ಕೊಲೆ ಪ್ರಕರಣ :
ಚಿತ್ತಾಪೂರ ಠಾಣೆ ;ಶ್ರೀ ಮತಿ ಬೆಜಾನಬಿ ಗಂಡ ಅಲ್ಲಾಬಕಾಶ ಅಡ್ಡೆವಾಲೆ ಸಾ|| ಆಸರ ಮೊಹಲ್ಲಾ ಚಿತ್ತಾಪೂರ ರವರು ದಿನಾಂಕ 22-05-2011 ರಂದು ರಾತ್ರಿ ಸೈಯ್ಯದ ಹುಸೇನ ಈತನ ಮಕ್ಕಳಾದ ಹುಸೇನಿ ಬಾಷಾ ಹಾಗೂ ಮಗಳು ರೇಷ್ಮಾ ರವರ ಲಗ್ನದ ನಿಮಿತ್ಯ ಮೇಂದಿ ಕಾರ್ಯಕ್ರಮಕ್ಕೆ ಬಂಕಲಗಾ ಗ್ರಾಮಕ್ಕೆ ಹೋದಾಗ ಮೇಂದಿ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಸೇರಿದ್ದು ಆ ಕಾರ್ಯಕ್ರಮದಲ್ಲಿ ಸಲೀಮ ತಂದೆ ಸೈಯ್ಯದ ಹುಸೇನ ಗೌಂಡಿ ಈತನು ಹೆಣ್ಣು ಮಕ್ಕಳ ಹತ್ತಿರ ಬಂದದ್ದು ಆಗ ನಾನು ಮತ್ತು ದಾವೂದಮಿಯಾ ಇಲ್ಲಿ ಹೆಣ್ಣು ಮಕ್ಕಳು ಇದ್ದಾರೆ ಈ ಕಡೆ ಯಾಕೆ ಬರುತ್ತಿ ಅಂತಾ ಅಂದರು ಕೂಡಾ ಅವನು ಅವರ ಮಾತು ಕೇಳದೆ ಎರಡು ಮೂರು ಸಲ ಹೆಣ್ಣು ಮಕ್ಕಳು ಇದ್ದಲ್ಲಿಗೆ ಬಂದು ನಾನು ಬೇಕಾದಂಗ ಬರುತ್ತೆನೆ ಮಕ್ಕಳೆ ನೀವು ಏನು ಮಾಡುತ್ತಿರಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜೀವದಿಂದ ಇಡುವದಿಲ್ಲ ಖಲಾಸ ಮಾಡಿಬಿಡುತ್ತೇನೆ ಅಂತಾ ಹುಸೇನಿ ರವರ ಮನೆ ಮ್ಯಾಳಗಿ ಮೆಲೆ ಹೋಗಿ ದಾವೂದಮಿಯಾ ಈತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದು ಅದರಿಂದ ರಕ್ತಗಾಯವಾಗಿ ಮೃತ ಪಟ್ಟಿದ್ದು ನನಗು ಎಡಗಡೆ ಮುಂಡಿಗೆ ಕಲ್ಲು ಬಡೆದು ಗುಪ್ತ ಪೆಟ್ಟಾಗಿರುತ್ತದೆ ಮತ್ತು ಸಲೀಮ ಈತನ ತಾಯಿಯಾದ ಹಪೀಜಾಬೇಗಂ ಇವಳು ನನ್ನ ಮಗನಿಗೆ ಖುಲ್ಲಾ ಬಿಟ್ಟಿದ್ದೇನೆ ಅಂತಾ ಮಗನಿಗೆ ಪ್ರೊತ್ಸಾಹ ಮಾಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಮಾಡಲು ಯತ್ನ ಪ್ರಕರಣಗಳು ;
ಜೇವರ್ಗಿ ಠಾಣೆ ;ಶ್ರೀ ಲಚ್ಚು ರಾಠೋಡ ಸಾ; ಗುಡುರ ರವರು ದಿನಾಂಕ 22-05-2011 ರಂದು ತಮ್ಮ ಮಗ ಶಿವಾಜಿ ತನ್ನ ಮದುವೆ ಕಾರ್ಡ ಕೊಡಲು ಸಂಬಧಿಕರ ಊರುಗಳಿಗೆ ಹೋಗಿದ್ದು ರಾತ್ರಿ 9 ಗಂಟೆಯ ಸುಮಾರಿಗೆ ಗುಡುರ ಎಸ್ ಎ ಗ್ರಾಮದ ಹತ್ತಿರ ಇದ್ದ ಹಳ್ಳದ ಬ್ರಿಡ್ಜ ಹತ್ತಿರ ಮೋಟಾರ ಸೈಕಲ್ ಮೇಲೆ ಬರುವಾಗ ಯಾರೋ 6-7 ಜನರು ಯಾವುದೋ ಒಂದು ಕಾರಣಕ್ಕೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮೋಟಾರ ಸೈಕಲ್ ನಿಲ್ಲಿಸಿ ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಮೈ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ ;ಶ್ರೀ ಶರಬಣ್ಣಾ ತಂದೆ ಶಿವಶರಣಪ್ಪಾ ಮಾವೂರ ಸಾ:ಮುತ್ತಗಾ.ರವರ ಮಕ್ಕಳಾದ ಶ್ರೀಸೈಲ ಮತ್ತು ಈರಣ್ಣಾ ಇಬ್ಬರೂ ದಿನಾಂಕ 19-05-2011 ರಂದು ನದಿಯ ಹತ್ತಿರ ರೇತಿ ಗುಂಬಲು ಹೊದಾಗ ನಮ್ಮೂರಿನವರಾದ 1.ಬಸವರಾಜ, 2.ನಾನಸಾಹೆಬ, 3ರವಿ 4ಶ್ರೀಕಾಂತ 5.ಶರಣಪ್ಪಾ 6ರುದ್ರಪ್ಪಾ, 7ಚಂದಪ್ಪಾ 8ಶಂಕ್ರೇಪ್ಪಾ 9ಅನಿಲ 10ಮಂಜುನಾಥ 11.ಭೀಮಾಶಂಕರ 12ಮಲ್ಲಿಕಾರ್ಜುನ ಇವರು ಎಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಬಂದು ನನ್ನ ಮಕ್ಕಳಿಗೆ ಬೇದರಿಸಿ ಈ ಜಾಗ ನಮ್ಮದ್ದು ಅದೆ. ಇಲ್ಲಿ ರೇತಿ ತುಂಬಬೇಡಿ ಅಂತಾ ಬೈದು ಕಳಿಸಿದ್ದಾರೆ. ನಂತರ ನಾನು ರಾತ್ರಿ 10 ಪಿ.ಎಂ ಸುಮಾರಿಗೆ .ನಾನು ಮನೆಯ ಮುಂದೆ ನಿಂತಾಗ ಶಂಕ್ರಪ್ಪಾ ಇತನು ಬಂದು ನಮ್ಮ ಜಾಗದಲ್ಲಿ ರೇತಿ ಹೊಡೆಯಬೇಡಿ ಅಂತಾ ಹೇಳಿದರೂ ಹೊಡೆಯಿತ್ತಿರಿ ಬೋಸಡಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ನನ್ನ ಶರ್ಟ ಹಿಡಿದು ಎಳೆದಾಡಿದನು. ಅಲ್ಲಿಯೇ ಇದ್ದ ಬಸವರಾಜನು ಖಲಾಸ ಮಾಡಿ ಅಂತಾ ಕೈಯಲ್ಲಿದ್ದ ಬಡಿಗೆಯಿಂದ ತಲೆಗೆ ಕೊಲೆ ಮಾಡುವ ಉದ್ದೇಶಧಿಂದ ಹೊಡದು ರಕ್ತಗಯ ಮಾಡಿದನು.ಮತ್ತು ಬಿಡಿಸಲು ಬಂದ ಬಸವರಾಜ , ಶರಣು, ಈರಣ್ಣಾ, ಇವರಿಗೂ ಸಹ ಇನ್ನೂಳೀದ ಆರೋಪಿತರು ಬಡಿಗಡಯಿಂದ ಮತ್ತು ಕೈಯಿಂದ ಹೊಡೆದು ರಕ್ತಗಾಯಮಾಡಿದ್ದು, ಶ್ರೀಶೈಲ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಶರಣಪ್ಪಾ ಇತನು ಕೊಡಲಿಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಮಾಢಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಟಾರ ಸೈಕಲ್ ಗಳ ಡಿಕ್ಕಿ ಸವಾರನ ಸಾವು ;
ಅಫಜಲ್ ಪೂರ ಠಾಣೆ ;ದಿನಾಂಕ 16-05-2011 ರಂದು ಫಾರುಕ ತಂದೆ ರಫೀಕ ಪಟೇಲ ಸಾ: ಅಫಜಲ್ ಪೂರ ಮತ್ತು ಚನ್ನಮಲ್ಲಪ್ಪ ತಂದೆ ಸಿದ್ರಾಮ ಜಮಾದಜಮಾದಾರ ಸಾ; ಅಫಜಲ್ ಪೂರ ರವರು ತಮ್ಮ ಮೋಟಾರ ಸೈಕಲ್ ಗಳ ಮೇಲೆ ಕರ್ಜಗಿ ಕ್ರಾಸ ಹತ್ತಿರ ಮುಖಾಮುಖಿ ಡಿಕ್ಕಿಪಡಿಸಿದ್ದು ಸದರ ಅಪಘಾತದಲ್ಲಿ ಇಬ್ಬರು ಗಾಯಾಳುಗಳಾಗಿದ್ದು ಸದರ ಗಾಯಾಳುಗಳಲ್ಲಿ ಫಾರುಕ ಇತನು ಹೆಚ್ಚಿನ ಉಪಚಾರ ಕುರಿತು ಸೊಲ್ಲಾಪೂರ ಸಿವ್ಹಿಲ್ ಆಸ್ಪತ್ರೆಗೆ ಸೇರಿಕೆಯಾಗಿದ್ದು ದಿನಾಂಕ 19-05-2011 ರಂದು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲ್ ಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದನಗಳ ಕಳವು ಪ್ರಕರಣ ;
ಗ್ರಾಮೀಣ ಠಾಣೆ ;ದಿನಾಂಕ 19-05-2011 ರಂದು ರಾತ್ರಿ ಶ್ರೀ ಬಾಲಾಜಿ ರವರು ಕೆರೆ ಬೋಸಗಾ ಸಮಿಪ ಇರುವ ಗೋಶಾಲೆಗೆ ಯಾರೋ ಕಳ್ಳರು ಬಂದು ಒಂದು ಕೆಂಪು ಬಣ್ಣದ ಅಕಳು ಮತ್ತು ಎರಡು ಹೋರಿ ಕರುಗಳು ಅಂದಾಜು ಮೊತ್ತ 5,000 /- ಹಾಗೂ ಎರಡು ಹೊರಿ ಕರು ತಲಾ ಒಂದಕ್ಕೆ ರೂ. 1000 /- ಕಿಮ್ಮತ್ತು ಇರುತ್ತದೆ ಹೀಗೆ ಒಟ್ಟು 7,000 /- ಸಾವಿರ ರೂಪಾಯಿಗಳ ದನಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ ;
ಚೌಕ ಠಾಣೆ ;ದಿನಾಂಕ 20-05-2011 ರಂದು ಮಧ್ಯಾಹ್ನ ಶ್ರೀ ಲಕ್ಷ್ಮಣ ತಂದೆ ಬಾಲಚಂದ್ರ ವಾಗ್ಮೋರೆ ಸಾ; ಭವಾನಿ ಗಲ್ಲಿ ಶಾಹಾಬಜಾರ ಗುಲಬರ್ಗಾ ರವರು ತಮ್ಮ ದೊಡ್ಡಮ್ಮನ ಮಗಳ ಮದುವೆಗೆ ಹೋದಾಗ ಯಾರೋ ಕಳ್ಳರು ಮನೆಯ ಕೀಲಿ ತೆರೆದು ಒಳಗೆ ಪ್ರವೇಶ ಮಾಡಿ ಅಲಮಾರಾದಲ್ಲಿಟ್ಟಿದ್ದ ನಗದು ಹಣ ಮತ್ತು ಅರ್ಧ ತೊಲೆ ಬಂಗಾರ ಹೀಗೆ ಒಟ್ಟು 160000/- ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment