ಕಳ್ಳತನ
ಪ್ರಕರಣ:
ರಾಘವೇಂದ್ರ ನಗರ
ಪೊಲೀಸ್ ಠಾಣೆ: ಶ್ರೀ ನಿತೀಶ ತಂದೆ ಮನೋಹರ ಘಾಟೆ ಸಾ|| ಶಿವಲಿಂಗ ನಗರ ಅಳಂದ ರೋಡ ಗುಲಬರ್ಗಾ ರವರು ನನ್ನ ಹಿರೊ
ಹೊಂಡಾ ಸ್ಪ್ಲೆಂಡರ್ ಮೊಟಾರ್ ಸೈಕಲ್ ನಂ. ಕೆಎ-32/ ಕ್ಯೂ-6283 ನೇದ್ದನ್ನು ದಿನಾಂಕ 13-07-2012
ರಂದು ರಾತ್ರಿ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿ ಮಲಗಿಕೊಂಡಿದ್ದು, ದಿನಾಂಕ 14-07-2012 ರಂದು
ಬೆಳಿಗ್ಗೆ ಎದ್ದು ನೋಡಲು ಮನೆಯ ಮುಂದೆ ನಿಲ್ಲಿಸಿದ ಮೊಟಾರ್ ಸೈಕಲ್ ಇರಲಿಲ್ಲಾ. ಎಲ್ಲಾ ಕಡೆಗು
ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಯಾರೋ ಅಪರಿಚಿತ ಕಳ್ಳರು ತನ್ನ ಮೊಟಾರ್ ಸೈಕಲ್ ಕಳವು
ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಂಡಬೇಕೆಂದು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ
ಗುನ್ನೆ ನಂ 56/12 ಕಲಂ 379 ಐಪಿಸಿ ಪ್ರಕಾರ ಪ್ರಕರಣದಾಖಲು ಮಾಡಿಕೊಂಡು ತನಿಖೆ
ಕೈಕೊಳ್ಳಲಾಗಿದೆ.
ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಕು|| ಈಶ್ವರಿ ತಂದೆ
ಸಿದ್ದಣ್ಣಾ ಇಂದೂರ ಸಾ||ತಾಡತೆಗನೂರ
ಹಾ||ವ|| ಪ್ಲಾಟ ನಂ. 23 ಗೊದುತಾಯಿ ನಗರ ಗುಲಬರ್ಗಾ ರವರು ನಾನು ದಿನಾಂಕ:28-07-2012
ರಂದು ರಾತ್ರಿ 10-30 ಗಂಟೆ ಸುಮಾರಿಗೆ ಊಟ ಮಾಡಿಕೊಂಡು ಗೊದುತಾಯಿ ನಗರದ
ಗುರುರಾಜ ಸ್ವಾಮಿ ರವರ ಮನೆಯ ಮುಂದೆ ಗೇಟ ಹತ್ತಿರ ವಾಕಿಂಗ ಮಾಡುತ್ತಿರುವಾಗ ಹಿಂದಿನಿಂದ ಯಾವನೊ
ಒಬ್ಬ ಅಪರಿಚಿತ 20-22 ವಯಸ್ಸಿನ ಹುಡುಗ ಬಂದವನೇ ಒಮ್ಮೇಲೆ ಕೊರಳಲ್ಲಿ ಕೈ ಹಾಕಿ 5 ಗ್ರಾಂ ಬಂಗಾರದ
ಪದಕವುಳ್ಳ ಚೈನನ್ನು ಕಿತ್ತಿಕೊಂಡು ಓಡಿ ಹೊಗಿ ಎಸ್.ಜಿ ಟೆಂಗಳಿ
ಮನೆಯ ಹತ್ತಿರ ನಿಂತ್ತಿದ್ದ. ಒಬ್ಬ ಮೋಟರ ಸೈಕಲ ಸವಾರನ ಹಿಂದೆ ಕುಳಿತು ತಪ್ಪಿಸಿಕೊಂಡು
ಹೊಗಿರುತ್ತಾನೆ. ಅವನ ಮುಖ ಚಹರೆ ನೊಡಿದರೇ ಗುರ್ತಿಸುತ್ತೆನೆ. 5 ಗ್ರಾಂ ಬಂಗಾರದ
ಚೈನಿನ ಮೌಲ್ಯ 12,000/-ರೂಪಾಯಿ ಇರಬಹುದು. ಈ ಘಟನೆಯನ್ನು ಮನೆ ಮಾಲಿಕ ಗುರುರಾಜ
ಸ್ವಾಮಿ, ಐ.ಜಿ ಕೆಂಭಾವಿಮಠ
ರವರು ನೊಡಿರುತ್ತಾರೆ. ಕಾರಣ ನನ್ನ ಬಂಗಾರದ
ಚೈನ ಕಸಿದುಕೊಂಡು ಹೊಗಿದ್ದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು. ಅಂತಾ
ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.59/2012
ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment