POLICE BHAVAN KALABURAGI

POLICE BHAVAN KALABURAGI

03 December 2011

GULBARGA DIST REPORTED CRIMES

ಅಪಹರಣ ಪ್ರಕರಣ:

ಶಹಾಬಾದ ನಗರ ಠಾಣೆ: ಶ್ರೀ ರಾಜು ತಂದೆ ರೈಯಾತ ಚಾವರಿಯಾ ಸಾ:ಕೊಳಸಫೈಲ ಶಹಾಬಾದ ರವರು ನಾನು ನನ್ನ ಹೆಂಡತಿ ಮಕ್ಕಳು ದಿನಾಂಕ 13/11/11 ರಂದು ರಾತ್ರಿ 11-30 ಮಲಗಿಕೊಂಡೆವು ನಂತರ ರಾತ್ರಿ ಗಂಟೆ ಸುಮಾರಿಗೆ ನಿದ್ದೆಯಿಂದ ಎದ್ದು ನೋಡಲು ಮಗಳು ಜ್ಯೋತಿ ಇವಳು ಮನೆಯಲ್ಲಿ ಇರಲಿಲ್ಲಾ ನಾವು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ನಮ್ಮ ಮನೆ ಹತ್ತಿರ ಇರುವ ಅಬ್ರಾಹಿಂ ತಂದೆ ಪ್ಲೇಚರ ಇವನು ನನ್ನ ಮಗಳನ್ನು ತನ್ನ ತಾಯಿ, ಅಣ್ಣ, ಅಕ್ಕ ಇವರ ಪ್ರಚೋದನೆಯಿಂದ ನನ್ನ ಮಗಳಿಗೆ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 185/2011 ಕಲಂ 366 (ಎ) 109 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮೋಸ ವಂಚನೆ ಪ್ರಕರಣ:

ಆಳಂದ ಪೊಲೀಸ ಠಾಣೆ: ಆಳಂದ ಪಟ್ಟಣದ ಶ್ರೀರಾಮ ಮಾರ್ಕೆಟ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ 1 ರೂ ಗೆ 80 ರೂಪಾಯಿ ಗೆಲ್ಲಿರಿ ಮಟಕಾ ಚೀಟಿ ಬರೆಯಿಸಿರಿ ಅಂತಾ ಜನರಿಗೆ ಮೋಸ ಮಾಡುವ ಉದ್ದೇಶದಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದರಿಂದ ಪಿ.ಎಸ್.ಐ ಆಳಂದ ರವರು ಮತ್ತು ಠಾಣೆಯ ಸಿಬ್ಬಂದಿಯವರಾದ ಸಿದ್ದಾರಾಮ, ಶೇಖಮಹಿಬೂಬ, ಬಾಬು ಪಾಟೀಲ ರವರೊಂದಿಗೆ ದಾಳಿ ಮಾಡಿ ಆತನ ಹೆಸರು ಆನಂದ ತಂದೆ ಲಕ್ಷ್ಮಣ ಜಂಗಲೆ ಸಾ:ಬೀಮ ನಗರ ಆಳಂದ ಅಂತಾ ತಿಳಿಸಿದ್ದು ಆತನಿಂದ ನಗದು ಹಣ 380/, ಮಟಕಾ ಚೀಟಿಗಳು ಜಪ್ತಿ ಮಾಡಿಕೊಂಡು ಠಾಣೆ ಗುನ್ನೆ ನಂ: 281/2011 ಕಲಂ 420 ಐಪಿಸಿ ಮತ್ತು 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಜಾತಿ ನಿಂದನೆ ಪ್ರಕರಣ:

ವಾಡಿ ಪೊಲೀಸ ಠಾಣೆ : ಶ್ರೀ ಮಲ್ಲಪ್ಪ ತಂದೆ ಸಿದ್ದಪ್ಪ ಕದ್ಯಾಪೂರ ಸಾ| ಕನಗನಹಳ್ಳಿ ವರು ನನ್ನದು ಕನಗನಹಳ್ಳಿ ಸೀಮಾಂತರದಲ್ಲಿ 6 ಎಕರೆ ಹೊಲ ಇದ್ದು ಈ ವರ್ಷ ಹತ್ತಿ ಹಾಗು ಜೋಳ ಬಿತತ್ಇರುತ್ತೆನೆ .ದಿನಾಂಕ 02-12-2011 ರಂದು ಮುಂಜಾನೆ ನನ್ನ ಹೆಂಡತಿ ಲಕ್ಷ್ಮಿ ತಾಯಿ, ದೇವಕಿ, ತಂಗಿ ಸುನೀತ, ಸೊಸೆ ಪಾರ್ವತಿ, ಅತ್ತೆ ಹೂವಮ್ಮ, ಎಲ್ಲರು ಕೂಡಿ ಹತ್ತಿ ಬಿಡಿಸಲು ಹೊಲಕ್ಕೆ ಹೋದರು. ನಮ್ಮ ಹೊಲದ ಹತ್ತಿರ ಇರುವ ಮಹೆಬೂಬ ಅಲಿ ಡಂಗೆ, ಹುಸೇನ ಪಟೆಲ ಇವರ ಹೊಲ ಇದ್ದು ಅವರು ಸಹ ಹಳ್ಳದಿಂದ ತಮ್ಮ ಹೊಲಕ್ಕೆ ನಮ್ಮ ಹೊಲದಿಂದ ಪೈಪಲೈನ ಹಾಕಿದ್ದಾರೆ, ನಾನು ಸಾಯಂಕಾಲ 4-30 ಗಂಟೆ ಸುಮಾರಿಗೆ ಬಿಡಿಸಿದ ಹತ್ತಿಯ ಚೀಲಗಳು ತರಲು ಹೊಲಕ್ಕೆ ಹೋದೆನು. ಆಗ ನನ್ನ ಹೆಂಡತಿ ಮತ್ತು ತಾಯಿಯವರು ಮದ್ಯಾನ 12-00 ಗಂಟೆಯ ಸುಮಾರಿಗೆ ನಮಗೆ ನೀರಡಿಕೆ ಆಗಿದ್ದರಿಂದ ನಮ್ಮ ಹೊಲದಿಂದ ಹೋದ ಪೈಪಲೈನ ಸ್ವಲ್ಪ ಹೊಡೆದಿದ್ದು ಅಲ್ಲಿ ನೀರು ಹಿಡಿದು ಕುಡಿಯುತ್ತಿದ್ದೆವು. ಆಗ ಪಕ್ಕದ ಹೊಲದವರಾದ ಹುಸೇನ ಪಟೆಲ್ ತಂದೆ ಅಬ್ದುಲ ಪಟೆಲ್ ಮತ್ತು ಆತನ ಮಗ ಬಾಷಾ ಪಟೆಲ್ ಇಬ್ಬರು ಬಂದು ನಮಗೆ " ಏ ಪೈಪಲೈನದಲ್ಲಿಯ ನೀರು ಯಾಕೆ ಕುಡಿಯುತ್ತೀರಿ, ನಿಮ್ಮದು ಬಹಳ ಆಗಿದೆ ಅಂತ ಬೈದಿರುತ್ತಾರೆ ನಾನು ಯಾಕೆ ನಮ್ಮ ಹೆಣ್ಣು ಮಕ್ಕಳಿಗೆ ಬೈದಿದ್ದೀರಿ ಅಂತ ಕೇಳಿದರೆ ಹುಸೇನ ಪಟೆಲ್ ಮತ್ತು ಬಾಷಾ ಇವರು ಲೇ ಹೊಲೆಯ ಸುಳೆ ಮಗನೆ ನಿಮ್ಮದು ಬಹಳ ಆಗಿದೆ, ಅಂತ ಜಾತಿ ಎತ್ತಿ ಬೈದು, ಹುಸೇನ ಪಟೆಲ್ ಕೈಯಿಂದ ಹೊಡೆಯ ಹತ್ತಿದನು ಮತ್ತು ಬಾಷಾ ಕಲ್ಲಿನಿಂದ ಹೊಡೆದನು. ಆಗ ನಮ್ಮ ತಾಯಿ, ಹೆಂಡತಿ ಹಾಗು ಅಲ್ಲಿಯೇ ಇದ್ದ ರಾಯಪ್ಪ ಪೂಜಾರಿ, ಶಾಂತಪ್ಪ ಪ್ಯಾಟಿ ಇವರು ಬಿಡಿಸಿದರು. ನನ್ನ ಎಡಗಣ್ಣಿನ ಕೆಳಗೆ ರಕ್ತಗಾಯವಾಗಿ ರಕ್ತ ಬರಹತ್ತಿತು. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 227/2011 ಕಲಂ 323,324,504,ಸಂಗಡ 34 ಐಪಿಸಿ ಹಾಗು 3(1) (10) ಎಸ್.ಸಿ/ಎಸ.ಟಿ ಪಿ.ಎ ಕಾಯ್ದೆ 1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಶಹಾಬಾದ ನಗರ ಪೊಲಿಸ ಠಾಣೆ: ಶ್ರೀ ಶಿವಕುಮಾರ ತಂದೆ ಶಾಮರಾವ ಕೂಕನೂರ ವ: 26 ವರ್ಷ ಜಾ: ಲಿಂಗಾಯ ಗಾಣಿಗೇರ ಉ:ಸುವರ್ಣ ನ್ಯೂಜ್ ಚಾನೆಯಲ್ಲಿ ಕೆಲಸ ಸಾ: ತೊನಸಳ್ಳಿ [ಎಸ್] ರವರು ನಾನು ದಿನಾಂಕ:02/12/2011 ರಂದು ರಾತ್ರಿ ಊಟ ಮಾಡಿ ಮನಯಲ್ಲಿ ಮಲಗಿದಾಗ ರಾತ್ರಿ 10 ಗಂಟೆ ಸುಮಾರಿಗೆ ಮದರಕಿ ಈರಣ್ಣಾ ಪೂಜಾರಿ ಇವರ ಅಂಗಡಿಯ ಮುಂದೆ ರೋಡಿನ ಮೇಲೆ ನನ್ನ ತಂದೆಯಾದ ಶಾಮರಾವ ಇವರೊಂದಿಗೆ ಸಿದ್ದಣ್ಣಾ ಬೇಲೂರ ಪೂಜಾರಿ ಮತ್ತು ಇತರರು ಕೂಡಿ ಹೊಡೆದು ಅವಾಚ್ಯವಾಗಿ ಬೈದು ನಾನು ಮದ್ಯ ಬಿಡಿಸಲು ಹೊದಾಗ ನನ್ನ ಮೂಗಿನ ಮೇಲೆ ರಕ್ತಗಾಯ ಆಗಿ ಎಡ ಗಣ್ಣಿಗೆ ಪೆಟ್ಟಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 186/2011 ಕಲಂ 147, 323, 324, 504, ಸಂ;149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ನಿಂಬರ್ಗಾ ಠಾಣೆ: ಶ್ರೀಮತಿ ಲಲಿತಭಾಯಿ ಗಂಡ ಸುರೇಶ ರಾಠೋಡ ಸಾ|| ನಿಂಬರ್ಗಾ ತಾಂಡ ರವರು ನನ್ನ ಮಗನಾದ ಸುನೀಲ ರಾಠೋಡ ವ|| 15 ವರ್ಷ, || ವಿಧ್ಯಾರ್ಥಿ ಸಾ|| ನಿಂಬರ್ಗಾ ತಾಂಡಾ ಇವನು ಶಾಲೆಯಿಂದ ಊಟಕ್ಕೆ ಬಿಟ್ಟಾಗ ಹಾಸ್ಟೇನದಲ್ಲಿ ಊಟ ಮಾಡಿಕೊಂಡು ಭಟ್ಟರಗಾ ದರ್ಗಾಕ್ಕೆ ಹೋಗಿ ಬರಲು ತನ್ನ ಸೈಕಲ ಮೇಲೆ ನಿಂಬರ್ಗಾದಿಂದ ಭಟರ್ಗಾಕ್ಕೆ ಹೊರಟಾಗ ನಿಂಬರ್ಗಾ ಧಾಬಾದ ಹತ್ತಿರ ಭಟರ್ಗಾ ಕಡೆಯಿಂದ ಒಂದು ಜೀಪ ನಂ. ಎಮ.ಹೆಚ್ 17, 660 ನೇದ್ದರ ಚಾಲಕ ಸಂಪತ ತಂದೆ ಮಧುಕರ ಪಾಟೀಲ ಸಾ|| ಜವಳಿ, ತಾ|| ಉಮ್ಮರ್ಗಾ ಈತನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸುನೀಲ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅವನ ಹೊಟ್ಟೆಗೆ ಬಲವಾದ ಗುಪ್ತ ಪೆಟ್ಟು, ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿದ್ದು, ಬಲಗೈ ಹಸ್ತದ ಹತ್ತಿರ ರಕ್ತಗಾಯ, ಬಲ ಕಟ್ಟಿಗೆ ಗುಪ್ತ ಪೆಟ್ಟು ,ಬಲಗಾಲು ತೊಡೆಗೆ ತರಚಿದ ಗಾಯ, ಗದ್ದಕ್ಕೆ ತರಚಿದ ಗಾಳಗಳಾಗಿದ್ದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಅಂತ ದೂರು ಸಲ್ಲಿಸಿದಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 124/2011 ಕಲಂ 279, 337, 338 ಐಪಿಸಿ ಮತ್ತು 187 ಐ,ಎಮ.ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಸುನಂದಾ ಗಂಕಾಶೀರಾಯ ಸುಲ್ತಾನಪೂರ ಸಾ: ಜಗತ ಗುಲಬರ್ಗಾ ರವರು ದಿನಾಂಕ 28/11/11 ರಂದು 10 ಮುಂಜಾನೆ ನಮ್ಮ ಪಾಲಕಾರನು ಹೊಲಕ್ಕೆ ಹೋದಾಗ ನಮ್ಮ ಬಾಜು ಹೊಲದವರಾದ ರಾಜಶೇಖರ, ಚಂದ್ರಕಾಂತ, ಶಿವಲಿಂಗಪ್ಪ ಹಾಗೂ ರಾಮಚಂದ್ರ ಇವರು ನಮ್ಮ ಹೊಲದಲ್ಲಿಯ ರಾಶಿಗೆ ಬಂದಿ ತೋಗರಿ ಬೆಳೆ ಅಂದಾಜು 15-20 ಚೀಲ ಆಗುವಷ್ಟು ಅದರ ಅಂದಾಜು ಕಿಮ್ಮತ್ತು 45000/- ಆಗುತ್ತಿದ್ದನು ಕೋಯ್ದು ಕೊಂಡು ಕಳವು ಮಾಡಿಕೊಂಡು ಹೋಗಿತ್ತಿರುವದನ್ನು ನೋಡಿ ಗುಲಬರ್ಗಾದ ನಮ್ಮ ಮನೆಗೆ ಬಂದು ತಿಳಿಸಿರುತ್ತಾನೆ ನಾವು ಹೋಲಕ್ಕೆ ಹೋಗಿ ನೋಡಲು ಹೊಲದಲ್ಲಿ ತೋಗರಿ ಬೆಳೆ ಕಳವು ಮಾಡಿಕೊಂಡು ಹೋಗಿದ್ದು ನಿಜವಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 361/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

02 December 2011

GULBARGA DIST REPORTED CRIME

ಯಡ್ರಾಮಿ ಪೊಲೀಸ್ ಠಾಣೆ : ನಾನು ಶ್ರೀಮತಿ ಸಾವಿತ್ರಿ ಗಂಡ ದಿ: ಮಂಜುನಾಥಸ್ವಾಮಿ ಹೀರೆಮಠ ವಯ; 35 ವರ್ಷ ಜಾ: ಜಂಗಮ ಉ: ಕೂಲಿ ಕೆಲಸ ಸಾ: ಅರಳಗುಂಡಗಿ ರವರು ನನ್ನ ಗಂಡ ಸುಮಾರು 2 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತ ಹೊಂದಿರುತ್ತಾನೆ ನನಗೆ 4 ಜನ ಮಕ್ಕಳಿದ್ದು ಅದರಲ್ಲಿ 2 ಗಂಡು ಮತ್ತು 2 ಹೆಣ್ಣು ಮಕ್ಕಳು ಇರುತ್ತಾರೆ 4 ಜನ ಮಕ್ಕಳ ಪೈಕಿ ಮೊದಲನೆಯವಳು ಬಾನುಪ್ರಿಯಾ ಅಂತಾ ಇರುತ್ತಾಳೆ ಇವಳು ಹತ್ತನೆಯ ಓದಿ ಮನೆಯಲ್ಲಿ ಇರುತ್ತಾಳೆ ಅವಳಿಗೆ ವಯ: 17 ವರ್ಷ ಇರುತ್ತದೆ ನಮ್ಮ ಓಣಿಯಲ್ಲಿ ಸಂತೋಷ ತಂದೆ ಸಂಗಣ್ಣ ಪತ್ತಾರ ಅಂತಾ ಪಂಚಾಳ ಪೈಕಿಯ ಹುಡಗನಿದ್ದು ಅವನು ಆಗಾಗ ನಮ್ಮ ಮನೆಗೆ ಬಂದು ನಮ್ಮ ಸಂಗಡ ಮನೆಯಲ್ಲಿ ಸಲಿಗೆಯಿಂದ ಮಾತನಾಡುತ್ತಾ ಇದ್ದನು ದಿನಾಂಕ 25-11-11 ರಂದು ನಾನು ಮತ್ತು ನನ್ನ ಮಗಳು ಬಾನುಪ್ರೀಯಾ, ಲಕ್ಷ್ಮಿ, ಮಗ ಸಂತೋಷ ಹಾಗೂ ನನ್ನ ಅಕ್ಕನ ಮಗ ಸಪ್ಪಯ್ಯ ನಾವೆಲ್ಲರೂ ಮನೆಯಲ್ಲಿ ಇದ್ದಾಗ ಸಾಯಂಕಾಲ 6 ಗಂಟೆ ಸುಮಾರಿಗೆ ನನ್ನ ಮಗಳು ಬಾನುಪ್ರಿಯಾ ಇವಳು ಮನೆಯ ಹೋರೆಗೆ ಕಟ್ಟೆಯ ಮೇಲೆ ಕುಳಿತುಕೊಂಡಾಗ ಸಂತೋಷ ಇತನು ಬಂದು ಭಾನುಪ್ರೀಯಾ ಜೋತೆಗೆ ಮಾತನಾಡಿ ನನ್ನ ಸಂಗಡ ಬಾ ಅಂತಾ ಪುಸಲಾಯಿಸಿ ಜಬರ ದಸ್ತಿಯಿಂದ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಳ್ಳುತ್ತಿದ್ದಾಗ ನಾವು ಹೋರಗೆ ಬಂದು ನೋಡಲು ಸಂತೋಷನು ಇತನು ಬಾನುಪ್ರಿಯಾ ಇವಳನ್ನು ಮೋಟಾರ ಸೈಕಲ್ ಕೆಎ 32 ಎಕ್ಸ-6196 ನೇದ್ದರ ಮೇಲೆ ಕೂಡಿಸಿಕೊಂಡು ಹೋಗಿರುತ್ತಾನೆ ನಾವು ಆ ದಿನದಿಂದ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಬಾನುಪ್ರಿಯಾ ಇವಳನ್ನು ಪುಸಲಾಯಿಸಿ ಜಬರ ದಸ್ತಿಯಿಂದ ಮೋಟಾರ ಸೈಕಲ್ ಮೇಲೆ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 90/2011 ಕಲಂ 366 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

01 December 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ಕಮಲಾಪೂರ ಪೊಲೀಸ ಠಾಣೆ: ಶ್ರೀ. ಬಸಯ್ಯ ತಂದೆ ಚನ್ನಯ್ಯ ಮಠಪತಿ ವ: 28 ವರ್ಷ ಜಾ;ಜಂಗಮ ಉ: ಕ್ರೂಜರ್ ಜೀಪ್ ಚಾಲಕ ಸಾ||ಬಾಚನಾಳ ತಾ||ಜಿ||ಗುಲಬರ್ಗಾ ರವರು ದಿನಾಂಕ; 30/11/2011 ರಂದು ಮಧ್ಯಾಹ್ನ 2-00 ಗಂಟೆಗೆ ತಾನು ಮತ್ತು ತನ್ನ ಸ್ನೇಹಿತನಾದ ವೀರಪ್ಪ ತಂದೆ ಸಿದ್ದಣ್ಣ ಅವಟಗಿ ಸಾ; ಬಾಚನಾಳ ರವರನ್ನು ಕೂಡಿಕೊಂಡು ನಮ್ಮ ಕ್ರೂಜರ್ ಜೀಪಿನಲ್ಲಿ ಚಂದನಕೇರಾ ಗ್ರಾಮಕ್ಕೆ ಗ್ರಾಮ ಪಂಚಾಯತ ಕಟ್ಟಡ ಉದ್ಘಾಟನೆ ಪ್ರಯುಕ್ತ ಹೋಗಿದ್ದು, ಮರಳಿ ರಾತ್ರಿ 8-00 ಗಂಟೆ ಸುಮಾರಿಗೆ ಮನೆಗೆ ಬಂದಿರುತ್ತೇವೆ. ನನ್ನ ಹೆಂಡತಿ ಕಾವೇರಿ ಇವಳು ಈಗ ಸುಮಾರು 3 ದಿವಸಗಳ ಹಿಂದೆ ತನ್ನ ತವರು ಮನೆಯಾದ ಗುಲಬರ್ಗಾಕ್ಕೆ ಹೋಗಿದ್ದು, ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಇಂದುಮತಿ ಇಬ್ಬರೇ ಇದ್ದು, ರಾತ್ರಿ 9-00 ಗಂಟೆ ಸುಮಾರಿಗೆ ಊಟ ಮಾಡಿರುತ್ತೇವೆ. ನಮ್ಮ ಮನೆಯಲ್ಲಿ ಒಟ್ಟು ಮೂರು ಕೋಣೆಗಳಿದ್ದು, ಎರಡೂ ಕೋಣೆಗಳು ಒಂದರಲ್ಲಿ ಒಂದು ಇದ್ದು, ಇನ್ನೊಂದು ಕೋಣೆ (ಹಾಲ್ ) ಬೇರೆಯಾಗಿ ಇರುತ್ತದೆ. ನನ್ನ ತಾಯಿ ಇಂದುಮತಿ ಇವರು ಎರಡು ಕೋಣೆಗಳ ಮನೆಯಲ್ಲಿ ಮಲಗಿ ಕೊಂಡಿದ್ದು ಇರುತ್ತದೆ. ನಾನು ನಮ್ಮ ಮನೆಯ ಹಾಲಿನ ಕೋಣೆ ಬಾಗಿಲಿಗೆ ಕೀಲಿ ಹಾಕಿಕೊಂಡು ಹೋಗಿ ಕ್ರೂಜರ್ ಜೀಪಿನಲ್ಲಿ ಮಲಗಿಕೊಂಡಿರುತ್ತೇನೆ. ಹೀಗಿದ್ದು ರಾತ್ರಿ 11-45 ಗಂಟೆ ಸುಮಾರಿಗೆ ನಮ್ಮ ತಾಯಿ ಗಾಬರಿಗೊಂಡ ಚಿರಾಡುವ ಸಪ್ಪಳ ಕೇಳಿ ನಾನು ಕ್ರೂಜರ್ ಜೀಪಿನಿಂದ ಎದ್ದು ಹೋಗಿ ನೋಡಲಾಗಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಹಾಲಿನಲ್ಲಿಟ್ಟಿದ್ದ ಅಲಮೇರಾದ ಬೀಗ ಮುರಿದು ಅದರಲ್ಲಿದ್ದ ಎರಡೂವರೆ ತೊಲೆ ಬಂಗಾರದ ಆಭರಣಗಳು, ನಗದು ಹಣ 6000/- ರೂಪಾಯಿ ಎಂಟು ಸೀರೆಗಳು ಹೀಗೆ ಒಟ್ಟು 45000/- ರೂಪಾಯಿ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 149/2011 ಕಲಂ 457. 380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಬೆದರಿಕೆ ಕರೆ :

ಶಹಾಬಾದ ನಗರ ಠಾಣೆ: ದಿನಾಂಕ 29/11/11 ರಂದು ರಾತ್ರಿ 10-31 ಮೊಬಾಯಿಲ್ ನಂ: 9972147983 ನೇದ್ದರಿಂದ ಪೋನ್ ಮಾಡಿ ನಾನು ರಾಜು ತಂದೆ ಗಿರಿಮಲ್ಲಪ್ಪಾ ಹುಗ್ಗಿ ಇತನು ನನ್ನ ಮೋಬೈಲ ನಂ 9739880440 ನೇದ್ದಕ್ಕೆ ಕಾಲ ಮಾಡಿ ನಿನ್ನದ್ದು ಬಹಳಷ್ಟು ನಡೆದಿದೆ ದಮ್ಮು ಇದ್ದರೇ ಹೆಂಡತ್ತಿ ತಾಳೆ ತೆಗೆದುಬಾ ನನ್ನ ಹತ್ತಿರ ತಲವಾರ ಇವೆ. ನಿನಗೆ ಖಲಾಸ ಮಾಡತ್ತಿನಿ ಬಾ ಅಂತಾ ರಾತ್ರಿ ವೇಳೆಯಲ್ಲಿ ಪೋನನಲ್ಲಿ ಮಾತಾಡಿರುತ್ತಾನೆ ಮತ್ತು ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 184/11 ಕಲಂ 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಆಬ್ದುಲ್ ಅಲೀಮ ತಂದೆ ಶೇಖ ಗುಡು ಸಾ; ಮನೆ ನಂ: 11-47 ಅಂಬಾ ಭವಾನಿ ಗುಡಿ ಹಿಂದುಗಡೆ ಲಾಲಗೇರಿ ಗುಲಬರ್ಗಾ ರವರು ನಾನು ನಗರದ ಪಟೇಲ್ ಸರ್ಕಲದಿಂದ ಮಿನಿ ವಿಧಾನ ಸೌದ ಮುಖ್ಯ ದ್ವಾರದ ರೋಡಿನ ಹತ್ತಿರ ನಿಂತಾಗ ಅಟೋ ನಂ: ಕೆಎ 32 ಬಿ 1224 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಟೋರೀಕ್ಷಾ ಪಲ್ಟಿ ಆಗಿದ್ದು ಆತನ ಮೈ ಮೇಲೆ ಅಟೊರಿಕ್ಷಾ ಬಿದ್ದು ನನಗೆ ತಾನು ಅಟೋ ಚಾಲಕನಿಗೆ ಗಾಯಗಳಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 155/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ರಾಘವೇಂದ್ರ ನಗರ ಠಾಣೆ : ನಾನು ಶರಣು ತಂದೆ ಭೀಮಶ್ಯಾ ಕೊಲ್ಲೂರ ದಿನಾಂಕ 30-11-2011 ರಂದು ರಾತ್ರಿ ಗಂಗಾ ನಗರ ಕ್ರಾಸ್ ನಲ್ಲಿ ಅಟೋ ನಿಲ್ಲಿಸಿದ್ದು ನನ್ನ ಹತ್ತಿರ ಅಶೋಕ ತಂದೆ ಈರಣ್ಣ ಕೂಡಿ ಹಾಗು ಅವನ ಗೆಳೆಯ ರವಿ ತಂದೆ ಗುಂಡಪ್ಪ ಕೂಡಿ ಇಬ್ಬರು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 95/11 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಗೃಹ ಬಳಕೆಯ ಸಿಲೆಂಡರಗಳು ಹಾಗು ಯಂತ್ರೋಪಕರಣಗಳು ಜಪ್ತಿ:

ರಾಘವೇಂದ್ರ ನಗರ ಠಾಣೆ :ಶ್ರೀ ಆರ್. ವಿ. ಸಾವಳಗಿ ಪಿ.ಐ. ಆರ್.ಸಿ.ಐ.ಬಿ. ಸಿಐಡಿ ಗುಲಬರ್ಗಾ ಹಾಗು ಸಿಬ್ಬಂದಿ ವರ್ಗದವರು ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಆರ್ ನಗರ ಬಡಾವಣೆಯಲ್ಲಿ ಗ್ರಹ ಬಳಕೆಯ ಅನಿಲ ಸಿಲೆಂಡರಗಳಿಂದ ಅನಿಲ ತೆಗೆದು ಅಟೋಗಳಿಗೆ ಅಳವಡಿಸಿದ ಸಿಲೆಂಡರಕ್ಕೆ ಯಂತ್ರಗಳ ಸಹಾಯದಿಂದ ಅನಿಲ ತುಂಬುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡು, ದಾಳಿ ನಡೆಸಿದ್ದು, ದಾಳಿ ಕಾಲಕ್ಕೆ ಪ್ರಕಾಶ ತಂದೆ ಪ್ರವೀಣಸಿಂಗ್ ರಜಪೂತ ವ || 24 ಸಾ|| ಜೆ.ಆರ್. ನಗರ ಗುಲಬರ್ಗಾ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಆತನಿಂದ ಎರಡು ಹೆಚ್. ಪಿ. ಸಿಲೆಂಡರಗಳು, ಒಂದು ಸಣ್ಣ ಗಾತ್ರದ ಖಾಲಿ ಸಿಲೆಂಡರ್, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ, 1 ಹೆಚ್.ಪಿ ಎಲೆಟ್ರೀಕಲ್ ಮೋಟಾರ್, 1 ನೊಕಿಯಾ ಕಂಪನಿ ಎನ್.73 ಮೊಬಾಯಲ್,ನಗದು ಹಣ 3500=00 ರೂ.ಗಳು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ 96/11 ಕಲಂ 3 L.P.G. RESTRICTION ON USE ORDER 1974 R/W 3 & 7 E.C. ACT ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಾಣೆಯಾದ ಪ್ರಕರಣ:

ಅಶೋಕ ನಗರ ಠಾಣೆ : ಶ್ರೀ ಬಸವರೆಡ್ಡಿ ತಂದೆ ಶರಣರೆಡ್ಡಿ ಮಾಲಿ ಪಾಟೀಲ ಸಾ: ಮನೆ ನಂ. 1-1495/59/1, ಗೊದುತಾಯಿ ನಗರ ಗುಲಬರ್ಗಾ ವರುನನ್ನ ಮಗನಾದ ಶಿವರಾಜ ಇತನು ವಯಸ್ಸು 25 ವರ್ಷ ಇತನು ಎಸ್‌.ಬಿ ವಿಜ್ಞಾನ ಮಹಾವಿದ್ಯಾಲಯ ಗುಲಬರ್ಗಾ ದಲ್ಲಿ ಬಿಎಸ್‌ಸಿ 4ನೇ ಸೇಮ ಒದುತ್ತಿದ್ದು 4ನೇ ಸೇಮನಲ್ಲಿ ಅನುತಿರ್ಣನಾಗಿದ್ದರಿಂದ ಸುಮಾರು ದಿನಗಳಿಂದ ಮಾನಸಿಕವಾಗಿ ನೊಂದಿದ್ದು ದಿನಾಂಕ 18/08/2011 ರಂದು ಮನೆ ಬಿಟ್ಟು ಹೊದವನು ತಿರುಗಿ ವಾಪಸ ಮನೆಗೆ ಬಂದಿರುವುದಿಲ್ಲಾ. ನಾವು ನಮ್ಮ ಸಂಬಂಧಿಕರಿಗೆ ಮತ್ತು ನಮ್ಮ ಪರಿಚಯಸ್ಥರ ಮನೆಗಳಿಗೆ ಎಲ್ಲೂ ವಿಚಾರಿಸಿದರು ಇದುವರೆಗೂ ಅವನ ಸುಳಿವು ಸಿಕ್ಕಿರುವುದಿಲ್ಲಾ ಆತನ ಚಹರೆ ಪಟ್ಟಿ ಸಾಧರಣ ಮೈಕಟ್ಟು, ಗೋದಿ ಬಣ್ಣದ ದುಂಡು ಮುಖ ಉದ್ದನೇಯ ಮುಗು ಹೊಂದಿದ್ದು, ನೀಲಿ ಬಣ್ಣದ ಟೀ-ಶರ್ಟ ಮತ್ತು ಜೀನ್ಸ ಪ್ಯಾಂಟ ಹಾಕಿಕೊಂಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ. 129/2011 ಕಲಂ ಹುಡುಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.