POLICE BHAVAN KALABURAGI

POLICE BHAVAN KALABURAGI

29 July 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ನಿತೀಶ ತಂದೆ ಮನೋಹರ ಘಾಟೆ ಸಾ|| ಶಿವಲಿಂಗ ನಗರ ಅಳಂದ ರೋಡ ಗುಲಬರ್ಗಾ ರವರು ನನ್ನ ಹಿರೊ ಹೊಂಡಾ ಸ್ಪ್ಲೆಂಡರ್ ಮೊಟಾರ್ ಸೈಕಲ್ ನಂ. ಕೆಎ-32/ ಕ್ಯೂ-6283 ನೇದ್ದನ್ನು ದಿನಾಂಕ 13-07-2012 ರಂದು ರಾತ್ರಿ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿ ಮಲಗಿಕೊಂಡಿದ್ದು, ದಿನಾಂಕ 14-07-2012 ರಂದು ಬೆಳಿಗ್ಗೆ ಎದ್ದು ನೋಡಲು ಮನೆಯ ಮುಂದೆ ನಿಲ್ಲಿಸಿದ ಮೊಟಾರ್ ಸೈಕಲ್ ಇರಲಿಲ್ಲಾ. ಎಲ್ಲಾ ಕಡೆಗು ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಯಾರೋ ಅಪರಿಚಿತ ಕಳ್ಳರು ತನ್ನ ಮೊಟಾರ್ ಸೈಕಲ್ ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಂಡಬೇಕೆಂದು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 56/12 ಕಲಂ 379 ಐಪಿಸಿ ಪ್ರಕಾರ ಪ್ರಕರಣದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಕು|| ಈಶ್ವರಿ ತಂದೆ ಸಿದ್ದಣ್ಣಾ ಇಂದೂರ  ಸಾ||ತಾಡತೆಗನೂರ ಹಾ||ವ|| ಪ್ಲಾಟ ನಂ. 23 ಗೊದುತಾಯಿ ನಗರ ಗುಲಬರ್ಗಾ  ರವರು ನಾನು ದಿನಾಂಕ:28-07-2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ  ಊಟ ಮಾಡಿಕೊಂಡು  ಗೊದುತಾಯಿ ನಗರದ ಗುರುರಾಜ ಸ್ವಾಮಿ ರವರ ಮನೆಯ ಮುಂದೆ ಗೇಟ ಹತ್ತಿರ ವಾಕಿಂಗ ಮಾಡುತ್ತಿರುವಾಗ ಹಿಂದಿನಿಂದ ಯಾವನೊ ಒಬ್ಬ ಅಪರಿಚಿತ 20-22 ವಯಸ್ಸಿನ ಹುಡುಗ ಬಂದವನೇ  ಒಮ್ಮೇಲೆ  ಕೊರಳಲ್ಲಿ ಕೈ ಹಾಕಿ 5 ಗ್ರಾಂ ಬಂಗಾರದ ಪದಕವುಳ್ಳ ಚೈನನ್ನು  ಕಿತ್ತಿಕೊಂಡು  ಓಡಿ ಹೊಗಿ ಎಸ್‌.ಜಿ ಟೆಂಗಳಿ ಮನೆಯ ಹತ್ತಿರ ನಿಂತ್ತಿದ್ದ. ಒಬ್ಬ ಮೋಟರ ಸೈಕಲ ಸವಾರನ ಹಿಂದೆ ಕುಳಿತು ತಪ್ಪಿಸಿಕೊಂಡು ಹೊಗಿರುತ್ತಾನೆ. ಅವನ ಮುಖ ಚಹರೆ ನೊಡಿದರೇ ಗುರ್ತಿಸುತ್ತೆನೆ. 5 ಗ್ರಾಂ ಬಂಗಾರದ ಚೈನಿನ ಮೌಲ್ಯ  12,000/-ರೂಪಾಯಿ  ಇರಬಹುದು.  ಈ ಘಟನೆಯನ್ನು  ಮನೆ ಮಾಲಿಕ ಗುರುರಾಜ ಸ್ವಾಮಿಐ.ಜಿ ಕೆಂಭಾವಿಮಠ ರವರು ನೊಡಿರುತ್ತಾರೆ. ಕಾರಣ ನನ್ನ ಬಂಗಾರದ ಚೈನ ಕಸಿದುಕೊಂಡು ಹೊಗಿದ್ದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು. ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ.59/2012 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

28 July 2012

GULBARGA DIST REPORTED CRIME


ಸುಳ್ಳು ಜಾತಿ ಪತ್ರ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :ಶ್ರೀಮತಿ. ಜಯಶ್ರೀ ಗಂಡ ಮರುಳಾದ್ಯ ಕಿರಿಯ ಸಹಾಯಕಿ ಕೆ.ಎಸ್.ಆರ್.ಟಿ.ಸಿ ಗುಲಬರ್ಗಾ ಇವರು ಮೂಲತಃ ಲಿಂಗಾಯತ ಜಂಗಮ ಜಾತಿಯವಳಿದ್ದು, ದಿನಾಂಕ:23-12-1986 ರಂದು ಮಹಾನಗರ ಸಭೆ ಗುಲಬರ್ಗಾರವರಿಂದ ಪರಿಶಿಷ್ಟ ಜಾತಿಯ ಸುಳ್ಳು ಬೇಡ ಜಂಗಮ ಜಾತಿಯನ್ನು ಪಡೆದುಕೊಂಡು ಮೀಸಲಾತಿ ಅಡಿಯಲ್ಲಿ ಕೆ.ಎಸ್.ಆರ್.ಟಿ.ಸಿ ಗುಲಬರ್ಗಾ ವಿಭಾಗದಲ್ಲಿ  ಕಿರಿಯ ಸಹಾಯಕಿ ಹುದ್ದೆಯಲ್ಲಿ  ನೇಮಕಾತಿ ಹೊಂದಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದು, ಸದರಿಯವರ ವಿರುದ್ದ ಕಲಂ:198, 420, 465, 468, 471 ಐ.ಪಿ.ಸಿ. ಮತ್ತು ಕಲಂ:3 (1) (9) ಎಸ್.ಸಿ/ಎಸ್.ಟಿ. ಪಿ.ಎ. ಆಕ್ಟ್ 1989 ರ ಪ್ರಕಾರ ಶ್ರೀ ಹೆಚ್.ವೈ ತುರಾಯಿ ಪೊಲೀಸ ಉಪಾಧೀಕ್ಷರು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಗುಲಬರ್ಗಾ ರವರು ವರದಿ ಸಲ್ಲಿಸಿದ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 90/2012  ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಕಡತವನ್ನು ಮುಂದಿನ ತನಿಖೆಗಾಗಿ ಪಿರ್ಯಾದುದಾರರಿಗೆ ನೀಡಲಾಗಿದೆ. 

27 July 2012

GULBARGA DIST



ದೇವಲ ಗಾಣಗಾಪೂರ ಪೊಲೀಸ್ ರ ಕಾರ್ಯಚರಣೆ
 :: ಮೋಟಾರ ಸೈಕಲ ಕಳ್ಳರ ಬಂದನ  ::
 ಮಾನ್ಯ ಎಸ.ಪಿ ಸಾಹೇಬರಾದ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ, ರವರು, ಮಾನ್ಯ ಅಪರ್ ಎಸ.ಪಿ ರವರಾದ ಶ್ರೀ ಕಾಶೀನಾಥ ತಳಕೇರಿ, ಮಾನ್ಯ ಶ್ರೀ ಡಿ.ಎಸ.ಪಿ ಆಳಂದ ಎಸ.ಬಿ.ಸಾಂಬಾ, ಮತ್ತು ಸಿಪಿಐ ಅಫಜಲಪೂರ ರವರಾದ ಶ್ರೀ ರಾಜೇಂದ್ರ ರವರ ಮಾರ್ಗದರ್ಶನದ ಮೇರೆಗೆ ದೇವಲ ಗಾಣಗಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸ್ವತ್ತಿನ ಪ್ರಕರಣಗಳಲ್ಲಿಯ ಆರೋಪಿತರ ಮತ್ತು ಮಾಲು ಪತ್ತೆ ಕುರಿತು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ ಪಿ.,ಎಸ.ಐ. ಮಂಜುನಾಥ ಎಸ. ಕುಸಗಲ್  ಮತ್ತು ಸಿಬ್ಬಂದಿ ಜನರಾದ  ತಸ್ಲೀಮ್, ಪ್ರಕಾಶ, ಸಂಜಯ ಪಾಟೀಲ್, ಗುರುರಾಜ, ಶಾಂತವೀರ, ಮಲ್ಲಣ್ಣ, ಚಂದ್ರಕಾಂತ, ಎಂ.ಡಿ. ರಪೀಕ್ ರವರನೊಳ್ಳಗೊಂಡ ತಂಡವು ರಚಿಸಿದ್ದು,  ಅಪಜಲಪೂರ ತಾಲೂಕಿನ ಚೌಡಾಪೂರ ಗ್ರಾಮದ ಶ್ರೀ ದತ್ತಾ ಹೋಟೆಲ್ ಪಂಪ ಹತ್ತಿರ ದಿನಾಂಕ: 26-07-2012 ರಂದು ಸಾಯಂಕಾಲ 4-00 ಗಂಟೆಗೆ ಸುಮಾರಿಗೆ ಅಪಜಲಪೂರ ರೋಡಿನ ಕಡೆಯಿಂದ ಚೌಡಾಪೂರ ಕಡೆಗೆ ಒಬ್ಬರ ಹಿಂದೆ ಒಬ್ಬರು ಇಬ್ಬರು ಮೋಟಾರ ಸೈಕಲ ಸವಾರರು ಬರುತ್ತಿದ್ದ ನಮ್ಮನ್ನು ನೋಡಿ ತಮ್ಮ ಮೋಟಾರ ಸೈಕಲಗಳನ್ನು ತಿರುಗಿಸಿಕೊಂಡು ಓಡಿ ಹೋಗಲು ಯತ್ನಿಸುತ್ತಿದ್ದಾಗ ಅವರನ್ನು ಹಿಡಿದುಕೊಂಡು ವಿಚಾರಣೆ ಮಾಡಿದಾಗ ಅವರ ಹೆಸರು ಪ್ರವೀಣ ತಂದೆ ಆಶೋಕ ಪವಾರ ವ|| 30 ವರ್ಷ ಸಾ|| ಸೋಲಾಪೂರ, ಶ್ರೀಶೈಲ್ ತಂದೆ ಬಸಣ್ಣ ಜಮಾದಾರ ವ|| 30 ವರ್ಷ ಸಾ|| ಗಣೇಶ ನಗರ ಗುಲಬರ್ಗಾ ಅಂತಾ ತಿಳಿದು ಬಂದಿರುತ್ತದೆ. ಸದರಿಯವರು 11 ಮೋಟಾರ ಸೈಕಲಗಳು ಅಂದಾಜು ಕಿಮ್ಮತ್ತು 2,50,000/- ರೂಪಾಯಿಗಳದ್ದು ವಶಪಡಿಸಿಕೊಂಡಿರುತ್ತಾರೆ. ಮಾನ್ಯ ಎಸಪಿ ಸಾಹೇಬರು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ  ಅಧಿಕಾರಿ ಮತ್ತು ಸಿಬ್ಬಂದಿಯವರ ಪತ್ತೆ ಕಾರ್ಯ ಪ್ರಶಂಸಿರುತ್ತಾರೆ.