POLICE BHAVAN KALABURAGI

POLICE BHAVAN KALABURAGI

14 September 2020

KALABURAGI DISTRICT CRIME REPORTE

 ಅಕ್ರಮ ಗಾಂಜಾ ಮಾರಾಟ :-

ಅಫಜಲಪೂರ ಪೊಲೀಸ ಠಾಣೆ 

 ಇಂದು ದಿನಾಂಕ 13-09-2020 ರಂದು 6:00 ಪಿ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆ ಮಾಲು ಹಾಗೂ ಜಪ್ತಿ ಪಂಚನಾಮೆ ಹಾಜರುಪಡಿಸಿ ಸ:ತ ಫೀರ್ಯಾದಿ ಸಲ್ಲಿಸಿದ್ದು ಸದರಿ ಫೀರ್ಯಾದಿಯ ಸಾರಾಂಶವೇನೆಂದರೆ ದಿನಾಂಕ 13-09-2020 ರಂದು ಮದ್ಯಾಹ್ನ 1:30 ಗಂಟೆಗೆ ನಾನು ಠಾಣೆಯಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಶೀವೂರ ಸೀಮಾಂತರದ ಒಂದು ಹೊಲದಲ್ಲಿ ಅನದಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿ, ಗಾಂಜಾ ಮಾರಾಟ ಮಾಡುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಮಾನ್ಯ ತಾಲೂಕಾ ಆರೋಗ್ಯಾಧಿಕಾರಿಗಳು ಪತ್ರಾಂಕಿತ ಅಧಿಕಾರಿಯವರಾದ ಡಾ|| ಸಂಗಮೇಶ ಟಕ್ಕಳಕಿ ವೈದ್ಯಾಧಿಕಾರಿಗಳು ತಾಲೂಕು ಸರ್ಕಾರಿ ಆಸ್ಪತ್ರೆ ಅಫಜಲಪೂರ ಮತ್ತು ತಹಸಿಲ್ದಾರ ಕಛೇರಿಯಿಂದ ಇಬ್ಬರು ಸರ್ಕಾರಿ ಪಂಚರೊಂದಿಗೆ ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಸುರೇಶ ಹೆಚ್.ಸಿ-394, ಸಂತೋಷ ಹೆಚ್.ಸಿ-439, ಚಿದಾನಂದ ಹೆಚ್.ಸಿ-306, ಭಾಗಣ್ಣ ಪಿಸಿ-167   ಎಲ್ಲರೂ ಒಂದು ಖಾಸಗಿ ಕ್ರೂಜರ ವಾಹನದಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಜನರು ಮತ್ತು ಉಳಿದವರು ಕೂಡಿ ಶಿವೂರ ಗ್ರಾಮಕ್ಕೆ ಹೋಗಿ, ಪೊಲೀಸ್ ಬಾತ್ಮಿದಾರನು ತೋರಿಸಿದ  ಕಬ್ಬಿನ ಹೊಲವನ್ನು ತೊರಿಸಿದಾಗ ನಾವೇಲ್ಲರೂ ಸದರಿ ಹೊಲದಲ್ಲಿ ಹೊಗುತ್ತಿದ್ದಾಗ, ಸದರಿ ಹೊಲದಿಂದ ಒಬ್ಬ ವ್ಯೆಕ್ತಿ ನಮ್ಮನ್ನು ನೋಡಿ ಓಡ ತೊಡಗಿದನು. ಆಗ ನಾವು ಬೆನ್ನಟ್ಟಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ರೇವಪ್ಪ ತಂದೆ ಶಿವರಾಯ ಪಾಟೀಲ ವಯ|| 45 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಲಾಳಸಂಗಿ ತಾ|| ಇಂಡಿ ಜಿ|| ವಿಜಯಪೂರ ಹಾ|| ವ|| ಶಿವೂರ ಹೊಲದಲ್ಲಿ ವಸತಿ ಮಾಡುತ್ತಿರುವದಾಗಿ ತಿಳಿಸಿದ್ದು, ಸದರಿಯವನಿಗೆ ಗಾಂಜಾ ಬೆಳೆದ ಬಗ್ಗೆ ಪುನ ಪುನ ವಿಚಾರಿಸಲು ಸದರಿಯವನು ಕಬ್ಬಿನ ಬೆಳೆಯಲ್ಲಿ ಕರೆದುಕೊಂಡು ಹೋಗಿ ಕಬ್ಬಿನ ಬೆಳೆಯ ಮದ್ಯದಲ್ಲಿ ಬೆಳೆದ ಒಂದು ಗಾಂಜಾ ಗಿಡವನ್ನು ತೊರಿಸಿದನು. ನಂತರ ವಿಚಾರಿಸಲು ಅಲ್ಲೆ ಸ್ವಲ್ಪ ದೂರದಲ್ಲಿ ಇನ್ನೊಂದು ಕಬ್ಬಿನ ಸಾಲಿನಲ್ಲಿ ಬೆಳೆದ ಗಾಂಜಾ ಗಿಡವನ್ನು ತೊರಿಸಿದನು. ಸದರಿಯವನಿಗೆ ವಿಚಾರಿಸಿದಾಗ ನನ್ನ ಸ್ವಂತ ಊರು ಇಂಡಿ ತಾಲೂಕಿನ ಲಾಳಸಂಗಿ ಗ್ರಾಮ ಇದ್ದು, ಸದರಿ ಹೊಲ, ನನ್ನ ಹೆಂಡತಿಯ ತಾಯಿಯಾದ ಅಂಬುಬಾಯಿ ಗಂಡ ಗುರಪ್ಪ ಉಡಚಾಣ ಸಾ|| ಶಿವೂರ ಇವರ ಹೆಸರಿನ ಸರ್ವೇ ನಂ 86/2 ರಲ್ಲಿ ಇರುತ್ತದೆ. ನನ್ನ ಅತ್ತೆಗೆ ಗಂಡು ಮಕ್ಕಳು ಇಲ್ಲದ ಕಾರಣ ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ನನ್ನ ಅತ್ತೆಯ ಹೊಲದಲ್ಲಿಯೆ ಕೆಲಸ ಮಾಡಿಕೊಂಡು ಹೊಲದಲ್ಲೆ ಮನೆ ಮಾಡಿಕೊಂಡು ವಾಸವಾಗಿರುತ್ತೇನೆ. ನಂತರ ಸದರಿಯವನಿಗೆ ಗಾಂಜಾ ಬೆಳೆದ ಬಗ್ಗೆ ವಿಚಾರಿಸಲು ನಾನು ಸದರಿ ನನ್ನ ಹೊಲದಲ್ಲಿ ಸುಮಾರು ದಿನಗಳಿಂದ ಗಾಂಜಾ ಗಿಡಗಳನ್ನು ಬೆಳೆದು ಅದನ್ನು ನನ್ನ ಸ್ವಂತ ಲಾಬಕ್ಕಾಗಿ ಮಾಹಾರಾಷ್ಟ್ರದ ಬೇರೆ ಬೇರೆ ಕಡೆಗೆ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ನಂತರ ಸದರಿ ವ್ಯೆಕ್ತಿಯನ್ನು ವಶಕ್ಕೆ ಪಡೆದುಕೊಂಡು, ನಂತರ ಸದರಿ ಗಾಂಜಾ ಗಿಡಗಳನ್ನು ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ ಆರೋಪಿತನಿಂದ ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಲು ಒಟ್ಟು 02 ಗಾಂಜಾ ಗಿಡಗಳಿದ್ದು ಅವುಗಳನ್ನು, ಕಬ್ಬಿನ ಹೊಲದಿಂದ ಹೊರಕ್ಕೆ ತಂದು ಪ್ರತ್ಯೆಕವಾಗಿ  ತೂಕ ಮಾಡಿದ್ದು ಎರಡು ಗಿಡಗಳು 1) 0.825 ಗ್ರಾಮ 2) 0.265 ಒಟ್ಟು 1.085 ಕೆಜಿ ತೂಕವಿದ್ದು, ನಂತರ ಅವುಗಳನ್ನು ಪಂಚರ ಸಮಕ್ಷಮ ಮತ್ತು ಪತ್ರಾಂಕಿತ ಅಧಿಕಾರಿಗಳ ಸಮ್ಮುಖದಲ್ಲಿ ಆರೋಪಿತನಿಂದ ವಶಪಡಿಸಿಕೊಂಡಿದ್ದು, ಸದರಿ ಕಾಂಡ ಸಮೇತವಾದ ಹಸಿ ಗಾಂಜಾ ಗಿಡಗಳು ಅಂದಾಜು 5000/- ರೂ ಕಿಮ್ಮತ್ತಿನವು ಇರಬಹುದು. ನಂತರ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಆರೋಪಿತನ  ವಿರುದ್ದ ಕ್ರಮ ಕೈಕೊಳ್ಳಲು ನೀಡಿದ ವರದಿ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

  

ಜಾತಿ ನಿಂದನೆ ಪ್ರಕರಣ:-

ರೇವೂರ ಪೊಲೀಸ ಠಾಣೆ 

           ದಿನಾಂಕ 13/09/2020 ರಂದು 7.00 ಪಿಎಮ್ ಕ್ಕೆ ಫೀರ್ಯಾದಿದಾರರಾದ ಶ್ರೀ ಗುರುನಾಥ ತಂದೆ ಲಾಡಪ್ಪ ನಡುಗೇರಿ ಸಾ||ಸಿಥನೂರ ರವರು ಠಾಣೆ ಹಾಜರಾಗಿ ನೀಡಿದ ಹೇಳಿಕೆ ಸಾರಾಂಶವೆನೆಂದರೆ,

         ಇಂದು ದಿನಾಂಕ 13/09/2020 ರಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ಗ್ರಾಮದ ಹುಲೇಪ್ಪ ತಂದೆ ಶರಣಪ್ಪ ಹೇರೂರ, ಹಣಮಂತ ತಂದೆ ಲಕ್ಷ್ಮಣ ತಳೇಕೇರಿ ಮೂರು ಜನರು ನಮ್ಮ ಗ್ರಾಮದ ನಾಗೇಶ ತಂದೆ ಮಾಳಪ್ಪ ಪೂಜಾರಿ ರವರ ಅಂಗಡಿಯ ಮುಂದೆ ಮಾತನಾಡುತ್ತಾ ನಿಂತಾಗ ರಮೇಶ ಕವಲಗಿ ಈತನು ನನ್ನ ಹತ್ತಿರ ಬಂದು ನನಗೆ ಏ ರಂಡಿ ಮಗನೇ ಹೊಲ್ಯಾ ಸುಳೆ ಮಗನೆ ನಿನೌವ್ನ ನಾ ಇಟಂಗಿ ಕೆಲಸಕ್ಕೆ ಹೇಳಿದ ಜನರಿಗೆ ನೀನು ತಗೊಂಡಿದಿ ರಂಡಿ ಮಗನೆ ಅಂತ ಬೈಯುತಿದ್ದಾಗ ನಾನು ಸದರಿಯವನಿಗೆ ನೀವು ಈ ರೀತಿ ಬೈದಾಡುವದು ಸರಿ ಅಲ್ಲಾ ಅವರೇ ನನ್ನ ಹತ್ತಿರ ಕೆಲಸಕ್ಕೆ ಬಂದಿರುತ್ತಾರೆ ಅದು ಮುಗಿದೊದ ವಿಷಯ ಈಗ್ಯಾಕೆ ಅಂತ ಅಂದಾಗ ರಮೇಶ ಈತನು ಹೊಲ್ಯಾ ರಂಡಿಮಗನೆ ನಿನಗ ಸೊಕ್ಕ ಬಾಳ ಅದಾ ಅಂತ ಅಂದು ಹೊಡೆಯಲು ನನ್ನ ಮೇಲೆ ಬರುತಿದ್ದಾಗ ಅಲ್ಲೇ ಇದ್ದ ಹುಲೇಪ್ಪ, ಹಣಮಂತ ಹಾಗು ಅಂಗಡಿಯಲಿದ್ದ ನಾಗೇಶ ರವರು ಬಂದು ರಮೇಶ ರವರಿಗೆ ಬಿಡಿಸಿ ಕಳುಯಿಸಿರುತ್ತಾರೆ. ನಾನು ಈ ಘಟನೆಯ ಬಗ್ಗೆ ನಮ್ಮ ಮನೆಯವರೊಂದಿಗೆ ವಿಚಾರ ಮಾಡಿ ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ.

 ಕಾರಣ ರಮೇಶ ತಂದೆ ಶಿವರಾಯ ಕವಲಗಿ ಸಾ||ಸಿದನೂರ ಈತನು ನನಗೆ ಹಳೆ ವೈಶಮ್ಯದಿಂದ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದು ಸದರಿಯವನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ ಸಾರಾಂಶದ ಮೇಲಿಂದ ರೇವೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಅಕ್ರಮ ಮಧ್ಯ ಮಾರಾಟ ಪ್ರಕರಣ:-

ಶಹಾಬಾದ ನಗರ ಪೊಲೀಸ ಠಾಣೆ 

ದಿನಾಂಕ:13/09/2020 ರಂದು 5-45 ಪಿ ಎಮ್ ಕ್ಕೆ ಶ್ರೀ ಬಿ ಅಮರೇಶ ಪಿ ಐ ಶಹಾಬಾದ ನಗರ ಪೊಲೀಸ ಠಾಣೆ ರವರು ಠಾಣೆಗೆ ಬಂದು ಇಬ್ಬರು ಅರೋಪಿ ಮತ್ತು ಮುದ್ದೆ ಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ  ದಿನಾಂಕ: 13/09/2020  ರಂದು 3-00 ಪಿ ಎಮ್  ಕ್ಕೆ ಠಾಣೆಯಲ್ಲಿದ್ದಾಗ ಹಳೆ ಶಹಾಬಾದ ಅಟೋ ಸ್ಟಾಂಡ ಹತ್ತಿರ ಇಬ್ಬರೂ ವ್ಯಕ್ತಿಗಳು ಆಕ್ರಮವಾಗಿ ಮದ್ಯ  ಮಾರಾಟ ಮಾಡುತ್ತಿದ್ದಾರೆ  ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚ ಜನರೊಂದಿಗೆ ಹೊರಟು  ಹಳೆ ಶಹಾಬಾದಕ್ಕೆ ಹೋಗಿ  ಒಂದು ಹೊಟೇಲ  ಮರೆಯಾಗಿ ನಿಂತು ನೋಡಲಾಗಿ  ಅಟೋ ಸ್ಟಾಂಡ ಹತ್ತಿರ ಖುಲ್ಲಾ ಜಾಗೆಯಲ್ಲಿ ಇಬ್ಬರೂ ವ್ಯಕ್ತಿಗಳು ಎರಡು ರಟ್ಟಿನ ಬಾಕ್ಸಗಳಲ್ಲಿ ಮದ್ಯ ಇಟ್ಟುಕೊಂಡು ಸಾರ್ವಜನಿಕರಿಗೆ ಆಕ್ರಮವಾಗಿ ಮದ್ಯ ಮರಾಟ ಮಾಡುತ್ತಿದ್ದನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಇಬ್ಬರೂ ವ್ಯಕ್ತಿಗಳಿಗೆ ಹಿಡಿದು ಅವರ ಹೆಸರು ವಿಚಾರಿಸಲು ಅವರು ತಮ್ಮ ಹೆಸರು 1) ಹಾಜಪ್ಪ ತಂದೆ ಮಲ್ಕಪ್ಪಾ ಪೂಜಾರಿ ವಯಾ: 57 ವರ್ಷ ಉ: ಖಾಸಗಿ ಕೆಲಸ ಜಾ: ಕುರಬರ ಸಾ: ಹಳೆ ಶಹಾಬಾದ 2) ಸಾಬಯ್ಯ ತಂದೆ ಅಶೋಕ ಗುತ್ತೇದಾರ ವಯಾ: 25 ವರ್ಷ ಉ: ಖಾಸಗಿ ಕೆಲಸ ಜಾ: ಇಳಗೇರ ಸಾ: ಹಳೆ ಶಹಾಬಾದ ಅಂತಾ ತಿಳಿಸಿದರು ಅವರ ಹತ್ತಿರ ಇದ್ದ ರಟ್ಟಿನ ಬಾಕ್ಸಗಳು ಪರಿಶೀಲಿಸಿ ನೋಡಲಾಗಿ ಒಂದು ಬಾಕ್ಸದಲ್ಲಿ 90 ಎಮ್ ಎಲ್ ನ ಯು ಎಸ್ ವಿಸ್ಕಿ ತುಂಬಿದ 70 ಪೌಚಗಳು ಅ.ಕಿ 1750-00 ರೂ ಇನ್ನೋಂದು ಬಾಕ್ಸನಲ್ಲಿ 90 ಎಮ್ ಎಲ್ ನ ಓರಿನಲ್ ಚಾಯ್ಸ ವಿಸ್ಕಿ ತುಂಬಿದ 60 ಪೌಚಗಳು ಅ.ಕಿ 2100-00 ರೂ  ಇದ್ದು ಅವರಿಗೆ ಮಧ್ಯ ಮಾರಾಟ ಮಾಡುವ ಬಗ್ಗೆ ಏನಾದರೂ ಪರವಾನಿಗೆ ಇದೆಯೋ ಹೇಗೆ ಅಂತಾ ವಿಚಾರಿಸಲು, ಅವರು ಯಾವುದೆ ಪರವಾನಿಗೆ ಇರುವುದಿಲ್ಲಾ ಅಂತಾ ತಿಳಿಸಿದರು ಸದರಿಯವರು ಸರಕಾರದಿಂದ ಯಾವುದೆ ಪರವಾನಿಗೆ ಪಡೆದುಕೊಳ್ಳದೆ ಮದ್ಯ ಮಾರಾಟ ಮಾಡುತ್ತಿದ್ದರಿಂದ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಕ್ರಮ ಕೈಗೊಳ್ಳುವಂತೆ ನೀಡಿದ ಜ್ಞಾಪನ ಪತ್ರದ ಆಧಾರ ಮೇಲಿಂದ  ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

11 September 2020

KALABURAGI DISTRICT CRIME REPORTED

 ರಸ್ತೆ ಅಪಘಾತ ಪ್ರಕರಣ ಮರಣಾಂತಿಕ:-

ಮುಧೋಳ ಪೊಲೀಸ ಠಾಣೆ 

           ದಿನಾಂಕ 10-09-2020 ರಂದು ಬೆಳಗ್ಗೆ 11-35 ಗಂಟೆ ಸುಮಾರಿಗೆ ಗಾಯಾಳು ವೆಂಕಟೇಶ ಹಾಗೂ ಮೃತ ಶ್ರೀಕಾಂತ ಇಬ್ಬರು ಕೂಡಿ ತಮ್ಮ ಮೋಟರ್ ಸೈಕಲ ನಂ ಕೆಎ-32 ಇಎಮ್ 8095 ನೇದ್ದರ ಮೇಲೆ ಆಡಕಿ ಗ್ರಾಮದಿಂದ ಕೊಂತನಪಲ್ಲಿ ಗ್ರಾಮಕ್ಕೆ ಹೋಗುವಾಗ ಕೊಂತನಪಲ್ಲಿ ಕ್ರಾಸ್ ಸಮೀಪ ತಿರುವಿನಲ್ಲಿ ಹೋಗುತ್ತಿರುವಾಗ ಎದುರುಗಡೆ ಸೇಡಂ ಕಡೆಯಿಂದ ಡಿಸಿಎಮ್ ವಾಹನ ನಂಬರ್ ಎಮ್.ಹೆಚ್-25 ಯು-1246 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟರ್ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಗಾಯಾಳು ವೆಂಕಟೇಶ ಇತನಿಗೆ ತಲೆಗೆ ಹಾಗೂ ಕಾಲುಗಳಿಗೆ ಭಾರಿ ರಕ್ತ ಹಾಗೂ ಗುಪ್ತಗಾಯಗಳಾಗಿದ್ದು ಶ್ರೀಕಾಂತ ಇತನಿಗೆ ಹಣೆಗೆ ಹಾಗೂ ಬಲಬುಜಕ್ಕೆ, ಮತ್ತು ಬೆನ್ನಿಗೆ ಬಾರಿ ಪ್ರಮಾಣದ ತರಚಿದ ರಕ್ತಗಾಯವಾಗಿದ್ದು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದಾಗ ಶ್ರೀಕಾಂತ ಇತನು ಮದ್ಯಾನ 01-31 ಗಂಟೆ ಸುಮಾರಿಗೆ ಉಪಚಾರ ಪಲಿಸದೆ ಮೃತಪಟ್ಟಿರುತ್ತಾನೆ. ಅಂತಾ ಫಿರ್ಯಾದಿ ಬಸಮ್ಮ ಗಂಡ ಸಿದ್ದಣ್ಣಾ ವಡ್ಡರ ಸಾ: ಅಡಕಿ ಗ್ರಾಮ ಇವರು ನೀಡಿದ ದೂರಿನ ಸಾರಾಂಶದ ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ರಸ್ತೆ ಅಪಘಾತ ಪ್ರಕರಣ ಮರಣಾಂತಿಕ:-

ಅಫಜಲಪೂರ ಪೊಲೀಸ ಠಾಣೆ 

ದಿನಾಂಕ: 10-09-2020 ರಂದು 1-15 ಪಿಎಮ್ ಕ್ಕೆ ಶ್ರೀ ರಾಚಯ್ಯಾ ತಂದೆ ಗಂಗಯ್ಯಾ ಮಠ ಸಾ|| ಅಫಜಲಪೂರ ಇವರು ಠಾಣೆಗೆ ಫಿರ್ಯಾದಿ ನೀಡಿದ ಸಾರಾಂಶವೆನೆಂದರೆ ದಿನಾಂಕ 10-09-2020 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಹೈದ್ರಾದಲ್ಲಿ ಮೃತಪಟ್ಟಿದ್ದ ನನ್ನ ವಾಹನ ಚಾಲಕನಾದ ಶರಣಪ್ಪ ಕಡಬಗಾಂವ ಈತನ ಶವ ಸಂಸ್ಕಾರಕ್ಕೆ ನಾನು ಮತ್ತು ಮಲ್ಲಿನಾಥ ಕೋಳಕೂರ ಒಂದು ಮೋಟರ ಸೈಕಲ ಮೇಲೆ, ಹಾಗೂ ಸಂತೋಷ ಅಂದೋಡಗಿ ಈತನು ತನ್ನ ಮೋಟರ ಸೈಕಲ ನಂ ಕೆಎ-32 ಇಟಿ-8714 ನೇದ್ದರ ಮೇಲೆ ಅಫಜಲಪೂರದಿಂದ ಹೈದ್ರಾಕ್ಕೆ ಹೋಗಿ, ಹೈದ್ರಾದಲ್ಲಿ ಅಂತಿಮ ಶವ ಸಂಸ್ಕಾರ ಮುಗಿಸಿಕೊಂಡು, ಮರಳಿ  ಮದ್ಯಾಹ್ನ 12:15 ಗಂಟೆ ಸುಮಾರಿಗೆ ಕರಜಗಿ – ಅಫಜಲಪೂರ ರೋಡಿಗೆ ಡಿಗ್ಗಿ ಕ್ರಾಸ್ ಹತ್ತಿರ ಬರುತ್ತಿದ್ದಾಗ, ನಮ್ಮ ಮುಂದೆ ಮೋಟರ ಸೈಕಲ ಚಾಲಾಯಿಸುತ್ತಿದ್ದ ಸಂತೋಷ ತಂದೆ ಶಾಂತಪ್ಪ ಅಂದೋಡಗಿ ಈತನ ಮೋಟರ ಸೈಕಲಗೆ, ಎದುರುಗಡೆಯಿಂದ ಬರುತ್ತಿದ್ದ ಮೊಟರ ಸೈಕಲ ನಂ ಕೆಎ-32 ಇವಿ-8562 ನೇದ್ದರ ಚಾಲಕ ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ಸಂತೋಷನ ಮೋಟರ ಸೈಕಲ ಬಂಪರಗೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿದ್ದರಿಂದ, ಸಂತೋಷನು ಮೋಟರ ಸೈಕಲ ಸಮೇತ ರೋಡಿನ ಪಕ್ಕದ ತಗ್ಗಿನಲ್ಲಿ ಮೋಟರ ಸೈಕಲ ಸಮೇತ ಬಿದ್ದನು. ಅಫಘಾತ ಪಡಿಸಿದ ಅಫಜಲಪೂರದ ಶಂಕರ ತಂದೆ ಮಲ್ಲಿಕಾರ್ಜುನ ಕೋರಳ್ಳಿ ಎಂಬಾತನಿದ್ದು, ಅವನಿಗೂ ಸಣ್ಣ ಪುಟ್ಟ ಗಾಯಗಳು ಆಗಿದ್ದವು, ಸಂತೋಷನ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಾಗಾಯವಾಗಿ ಪ್ರಜ್ಞಾ ಹೀನನಾಗಿದ್ದನು. ನಂತರ ನಾನು ಮತ್ತು ನನ್ನ ಜೊತೆಗೆ ಇದ್ದ ಮಲ್ಲಿನಾಥ ಕೋರಳ್ಳಿ ಇಬ್ಬರು ರೋಡಿಗೆ ಬರುತ್ತಿದ್ದ ಒಂದು ಖಾಸಗಿ ವಾಹನವನ್ನು ನಿಲ್ಲಿಸಿ, ಸದರಿ ವಾಹನದಲ್ಲಿ ಸಂತೋಷನನ್ನು ಮತ್ತು ಶಂಕರನನ್ನು ಹಾಕಿಕೊಂಡು ಅಫಜಲಪೂರಕ್ಕೆ ಕರೆದುಕೊಂಡು ಬರುತ್ತಿದ್ದಾಗ, ಸಂತೋಷನು ಮದ್ಯಾಹ್ನ 12:40 ಗಂಟೆ ಸುಮಾರಿಗೆ ಮಾರ್ಗ ಮದ್ಯ ಸೋನ್ನ ಕ್ರಾಸ ಹತ್ತಿರ ಮೃತ ಪಟ್ಟಿರುತ್ತಾನೆ.  ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

10 September 2020

KALABURAGI DISTRICT CRIME REPORTED

 ಅಕ್ರಮ ಮರಳು ಸಂಗ್ರಹಣೆ :-

ಅಫಜಲಪೂರ ಪೊಲೀಸ ಠಾಣೆ 

            ದಿನಾಂಕ 09-09-2020 ರಂದು 5:45 ಪಿ.ಎಮ್ ಕ್ಕೆ ಶ್ರೀ ಆನಂದ ತಂದೆ ಬಾಪು ನರಳೆ ಕಂದಾಯ ನಿರೀಕ್ಷಕರು ಕರಜಗಿ ರವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ಫೀರ್ಯಾದಿ ಮತ್ತು ಪಂಚನಾಮೆಯ ಹಾಜರುಪಡೆಸಿದ್ದು ಸದರಿ ದೂರಿನ ಸಾರಾಶವೇನೆಂದರೆ ದಿನಾಂಕ: 09-09-2020 ರಂದು ಮದ್ಯಾಹ್ನ 1:00 ಗಂಟೆಗೆ ಮಾನ್ಯ ಯಲ್ಲಪ್ಪ ಸುಬೇದಾರ ತಹಸಿಲ್ದಾರರು ನನಗೆ ಮತ್ತು ಉಡಚಾಣ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾದ ಶ್ರೀಶೈಲ ನಂದಿಕೋಲ, ಹಾಗೂ ಗ್ರಾಮ ಸಹಾಯಕರಾದ ನಾಗಪ್ಪ ತಂದೆ ಶಂಕ್ರೆಪ್ಪ ತಳವಾರ ಹಾಗೂ ಅಫಜಲಪೂರ ಪೊಲೀಸ್ ಠಾಣೆಯ ಶ್ರೀ ಸಂತೋಷ ತಟ್ಟೇಪಳ್ಳಿ ಪಿ.ಎಸ್.ಐ ಎಲ್ಲರನ್ನು ತಹಸೀಲ್ ಕಾರ್ಯಾಲಯಕ್ಕೆ ಕರೆಯಿಸಿ ಉಡಚಾಣ ಗ್ರಾಮದ ಸಿಮಾಂತರ ಹೊಲಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಂಗ್ರಹ ಮಾಡಿರುತ್ತಾರೆ ಎಂಬ ಭಾತ್ಮಿ ಮೇರೆಗೆ ಅಕ್ರಮ ಮರಳು ಸಾಗಾಣಿಕೆ ಮತ್ತು ಸಂಗ್ರಹ ತಡೆಗಟ್ಟುವ ಸಂಬಂಧ ಒಂದು ತಂಡ ರಚನೆ ಮಾಡಿ ಉಡಚಾಣ ಗ್ರಾಮಕ್ಕೆ ಹೋಗಿ ಮರಳು ತಪಾಸಣೆ ಮಾಡುತ್ತಿರುವಾಗ ಉಡಚಾಣ ಸಿಮಾಂತರದ ಹೊಲ ಸರ್ವೆ ನಂಬರ 16/3 ನೇದ್ದಕ್ಕೆ 2:00 ಪಿ.ಎಮ್‍ ಕ್ಕೆ ಹೋಗಿ ನೋಡಲಾಗಿ ಸದರಿ ಹೊಲದಲ್ಲಿ ಸುಮಾರು 40-50 ಟಿಪ್ಪರ ಟ್ರೀಪನಷ್ಟು ಮರಳು ಸಂಗ್ರಹಿಸಿದ್ದು ಅದರ ಅಂದಾಜು ಕಿಮ್ಮತ್ತು 4 ಲಕ್ಷ ರೂಪಾಯಿಗಳು ಆಗಬುಹುದು. ಸದರಿ ಮರಳನ್ನು ಮಾನ್ಯ ತಹಸಿಲ್ದಾರ ಸಾಹೇಬರ ಮೌಖಿಕ ಆದೇಶದ ಮೇರೆಗೆ ಪಂಚರ ಸಮಕ್ಷಮ ಸದರಿ ಮರಳನ್ನು ಜಪ್ತಿ ಪಡಿಸಿಕೊಂಡಿದ್ದು ಮರಳನ್ನು ಪಿಡಬ್ಲೂಡಿ ಇಲಾಖೆ ಅಫಜಲಪೂರಕ್ಕೆ ಹಸ್ತಾಂತರಿಸಲಾಗಿದೆ. ಕಾರಣ ಉಡಚಾಣ ಸಿಮಾಂತರ ಹೊಲ ಸರ್ವೆ ನಂಬರ 16/3 ಜಮೀನು ಪಟ್ಟೆದಾರರು ಗುಂಡಾಬಾಯಿ ಗಂಡ ಶಿವಶರಣಪ್ಪ ಬಿರಾದಾರ ಸಾ|| ಉಡಚಾಣ ಇದ್ದು. ಸದರಿ ಪಟ್ಟೇದಾರರು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಂಗ್ರಹಿಸಿರುವದರಿಂದ,  ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಠಾಣೆಯ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ ಸೈಕಲ ಕಳ್ಳತನ:-

ರೇವೂರ ಪೊಲೀಸ ಠಾಣೆ 

       ದಿನಾಂಕ:09/09/2020 ರಂದು 4.30 ಪಿಎಮ್ ಕ್ಕೆ ಫೀರ್ಯಾದಿದಾರನಾದ ಶ್ರೀ ಜಾಕೀರ ತಂದೆ ರಾಜಾಸಾಬ ಚೌಧರಿ ಸಾ||ಸ್ಟೇಷನ ಗಾಣಗಾಪೂರ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಸಾರಂಶವೆಂದರೆ  ದಿನಾಂಕ 06/09/2020 ರಂದು ನಾನು ಹೊರಗಡೆಯಿಂದ ನಮ್ಮ ಮನೆಗೆ ರಾತ್ರಿ 9.30 ಗಂಟೆಗೆ ನನ್ನ ಮೋಟಾರ್ ಸೈಕಲ್ ಮೇಲೆ ಬಂದು ಮೋಟಾರ್ ಸೈಕಲ ನಮ್ಮ ಮನೆಯ ಮುಂದೆ ಹ್ಯಾಂಡ್ ಲಾಕ್ ಹಾಕಿ ನಿಲ್ಲಿಸಿ ಮನೆಯಲ್ಲಿ ಊಟ ಮಾಡಿ 10.00 ಪಿಎಮ್ ಸುಮಾರಿಗೆ ಮನೆಯಿಂದ ಹೊರಗೆ ಬಂದಾಗ ನಾನು ನಿಲ್ಲಿಸಿದ ಜಾಗದಲ್ಲಿ ನನ್ನ ಮೋಟಾರ್ ಸೈಕಲ್ ಇರಲಿಲ್ಲ ನಾನು ಗಾಬರಿಯಾಗಿ ಮನೆಯಲಿದ್ದ ನಮ್ಮ ತಂದೆಯಾದ ರಾಜಾಸಾಬ ಹಾಗು ನನ್ನ ಹೆಂಡತಿಯಾದ ಅಲೀಮಾ ಬೇಗಂ ರವರಿಗೆ  ಹೇಳಿದಾಗ ನಾವು ಮನೆಯಲ್ಲಿರುತ್ತೇವೆ ನೋಡಿಲ್ಲಾ ಅಂತ ತಿಳಿಸಿದ ಬಳಿಕ ನಾನು ರಾತ್ರಿ ಸಮಯದಲ್ಲಿ ನಮ್ಮ ಗ್ರಾಮದಲ್ಲಿ ಹುಡುಕಾಡಿದರು ನನ್ನ ಮೋಟಾರ್ ಸೈಕಲ್ ಕಾಣಲಿಲ್ಲ.   ಕಾರಣ ದಿನಾಂಕ 06/09/2020 ರಂದು 9.30 ಪಿಎಮ್ ದಿಂದ 10.00 ಪಿಎಮ್ ಮದ್ಯದ ಅವದಿಯಲ್ಲಿ ನಮ್ಮ ಮನೆಯ ಮುಂದೆ ನಿಲ್ಲಿಸಿದ ನನ್ನ ಹೆಸರಿನಲ್ಲಿರುವ ಹಿರೋ ಸ್ಟ್ಯಾಂಡರ ಪ್ಲಸ್ ಮೋಟಾರ್ ಸೈಕಲ KA-32 EQ-4748 4748 Engine No HA10AGHHH25116 Chassis No MBLHAR076HHH24535 ಅ.ಕಿ 35000/-ರೂಪಾಯಿ  ನೇದ್ದನ್ನು ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ .ತಾವೂ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ರೇವೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

 ಮಟಕಾ ಜೂಜಾಟ:-

ಶಹಾಬಾದ ನಗರ ಪೊಲೀಸ ಠಾಣೆ 

          ದಿನಾಂಕ 09/09/2020 ರಂದು 5-15 ಪಿ ಎಮ್ ಕ್ಕೆ ಶ್ರೀ ರಮೇಶ ಛಾಯಾಗೋಳ ಪಿ ಐ ಡಿ ಸಿ ಐ ಬಿ ಘಟಕ ಕಲಬುರಗಿ ರವರು ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಅರೋಪಿ ಹಾಗೂ ಮುದ್ದೆ ಮಾಲುನೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ   ದಿನಾಂಕಃ 09/09/2020  ರಂದು ಮದ್ಯಾಹ್ನ 1-00 ಪಿ ಎಮ್ ಕ್ಕೆ  ಖಚಿತ ಬಾತ್ಮಿ ಬಂದಿದ್ದೇನೆಂದರೆ ದೇವನ ತೆಗನೂರ ಗ್ರಾಮದ ಬಸ ನಿಲ್ದಾಣದ ಹತ್ತಿರ  ಒಬ್ಬ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಮ್ಮ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಶಹಾಬಾದ ಪೊಲೀಸ ಠಾಣೆಗೆ ಬಂದು ಪಂಚ ಜನರೊಂದಿಗೆ ಸರಕಾರಿ ವಾಹನದಲ್ಲಿ ಠಾಣೆಯಿಂದ 3-00 ಪಿ.ಎಂ ಕ್ಕೆ ಹೊರಟು ದೇವನ ತೆಗನೂರ ಗ್ರಾಮಕ್ಕೆ  ಹೋಗಿ ಬಸ ನಿಲ್ದಾಣದ ಹತ್ತಿರ  ನಿಂತು ನೋಡಲಾಗಿ ಅಲ್ಲಿ ಬಸ ನಿಲ್ದಾಣದಲ್ಲಿರುವ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರೊಂದಿಗೆ ದಾಳಿ ಮಾಡಿ ಮಟಕಾ ಬರೆದುಕೊಳ್ಳುತಿದ್ದ ಒಬ್ಬ ಮನುಷ್ಯನಿಗೆ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಲ್ಲಿಕಾರ್ಜುನ ತಂದೆ ಶಿವಪ್ಪ ಜಮಾದಾರ ವಯಾ: 65 ವರ್ಷ ಜಾ: ಕಬ್ಬಲಿಗಾ ಸಾ: ದೇವನ ತೆಗೆನೂರ  ಅಂತಾ ತಿಳಿಸಿದನು  ಅವನಿಗೆ  ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ  4800-00 ರೂಪಾಯಿ  ಮತ್ತು ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಪೆನ್ನು ಹಾಗೂ ಒಂದು ಮೊಬೈಲ ಪೋನ ಅ.ಕಿ 00-00  ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಕಾರಣ ಸದರಿ ಆರೋಪಿ ವಿರುದ್ದ ಸೂಕ್ತ ಕ್ರಮ ಜರುಗಿಸಲು ಜ್ಞಾಪನ ಪತ್ರ ನೀಡಿದ ಸಾರಾಂಶದ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.