POLICE BHAVAN KALABURAGI

POLICE BHAVAN KALABURAGI

23 October 2012

GULBARGA DISTRICT REPORTED CRIMES

ಸರ್ಕಾರಿ  ಬುದ್ದಿ ಮಾಂದ್ಯ ಮಕ್ಕಳ ವಸತಿ ನಿಲಯದಲ್ಲಿ ಬೇಜವಾಬ್ದಾರಿ ತೋರಿಸಿದ, ನಿಲಯದ ಅಧಿಕಾರಿ ಮತ್ತು ಸಿಬ್ಬಂದಿಯವರ ವಿರುದ್ದ  ಪ್ರಕರಣ :
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಆನಂದರಾಜ ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ಗುಲಬರ್ಗಾ ಜಿಲ್ಲೆ ಗುಲಬರ್ಗಾರವರು,  ಸಂಗಿತಾ ತಂದೆ ಮಲ್ಲಪ್ಪಾ ಕಟ್ಟಿಮನಿ ಸಾ|| ಇಟಗಾ ಎಂಬ ಮಗುವನ್ನು ದಿನಾಂಕ:05-10-2012 ರಂದು ಮಗುವಿನ ಅಣ್ಣ ತಿಪ್ಪಣ್ಣಾ ಇವರು ಮಗುವನ್ನು ತಾತ್ಕಲಿಕವಾಗಿ ಸ್ವಾಗತ ಕೇಂದ್ರಕ್ಕೆ ದಾಖಲು ಮಾಡಿರುತ್ತಾರೆ, ದಿನಾಂಕ:17-10-2012 ರಂದು ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ಗುಬರ್ಗಾ ಜಿಲ್ಲೆ ಇವರು ಬಾಲಕರ ಬಾಲ ಮಂದಿರ ಸಭೆ ಮುಗಿಸಿಕೊಂಡು ಅನಿರಿಕ್ಷೀತವಾಗಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿದಾಗ ಮಗು ಸಂಗೀತಾ ಅಳುತ್ತಿದದ್ದನ್ನು ಕಂಡು ವಿಚಾರಿಸಿದಾಗ, ಮಗುವಿನ ಕಾಲಿನ ಮೇಲೆ ಬೆಂಕಿಯಿಂದ ಸುಟ್ಟಗಾಯ ಕಂಡುಬಂದಿತ್ತು. ಈ ಕೃತ್ಯದ ಬಗ್ಗೆ ಸಿಬ್ಬಂದಿಯವರಿಗೆ  ವಿಚಾರಿಸಿದಾಗ ಮಗು ಬಿದ್ದಿರುವುದಾಗಿ ಹೇಳಿರುತ್ತಾರೆ, ಆದರೆ ಮಗು ಸುಟ್ಟಿರುವುದಾಗಿ ಹೇಳಿಕೆ ನೀಡಿರುತ್ತದೆ. ಮಕ್ಕಳ ಆರಕ್ಷಣೆ ಪೋಷಣೆ ಆರೈಕೆಯ ಜವಾಬ್ದಾರಿ ಹೋತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯವರ ಬೇಜವಾಬ್ದಾರಿಯೇ ಈ ತರಹದ ಘಟನೆಗೆ ಕಾರಣವಾಗಿರುತ್ತದೆ ಅಂತಾ ಶ್ರೀ ಆನಂದರಾವ ರವರು ಬಾಲಕಿಯವರ ಬಾಲ ಮಂದಿರದ  ಅಧೀಕ್ಷಕರು ಹಾಗೂ ಸಿಬ್ಬಂದಿಯವರ ವಿರುದ್ದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:75/2012 ಕಲಂ 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
 ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ. ನಿಲಕಂಠ ತಂದೆ ವಿರಯ್ಯ ಗುರುಮಿಠಕಲ ಸಾ|| ಬಸವ ಸದನ ಖುಬಾ ಪ್ಲಾಟ್  ಗುಲಬರ್ಗಾ ರವರು ನಾನು ಸಾಯಿ ವಿನಾಯಕ ಸೇರಾಮಿಕ್ ಸ್ಟೋರ ದಿನಾಂಕ.20.10.2012 ರಂದು ರಾತ್ರಿ 9.00 ಗಂಟೆಗೆ ತಮ್ಮ ಅಂಗಡಿ ಮುಚ್ಚಿಕೊಂಡು ಹೋಗಿದ್ದು, ದಿನಾಂಕ.22.10.2012 ರಂದು ಬೆಳಿಗ್ಗೆ 10.15 ಗಂಟೆಗೆ ಅಂಗಡಿ ತೆರೆದು ನೋಡಲಾಗಿ ಯಾರೋ ಕಳ್ಳರು ಅಂಗಡಿಯ ಹಿಂದಿನ ಕಿಡಕಿ ತೆರೆದು ಶೊಕೇಶಗಳಲ್ಲಿ ಇಟ್ಟ 1,98,515/- ರೂ ಕ್ಕಿಮತ್ತಿನ ಸೆನಟರಿ ವೇರ (ಸಿ.ಪಿ ಭಾತ ರೂಂ ಫಿಟಿಂಗ್ಸ) ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.129/2012 ಕಲಂ.457,380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: