ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ. ನರಸಪ್ಪ ತಂದೆ ರಮೇಶ ಕೌರವ,ವಯ|| 24 ವರ್ಷ
ಜಾ|| ಭೋವಿ ಸಾ|| ಗಾಜೀಪುರ ಗುಲಬರ್ಗಾ ರವರು
ನಾನು ಗಣೇಶ ಕಾರ್ಯಕ್ರಮದ ನೀಮಿತ್ಯ ರಾಜು ಶಹಾಬಜಾರ ಇವರ ಮೈಕ ಸೇಟ ಬಾಡಿಗೆಯಿಂದ
ಹಚ್ಚಿರುತ್ತೆವೆ. ನಮ್ಮಂತೆ ಶ್ರೀ.ರಾಜು ಶಹಾಬಜಾರ ಇವರ ಮೈಕ್ ಸೇಟ್ ತಂದು ಮೆತಾರ ಬಡಾವಣೆಯ ಜನರು
ಗಣೇಶ ಕಾರ್ಯಕ್ರಮದ ನೀಮಿತ್ಯ ಹಚ್ಚಿರುತ್ತಾರೆ. ದಿನಾಂಕ:23-09-2012 ರಂದು ನಮ್ಮ ಗಣೆಶ ಐದು
ದಿವಸದ ಇರುವದರಿಂದ ವಿಸರ್ಜನೆ ಕುರಿತು ಅಪ್ಪನ ಕೇರಿ
ಗಾರ್ಡನ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದೆವು. ಮೆತಾರ ಬಡಾವಣೆಯ ಜನರು ಕೂಡಾ ಗಣೇಶ ವಿಸರ್ಜನೆ
ಕುರಿತು ಅಪ್ಪನ ಕೇರಿ ಗಾರ್ಡನಕ್ಕೆ
ಬರುತ್ತಿದ್ದರು. ಮೇರವಣಿಗೆ ಕಾಲಕ್ಕೆ ನಮ್ಮ ಗಣೇಶ ಭಂಡಿಯ ಮೇಲೆ ಇದ್ದ ಮೈಕ ಸೇಟ ಕೆಟ್ಟಿದ್ದರಿಂದ ನೋಡು ಹೇಳುತ್ತಿದ್ದೆನು.ಅಷ್ಟರಲ್ಲಿ ಸಚೀನ ತಂದೆ ರತನಚಂದ, ವಿಕ್ಕಿ ತಂದೆ ರತನಚಂದ,ಮಾಖಡ, ಬಲ್ಲಾ,ಶ್ಯಾಮಲಾಲ್, ವಿಶಾಲ್
ಸಂದೀಪ್ ಮನೋಜ ಹಾಗು ಇತರರು ಸಾ||ಎಲ್ಲರೂ
ಮೆತಾರಗಲ್ಲಿ ಇವರು ನನಗೆ ಅವಾಚ್ಯವಾಗಿ ಬೈದು ಕೈಯಿಂದ ಬಡಿಗೆಯಿಂದ ಹೋಡೆ ಬಡೆ ಮಾಡಿ ರಕ್ತಗಾಯ
ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 108/2012 ಕಲಂ:143, 147, 148, 323, 324, 504, 506, ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ
ಲಕ್ಷ್ಮೀಬಾಯಿ ಗಂಡ ಶಿವರಾಯ ದೊಡ್ಡಮನಿ ಸಾ: ಅಂಬೇಡ್ಕರ ನಗರ ಶರಣಸಿರಸಗಿ ಗುಲಬರ್ಗಾ ರವರು
ದಿನಾಂಕ: 23-09-2012 ರಂದು ಬೆಳಿಗ್ಗೆ 9-00 ಗಂಟೆಯ ಸಮಯಕ್ಕೆ ನಾನು ಮನೆಗೆ ತರಕಾರಿ ಖರೀದಿ
ಮಾಡಿಕೊಂಡು ಹೋಗಲು ಎಮ್.ಎಸ್.ಕೆ ಮಿಲ್ ಹತ್ತಿರ ಕಣ್ಣಿ ಮಾರ್ಕೇಟಿಗೆ ಬಂದು ತರಕಾರಿ ಖರೀದಿಸುವಾಗ
ನನ್ನ ಕೊರಳಲ್ಲಿಯ ಕರಿಮಣಿ ಸರ ಹರಿದಿದ್ದು, ನಾನು ಉಟ್ಟುಕೊಂಡಿರುವ ಕುಪ್ಪಸದಲ್ಲಿ
ಸಿಕ್ಕಿಕೊಂಡಿತ್ತು, ನಾನು ಹರಿದ ಸರದ
ಕರಿಮಣಿಗಳು, ಎರಡು ಬಂಗಾರದ
ತಾಳಿ, 12 ಬಂಗಾರದ
ಪತ್ತಿ,8 ಬಂಗಾರದ
ಗುಂಡುಗಳು 2 ಬಂಗಾರದ ಪಾದ, 2 ಹಾಗಲಕಾಯಿ ಹೀಗೆ ಒಂದು ತೊಲೆ 3
ಗ್ರಾಂ ಬಂಗಾರದ ಸಾಮಾನುಗಳು ಇದ್ದು ಅವುಗಳನ್ನು
ನಾನು ತಿಂಬುವ ಎಲೆ ಚೀಲದಲ್ಲಿ ಹಾಕಿ ಚೀಲವನ್ನು ಟೊಂಕಕ್ಕೆ ಕಟ್ಟಿಕೊಂಡು ಅದರಲ್ಲಿಯ ಹಾಕಿದ ಬಂಗಾರದ
ತಾಳಿಯ ಸಾಮಾನುಗಳು ಒಂದು ತೊಲೆ 3 ಗ್ರಾಂ 24,
000/- ರೂ ಬೆಲೆ ಬಾಳುವದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ
ಠಾಣೆ ಗುನ್ನೆ ನಂ:86/2012 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment