C¥sÀd®¥ÀÆgÀ oÁuÉ : ದಿನಾಂಕ: 06-02-2020 ರಂದು 2:00 ಪಿಎಮ್ ಕ್ಕೆ ಶ್ರೀಮತಿ
ಬಸಮ್ಮಾ ಗಂಡ ಶೆಂಕ್ರೆಪ್ಪಾ ಬಡಿಗೇರ ಸಾ||ರಾಯನಪಾಳ್ಯ ತಾ|| ಹುಣಸಗಿ ಇವರು ಠಾಣೇಗೆ
ಹಾಜರಾಗಿ ಲಿಖಿತ ಪಿರ್ಯಾಧಿ ಸಲ್ಲಿಸಿದ್ದು ಸದರಿ ಪಿರ್ಯಾಧಿಸಾರಾಂಶವೆನೇಂದರೆ ಬಸಮ್ಮ ಗಂಡ
ಶಂಕ್ರೆಪ್ಪ ಬಡಿಗೇರ ವಯ|| 40 ವರ್ಷ ಜಾ|| ಪಂಚಾಳ ಉ|| ಕೂಲಿ ಸಾ|| ರಾಯನಪಾಳ್ಯ ತಾ|| ಹುಣಸಗಿ ಜಿ|| ಯಾದಗಿರಿ ಆದ ನಾನು ಅರ್ಜಿ
ಕೊಡುವುದೆನೆಂದರೆ, ನನ್ನ ಗಂಡನು ಅಫಜಲಪೂರ ತಾಲೂಕಿನ ಘತ್ತರಗಾದಲ್ಲಿ ನಡೆದ ಬ್ರೀಜ ಕಮ್
ಬ್ಯಾರೇಜ ಕಾಮಗಾರಿಯಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿರುತ್ತಾರೆ. ನನ್ನ ಗಂಡನ ಜೋತೆಗೆ ನಮ್ಮೂರಿನ
ಬಸವರಾಜ ತಂದೆ ಸೈಬಣ್ಣ ಡೆಣ್ಣಿಗೇರಿ ಇವರು ಸಹ ಕೆಲಸ ಮಾಡುತ್ತಾರೆ. ಇಂದು ದಿನಾಂಕ 06-02-2020 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ನನ್ನ ಗಂಡನ
ಜೋತೆಗೆ ಕೆಲಸ ಮಾಡುವ ಬಸವರಾಜ ಈತನು ನನಗೆ ಪೋನ್ ಮಾಡಿ ನಿಮ್ಮ ಗಂಡನು ಭೀಮಾ ನದಿಗೆ ಇರುವ
ಘತ್ತರಗಾ – ಬಗಲೂರ ಬ್ರೀಜ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ ಎಂದು
ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಗಂಡನ ಅಣ್ಣನಾದ ಗುಂಡಪ್ಪ ಹಾಗೂ ನಮ್ಮೂರಿನ ದೇವಪ್ಪ ಗೋಪಾಳಿ, ವೆಂಕಟೇಶ ಮಾಲಿಪಾಟೀಲ ಇನ್ನು
ಕೆಲವು ಜನರು ಕೂಡಿ ಘತ್ತರಗಾಕ್ಕೆ ಬಂದು ನೋಡಲಾಗಿ ನನ್ನ ಗಂಡನ ಶವವು ಬ್ರೀಜ್ ಕೆಳಗೆ 36 ನಂಬರ ಪಿಲ್ಲರ ಹತ್ತಿರ
ಬೋರಲಾಗಿ ಬಿದ್ದಿತ್ತು. ನಂತರ ಅಲ್ಲಿದ್ದ ನನ್ನ ಗಂಡನ ಜೋತೆಗೆ ಕೆಲಸ ಮಾಡುವ ಸಂಜೀವಪ್ಪ ಕೂಡಗಿ, ಬಸವರಾಜ ಡೊಣ್ಣಿಗೇರಿ ಹಾಗೂ
ಮ್ಯಾನೇಜರ ಆದ ವಿಠ್ಠಲ ದಶವಂತ ರವರಿಗೆ ವಿಚಾರಿಸಲು ಸದರಿಯವರು ತಿಳಿಸಿದ್ದೆನೆಂದರೆ, ನಿಮ್ಮ ಗಂಡನು ಮೈಯಲ್ಲಿ ಆರಾಮ
ಇಲ್ಲದರಿಂದ ನಿನ್ನೆ ಕೆಲಸಕ್ಕೆ ಬಂದಿರುವುದಿಲ್ಲ. ನಿನ್ನೆ ಸಂಜೆ ಸರಾಯಿ ಕುಡಿದು ರಾತ್ರಿ 10:00 ಗಂಟೆ ವರೆಗೆ ಬ್ರೀಜ್ ಮೇಲೆ
ತಿರುಗಾಡುತ್ತಿದ್ದನು. ಇಂದು ಬೆಳಿಗ್ಗೆ ನಾವು ಕೆಲಸ ಮಾಡಲು ಹೋದಾಗ ನಿಮ್ಮ ಗಂಡನು ಕೆಳಗೆ ಬಿದ್ದು
ಮೃತ ಪಟ್ಟಿರುವುದನ್ನು ನೋಡಿರುತ್ತೇವೆ ಎಂದು ತಿಳಿಸಿದರು. ನನ್ನ ಗಂಡನು ಸರಾಯಿ ಕುಡಿದ ನಸೆಯಲ್ಲಿ
ನಿನ್ನೆ ದಿನಾಂಕ 05-02-2020 ರಂದು ರಾತ್ರಿ 10:00 ಗಂಟೆಯಿಂದ ಇಂದು ದಿನಾಂಕ 06-02-2020 ರಂದು ಬೆಳಿಗ್ಗೆ 06:00 ಗಂಟೆಯ ಮದ್ಯದ ಅವದಿಯಲ್ಲಿ
ಬ್ರೀಜ ಮೇಲೆ ತಿರುಗಾಡುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ. ನನ್ನ ಗಂಡನ
ಸಾವಿನಲ್ಲಿ ನಮಗೆ ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲ. ಕಾರಣ ನನ್ನ ಗಂಡನು ಮೃತಪಟ್ಟ
ಬಗ್ಗೆ ಕಾನೂನು ಕ್ರಮ ಜರೂಗಿಸಬೇಕು ಎಂದು ಮಾನ್ಯ ರವರಲ್ಲಿ ವಿನಂತಿ ಇದೆ ಅಂತಾ ಕೊಟ್ಟ ದೂರಿನ ಸಾರಾಂಶದ
ಮೇಲಿಂದ ಠಾಣಾ ಯುಡಿಆರ್ ಕಲಂ 174 CRPC ನೇದ್ದರ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ಬಗ್ಗೆ ವರದಿ.
POLICE BHAVAN KALABURAGI
07 February 2020
30 January 2020
KALABURAGI DISTRICT REPORTED CRIMES
ಅಪಘಾತ
ಪ್ರಕರಣ :
ರೇವೂರ ಠಾಣೆ : ದಿನಾಂಕ
29/01/2020 ರಂದು ನಮ್ಮ ಗ್ರಾಮದ ಗುಂಡಪ್ಪ ತಂದೆ ಸುಭಾಷ ಅಂತರಂಗಿ ರವರ ದೇವರ ಕಾರ್ಯಾಕ್ರಮ
ಯಂಕಂಚಿಯಲ್ಲಿ ಇದ್ದ ಪ್ರಯುಕ್ತ ಸದರಿ ಕಾರ್ಯಕ್ರಮಕ್ಕೆ ನಮಗೆ ಹಾಗು ನಮ್ಮ ಗ್ರಾಮದ ಜನರಿಗೆ
ಹೇಳಿರುತ್ತಾರೆ ಸದರಿ ದೇವರ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ನನ್ನ ಮಗ ನನಗೆ
ತಿಳಿಸಿದ್ದೆನೆಂದರೆ ನಾನು ಹಾಗು ನಮ್ಮ ಗ್ರಾಮದ ಗುಂಡಪ್ಪ ತಂದೆ ಭೀಮರಾವ ಮಾನೆ, ರಾಜಕುಮಾರ ತಂದೆ
ಪರಮೇಶ್ವರ ಖಂಡೇಕರ ಮೂರು ಜನರು ನಮ್ಮ ಗ್ರಾಮದ ವಿಠ್ಠಲ ತಂದೆ ವಿಶ್ವನಾಥ ಖಂಡೇಕರ ರವರ ಮೋಟಾರ
ಸೈಕಲ್ ನಂ ಕೆಎ-32 ಇಎನ್-1284 ನೇದ್ದನ್ನು ತಗೆದುಕೊಂಡು ಹೋಗುತ್ತೇವೆ ಸದರಿ ಮೋಟಾರ್ ಸೈಕಲ್
ರಾಜಕುಮಾರ ಇತನು ಚಲಾಯಿಸುತ್ತಾನೆ ಅಂತ ಹೇಳಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹೋಗಿರುತ್ತಾರೆ ದಿನಾಂಕ 30/01/2020 ಬೆಳಿಗ್ಗೆ
6.30 ಗಂಟೆಯ ಸುಮಾರಿಗೆ ನನ್ನ ಮಗ ಮಹಾದೇವಪ್ಪನ
ಮೊಬೈಲ್ ಪೊನದಿಂದ ನನಗೆ ಪೋನ ಮಾಡಿದ್ದು ಸದರಿಯವರು ತಮ್ಮ ಹೆಸರು ಮುತ್ತುಗೌಡ ಪಾಟೀಲ
ಸಾ||ರೇವೂರ(ಬಿ) ಅಂತ ಹೇಳಿ ಈ ಮೋಬೈಲ ಪೊನ ಇದ್ದ ವ್ಯಕ್ತಿ ಮತ್ತು ಇನ್ನೂ ಇಬ್ಬರು ಮೋಟಾರ್ ಸೈಕಲ್
ನಂ ಕೆಎ-32 ಇಎನ್-1284 ನೇದ್ದು ಕುಲಾಲಿ
ರೇವೂರ(ಬಿ) ರೋಡಿಗೆ ರೇವೂರ(ಕೆ) ಸಿಮಾಂತರದಲ್ಲಿ ಗುಂಡೇರಾವ ಪೋಲೀಸ ಪಾಟೀಲ ರವರ ಹೊಲದ ಹತ್ತಿರ
ಮೋಟಾರ್ ಸೈಕಲ್ ರೋಡಿನ ಪಕ್ಕದಲ್ಲಿರುವ ಒಂದು
ಗಿಡಕ್ಕೆ ಡಿಕ್ಕಿ ಹೊಡೆದು ರೋಡಿನ ಪಕ್ಕದ ತಗ್ಗಿನಲ್ಲಿ ಬಿದ್ದು ಮುಖಕ್ಕೆ ತಲೆಗೆ ಭಾರಿ
ರಕ್ತಗಾಯವಾಗಿ ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾರೆ. ಅಂತ ತಿಳಿಸಿದ ಬಳಿಕ ಕೂಡಲೆ ನಾನು ನಮ್ಮ ಗ್ರಾಮದ ಪರಮೇಶ್ವರ ಖಂಡೇಕರ,
ರುಕ್ಮಿಣಿ ಮಾನೆ, ವಿಠ್ಠಲ ಮದರಿ, ಸಿದ್ದಾರಾಮ ಮಾಶಾಳ, ಚಂದ್ರಕಾಂತ ಕವಲಗಿ ಹಾಗು ಗೌಡಪ್ಪಗೌಡ
ಪೋಲೀಸ್ ಪಾಟೀಲ ಎಲ್ಲರು ಒಂದು ಖಾಸಗಿ ವಾಹನದಲ್ಲಿ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗನ ತಲೆಗೆ ಹಾಗು ಮುಖಕ್ಕೆ ಭಾರಿ
ರಕ್ತಗಾಯವಾಗಿದ್ದು, ಗುಂಡಪ್ಪ ಈತನಿಗೆ ತಲೆಗೆ, ಮುಖಕ್ಕೆ ಹಾಗು ರಾಜಕುಮಾರ ಇತನಿಗೆ ಮುಖಕ್ಕೆ
ತಲೆಗೆ ಭಾರಿ ರಕ್ತಗಾಯವಾಗಿ ಮೂರು ಜನರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ನಾವು ಬಂದಿದ್ದ
ಖಾಸಗಿವಾಹನದಲ್ಲಿ ಮೃತ ದೇಹಗಳನ್ನು ಹಾಕಿಕೊಂಡು ಅಫಜಲಪೂರದ ಸರಕಾರಿ ಆಸ್ಪತ್ರೆಯ
ಶವಗಾರದಲ್ಲಿ ಸೇರಿಕೆ ಮಾಡಿ ಈಗ ಠಾಣೆಗೆ
ಬಂದಿರುತ್ತೇವೆ. ಸದರಿ ಘಟನೆಯು ದಿನಾಂಕ
29/01/2020 ರಂದು ರಾತ್ರಿ 11 ಪಿಎಮ್ ದಿಂದ ದಿನಾಂಕ 30/01/2020 ರಂದು ಬೆಳಿಗ್ಗೆ 5.00 ಗಂಟೆಯ
ಮದ್ಯದ ಅವದಿಯಲ್ಲಿ ಸಂಬವಿಸಿರುತ್ತದೆ ಮೋಟಾರ್ ಸೈಕಲ್ ಸವಾರನಾದ ರಾಜಕುಮಾರ ತಂದೆ ಪರಮೇಶ್ವರ
ಖಂಡೇಕರ ಈತನು ಅತಿವೇಗವಾಗಿ ಮತ್ತು
ನಿರ್ಲಕ್ಷತನದಿಂದ ನಡೆಸಿ ರೋಡಿನ ಪಕ್ಕದಲ್ಲಿರುವ ಒಂದು ಗಿಡಕ್ಕೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿ
ತಾನು ಮೃತಪಟ್ಟು ನನ್ನ ಮಗ ಮಹಾದೇವಪ್ಪ ಮತ್ತು
ಗುಂಡಪ್ಪನ ಸಾವಿಗೆ ಕಾರಣನಾದ ರಾಜಕುಮಾರ ಖಂಡೇಕರ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು ಅಂತ ಶ್ರೀಮತಿ ಚಂದಮ್ಮ ಗಂಡ ಮಾರುತಿ ಖರಾತ
ಸಾ||ಮಾಡ್ಯಾಳ ತಾ||ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕಲರಣ
ದಾಖಲಾಗಿದೆ.
29 January 2020
Kalaburagi District Reported Crimes
ಮಟಕಾ
ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ : ದಿನಾಂಕ:
27/01/2020 ರಂದು ನರೋಣಾ ಪೊಲೀಸ ಠಾಣಾ ವ್ಯಾಪ್ತಿಯ ಕಮಲಾನಗರ
ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದ
ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ
ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ
ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ. ನರೋನಾ ಠಾಣೆ ಹಾಗು ಸಿಬ್ಬಂದಿ
ಮತ್ತು ಪಂಚರೊಂದಿಗೆ ಹೊರಟು ಕಮಲಾನಗರ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೆವಸ್ಥಾನದ ಹತ್ತಿರ ಹೋಗಿ ಮರೆಯಾಗಿ
ನಿಂತು ನೋಡಲಾಗಿ ಮಲ್ಲಿಕಾರ್ಜುನ ದೇವಸ್ಥಾನದ ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ
ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ
ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ
ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ
ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಬಸರಾಜ ತಂದೆ ಶಿವಪುತ್ರಪ್ಪಾ ಪೊಲೀಸ್ ಬಿರಾದಾರ, ಸಾ:ಕಮಲಾನಗರ
ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ
1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್ 3)ನಗದು ಹಣ 2140/-
ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ
:
ಯಡ್ರಾಮಿ ಠಾಣೆ : ಶ್ರೀ ಬಸವರಾಜ
ತಂದೆ ಸಿದ್ದಪ್ಪ ಬಾಗೇವಾಡಿ
ಸಾ||
ಯೋಗಾಪೂರ ಕಾಲೋನಿ ವಿಜಯಪೂರ,
ರವರ ತಂದೆಯವರು ಸುಮಾರು ವರ್ಷಗಳಿಂದ
ನಮ್ಮೊಣಿಯ ಕಿಶೋರ ತಂದೆ
ರಾಮರಾವ ಪಾಟೀಲ ರವರ
ಲಾರಿ ಟ್ಯಾಂಕರ ನಂ
ಕೆ.ಎ-28/ಡಿ-4555
ನೇದ್ದರ ಮೇಲೆ ಕಿನ್ನರಾಗಿ
ಕೆಲಸ ಮಾಡಿಕೊಂಡಿರುತ್ತಾರೆ, ಟ್ಯಾಂಕರನಲ್ಲಿ
ಡಾಂಬರ ಸರಬರಾಜು ಮಾಡುತ್ತಿದ್ದರು,
ಯಡ್ರಾಮಿ ತಾಲೂಕಿನ ಬಳಬಟ್ಟಿ
ಗ್ರಾಮದಲ್ಲಿ ರಸ್ತೆ ಕಾಮಗಾರಿ
ನಡೆಯುತ್ತಿದ್ದರಿಂದ ರೋಡಿನ
ಕಾಂಟ್ರ್ಯಾಕ್ಟಗಳು ನಮ್ಮ
ಮಾಲಿಕರಿಗೆ ಒಂದು ಟ್ಯಾಂಕ
ಡಾಂಬರ ಕಳುಹಿಸಿಕೊಡಲು ಕೇಳಿಕೋಂಡು
ಮೇರೆಗೆ ನಮ್ಮ ಟ್ಯಾಂಕರ
ಮಾಲಿಕರು ಒಂದು ಟ್ಯಾಂಕ
ಡಾಂಬರನ್ನು ಬಳಬಟ್ಟಿ ಗ್ರಾಮಕ್ಕೆ
ಕಳುಹಿಸಿಕೊಟ್ಟಿರುತ್ತಾರೆ, ಟ್ಯಾಂಕರ ಮೇಲೆ
ನಮ್ಮ ತಂದೆಯವರು ಕಿನ್ನರಾಗಿ
ಹೋಗಿರುತ್ತಾರೆ, ದಿನಾಂಕ 26-01-2020 ರಂದು ಬೆಳಿಗ್ಗೆ 10;30 ಗಂಟೆ ಸುಮಾರಿಗೆ ಬಳಬಟ್ಟಿ ಗ್ರಾಮದ
ರಾಜಕುಮಾರ ಮುಕ್ಕಾಣಿ ಎಂಬುವರು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ಇದೀಗ 10;00 ಗಂಟೆ ಸುಮಾರಿಗೆ ನಿಮ್ಮ ತಂದೆಯವರು ನಮ್ಮೂರಲ್ಲಿದ್ದ
ನಮ್ಮ ಪ್ಲಾಂಟನಲ್ಲಿ ನಿಲ್ಲಿಸಿದ ಟ್ಯಾಂಕನಿಂದ ಡಾಂಬರ ಖಾಲೆ ಮಾಡುತ್ತಿದ್ದಾಗ ನಿಮ್ಮ ತಂದೆಯವರು ಕೊರಳಲ್ಲಿ
ಟಾವೆಲನ್ನು ಹಾಕಿಕೊಂಡು ಟ್ಯಾಂಕರ ಕೆಳಗೆ ವಾಲ ಗರಮ ಮಾಡುತಿದ್ದಾಗ ಟ್ಯಾಂಕರ ಚಾಲಕನು ಅಲಕ್ಷತನದಿಂದ
ಟ್ಯಾಂಕರನ್ನು ಒಮ್ಮೇಲೆ ಚಾಲು ಮಾಡಿದಾಗ ವಾಹನದ ಕೆಳಗೆ ಇದ್ದ ನಿಮ್ಮ ತಂದೆಯ ಕೊರಳಲ್ಲಿನ ಟಾವೇಲನ್ನು
ಎಕ್ಸಲ್ ಜೇಂಟಿಗ ತಾಕಿದ್ದರಿಂದ ಟಾವೆಲ ಎಕ್ಸಲಿಗೆ ಸುತ್ತಿಕಿಕೊಂಡಾಗ ನಿಮ್ಮ ತಂದೆಯ ತಲೆಯು ಎಕ್ಸಲಗೆ
ಬಡಿದು ತಲೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಕೊರಳಲ್ಲಿನ ಟಾವೇಲು ಕುತ್ತಿಗೆಗೆ ಸುತ್ತಿಕೊಂಡಿತ್ತು,
ನಂತರ ನಾನು ಮತ್ತು ಅಲ್ಲೆ ಕೆಲಸ ಮಾಡುತ್ತಿದ್ದ ಬಸವರಾಜ ಉಕ್ಕಿನಾಳ,
ಗೊಲ್ಲಾಳಪ್ಪ ಮುಕ್ಕಾಣಿ ರವರು ಕೂಡಿ ಟಾವೇಲನ್ನು ಕಟ್ಟ ಮಾಡಿ ನಿಮ್ಮ ತಂದೆಯವರಿಗೆ
ಹೊರಗೆ ತೆಗೆದು ಅವರನ್ನು ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೋಂಡು ಶಹಾಪೂರಕ್ಕೆ ತೆಗೆದುಕೊಂಡು
ಹೋಗುತ್ತಿದ್ದೇವೆ, ಟ್ಯಾಂಕರ ಚಾಲಕ ಓಡಿ ಹೋಗಿರುತ್ತಾನೆ ನೀವು ಬನ್ನಿ
ಅಂತಾ ಹೇಳಿದರು, ನಂತರ ನಾನು ಮತ್ತು ನಮ್ಮ ಮಾವ ಮಲ್ಲಿಕಾರ್ಜುನ ಕಾಖಂಡಕಿ
ರವರು ಕೂಡಿ ಶಹಾಪುರಕ್ಕೆ ಹೋಗುತ್ತಿದ್ದಾಗ ರಾಜಕುಮಾರ ಇವರು ಪುನಹ ಫೋನ ಮಾಡಿ ಹೇಳಿದ್ದೇನೆಂದರೆ,
ನಿಮ್ಮ ತಂದೆಯವರಿಗೆ ನಾವು ಶಹಾಪೂರದಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ
ಹೋಗುವಾಗ ಮಾರ್ಗಮದ್ಯ 11-30 ಎ.ಎಂ ಕ್ಕೆ
ನಿಮ್ಮ ತಂದೆಯವರು ಮೃತ ಪಟ್ಟಿರುತ್ತಾರೆ, ಅವರ ಶವವನ್ನು ಯಡ್ರಾಮಿ ಸರಕಾರಿ
ಆಸ್ಪತ್ರೆಗೆ ತರುತ್ತಿದ್ದೇವೇ ನೀವು ಅಲ್ಲಿಗೆ ಬನ್ನಿ ಅಂತಾ ಹೇಳಿದ್ದರಿಂದ ನಾವು ಯಡ್ರಾಮಿ ಸರಕಾರಿ
ಆಸ್ಪತ್ರೆಗೆ ಬಂದು ನೋಡಿದಾಗ ನಮ್ಮ ತಂದೆಯ ತಲೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ಕೊರಳಲ್ಲಿ ಕಂದು ಗಟ್ಟಿದ ಗಾಯವಾಗಿದ್ದು ನಮ್ಮ ತಂದೆಯವರು ಟ್ಯಾಂಕರ ಕೆಳಗೆ ಕೆಲಸ ಮಾಡುತ್ತಿದ್ದಾಗ
ಟ್ಯಾಂಕರ ಚಾಲಕನು ದುಡುಕಿನಿಂದ ಮತ್ತು ಅಲಕ್ಷತನದಿಂದ ಟ್ಯಾಂಕರ ಚಾಲು ಮಾಡಿದ್ದರಿಂದ ಈ ಅಪಘಾತವಾಗಿ
ನಮ್ಮ ತಂದೆಯವರು ಮೃತ ಪಟ್ಟಿರುತ್ತಾರೆ, ಕಾರಣ ಮೇಲ್ಕಂಡ ಟ್ಯಾಕರ್ ನಂ ಕೆ.ಎ-28/ಡಿ-4555 ನೇದ್ದರ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ
ವಾಹನ ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ
ಗುರುನಾಥ ತಂದೆ ಹಣಮಂತರಾಯ ಹೀರಾ ಸಾ: ರುದ್ರವಾಡಿ ತಾ: ಆಳಂದ ರವರು ದಿನಾಂಕ:12/01/2020 ರಂದು ಲಾತೂರಕ್ಕೆ ಹೋಗುವ ಸಂಬಂಧ ನನ್ನ ಮೋಟರ್ ಸೈಕಲವನ್ನು ಹಳೇಯ
ಆರ್.ಟಿ.ಓ.ಚೆಕ್ಕಪೊಸ್ಟ್ ಹತ್ತಿರ ಇರುವ ನಮ್ಮ ಸಂಬಂಧಿಕರಾದ ಶ್ರೀ.ಸಾತಣ್ಣಾ ತಂದೆ ಶಿವಣ್ಣಾ
ಶೆಟ್ಟಿ ಸಾಃಆಳಂದ ಇವರ ಮನೆಯ ಕಂಪೌಂಡದಲ್ಲಿ ಸಾಯಂಕಾಲ 05:00
ಗಂಟೆಯ ಸುಮಾರಿಗೆ
ನನ್ನ ಮೋಟರ್ ಸೈಕಲ ನಂಬರ ಕೆಎ-32 ಇ.ಡಿ-8378 ನೇದ್ದನ್ನು ನಿಲ್ಲಿಸಿ ಲಾತೂರಕ್ಕೆ ಹೋಗಿ
ದಿನಾಂಕ:15/01/2020 ರಂದು ಬೇಳಗ್ಗೆ 11:00 ಗಂಟೆಯ ಸುಮಾರಿಗೆ ಮರಳಿ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ
ನಿಲ್ಲಿಸಿದ ಸ್ಥಳದಲ್ಲಿ ಕಾಣಲಿಲ್ಲಾ. ಆಗ ನಾನು ನಮ್ಮ ಸಂಬಂಧಿಕರಾದ ಸಾತಣ್ಣಾ ಶೆಟ್ಟಿಇವರಿಗೆ
ವಿಚಾರಿಸಲಾಗಿ ನಾನು ಸಹ ಕಲಬುರಗಿಯಲ್ಲಿರುವ ಮನೆಗೆ ಹೋಗಿದ್ದು ಇಂದು ಬೆಳಗ್ಗೆ ಬಂದಿರುತ್ತೇನೆ
ನನಗೂ ಸಹ ಮೋಟರ್ ಸೈಕಲ ಬಗ್ಗೆ ಗೊತ್ತಿರುವುದಿಲ್ಲಾ ಅಂತಾ ತಿಳಿಸಿದಾಗ ಈ ವಿಷಯವನ್ನು ನನ್ನ
ಮಕ್ಕಳಾದ ಓಂಪ್ರಕಾಶ & ಶಿವಪ್ರಕಾಶ ರವರಿಗೆ ತಿಳಿಸಿ ಎಲ್ಲರೂ ಕೂಡಿ
ಇಷ್ಟು ದಿವಸ ಆಳಂದ ಪಟ್ಟಣ ಹಾಗೂ ಅಲ್ಲಲ್ಲಿ ಹುಡುಕಾಡಿ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ನನ್ನ
ಮೋಟಾರ್ ಸೈಕಲ ನಂ.ಕೆಎ-32 ಇ.ಡಿ-8378 ಅದರ ಚೆಸ್ಸಿ ನಂಬರ.MBLHA10ASDHF70331.ಇಂಜಿನ್ ನಂ.HA10ELDHF26185
ಅಂತಾ
ಇದ್ದು ಅದರ ಅಂದಾಜು ಕಿಮ್ಮತ್ತು 35,000/-
ರೂಪಾಯಿ ಇದ್ದು
ನನ್ನ ಮೋಟರ್ ಸೈಕಲವನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ 12/01/2020
ರ ಸಾಯಂಕಾಲ 06:00 ಗಂಟೆಯಿಂದ ದಿನಾಂಕ:15/01/2020 ರ ಬೆಳಗಿನ 11-00 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೆಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Subscribe to:
Posts (Atom)