POLICE BHAVAN KALABURAGI

POLICE BHAVAN KALABURAGI

24 May 2011

GULBARGA DISTRICT REPORTED CRIMES

ಕೊಲೆ ಪ್ರಕರಣ ;
ಅಫಜಲಪೂರ ಠಾಣೆ ;ಶ್ರೀಮತಿ ಮಹಾದೇವಿ ಗಂಡ ಚಂದ್ರಶಾ ಪಾಟೀಲ ಸಾ|| ಬಳೂಂಡಗಿ ಇವರ ಗಂಡನಾದ ಚಂದ್ರಶಾ ಇವನು ದಿನಾಂಕ 22-05-2011 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಅಫಜಲಪೂರದಲ್ಲಿರುವ ರುದ್ರಗೌಡನಿಗೆ ಹಣ ಕೇಳಿ ಬರುತ್ತೆನೆ ಅಂತಾ ಹೋಗಿದ್ದು ದಿನಾಂಕ 23-05-2011 ರಂದು ಯಾರೋ ದುಷ್ಕರ್ಮಿಗಳು ಚಂದ್ರಶಾನಿಗೆ ಗುಂಡು ಹೊಡೆದು ಕಲ್ಲಿನಿಂದ ಜಜ್ಜಿ ಶವವನ್ನು ಖಾಜಾಬಿ ಇವಳ ಹೊಲದ ಬಾವಿಯಲ್ಲಿ ಎಸೆದು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕಸಿದುಕೊಂಡು ಕೊಲೆ ಮಾಡಿದ ಪ್ರಕರಣ ;
ಸುಲೇಪೆಟ ಠಾಣೆ ;
ಶ್ರೀ ಸಾಬಣ್ಣಾ ತಂದೆ ಬಸಪ್ಪಾ ಕೋಡ್ಲಿ ಇವರ ಮಗನಾದ ಸಿದ್ದಪ್ಪಾ ಕೋಡ್ಲಿ ಇವನಿಗೆ ಮಾಳಪ್ಪಾ ತಂದೆ ನರಸಪ್ಪಾ ಕೋಡ್ಲಿ ಇವನು ದಿನಾಂಕ 22-05-2011 ರಂದು ರಾತ್ರಿ ಕೋಳಿಯ ಅಡಿಗೆ ಮಾಡಿಸಿದ್ದನೆ ಊಟ ಮಾಡಿ ಅಲ್ಲಿಯೇ ಮಲಗೋಣ ಅಂತಾ ಹೇಳಿ ಸಿದ್ದಪ್ಪನಿಗೆ ಕುಡಹಳ್ಳಿ ಗ್ರಾಮದ ಮಲ್ಲಿನಾಥ ಪೊಲೀಸ ಪಾಟೀಲರವರ ಹೊಲಕ್ಕೆ ಕರೆದುಕೊಂಡು ಹೋಗಿ ಹೊಡೆಬಡೆ ಮಾಡಿ ಗಾಯಗೊಳಿಸಿ ಅವನ ಹತ್ತಿರ ಇದ್ದ ಹಣವನ್ನು ಕಸಿದುಕೊಂಡು ಹೋಗಿದ್ದು ಹೊಡೆಬಡೆ ಗಾಯದಿಂದ ನರಳುತ್ತಿದ್ದ ಸಿದ್ದಪ್ಪನನ್ನು ಉಪಚಾರ ಕುರಿತು ಗುಲಬರ್ಗಾಕ್ಕೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೇಪೆಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ಕಡೆ ಪ್ರತ್ಯೇಕ ಅಪಘಾತ 3 ಜನರ ಸಾವು ;

ನಲೋಗಿ ಠಾಣೆ ;ಶ್ರೀ ಅರವಿಂದ ತಂದೆ ರುಕ್ಕಯ್ಯಾ ಗುತ್ತೇದಾರ ಸಾ; ವಿದ್ಯಾನಗರ ಗುಲಬರ್ಗಾ ಇವರು ಮನೆಯವರೊಂದಿಗೆ ಗುಡ್ಡಾಪೂರಕ್ಕೆ ಹೋಗಿ ವಾಪಸ ಬರುತ್ತಿರುವಾಗ ದಿನಾಂಕ 22-05-2011 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಮಂದೇವಾಲ ಜೋಗುರ ಪೆಟ್ರೋಲ ಪಂಪನಲ್ಲಿ ಡಿಜೆಲ್ ಹಾಕಿಸುತ್ತಿರುವಾಗ ಹೆಣ್ಣುಮಕ್ಕಳು ನಿಸರ್ಗಕರೆಗೆ ಹೋಗಿ ರಸ್ತೆ ದಾಟುತ್ತಿರುವಾಗ ಸಿಂದಗಿ ಕಡೆಯಿಂದ ಯಾವುದೋ ಒಂದು ವಾಹನ ಚಾಲಕ ಅತೀ ವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಚ್ಚಮ್ಮಳಿಗೆ ಡಿಕ್ಕಿ ಪಡಿಸಿದ್ದರಿಂದ ಸ್ಠಳದಲ್ಲೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಳಂದ ಠಾಣೆ ;ಶ್ರೀ ದೀಪಕ ತಂದೆ ಗುರಪ್ಪಾ ಸಾ; ಖಂಡಾಳ ಇವರ ಹೊಲಕ್ಕೆ ಖಜೂರಿಯ ಶಿವಪ್ಪ @ ಶಿವಾನಂದ ತಂದೆ ಕುಪೆಂದ್ರ ತುಪ್ಪದೊಡ್ಡಿ ಇವರಿಗೆ ಸೇರಿದ ಹೊಸ ಟ್ರ್ಯಾಕ್ಟರ ಇಂಜಿನ ನಂ ಎಸ್ ಜೆ 32714939 ಚಿಸ್ಸಿ ನಂ ಓಎ 27-gÀhÄಡ್ 512 ಸಿ 23701 ನೆದ್ದರಲ್ಲಿ ನಾನು ಮತ್ತು ನಮ್ಮ ಅಣ್ಣ ಬಾಳಾಸಾಬ ನೇಗಿಲು ಹೊಡೆಯಲು ಹೋಗಿದ್ದು ದಿನಾಂಕ 22-05-2011 ರ ರಾತ್ರಿ 11 ಗಂಟೆಯ ಸುಮಾರಿಗೆ ಬಾಲಚಂದ್ರ ಸುರ್ಯವಂಶಿ ಇವರ ಹೊಲದ ಹತ್ತಿರ ಟ್ರ್ಯಾಕ್ಟರ qÉæöÊವರನು ನಿಸ್ಕಾಳಜಿತನದಿಂದ ಹಿಂದಕ್ಕೆ ತಂದಿದು ಪಲ್ಟಿಮಾಡಿದ್ದು ಹಿಂದೆ ಇದ್ದ ನಮ್ಮ ಅಣ್ಣ ಬಾಳಾಸಾಬ ಇವನು ಟ್ರ್ಯಾಕ್ಟರನ ಅಡಿಯಲ್ಲಿ ಸಿಕ್ಕು ಸ್ಠಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೇವೂರ ಠಾಣೆ ;ದಿನಾಂಕ 23-05-2011 ರಂದು ಟ್ರ್ಯಾಕ್ಟರ ನಂ ಕೆ.ಎ. 38- ಟಿ- 1297 ನೇದ್ದರ ಚಾಲಕ ರವಿ ತಂದೆ ಕಲ್ಲಪ್ಪ ನಾವಿ ಸಾ; ಹಾವಿನ ಹಾಳ ತಾ; ಇಂಡಿ ಜಿ; ಬಿಜಾಪೂರ ಮತ್ತು ವಿಶ್ವನಾಥ ತಂದೆ ಶಿವಣ್ಣ ನಾಮುಜಾನೆ ಇಬ್ಬರು ಕೊಡಿಕೊಂಡು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಆಳಂದ ಕಡೆಗೆ ಹೊಗುತ್ತಿರುವಾಗ ರೇವುರದಿಂದ 1 ಕಿಲೋ ಮೀ ದೂರದಲ್ಲಿ ಟ್ರ್ಯಾಕ್ಟರ ಚಾಲಕನು ತನ್ನ ವಾಹನವನ್ನು ನಿಸ್ಕಾಳಜಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ಟೆ ಬದಿ ತೆಗ್ಗಿನಲ್ಲಿ ಪಲ್ಟಿ ಮಾಡಿ ಟ್ರ್ಯಕ್ಟರ ಅಡಿಯಲ್ಲಿ ಚಾಲಕ ಮತ್ತು ವಿಶ್ವನಾಥ ಸಿಲುಕಿ ಭಾರಿ ಗಾಯಗಳಾಗಿ ಅಫಜಲಪೂರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ವಿಶ್ವನಾಥ ಇವನಿಗೆ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಹರಣ ಪ್ರಕರಣ ;
ಶಾಹಾಬಾದ ನಗರ ಠಾಣೆ ;
ಶ್ರೀ ದತ್ತಾತ್ರೇಯ ತಂದೆ ನರಸಿಂಹ ಹೊನ್ನಾವರ ಸಾ:ಶರಣನಗರ ಶಹಾಬಾದ. ಇವರ ಮಗಳಾದ ಅರ್ಚನಾ ವ:32 ಇವಳು ನೌಕರಿ ಪಾರಂ ತುಂಬಿ ಬರುತ್ತೇನೆ ಅಂತಾ ಹೇಳಿ ನಿನ್ನ ದಿನಾಂಕ 22-05-11 ರಂದು ಮುಂಜಾನೆ 8 ಎಎಮ್ ಕ್ಕೆ ಸುಮಾರಿಗೆ ಗುಲಬರ್ಗಾಕ್ಕೆ ಹೋಗಿಬರುತ್ತೇನೆ ಅಂದವಳು ಹೊದವಳು ಇಲ್ಲಿಯವರೆಗೆ ಬಂದಿರುವುದಿಲ್ಲಾ. ನಾನು ಮತ್ತು ನನ್ನ ಹೆಂಡತಿ ನಮ್ಮ ಸಂಭಂದಿಕರ ಮನೆ ಹಾಗೂ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಮತ್ತೆ ಮರಳಿ ಶಹಾಬಾಧಕ್ಕೆ ಬಂದಾಗ ಗೊತ್ತಾಗಿದ್ದೇನೆಂದರೆ, ನನ್ನ ಮಗಳೂ ಅರ್ಚನಾ ಇವಳು ಶಹಾಭಾದ ದಿಂದ ಗುಲಬರ್ಗಾಕ್ಕೆ ಹೋಗುವ ಕುರಿಗು ನಹರು ಚೌಕ ಶಹಾಬಾಧ ದಲ್ಲಿ ಬಂದು ನಿಂತಾಗ ಶಹಾಬಾದದ ಪೀರಪ್ಪಾ @ ರಾಜು ತಂದೆ ಸಾಯಬಣ್ಣಾ ಕೂಲಿ ಸಾ: ಬಸವೇಶ್ವರ ನಗರ ಶಹಾಬಾದ. ಇವನು ನನ್ನ ಮಗಳೀಗೆ ಪುಸಲಾಯಿಸಿ ಮದುವೆ ಮಾಡಿಕೊಳ್ಳೂತ್ತೇನೆ ಅಂತಾ ಒತ್ತಾಯದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 May 2011

GULBARGA DISTRICT REPORTED CRIMES

ಕೊಲೆ ಪ್ರಕರಣ :
ಚಿತ್ತಾಪೂರ ಠಾಣೆ ;ಶ್ರೀ ಮತಿ ಬೆಜಾನಬಿ ಗಂಡ ಅಲ್ಲಾಬಕಾಶ ಅಡ್ಡೆವಾಲೆ ಸಾ|| ಆಸರ ಮೊಹಲ್ಲಾ ಚಿತ್ತಾಪೂರ ರವರು ದಿನಾಂಕ 22-05-2011 ರಂದು ರಾತ್ರಿ ಸೈಯ್ಯದ ಹುಸೇನ ಈತನ ಮಕ್ಕಳಾದ ಹುಸೇನಿ ಬಾಷಾ ಹಾಗೂ ಮಗಳು ರೇಷ್ಮಾ ರವರ ಲಗ್ನದ ನಿಮಿತ್ಯ ಮೇಂದಿ ಕಾರ್ಯಕ್ರಮಕ್ಕೆ  ಬಂಕಲಗಾ ಗ್ರಾಮಕ್ಕೆ ಹೋದಾಗ ಮೇಂದಿ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಸೇರಿದ್ದು ಆ ಕಾರ್ಯಕ್ರಮದಲ್ಲಿ ಸಲೀಮ ತಂದೆ ಸೈಯ್ಯದ ಹುಸೇನ ಗೌಂಡಿ ಈತನು ಹೆಣ್ಣು ಮಕ್ಕಳ  ಹತ್ತಿರ ಬಂದದ್ದು ಆಗ ನಾನು ಮತ್ತು ದಾವೂದಮಿಯಾ ಇಲ್ಲಿ ಹೆಣ್ಣು ಮಕ್ಕಳು ಇದ್ದಾರೆ ಈ ಕಡೆ ಯಾಕೆ ಬರುತ್ತಿ ಅಂತಾ ಅಂದರು ಕೂಡಾ ಅವನು ಅವರ ಮಾತು ಕೇಳದೆ ಎರಡು ಮೂರು ಸಲ ಹೆಣ್ಣು ಮಕ್ಕಳು ಇದ್ದಲ್ಲಿಗೆ ಬಂದು ನಾನು ಬೇಕಾದಂಗ  ಬರುತ್ತೆನೆ ಮಕ್ಕಳೆ ನೀವು ಏನು ಮಾಡುತ್ತಿರಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜೀವದಿಂದ ಇಡುವದಿಲ್ಲ ಖಲಾಸ ಮಾಡಿಬಿಡುತ್ತೇನೆ ಅಂತಾ ಹುಸೇನಿ ರವರ ಮನೆ ಮ್ಯಾಳಗಿ ಮೆಲೆ ಹೋಗಿ ದಾವೂದಮಿಯಾ ಈತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದು ಅದರಿಂದ ರಕ್ತಗಾಯವಾಗಿ ಮೃತ ಪಟ್ಟಿದ್ದು ನನಗು ಎಡಗಡೆ  ಮುಂಡಿಗೆ ಕಲ್ಲು ಬಡೆದು ಗುಪ್ತ ಪೆಟ್ಟಾಗಿರುತ್ತದೆ ಮತ್ತು  ಸಲೀಮ ಈತನ ತಾಯಿಯಾದ ಹಪೀಜಾಬೇಗಂ ಇವಳು ನನ್ನ ಮಗನಿಗೆ ಖುಲ್ಲಾ ಬಿಟ್ಟಿದ್ದೇನೆ ಅಂತಾ ಮಗನಿಗೆ ಪ್ರೊತ್ಸಾಹ ಮಾಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಮಾಡಲು ಯತ್ನ ಪ್ರಕರಣಗಳು ;
ಜೇವರ್ಗಿ ಠಾಣೆ ;ಶ್ರೀ ಲಚ್ಚು ರಾಠೋಡ ಸಾ; ಗುಡುರ ರವರು ದಿನಾಂಕ 22-05-2011 ರಂದು ತಮ್ಮ ಮಗ ಶಿವಾಜಿ ತನ್ನ ಮದುವೆ ಕಾರ್ಡ ಕೊಡಲು ಸಂಬಧಿಕರ ಊರುಗಳಿಗೆ ಹೋಗಿದ್ದು ರಾತ್ರಿ 9 ಗಂಟೆಯ ಸುಮಾರಿಗೆ ಗುಡುರ ಎಸ್ ಎ ಗ್ರಾಮದ ಹತ್ತಿರ ಇದ್ದ ಹಳ್ಳದ ಬ್ರಿಡ್ಜ ಹತ್ತಿರ ಮೋಟಾರ ಸೈಕಲ್ ಮೇಲೆ ಬರುವಾಗ ಯಾರೋ 6-7 ಜನರು ಯಾವುದೋ ಒಂದು ಕಾರಣಕ್ಕೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮೋಟಾರ ಸೈಕಲ್ ನಿಲ್ಲಿಸಿ ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಮೈ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಹಾಬಾದ ನಗರ ಠಾಣೆ ;ಶ್ರೀ ಶರಬಣ್ಣಾ ತಂದೆ ಶಿವಶರಣಪ್ಪಾ ಮಾವೂರ ಸಾ:ಮುತ್ತಗಾ.ರವರ ಮಕ್ಕಳಾದ ಶ್ರೀಸೈಲ ಮತ್ತು ಈರಣ್ಣಾ ಇಬ್ಬರೂ ದಿನಾಂಕ 19-05-2011 ರಂದು ನದಿಯ ಹತ್ತಿರ ರೇತಿ ಗುಂಬಲು ಹೊದಾಗ ನಮ್ಮೂರಿನವರಾದ 1.ಬಸವರಾಜ, 2.ನಾನಸಾಹೆಬ, 3ರವಿ 4ಶ್ರೀಕಾಂತ 5.ಶರಣಪ್ಪಾ 6ರುದ್ರಪ್ಪಾ, 7ಚಂದಪ್ಪಾ 8ಶಂಕ್ರೇಪ್ಪಾ 9ಅನಿಲ 10ಮಂಜುನಾಥ 11.ಭೀಮಾಶಂಕರ 12ಮಲ್ಲಿಕಾರ್ಜುನ ಇವರು ಎಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಬಂದು ನನ್ನ ಮಕ್ಕಳಿಗೆ ಬೇದರಿಸಿ ಈ ಜಾಗ ನಮ್ಮದ್ದು ಅದೆ. ಇಲ್ಲಿ ರೇತಿ ತುಂಬಬೇಡಿ ಅಂತಾ ಬೈದು ಕಳಿಸಿದ್ದಾರೆ. ನಂತರ ನಾನು ರಾತ್ರಿ 10 ಪಿ.ಎಂ ಸುಮಾರಿಗೆ .ನಾನು ಮನೆಯ ಮುಂದೆ ನಿಂತಾಗ ಶಂಕ್ರಪ್ಪಾ ಇತನು ಬಂದು ನಮ್ಮ ಜಾಗದಲ್ಲಿ ರೇತಿ ಹೊಡೆಯಬೇಡಿ ಅಂತಾ ಹೇಳಿದರೂ ಹೊಡೆಯಿತ್ತಿರಿ ಬೋಸಡಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ನನ್ನ ಶರ್ಟ ಹಿಡಿದು ಎಳೆದಾಡಿದನು. ಅಲ್ಲಿಯೇ ಇದ್ದ ಬಸವರಾಜನು ಖಲಾಸ ಮಾಡಿ ಅಂತಾ ಕೈಯಲ್ಲಿದ್ದ ಬಡಿಗೆಯಿಂದ ತಲೆಗೆ ಕೊಲೆ ಮಾಡುವ ಉದ್ದೇಶಧಿಂದ ಹೊಡದು ರಕ್ತಗಯ ಮಾಡಿದನು.ಮತ್ತು ಬಿಡಿಸಲು ಬಂದ ಬಸವರಾಜ , ಶರಣು, ಈರಣ್ಣಾ, ಇವರಿಗೂ ಸಹ ಇನ್ನೂಳೀದ ಆರೋಪಿತರು ಬಡಿಗಡಯಿಂದ ಮತ್ತು ಕೈಯಿಂದ ಹೊಡೆದು ರಕ್ತಗಾಯಮಾಡಿದ್ದು, ಶ್ರೀಶೈಲ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಶರಣಪ್ಪಾ ಇತನು ಕೊಡಲಿಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಮಾಢಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ ಸೈಕಲ್ ಗಳ ಡಿಕ್ಕಿ ಸವಾರನ ಸಾವು ;
ಅಫಜಲ್ ಪೂರ ಠಾಣೆ ;ದಿನಾಂಕ 16-05-2011 ರಂದು ಫಾರುಕ ತಂದೆ ರಫೀಕ ಪಟೇಲ ಸಾ: ಅಫಜಲ್ ಪೂರ ಮತ್ತು ಚನ್ನಮಲ್ಲಪ್ಪ ತಂದೆ ಸಿದ್ರಾಮ ಜಮಾದಜಮಾದಾರ ಸಾ; ಅಫಜಲ್ ಪೂರ ರವರು ತಮ್ಮ ಮೋಟಾರ ಸೈಕಲ್ ಗಳ ಮೇಲೆ ಕರ್ಜಗಿ ಕ್ರಾಸ ಹತ್ತಿರ ಮುಖಾಮುಖಿ ಡಿಕ್ಕಿಪಡಿಸಿದ್ದು ಸದರ ಅಪಘಾತದಲ್ಲಿ ಇಬ್ಬರು ಗಾಯಾಳುಗಳಾಗಿದ್ದು ಸದರ ಗಾಯಾಳುಗಳಲ್ಲಿ ಫಾರುಕ ಇತನು ಹೆಚ್ಚಿನ ಉಪಚಾರ ಕುರಿತು ಸೊಲ್ಲಾಪೂರ ಸಿವ್ಹಿಲ್ ಆಸ್ಪತ್ರೆಗೆ ಸೇರಿಕೆಯಾಗಿದ್ದು ದಿನಾಂಕ 19-05-2011 ರಂದು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲ್ ಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದನಗಳ ಕಳವು ಪ್ರಕರಣ ;

ಗ್ರಾಮೀಣ ಠಾಣೆ ;ದಿನಾಂಕ 19-05-2011 ರಂದು ರಾತ್ರಿ ಶ್ರೀ ಬಾಲಾಜಿ ರವರು ಕೆರೆ ಬೋಸಗಾ ಸಮಿಪ ಇರುವ ಗೋಶಾಲೆಗೆ ಯಾರೋ ಕಳ್ಳರು ಬಂದು ಒಂದು ಕೆಂಪು ಬಣ್ಣದ ಅಕಳು ಮತ್ತು ಎರಡು ಹೋರಿ ಕರುಗಳು ಅಂದಾಜು ಮೊತ್ತ 5,000 /- ಹಾಗೂ ಎರಡು ಹೊರಿ ಕರು ತಲಾ ಒಂದಕ್ಕೆ ರೂ. 1000 /- ಕಿಮ್ಮತ್ತು ಇರುತ್ತದೆ ಹೀಗೆ ಒಟ್ಟು 7,000 /- ಸಾವಿರ ರೂಪಾಯಿಗಳ ದನಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ ;

ಚೌಕ ಠಾಣೆ ;ದಿನಾಂಕ 20-05-2011 ರಂದು ಮಧ್ಯಾಹ್ನ ಶ್ರೀ ಲಕ್ಷ್ಮಣ ತಂದೆ ಬಾಲಚಂದ್ರ ವಾಗ್ಮೋರೆ ಸಾ; ಭವಾನಿ ಗಲ್ಲಿ ಶಾಹಾಬಜಾರ ಗುಲಬರ್ಗಾ ರವರು ತಮ್ಮ ದೊಡ್ಡಮ್ಮನ ಮಗಳ ಮದುವೆಗೆ ಹೋದಾಗ ಯಾರೋ ಕಳ್ಳರು ಮನೆಯ ಕೀಲಿ ತೆರೆದು ಒಳಗೆ ಪ್ರವೇಶ ಮಾಡಿ ಅಲಮಾರಾದಲ್ಲಿಟ್ಟಿದ್ದ ನಗದು ಹಣ ಮತ್ತು ಅರ್ಧ ತೊಲೆ ಬಂಗಾರ ಹೀಗೆ ಒಟ್ಟು 160000/- ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 May 2011

GULBARGA DISTRICT REPORTED CRIMES

ಕಳ್ಳತನ ಪ್ರಕರಣ

ರೋಜಾ ಠಾಣೆ : ಶ್ರೀ ನಾಗರಾಜ ತಂದೆ ಶಾಂತಲಿಂಗಪ್ಪಾ ದುಕಾನಂದಾರ ಸಾ:ಗಾಂದಿ ನಗರ ಗುಲಬರ್ಗಾ ರವರು ನಾನು ಗಂಜ ಬಸ್ ಸ್ಟಾಂಡ ಹತ್ತಿರ ಒಂದು ದುಕಾನ ಇಟ್ಟುಕೊಂಡಿದ್ದ ಅಂಗಡಿಯ ಶೇಟ್ಟರ ಪಟ್ಟಿ ಬೆಂಡಮಾಡಿ ಅಂಗಡಿಯಲ್ಲಿದ್ದ ಗೋಲ್ಡಪ್ಲಾಕ್, ಬ್ರಿಸ್ಟಲ್,  ಕಿಂಗಸೈಜ್ ಗೋಲ್ಡ ಪ್ಲಾಕ್, ವೀಲ್ಸ್ ಸಿಗರೆಟ ಮತ್ತು ಮಾಣಿಕಚಂದ ಗುಟಕಾ ಹೀಗೆ ಒಟ್ಟು 24,060-00 ರೂಪಾಯಿ ಬೆಲೆಬಾಳುವದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಳಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಪ್ರಕರಣ :

ಮಹಿಳಾ ಠಾಣೆ : ಶ್ರೀಮತಿ ಶರಣಮ್ಮಾ ತಂದೆ ಸಾಯಿಬಣ್ಣ ಪ್ರಭಾರಿ ಅಧೀಕ್ಷಕರು ರಾಜ್ಯ ಮಹಿಳಾ ನಿಲಯ ಆಳಂದ ರೋಡ ಗುಲಬರ್ಗಾ ರವರು ನಮ್ಮ ಮಹಿಳಾ ನಿಲಯಕ್ಕೆ ಮಾನ್ಯ ಜೆ.ಎಮ್.ಎಫ.ಸಿ. ನ್ಯಾಯಾಲಯ ಗುಲಬರ್ಗಾ ರವರು ಇಂದುಮತಿ ತಂದೆ ಶಂಕರ ಪಟ್ಟೆದಾರ ಸಾ|| ಕೂಡಿ ರವರು ದಾಖಲಾಗುವದಕ್ಕೆ ಆದೇಶ ನೀಡಿದ್ದರಿಂದ ಮಹಿಳಾ ನಿಲಯದಲ್ಲಿದ್ದು ದಿನಾಂಕ: 17-05-2011 ರಂದು ಮಹಿಳಾ ನಿಲಯದ ಇತರರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾಗ ಎಲ್ಲರ ಕಣ್ಣು ತಪ್ಪಿಸಿ ಓಡಿ ಹೋಗಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.