POLICE BHAVAN KALABURAGI

POLICE BHAVAN KALABURAGI

18 December 2019

KALABURAGI DISTRICT REPORTED CRIMES

ಅನಧಿಕೃತವಾಗಿ ಮಧ್ಯ ಮಾರಾಟಮಾಡುತ್ತಿದ್ದವನ ಬಂಧನ :
ವಾಡಿ ಠಾಣೆ : ದಿನಾಂಕ:16/12/2019 ರಂದು ಮದ್ಯಾಹ್ನ ವಾಡಿ  ಪೊಲೀಸ ಠಾಣಾ ವ್ಯಾಪ್ತಿಯ ಯಾಗಾಪೂರ ಗ್ರಾಮದಲ್ಲಿ ಸಾಬಣ್ಣಾ ತಂದೆ ಮಲ್ಲಪ್ಪ ಚನ್ನಬಾನವರ ಎನ್ನುವನು ತನ್ನ ಚಹಾದ ಹೊಟೇದಲ್ಲಿ ಯಾವದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮದ್ಯದ ಬಾಟಲಗಳನ್ನು ಇಟ್ಟು ಜನರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾನೆ ಅಂತಾ ಬಂದ ಬಾತ್ಮೀ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಮಾನ್ಯ ಸಿಪಿಐ ಸಾಹೇಬರು ಚಿತ್ತಾಪೂರ ವೃತ್ತ ರವರಿಗೆ ಮಾಹಿತಿ ತಿಳಿಸಿ ಅವರ  ಮಾರ್ಗದರ್ಶನದಲ್ಲಿ  ಯಾಗಾಪೂರ ಗ್ರಾಮದ ಸಾಬಣ್ಣಾ ಚನ್ನಬಾನವರ ರವರ ಹೊಟೇಲ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಕೆಳಗಡೆ ಇಳಿದು ನೋಡಲಾಗಿ ಹೊಟೇಲ ಹತ್ತಿರರಿಂದ ಒಬ್ಬಿಬ್ಬರು ನಮ್ಮ ಪೊಲೀಸ ಜೀಪ ನೋಡಿ ಓಡಲು ಪ್ರಾರಂಭಿಸಿದಾಗ ನಾವು ಸದರಿಯವನ ಹೊಟೇಲ ಹತ್ತಿರ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ನಿಂತುಕೊಂಡಿದ್ದು ಆತನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಸಾಬಣ್ಣಾ ತಂದೆ ಮಲ್ಲಪ್ಪ ಚನ್ನಬಾನವರ ಸಾಃಯಾಗಾಪೂರ ಅಂತಾ ತಿಳಿಸಿದ್ದು ಪಂಚರ ಸಮಕ್ಷಮ ಹೊಟೇಲ ಒಳಗಡೆ ಹೋಗಿ ಪರಿಶೀಲಿಸಿ ನೋಡಲಾಗಿ ಒಂದು ರಟ್ಟಿನ ಡಬ್ಬಾದಲ್ಲಿ ಬಾಟಲಗಳಿದ್ದು ಪರಿಶೀಲಿಸಿ ನೋಡಲಾಗಿ 1] ಕಿಂಗ ಪೀಶರ ಕಂಪನಿಯ ಬಿಯರ್ ತುಂಬಿದ 330 ಎಮ್.ಎಲ್ ದ 53 ಟಿನ್ ಡಬ್ಬಾಗಳಿದ್ದು ಒಂದರ ಅಂದಾಜು ಕಿಮ್ಮತ್ತು 80 ರೂ ಪಾಯಿ ಆಗುತ್ತಿದ್ದು ಒಟ್ಟು 4240/-ರೂಪಾಯಿ ಆಗುತ್ತದೆ. 2] ಇನ್ನೊಂದು ಕೈ ಚೀಲ ಇದ್ದು ಅದರಲ್ಲಿ ಪರಿಶೀಲಿಸಿ ನೋಡಲಾಗಿ ಓಲ್ಡ್ ಟವರಿನ್  ವಿಸ್ಕಿ ಮದ್ಯ ತುಂಬಿದ 180 ಎಮ್ ಎಲ್ ದ 15 ಪೌಚುಗಳಿದ್ದು ಒಂದರ ಕಿಮ್ಮತ್ತು 74,13 ಪೈಸೆ ಇದ್ದು ಒಟ್ಟು 1111 ರೂಪಾಯಿ 95 ಪೈಸೆ ಆಗುತ್ತದೆ. 3] ಇನ್ನೊಂದು ರಟ್ಟಿನ ಡಬ್ಬಾದಲ್ಲಿ  ಪರಿಶೀಲಿಸಿ ನೋಡಲಾಗಿ ಕಿಂಗ್ ಪೀಶರ ಸ್ಟ್ರಾಂಗ ಕಂಪನಿಯ ಬಿಯರ್ ತುಂಬಿದ 650 ಎಮ್.ಎಲ್ ದ 30 ಬಾಟಲಗಳಿದ್ದು ಒಂದು ಬಾಟಲ ಕಿಮ್ಮತ್ತು 145 ರೂಪಾಯಿ ಇದ್ದು ಒಟ್ಟು 4640/-ರೂಪಾಯಿ ಆಗುತ್ತದೆ. ಸದರಿ ಮದ್ಯವನ್ನು ಎಲ್ಲಿಂದ ತಂದಿರುವದಾಗಿ ವಿಚಾರಿಸಲಾಗಿ ಚಿತ್ತಾಪೂರದ ಅಶ್ಚನಿ ವೈನಶಾಪ್ ರವರಿಂದ ಮಾರಾಟ ಮಾಡಲು ತಂದಿರುವದಾಗಿ ತಿಳಿಸಿದ್ದು ಇರುತ್ತದೆ. ಸದರಿಯವನು ಯಾವದೇ ಪರವಾನಿಗೆ ಅಥವಾ ಲೈಸನ್ಸ ಇಲ್ಲದೇ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವದಾಗಿ ಒಪ್ಪಿಕೊಂಡಿದ್ದು ಸದರಿ ಜಪ್ತಿ ಪಡಿಸಿಕೊಂಡು ಮುದ್ದೆಮಾಲು ಹಾಗೂ ಆರೋಪಿತನನೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀ ಆನಂದ ಸಿಪಿಸಿ-1258 ನರೋಣಾ ಪೊಲೀಸ್ ಠಾಣೆ ರವರು  ದಿನಾಂಕ:16/12/2019 ರಂದು ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಗಳಾದ ಕಡಗಂಚಿ, ಲಾಡಚಿಂಚೋಳಿ, ಹಾಗೂ ಲಾಡಚಿಂಚೋಳಿ ತಾಂಡಾಕ್ಕೆ ಗುಪ್ತ ಮಾಹಿತಿ ಸಂಗ್ರಹಿಸುವ ಕುರಿತು ಹೋದಾಗ ಸಾಯಂಕಾಲ 4-00 ಗಂಟೆಗೆ ಎಸ್.ಹೆಚ್:10 ರಸ್ತೆಯ ಮೇಲೆ ಡೋಗಿನಾಲಾ ಕ್ರಾಸ್ ತಿರುವಿನಲ್ಲಿ ಒಂದು ಸಿಮೇಂಟ್ ಚೀಲಗಳು ತುಂಬಿದ ಲಾರಿ ನಂಬರ್ ಎನ್.ಎಲ್01-ಎಡಿ5468 ನೇದ್ದು ಪಲ್ಟಿಯಾಗಿ ರೋಡಿನ ಪಕ್ಕ ಬಿದ್ದಿದ್ದು ಸದರಿ ಲಾರಿಯ ಚಾಲಕನಾಗಲಿ ಮಾಲೀಕನಾಗಲಿ ಲಾರಿ ಹತ್ತಿರ ಇರುವುದಿಲ್ಲ. ಸದರಿ ಅಪಘಾತದ ಬಗ್ಗೆ ಸ್ಥಳಿಯರಲ್ಲಿ ವಿಚಾರಿಸಿದಾಗ ಸದರಿ ಲಾರಿ ಚಾಲಕನು ದಿನಾಂಕ:16/12/2019 ರಂದು ಬೆಳಿಗ್ಗೆ 03-00 ಗಂಟೆಯಿಂದ 03-30 ಗಂಟೆಯ ಮಧ್ಯದ ಅವಧಿಯಲ್ಲಿ ಕಲಬುರಗಿ ಕಡೆಯಿಂದ ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಲಾರಿ ಪಲ್ಟಿಯಾಗಿ ಅಪಘಾತವಾಗಿದ್ದು ಲಾರಿ ಚಾಲಕನು ಸದರಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುವುದಾಗಿ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 December 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 11/12/2019 ರಂದು ಬೆಳಿಗ್ಗೆ ಶ್ರೀಮತಿ ಇಂದ್ರಾಬಾಯಿ ಗಂಡ ಮಲ್ಲಿಕಾರ್ಜುನ ಜಮಾದಾರ ಸಾ: ಸೊನ್ನ ರವರಿಗೆ  ಒಂದು ಫೋನ್ ಕರೆ ಬಂದು ಫೋನ್ ಮಾಡಿದವರು ಶ್ರೀ ಬಸವಂತ ತಂದೆ ಲಕ್ಷ್ಮಣ ತಳವಾರ ಇವರು ಹೇಳಿದ್ದೇನೆಂದರೆ ಅಫಜಲಪೂರ-ವಿಜಯಪೂರ ರೋಡ ಶಿವಲಿಂಗ ಜಮಾದಾರ ರವರ ಹೊಲದ ಹತ್ತಿರ ನಿನ್ನ ಗಂಡ ಮಲ್ಲಿಕಾರ್ಜುನ ಮತ್ತು ನಾನು ಇಬ್ಬರು ಕೂಡಿಕೊಂಡು ವಾಕಿಂಗ್ ಗೆ ಹೋಗುತ್ತಿದ್ದಾಗ ನಾನು ಮೂತ್ರ ವಿಸರ್ಜನೆಗೆಂದು ರಸ್ತೆಯ ಬದಿಗೆ ಹೋದಾಗ ಹಿಂದಿನಿಂದ ಒಂದು ಕಾರು ಅಂದರ ಸ್ವಿಪ್ಟ ಡಿಜಾಯರ ದೇವಣಗಾಂವ ಕಡೆಯಿಂದ ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಅಡ್ಡಾ ದಿಡ್ಡಿಯಾಗಿ ಎಡಗಡೆ ಹೋಗುತ್ತಿದ್ದ ನಿನ್ನ ಗಂಡನಿಗೆ ವೇಗವಾಗಿ ಗುದ್ದಿತು ಆಗ ನಿನ್ನ ಗಂಡನ ಕಾಲಿನ ಮೇಲೆ, ಟೊಂಕದ ಮೇಲೆ ಹಾಯ್ದು ಹೋಗುವಾಗ ನಾನು ನೋಡಲಾಗಿ ಬಿಳಿ ಬಣ್ಣದ ಸ್ವೀಪ್ಟ ಡಿಜಾಯರ ಕಾರ ಹಿಂದಿನಿಂದ ಗುದ್ದಿದೆ ಕಾರ ನಂಬರ ಕೆಎ-28-ಪಿ-0850 ಇದ್ದು ಅಪಘಾತ ಪಡೆಸಿ ಅಫಜಲಪೂರ ಕಡೆ ಕಾರ ಸಮೇತ ಓಡಿ ಹೋಗಿತ್ತಾನೆಂದು ಆಗ ಪ್ರತ್ಯಕ್ಷ ನೋಡಿದ ಬಸವಂತ ತಳವಾರ ಹಾಗೂ ರಸ್ತೆಯ ಮೇಲೆ ಹೊರಟ ಇತರರು ನೋಡಿ ನನಗೆ ಹೇಳಿದ್ದರಿಂದ ನಾನು ನನ್ನ ಮಕ್ಕಳೊಂದಿಗೆ, ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಬಂದು ನೋಡಲಾಗಿ ಬಲಗಾಲಿಗೆ, ಬಲಟೊಂಕಕ್ಕೆ ಮತ್ತು ತಲೆ, ಹಣೆಗೆ, ಮುಖಕ್ಕೆ ಮತ್ತು ಇತರೆ ಕಡೆ ಭಾರಿ ಪ್ರಮಾಣದ ಗಾಯವಾಗಿ ರಕ್ತ ಸ್ರಾವಗೊಂಡು ಮೃತಪಟ್ಟಿದ್ದು ಕಂಡು ಬಂತು ನಾನು ಬಂದು ನನ್ನ ಗಂಡನಿಗೆ ಅಪಘಾತ ಪಡೆಸಿದ ಕಾರ ಚಾಲಕ ರಹೀಮ ಬೇಗ ಸಾ: ಇಂದಿರಾ ನಗರ ಅಫಜಲಪೂರ ಇತನ ಮೇಲೆ ಕಾನೂನು ಕ್ರಮ ತಗೆದುಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಜಗದೇವಿ ಗಂಡ ಚಂದ್ರಕಾಂತ ದೊಡ್ಡಮನಿ ಮು:ಕುನ್ನೂರ ರವರು ದಿನಾಂಕ 06/12/2019 ರಂದು ಮದ್ಯಾಹ್ನ 01-00 ಗಂಟೆ ಸುಮಾರು ನಾನು ಮನೆಯಲ್ಲಿದ್ದಾಗ ನಮ್ಮ ಓಣಿಯ ರಾಜು ತಂದೆ ಭೀಮರಾಯ ದೊಡ್ಡಮನಿ ಇತನು ಮದ್ಯಪಾನ ಮಾಡಿ ನನ್ನ ಮನೆಗೆ ಬಂದು ನಿನ್ನ ಗಂಡ ಎಲ್ಲಿದ್ದಾನೆ ಅಂತಾ ಕೇಳಿದನು ಆಗ ನಾನು ಅವರು ಕೆಲಸಕ್ಕೆ ಹೋಗಿದ್ದಾರೆ ಅಂತಾ ಹೇಳಿದಾಗ ರಾಜು ಇತನು ನನ್ನೊಂದಿಗೆ ವಿನಾಕಾರಣ ತಕರಾರು ಮಾಡಿಕೊಂಡು ಹೋಗಿದ್ದು ಇರುತ್ತದೆ. ನಂತರ ಸಾಯಂಕಾಲ ನನ್ನ ಗಂಡ ಮನೆಗೆ ಬಂದಾಗ ಈ ವಿಷಯ ನನ್ನ ಗಂಡನಿಗೆ ತಿಳಿಸಿರುತ್ತೆನೆ. ನಿನ್ನೆ ದಿನಾಂಕ 10/12/2019 ರಂದು ಮದ್ಯಾಹ್ನ 02-00 ಗಂಟೆ ಸುಮಾರು ಈ ಬಗ್ಗೆ ರಾಜು ಮತ್ತು ಆತನ ಮನೆಯವರಿಗೆ ಕರೆಯಿಸಿ ಆತನಿಗೆ ಬುದ್ದಿವಾದ ಹೇಳಿ ಕಳುಹಿಸಿದರು. ನಂತರ ರಾತ್ರಿ 10-00 ಗಂಟೆ ಸುಮಾರು ನಾನು, ನನ್ನ ಗಂಡ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಾಗ ರಾತ್ರಿ 11-00 ಗಂಟೆ ಸುಮಾರು ನಮ್ಮ ಮನೆಯವರಿಗೆ ಯಾರೋ ಕೂಗಿದ ಹಾಗೇ ಶಬ್ದ ಕೇಳಿ ನಾನು ಮತ್ತು ನನ್ನ ಗಂಡ ಮನೆಯ ಹೊರಗಡೆ ಬಂದು ನೋಡಲಾಗಿ ನಮ್ಮ ಗ್ರಾಮದ ರಾಜು ತಂದೆ ಭೀಮರಾಯ ದೊಡ್ಡಮನಿ, ಅಶೋಕ ತಂದೆ ಶ್ಯಾಮರಾಯ ದೊಡ್ಡಮನಿ, ಸಚಿನ ತಂದೆ ಶ್ಯಾಮರಾಯ ದೊಡ್ಡಮನಿ, ಅಂಬ್ರೇಷ ತಂದೆ ಭೀಮರಾಯ ದೊಡ್ಡಮನಿ, ಅನುಸುಬಾಯಿ ಗಂಡ ಭೀಮರಾಯ ದೊಡ್ಡಮನಿ, ರಾಜಶ್ರೀ ಗಂಡ ರಾಜಪ್ಪ ಮುಗಟಾ,ರಾಜು ಇವರ ಸಂಬಂಧಿಕರಾದ ಗೌತಮ ತಂದೆ ನವರಂಗ, ಸದೇಶ ತಂದೆ ನವರಂಗ ಮು:ಇಬ್ಬರೂ ತಾರಫೇಲ್ ಕಲಬುರಗಿ ಹಾಗೂ ಇತರ 7-8 ಜನರಿದ್ದು ಅವರಲ್ಲಿ ರಾಜು ಇತನು ನನಗೆ ‘’ಬೋಸಡಿ ನಿನ್ನ ಸೊಕ್ಕು ಹೆಚ್ಚಾಗಿದೆ ಅಂತಾ ನನ್ನ ಬಲಗೈ ಹಿಡಿದು ಜಗ್ಗಾಡಿದ್ದು ಆಗ ನನ್ನ ಗಂಡ ಅವಳಿಗೆ ಏಕೆ ಜಗ್ಗಾಡುತ್ತಿ ಅಂತಾ ಕೇಳಿದಾಗ ನನ್ನ ಗಂಡನಿಗೆ ಅಶೋಕ ಮತ್ತು ಸಚಿನ ಕೈಯಿಂದ ಹೊಡೆ ಬಡೆ ಮಾಡ ಹತ್ತಿದರು. ಆಗ ಜಗಳದ ಬಾಯಿ ಕೇಳಿ ನಮ್ಮ ಚಿಕ್ಕಪ್ಪ ಬಸವರಾಜ ತಂದೆ ಲಾಲಪ್ಪ, ಮಸ್ತಾನ ತಂದೆ ಲಾಲಪ್ಪ, ಅತ್ತೆ ರತ್ನಾಬಾಯಿ ಗಂಡ ಲಾಲಪ್ಪ,ಸರಸ್ವತಿ ಗಂಡ ಭೀಮರಾಯ, ಬಸವರಾಜ ತಂದೆ  ಮರೆಪ್ಪ ರವರು ಬಂದು ವಿನಾಕಾರಣ ಯಾಕೇ ಹೊಡೆಯುತ್ತಿರಿ ಇವತ್ತು ಮದ್ಯಾಹ್ನ ಪಂಚಾಯತಿ ಮಾಡಿ ಬಗೆ ಹರಿಸಿರುತ್ತೆವೆ ಅಂತಾ ಹೇಳಿದಾಗ ಬಸವರಾಜ ತಂದೆ ಲಾಲಪ್ಪ ಇತನಿಗೆ ಅಶೋಕ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹಣೆಗೆ ಹೊಡೆದು ರಕ್ತಗಾಯಪಡಿಸಿದನು, ಸಚಿನ  ಮತ್ತು ಅಂಬ್ರೇಷ ಇವರು ಮಸ್ತಾನ ಹಾಗೂ ಬಸವರಾಜ  ಇವರಿಗೆ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡ ಹತ್ತಿದ್ದು ಅಲ್ಲದೇ ಗೌತಮ ಇತನು ಅಲ್ಲೇ ಬಿದ್ದ ಕಲ್ಲನ್ನು ತೆಗೆದುಕೊಂಡು ಮಸ್ತಾನ ಇತನ ಬಲ ಹೊಟ್ಟೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಸಂದೇಶ ಇತನು ಬಸವರಾಜ ತಂದೆ ಮರೆಪ್ಪ ಇತನಿಗೆ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡಿದ್ದು ಅಲ್ಲದೇ ಅನುಸುಬಾಯಿ, ರಾಜಶ್ರೀ ಇವರು ಸರಸ್ವತಿ ಇವಳಿಗೆ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡಿ ಹಾಟ್ಯಾನ್ ಮಕ್ಕಳಿಗೆ ಹೊಡೆಯರಿ ಬೀಡಬ್ಯಾಡರಿ ಸೊಕ್ಕು ಹೆಚ್ಚಾಗಿದೆ ಅಂತಾ ಬೈಯುತ್ತಿದ್ದು ಆಗ ಶರಣಬಸಪ್ಪ ತಂದೆ ಲಾಲಪ್ಪ ಮತ್ತು ಈಶ್ವರಾಜ ತಂದೆ ಮರೆಪ್ಪ ರವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಉಳಿದವರು ಸೂಳೇ ಮಕ್ಕಳೆ ನಿಮ್ಮ ಸೊಕ್ಕು ಹೆಚ್ಚಾಗಿದೆ ರಾಜು ಮತ್ತು ಅಶೋಕ ಇವರ ತಂಟೆಗೆ ಹೋದರೆ ನಿಮಗೆ ಖಲಾಸ  ಮಾಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕುತ್ತ ಹೊರಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 December 2019

KALABURAGI DISTRICT PRESS NOTE

Press Note 

2019 ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ನಿಮಿತ್ಯ ದಿನಾಂಕ 15-12-2019 ರಂದುಬೆಳಗ್ಗೆ 6:30 ನಿಮಿಷಕ್ಕೆ ಜಗತ್ ಸರ್ಕಲ್ ನಿಂದ  5 ಕಿ.ಮೀ. ವರೆಗೆ ಮ್ಯಾರಥನ್ ಓಟವನ್ನು ಹಮ್ಮಿಕೊಂಡಿದ್ದು ಆದ ಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಲು ಕೋರಲಾಗಿದೆ. 

2019 ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ನಿಮಿತ್ಯ ದಿನಾಂಕ 15-12-2019 ರಂದು ಮಧ್ಯಾಹ್ನ 12:00 ಗಂಟೆಯಿಂದ 1 ಗಂಟೆಯವರೆಗೆ ಪೊಲೀಸ್ ಭವನ ಕಲಬುರಗಿಯಲ್ಲಿ ಚಿತ್ರಜಲೆ  ಸ್ಪರ್ಧೆ ಎರ್ಪಡಿಸಿದ್ದು ಆಸಕ್ತಿಯುಳ್ಳ ಕಲಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.