POLICE BHAVAN KALABURAGI

POLICE BHAVAN KALABURAGI

14 September 2012

GULBARGA DISTRICT REPORTED CRIMES


ಅಪಹರಣ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ  ಶಕುಂತಲಾ ಗಂಡ ಚಂದ್ರಕಾಂತ ಒಂಟಿ ಸಾ: ಶಾಂತಿ ನಗರ ಗುಲಬರ್ಗಾರವರು ನಮಗೆ 4 ಜನ ಮಕ್ಕಳಿದ್ದು  ಅವರಲ್ಲಿ  ಹಿರಿಯವಳಾದ ಅಶ್ವಿನಿ ಇವಳು ಹಿರಿಯ ಮಗಳಿದ್ದು ,ಸರಕಾರಿ ಮಹಿಳಾ ಕಾಲೇಜನಲ್ಲಿ  ದ್ವೀತಿಯ ಪಿ.ಯು.ಸಿ ಓದುತ್ತಿದ್ದಾಳೆ.  ಪ್ರತಿದಿನ ಕಾಲೇಜ ಮುಗಿಸಿಕೊಂಡು ಮನೆಗೆ ಬಂದು ಸಾಯಾಂಕಾಲ್ ಟೈಪಿಂಗ್ ಕ್ಲಾಸಿಗೆ  ಹೋಗುತ್ತಿದ್ದಳು, ದಿನಾಂಕ: 27.08.2012 ರಂದು ಕಾಲೇಜದಿಂದ ಮನೆಗೆ ಬಂದು  4.00 ಗಂಟೆಗೆ ಟೈಪಿಂಗ್ ಕ್ಲಾಸಿಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಮನೆಗೆ ಬರದೇ ಇದ್ದಾಗ ನಾವು ಗಾಬರಿಗೊಂಡು ಟೈಪಿಂಗ್ ಇನ್ಸಟ್ಯೂಟ ಹೋಗಿ ವಿಚಾರಿಸಲಾಗಿ ಈ ದಿನ ನಿಮ್ಮ ಮಗಳು ಅಶ್ವಿನಿ ಟೈಪಿಂಗ ಕ್ಲಾಸಿಗೆ ಬಂದಿರುವುದಿಲ್ಲಾ ಅಂತಾ ತಿಳಿಯಿತು. ಅಶ್ವಿನಿ ಗೆಳತಿಯರಾದ ಹೀನಾ ಮತ್ತು  ಸುಶ್ಮಾ ರವರಿಗೆ ವಿಚಾರಿಸಲಾಗಿ ನಿಮ್ಮ ಮಗಳು ವಿನೋದ ಸಿರನೂರ ಎಂಬುನೊಂದಿಗೆ ಹೋಗಿರುತ್ತಾಳೆ ಅಂತಾ ತಿಳಿಸಿದ್ದು, ವಿನೋದ ತಂದೆ ಗಿಡ್ಡಪ್ಪಾ ಅಟೋ ಚಾಲಕ ಸಾ|| ಸಿರನೂರ ಇತನು ನನ್ನ ಮಗಳಿಗೆ ಅಪಹರಿಸಿಕೊಂಡು ಹೋಗಿರುತ್ತಾನೆ ಆತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 68/2012  ಕಲಂ 366 (ಎ) ಐ.ಪಿ.ಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ, ಗೌರಮ್ಮ ಗಂಡ ಸಿದ್ದಣ್ಣ  ಸಾ: ಎಂ.ಐ.ಜಿ  ಕೆ.ಹೆಚ.ಬಿ ಕಾಲೋನಿ   ಪಿಲ್ಟರ್ ಬೇಡ  ಗುಲಬರ್ಗಾ ರವರು ದಿನಾಂಕ:05-09-1999 ರಂದು ಗೋಳಾ(ಬಿ) ಗ್ರಾಮದ ಸಿದ್ದಣ್ಣ ದಸ್ತಾಪೂರ ಇವರೊಂದಿಗೆ ಶಹಾಬಾದ ನಗರದಲ್ಲಿ ಮದುವೆ ಮಾಡಿಕೊಟ್ಟಿದ್ದು,  ಮದುವೆಯ ಕಾಲಕ್ಕೆ  51,000/-ನಗದು ಹಣ  ಮತ್ತು 15 ತೊಲೆ ಬಂಗಾರ ಕೊಟ್ಟು ಮದುವೆ ಮಾಡಿಕೊಟ್ಟಿದ್ದು  ಮದುವೆಯಾದ  ಕೇವಲ 8-10 ದಿವಸಗಳಲ್ಲಿ ಬಂಗಾರ ವರದಕ್ಷೀಣೆ ಕಡಿಮೆ ಕೊಟ್ಟಿರುತ್ತೀರಿ ಅಂತಾ ವಿನಾಃಕಾರಣ  ನನ್ನ ಗಂಡ ಸಿದ್ದಣ್ಣ ಅತ್ತೆ ನಾಗಮ್ಮ ಮಾವ ಬಸವಕಲ್ಯಾಣ ಇವರೆಲ್ಲರೂ ನನಗೆ ದೈಹಿಕ ಮಾನಸಿಕ ಕಿರುಕುಳ ಕೊಡಲು ಪ್ರಾರಂಭಿಸಿದರು. ಈ ಬಗ್ಗೆ ನಮ್ಮ ತಂದೆಗೆ ನನ್ನ ಅಣ್ಣ ಸಿದ್ದಲಿಂಗ ಇವರಿಗೆ ವಿಷಯ ತಿಳಿಸಿದ್ದು ಇವರು ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಅತ್ತೆ, ಮಾವ ಇವರಿಗೆ ಮದುವೆಯ ಕಾಲಕ್ಕೆ ಹಣ ಬಂಗಾರ ಕೊಟ್ಟಿರುತ್ತೇವೆ, ನನ್ನ ಮಗಳಿಗೆ ತೊಂದರೆ ಕೋಡಬೇಡಿರಿ ಅಂತಾ ಹೇಳಿ ಹೋಗಿದ್ದರು. ಸುಮಾರು 1 ವರ್ಷದ ಹಿಂದೆ ನನ್ನ ಗಂಡ ಅತ್ತೆ ಮತ್ತು ಮಾವ ಇವರೆಲ್ಲರೂ ನನ್ನ ಅಣ್ಣ ರೇವಣಸಿದ್ದಪ್ಪನ ಮಗನಾದ ಶಂಕರ ಇತನ ತೊಟ್ಟಿಲು ಕಾರ್ಯಕ್ರಮಕ್ಕೆ ತವರು ಮನೆಗೆ ಕಳುಹಿಸುವಾಗ  ನನಗೆ   ಇನ್ನು ಬಂಗಾರ ಮತ್ತು ಹಣ ತೆಗೆದುಕೊಂಡು ಬಾ ಅಂತಾ ಇಲ್ಲವಾದರೆ ನೀನು ವಾಪಸ ನಮ್ಮ ಮನೆಗೆ ಬರಬೇಡ ಅಂತಾ ಅಂದು ನಾವು ಕರೆಯಲು ಬರುವವರೆಗೆ ಬರಬೇಡ ಅಂತಾ ಹೇಳಿ ಹೆದರಿಸಿ ಕಳುಹಿಸಿರುತ್ತಾರೆ. ನಾನು ಒಂದು ವರ್ಷದಿಂದ ಕೆ,ಹೆಚ.ಬಿ ಕಾಲೋನಿಯ ನನ್ನ ತಂದೆಯ ಮನೆಯಲ್ಲಿ ವಾಸವಾಗಿರುತ್ತೇನೆ.ದಿನಾಂಕ:12-09-2012 ರಂದು ರಾತ್ರಿ 11-00 ನನ್ನ ಗಂಡ ಸಿದ್ದಣ್ಣ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದ್ದು ಮನೆಯಲ್ಲಿಯ ಸೋಫಾ ಸೆಟ ಮತ್ತು ಕಿಡಕಿ ಬಾಗಿಲುಗಳಿಗೆ ಕಲ್ಲಿನಿಂದ ಹೊಡೆದು ಮುರಿದು ಹಾಕಿ ಲುಕ್ಸಾನ  ಮಾಡಿರುತ್ತಾನೆ.  ಅಂತಾ  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ:67/2012 ಕಲಂ, 498 (ಎ) 323, 427, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಮಹ್ಮದ ಇಬ್ರಾಹೀಂ  ತಂದೆ ಮಹ್ಮದ ಯುಸುಫ್  ಉ: ಹಣ್ಣಿನ ವ್ಯಾಪಾರ ಸಾ: ಮುನಪ್ಪಾ ದಾಲ ಕಾರ್ಖಾನೆ ಹತ್ತಿರ ಮೊಮಿನಪೂರ  ಗುಲಬರ್ಗಾರವರು ನಾನು ದಿನಾಂಕ:10-09-2012  ರಂದು ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಹಣ್ಣಿನ ಬಂಡಿ ಒತ್ತಿಕೊಂಡು ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಜಗತ ಸರ್ಕಲ್ ಕಡೆಗೆ ಹೋಗುವಾಗ ಸಿದ್ದಿ ಪಾಷಾ ದರ್ಗಾದ ಹತ್ತಿರ ಮೋಟಾರ ಸೈಕಲ್ ನಂ: ಕೆಎ-33 ಹೆಚ್.2415 ನೇದ್ದರ ಸವಾರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು  ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 92/2012 ಕಲಂ 279, 337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

