POLICE BHAVAN KALABURAGI

POLICE BHAVAN KALABURAGI

10 September 2020

KALABURAGI DISTRICT CRIME REPORTED

 ಅಕ್ರಮ ಮರಳು ಸಂಗ್ರಹಣೆ :-

ಅಫಜಲಪೂರ ಪೊಲೀಸ ಠಾಣೆ 

            ದಿನಾಂಕ 09-09-2020 ರಂದು 5:45 ಪಿ.ಎಮ್ ಕ್ಕೆ ಶ್ರೀ ಆನಂದ ತಂದೆ ಬಾಪು ನರಳೆ ಕಂದಾಯ ನಿರೀಕ್ಷಕರು ಕರಜಗಿ ರವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ಫೀರ್ಯಾದಿ ಮತ್ತು ಪಂಚನಾಮೆಯ ಹಾಜರುಪಡೆಸಿದ್ದು ಸದರಿ ದೂರಿನ ಸಾರಾಶವೇನೆಂದರೆ ದಿನಾಂಕ: 09-09-2020 ರಂದು ಮದ್ಯಾಹ್ನ 1:00 ಗಂಟೆಗೆ ಮಾನ್ಯ ಯಲ್ಲಪ್ಪ ಸುಬೇದಾರ ತಹಸಿಲ್ದಾರರು ನನಗೆ ಮತ್ತು ಉಡಚಾಣ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾದ ಶ್ರೀಶೈಲ ನಂದಿಕೋಲ, ಹಾಗೂ ಗ್ರಾಮ ಸಹಾಯಕರಾದ ನಾಗಪ್ಪ ತಂದೆ ಶಂಕ್ರೆಪ್ಪ ತಳವಾರ ಹಾಗೂ ಅಫಜಲಪೂರ ಪೊಲೀಸ್ ಠಾಣೆಯ ಶ್ರೀ ಸಂತೋಷ ತಟ್ಟೇಪಳ್ಳಿ ಪಿ.ಎಸ್.ಐ ಎಲ್ಲರನ್ನು ತಹಸೀಲ್ ಕಾರ್ಯಾಲಯಕ್ಕೆ ಕರೆಯಿಸಿ ಉಡಚಾಣ ಗ್ರಾಮದ ಸಿಮಾಂತರ ಹೊಲಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಂಗ್ರಹ ಮಾಡಿರುತ್ತಾರೆ ಎಂಬ ಭಾತ್ಮಿ ಮೇರೆಗೆ ಅಕ್ರಮ ಮರಳು ಸಾಗಾಣಿಕೆ ಮತ್ತು ಸಂಗ್ರಹ ತಡೆಗಟ್ಟುವ ಸಂಬಂಧ ಒಂದು ತಂಡ ರಚನೆ ಮಾಡಿ ಉಡಚಾಣ ಗ್ರಾಮಕ್ಕೆ ಹೋಗಿ ಮರಳು ತಪಾಸಣೆ ಮಾಡುತ್ತಿರುವಾಗ ಉಡಚಾಣ ಸಿಮಾಂತರದ ಹೊಲ ಸರ್ವೆ ನಂಬರ 16/3 ನೇದ್ದಕ್ಕೆ 2:00 ಪಿ.ಎಮ್‍ ಕ್ಕೆ ಹೋಗಿ ನೋಡಲಾಗಿ ಸದರಿ ಹೊಲದಲ್ಲಿ ಸುಮಾರು 40-50 ಟಿಪ್ಪರ ಟ್ರೀಪನಷ್ಟು ಮರಳು ಸಂಗ್ರಹಿಸಿದ್ದು ಅದರ ಅಂದಾಜು ಕಿಮ್ಮತ್ತು 4 ಲಕ್ಷ ರೂಪಾಯಿಗಳು ಆಗಬುಹುದು. ಸದರಿ ಮರಳನ್ನು ಮಾನ್ಯ ತಹಸಿಲ್ದಾರ ಸಾಹೇಬರ ಮೌಖಿಕ ಆದೇಶದ ಮೇರೆಗೆ ಪಂಚರ ಸಮಕ್ಷಮ ಸದರಿ ಮರಳನ್ನು ಜಪ್ತಿ ಪಡಿಸಿಕೊಂಡಿದ್ದು ಮರಳನ್ನು ಪಿಡಬ್ಲೂಡಿ ಇಲಾಖೆ ಅಫಜಲಪೂರಕ್ಕೆ ಹಸ್ತಾಂತರಿಸಲಾಗಿದೆ. ಕಾರಣ ಉಡಚಾಣ ಸಿಮಾಂತರ ಹೊಲ ಸರ್ವೆ ನಂಬರ 16/3 ಜಮೀನು ಪಟ್ಟೆದಾರರು ಗುಂಡಾಬಾಯಿ ಗಂಡ ಶಿವಶರಣಪ್ಪ ಬಿರಾದಾರ ಸಾ|| ಉಡಚಾಣ ಇದ್ದು. ಸದರಿ ಪಟ್ಟೇದಾರರು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಂಗ್ರಹಿಸಿರುವದರಿಂದ,  ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಠಾಣೆಯ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ ಸೈಕಲ ಕಳ್ಳತನ:-

ರೇವೂರ ಪೊಲೀಸ ಠಾಣೆ 

       ದಿನಾಂಕ:09/09/2020 ರಂದು 4.30 ಪಿಎಮ್ ಕ್ಕೆ ಫೀರ್ಯಾದಿದಾರನಾದ ಶ್ರೀ ಜಾಕೀರ ತಂದೆ ರಾಜಾಸಾಬ ಚೌಧರಿ ಸಾ||ಸ್ಟೇಷನ ಗಾಣಗಾಪೂರ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಸಾರಂಶವೆಂದರೆ  ದಿನಾಂಕ 06/09/2020 ರಂದು ನಾನು ಹೊರಗಡೆಯಿಂದ ನಮ್ಮ ಮನೆಗೆ ರಾತ್ರಿ 9.30 ಗಂಟೆಗೆ ನನ್ನ ಮೋಟಾರ್ ಸೈಕಲ್ ಮೇಲೆ ಬಂದು ಮೋಟಾರ್ ಸೈಕಲ ನಮ್ಮ ಮನೆಯ ಮುಂದೆ ಹ್ಯಾಂಡ್ ಲಾಕ್ ಹಾಕಿ ನಿಲ್ಲಿಸಿ ಮನೆಯಲ್ಲಿ ಊಟ ಮಾಡಿ 10.00 ಪಿಎಮ್ ಸುಮಾರಿಗೆ ಮನೆಯಿಂದ ಹೊರಗೆ ಬಂದಾಗ ನಾನು ನಿಲ್ಲಿಸಿದ ಜಾಗದಲ್ಲಿ ನನ್ನ ಮೋಟಾರ್ ಸೈಕಲ್ ಇರಲಿಲ್ಲ ನಾನು ಗಾಬರಿಯಾಗಿ ಮನೆಯಲಿದ್ದ ನಮ್ಮ ತಂದೆಯಾದ ರಾಜಾಸಾಬ ಹಾಗು ನನ್ನ ಹೆಂಡತಿಯಾದ ಅಲೀಮಾ ಬೇಗಂ ರವರಿಗೆ  ಹೇಳಿದಾಗ ನಾವು ಮನೆಯಲ್ಲಿರುತ್ತೇವೆ ನೋಡಿಲ್ಲಾ ಅಂತ ತಿಳಿಸಿದ ಬಳಿಕ ನಾನು ರಾತ್ರಿ ಸಮಯದಲ್ಲಿ ನಮ್ಮ ಗ್ರಾಮದಲ್ಲಿ ಹುಡುಕಾಡಿದರು ನನ್ನ ಮೋಟಾರ್ ಸೈಕಲ್ ಕಾಣಲಿಲ್ಲ.   ಕಾರಣ ದಿನಾಂಕ 06/09/2020 ರಂದು 9.30 ಪಿಎಮ್ ದಿಂದ 10.00 ಪಿಎಮ್ ಮದ್ಯದ ಅವದಿಯಲ್ಲಿ ನಮ್ಮ ಮನೆಯ ಮುಂದೆ ನಿಲ್ಲಿಸಿದ ನನ್ನ ಹೆಸರಿನಲ್ಲಿರುವ ಹಿರೋ ಸ್ಟ್ಯಾಂಡರ ಪ್ಲಸ್ ಮೋಟಾರ್ ಸೈಕಲ KA-32 EQ-4748 4748 Engine No HA10AGHHH25116 Chassis No MBLHAR076HHH24535 ಅ.ಕಿ 35000/-ರೂಪಾಯಿ  ನೇದ್ದನ್ನು ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ .ತಾವೂ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ರೇವೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

 ಮಟಕಾ ಜೂಜಾಟ:-

ಶಹಾಬಾದ ನಗರ ಪೊಲೀಸ ಠಾಣೆ 

          ದಿನಾಂಕ 09/09/2020 ರಂದು 5-15 ಪಿ ಎಮ್ ಕ್ಕೆ ಶ್ರೀ ರಮೇಶ ಛಾಯಾಗೋಳ ಪಿ ಐ ಡಿ ಸಿ ಐ ಬಿ ಘಟಕ ಕಲಬುರಗಿ ರವರು ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಅರೋಪಿ ಹಾಗೂ ಮುದ್ದೆ ಮಾಲುನೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ   ದಿನಾಂಕಃ 09/09/2020  ರಂದು ಮದ್ಯಾಹ್ನ 1-00 ಪಿ ಎಮ್ ಕ್ಕೆ  ಖಚಿತ ಬಾತ್ಮಿ ಬಂದಿದ್ದೇನೆಂದರೆ ದೇವನ ತೆಗನೂರ ಗ್ರಾಮದ ಬಸ ನಿಲ್ದಾಣದ ಹತ್ತಿರ  ಒಬ್ಬ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಮ್ಮ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಶಹಾಬಾದ ಪೊಲೀಸ ಠಾಣೆಗೆ ಬಂದು ಪಂಚ ಜನರೊಂದಿಗೆ ಸರಕಾರಿ ವಾಹನದಲ್ಲಿ ಠಾಣೆಯಿಂದ 3-00 ಪಿ.ಎಂ ಕ್ಕೆ ಹೊರಟು ದೇವನ ತೆಗನೂರ ಗ್ರಾಮಕ್ಕೆ  ಹೋಗಿ ಬಸ ನಿಲ್ದಾಣದ ಹತ್ತಿರ  ನಿಂತು ನೋಡಲಾಗಿ ಅಲ್ಲಿ ಬಸ ನಿಲ್ದಾಣದಲ್ಲಿರುವ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರೊಂದಿಗೆ ದಾಳಿ ಮಾಡಿ ಮಟಕಾ ಬರೆದುಕೊಳ್ಳುತಿದ್ದ ಒಬ್ಬ ಮನುಷ್ಯನಿಗೆ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಲ್ಲಿಕಾರ್ಜುನ ತಂದೆ ಶಿವಪ್ಪ ಜಮಾದಾರ ವಯಾ: 65 ವರ್ಷ ಜಾ: ಕಬ್ಬಲಿಗಾ ಸಾ: ದೇವನ ತೆಗೆನೂರ  ಅಂತಾ ತಿಳಿಸಿದನು  ಅವನಿಗೆ  ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ  4800-00 ರೂಪಾಯಿ  ಮತ್ತು ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಪೆನ್ನು ಹಾಗೂ ಒಂದು ಮೊಬೈಲ ಪೋನ ಅ.ಕಿ 00-00  ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಕಾರಣ ಸದರಿ ಆರೋಪಿ ವಿರುದ್ದ ಸೂಕ್ತ ಕ್ರಮ ಜರುಗಿಸಲು ಜ್ಞಾಪನ ಪತ್ರ ನೀಡಿದ ಸಾರಾಂಶದ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

KALABURAGI DISTRICT PRESS NOTE

¥ÀwæPÁ ¥ÀæPÀluÉ

 ಕಲಬುರಗಿ ಜಿಲ್ಲಾ ಪೊಲೀಸರ ಕಾರ್ಯಚರಣೆ :

ಮನೆ ಕನ್ನ ಕಳವು ಮತ್ತು ಮೋಟಾರ ಸೈಕಲ  ಕಳ್ಳನ ಬಂಧನ  ಅಂದಾಜು 11 ಲಕ್ಷ ರೂ ಮೌಲ್ಯದ, ಬಂಗಾರದ ಸಾಮಾನುಗಳು , ಮೋಟಾರ್ ಸೈಕಲಗಳು,  ಹಾಗೂ ನಗದು ಹಣ ಜಪ್ತಿ

ಕಲಬುರಗಿ ಜಿಲ್ಲೆಯಲ್ಲಿ ಉಪ ವಿಭಾಗವಾರು ಸ್ವತ್ತಿನ ಅಪರಾದ ಪ್ರಕರಣಗಳ ಪತ್ತೆಗಾಗಿ  ವಿಶೇಷ ತಂಡವನ್ನು ರಚಿಸಿದ್ದು ಶಹಾಬಾದ ಉಪ ವಿಭಾಗದ ತಂಡವು  ದಿನಾಂಕ: 08/09/2020 ರಂದು ಪತ್ತೆ ಕಾರ್ಯದಲ್ಲಿ ಇದ್ದಾಗ ಶಹಾಬಾದದ ವಾಡಿ ಕ್ರಾಸ ಹತ್ತಿರ ಒಬ್ಬ ಸಂಶಯಾಸ್ಪದ ವ್ಯಕ್ತಿಗೆ ಹಿಡಿದು ಅವನಿಗೆ ವಿಚಾರಿಸಲಾಗಿ ಅರೋಪಿತನು ತನ್ನ ಹೆಸರು  ಶಿವಪ್ಪ @ ಶಿವಾ ತಂದೆ ಮಲ್ಲಿಕಾರ್ಜುನ ಟಣಕೇದಾರ ವಯಾ: 28 ವರ್ಷ ಉ: ಡ್ರೈವರ ಕೆಲಸ ಜಾ: ಬೇಡರ ಸಾ: ಬಿರಾಳ (ಕೆ) ತಾ: ಜೇವರ್ಗಿ ಹಾ:ವ: ಹಸನಾಪೂರ ತಾ: ಶೋರಪೂರ ಜಿ: ಯಾದಗೀರ ಅಂತಾ ತಿಳಿಸಿದ್ದು ಅವನಿಗೆ ವಿಚಾರಣೆಗೆ ಒಳಪಡಿಸಿದಾಗ ಇತನು  ಶಹಾಬಾದ ನಗರ ಠಾಣೆಯ ವ್ಯಾಪ್ತಿಯಲ್ಲಿ 03 ಸ್ವತ್ತಿನ ಪ್ರಕರಣಗಳಲ್ಲಿ , ಮತ್ತು   ವಾಡಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ  03 ಸ್ವತ್ತಿನ ಪ್ರಕರಣಗಳಲ್ಲಿ, ಯಾಡ್ರಾಮಿ  ಪೊಲೀಸ ಠಾಣೆಯ ವ್ಯಾಪ್ತಿಯ 01 ಪ್ರಕರಣದಲ್ಲಿ ಮತ್ತು ಶಹಾಪೂರ ಪಟ್ಟಣದಲ್ಲಿ 05 ಮೋಟಾರ ಸೈಕಲಗಳು  ತಾನು ಮತ್ತು  ಸಚೀನ ತಂದೆ ದೇವಿಂದ್ರಪ್ಪ ಸಾ: ಬಿರಾಳ (ಕೆ)  ಮತ್ತು ಮರಲಿಂಗ ತಂದೆ ದೇವಪ್ಪ ಸಾ: ಯರಗೋಳ ಹಾ:ವ: ಕುಂಬಾರಹಳ್ಳಿ  ರವರು ಕೂಡಿಕೊಂಡು  ಮೇಲೆ ನಮೂದಿಸಿದ ಪ್ರಕರಣಗಳಲ್ಲಿ ಕಳವು ಮಾಡಿದ ಬಗ್ಗೆ ಅರೋಪಿ ಶಿವಾ @ ಶಿವಪ್ಪ ಇತನು ಒಪ್ಪಿಕೊಂಡಿದ್ದು ಅರೋಪಿ ಶಿವಾ @ ಶಿವಪ್ಪ ಇತನಿಂದ  163 ಗ್ರಾಂ ಬಂಗಾರದ ಸಾಮಾನುಗಳು ಅ.ಕಿ 8,96500-00 ರೂ ಹಾಗೂ 05 ಮೋಟಾರ ಸೈಕಲಗಳು ಅ.ಕಿ 2,00000-00 ರೂ ಮತ್ತು 50 ಸಾವಿರ  ರೂಪಾಯಿ ನಗದು ಹಣ ಹೀಗೆ ಒಟ್ಟು ಸುಮಾರು 11 ಲಕ್ಷ ಕಿಮ್ಮತ್ತಿನ ಮಾಲು ಜಪ್ತಿ ಪಡಿಸಿಕೊಂಡಿದ್ದು ಶಹಾಬಾದ ಉಪ ವಿಭಾಗದ ತಂಡದಲ್ಲಿ ಶ್ರೀ ವಿ ಎನ್ ಪಾಟೀಲ ಡಿ ಎಸ್ ಪಿ ಶಹಾಬಾದ ಉಪ ವಿಭಾಗ , ಶ್ರೀ ಬಿ ಅಮರೇಶ  ಪಿಐ ಶಹಾಬಾದ ನಗರ ಪೊಲೀಸ ಠಾಣೆ , ಶ್ರೀ ಕೆ ಎಸ್ ಕಲ್ಲದೇವರ ಸಿಪಿ ಐ ಚಿತ್ತಾಪೂರ , ಶ್ರೀ ತಿರುಮಲೇಶ ಪಿ ಎಸ್ ಐ (ಕಾಸು) ಶಹಾಬಾದ ನಗರ ಪೊಲೀಸ ಠಾಣೆ ,  ಶ್ರೀಮತಿ ದಿವ್ಯಾ ಮಹಾದೇವ ಪಿ ಎಸ್ ಐ (ಅ.ವಿ) ವಾಡಿ ಪೊಲೀಸ ಠಾಣೆ , ಶ್ರೀಮತಿ ಯಲಮ್ಮ ಪಿ ಎಸ್ ಐ (ಅ.ವಿ) ಶಹಾಬಾದ ನಗರ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯವರಾದ ಶ್ರೀ ಗುಂಡಪ್ಪ , ಶ್ರೀ ನಾಗೇಂದ್ರ ತಳವಾರ , ಶ್ರೀ ಬಸವರಾಜ ಹಚ್ಚಡ , ಶ್ರೀ ಲಕ್ಷ್ಮಣ ಸಾವಳಗಿ , ಶ್ರೀ ಹಣಮಂತ್ರಾಯ , ಶ್ರೀ ಬಸವರಾಜ , ಶ್ರೀ ರಮಣಯ್ಯ  ತಂಡದಲ್ಲಿ ಇದ್ದರು  ಈ ಅರೋಪಿತನು ಹಗಲು ಕನ್ನ ಕಳವು ಮತ್ತು ರಾತ್ರಿ ಕನ್ನ ಕಳವು , ಮೋಟಾರ ಸೈಕಲ , ಕಳವು ಪ್ರಕರಣಗಳಲ್ಲಿ ಬಾಗಿಯಾಗಿದ್ದು ,ಅರೋಪಿತನಿಗೆ ಶಹಾಬಾದ ನಗರ ಪೊಲೀಸ ಠಾಣೆಯ ಪ್ರಕರಣಗಳಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.      

                                                                                             ಸಹಿ/-

                                                                               ಪೊಲೀಸ್ ಅಧೀಕ್ಷಕರು,

                                                                                     ಕಲಬುರಗಿ  ಜಿಲ್ಲೆ .

09 September 2020

KALABURAGI DISTRICT CRIME REPORTED

 ಮೋಟಾರ ಸೈಕಲ ಕಳ್ಳತನ:-

ಅಫಜಲಪೂರ ಪೊಲೀಸ ಠಾಣೆ 

     ದಿನಾಂಕ 08-09-2020 ರಂದು 9:00 ಎ.ಎಮ್ ಕ್ಕೆ ಫೀರ್ಯಾದಿ ಅಹ್ಮದ ತಂದ ಮಹೇಬೂಬಸಾಬ ಮನಿಯಾರ ಸಾ: ಅಫಜಲಪೂರ ಇವರು ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದ ಸಾರಾಂಶವೇನೆಂದರೆ, ನಾನು ಒಂದು ತಿಂಗಳ ಹಿಂದೆ ಹಿರೊ ಹೊಂಡಾ ಕಂಪನಿಯ ಮೋಟಾರ ಸೈಕಲ್ ನೊಂದಣಿ ಸಂಖ್ಯೆ ಸಿಟಿಜೆ-2387 ನೇದ್ದು ಖರೀದಿಸಿದ್ದು ಅದು ಇನ್ನು ನನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವುದಿಲ್ಲಾ ಹೀಗಿದ್ದು ದಿನಾಂಕ:01-09-2020 ರಂದು ಪ್ರತಿ ದಿನದಂತೆ ನಾನು ನಮ್ಮ ಮನೆಯ ಮುಂದೆ ರಾತ್ರಿ 11-00 ಸುಮಾರಿಗೆ ನನ್ನ ಮೋಟಾರ ಸೈಕಲನ್ನು ನಿಲ್ಲಿಸಿ ಮನೆಯಲ್ಲಿ ಮಲಗಿರುತ್ತೆನೆ ನಂತರ ನಾನು ದಿನಾಂಕ:02/09/2020 ರಂದು ಬೆಳಗಿನ ಜಾವ 5-30  ಸುಮಾರಿಗೆ ಎದ್ದು ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ಮೋಟಾರ ಸೈಕಲ ಇದ್ದಿರುವದಿಲ್ಲ ಆಗ ಈ ವಿಷಯವನ್ನು ನಾನು ನಮ್ಮ ಮನೆಯ ಪಕ್ಕದವರಾದ ರಹಿಮತ ತಂದೆ ಸರ್ವರ ಜಾಗಿದಾರ ರವರಿಗೆ ತಿಳಿಸಿ ನಾನು ಮತ್ತು ರಹಿಮತ ಇಬ್ಬರು ಕೂಡಿ ಅಫಜಲಪೂರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಸೋನ್ನ,ದೇವಣಗಾಂವ,ಮತ್ತು ಮಾತೋಳಿ ಹಾಗೂ ಮಲ್ಲಬಾದ ಗ್ರಾಮಗಳಿಗೆ ಮತ್ತು ಇತರೆ ಕಡೆ ಹೋಗಿ ಹುಡುಕಾಡಿದರು ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲ ಕಾರಣ ನಮ್ಮ ಮನೆಯ ಮುಂದೆ ನಿಲ್ಲಿಸಿದ ನನ್ನ ಮೋಟಾರ ಸೈಕಲ ನಂಬರ ಸಿಟಿಜೆ-2387 ಅ:ಕಿ: 18,000/- ರೂಪಾಯಿ ನೇದ್ದನ್ನು ದಿನಾಂಕ:01-09-2020 ರಂದು 11-00 ಪಿಎಮ್‍ ದಿಂದ ದಿನಾಂಕ:02/09/2020 ರಂದು 5-30 ಎಎಮ್‍ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಆದ್ದರಿಂದ ನನ್ನ ಮೋಟಾರ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ  ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ

ವಾರಸುದಾರರಿಲ್ಲದ ಕ್ಯಾಮರಾ & ಮೊಬೈಲಗಳು ಪತ್ತೆ :-

ಅಫಜಲಪೂರ ಪೊಲೀಸ ಠಾಣೆ 

           ಇಂದು ದಿ: 08-09-2020 ರಂದು 2:50 ಪಿ.ಎಮ್ ಕ್ಕೆ ಮಾನ್ಯ ಶ್ರೀ ಸಂತೋಷ ತಟ್ಟೆಪಳ್ಳಿ ಪಿ.ಎಸ್.ಐ ಸಾಹೇಬರು ಮುದ್ದೆ ಮಾಲು ಮತ್ತು ಆರೋಪಿತನನ್ನು ಹಾಜರುಪಡಿಸಿ ಜಪ್ತಿ ಪಂಚನಾಮೆ ಹಾಗೂ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 08-09-2020 ರಂದು ಮದ್ಯಾಹ್ನ 1:00 ಗಂಟೆಯಿಂದ ಪೊಲೀಸ್ ಜೀಪಿನಲ್ಲಿ ನಮ್ಮ ಠಾಣೆಯ ಸುರೇಶ ಹೆಚ್.ಸಿ-394, ಸಂತೋಷ ಹೆಚ್.ಸಿ-439, ಯಲಗೊಂಡ ಪಿಸಿ-743 ರವರನ್ನು ಸಂಗಡ ಕರೆದುಕೊಂಡು ಸ್ವತ್ತಿನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೆಟ್ರೊಲಿಂಗ ಮಾಡುತ್ತಾ 1:15 ಗಂಟೆ ಸುಮಾರಿಗೆ ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಮುಂದೆ ಪೊಲೀಸ್ ಜೀಪನ್ನು ನಿಲ್ಲಿಸಿ, ನಡೆದುಕೊಂಡು ಬಸ್ ನಿಲ್ದಾಣದ ಒಳಗೆ ಹೋದಾಗ, ಅಲ್ಲಿ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಒಂದು ಕಪ್ಪು ಬಣ್ಣದ ಬ್ಯಾಗನ್ನು ಹಿಡಿದುಕೊಂಡು ಸಂಶಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದನು, ಆಗ ನಾವು ಸದರಿಯವನನ್ನು ಹಿಡಿದು ವಿಚಾರ ಮಾಡಬೆಕೆಂದು ಹತ್ತಿರ ಹೋಗುತ್ತಿದ್ದಂತೆ, ಸದರಿ ವ್ಯೆಕ್ತಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡುತ್ತಿದ್ದನು, ಸದರಿಯವನ ಮೇಲೆ ನಮಗೆ ಸಂಶಯ ಬಂದು ಆಗ ನಾನು ಮತ್ತು ಸಿಬ್ಬಂದಿಯವರು ಸದರಿಯವನನ್ನು ಬೆನ್ನಟ್ಟಿ 1:20 ಪಿ ಎಮ್ ಕ್ಕೆ ಹಿಡಿದು ಹೆಸರು ವಿಳಾಸ ವಿಚಾರಿಸಿದಾಗ ತನ್ನ ಹೆಸರು ವಿಕಾಸ ತಂದೆ ಸಿದ್ದಾರಾಮ ಬಳೂರ್ಗಿ ವಯ|| 19 ವರ್ಷ ಜಾ|| ಗಾಣಿಗ ಉ|| ಹಮಾಲಿ ಕೆಲಸ ಸಾ|| ಲಿಂಬಿತೋಟ ಅಫಜಲಪೂರ ಅಂತಾ ತಿಳಿಸಿದನು. ಸದರಿಯವನ ಕೈಯಲ್ಲಿದ್ದ ಬ್ಯಾಗಿನ ಬಗ್ಗೆ ವಿಚಾರಿಸಲಾಗಿ ಸದರಿಯವನು ತಡವರಿಸುತ್ತಾ ಸದರಿ ಬ್ಯಾಗಿನಲ್ಲಿ ಕ್ಯಾಮಾರಗಳು ಮತ್ತು ಮೋಬೈಲ ಪೋನಗಳು ಇರುತ್ತವೆ ಎಂದು ತಿಳಿಸಿದನು, ಸದರಿಯವನಿಗೆ ಕ್ಯಾಮಾರ ಮತ್ತು ಮೋಬೈಲಗಳ ಬಗ್ಗೆ ಕೂಲಂಕುಶವಾಗಿ ವಿಚಾರಿಸಲು, ಕ್ಯಾಮಾರಗಳನ್ನು ಸುಮಾರು ಒಂದು ತಿಂಗಳ ಹಿಂದೆ ಅಫಜಲಫೂರ ಬಸ್ ನಿಲ್ದಾಣದ ಪಕ್ಕದಲ್ಲಿರುವ ಪೋಟೊ ಸ್ಟುಡಿಯೋದಲ್ಲಿ ಪೋಟೊ ತಗೆದುಕೊಳ್ಳುವ ನೆಪದಲ್ಲಿ ಹೋಗಿ, ಅವರಿಗೆ ಗೊತ್ತಾಗದ ಹಾಗೆ ಎರಡು ಕ್ಯಾಮಾರಗಳನ್ನು ಕಳ್ಳತನ ಮಾಡಿಕೊಂಡು ಬಂದಿರುತ್ತೇನೆ. ಹಾಗೂ ಅದೆ ದಿನ ಅಲ್ಲೆ ಪಕ್ಕದಲ್ಲಿರುವ ಒಂದು ಮೋಬೈಲ ಅಂಗಡಿಗೆ ಮೋಬೈಲ ಖರೀದಿಸುವ ನೇಪದಲ್ಲಿ ಹೋಗಿ 06 ಮೋಬೈಲ ಪೋನಗಳನ್ನು ಕಳ್ಳತನ ಮಾಡಿಕೊಂಡು ಬಂದಿರುತ್ತೇನೆ ಎಂದು ತಿಳಿಸಿದನು.  ನಂತರ ಪಂಚರ ಸಮಕ್ಷಮ ಸದರಿಯವನ ವಶದಲ್ಲಿದ್ದ ಬ್ಯಾಗನ್ನು ಚೆಕ್ ಮಾಡಲಾಗಿ, 4500 ಕಿಮ್ಮತ್ತಿನ 1) NIKON ಕಂಪನಿಯ 02 ಕ್ಯಾಮಾರಗಳು ಮತ್ತು 2) 30,000-00 ಕಿಮ್ಮತ್ತಿನ 6 ವಿವಿಧ ಕಂಪನಿಗಳ ಮೊಬೈಲಗಳು ಜಪ್ತಿ ಪಂಚನಾಮೆ ಮೂಲಕ ಜಪ್ತ ಮಾಡಿಕೊಂಡು, ಆರೋಪಿತನ ವಿರುದ್ದ ಕಾನೂನು ಕ್ರಮ ಕೈ ಕೊಳ್ಳಬೆಕೆಂದು ಸರ್ಕಾರಿ ತರ್ಫೆಯಾಗಿ ವರದಿಯ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ರಸ್ತೆ ಅಪಘಾತ ಪ್ರಕರಣ ಮರಣಾಂತಿಕ:-

