ಅಪಘಾತ
ಪ್ರಕರಣ :
ರೇವೂರ ಠಾಣೆ : ದಿನಾಂಕ
29/01/2020 ರಂದು ನಮ್ಮ ಗ್ರಾಮದ ಗುಂಡಪ್ಪ ತಂದೆ ಸುಭಾಷ ಅಂತರಂಗಿ ರವರ ದೇವರ ಕಾರ್ಯಾಕ್ರಮ
ಯಂಕಂಚಿಯಲ್ಲಿ ಇದ್ದ ಪ್ರಯುಕ್ತ ಸದರಿ ಕಾರ್ಯಕ್ರಮಕ್ಕೆ ನಮಗೆ ಹಾಗು ನಮ್ಮ ಗ್ರಾಮದ ಜನರಿಗೆ
ಹೇಳಿರುತ್ತಾರೆ ಸದರಿ ದೇವರ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ನನ್ನ ಮಗ ನನಗೆ
ತಿಳಿಸಿದ್ದೆನೆಂದರೆ ನಾನು ಹಾಗು ನಮ್ಮ ಗ್ರಾಮದ ಗುಂಡಪ್ಪ ತಂದೆ ಭೀಮರಾವ ಮಾನೆ, ರಾಜಕುಮಾರ ತಂದೆ
ಪರಮೇಶ್ವರ ಖಂಡೇಕರ ಮೂರು ಜನರು ನಮ್ಮ ಗ್ರಾಮದ ವಿಠ್ಠಲ ತಂದೆ ವಿಶ್ವನಾಥ ಖಂಡೇಕರ ರವರ ಮೋಟಾರ
ಸೈಕಲ್ ನಂ ಕೆಎ-32 ಇಎನ್-1284 ನೇದ್ದನ್ನು ತಗೆದುಕೊಂಡು ಹೋಗುತ್ತೇವೆ ಸದರಿ ಮೋಟಾರ್ ಸೈಕಲ್
ರಾಜಕುಮಾರ ಇತನು ಚಲಾಯಿಸುತ್ತಾನೆ ಅಂತ ಹೇಳಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹೋಗಿರುತ್ತಾರೆ ದಿನಾಂಕ 30/01/2020 ಬೆಳಿಗ್ಗೆ
6.30 ಗಂಟೆಯ ಸುಮಾರಿಗೆ ನನ್ನ ಮಗ ಮಹಾದೇವಪ್ಪನ
ಮೊಬೈಲ್ ಪೊನದಿಂದ ನನಗೆ ಪೋನ ಮಾಡಿದ್ದು ಸದರಿಯವರು ತಮ್ಮ ಹೆಸರು ಮುತ್ತುಗೌಡ ಪಾಟೀಲ
ಸಾ||ರೇವೂರ(ಬಿ) ಅಂತ ಹೇಳಿ ಈ ಮೋಬೈಲ ಪೊನ ಇದ್ದ ವ್ಯಕ್ತಿ ಮತ್ತು ಇನ್ನೂ ಇಬ್ಬರು ಮೋಟಾರ್ ಸೈಕಲ್
ನಂ ಕೆಎ-32 ಇಎನ್-1284 ನೇದ್ದು ಕುಲಾಲಿ
ರೇವೂರ(ಬಿ) ರೋಡಿಗೆ ರೇವೂರ(ಕೆ) ಸಿಮಾಂತರದಲ್ಲಿ ಗುಂಡೇರಾವ ಪೋಲೀಸ ಪಾಟೀಲ ರವರ ಹೊಲದ ಹತ್ತಿರ
ಮೋಟಾರ್ ಸೈಕಲ್ ರೋಡಿನ ಪಕ್ಕದಲ್ಲಿರುವ ಒಂದು
ಗಿಡಕ್ಕೆ ಡಿಕ್ಕಿ ಹೊಡೆದು ರೋಡಿನ ಪಕ್ಕದ ತಗ್ಗಿನಲ್ಲಿ ಬಿದ್ದು ಮುಖಕ್ಕೆ ತಲೆಗೆ ಭಾರಿ
ರಕ್ತಗಾಯವಾಗಿ ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾರೆ. ಅಂತ ತಿಳಿಸಿದ ಬಳಿಕ ಕೂಡಲೆ ನಾನು ನಮ್ಮ ಗ್ರಾಮದ ಪರಮೇಶ್ವರ ಖಂಡೇಕರ,
ರುಕ್ಮಿಣಿ ಮಾನೆ, ವಿಠ್ಠಲ ಮದರಿ, ಸಿದ್ದಾರಾಮ ಮಾಶಾಳ, ಚಂದ್ರಕಾಂತ ಕವಲಗಿ ಹಾಗು ಗೌಡಪ್ಪಗೌಡ
ಪೋಲೀಸ್ ಪಾಟೀಲ ಎಲ್ಲರು ಒಂದು ಖಾಸಗಿ ವಾಹನದಲ್ಲಿ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗನ ತಲೆಗೆ ಹಾಗು ಮುಖಕ್ಕೆ ಭಾರಿ
ರಕ್ತಗಾಯವಾಗಿದ್ದು, ಗುಂಡಪ್ಪ ಈತನಿಗೆ ತಲೆಗೆ, ಮುಖಕ್ಕೆ ಹಾಗು ರಾಜಕುಮಾರ ಇತನಿಗೆ ಮುಖಕ್ಕೆ
ತಲೆಗೆ ಭಾರಿ ರಕ್ತಗಾಯವಾಗಿ ಮೂರು ಜನರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ನಾವು ಬಂದಿದ್ದ
ಖಾಸಗಿವಾಹನದಲ್ಲಿ ಮೃತ ದೇಹಗಳನ್ನು ಹಾಕಿಕೊಂಡು ಅಫಜಲಪೂರದ ಸರಕಾರಿ ಆಸ್ಪತ್ರೆಯ
ಶವಗಾರದಲ್ಲಿ ಸೇರಿಕೆ ಮಾಡಿ ಈಗ ಠಾಣೆಗೆ
ಬಂದಿರುತ್ತೇವೆ. ಸದರಿ ಘಟನೆಯು ದಿನಾಂಕ
29/01/2020 ರಂದು ರಾತ್ರಿ 11 ಪಿಎಮ್ ದಿಂದ ದಿನಾಂಕ 30/01/2020 ರಂದು ಬೆಳಿಗ್ಗೆ 5.00 ಗಂಟೆಯ
ಮದ್ಯದ ಅವದಿಯಲ್ಲಿ ಸಂಬವಿಸಿರುತ್ತದೆ ಮೋಟಾರ್ ಸೈಕಲ್ ಸವಾರನಾದ ರಾಜಕುಮಾರ ತಂದೆ ಪರಮೇಶ್ವರ
ಖಂಡೇಕರ ಈತನು ಅತಿವೇಗವಾಗಿ ಮತ್ತು
ನಿರ್ಲಕ್ಷತನದಿಂದ ನಡೆಸಿ ರೋಡಿನ ಪಕ್ಕದಲ್ಲಿರುವ ಒಂದು ಗಿಡಕ್ಕೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿ
ತಾನು ಮೃತಪಟ್ಟು ನನ್ನ ಮಗ ಮಹಾದೇವಪ್ಪ ಮತ್ತು
ಗುಂಡಪ್ಪನ ಸಾವಿಗೆ ಕಾರಣನಾದ ರಾಜಕುಮಾರ ಖಂಡೇಕರ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು ಅಂತ ಶ್ರೀಮತಿ ಚಂದಮ್ಮ ಗಂಡ ಮಾರುತಿ ಖರಾತ
ಸಾ||ಮಾಡ್ಯಾಳ ತಾ||ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕಲರಣ
ದಾಖಲಾಗಿದೆ.
No comments:
Post a Comment