13 September 2012

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ: ಶ್ರೀ, ರಾಜಶೇಖರ ತಂದೆ ಛತ್ರಪ್ಪ ಪವಾಡಶೆಟ್ಟಿ ಉ|| ಲಾರಿ ಮಾಲಿಕ ಸಾ|| ಕಲ್ಯಾಣ ಗಡ್ಡಿ ಚಿಂಚೋಳಿ ರವರು ನಾನು ಬೀದರ ಜಿಲ್ಲೆಯ ಖಟಕ ಚಿಂಚೋಳಿಗೆ ದಿನಾಂಕ: 06-09-2012 ರಂದು ಹೋಗಿ ಪರ್ಸಿ ಕಲ್ಲುಗಳನ್ನು ಖಾಲಿ ಮಾಡಿಕೊಂಡು ಮಧ್ಯರಾತ್ರಿ 01-30 ಗಂಟೆಗೆ ಮರಳಿ ಚಿಂಚೋಳಿ ಪಟ್ಟಣಕ್ಕೆ ಬಂದು ಎಂದಿನಂತೆ ನನ್ನ ಅಶೋಕ ಲೇಲ್ಯಾಂಡ ಲಾರಿ ನಂ. ಕೆಎ.-32 ಬಿ.-2618 ನೇದ್ದನ್ನೂ ಚಿಂಚೋಳಿ ಪಟ್ಟಣದಲ್ಲಿರುವ (ಹಳೆಐ.ಬಿ.ಹತ್ತಿರವಿರುವ) ಭೋಗಾವತಿ ಪೆಟ್ರೋಲ್ ಬಂಕ ಎದುರುಗಡೆಯ ಚಿಂಚೋಳಿ – ಚಂದಾಪೂರ ರಸ್ತೆಯ ಬದಿಯಲ್ಲಿ ನಿಲ್ಲಿಸಿ ನಾನು ಮತ್ತು ಲಾರಿ ಚಾಲಕ  ನಾಗಮೂರ್ತಿ ಮನೆಗೆ ಹೋಗಿ ಮಲಗಿಕೊಂಡಿದ್ದು, ಅಂದೆ ದಿನಾಂಕ 06-09-2012 ರಂದು ಬೆಳಗ್ಗೆ 4-00 ಗಂಟೆ ಸುಮಾರಿಗೆ ನೋಡಲು ನಾವು ನಿಲ್ಲಿಸಿದ ಲಾರಿಯು ಆ ಜಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಲಾರಿಯ ಇಂಜಿನ ನಂ. ಸಿ.ಝೆಡ್.ಈ. 276350,ಮತ್ತು  ಚೆಸ್ಸಿಸ್ ನಂ. ಸಿ.ಜೆಡ್.ಈ. 387683 ಇರುತ್ತವೆ  ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.82/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

ಸರ್ಕಾರಿ ಬಸ್ಸಿನ ಗಾಜು ಓಡೆದ ಬಗ್ಗೆ:
ಕಾಳಗಿ ಪೊಲೀಸ್ ಠಾಣೆ: ಶ್ರೀ ಗುರುನಾಥ ತಂದೆ ಶಿವಣ್ಣ ಹಡಪದ ಎನ್.ಈ.ಕೆ.ಎಸ.ಆರ್.ಟಿ.ಸಿ ಬಸ್ಸ ಚಾಲಕ ಕಾಳಗಿ ಬಸ ಡಿಪೋ ರವರು ದಿನಾಂಕ: 13-09-2012 ರಂದು  1-00 ಪಿ.ಎಂ ಸುಮಾರಿಗೆ ಕೆಎ 32 ಎಫ್.1533 ನೇದ್ದನ್ನು  ಮಂಗಲಗಿಯಿಂದ ಸುಪರ ಮಾರ್ಕೆಟ ಗುಲಬರ್ಗಾಕ್ಕೆ ಚಲಾಯಿಸಿಕೊಂಡು ಬರುತ್ತಿರುವಾಗ ಮಾರ್ಗ ಮದ್ಯದ ಭರತನೂರ ಗ್ರಾಮದ ಹತ್ತಿರ ಅನೀಲ ಕುಮಾರ ತಂದೆ ನಾಗಿಂದ್ರಪ್ಪ ಬೆರ್ಜಿ ಸಾ: ಶ್ರೀನಿವಾಸ ಸರಡಗಿ ಬಸ್ಸ ಚಾಲಕ ಕಾಳಗಿ ಘಟಕ ಇತನು ಬಸ್ಸನ್ನು ತಡೆದು ನಿಲ್ಲಿಸಿ, ಇವತ್ತು ಯಾಕೇ ಬಸ್ಸು ಓಡುಸುತ್ತಿರಿ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ ಬಸ್ಸಿನ ಮುಂದಿನ ದೊಡ್ಡ ಗ್ಲಾಸಿಗೆ ಹೊಡೆದು ಅಂದಾಜು 10-12 ಸಾವಿರದಷ್ಟು ರೂಪಾಯಿಗಳಷ್ಟು ಹಾನಿ ಮಾಡಿದ್ದು, ಮತ್ತು ಚಿತ್ತಾಪೂರದಿಂದ ಕಾಳಗಿಗೆ ಬರುವ  ಬಸ್ಸ ನಂ ಕೆಎ 28 ಎಫ್-1613 ನೇದ್ದನ್ನು ಕೂಡ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಲ್ಲಿನಿಂದ ಬಸ್ಸಿನ ಮುಂದಿನ ಗ್ಲಾಸಿಗೆ ಹೊಡೆದು ಅದಕ್ಕೂ ಸಹ ಅಂದಾಜು 10-12 ಸಾವಿರದಷ್ಟು ಹಾನಿ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:71/2012 ಕಲಂ 341, 504, 283, 427 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. ಮತ್ತು  ಆರೋಪಿತ ಅನೀಲಕುಮಾರ ಇತನಿಗೆ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತಿದೆ.