POLICE BHAVAN KALABURAGI

POLICE BHAVAN KALABURAGI

09 September 2020

KALABURAGI DISTRICT CRIME REPORTED

 ಮೋಟಾರ ಸೈಕಲ ಕಳ್ಳತನ:-

ಅಫಜಲಪೂರ ಪೊಲೀಸ ಠಾಣೆ 

     ದಿನಾಂಕ 08-09-2020 ರಂದು 9:00 ಎ.ಎಮ್ ಕ್ಕೆ ಫೀರ್ಯಾದಿ ಅಹ್ಮದ ತಂದ ಮಹೇಬೂಬಸಾಬ ಮನಿಯಾರ ಸಾ: ಅಫಜಲಪೂರ ಇವರು ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದ ಸಾರಾಂಶವೇನೆಂದರೆ, ನಾನು ಒಂದು ತಿಂಗಳ ಹಿಂದೆ ಹಿರೊ ಹೊಂಡಾ ಕಂಪನಿಯ ಮೋಟಾರ ಸೈಕಲ್ ನೊಂದಣಿ ಸಂಖ್ಯೆ ಸಿಟಿಜೆ-2387 ನೇದ್ದು ಖರೀದಿಸಿದ್ದು ಅದು ಇನ್ನು ನನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವುದಿಲ್ಲಾ ಹೀಗಿದ್ದು ದಿನಾಂಕ:01-09-2020 ರಂದು ಪ್ರತಿ ದಿನದಂತೆ ನಾನು ನಮ್ಮ ಮನೆಯ ಮುಂದೆ ರಾತ್ರಿ 11-00 ಸುಮಾರಿಗೆ ನನ್ನ ಮೋಟಾರ ಸೈಕಲನ್ನು ನಿಲ್ಲಿಸಿ ಮನೆಯಲ್ಲಿ ಮಲಗಿರುತ್ತೆನೆ ನಂತರ ನಾನು ದಿನಾಂಕ:02/09/2020 ರಂದು ಬೆಳಗಿನ ಜಾವ 5-30  ಸುಮಾರಿಗೆ ಎದ್ದು ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ಮೋಟಾರ ಸೈಕಲ ಇದ್ದಿರುವದಿಲ್ಲ ಆಗ ಈ ವಿಷಯವನ್ನು ನಾನು ನಮ್ಮ ಮನೆಯ ಪಕ್ಕದವರಾದ ರಹಿಮತ ತಂದೆ ಸರ್ವರ ಜಾಗಿದಾರ ರವರಿಗೆ ತಿಳಿಸಿ ನಾನು ಮತ್ತು ರಹಿಮತ ಇಬ್ಬರು ಕೂಡಿ ಅಫಜಲಪೂರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಸೋನ್ನ,ದೇವಣಗಾಂವ,ಮತ್ತು ಮಾತೋಳಿ ಹಾಗೂ ಮಲ್ಲಬಾದ ಗ್ರಾಮಗಳಿಗೆ ಮತ್ತು ಇತರೆ ಕಡೆ ಹೋಗಿ ಹುಡುಕಾಡಿದರು ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲ ಕಾರಣ ನಮ್ಮ ಮನೆಯ ಮುಂದೆ ನಿಲ್ಲಿಸಿದ ನನ್ನ ಮೋಟಾರ ಸೈಕಲ ನಂಬರ ಸಿಟಿಜೆ-2387 ಅ:ಕಿ: 18,000/- ರೂಪಾಯಿ ನೇದ್ದನ್ನು ದಿನಾಂಕ:01-09-2020 ರಂದು 11-00 ಪಿಎಮ್‍ ದಿಂದ ದಿನಾಂಕ:02/09/2020 ರಂದು 5-30 ಎಎಮ್‍ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಆದ್ದರಿಂದ ನನ್ನ ಮೋಟಾರ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ  ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ

ವಾರಸುದಾರರಿಲ್ಲದ ಕ್ಯಾಮರಾ & ಮೊಬೈಲಗಳು ಪತ್ತೆ :-

ಅಫಜಲಪೂರ ಪೊಲೀಸ ಠಾಣೆ 

           ಇಂದು ದಿ: 08-09-2020 ರಂದು 2:50 ಪಿ.ಎಮ್ ಕ್ಕೆ ಮಾನ್ಯ ಶ್ರೀ ಸಂತೋಷ ತಟ್ಟೆಪಳ್ಳಿ ಪಿ.ಎಸ್.ಐ ಸಾಹೇಬರು ಮುದ್ದೆ ಮಾಲು ಮತ್ತು ಆರೋಪಿತನನ್ನು ಹಾಜರುಪಡಿಸಿ ಜಪ್ತಿ ಪಂಚನಾಮೆ ಹಾಗೂ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 08-09-2020 ರಂದು ಮದ್ಯಾಹ್ನ 1:00 ಗಂಟೆಯಿಂದ ಪೊಲೀಸ್ ಜೀಪಿನಲ್ಲಿ ನಮ್ಮ ಠಾಣೆಯ ಸುರೇಶ ಹೆಚ್.ಸಿ-394, ಸಂತೋಷ ಹೆಚ್.ಸಿ-439, ಯಲಗೊಂಡ ಪಿಸಿ-743 ರವರನ್ನು ಸಂಗಡ ಕರೆದುಕೊಂಡು ಸ್ವತ್ತಿನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೆಟ್ರೊಲಿಂಗ ಮಾಡುತ್ತಾ 1:15 ಗಂಟೆ ಸುಮಾರಿಗೆ ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಮುಂದೆ ಪೊಲೀಸ್ ಜೀಪನ್ನು ನಿಲ್ಲಿಸಿ, ನಡೆದುಕೊಂಡು ಬಸ್ ನಿಲ್ದಾಣದ ಒಳಗೆ ಹೋದಾಗ, ಅಲ್ಲಿ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಒಂದು ಕಪ್ಪು ಬಣ್ಣದ ಬ್ಯಾಗನ್ನು ಹಿಡಿದುಕೊಂಡು ಸಂಶಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದನು, ಆಗ ನಾವು ಸದರಿಯವನನ್ನು ಹಿಡಿದು ವಿಚಾರ ಮಾಡಬೆಕೆಂದು ಹತ್ತಿರ ಹೋಗುತ್ತಿದ್ದಂತೆ, ಸದರಿ ವ್ಯೆಕ್ತಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡುತ್ತಿದ್ದನು, ಸದರಿಯವನ ಮೇಲೆ ನಮಗೆ ಸಂಶಯ ಬಂದು ಆಗ ನಾನು ಮತ್ತು ಸಿಬ್ಬಂದಿಯವರು ಸದರಿಯವನನ್ನು ಬೆನ್ನಟ್ಟಿ 1:20 ಪಿ ಎಮ್ ಕ್ಕೆ ಹಿಡಿದು ಹೆಸರು ವಿಳಾಸ ವಿಚಾರಿಸಿದಾಗ ತನ್ನ ಹೆಸರು ವಿಕಾಸ ತಂದೆ ಸಿದ್ದಾರಾಮ ಬಳೂರ್ಗಿ ವಯ|| 19 ವರ್ಷ ಜಾ|| ಗಾಣಿಗ ಉ|| ಹಮಾಲಿ ಕೆಲಸ ಸಾ|| ಲಿಂಬಿತೋಟ ಅಫಜಲಪೂರ ಅಂತಾ ತಿಳಿಸಿದನು. ಸದರಿಯವನ ಕೈಯಲ್ಲಿದ್ದ ಬ್ಯಾಗಿನ ಬಗ್ಗೆ ವಿಚಾರಿಸಲಾಗಿ ಸದರಿಯವನು ತಡವರಿಸುತ್ತಾ ಸದರಿ ಬ್ಯಾಗಿನಲ್ಲಿ ಕ್ಯಾಮಾರಗಳು ಮತ್ತು ಮೋಬೈಲ ಪೋನಗಳು ಇರುತ್ತವೆ ಎಂದು ತಿಳಿಸಿದನು, ಸದರಿಯವನಿಗೆ ಕ್ಯಾಮಾರ ಮತ್ತು ಮೋಬೈಲಗಳ ಬಗ್ಗೆ ಕೂಲಂಕುಶವಾಗಿ ವಿಚಾರಿಸಲು, ಕ್ಯಾಮಾರಗಳನ್ನು ಸುಮಾರು ಒಂದು ತಿಂಗಳ ಹಿಂದೆ ಅಫಜಲಫೂರ ಬಸ್ ನಿಲ್ದಾಣದ ಪಕ್ಕದಲ್ಲಿರುವ ಪೋಟೊ ಸ್ಟುಡಿಯೋದಲ್ಲಿ ಪೋಟೊ ತಗೆದುಕೊಳ್ಳುವ ನೆಪದಲ್ಲಿ ಹೋಗಿ, ಅವರಿಗೆ ಗೊತ್ತಾಗದ ಹಾಗೆ ಎರಡು ಕ್ಯಾಮಾರಗಳನ್ನು ಕಳ್ಳತನ ಮಾಡಿಕೊಂಡು ಬಂದಿರುತ್ತೇನೆ. ಹಾಗೂ ಅದೆ ದಿನ ಅಲ್ಲೆ ಪಕ್ಕದಲ್ಲಿರುವ ಒಂದು ಮೋಬೈಲ ಅಂಗಡಿಗೆ ಮೋಬೈಲ ಖರೀದಿಸುವ ನೇಪದಲ್ಲಿ ಹೋಗಿ 06 ಮೋಬೈಲ ಪೋನಗಳನ್ನು ಕಳ್ಳತನ ಮಾಡಿಕೊಂಡು ಬಂದಿರುತ್ತೇನೆ ಎಂದು ತಿಳಿಸಿದನು.  ನಂತರ ಪಂಚರ ಸಮಕ್ಷಮ ಸದರಿಯವನ ವಶದಲ್ಲಿದ್ದ ಬ್ಯಾಗನ್ನು ಚೆಕ್ ಮಾಡಲಾಗಿ, 4500 ಕಿಮ್ಮತ್ತಿನ 1) NIKON ಕಂಪನಿಯ 02 ಕ್ಯಾಮಾರಗಳು ಮತ್ತು 2) 30,000-00 ಕಿಮ್ಮತ್ತಿನ 6 ವಿವಿಧ ಕಂಪನಿಗಳ ಮೊಬೈಲಗಳು ಜಪ್ತಿ ಪಂಚನಾಮೆ ಮೂಲಕ ಜಪ್ತ ಮಾಡಿಕೊಂಡು, ಆರೋಪಿತನ ವಿರುದ್ದ ಕಾನೂನು ಕ್ರಮ ಕೈ ಕೊಳ್ಳಬೆಕೆಂದು ಸರ್ಕಾರಿ ತರ್ಫೆಯಾಗಿ ವರದಿಯ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ರಸ್ತೆ ಅಪಘಾತ ಪ್ರಕರಣ ಮರಣಾಂತಿಕ:-

ಮಹಾಗಾಂವ ಪೊಲೀಸ ಠಾಣೆ 

        ದಿನಾಂಕ: 08.09.2020 ರಂದು 7.15 ಎ.ಎಮ್.ಕ್ಕೆ ಜಿಜಿಹೆಚ್ ಆಸ್ಪತ್ರೆಯಲ್ಲಿ ಫಿರ್ಯಾದಿ  ಶ್ರೀಮತಿ ಸಾಬವ್ವ ಗಂಡ ರಾಣಪ್ಪ ಕಣ್ಣೂರ ವಯಾ: 55 ವರ್ಷ ಜಾತಿ: ವಡ್ಡರ ಉ: ಕೂಲಿ ಕೆಲಸ ಸಾ: ಚಂದ್ರ ನಗರ ಇವರು ಹೇಳಿಕೆ ನೀಡಿದ ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 07.09.2020 ಸಾಯಂಕಾಲ ನನ್ನ ಸೊಸೆಯಾದ ಶಾಂತಾಬಾಯಿ ಮತ್ತು ಅವಳ ಗಂಡನಾದ ಶಾಮರಾವ ಇಬ್ಬರು ಹುಬ್ಬಳಿಗೆ ಹೋಗುತ್ತೇವೆ ಅಂತಾ ನನಗೆ ಹೇಳಿದಾಗ ನಾನು ಕೂಡಾ ಅವರಿಗೆ ಊರಿಗೆ ಕಳಿಸಿಕೊಡಲು ಅವರ ಜೊತೆಗೆ ಮಹಾಗಾಂವ ಕ್ರಾಸ್ ವರೆಗೆ ಕಳುಹಿಸಲು ನಮ್ಮೂರ ಚಂದ್ರನಗರ ದಿಂದ ಹುಮನಾಬಾದ ಮಹಾಗಾಂವ – ಕಲಬುರಗಿ ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್.50) ಯಲ್ಲಿ ಬರುವ ಚಂದ್ರನಗರ ಕ್ರಾಸ್ ವರೆಗೆ ನಡೆದುಕೊಂಡು ಬಂದು ಮೇನ್ ರೋಡ್ ದಾಟಿ ಮಹಾಗಾಂವ ಕ್ರಾಸ್ ಕಡೆಗೆ ಹೋಗುವ ಸಲುವಾಗಿ ಆಟೋ ರೀಕ್ಷಾ ಬರುವ ದಾರಿ ಕಾಯುತ್ತಾ ಮೂರು ಜನರು ರಸ್ತೆ ಬದಿಯಲ್ಲಿ ನಿಂತಿರುವಾಗ ಸಾಯಂಕಾಲ 07.00 ಗಂಟೆ ಸುಮಾರಿಗೆ ಒಂದು ಮೋಟಾರ ಸೈಕಲ್ ಸವಾರನು ತನ್ನ ಹಿಂದೆ ಒಬ್ಬರಿಗೆ ಕೂಡಿಸಿಕೊಂಡು ಕಮಲಾಪೂರ ರೋಡ ಕಡೆಯಿಂದ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಮ್ಮ ಸ್ವಲ್ಪ ಮುಂದೆ ನಿಂತಿರುವ ಶಾಮರಾವ ನಾಗೂರ ಇವರಿಗೆ ಜೋರಾಗಿ ಡಿಕ್ಕಿ ಪಡಿಸಿ ಅವರು ಕೂಡಾ ಮೋಟಾರ ಸೈಕಲ್ ಸಮೇತ ರಸ್ತೆ ಬಲಕ್ಕೆ ಹೋಗಿ ಬಿದ್ದಿದ್ದರು ಶಾಮರಾವ ಈತನು ಪುಟಿದು ರೋಡ ಮೇಲೆ ಬಿದ್ದಿದ್ದನು ಅದನ್ನು ನೋಡಿದ ನಾನು ಮತ್ತು ನನ್ನ ಸೋದರ ಸೊಸೆ ಶಾಂತಾಬಾಯಿ ಹಾಗೂ ಅಲ್ಲಿಯೆ ಹೋಗುತ್ತಿದ್ದ ನಮ್ಮೂರಿನ ಪಂಡಿತ ತಂದೆ ಭೀಮಶ್ಯಾ, ಶ್ರೀ ಹಣಮಂತ ತಂದೆ ತುಕರಾಮ ದಂಡಗೋಳಕರ್ ಎಲ್ಲರೂ ಕೂಡಿ ಶಾಮರಾವ ನಾಗೂರ ಈತನಿಗೆ ಎಬ್ಬಿಸಿ ರಸ್ತೆ ಬದಿಯಲ್ಲಿ ಮಲಗಿಸಿ ಹೋಗಿ ಬರುವ ವಾಹನಗಳ ದೀಪದ ಬೆಳಕಿನಲ್ಲಿ ನೋಡಲು ಸದರ ಘಟನೆಯಿಂದ ಶಾಮರಾವ ಈತನ ತಲೆಗ ಒಳಪೆಟ್ಟಾಗಿ ಮೂಗಿನಿಂದ ಎಡಕಿವಿಯಿಂದ ರಕ್ತ ಸ್ರಾವ ಆಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಆತನ ಎಡಗಾಲ ಮೊಳಕಾಲ ಕೆಳಗೆ ಭಾರಿ ಒಳ ಪೆಟ್ಟು ಆಗಿತ್ತು. ಶ್ಯಾಮರಾವ ಈತನಿಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ್ ಸವಾರನಿಗೆ ನೋಡಲು ಆತನ ಬಲಗೈ ಭುಜಕ್ಕೆ ಭಾರಿ ಒಳಪಟ್ಟಾಗಿತ್ತು ಆತನ ಹೆಸರು ರವಿ ತಂದೆ ಶರಣಬಸಪ್ಪ ಜಿಡಗಿ ಅಂತಾ ಗೊತ್ತಾಯಿತು. ಆತನ ಮೋಟಾರ ಸೈಕಲ್ ಹಿಂದೆ ಕುಳಿತ ಬಂದಿದವನಿಗೆ ನೋಡಲು ಆತನ ಕಣ್ಣಿಗೆ ಗಾಯವಾಗಿತ್ತು, ಆತನ ಹೆಸರು ರವಿ ತಂದೆ ಶರಣಬಸಪ್ಪ ಜಿಡಗಿ ಅಂತಾ ಗೊತ್ತಾಯಿತು. ಆತನ ಮೋಟಾರ ಸೈಕಲ ಹಿಂದೆ ಕುಳಿತ ಬಂದವನಿಗೆ ನೋಡಲು ಆತನ ಕಣ್ಣಿಗೆ ಗಾಯವಾಗಿತ್ತು ಆತನ ಹೆಸರು ಗಿರೀಶ ತಂದೆ ಸುಭಾಶ್ಚಂದ್ರ ಅಂತಾ ಗೊತ್ತಾಯಿತು ನಾವು ಶಾಮರಾವ ಈತನಿಗೆ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತೇವೆ. ಶಾಮರಾವ ಈತನು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 09.09.2020 ರಂದು 5.45 ಎ,ಎಂಕ್ಕೆ ಮೃತ ಪಟ್ಟಿರುತ್ತಾನೆ. ಕಾರಣ ರವಿ ಜಿಡಗಿ ಈತನು ತನ್ನ ಮೋಟಾರ್ ಸೈಕಲ್ ನಂ ಕೆ.ಎ 32 ಇ ಹೆಚ್. 5593 ನೇದ್ದರ ಮೇಲೆ ಹಿಂದೆ ಗಿರೀಶ ಈತನಿಗೆ ಕೂಡಿಸಿಕೊಂಡು ಹುಮನಾಬಾದ ದಿಂದ ಕಲಬುರಗಿ ಕಡೆಗೆ ಬರುತ್ತಿರುವಾಗ  ಅತೀವೇಗದಿಂದ ಮತ್ತು ಅಲಕ್ಷತನದಿಂದ ಮೋಟಾರ ಸೈಕಲ್ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಶಾಮರಾವ ಇವರಿಗೆ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿದ ಮರಣವನ್ನುಂಟು ಮಾಡಿದವನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೆಕೆಂದು ಹೇಳಿಕೆ ಸಾರಾಂಶದ ಮೇಲಿಂದ ಮಹಾಗಾಂವ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

No comments: