-2011 ರಂದು ಅರುಣಕುಮಾರ ತಂದೆ ಶಿವಾಜಿ ಚವ್ಹಾಣ ಸಾ|| ಅಂಬಿಕಾನಗರ ಗುಲಬಗರ್ಗಾ ಇತನ್ನೊಂದಿಗೆ ನೇರವೆರಿದ್ದು, ಲಗ್ನದ ಸಮಯದಲ್ಲಿ ಅರುಣಕುಮಾರ ನಿಗೆ  ವರದಕ್ಷಿಣೆ ಅಂತಾ  ಒಂದು ಲಕ್ಷ ರೂಪಾಯಿ ವರದಕ್ಷಿಣೆ, 5 ತೊಲೆ ಬಂಗಾರ ಮತ್ತು ನಿಶ್ಚಯ ಕಾಲಕ್ಕೆ  2 ತೊಲೆ ಬಂಗಾರ ಮತ್ತು ಒಂದು ಹೊಂಡಾ ಶೈನ ಮೋಟಾರ ಸೈಕಲ ಮತ್ತು ಮನೆ ಬಳಕೆಯ ಸಾಮಾನುಗಳು ತೆಗೆದುಕೊಂಡಿದ್ದಲ್ಲದೇ ಅರುಣಕುಮಾರ ಇತನು ಮೊದಲ ಸಲ ನಮ್ಮ ಮನೆಗೆ ಬಂದಾಗ  ಒಂದು ತೊಲೆ ಬಂಗಾರ  ಮಾಡಿಸಿಕೊಂಡಿದ್ದು ಇರುತ್ತದೆ. ನಂತರ ಗಂಡನಾದ ಅರುಣಕುಮಾರ, ಅತ್ತೆ, ಮಾವ, ಭಾವಂದಿರು ಅಶೋಕ ಹೆಂಡತಿ ಮೈದುನ ಇವರೆಲ್ಲರೂ ಇನ್ನೂ 50, ಸಾವಿರ ರೂಪಾಯಿಗಳು  ಒಮದು ತೋಲಿ  ಬಂಗಾರ ತೆಗೆದುಕೊಂಡು ಬರಬೇಕು ಮತ್ತು ಮದುವೆ ಮುಂಚಿತ 4 ವರ್ಷ ಶಿಕ್ಷಕಿ ಅಂತಾ ಕೆಲಸ ಮಾಡಿದ ಹಣ ಕೂಡಾ ತೆಗೆದುಕೊಂಡು ಬರಬೇಕು ಅಂತಾ ಹೇಳಿ  ಎಲ್ಲರೂ ಚಿತ್ರ ಹಿಂಸೆಕೊಟ್ಟು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಮ್ಮ ತಂದೆಯವರು ನನ್ನ ಗಂಡನ ಮನೆಗೆ ಬಂದು ತೊಂದರೆ ಕೋಡಬೇಡಿರಿ ಅಂತಾ ಹೇಳಿದ್ದರೂ ಕೂಡಾ ಮೇಲಿನಂತೆ ಹಣ ಬಂಗಾರ ತಂದಾಗ ಮಾತ್ರ ಮನೆಯಲ್ಲಿ ಕರೆದುಕೊಳ್ಳುವುದಾಗಿ ಚಿತ್ರಹಿಂಸೆ ಕೊಟ್ಟು ಮನೆಯಿಂದ ಹೊರಗೆ ಹಾಕಿದ್ದು ಇರುತ್ತದೆ. ದಿನಾಂಕ:07-10-2012 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ನನ್ನ ಕಾಕನಾದ ಗೋವಿಂದ ಇವರು  ಗಂಡನ ಮನೆಯಾದ  ಅಂಬಿಕಾನಗರಕ್ಕೆ ಹೋದಾಗ ನನ್ನ ಗಂಡ, ಅತ್ತೆ, ಮಾವ, ಹಾಗೂ ಭಾವ ಸೂರ್ಯಕಾಂತ ಇವರೆಲ್ಲರೂ ಗೋವಿಂದ ರಾಠೋಡ ಇವರಿಗೆ ಇಂದುಮತಿಗೆ ಯಾಕೆ ಕರೆದುಕೊಂಡು ಬಂದೆ ಅಂತಾ ಕೇಳಿದ್ದಕ್ಕೆ ನಮಗೆ ಹೆಚ್ಚಿನ ವರದಕ್ಷಿಣೆ ಕೊಡುವುದು ಆಗುವುದಿಲ್ಲಾ ಅಂತಾ ನನ್ನ  ಕಾಕ ಗೋವಿಂದ ರಾಠೋಡ ಅಂದಾಗ ನನಗೆ, ನನ್ನ  ಗಂಡ ಅತ್ತೆ ಮಾವ , ಭಾವ  ಮತ್ತು ಇತರರು ಅವಾಚ್ಯ ಶಬ್ದಗಳಿಂದ ಬೈದ್ದು ಕೈಯಿಂದ ಹೊಡೆಬಡೆ ಮಾಡಿ ವರದಕ್ಷಿಣೆ ಹಣ ತರುವಂತೆ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ: 76/2012 ಕಲಂ, 143, 147, 498 (ಎ) 323, 504, 506 ಐಪಿಸಿ ಸಂಗಡ 149 ಐಪಿಸಿ ಮತ್ತು 3 & 4 ಡಿಪಿ ಆಕ್ಟ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಪೊಲೀಸ್ ಪೇದೆ ಕೊಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀಮತಿ. ಮಂಜುಳಾ ಗಂಡ ಶರಣಬಸಪ್ಪ ಚಕ್ಕಿ, ಸಾ|| ಮಕ್ತಂಪೂರ ಗುಲಬರ್ಗಾ ರವರು ನಾನು 11 ವರ್ಷಗಳ ಹಿಂದೆ ಮಕ್ತಂಪೂರ ಬಡಾವಣೆಯ ಶರಣಬಸಪ್ಪ ಈತನೊಂದಿಗೆ ಮದುವೆಯಾಗಿದ್ದು, ನನ್ನ ಗಂಡನು ಪೊಲೀಸ ಇಲಾಖೆಯಲ್ಲಿ ಪೊಲೀಸ ಕಾನ್ಸಟೇಬಲ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ಸದ್ಯ ಅವರು ಗುಲಬರ್ಗಾದ ಅಬಕಾರಿ ಮತ್ತು ಲಾಟರಿ ನಿಷೇದ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತಾರೆ.  ಮದುವೆಯಾದ ಒಂದು ವರ್ಷದ ನಂತರ ನನ್ನ ಗಂಡನು ಕರಜಗಿ ಗ್ರಾಮದ ಕವಿತಾ ಅನ್ನುವಳೊಂದಿಗೆ ಯಾವುದೋ ಗುಡಿಯಲ್ಲಿ ಹಾರ ಬದಲಾಯಿಸಿಕೊಂಡು ನಂತರ 8-10 ವರ್ಷಗಳ ಹಿಂದ ಅವಳಿಂದ ಬೇರೆಯಾಗಿರುವ ವಿಷಯ ನನಗೆ ಗೊತ್ತಾಗಿರುತ್ತದೆ. ದಿನಾಂಕ: 24/10/2012 ರಂದು ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮ ನಾದನಿ, ನಮ್ಮ ತಮ್ಮ ಎಲ್ಲರೂ ನಮ್ಮ ಮನೆಯಲ್ಲಿ ಇರುವಾಗ ಇಬ್ಬರು ಪೊಲೀಸರು ನಮ್ಮ ಮನೆಗೆ ಬಂದು ಶರಣಬಸಪ್ಪನಿಗೆ ಯಾರೋ ಹೊಟ್ಟೆಗೆ ಚಾಕುವಿನಿಂದ ಯಾವುದೋ ಸ್ಥಳದಲ್ಲಿ ಹೊಡೆದು ಶವವನ್ನು ಬ್ರಹ್ಮಪೂರ ಠಾಣೆಯ ಹಿಂದುಗಡೆ ಕಂಪೌಂಡ ಹತ್ತಿರ ತಂದು ಬಿಸಾಕಿರುತ್ತಾರೆ. ಅಂತಾ ತಿಳಿಸಿದ ಮೇರೆಗೆ ನಾವು ಮೂವರು ಗಾಬರಿಯಾಗಿ ಸ್ಥಳಕ್ಕೆ ಬಂದು ನೋಡಲು ಯಾರೋ ದುಷ್ಕರ್ಮಿಗಳು ನನ್ನ ಗಂಡನಿಗೆ ಹೊಟ್ಟೆಗೆ ಹಾಗೂ ಬಲಗಡೆ ಕಿವಿಯ ಹತ್ತಿರ ಮತ್ತು ಎಡಗಡೆ ತುಟಿಯ ಮೇಲೆ ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದು ಕಂಡು ಬರುತ್ತದೆ. ನನ್ನ ಗಂಡನು ನಿನ್ನೆ ದಿನಾಂಕ:23/10/2012 ರಂದು ರಾತ್ರಿ 7:00 ಗಂಟೆಗೆ ರಾತ್ರಿ ಕರ್ತವ್ಯ ಇರುತ್ತದೆ ಅಂತಾ ಮನೆಯಿಂದ ಹೇಳಿ ಹೋಗಿರುತ್ತಾರೆ. ನನ್ನ ಗಂಡನ ಶವದ ಸ್ಥಿತಿ ನೋಡಲು ಯಾರೋ ದುಷ್ಕರ್ಮಿಗಳು ದಿನಾಂಕ: 24/10/2012 ರಂದು ಬೆಳಿಗ್ಗಿನ ಜಾವ 04-00 ಗಂಟೆಯಿಂದ 06-00 ಗಂಟೆಯ ಮದ್ಯದ ಅವಧಿಯಲ್ಲಿ ಹೊಟ್ಟೆಗೆ ಮತ್ತು ಶರೀರದ ಇತರೆ ಭಾಗಗಳಲ್ಲಿ ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಕಾರಣ ನನ್ನ ಗಂಡನಿಗೆ ಕೊಲೆ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿಯ ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:112/2012 ಕಲಂ: 302 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

23 October 2012

GULBARGA DISTRICT REPORTED CRIMES

ಸರ್ಕಾರಿ  ಬುದ್ದಿ ಮಾಂದ್ಯ ಮಕ್ಕಳ ವಸತಿ ನಿಲಯದಲ್ಲಿ ಬೇಜವಾಬ್ದಾರಿ ತೋರಿಸಿದ, ನಿಲಯದ ಅಧಿಕಾರಿ ಮತ್ತು ಸಿಬ್ಬಂದಿಯವರ ವಿರುದ್ದ  ಪ್ರಕರಣ :
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಆನಂದರಾಜ ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ಗುಲಬರ್ಗಾ ಜಿಲ್ಲೆ ಗುಲಬರ್ಗಾರವರು,  ಸಂಗಿತಾ ತಂದೆ ಮಲ್ಲಪ್ಪಾ ಕಟ್ಟಿಮನಿ ಸಾ|| ಇಟಗಾ ಎಂಬ ಮಗುವನ್ನು ದಿನಾಂಕ:05-10-2012 ರಂದು ಮಗುವಿನ ಅಣ್ಣ ತಿಪ್ಪಣ್ಣಾ ಇವರು ಮಗುವನ್ನು ತಾತ್ಕಲಿಕವಾಗಿ ಸ್ವಾಗತ ಕೇಂದ್ರಕ್ಕೆ ದಾಖಲು ಮಾಡಿರುತ್ತಾರೆ, ದಿನಾಂಕ:17-10-2012 ರಂದು ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ಗುಬರ್ಗಾ ಜಿಲ್ಲೆ ಇವರು ಬಾಲಕರ ಬಾಲ ಮಂದಿರ ಸಭೆ ಮುಗಿಸಿಕೊಂಡು ಅನಿರಿಕ್ಷೀತವಾಗಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿದಾಗ ಮಗು ಸಂಗೀತಾ ಅಳುತ್ತಿದದ್ದನ್ನು ಕಂಡು ವಿಚಾರಿಸಿದಾಗ, ಮಗುವಿನ ಕಾಲಿನ ಮೇಲೆ ಬೆಂಕಿಯಿಂದ ಸುಟ್ಟಗಾಯ ಕಂಡುಬಂದಿತ್ತು. ಈ ಕೃತ್ಯದ ಬಗ್ಗೆ ಸಿಬ್ಬಂದಿಯವರಿಗೆ  ವಿಚಾರಿಸಿದಾಗ ಮಗು ಬಿದ್ದಿರುವುದಾಗಿ ಹೇಳಿರುತ್ತಾರೆ, ಆದರೆ ಮಗು ಸುಟ್ಟಿರುವುದಾಗಿ ಹೇಳಿಕೆ ನೀಡಿರುತ್ತದೆ. ಮಕ್ಕಳ ಆರಕ್ಷಣೆ ಪೋಷಣೆ ಆರೈಕೆಯ ಜವಾಬ್ದಾರಿ ಹೋತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯವರ ಬೇಜವಾಬ್ದಾರಿಯೇ ಈ ತರಹದ ಘಟನೆಗೆ ಕಾರಣವಾಗಿರುತ್ತದೆ ಅಂತಾ ಶ್ರೀ ಆನಂದರಾವ ರವರು ಬಾಲಕಿಯವರ ಬಾಲ ಮಂದಿರದ  ಅಧೀಕ್ಷಕರು ಹಾಗೂ ಸಿಬ್ಬಂದಿಯವರ ವಿರುದ್ದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:75/2012 ಕಲಂ 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
 ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ. ನಿಲಕಂಠ ತಂದೆ ವಿರಯ್ಯ ಗುರುಮಿಠಕಲ ಸಾ|| ಬಸವ ಸದನ ಖುಬಾ ಪ್ಲಾಟ್  ಗುಲಬರ್ಗಾ ರವರು ನಾನು ಸಾಯಿ ವಿನಾಯಕ ಸೇರಾಮಿಕ್ ಸ್ಟೋರ ದಿನಾಂಕ.20.10.2012 ರಂದು ರಾತ್ರಿ 9.00 ಗಂಟೆಗೆ ತಮ್ಮ ಅಂಗಡಿ ಮುಚ್ಚಿಕೊಂಡು ಹೋಗಿದ್ದು, ದಿನಾಂಕ.22.10.2012 ರಂದು ಬೆಳಿಗ್ಗೆ 10.15 ಗಂಟೆಗೆ ಅಂಗಡಿ ತೆರೆದು ನೋಡಲಾಗಿ ಯಾರೋ ಕಳ್ಳರು ಅಂಗಡಿಯ ಹಿಂದಿನ ಕಿಡಕಿ ತೆರೆದು ಶೊಕೇಶಗಳಲ್ಲಿ ಇಟ್ಟ 1,98,515/- ರೂ ಕ್ಕಿಮತ್ತಿನ ಸೆನಟರಿ ವೇರ (ಸಿ.ಪಿ ಭಾತ ರೂಂ ಫಿಟಿಂಗ್ಸ) ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.129/2012 ಕಲಂ.457,380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 October 2012

GULBARGA DISTRICT


ಅರವಿಂದ ನರೋಣಿ ಕೊಲೆ ಮಾಡಿದ ಮೂರು ಜನ ಆರೋಪಿಗಳ ಬಂಧನ.
     ದಿನಾಂಕ:25-09-2012 ರಂದು ಸಾಯಂಕಾಲ ಗುಲಬರ್ಗಾ ನಗರದ ಆಳಂದ ರೋಡಿಗೆ ಇರುವ ಕಡಗಂಚಿ ಕಾಂಪ್ಲೇಕ್ಸ ಹತ್ತಿರ ಕಾಂಪ್ಲೇಕ್ಸ ಮಾಲಿಕರಾದ ಶ್ರೀ ಅರವಿಂದ ನರೋಣಿ, ನಿರ್ದೇಶಕರು, ಕರ್ನಾಟಕ ಹಾಲು ಒಕ್ಕೂಟ ಗುಲಬರ್ಗಾ ಸಾ|| ಕಡಗಂಚಿ ಇವರಿಗೆ, ಕಡಗಂಚಿ ಗ್ರಾಮದ ಯೋಗೇಶ ಹೊಸಕುರಬರ, ಬೀರಣ್ಣ ವಗ್ಗಿ, ಭೀಮರಾಯ ಹೊಸಕುರಬರ, ಮಲ್ಲಪ್ಪ ವಗ್ಗಿ, ಸೋಮಯ್ಯ ಸ್ವಾಮಿ, ಶ್ರೀಶೈಲ ಅಲ್ದಿ, ಜಗಪ್ಪ ಹೊಸಕುರಬರ, ವಿಠಲ ಹೊಸಕುರಬರ ಹಾಗು ಇತರರು ಕೂಡಿಕೊಂಡು ಬಂದು, ಪಿಸ್ತೂಲ್ ಹಾಗು ತಲವಾರದಿಂದ ಹೊಡೆದು ಕೊಲೆ ಮಾಡಿದ್ದಲದೇ,  ಶರಣು ನರೋಣಿ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಿರುತ್ತಾರೆ ಅಂತಾ ಶಿವಪತ್ರ ತಂದೆ ಚಂದ್ರಶಾ ಕ್ಯಾರ ಇವರು ಕೊಟ್ಟ ದೂರಿನ ಮೇರೆಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
      ಸದರಿ ಪ್ರಕರಣದ ತನಿಖೆ ಮತ್ತು ಆರೋಪಿತರ ಪತ್ತೆಗಾಗಿ ಗುಲಬರ್ಗಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಪವಾರ ಪ್ರವೀಣ ಮಧುಕರ ಐ.ಪಿ.ಎಸ್,  ಎಸ.ಪಿ ಗುಲಬರ್ಗಾ ಇವರು ಕೊಲೆ ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ಎರಡು ತಂಡಗಳನ್ನು ರಚಿಸಿದ್ದು, ಸದರಿ ತಂಡದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಆರೋಪಿತರ ಪತ್ತೆ ಮಾಡಿ ಆರೋಪಿತರಾದ 1.ಯೋಗೇಶ ತಂದೆ ಮಾಳಪ್ಪಾ ಹೊಸಕುರಬರ ಸಾ|| ಕಡಗಂಚಿ, 2.ಸೈಪನಸಾಬ ತಂದೆ ಹುಸೇನಸಾಬ ಶೇಖ ಸಾ|| ಝಳಕಿ ತಾ|| ಆಳಂದ, 3.ಮಲ್ಲಪ್ಪ ತಂದೆ ಶಾಂತಪ್ಪಾ ವಗ್ಗೆ ಸಾ|| ಕಡಗಂಚಿ ಇವರನ್ನು ರಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಂಧಿತರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಮಚ್ಚು, ಎರಡು ಮೊಬೈಲಗಳು, ವಿವಿಧ ಕಂಪನಿಯ ಸಿಮ್ ಗಳು ಜಪ್ತಿ ಪಡಿಸಿಕೊಂಡಿರುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರೋಪಿತರ ಪತ್ತೆ ಕಾರ್ಯ ಹಾಗು ತನಿಖೆ ಜಾರಿಯಲ್ಲಿರುತ್ತದೆ.