POLICE BHAVAN KALABURAGI

POLICE BHAVAN KALABURAGI

25 September 2012

GULBARGA DISTRICT REPORTED CRIME


ಕಾರ ಚಾಲಕನ ಮೇಲೆ ಪ್ರಕರಣ ದಾಖಲ ಮಾಡಿದ ಬಗ್ಗೆ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀಮತಿ ಎಸ್.ಎಸ್.ತೇಲಿ ಪಿ.ಎಸ್.. ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ ಗುಲಬರ್ಗಾರವರು ದಿನಾಂಕ 25-09-2012 ರಂದು ತಮ್ಮ ಸಿಬ್ಬಂದಿಯೊಂದಿಗೆ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಉದಯಗೀರಿ ಇಂಡಸ್ಟ್ರೀಜ್ ಎದುರುಗಡೆ ಕಾರ ನಂಬರ ಕೆಎ- 35  ಟಿಎಕ್ಸ- 7674 ನೇದ್ದರ ಚಾಲಕ ಶ್ರೀನಿವಾಸ ಇತನು ರೋಡಿನ ಮಧ್ಯದಲ್ಲಿ ಕಾರು ನಿಲ್ಲಿಸಿ ಹೋಗಿ ಬರುವ ವಾಹನಗಳಿಗೆ ಮತ್ತು  ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಠಾಣೆ ಗುನ್ನೆ ನಂ 98/2012 ಕಲಂ 283 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

24 September 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ. ನರಸಪ್ಪ ತಂದೆ ರಮೇಶ ಕೌರವ,ವಯ|| 24 ವರ್ಷ ಜಾ|| ಭೋವಿ ಸಾ|| ಗಾಜೀಪುರ ಗುಲಬರ್ಗಾ ರವರು  ನಾನು ಗಣೇಶ ಕಾರ್ಯಕ್ರಮದ ನೀಮಿತ್ಯ ರಾಜು ಶಹಾಬಜಾರ ಇವರ ಮೈಕ ಸೇಟ ಬಾಡಿಗೆಯಿಂದ ಹಚ್ಚಿರುತ್ತೆವೆ. ನಮ್ಮಂತೆ ಶ್ರೀ.ರಾಜು ಶಹಾಬಜಾರ ಇವರ ಮೈಕ್ ಸೇಟ್ ತಂದು ಮೆತಾರ ಬಡಾವಣೆಯ ಜನರು ಗಣೇಶ ಕಾರ್ಯಕ್ರಮದ ನೀಮಿತ್ಯ ಹಚ್ಚಿರುತ್ತಾರೆ. ದಿನಾಂಕ:23-09-2012 ರಂದು ನಮ್ಮ ಗಣೆಶ ಐದು ದಿವಸದ ಇರುವದರಿಂದ  ವಿಸರ್ಜನೆ ಕುರಿತು ಅಪ್ಪನ ಕೇರಿ ಗಾರ್ಡನ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದೆವು. ಮೆತಾರ ಬಡಾವಣೆಯ ಜನರು ಕೂಡಾ ಗಣೇಶ ವಿಸರ್ಜನೆ ಕುರಿತು ಅಪ್ಪನ ಕೇರಿ ಗಾರ್ಡನಕ್ಕೆ  ಬರುತ್ತಿದ್ದರು. ಮೇರವಣಿಗೆ ಕಾಲಕ್ಕೆ ನಮ್ಮ ಗಣೇಶ ಭಂಡಿಯ ಮೇಲೆ ಇದ್ದ  ಮೈಕ ಸೇಟ ಕೆಟ್ಟಿದ್ದರಿಂದ ನೋಡು  ಹೇಳುತ್ತಿದ್ದೆನು.ಅಷ್ಟರಲ್ಲಿ ಸಚೀನ ತಂದೆ ರತನಚಂದ, ವಿಕ್ಕಿ ತಂದೆ ರತನಚಂದ,ಮಾಖಡ, ಬಲ್ಲಾ,ಶ್ಯಾಮಲಾಲ್, ವಿಶಾಲ್ ಸಂದೀಪ್ ಮನೋಜ ಹಾಗು ಇತರರು ಸಾ||ಎಲ್ಲರೂ ಮೆತಾರಗಲ್ಲಿ ಇವರು ನನಗೆ ಅವಾಚ್ಯವಾಗಿ ಬೈದು ಕೈಯಿಂದ ಬಡಿಗೆಯಿಂದ ಹೋಡೆ ಬಡೆ ಮಾಡಿ ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 108/2012 ಕಲಂ:143, 147, 148, 323, 324, 504, 506, ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ ಲಕ್ಷ್ಮೀಬಾಯಿ ಗಂಡ ಶಿವರಾಯ ದೊಡ್ಡಮನಿ ಸಾ: ಅಂಬೇಡ್ಕರ ನಗರ ಶರಣಸಿರಸಗಿ ಗುಲಬರ್ಗಾ ರವರು ದಿನಾಂಕ: 23-09-2012 ರಂದು ಬೆಳಿಗ್ಗೆ 9-00 ಗಂಟೆಯ ಸಮಯಕ್ಕೆ ನಾನು ಮನೆಗೆ ತರಕಾರಿ ಖರೀದಿ ಮಾಡಿಕೊಂಡು ಹೋಗಲು ಎಮ್.ಎಸ್.ಕೆ ಮಿಲ್ ಹತ್ತಿರ ಕಣ್ಣಿ ಮಾರ್ಕೇಟಿಗೆ ಬಂದು ತರಕಾರಿ ಖರೀದಿಸುವಾಗ ನನ್ನ ಕೊರಳಲ್ಲಿಯ ಕರಿಮಣಿ ಸರ  ಹರಿದಿದ್ದು, ನಾನು ಉಟ್ಟುಕೊಂಡಿರುವ ಕುಪ್ಪಸದಲ್ಲಿ ಸಿಕ್ಕಿಕೊಂಡಿತ್ತು, ನಾನು ಹರಿದ ಸರದ ಕರಿಮಣಿಗಳು, ಎರಡು ಬಂಗಾರದ ತಾಳಿ, 12  ಬಂಗಾರದ ಪತ್ತಿ,8  ಬಂಗಾರದ ಗುಂಡುಗಳು 2  ಬಂಗಾರದ ಪಾದ,  2 ಹಾಗಲಕಾಯಿ ಹೀಗೆ ಒಂದು ತೊಲೆ  3 ಗ್ರಾಂ  ಬಂಗಾರದ ಸಾಮಾನುಗಳು ಇದ್ದು ಅವುಗಳನ್ನು ನಾನು ತಿಂಬುವ ಎಲೆ ಚೀಲದಲ್ಲಿ ಹಾಕಿ ಚೀಲವನ್ನು ಟೊಂಕಕ್ಕೆ ಕಟ್ಟಿಕೊಂಡು ಅದರಲ್ಲಿಯ ಹಾಕಿದ ಬಂಗಾರದ ತಾಳಿಯ ಸಾಮಾನುಗಳು ಒಂದು ತೊಲೆ 3 ಗ್ರಾಂ  24, 000/- ರೂ ಬೆಲೆ ಬಾಳುವದು ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:86/2012 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIME


ಯು.ಡಿ.ಅರ್. ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಲಲಿತಕುಮಾರ ತಂದೆ ಶ್ರೀರಾಮಪಾಲ ಶ್ರೀವಾತ್ಸವ ಸಾ|| ಜಗತ್ ಬಡಾವಣೆ ಗುಲಬರ್ಗಾ ರವರು ನಮ್ಮ ತಮ್ಮನಾದ ಪ್ರೇಮಕುಮಾರ ಇತನಿಗೆ ವಂದನಾ ಅನ್ನುವವಳೊಂದಿಗೆ ಮದುವೆ ಆಗಿದ್ದು ಮದುವೆ ಆದ ಕೆಲವೆ ದಿವಸಗಳಲ್ಲಿ ನಮ್ಮ ತಮ್ಮನ ಹೆಂಡತಿ ನಮ್ಮ ತಮ್ಮನಿಂದ ಡೈವರ್ಸ ಪಡೆದುಕೊಂಡು ಬೇರೆ ಮದುವೆ ಮಾಡಿಕೊಂಡು  ಹೋಗಿರುತ್ತಾಳೆ. ನಮ್ಮ ತಮ್ಮ ಪ್ರೇಮಕುಮಾರ ಇತನು ಜಗತ್ ಬಡಾವಣೆಯ ರಾಮರೆಡ್ಡಿ ಅಂಬುವರ ಮನೆಯಲ್ಲಿ ಒಬ್ಬರೆ ಬಾಡಗಿಯಿಂದ ವಾಸವಾಗಿರುತ್ತಾರೆ. ದಿನಾಂಕ:11-09-2012 ರಂದು ಬೆಳಿಗ್ಗೆ ನಮ್ಮ ತಮ್ಮನ ಮನೆಗೆ ಹೋಗಿ ನಾನು ಹಾಗು ನಮ್ಮ ಅಣ್ಣನ ಮಗ ಅಮೀತ ಇಬ್ಬರೂ ಕೂಡಿ ನಮ್ಮ ತಮ್ಮನಿಗೆ ಉಪಚಾರ ಕುರಿತು ವಾತ್ಸಲ್ಯಾ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿ ಆಗದೇ  ದಿನಾಂಕ:23-09-2012 ರಂದು ಬೆಳಿಗ್ಗೆ 9-00 ಗಂಟೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ನಮ್ಮ ತಮ್ಮನು ವಿಪರಿತ ಮದ್ಯ ಸೇವನೆ ಮಾಡಿ ಅನಾರೋಗ್ಯಕ್ಕೆ ಒಳಗಾಗಿ ಮೃತ್ತಪಟ್ಟಿದ್ದು ಯಾರ ಮೇಲೆ ಯಾವುದೇ ರೀತಿಯ ಸಂಶಯ ವಗೈರೆ ಇರುವದಿಲ್ಲ. ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ: 21-2012 ಕಲಂ 174  ಸಿ.ಆರ್.ಪಿ.ಸಿ .ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.