ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ : ದಿನಾಂಕ
01-02-2019 ರಂದು ಪಾಣೆಗಾಂವ ಕ್ರಾಸ ಬಸ್ಸ ನಿಲಾದ್ದಾಣದ ಹತ್ತಿರ ಮಾಕಾ ಜೂಜಾಟ ಆಡುತ್ತಿದ್ದರೆ ಅಂತಾ ಬಾತ್ಮ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ಹೆಸರು ವಿಚಾರಿಸಲು ಮಾಳಪ್ಪ ತಂದೆ ನಾಗಪ್ಪಾ ತಳ್ಳಕೇರಿ ಸಾ : ಪಾಣೆಗಾಂವ ಅಂತಾ ತಿಸಿದ್ದು ಸದರಿಯವನಿಂದ ಮಟಕಾ ಜೂಜಾಕ್ಕೆ ಬಳಸಿದ ನಗದು ಹಣ 1100/- ರೂ ಒಂದು ಬಾಲಪೆನ್ ಮತ್ತು ಮಟಕಾ ಚೀಟಿಗಳನ್ನು ವಶಕ್ಕೆ ಪಡೆದು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಕಾಶೀನಾಥ ತಂದೆ ತುಳಸಿರಾಮ ಪುಲಾರಿ ಸಾ: ಬಬಲಾದ ತಾ: ಅಕ್ಕಲಕೋಟ ಹಾ:ವ ಅಫಜಲಪೂರ ರವರ ಮಗನಾದ ಕಾಶಿನಾಥ ಈತನು ಅಫಜಲಪೂರ ಪಟ್ಟಣದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಬಬಲಾದ ದಿಂದ ಅಫಜಲಪೂರಕ್ಕೆ ಮೋಟರ ಸೈಕಲ ಮೇಲೆ ಹೋಗಿ ಬರುವುದು ಮಾಡುತ್ತಿದ್ದು ಸದ್ಯ ಅಫಜಲಪೂರ ಪಟ್ಟಣದಲ್ಲಿ ಶ್ರೀಮಂತ ಅಂಜುಟಗಿ ರವರ ಮನೆಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು ದಿನಾಂಕ 01-02-2019 ರಂದು ಮದ್ಯರಾತ್ರಿ
12:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ನಾವು ಕೆಲಸ ಮಾಡುವ ಶ್ರೀಶೈಲ ಬಳೂರ್ಗಿ ರವರ ಹೊಲದಲ್ಲಿನ ಮೇಟಗಿಯಲ್ಲಿ ಮಲಗಿದ್ದಾಗ, ನನ್ನ ಮಗ ಕೆಲಸ ಮಾಡುವ ಸೆಂಟ್ರಿಂಗ್ ಮೇಸ್ತ್ರಿ ಆದ ಸಂತೋಷ ಹೂಗಾರ ಈತನು ಪೋನ್ ಮಾಡಿ ನಿಮ್ಮ ಮಗ ಮತ್ತು ಗಡ್ಡೆಪ್ಪ ದೊಡ್ಡಮನಿ ಇಬ್ಬರು ಮೋಟರ ಸೈಕಲ ಮೇಲೆ ಹೋಗುತ್ತಿದ್ದಾಗ ಕರಜಗಿ ರೋಡಿಗೆ ಅಳ್ಳಗಿ (ಕೆ) ಕ್ರಾಸ ಹತ್ತಿರ ಹಿಂದಿನಿಂದ ಒಬ್ಬ ಮೋಟರ ಸೈಕಲ ಸವಾರ ಮೋಟರ ಸೈಕಲನ್ನು ಹಿಂದಿನಿಂದ ಗುದ್ದಿ ಎಕ್ಸಿಡೆಂಟ ಮಾಡಿರುತ್ತಾನೆ ಬನ್ನಿ ಅಂತಾ ತಿಳಿಸಿದ ಮೇರೆಗೆ, ನಾನು ಮತ್ತು ನನ್ನ ಹೆಂಡತಿ ಇಬ್ಬರು ಮಲ್ಲಮ್ಮ ಇಬ್ಬರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ನನ್ನ ಮಗ ಮೃತಪಟ್ಟಿದ್ದನು. ಆಗ ನಾನು ಅಲ್ಲೆ ಇದ್ದ ನನ್ನ ಮಗನ ಜೋತೆಗೆ ಕೆಲಸ ಮಾಡುವ ಗಡ್ಡೆಪ್ಪ ದೋಡ್ಡಮನಿ ಈತನಿಗೆ ವಿಚಾರಿಸಲು ಅವನು ತಿಳಿಸಿದ್ದೆನೆಂದರೆ, ನಿನ್ನೆ ದಿನಾಂಕ 31-01-2019 ರಂದು ನಾನು ಮತ್ತು ನಿಮ್ಮ ಮಗ ತುಳಸಿರಾಮ ಇಬ್ಬರು ಕೂಡಿ ಅಫಜಲಪೂರ ಪಟ್ಟಣದ ಶ್ರೀಮಂತ ಅಂಜುಟಗಿ ರವರ ಮನೆಯ ಸೆಂಟ್ರಿಂಗ್ ಕೆಲಸ ಮುಗಿಸಿ ರಾತ್ರಿ ಡಾಬಾದಲ್ಲಿ ಊಟ ಮಾಡಿಕೊಂಡು ನಮ್ಮ ಮೇಸ್ತ್ರಿ ಆದ ಸಂತೋಷ ಹೂಗಾರ ಇವರ ಹಿರೊ ಹೊಂಡಾ ಮೋಟರ ಸೈಕಲ ನಂ ಎಮ್.ಹೆಚ್-12 ಇಜೆ-1688 ನೇದ್ದರ ಮೇಲೆ ಬಬಲಾದಕ್ಕೆ ಹೊರಟಿರುತ್ತೇವೆ. ಮೋಟರ ಸೈಕಲನ್ನು ನಿಮ್ಮ ಮಗನಾದ ತುಳಸಿರಾಮನೆ ನಡೆಸುತ್ತಿದ್ದನು. ನಾನು ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದೆನು. ರಾತ್ರಿ 11:30 ಗಂಟೆ ಸುಮಾರಿಗೆ ನಾವು ಅಫಜಲಪೂರ –
ಕರಜಗಿ ರೋಡಿಗೆ ಇರುವ ಅಳ್ಳಗಿ (ಕೆ) ಕ್ರಾಸ ಹತ್ತಿರ ಹೋಗುತ್ತಿದ್ದಾಗ ನಮ್ಮ ಹಿಂದಿನಿಂದ ಒಬ್ಬ ಮೋಟರ ಸೈಕಲ ಸವಾರನು ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಯಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿ ಹೊಡೆದನು. ಆಗ ನಮ್ಮ ಮೋಟರ ಸೈಕಲ ರೋಡಿನ ಪಕ್ಕದಲ್ಲಿರುವ ಕೀಲೊ ಮೀಟರ ಕಲ್ಲಿಗೆ ಡಿಕ್ಕಿಯಾಗಿ ಕೆಳಗೆ ಬಿದ್ದೆವು. ಸದರಿ ಡಿಕ್ಕಿಯಿಂದ ನಿಮ್ಮ ಮಗ ತುಳಸಿರಾಮನ ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯ ಹಾಗೂ ಮೈ ಕೈಗೆ ಭಾರಿ ಗುಪ್ತಗಾಯಗಳು ಆಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂ ನೋಡಿದ್ದು ಯಮಹಾ ಕಂಪನಿಯ ಮೋಟರ ಸೈಕಲ ನಂ ಕೆಎ-32 ಇಸಿ-1864 ಇರುತ್ತದೆ. ಸದರಿ ಮೋಟರ ಸೈಕಲ ಸವಾರ ಘಟನೆ ಆದ ನಂತರ ಸ್ವಲ್ಪ ಸಮಯ ಮೋ/ಸೈ ನಿಲ್ಲಿಸಿ, ನಂತರ ಮೋಟರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂತೋಷ ತಂದೆ ಶಂಕರ ವಾಗ್ದರಗಿ ಸಾ|| ನಂದರ್ಗಾ ತಾ|| ಅಫಜಲಪೂರ ರವರಿಗೆ ಈಗ ಸುಮಾರು ಒಂದು ತಿಂಗಳಿಂದ ನಮ್ಮೂರಿನ ಸಂತೋಷ ತಂದೆ ತುಕಾರಮ ದೊಡ್ಡಮನಿ ಈತನು ನನ್ನ ಮೋಬೈಲ ನಂ 9480272750, 9632821777 ನೇದ್ದವುಗಳಿಗೆ ತನ್ನ ಮೋಬೈಲ ನಂಬರ 9972892272, 9845472072 ನೇದ್ದವುಗಳಿಂದ ನನ್ನ ಹೆಂಡತಿಯ ಬಗ್ಗೆ ಅಶ್ಲೀಲವಾಗಿ ಮೇಸೆಜಗಳನ್ನು ಕಳುಹಿಸುತ್ತಿದ್ದನು. ಈ ಬಗ್ಗೆ ನಾನು ಸಂತೋಷನಿಗೆ ಯಾಕೆ ಈ ತರ ನನ್ನ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮೇಸೆಜ್ ಮಾಡ್ತಿ ಅಂತಾ ಕೇಳಿದಾಗ ಬೋಸಡಿ ಮಗನೆ ನಿನ್ನ ಹೆಂಡತಿ ನೋಡಲು ಚೆನ್ನಾಗಿದ್ದಾಳೆ ಕಳುಹಿಸುತ್ತೇನೆ ಏನು ಮಾಡಿಕೊಳ್ಳುತ್ತಿ ಎಂದು ನನಗೆ ಬೆದರಿಸಿದ್ದನು. ಆಗ ನಾನು ಮರ್ಯಾದೆಗೆ ಅಂಜಿ ಸುಮ್ಮನಿದ್ದೆನು. ನಾನು ಸುಮ್ಮನಿದ್ದರಿಂದ ಸದರಿ ಸಂತೋಷನು ಇದೆ ರೀತಿ ಅಶ್ಲಿಲವಾದ ಮೇಸೆಜಗಳನ್ನು ಕಳುಹಿಸುತ್ತಿದ್ದರಿಂದ ನಾನು ನಮ್ಮೂರಿನ ಹಿರಿಯರಾದ ಶ್ರೀಶೈಲ ಗೌರ, ದೇವಣ್ಣ ದೋಡ್ಡಮನಿ, ಅಮೃತ ರೇವೂರ, ಸಿದ್ರಾಮ ಮಾಗಣಗೇರಿ ರವರಿಗೂ ಸಹ ಹೇಳಿದ್ದು, ಸದರಿಯವರು ಸಂತೋಷನಿಗೆ ಕರೆಸಿ ಬುದ್ದಿವಾದ ಹೇಳಿದ್ದರು. ಅಂದನಿಂದ ಸಂತೋಷ ದೊಡ್ಡಮನಿ ಈತನು ನಾನು ಸಿಕ್ಕಾಗಲೆಲ್ಲಾ ಮಗನೆ ನನ್ನ ಬಗ್ಗೆನೆ ಊರ ಜನರ ಮುಂದೆ ಹೇಳುತ್ತಿ ಮುಂದೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದನು. ಮತ್ತು ನನ್ನ ಅಣ್ಣನಾದ ಸಿದ್ರಾಮಪ್ಪನಿಗೆ ನಿನ್ನ ತಮ್ಮನಿಗೆ ಹುಶಾರಿನಿಂದ ಇರುವುದಕ್ಕೆ ಹೇಳು ಅವನ ಜೀವಾ ನನ್ನ ಕೈಯಲ್ಲೆ ಹೋಗೊದು ಅಂತಾ ಹೇಳಿರುತ್ತಾನೆ. ದಿನಾಂಕ 01-02-2019 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಕಾವೇರಿ ಹಾಗೂ ನನ್ನ ತಂದೆಯಾದ ಶಂಕರ, ತಾಯಿಯಾದ ಜಗಧೇವಿ ಎಲ್ಲರೂ ನಮ್ಮ ಮನೆಯಲ್ಲಿದ್ದಾಗ ಸಂತೋಷ ತಂದೆ ತುಕಾರಾಮ ದೋಡ್ಡಮನಿ ಈತನು ಟ್ಯಾಕ್ಟರ ತಗೆದುಕೊಂಡು ಬಂದು ನಮ್ಮ ಮನೆಯ ಮುಂದೆ ಟ್ಯಾಕ್ಟರ ನಿಲ್ಲಿಸಿ, ಕೈಯಲ್ಲಿ ಚಾಕು ಹಿಡಿದುಕೊಂಡು ನಮ್ಮ ಮನೆಯಲ್ಲಿ ಬಂದು ಏ ಕಾವೇರಿ ರಂಡಿ ಎಲ್ಲಿದಿ ಹೊರಗ ಭಾ ನಿನ್ನಿಂದ ನನ್ನ ತಲೆ ಪೂರ್ತಿ ಕೆಟ್ಟಾದ, ಒಂದ ಸಾರಿ ಭಾ ಎಂದು ಅಶ್ಲೀಲ ಶಬ್ದಗಳಿಂದ ಬೈದು ಅಲ್ಲೆ ಇದ್ದ ನನ್ನ ಹೆಂಡತಿಯ ಕೈ ಹಿಡಿದು ಜಗ್ಗಿದನು. ಆಗ ನಾನು ಮತ್ತು ನನ್ನ ತಂದೆ ತಾಯಿ ಸಂತೋಷನಿಗೆ ನಮ್ಮ ಮನೆಗೆ ಬಂದು ನಮ್ಮ ಮೇಲೆಯೆ ದಬ್ಬಾಳಿಕೆ ಮಾಡುತ್ತಿ ಎಂದು ಕೇಳುತ್ತಿದ್ದಾಗ, ಸಂತೋಷನು ಮಗನೆ ನಿನಗ ಖಲಾಸ ಮಾಡಿದ್ರ ನಿನ್ನ ಹೆಂಡತಿ ನನಗೆ ಸಿಗ್ತಾಳ ಇವತ್ತ ನಿನಗ ಸಾಯಿಸೆ ಬಿಡ್ತಿನಿ ಎಂದು ಚಾಕು ತಗೆದುಕೊಂಡು ನನಗೆ ಹೊಡೆಯಲು ಬಂದನು ಆಗ ನಾನು ಅವನಿಂದ ತಪ್ಪಿಸಿಕೊಂಡಾಗ ಸಂತೋಷನ ಕೈಯಲ್ಲಿದ್ದ ಚಾಕು ಕೆಳಗೆ ಬಿದ್ದಿತು, ಆಗ ನನಗೆ ಸಂತೋಷನು ಕಾಲಿನಿಂದ ಒದ್ದಾಗ ನಾನು ಕೆಳಗೆ ಬಿದ್ದೆನು, ಆಗ ಸಂತೋಷನು ಮಗನೆ ನಿನಗೆ ಇವತ್ತ ಸಾಯಿಸಿ ಬಿಡ್ತಿನಿ ಅಂತಾ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕಾಲಿನಿಂದ ನನ್ನ ತೊಡ್ಡಿನ ಮೇಲೆ ಜೋರಾಗಿ ಒದ್ದು, ನನ್ನ ಕುತ್ತಿಗೆಯ ಮೇಲೆ ಕಾಲು ಇಟ್ಟನು. ಆಗ ನನ್ನ ತಂದೆ ತಾಯಿ ಮತ್ತು ನನ್ನ ಹೆಂಡತಿ ಹಾಗೂ ಬಾಯಿ ಸಪ್ಪಳ ಕೇಳಿ ಬಂದ ಆನಂದ ಶವರೆ, ರಮೇಶ ಪಾಟೀಲ, ಶಿವುಕುಮಾರ ಹಿರೇಮಠ, ಸಿದ್ರಾಮ ಕುಂಬಾರ ಇನ್ನು ಕೆಲವು ಜನರು ಬಂದು ಬಿಡಿಸುತ್ತಿದ್ದಾಗ ಸಂತೋಷನು ಅವರ ಮಾತನ್ನು ಸಹ ಕೇಳದೆ ಎಲ್ಲರ ಮುಂದೆಯೆ ನನ್ನ ಹೆಂಡತಿಯ ಸೀರೆ ಎಳೆದು ರಂಡಿ ಭಾ ಎಂದು ನನ್ನ ಹೆಂಡತಿಗೆ ಜಗ್ಗಾಡಿ ಕಪಾಳಕ್ಕೆ ಹೊಡೆದನು. ಆಗ ನನಗೂ ಮತ್ತು ಸಂತೋಷನಿಗೂ ಜಗಳ ಆಗುತ್ತಿದ್ದಾಗ ಅಲ್ಲಿದ್ದವರೆಲ್ಲರೂ ಕೂಡಿ ಬಿಡಿಸಿ ಕಳುಹಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂತೋಷ
ತಂದೆ ತುಕಾರಾಮ ದೊಡ್ಡಮನಿ ಸಾ||
ನಂದರ್ಗಾ ರವರು ದಿನಾಂಕ
01-02-2019 ರಂದು ನಮ್ಮ ಗ್ರಾಮದ ಭಿಮರಾಯಗೌಡ ಪೊಲೀಸ್ ಪಾಟೀಲ ರವರ ಹೊಲಕ್ಕೆ ನೇಗಿಲು ಹೊಡೆಯಲೆಂದು ನನ್ನ ಟ್ಯಾಕ್ಟರ ತಗೆದುಕೊಂಡು ಬೆಳಿಗ್ಗೆ ಹೋಗಿ ನೇಗಿಲು ಹೊಡೆದು ಮರಳಿ ಬರುತ್ತಿರುವಾಗ ಮಾರ್ಗ ಮದ್ಯದಲ್ಲಿ ನಮ್ಮ ಗ್ರಾಮದ ಸಂತೋಷ ತಂದೆ ಶಂಕರ ವಾಗ್ದರಗಿ ರವರ ಮನೆಯ ಮುಂದಿನ ರಸ್ತೆಯ ಮೇಲೆ ಬಂದಾಗ ಸಂತೋಷನು ನನ್ನ ಟ್ಯಾಕ್ಟರಕ್ಕೆ ಅಡ್ಡಲಾಗಿ ನಿಂತನು.
ನಾನು ಸದರಿಯವರನಿಗೆ ನನ್ನ ಟ್ಯಾಕ್ಟರ ಮುಂದೆ ಯಾಕೆ ನಿಂತಿದ್ದಿಯಾ ಬಾಜು ಸರಿ ಅಂತಾ ಅಂದಿದ್ದಕ್ಕೆ ಸಂತೋಷನು ನನಗೆ ಏ ಬೋಸಡಿ ಮಗನೆ ನಮ್ಮ ಮನೆಯ ಮುಂದೆ ಯಾಕೆ ಟ್ಯಾಕ್ಟರ ತಂದಿದ್ದಿಯಾ ಅಂತಾ ಅವಾಚ್ಯವಾಗಿ ಬೈದು ತನ್ನ ತಮ್ಮಂದಿರಾದ ಸಿದ್ದಾರಾಮ ಹಾಗೂ ವಿಜಯಕುಮಾರನಿಗೆ ಕೂಗಿ ಕರೆದನು.
ಆಗ ಸದರಿಯವರನು ಓಡಿ ಬಂದರು ಆಗ ನಾನು ಭಯಬಿದ್ದು ಟ್ಯಾಕ್ಟರ ಕೆಳಗೆ ಇಳಿದಾಗ ನನಗೆ ಮುಂದೆ ಹೋಗದಂತೆ ಮೂವರು ತಡೆದರು.
ತಡೆದು ಸಿದ್ದರಾಮನು ತನ್ನ ಜೇಬಿನಲ್ಲಿದ್ದ ಚಾಕು ತಗೆದು ನನ್ನ ಏಡಕಿವಿಯ ಹತ್ತಿರ ಹೊಡೆದನು.
ಮತ್ತು ವಿಜಯ ಕುಮಾರನು ನನ್ನ ಏಡಗಡೆಯ ರಟ್ಟೆಯ ಮೇಲೆ ಹಾಗೂ ಏಡ ಮೋಳಕಾಲು ಕೆಳಗೆ ಬಡಿಗೆಯಿಂದ ಹೊಡೆದು ತರಚಿದ ಗಾಯ ಮತ್ತು ಗುಪ್ತಗಾಯ ಗೋಳಿಸಿದನು.
ಆಗ ಅಲ್ಲೆ ಹೋಗುತ್ತಿದ್ದ ನಮ್ಮ ಗ್ರಾಮದ ಸೀರಾಜ ತಂದೆ ಮೈನೋದ್ದಿನ್ ಜಾಗಿರದಾರ ಬಿಡಿಸಲು ಬಂದರು ಅವರಿಗೂ ಕೂಡಾ ಕೇಳದೆ ವಿಜಯಕುಮಾರನು ನನ್ನ ಕಣ್ಣಲ್ಲಿ ಕಾರ ಎಸೆದನು.
ಆಗ ಸಂತೋಷನು ಅಲ್ಲೆ ಬಿದ್ದ ಕಲ್ಲು ತಗೆದುಕೊಂಡು ನನಗೆ ಹೊಡೆದು ಗುಪ್ತಗಾಯಗೊಳಿಸಿ
ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment