POLICE BHAVAN KALABURAGI

POLICE BHAVAN KALABURAGI

28 April 2012

GULBARGA DIST REPORTED CRIMES


ಹಲ್ಲೆ ಪ್ರಕರಣ:


ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಮೊಹ್ಮದ ಇಕ್ಬಾಲ ತಂದೆ ಮೊಹ್ಮದ ಹುಸೇನ ತರನಳ್ಳಿ ಸಾ: ಟಿಪ್ಪುಸುಲ್ತಾನ ಚೌಕ  ರಾಮಾ ಮೊಹಲ್ಲಾ ಶಹಾಬಾದ ರವರು ದಿನಾಂಕ: 27-04-2012 ರಂದು ನಮ್ಮ ಮನೆಯ ಮುಂದೆ ಕುಳಿತಾಗ ಮುಕ್ತಾರ ಇನಾಮದಾರ ಸಂಗಡ ಮೂರು ಜನರು ಎಲ್ಲರೂ ಸಾ:ಮಜೀದ ಚೌಕ ಶಹಾಬಾದ ರವರು ವಿನಾಃಕಾರಣ ಜಗಳ ತೆಗೆದು, ಅವಾಚ್ಯವಾಗಿ ಬೈದು, ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರಾಜೇಂದ್ರ ತಂದೆ ಹಣಮಂತ ಮೋರೆ ಸಾ:ಪ್ಲಾಟ ನಂ 20/2 ನ್ಯೂ ಗಾಟಗೆ ಲೇಔಟ ಹತ್ತಿರ ಕ್ಯಾಂಬೆಲ ಶಾಲೆ  ಗುಲಬರ್ಗಾರವರು ನಾನು  ದಿನಾಂಕ:25/04/2012 ರಂದು 8.30 ಪಿಎಂ ಸುಮಾರಿಗೆ ಗುಲಬರ್ಗಾದಿಂದ ಇಂಡಿಕಾ ಕಾರ ನಂ.ಕೆಎ-32/ಬಿ5063 ನೇದ್ದನ್ನು ಚಲಾಯಿಸಿಕೊಂಡು ಶಹಾಬಾದಕ್ಕೆ ಬಂದು,ಖಾಸಗಿ ಕೆಲಸ ಮುಗಿಸಿಕೊಂಡು ಗುಲಬರ್ಗಾಕ್ಕೆ ಹೋಗುವಾಗ ಶಹಾಬಾದ ರೇಲ್ವೆ ಬ್ರೀಡ್ಜ ಹತ್ತಿರ ನನ್ನ ಎದುರಿಗೆ ಒಂದು ಲಾರಿ ಚಾಲಕನು ತನ್ನ ಲಾರಿಯ Focus ಲೈಟನ್ನು ಹಾಕಿದ್ದರಿಂದ ನಾನು ಕಾರನ್ನು ಒಮ್ಮೆಲೆ ಬ್ರೇಕ ಹಾಕಿದ್ದರಿಂದ  ನನ್ನ ಕಾರು ರೋಡಿನ ಕೆಳಗೆ ಇಳಿದಿದ್ದರಿಂದ ಕಾರು ಪೂರ್ತಿ ಜಖಂ ಆಗಿರುತ್ತದೆ, ನನಗೆ ಕೇವಲ ಬಲಗಾಲ ಮೊಳ ಕಾಲಿಗೆ ಒಳಪೆಟ್ಟಾಗಿರುತ್ತದೆ. ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 51/2012 ಕಲಂ 279, 337 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


27 April 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಶೇಖದಾವೂರ ತಂದೆ ಶೇಖರಾಜ ಮಹ್ಮದ ಸಾ:ಅಶೋಕನಗರ ಶಹಾಬಾದ ರವರು ನಾನು ದಿನಾಂಕ 26/4/2012 ರಂದು 6-30 ಗಂಟೆ ಸುಮಾರಿಗೆ ಹಸನ ಶೇಟ ಇವರ ಹೊಲದಲ್ಲಿ ಕ್ರೀಕೇಟ ಆಡಲು ನನ್ನ ತಮ್ಮ ಶೇಖ ಇಮಾಮ ಅಲ್ಲಿಗೆ ಹೊದಾಗ ಪಿರೋಜ ತಂದೆ ಹಾಜಿ, ಸಂ 5 ಜನರು ಕೂಡಿವಿನಾಃಕಾರಣ ಜಗಳ ತೆಗೆದಿರುತ್ತಾರೆ,  ನಾನು ಕೇಳಲು ಹೋದರೆ ಅವಾಚ್ಯವಾಗಿ ಬೈದು ಕಲ್ಲಿನಿಂದ ಮತ್ತು ಕೈಯಿಂದ ನನಗೆ ಎಡಗಣ್ಣಿನ ಮೇಲೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 48/2012 ಕಲಂ 147 323 324 504 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ದಶರಥ ತಂದೆ ಶರಣಪ್ಪಾ ಶೆಳ್ಳಗಿ  ಸಾಹರಳಯ್ಯಾ ಚೌಕಶಹಾಬಾದ ರವರು ದಿನಾಂಕ:17/04/2012 ರಂದು 6 ಪಿಎಮ್ ಕ್ಕೆ ತರನಳ್ಳಿ ಗ್ರಾಮದ ಶಂಕರ ನಾಟಿಕಾರ ಇವರ ಹೊಲದಲ್ಲಿ ಮಣ್ಣು ತೆಗೆಯುತ್ತಿದ್ದ  ಜೆ.ಸಿ.ಬಿನಂಕೆ.32/5665 ನೇದ್ದರ ಚಾಲಕನಿಗೆ ನಮ್ಮ ಖಣಿಯಲ್ಲಿಕಲ್ಲು ತೆಗೆಯುವ ಕೆಲಸವಿದ್ದ ಕಾರಣ ಜೆ.ಸಿ.ಬಿಚಾಲಕನಿಗೆ ಹೇಳಿ ಜೆ.ಸಿ.ಬಿ ಹಿಂದುಗಡೆ ನಿಂತಿರುವಾಗ,ಜೆ.ಸಿ.ಬಿಚಾಲಕನು ತನ್ನ ಜೆ.ಸಿ.ಬಿಯನ್ನು ನಿಷ್ಕಾಳಜಿತನಿಂದ  ಚಲಾಯಿಸಿ ಹಿಂದಕ್ಕೆ ತೆಗೆದುಕೊಳ್ಳುತ್ತಿರುವಾಗ ನನಗೆ ಡಿಕ್ಕಿ ಪಡಿಸಿಎಡಕಾಲಿಗೆ ಮೊಳಕಾಲ ಮೇಲೆ ತೊಡೆಗೆ ಬಾರಿ ಒಳಪೆಟ್ಟು ಪಡಿಸಿದ್ದು ಇರುತ್ತದೆದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 49/2012 ಕಲಂ; 279 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

26 April 2012

GULBARGA DIST REPORTED CRIME


ಮೋಟಾರ ಸೈಕಲ ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ ಮುಕುಂದಪ್ಪ ತಂದೆ ನಿರಂಜನ  ಸಾ|| ಶೇಖರೋಜಾ  ಶಹಾಬಜಾರ ಗುಲಬರ್ಗಾ ರವರು ನಾನು ದಿನಾಂಕ: 23/04/2012 ರಂದು ಸಾಯಂಕಾಲ 7-20 ಗಂಟೆಗೆ ವೀರಶೈವ ಕಲ್ಯಾಣ ಮಂಟಪ ಎದುರುಗಡೆ ಪಬ್ಲಿಕ ಗಾರ್ಡನದಲ್ಲಿ  ಕೆಎ 32 ಎಸ್ 2743 ದ್ವಿಚಕ್ರ ವಾಹನ ಹೊಂಡಾ ಶೈನ ||ಕಿ|| 20,443/- ನೇದ್ದನ್ನು ನಿಲ್ಲಿಸಿದ್ದು, ನಂತರ   ಮರಳಿ ಬಂದು ನೋಡಲು, ನಿಲ್ಲಿಸಿರುವ ಸ್ಥಳದಲ್ಲಿ  ವಾಹನವು ಇರುಲಿಲ್ಲ ನಾನು ಎಲ್ಲಾ ಕಡೆ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲ.ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ51/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.