POLICE BHAVAN KALABURAGI

POLICE BHAVAN KALABURAGI

02 February 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ : ದಿನಾಂಕ 01-02-2019 ರಂದು ಪಾಣೆಗಾಂವ ಕ್ರಾಸ ಬಸ್ಸ ನಿಲಾದ್ದಾಣದ ಹತ್ತಿರ ಮಾಕಾ ಜೂಜಾಟ ಆಡುತ್ತಿದ್ದರೆ ಅಂತಾ ಬಾತ್ಮ ಬಂದ ಮೇರೆಗೆ ಪಿ.ಎಸ್.. ಫರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು  ಹೆಸರು ವಿಚಾರಿಸಲು ಮಾಳಪ್ಪ ತಂದೆ ನಾಗಪ್ಪಾ ತಳ್ಳಕೇರಿ ಸಾ : ಪಾಣೆಗಾಂವ ಅಂತಾ ತಿಸಿದ್ದು ಸದರಿಯವನಿಂದ ಮಟಕಾ ಜೂಜಾಕ್ಕೆ ಬಳಸಿದ ನಗದು ಹಣ 1100/- ರೂ ಒಂದು ಬಾಲಪೆನ್ ಮತ್ತು ಮಟಕಾ ಚೀಟಿಗಳನ್ನು ವಶಕ್ಕೆ ಪಡೆದು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಕಾಶೀನಾಥ ತಂದೆ ತುಳಸಿರಾಮ ಪುಲಾರಿ ಸಾ: ಬಬಲಾದ ತಾ: ಅಕ್ಕಲಕೋಟ ಹಾ: ಅಫಜಲಪೂರ ರವರ ಮಗನಾದ ಕಾಶಿನಾಥ ಈತನು ಅಫಜಲಪೂರ ಪಟ್ಟಣದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಬಬಲಾದ ದಿಂದ ಅಫಜಲಪೂರಕ್ಕೆ ಮೋಟರ ಸೈಕಲ ಮೇಲೆ ಹೋಗಿ ಬರುವುದು ಮಾಡುತ್ತಿದ್ದು ಸದ್ಯ ಅಫಜಲಪೂರ ಪಟ್ಟಣದಲ್ಲಿ ಶ್ರೀಮಂತ ಅಂಜುಟಗಿ ರವರ ಮನೆಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು  ದಿನಾಂಕ 01-02-2019 ರಂದು ಮದ್ಯರಾತ್ರಿ 12:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ನಾವು ಕೆಲಸ ಮಾಡುವ ಶ್ರೀಶೈಲ ಬಳೂರ್ಗಿ ರವರ ಹೊಲದಲ್ಲಿನ ಮೇಟಗಿಯಲ್ಲಿ ಮಲಗಿದ್ದಾಗ, ನನ್ನ ಮಗ ಕೆಲಸ ಮಾಡುವ ಸೆಂಟ್ರಿಂಗ್ ಮೇಸ್ತ್ರಿ ಆದ ಸಂತೋಷ ಹೂಗಾರ ಈತನು ಪೋನ್ ಮಾಡಿ ನಿಮ್ಮ ಮಗ ಮತ್ತು ಗಡ್ಡೆಪ್ಪ ದೊಡ್ಡಮನಿ ಇಬ್ಬರು ಮೋಟರ ಸೈಕಲ ಮೇಲೆ ಹೋಗುತ್ತಿದ್ದಾಗ ಕರಜಗಿ ರೋಡಿಗೆ ಅಳ್ಳಗಿ (ಕೆ) ಕ್ರಾಸ ಹತ್ತಿರ ಹಿಂದಿನಿಂದ ಒಬ್ಬ ಮೋಟರ ಸೈಕಲ ಸವಾರ ಮೋಟರ ಸೈಕಲನ್ನು ಹಿಂದಿನಿಂದ ಗುದ್ದಿ ಎಕ್ಸಿಡೆಂಟ ಮಾಡಿರುತ್ತಾನೆ ಬನ್ನಿ ಅಂತಾ ತಿಳಿಸಿದ ಮೇರೆಗೆ, ನಾನು ಮತ್ತು ನನ್ನ ಹೆಂಡತಿ ಇಬ್ಬರು ಮಲ್ಲಮ್ಮ ಇಬ್ಬರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ನನ್ನ ಮಗ ಮೃತಪಟ್ಟಿದ್ದನು. ಆಗ ನಾನು ಅಲ್ಲೆ ಇದ್ದ ನನ್ನ ಮಗನ ಜೋತೆಗೆ ಕೆಲಸ ಮಾಡುವ ಗಡ್ಡೆಪ್ಪ ದೋಡ್ಡಮನಿ ಈತನಿಗೆ ವಿಚಾರಿಸಲು ಅವನು ತಿಳಿಸಿದ್ದೆನೆಂದರೆ, ನಿನ್ನೆ ದಿನಾಂಕ 31-01-2019 ರಂದು ನಾನು ಮತ್ತು ನಿಮ್ಮ ಮಗ ತುಳಸಿರಾಮ ಇಬ್ಬರು ಕೂಡಿ ಅಫಜಲಪೂರ ಪಟ್ಟಣದ ಶ್ರೀಮಂತ ಅಂಜುಟಗಿ ರವರ ಮನೆಯ ಸೆಂಟ್ರಿಂಗ್ ಕೆಲಸ ಮುಗಿಸಿ ರಾತ್ರಿ ಡಾಬಾದಲ್ಲಿ ಊಟ ಮಾಡಿಕೊಂಡು ನಮ್ಮ ಮೇಸ್ತ್ರಿ ಆದ ಸಂತೋಷ ಹೂಗಾರ ಇವರ ಹಿರೊ ಹೊಂಡಾ ಮೋಟರ ಸೈಕಲ ನಂ ಎಮ್.ಹೆಚ್-12 ಇಜೆ-1688 ನೇದ್ದರ ಮೇಲೆ ಬಬಲಾದಕ್ಕೆ ಹೊರಟಿರುತ್ತೇವೆ. ಮೋಟರ ಸೈಕಲನ್ನು ನಿಮ್ಮ ಮಗನಾದ ತುಳಸಿರಾಮನೆ ನಡೆಸುತ್ತಿದ್ದನು. ನಾನು ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದೆನು. ರಾತ್ರಿ 11:30 ಗಂಟೆ ಸುಮಾರಿಗೆ ನಾವು ಅಫಜಲಪೂರ ಕರಜಗಿ ರೋಡಿಗೆ ಇರುವ ಅಳ್ಳಗಿ (ಕೆ) ಕ್ರಾಸ ಹತ್ತಿರ ಹೋಗುತ್ತಿದ್ದಾಗ ನಮ್ಮ ಹಿಂದಿನಿಂದ ಒಬ್ಬ ಮೋಟರ ಸೈಕಲ ಸವಾರನು ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಯಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿ ಹೊಡೆದನು. ಆಗ ನಮ್ಮ ಮೋಟರ ಸೈಕಲ ರೋಡಿನ ಪಕ್ಕದಲ್ಲಿರುವ ಕೀಲೊ ಮೀಟರ ಕಲ್ಲಿಗೆ ಡಿಕ್ಕಿಯಾಗಿ ಕೆಳಗೆ ಬಿದ್ದೆವು. ಸದರಿ ಡಿಕ್ಕಿಯಿಂದ ನಿಮ್ಮ ಮಗ ತುಳಸಿರಾಮನ ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯ ಹಾಗೂ ಮೈ ಕೈಗೆ ಭಾರಿ ಗುಪ್ತಗಾಯಗಳು ಆಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂ ನೋಡಿದ್ದು ಯಮಹಾ ಕಂಪನಿಯ ಮೋಟರ ಸೈಕಲ ನಂ ಕೆಎ-32 ಇಸಿ-1864 ಇರುತ್ತದೆ. ಸದರಿ ಮೋಟರ ಸೈಕಲ ಸವಾರ ಘಟನೆ ಆದ ನಂತರ ಸ್ವಲ್ಪ ಸಮಯ ಮೋ/ಸೈ ನಿಲ್ಲಿಸಿ, ನಂತರ ಮೋಟರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂತೋಷ ತಂದೆ ಶಂಕರ ವಾಗ್ದರಗಿ ಸಾ|| ನಂದರ್ಗಾ ತಾ|| ಅಫಜಲಪೂರ ರವರಿಗೆ ಈಗ ಸುಮಾರು ಒಂದು ತಿಂಗಳಿಂದ ನಮ್ಮೂರಿನ ಸಂತೋಷ ತಂದೆ ತುಕಾರಮ ದೊಡ್ಡಮನಿ ಈತನು ನನ್ನ ಮೋಬೈಲ ನಂ 9480272750, 9632821777 ನೇದ್ದವುಗಳಿಗೆ ತನ್ನ ಮೋಬೈಲ ನಂಬರ 9972892272, 9845472072 ನೇದ್ದವುಗಳಿಂದ ನನ್ನ ಹೆಂಡತಿಯ ಬಗ್ಗೆ ಅಶ್ಲೀಲವಾಗಿ ಮೇಸೆಜಗಳನ್ನು ಕಳುಹಿಸುತ್ತಿದ್ದನು. ಬಗ್ಗೆ ನಾನು ಸಂತೋಷನಿಗೆ ಯಾಕೆ ತರ ನನ್ನ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮೇಸೆಜ್ ಮಾಡ್ತಿ ಅಂತಾ ಕೇಳಿದಾಗ ಬೋಸಡಿ ಮಗನೆ ನಿನ್ನ ಹೆಂಡತಿ ನೋಡಲು ಚೆನ್ನಾಗಿದ್ದಾಳೆ ಕಳುಹಿಸುತ್ತೇನೆ ಏನು ಮಾಡಿಕೊಳ್ಳುತ್ತಿ ಎಂದು ನನಗೆ ಬೆದರಿಸಿದ್ದನು. ಆಗ ನಾನು ಮರ್ಯಾದೆಗೆ ಅಂಜಿ ಸುಮ್ಮನಿದ್ದೆನು. ನಾನು ಸುಮ್ಮನಿದ್ದರಿಂದ ಸದರಿ ಸಂತೋಷನು ಇದೆ ರೀತಿ ಅಶ್ಲಿಲವಾದ ಮೇಸೆಜಗಳನ್ನು ಕಳುಹಿಸುತ್ತಿದ್ದರಿಂದ ನಾನು ನಮ್ಮೂರಿನ ಹಿರಿಯರಾದ ಶ್ರೀಶೈಲ ಗೌರ, ದೇವಣ್ಣ ದೋಡ್ಡಮನಿ, ಅಮೃತ ರೇವೂರ, ಸಿದ್ರಾಮ ಮಾಗಣಗೇರಿ ರವರಿಗೂ ಸಹ ಹೇಳಿದ್ದು, ಸದರಿಯವರು ಸಂತೋಷನಿಗೆ ಕರೆಸಿ ಬುದ್ದಿವಾದ ಹೇಳಿದ್ದರು. ಅಂದನಿಂದ ಸಂತೋಷ ದೊಡ್ಡಮನಿ ಈತನು ನಾನು ಸಿಕ್ಕಾಗಲೆಲ್ಲಾ ಮಗನೆ ನನ್ನ ಬಗ್ಗೆನೆ ಊರ ಜನರ ಮುಂದೆ ಹೇಳುತ್ತಿ ಮುಂದೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದನು. ಮತ್ತು ನನ್ನ ಅಣ್ಣನಾದ ಸಿದ್ರಾಮಪ್ಪನಿಗೆ ನಿನ್ನ ತಮ್ಮನಿಗೆ ಹುಶಾರಿನಿಂದ ಇರುವುದಕ್ಕೆ ಹೇಳು ಅವನ ಜೀವಾ ನನ್ನ ಕೈಯಲ್ಲೆ ಹೋಗೊದು ಅಂತಾ ಹೇಳಿರುತ್ತಾನೆ.  ದಿನಾಂಕ 01-02-2019 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಕಾವೇರಿ ಹಾಗೂ ನನ್ನ ತಂದೆಯಾದ ಶಂಕರ, ತಾಯಿಯಾದ ಜಗಧೇವಿ ಎಲ್ಲರೂ ನಮ್ಮ ಮನೆಯಲ್ಲಿದ್ದಾಗ ಸಂತೋಷ ತಂದೆ ತುಕಾರಾಮ ದೋಡ್ಡಮನಿ ಈತನು ಟ್ಯಾಕ್ಟರ ತಗೆದುಕೊಂಡು ಬಂದು ನಮ್ಮ ಮನೆಯ ಮುಂದೆ ಟ್ಯಾಕ್ಟರ ನಿಲ್ಲಿಸಿ, ಕೈಯಲ್ಲಿ ಚಾಕು ಹಿಡಿದುಕೊಂಡು ನಮ್ಮ ಮನೆಯಲ್ಲಿ ಬಂದು ಕಾವೇರಿ ರಂಡಿ ಎಲ್ಲಿದಿ ಹೊರಗ ಭಾ ನಿನ್ನಿಂದ ನನ್ನ ತಲೆ ಪೂರ್ತಿ ಕೆಟ್ಟಾದ, ಒಂದ ಸಾರಿ ಭಾ ಎಂದು ಅಶ್ಲೀಲ ಶಬ್ದಗಳಿಂದ ಬೈದು ಅಲ್ಲೆ ಇದ್ದ ನನ್ನ ಹೆಂಡತಿಯ ಕೈ ಹಿಡಿದು ಜಗ್ಗಿದನು. ಆಗ ನಾನು ಮತ್ತು ನನ್ನ ತಂದೆ ತಾಯಿ ಸಂತೋಷನಿಗೆ ನಮ್ಮ ಮನೆಗೆ ಬಂದು ನಮ್ಮ ಮೇಲೆಯೆ ದಬ್ಬಾಳಿಕೆ ಮಾಡುತ್ತಿ ಎಂದು ಕೇಳುತ್ತಿದ್ದಾಗ, ಸಂತೋಷನು ಮಗನೆ ನಿನಗ ಖಲಾಸ ಮಾಡಿದ್ರ ನಿನ್ನ ಹೆಂಡತಿ ನನಗೆ ಸಿಗ್ತಾಳ ಇವತ್ತ ನಿನಗ ಸಾಯಿಸೆ ಬಿಡ್ತಿನಿ ಎಂದು ಚಾಕು ತಗೆದುಕೊಂಡು ನನಗೆ ಹೊಡೆಯಲು ಬಂದನು ಆಗ ನಾನು ಅವನಿಂದ ತಪ್ಪಿಸಿಕೊಂಡಾಗ ಸಂತೋಷನ ಕೈಯಲ್ಲಿದ್ದ ಚಾಕು ಕೆಳಗೆ ಬಿದ್ದಿತು, ಆಗ ನನಗೆ ಸಂತೋಷನು ಕಾಲಿನಿಂದ ಒದ್ದಾಗ ನಾನು ಕೆಳಗೆ ಬಿದ್ದೆನು, ಆಗ ಸಂತೋಷನು ಮಗನೆ ನಿನಗೆ ಇವತ್ತ ಸಾಯಿಸಿ ಬಿಡ್ತಿನಿ ಅಂತಾ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕಾಲಿನಿಂದ ನನ್ನ ತೊಡ್ಡಿನ ಮೇಲೆ ಜೋರಾಗಿ ಒದ್ದು, ನನ್ನ ಕುತ್ತಿಗೆಯ ಮೇಲೆ ಕಾಲು ಇಟ್ಟನು. ಆಗ ನನ್ನ ತಂದೆ ತಾಯಿ ಮತ್ತು ನನ್ನ ಹೆಂಡತಿ ಹಾಗೂ ಬಾಯಿ ಸಪ್ಪಳ ಕೇಳಿ ಬಂದ ಆನಂದ ಶವರೆ, ರಮೇಶ ಪಾಟೀಲ, ಶಿವುಕುಮಾರ ಹಿರೇಮಠ, ಸಿದ್ರಾಮ ಕುಂಬಾರ ಇನ್ನು ಕೆಲವು ಜನರು ಬಂದು ಬಿಡಿಸುತ್ತಿದ್ದಾಗ ಸಂತೋಷನು ಅವರ ಮಾತನ್ನು ಸಹ ಕೇಳದೆ ಎಲ್ಲರ ಮುಂದೆಯೆ ನನ್ನ ಹೆಂಡತಿಯ ಸೀರೆ ಎಳೆದು ರಂಡಿ ಭಾ ಎಂದು ನನ್ನ ಹೆಂಡತಿಗೆ ಜಗ್ಗಾಡಿ ಕಪಾಳಕ್ಕೆ ಹೊಡೆದನು. ಆಗ ನನಗೂ ಮತ್ತು ಸಂತೋಷನಿಗೂ ಜಗಳ ಆಗುತ್ತಿದ್ದಾಗ ಅಲ್ಲಿದ್ದವರೆಲ್ಲರೂ ಕೂಡಿ ಬಿಡಿಸಿ ಕಳುಹಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂತೋಷ ತಂದೆ ತುಕಾರಾಮ ದೊಡ್ಡಮನಿ ಸಾ|| ನಂದರ್ಗಾ ರವರು ದಿನಾಂಕ 01-02-2019 ರಂದು ನಮ್ಮ ಗ್ರಾಮದ ಭಿಮರಾಯಗೌಡ ಪೊಲೀಸ್ ಪಾಟೀಲ ರವರ ಹೊಲಕ್ಕೆ ನೇಗಿಲು ಹೊಡೆಯಲೆಂದು ನನ್ನ ಟ್ಯಾಕ್ಟರ ತಗೆದುಕೊಂಡು ಬೆಳಿಗ್ಗೆ ಹೋಗಿ ನೇಗಿಲು ಹೊಡೆದು ಮರಳಿ ಬರುತ್ತಿರುವಾಗ ಮಾರ್ಗ ಮದ್ಯದಲ್ಲಿ ನಮ್ಮ ಗ್ರಾಮದ ಸಂತೋಷ ತಂದೆ ಶಂಕರ ವಾಗ್ದರಗಿ ರವರ ಮನೆಯ ಮುಂದಿನ ರಸ್ತೆಯ ಮೇಲೆ ಬಂದಾಗ ಸಂತೋಷನು ನನ್ನ ಟ್ಯಾಕ್ಟರಕ್ಕೆ ಅಡ್ಡಲಾಗಿ ನಿಂತನು. ನಾನು ಸದರಿಯವರನಿಗೆ ನನ್ನ ಟ್ಯಾಕ್ಟರ ಮುಂದೆ ಯಾಕೆ ನಿಂತಿದ್ದಿಯಾ ಬಾಜು ಸರಿ ಅಂತಾ ಅಂದಿದ್ದಕ್ಕೆ ಸಂತೋಷನು ನನಗೆ ಬೋಸಡಿ ಮಗನೆ ನಮ್ಮ ಮನೆಯ ಮುಂದೆ ಯಾಕೆ ಟ್ಯಾಕ್ಟರ ತಂದಿದ್ದಿಯಾ ಅಂತಾ ಅವಾಚ್ಯವಾಗಿ ಬೈದು ತನ್ನ ತಮ್ಮಂದಿರಾದ ಸಿದ್ದಾರಾಮ ಹಾಗೂ ವಿಜಯಕುಮಾರನಿಗೆ ಕೂಗಿ ಕರೆದನು. ಆಗ ಸದರಿಯವರನು ಓಡಿ ಬಂದರು ಆಗ ನಾನು ಭಯಬಿದ್ದು ಟ್ಯಾಕ್ಟರ ಕೆಳಗೆ ಇಳಿದಾಗ ನನಗೆ ಮುಂದೆ ಹೋಗದಂತೆ ಮೂವರು ತಡೆದರು. ತಡೆದು ಸಿದ್ದರಾಮನು ತನ್ನ ಜೇಬಿನಲ್ಲಿದ್ದ ಚಾಕು ತಗೆದು ನನ್ನ ಏಡಕಿವಿಯ ಹತ್ತಿರ ಹೊಡೆದನು. ಮತ್ತು ವಿಜಯ ಕುಮಾರನು ನನ್ನ ಏಡಗಡೆಯ ರಟ್ಟೆಯ ಮೇಲೆ ಹಾಗೂ ಏಡ ಮೋಳಕಾಲು ಕೆಳಗೆ ಬಡಿಗೆಯಿಂದ ಹೊಡೆದು ತರಚಿದ ಗಾಯ ಮತ್ತು ಗುಪ್ತಗಾಯ ಗೋಳಿಸಿದನು. ಆಗ ಅಲ್ಲೆ ಹೋಗುತ್ತಿದ್ದ ನಮ್ಮ ಗ್ರಾಮದ ಸೀರಾಜ ತಂದೆ ಮೈನೋದ್ದಿನ್ ಜಾಗಿರದಾರ ಬಿಡಿಸಲು ಬಂದರು ಅವರಿಗೂ ಕೂಡಾ ಕೇಳದೆ ವಿಜಯಕುಮಾರನು ನನ್ನ ಕಣ್ಣಲ್ಲಿ ಕಾರ ಎಸೆದನು. ಆಗ ಸಂತೋಷನು ಅಲ್ಲೆ ಬಿದ್ದ ಕಲ್ಲು ತಗೆದುಕೊಂಡು ನನಗೆ ಹೊಡೆದು ಗುಪ್ತಗಾಯಗೊಳಿಸಿ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

31 January 2019

KALABURAGI DISTRICT REPORTED CRIMES

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 28-01-2019 ರಂದು ಶ್ರೀಮತಿ ರವರ ಮಗಳು ಲೂಜ ಮೂಷನ್ ಆಗಿದ್ದರಿಂದ  ರಾತ್ರಿ 11;00 ಗಂಟೆಗೆ ನನಗೆ ಎಬ್ಬಿಸಿ ನಾನು ಬೈಹಿರದೇಸೆ ಹೋಗಬೇಕು ನನ್ನೊಂದಿಗೆ ಬಾ ಅಂತಾ ಹೇಳಿದಳು, ಆಗ ನಾನು ಅವಳಿಗೆ ನಿನೊಬ್ಬಳೆ ಹೋಗಿ ಅಲ್ಲೆ ರೋಡಿನ ಪಕ್ಕದಲ್ಲಿ ಕೂಳಿತು ಬಾ ಅಂತಾ ಹೇಳಿ ಕಳುಹಿಸಿಕೊಟ್ಟೆ, ಸ್ವಲ್ಪ ಹೊತ್ತಾದನಂತರ ನನ್ನ ಮಗಳು ಮರಳಿ ಬರಲಿಲ್ಲಾ, ನಂತರ ನಾನು ನನ್ನ ಗಂಡ ಇಬ್ಬರು ಕೂಡಿ ರೋಡಿನ ಹತ್ತಿರ ಹೋದಾಗ ಅಲ್ಲೇ ಸಜ್ಜನ ಕಾಂಪ್ಲೆಕ್ಸ ಹತ್ತಿರ ಚೀರಾಡುವ ಸಪ್ಪಳ ಕೇಳಿ ನಾವಿಬ್ಬರು ಅಲ್ಲಿ ಹೋಗಿ ನೋಡಿದಾಗ ನಮ್ಮ ಮಗಳು ರೋಡಿನ ಹತ್ತಿರ ನಿಂತು ಚೀರಾಡುತ್ತಿದ್ದಳು, ಹಾಗು ಮೋಟರ ಸೈಕಲ್ ಗ್ಯಾರೇಜಿನ ರಶೀದ ಮತ್ತು ಅವನೊಂದಿಗೆ ಅಲ್ಲೆ ಕೆಲಸ ಮಾಡುತ್ತಿದ್ದ ಮಂಜುರಪಟೇಲ ಎಂಬುವರು ನಮ್ಮ ಸಂಬಂಧಿಕನಾದ ಧನಸಿಂಗ ತಂದೆ ಸೋಮಸಿಂಗ್ ಪವಾರ ರವರಿಗೆ ಕುತ್ತಿಗೆ ಹಿಚುಕಿ ಸಾಯಿಸಲು ಪ್ರಯತ್ನ ಪಡುತ್ತಿದ್ದರು, ಆಗ ನಾನು ನನ್ನ ಗಂಡ ಮತ್ತು ನಮ್ಮ ತಾಂಡಾದ ದಾದಾರಾಮ ತಂದೆ ದಾಮು ರಾಠೋಡ, ಖೇಮು ತಂದೆ ಲಕ್ಷ್ಮಣ ರಾಠೋಡ ರವರು ಕೂಡಿ ಬಿಡಿಸಿಕೊಂಡಿರುತ್ತೇವೆ, ಆಗ ಅವರಿಬ್ಬರು ಅಲ್ಲಿಂದ ಓಡಿ ಹೋದರು, ನಂತರ ನನ್ನ ಮಗಳಿಗೆ ಘಟನೆ ಕುರಿತು ಕೇಳಿದಾಗ ಹೇಳಿದ್ದೇನೆಂದರೆ,  ನಾನು ಬೈಹಿರದೇಸೆಗೆ ಸಜ್ಜನ ಕಾಂಪ್ಲೇಕ್ಸ ಹಿಂದೆ ಹೋಗಿ ಮರಳಿ ಮನೆಗೆ ಬರುವಾಗ ರಶೀದ ತಂದೆ ಬಾಬು ಮತ್ತು ಅವನೊಂದಿಗೆ ಇದ್ದ ಮಂಜುರಪಟೇಲ ಎಂಬುವರಿಬ್ಬರು ನನಗೆ ತಡೆದು ನಿಲ್ಲಿಸಿದರು, ನಂತರ ಅವರಿಬ್ಬರು ನನಗೆ ಒತ್ತಾಯಪೂರ್ವಕವಾಗಿ ಎಳೆದುಕೊಂಡು ತಮ್ಮ ಗ್ಯಾರೆಜನ ಹಿಂದೆ ಇರುವ ರೂಮಿಗೆ ಒಯ್ದರು, ಆಗ ರಶೀದ ಈತನು ನನಗೆ ಚೀರಾಡಿದರೆ ನಿನಗ ಖಲಾಸ ಮಾಡುತ್ತೇನೆ ಅಂತಾ ಅಂದನು, ಆಗ ನಾನು ಅಂಜಿ ಸುಮ್ಮನಾದೇ, ರಶೀದ ಈತನು ನನಗೆ ಒತ್ತಾಯಪೂರ್ವಕವಾಗಿ ಯಾವುದೋ ಒಂದು ವಸ್ತು ತಿನ್ನಿಸಿದನು, ನಂತರ ರಶೀದ ಇವನು ನನ್ನ ಬಟ್ಟೆಯನ್ನು ತೆಗೆದು ನನಗೆ ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿದನು, ಅಷ್ಟರಲ್ಲಿ ನಮ್ಮ ಮಾವ ಧನಸಿಂಗ್ ತಂದೆ ಸೋಮಸಿಂಗ ಪವಾರ ರವರು ಸಂಡಾಸಕ್ಕೆ ಬರುವುದನ್ನು ನೋಡಿ ರಶೀದ ಮತ್ತು ಮಂಜುರಪಟೇಲ ಇಬ್ಬರು ಓಡಿ ಹೋಗುತ್ತಿದ್ದರು, ಆಗ ನಾನು ಜೋರಾಗಿ ಚಿರಾಡಿದ್ದರಿಂದ ನಮ್ಮ ಮಾವ ಅವರಿಬ್ಬರನ್ನು ಹಿಡಿದುಕೊಂಡಾಗ ಅವರಿಬ್ಬರು ನಮ್ಮ ಮಾವ ಧನಸಿಂಗ ರವರಿಗೆ ಕುತ್ತಿಗೆ ಹಿಚುಕಿ ಸಾಯಿಸಲು ಪ್ರಯತ್ನ ಪಡುತ್ತಿದ್ದರು, ಆಗ ನಿವೆಲ್ಲರೂ ಬಂದು ಬಿಡಿಸಿಕೊಂಡಿರುತ್ತಿರಿ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರೇವೂರ ಠಾಣೆ : ಶ್ರೀ ಮಹಾಂತಪ್ಪ ತಂದೆ ಸಿದ್ದಣ್ಣ ಬಿರಾದಾರ ಸಾ:ರೇವೂರ (ಕೆ) ತಾ: ಅಫಜಲಪೂರ ರವರು ದಿನಾಂಕ:28/01/2019 ರಂದು ಕುಲಾಲಿ ರೋಡಿಗೆ ಇರುವ ತಮ್ಮ ಹೋಲಕ್ಕೆ ಹೋಗಿ ಮರಳಿ ರಾತ್ರಿ 08:00 ಪಿ,ಎಮ್ ಸುಮಾರಿಗೆ ಮನೆಗೆ ಬರುವಾಗ ನಮ್ಮ ಹೋಲದ ಹತ್ತೀರ ನಮ್ಮ ಗ್ರಾಮದ ಶರಣಪ್ಪ ತಂದೆ ಶೀವಪ್ಪ ಮ್ಯಾಕೇರಿ ರವರ ಹೋಲದಲ್ಲಿ ಯಾರೋ ನರುಳಾಡುವ ಶಬ್ದ ಕೇಳಿತು. ನಾನು ಹೋಗಿ ನೋಡಲಾಗಿ ಅಂದಾಜು 60-65 ವಯಸ್ಸಿನ ಹೆಣ್ಣು ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಳು. ನಾನು ಮಾತನಾಡಿಸಿದರು ಅವಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ನಾನು ಈ ವಿಷಯವನ್ನು ನಮ್ಮ ಗ್ರಾಮದ ಅಶೋಕ ತಂದೆ ಗುರುಪಾದಪ್ಪ ಪೊಲೀಸ ಪಾಟೀಲ ರವರಿಗೆ ಮೋಬೈಲ್ ಮೂಲಕ ತಿಳಿಸಿದ ನಂತರ ಅಶೋಕ ಪಾಟೀಲ,ಲಕ್ಷ್ಮೀಪುತ್ರ ಬಿರಾದಾರ, ಹಸನಪ್ಪ ಮೇಲಿನಕೇರಿ ಮತ್ತು ನನ್ನ ಮಗನಾದ ಶಶಿಕಾಂತ ಬಿರಾದಾರ ರವರೆಲ್ಲರೂ ಸ್ಥಳಕ್ಕೆ ಬಂದ ನಂತರ 5 ಜನರು ಕೂಡಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಮಗಳನ್ನು ಚಿಕಿತ್ಸೆ ಕುರಿತು ರೇವೂರ (ಬಿ) ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಸದರಿ ವಿಷಯವನ್ನು ರೇವೂರ ಪೊಲೀಸ ಠಾಣೆಗೆ ತಿಳಿಸಿ ನಂತರ  ರೇವೂರ ಪೊಲೀಸನವರೊಂದಿಗೆ ದಿನಾಂಕ: 29/01/2019  ಮಹಿಳೆಯ ಪಾಲನೆಗಾಗಿ ರಾಜ್ಯ ಮಹಿಳಾ ನಿಲಯ ಕಲಬುರಗಿ ರವರಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಮಹಿಳಾ ನೀಲಯದವರು ಅಪರೀಚಿತ ಹೆಣ್ಣು ಮಗಳ ಹೆಚ್ಚೀನ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ಜಿಲ್ಲಾ ಸರಕಾರಿ ಆಸ್ಪತ್ರೆ  ಕಲಬುರಗಿಯಲ್ಲಿ ಸೇರಿಕೆ ಮಾಡಿರುತ್ತಾರೆ. ಇಂದು ದಿನಾಂಕ:30/01/2019 ರಂದು 12.30 ಪಿ,ಎಮ್ ಸುಮಾರಿಗೆ ರಾಜ್ಯ ಮಹಿಳಾ ನೀಲಯ ಕಲಬುರಗಿಯಿಂದ ದೂರವಾಣಿ ಮೂಲಕ ವಿಷಯ ತಿಳಿಸಿದ್ದು ಏನೆಂದರೆ, ನಾವು ರಾಜ್ಯ ಮಹಿಳಾ ನೀಲಯ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದ ಅಪರೀಚಿತ ಹೆಣ್ಣು ಮಗಳು ಚಿಕಿತ್ಸೆ ಫಲಕಾರಿ ಆಗದೇ ಇಂದು ದಿನಾಂಕ:30/01/2019 ರಂದು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾಳೆ ಅಂತಾ ವಿಷಯ ತಿಳಿದಿರುತ್ತದೆ. ಸದರಿಯವಳ ಮೃತಪಟ್ಟ ಬಗ್ಗೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ: 30-01-2019 ರಂದು ಶ್ರೀ ಅಣ್ಣಾರಾಯ ತಂದೆ ಶರಣಪ್ಪಗೌಡ ಚೆಟ್ರಕಿ, ಸಾ|| ಬಟಗೇರಾ(ಬಿ) ಗ್ರಾಮ, ತಾ|| ಸೇಡಂ, ಜಿ|| ಕಲಬುರಗಿ.  ರವರ  ಮಗನಾದ ಮಲ್ಲಿಕಾರ್ಜುನ ಇತನು ಮುಗನೂರ ಗ್ರಾಮಕ್ಕೆ ಹೋಗಿ ಮರಳಿ ತನ್ನ ಮೊಟಾರ ಸೈಕಲ್ ನಂ. ಕೆಎ32ಇಹೆಚ್6683 ನೆದ್ದರ ಮೇಲೆ 10:00 ಪಿ.ಎಮ್ ಸುಮಾರಿಗೆ ಸೇಡಂ-ಕೊಡಂಗಲ್ ಮುಖ್ಯರಸ್ತೆಯ ಮೇಲೆ ಬರುವಾಗ ಸೇಡಂ ವಾಸವದತ್ತಾ ಸಿಮೆಂಟ ಕಂಪನಿಯ ಗೇಟ ಹತ್ತಿರ ಊರಿಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಸ್ಕಾರ್ಪಿಯೋ ವಾಹನ ನಂ. ಎಮ್.ಹೆಚ್42ವಿ2122 ನೆದ್ದರ ಚಾಲಕನು ತನ್ನ ವಶದಲ್ಲಿದ್ದ ಜೀಪನ್ನು ಅತಿ ವೇಗದಿಂದ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ  ಮಗನಾದ ಮಲ್ಲಿಕಾರ್ಜುನ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸ್ಥಳದಲ್ಲಿಯೆ ಸ್ಕಾರ್ಪಿಯೋ ಜೀಪನ್ನು ಬಿಟ್ಟು ಚಾಲಕ ಓಡಿ ಹೋಗಿದ್ದು, ಅಪಘಾತದಿಂದ ನನ್ನ  ಮಗ ಮಲ್ಲಿಕಾರ್ಜನ ನ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ಸದರಿಯವನನ್ನು 108 ಅಂಬುಲೆನ್ಸನಲ್ಲಿ ಆಸ್ಪತ್ರೆಗೆ ಸಾಗಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಲು ಮೃತಪಟ್ಟಿರುವುದಾಗಿ ತಿಳಿಸಿದ್ದು, ಸದರಿ ಸ್ಕಾರ್ಪಿಯೋ ಜೀಪ್ ನಂ.ಎಮ್.ಹೆಚ್42ವಿ2122 ನೆದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.