ಮಹಾಗಾಂವ ಪೊಲೀಸ ಠಾಣೆ 

        ದಿನಾಂಕ: 08.09.2020 ರಂದು 7.15 ಎ.ಎಮ್.ಕ್ಕೆ ಜಿಜಿಹೆಚ್ ಆಸ್ಪತ್ರೆಯಲ್ಲಿ ಫಿರ್ಯಾದಿ  ಶ್ರೀಮತಿ ಸಾಬವ್ವ ಗಂಡ ರಾಣಪ್ಪ ಕಣ್ಣೂರ ವಯಾ: 55 ವರ್ಷ ಜಾತಿ: ವಡ್ಡರ ಉ: ಕೂಲಿ ಕೆಲಸ ಸಾ: ಚಂದ್ರ ನಗರ ಇವರು ಹೇಳಿಕೆ ನೀಡಿದ ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 07.09.2020 ಸಾಯಂಕಾಲ ನನ್ನ ಸೊಸೆಯಾದ ಶಾಂತಾಬಾಯಿ ಮತ್ತು ಅವಳ ಗಂಡನಾದ ಶಾಮರಾವ ಇಬ್ಬರು ಹುಬ್ಬಳಿಗೆ ಹೋಗುತ್ತೇವೆ ಅಂತಾ ನನಗೆ ಹೇಳಿದಾಗ ನಾನು ಕೂಡಾ ಅವರಿಗೆ ಊರಿಗೆ ಕಳಿಸಿಕೊಡಲು ಅವರ ಜೊತೆಗೆ ಮಹಾಗಾಂವ ಕ್ರಾಸ್ ವರೆಗೆ ಕಳುಹಿಸಲು ನಮ್ಮೂರ ಚಂದ್ರನಗರ ದಿಂದ ಹುಮನಾಬಾದ ಮಹಾಗಾಂವ – ಕಲಬುರಗಿ ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್.50) ಯಲ್ಲಿ ಬರುವ ಚಂದ್ರನಗರ ಕ್ರಾಸ್ ವರೆಗೆ ನಡೆದುಕೊಂಡು ಬಂದು ಮೇನ್ ರೋಡ್ ದಾಟಿ ಮಹಾಗಾಂವ ಕ್ರಾಸ್ ಕಡೆಗೆ ಹೋಗುವ ಸಲುವಾಗಿ ಆಟೋ ರೀಕ್ಷಾ ಬರುವ ದಾರಿ ಕಾಯುತ್ತಾ ಮೂರು ಜನರು ರಸ್ತೆ ಬದಿಯಲ್ಲಿ ನಿಂತಿರುವಾಗ ಸಾಯಂಕಾಲ 07.00 ಗಂಟೆ ಸುಮಾರಿಗೆ ಒಂದು ಮೋಟಾರ ಸೈಕಲ್ ಸವಾರನು ತನ್ನ ಹಿಂದೆ ಒಬ್ಬರಿಗೆ ಕೂಡಿಸಿಕೊಂಡು ಕಮಲಾಪೂರ ರೋಡ ಕಡೆಯಿಂದ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಮ್ಮ ಸ್ವಲ್ಪ ಮುಂದೆ ನಿಂತಿರುವ ಶಾಮರಾವ ನಾಗೂರ ಇವರಿಗೆ ಜೋರಾಗಿ ಡಿಕ್ಕಿ ಪಡಿಸಿ ಅವರು ಕೂಡಾ ಮೋಟಾರ ಸೈಕಲ್ ಸಮೇತ ರಸ್ತೆ ಬಲಕ್ಕೆ ಹೋಗಿ ಬಿದ್ದಿದ್ದರು ಶಾಮರಾವ ಈತನು ಪುಟಿದು ರೋಡ ಮೇಲೆ ಬಿದ್ದಿದ್ದನು ಅದನ್ನು ನೋಡಿದ ನಾನು ಮತ್ತು ನನ್ನ ಸೋದರ ಸೊಸೆ ಶಾಂತಾಬಾಯಿ ಹಾಗೂ ಅಲ್ಲಿಯೆ ಹೋಗುತ್ತಿದ್ದ ನಮ್ಮೂರಿನ ಪಂಡಿತ ತಂದೆ ಭೀಮಶ್ಯಾ, ಶ್ರೀ ಹಣಮಂತ ತಂದೆ ತುಕರಾಮ ದಂಡಗೋಳಕರ್ ಎಲ್ಲರೂ ಕೂಡಿ ಶಾಮರಾವ ನಾಗೂರ ಈತನಿಗೆ ಎಬ್ಬಿಸಿ ರಸ್ತೆ ಬದಿಯಲ್ಲಿ ಮಲಗಿಸಿ ಹೋಗಿ ಬರುವ ವಾಹನಗಳ ದೀಪದ ಬೆಳಕಿನಲ್ಲಿ ನೋಡಲು ಸದರ ಘಟನೆಯಿಂದ ಶಾಮರಾವ ಈತನ ತಲೆಗ ಒಳಪೆಟ್ಟಾಗಿ ಮೂಗಿನಿಂದ ಎಡಕಿವಿಯಿಂದ ರಕ್ತ ಸ್ರಾವ ಆಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಆತನ ಎಡಗಾಲ ಮೊಳಕಾಲ ಕೆಳಗೆ ಭಾರಿ ಒಳ ಪೆಟ್ಟು ಆಗಿತ್ತು. ಶ್ಯಾಮರಾವ ಈತನಿಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ್ ಸವಾರನಿಗೆ ನೋಡಲು ಆತನ ಬಲಗೈ ಭುಜಕ್ಕೆ ಭಾರಿ ಒಳಪಟ್ಟಾಗಿತ್ತು ಆತನ ಹೆಸರು ರವಿ ತಂದೆ ಶರಣಬಸಪ್ಪ ಜಿಡಗಿ ಅಂತಾ ಗೊತ್ತಾಯಿತು. ಆತನ ಮೋಟಾರ ಸೈಕಲ್ ಹಿಂದೆ ಕುಳಿತ ಬಂದಿದವನಿಗೆ ನೋಡಲು ಆತನ ಕಣ್ಣಿಗೆ ಗಾಯವಾಗಿತ್ತು, ಆತನ ಹೆಸರು ರವಿ ತಂದೆ ಶರಣಬಸಪ್ಪ ಜಿಡಗಿ ಅಂತಾ ಗೊತ್ತಾಯಿತು. ಆತನ ಮೋಟಾರ ಸೈಕಲ ಹಿಂದೆ ಕುಳಿತ ಬಂದವನಿಗೆ ನೋಡಲು ಆತನ ಕಣ್ಣಿಗೆ ಗಾಯವಾಗಿತ್ತು ಆತನ ಹೆಸರು ಗಿರೀಶ ತಂದೆ ಸುಭಾಶ್ಚಂದ್ರ ಅಂತಾ ಗೊತ್ತಾಯಿತು ನಾವು ಶಾಮರಾವ ಈತನಿಗೆ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತೇವೆ. ಶಾಮರಾವ ಈತನು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 09.09.2020 ರಂದು 5.45 ಎ,ಎಂಕ್ಕೆ ಮೃತ ಪಟ್ಟಿರುತ್ತಾನೆ. ಕಾರಣ ರವಿ ಜಿಡಗಿ ಈತನು ತನ್ನ ಮೋಟಾರ್ ಸೈಕಲ್ ನಂ ಕೆ.ಎ 32 ಇ ಹೆಚ್. 5593 ನೇದ್ದರ ಮೇಲೆ ಹಿಂದೆ ಗಿರೀಶ ಈತನಿಗೆ ಕೂಡಿಸಿಕೊಂಡು ಹುಮನಾಬಾದ ದಿಂದ ಕಲಬುರಗಿ ಕಡೆಗೆ ಬರುತ್ತಿರುವಾಗ  ಅತೀವೇಗದಿಂದ ಮತ್ತು ಅಲಕ್ಷತನದಿಂದ ಮೋಟಾರ ಸೈಕಲ್ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಶಾಮರಾವ ಇವರಿಗೆ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿದ ಮರಣವನ್ನುಂಟು ಮಾಡಿದವನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೆಕೆಂದು ಹೇಳಿಕೆ ಸಾರಾಂಶದ ಮೇಲಿಂದ ಮಹಾಗಾಂವ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.