POLICE BHAVAN KALABURAGI

POLICE BHAVAN KALABURAGI

05 December 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 03/12/18 ರಂದು ಬೆಳಿಗ್ಗೆ 7 ಗಂಟೆ ಸಮಾರಿಗೆ ನಮ್ಮ ಮಾವ ರಾಜಶೇಖರ ತಂದೆ ಮಲ್ಲೇಶಪ್ಪ ಇವರು ಮನೆಗೆ ಪೋನ ಮಾಡಿ ಮಾಹಿತಿ ತಿಳೀಸಿದೆನೆಂದರೆ ಪಾಟೀಲ್‌ ಸರಡಗಿ ದಾಲ್‌ಮಿಲ್‌ದಲ್ಲಿ ಇನ್ನೊಬ್ಬ ವಾಚ್‌ಮ್ಯಾನ್‌‌ ಕೆಲಸ ಮಾಡುತ್ತಿರುವ ಇವರು ಮಗ ಬಂದು ತಿಳೀಸಿದೆನೆಂದರೆ ಮಾವ ಸುಭಾಷಚಂದ್ರ ಇವರಿಗೆ ಯಾರೋ ಹೊಡೆದು ರಕ್ತಗಾಯಗೊಳಿಸಿದ್ದು ಅವರ ಉಪಚಾರಕ್ಕಾಗಿ ಚೈತನ್ಯ ಆಸ್ಪತ್ರೆಗೆ ನಮ್ಮ ಮಾಲಿಕ ಸುನೀಲ ಪಾಟೀಲ ಮತ್ತು ಇತರರು ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ನಾವು ಆಸ್ಪತ್ರೆಗೆ ಹೊಗುತ್ತಿದ್ದು ಬೆಗನೆ ಬರುವಂತೆ ತಿಳಿಸಿದ್ದಕ್ಕೆ ಕೂಡಲೆ ನಾನು ನನ್ನ ತಾಯಿ ಮಹಾದೇವಿ ಕೂಡಿಕೊಂಡು ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಸುಪರ್‌ ಮಾರ್ಕೆಟದಲ್ಲಿರುವ ಚೈತನ್ಯ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ತಂದೆಯವರು ಹೆಣೆಯ,ತಲೆಗೆ ಗಟ್ಟಬಾಯಿಗೆ ಹಾಗು ಕೈಯಿಗೆ ಭಾರಿ ಪ್ರಮಾಣದ ಗಾಯಗಳಾಗಿ ಮೃತಪಟ್ಟಿದ್ದರು ಅಲ್ಲೆ ಇರುವ ನಮ್ಮ ಮಾಮ ರಾಜಶೇಖರ ಹಾಗು ನಮ್ಮ ತಂಗಿಯರಾದ ಜಯಶ್ರೀ, ಸಂಗಿತಾ, ಕವಿತಾ ಮತ್ತು ದಾಲ್‌ಮಿಲ್‌‌ ಮಾಲಿಕ ಸುನೀಲ ಇವರಿಗೆ ವಿಚಾರಿಸಲಾಗಿ ಮಾಲಿಕ ಸುನೀಲ ಇವರು ಇಳಿಸಿದನೆಂದರೆ ಇಂದು ಬೆಳಗಿನ ಜಾವ ಯಾರೋ 2 ಗಂಟೆಯಿಂದ 4 ಗಂಟೆಯ ಅವದಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಮತ್ತು ಯಾವುದೋ ದುರುದ್ದೇಶದಿಂದ ದಾಲ್‌ಮಿಲ್‌ಗೆ ಬಂದು ವಾಚ್‌ಮ್ಯಾನ ರೂಮಿನಲ್ಲಿದ್ದ ಸುಬಾಷಚಂದ್ರ ಇವರಿಗೆ ಯಾವುದೋ ಹರಿತವಾದ ಆಯುಧಗಳಿಂದ ಹೊಡೆಬಡೆ ಮಾಡಿ ಭಾರಿ ರಕ್ತಗಾಯ ಗೋಳಿಸಿರುತ್ತಾರೆ. ಉಪಚಾರಕಾಲಕ್ಕೆ 8:35 ಗಂಟೆಗೆ ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.                ಕಾರಣ ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಮತ್ತು ದುರುದ್ಧೇಶದಿಂದ ಪಾಟೀಲ ಸರಡಗಿ ಇವರ ದಾಲ್‌‌ಮಿಲ್‌ಗೆ ಇಂದು ಬೆಳಿಗಿನ ಜಾವ 2 ಗಂಟೆಯಿಂದ 4 ಗಂಟೆಯ ಅವದಿಯಲ್ಲಿ ಬಂದು ವಾಚ್‌ಮ್ಯಾನ್‌ ರುಮನಲ್ಲಿರುವ ನಮ್ಮ ತಂದೆಯವರಿಗೆ ಹರಿತವಾದ ಆಯುದಗಳಿಂದ ಹಣೆಗೆ , ತಲೆಗೆ , ಗಟ್ಟಬಾಯಿಗೆ, ಇತರೆ ಕಡೆಗಳಲ್ಲಿ ಹೊಡೆಬಡೆ ಮಾಡಿ ಉಪಚಾರ ಕಾಲದಲ್ಲಿ ಮೃತಪಟ್ಟಿದು ನಮ್ಮ ತಂದೆಯವರಿಗೆ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಶ್ರೀ ಶರಣಬಸಪ್ಪ ತಂದೆ ಸುಭಾಷಚಂದ್ರ ನಿಗ್ಗುಡಗಿ ಮು: ಬೀಮನಾಳ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 04.12.2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಹನುಮಾನ ಗುಡಿ ಹತ್ತಿರ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತು ಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮೊಸ ಮಾಡಿ ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್‌‌.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಮರೆಯಲ್ಲಿ ನಿಂತು ಹನುಮಾನ ದೇವರ ಗುಡಿ ಮುಂದಿನ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮೊಸ ಮಾಡಿ ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯರು ತಮ್ಮ ಹೆಸರು 1. ಶರಣು ತಂದೆ ಗುರಪ್ಪ ಮರತುರ ಸಾ: ಗಂಗಾನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 375/-ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. 2. ಬಸವರಾಜ ತಂದೆ ಮೈಲಾರಿ ನಾಟಿಕಾರ ಸಾ: ಮೀಣಜಗಿ ತಾ:ಜಿ: ಕಲಬುರಗಿ ಇತನ ಹತ್ತಿರ ನಗದು ಹಣ 270/- ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು ಹೀಗೆ ಒಟ್ಟು 645/-ರೂ 2 ಮಟಕಾ ಚೀಟಿ ಮತ್ತು 2 ಬಾಲ ಪೇನ್ನ್ಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಮಹಾನಂದ ಗಂಡ ಕುಪಿಂದ್ರ ಗುಜ್ಜೆ ಸಾ: ಹುಲ್ಲೂರ  ತಾ: ಜೇವರ್ಗಿ ಜಿ: ಕಲಬುರ್ಗಿ ಇವರ ಗಂಡನ ಹೆಸರಿನಿಂದ ನಮ್ಮೂರ ಸೀಮಾಂತರದಲ್ಲಿ ಹೊಲ ಸರ್ವೆ ನಂ. 70 ವಿಸ್ತಿರ್ಣ 3 ಎಕರೆ 20 ಗುಂಟೆ ಜಮೀನು ಇರುತ್ತದೆ. ಆ ಹೊಲದ ಮೇಲೆ ನನ್ನ ಗಂಡ ಕ.ಜಿ.ಬಿ  ಬ್ಯಾಂಕ ಅಂಕಲಗಿ 1,00,000=00 ರೂಪಾಯಿ ಸಾಲ ಮಾಡಿದ್ದು, ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘ ಇಟಗಾದಲ್ಲಿ 40,000=00 ರೂಪಾಯಿ ಸಾಲ ತಗೆದುಕೊಂಡಿದ್ದು ಅಲ್ಲದೆ ಮೆಣಸಿನ ಹೊಲಕ್ಕೆ ಪೈಪಲೈನ ಮಾಡಲು ಊರ ಮನೆಯವರ ಹತ್ತಿರ ಕೈಗಡದ ಹಾಗೆ 6 ಲಕ್ಷ ರೂಪಾಯಿ ಪಡೆದುಕೊಂಡಿದ್ದು ಹೀಗೆ ಒಟ್ಟು 7,40,000=00 ರೂಪಾಯಿ ಸಾಲ ಮಾಡಿದ್ದು ಇರುತ್ತದೆ. ಈ ವರ್ಷ ನಮ್ಮ ಹೊಲದಲ್ಲಿ ಮೇಣಸಿನ ಅಗಿ ಹಚ್ಚಿದ್ದು ಅದಕ್ಕೆ ಮೆಣಸಿನಕಾಯಿಗಳು ಆಗದೆ ಪೂರ್ತಿ ಲಾಸ ಆಗಿದ್ದರಿಂದ ನನ್ನ ಗಂಡನು ಬಾರಿ ನೊಂದುಕೊಂಡಿದ್ದನು.ಅವನಿಗೆ ನಮ್ಮ ಮನೆಯವರೆಲ್ಲರೂ ಸಾಂತ್ವನ ಹೇಳಿದ್ದೆವು. ದಿನಾಂಕ: 03-12-2018 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾನು ನನ್ನ ಗಂಡ, ಅತ್ತೆ ಮಾವ ಎಲ್ಲರೂ ಎಂದಿನಂತೆ ಊಟ ಮಾಡಿ ನಾವು ಮನೆಯಲ್ಲಿ ಮಲಗಿಕೊಂಡೆವು ನನ್ನ ಗಂಡ ಮಾಳಿಗೆ ಮೇಲೆ ಮಲಗುತ್ತೇ ಅಂತಾ ಹೋದನು. ನಂತರ ಇಂದು ದಿನಾಂಕ: 04-12-2018 ರಂದು ಬೆಳಿಗ್ಗೆ 06-00 ಗಂಟೆಯಾದರು ನನ್ನ ಗಂಡ ಎದ್ದು ಕೆಳಗೆ ಬರದೆ ಇದ್ದರಿಂಧ ನಾನು ಮಾಳಿಗೆ ಮೇಲೆ ಹೋಗಿ ನನ್ನ ಗಂಡನಿಗೆ ಎಬ್ಬಸಲು ಹೋದಾಗ ನನ್ನ ಗಂಡನು ವಿಷ ಸೇವನೆ ಮಾಡಿ ಸತ್ತಿದ್ದನು ಅವನ ಬಾಯಿಯಿಂದ ನೊರೆ ಬಂದಿತ್ತು ನಂತರ ನಾನು ಚಿರಾಡುತಿದ್ದಾಗ ನಮ್ಮ ಪಕ್ಕದ ಮನೆಯ ಸುರೇಶ ಮಾಲಿಪಾಟೀಲ, ಈರಪ್ಪ ಪಿರೋಜಿ ಇತರರು ಬಂದರು. ನನ್ನ ಗಂಡನು ನಿನ್ನೆ ದಿನಾಂಕ: 03-1-2018 ರಿಂದ ಇಂದು ದಿನಾಂಕ: 04-12-2018 ರ ಬೆಳಿಗ್ಗೆ 06-00 ಗಂಟೆಯ ಮದ್ಯದ ಅವದಿಯಲ್ಲಿ ನಮ್ಮ ಮನೆಯ ಮಾಳಿಗೆಯ ಮೇಲೆ ವಿಷ ಸೇವನೆ ಮಾಡಿ ಸತ್ತಿರುತ್ತಾನೆ. ನನ್ನ ಗಂಡನು ಮೆಣಸಿನ ಹೊಲಕ್ಕೆ ಪೈಪಲೈನ ಮಾಡಲು ಹಾಗೂ ಹೊಲದ ಕೆಲಸಕ್ಕೆ ಮತ್ತು ಸಂಸಾರದ ಅಡಚಣೆಗಾಗಿ ಕೆ.ಜಿ.ಬಿ ಬ್ಯಾಂಕ ಹುಲ್ಲೂರ ದಲ್ಲಿ, ವ್ಯವಸಾಯ ಸೇವಾ ಸಹಕಾರಿ ಸಂಘ ಇಟಗಾದಲ್ಲಿ ಊರ ಮನೆಯವರ ಹತ್ತಿರ ಕೈಗಡದ ಹಾಗೆ ಹಣ ತಗೆದುಕೊಂಡಿದ್ದು ಹೊಲದಲ್ಲಿ ಹಾಕಿದ ಮೆಣಸಿನ ಗಿಡಕ್ಕೆ ಕಾಯಿಗಳು ಆಗದೆ ಪೂರ್ತಿ ಲಾಸ ಆಗಿದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕು ಅಂತಾ ಮನಃನೊಂದು ನಮ್ಮ ಮನೆಯ ಮಾಳಿಗೆಯ ಮೇಲೆ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಧಾನಯ್ಯ ತಂದೆ ಸಿದ್ದಯ್ಯ ಹಿರೇಮಠ ಸಾ: ಅಫಜಲಪೂರ ರವರು ಅಫಜಲಪೂರದ ಎ.ಪಿ.ಎಮ್.ಸಿ ಯಾರ್ಡನಲ್ಲಿ ನನ್ನ ಸ್ವಂತದ ಶ್ರೀ ಗುರುಕೃಪಾ ಟ್ರೇಡಿಂಗ್ ಕಂಪನಿ ಎಂಬ ಹೆಸರಿನ ಅಡತಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುತ್ತೇನೆ. ನನ್ನ ತಂದೆಯವರಾದ ಶ್ರೀ ಸಿದ್ದಯ್ಯ ತಂದೆ ರೇವಯ್ಯ ಹಿರೇಮಠ ರವರ ಹೆಸರಿನಲ್ಲಿ ಶ್ರೀ ಶಿವಕೃಪಾ ಟ್ರೇಡಿಂಗ್ ಕಂಪನಿ ಅಡತಿ ಅಂಗಡಿ ಇದ್ದು, ಎರಡು ಅಡತಿ ಅಂಗಡಿಗಳ ವ್ಯೆವಹಾರ ಒಂದೆ ಅಂಗಡಿಯಲ್ಲಿ ಮಾಡುತ್ತೇವೆ. ಅಡತಿ ಅಂಗಡಿಗಳ ವ್ಯೆವಹಾರವನ್ನು ನಾನು ಮತ್ತು ನನ್ನ ತಂದೆ ಇಬ್ಬರು ನೋಡಿಕೊಳ್ಳುತ್ತೇವೆ. ದಿನಾಂಕ 28-11-2018 ರಂದು ಅಫಜಲಪೂರದ ಎಸ್.ಬಿ.ಐ ಬ್ಯಾಂಕಿನಿಂದ ನಮ್ಮ ಅಡತಿ ಅಂಗಡಿಯ ವ್ಯೆವಹಾರದ ಸಲುವಾಗಿ 5,00,000/- ರೂ (ಐದು ಲಕ್ಷ ರೂಪಾಯಿಗಳು) ಹಣ ಡ್ರಾ ಮಾಡಿಕೊಂಡು ಬಂದು ನಮ್ಮ ಅಡತಿ ಅಂಗಡಿಯ ಟ್ರಜರಿಯಲ್ಲಿ ಇಟ್ಟಿರುತ್ತೇನೆ. ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ 30,000/- ರೂ ಹಣ ಇಟ್ಟಿರುತ್ತೇನೆ. ಇದಲ್ಲದೆ ನಮ್ಮ ಹೆಣ್ಣು ಮಕ್ಕಳು ಹಾಗೂ ಮನೆಯವರು ಉಪಯೋಗಿಸುವ ಚಿನ್ನಾಭರಣಗಳನ್ನು  ಅಂಗಡಿಯಲ್ಲಿ ಇಟ್ಟಿರುತ್ತೇನೆ. ದಿನಾಂಕ 03-12-2018 ರಂದು ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಅಡತಿ ಅಂಗಡಿಯ ವ್ಯೆವಹಾರ ಮಾಡಿ 11:00 ಗಂಟೆಯವರೆಗೆ ಲೆಕ್ಕ ಪತ್ರ ಮುಗಿಸಿ ಅಡತಿ ಮುಚ್ಚಿ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ 04-12-2018 ರಂದು ಬೆಳಿಗ್ಗೆ ನಮ್ಮ ಮನೆಯಲ್ಲಿದ್ದಾಗ ನಮ್ಮ ಅಡತಿ ಅಂಗಡಿಯಲ್ಲಿ ಹಮಾಲಿ ಕೆಲಸ ಮಾಡುವ ಶ್ರೀಶೈಲ ತಂದೆ ಚಂದಪ್ಪ ಹಳೆಮನಿ ಎಂಬಾತನು ನನಗೆ ಪೋನ್ ಮಾಡಿ ಅಡತಿ ಅಂಗಡಿಯ ಶಟರ್ ಮೇಲೆತ್ತಿದ್ದು ಮದ್ಯದಲ್ಲಿ ಬೆಂಡ್ ಆಗಿರುತ್ತದೆ ಅಂತಾ ತಿಳಿಸಿದನು. ಆಗ ನಾನು ನಮ್ಮ ಅಡತಿ ಅಂಗಡಿಗೆ ಬಂದು ಶಟರ್ ಬೆಂಡ್ ಮಾಡಿ ಅರ್ದಕ್ಕೆ ಎತ್ತಿದ್ದು ನೋಡಿದೆನು. ನಂತರ ಈ ವಿಷಯವನ್ನು ನಾನು ನಮ್ಮ ತಂದೆಯವರಿಗೂ ತಿಳಿಸಿದ್ದು, ಬಳಿಕ ನಮ್ಮ ತಂದೆ ಹಾಗೂ ನಮ್ಮಲ್ಲಿ ಕೆಲಸ ಮಾಡುವ ಯುನುಸ್ ಪಠಾಣ, ಮಳೇಂದ್ರ ವಾಳಿ, ಗೊಲ್ಲಾಳ ಕೋರಳ್ಳಿ, ರಾಜಶೇಖರ ಗುಳೇದ ಮತ್ತು ನಮ್ಮಲ್ಲಿ ಕೆಲಸ ಮಾಡುವ ಇನ್ನಿತರರು ಹಾಗೂ ಅಕ್ಕ ಪಕ್ಕದ ಅಡತಿ ಅಂಗಡಿಯವರು ಬಂದಿರುತ್ತಾರೆ. ಆಗ ನಾನು ಮತ್ತು ನಮ್ಮ ತಂದೆಯವರು ಅಡತಿ ಅಂಗಡಿಯಲ್ಲಿ ಒಳಗೆ ಹೋಗಿ ನೋಡಲು ಟ್ರಜರಿ ಮತ್ತು ಗಲ್ಲದ ಪೇಟಿ ಎರಡು ತೆರೆದಿದ್ದವು. ಟ್ರಜರಿಯ ಲಾಕರ ಸಹ ತೆರೆದಿದ್ದು ಅದರಲ್ಲಿ ಇಟ್ಟಿದ್ದ ನಗದು ಹಣ ಮತ್ತು ಬಂಗಾರದ ಆಭರಣಗಳನ್ನು ದಿನಾಂಕ 03-12-2018 ರ ರಾತ್ರಿ 11:00 ಗಂಟೆಯಿಂದ ದಿನಾಂಕ 04-12-2018 ರ ಬೆಳಗಿನ ಜಾವ 05:00 ಗಂಟೆಯ ಮದ್ಯದ ಅವದಿಯಲ್ಲಿ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಮಾನ್ಯ ರವರು ನಮ್ಮ ಅಡತಿ ಅಂಗಡಿಯಲ್ಲಿನ ಹಣ ಮತ್ತು ಬಂಗಾರದ ಆಭರಣಗಳನ್ನು 9,50,000/- ರೂ ಕಿಮ್ಮತ್ತಿನದನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 December 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬದ್ದು ತಂದೆ ಪೀರು ಜಾಧವ ಸಾ|| ಯಾಳಗಿ ತಾಂಡಾ ತಾ|| ಸುರಪೂರ ರವರು ದಿನಾಂಕ 29-11-2018 ರಂದು ನಮ್ಮ ಸಂಬಂಧಿಕನಾದ ಬಸವರಾಜ ತಂದೆ ಖುಬಾಜಿ ರಾಠೋಡ ಸಾ|| ಬಸವನ ಬಾಗೇವಾಡಿ ರವರು ಯಂಕಂಚಿಯಲ್ಲಿ ದೇವರ ಕಾರ್ಯಾ ಮಾಡಿದ್ದರಿಂದ ನಾನು ಮತ್ತು ನಮ್ಮ ತಾಯಿ ರಮಾಬಾಯಿ ನನ್ನ ಹೆಂಡತಿ ಸುನೀತಾ, ನಮ್ಮ ಕಾಕಾ ಭೀಮು ತಂದೆ ಹೋಬು ಜಾಧವ ರವರು ಕೂಡಿ ನಮ್ಮ ಟಂಟಂ ನಲ್ಲಿ ಕುಳಿತು ಯಂಕಂಚಿಗೆ ದೇವರ ಕಾರ್ಯಕ್ಕೆ ಹೋಗಿದ್ದು ಇರುತ್ತದೆ.  ನಂತರ ಕಾರ್ಯಕ್ರಮ ಮುಗಿಸಿಕೊಂಡು ನಮ್ಮ ಟಂಟಂ ಮರಳಿ ನಮ್ಮೂರಿಗೆ ವಾಪಸ ಹೂಗುವಾಗ ಚಿಕ್ಕ ಅಲ್ಲಾಪೂರ ಕ್ರಾಸ್ ದಾಟಿ ಹೋಗುತ್ತಿದ್ದಾಗ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಒಮ್ಮೇಲೆ ನಮ್ಮ ಟಂಟಂ ಗೆ ಡಿಕ್ಕಿ ಹೊಡೆದನು, ಆಗ ನೋಡಲಾಗಿ ಟಂಟಂನಲ್ಲಿ ಬಲಗಡೆ ಕುಳಿತಿದ್ದ ನಮ್ಮ ತಾಯಿಯ ಬಲಗೈಯ ರಟ್ಟೆಯಲ್ಲಿ ಕಟ್ಟಾಗಿ ರೋಡಿನ ಮೇಲೆ ಬಿದ್ದಿತ್ತು,  ಮತ್ತು ಬಲ ತಲೆಗೆ ಭಾರಿ ರಕ್ತಗಾಯ ವಾಗಿರುತ್ತದೆ, ಅದರಂತೆ  ಬಲ ಕೀವಿ ಹಾಗು ಎರಡು ಮೊಳಕಾಲುಗಳಿಗೆ ತರಚೀದ ಗಾಯಗಲಾಗಿರುತ್ತವೆ, ನನಗೆ ಮತ್ತು ನನ್ನ ಹೆಂಡತಿಗೆ ಹಾಗು ನಮ್ಮ ಕಾಕಾನಿಗೆ ಯಾವುದೇ ಗಾಯಗಳಾಗಿರುವುದುಲ್ಲಾ, ನಂತರ ಲಾರಿ ನಂ ನೋಡಲಾಗಿ ಅದರ ನಂ ಎಮ್.ಹೆಚ್-09/.ಎಮ್-6262 ನೇದ್ದು ಇತ್ತು, ಅದರ ಚಾಲಕನು ಇಳಿದು ನಮ್ಮ ಹತ್ತಿರ ಬಂದಾಗ ಅವನ ಹೆಸರು ಕೇಳಲಾಗಿ ಹೇಳಿದ್ದೇನೆಂದರೆ, ರಾಮಬಾವು@ರಾಮಚಂದ್ರ ಕರಾಂಡೆ ಸಾ|| ಸಾತಾರಾ ಅಂತಾ ಹೇಳಿದನು, ನಂತರ ನಾವೆಲ್ಲರೂ ಕೂಡಿ  ನಮ್ಮ ತಾಯಿಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೋಂಡು ವಿಜಯಪೂರದ ಬಿ.ಎಲ್.ಡಿ. ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ, ದಿನಾಂಕ 01-12-2018 ರಂದು ರಸ್ತೆ ಅಪಘಾತದಲ್ಲಿ ಗಾಯಹೊಂದಿದ ರಮಾಬಾಯಿ ಗಂಡ ಪೀರು ಜಾಧವ ಸಾ|| ಯಾಳಗಿ ತಾಂಡಾ ರವರು ಆಸ್ಪತ್ರೆ ಉಪಚಾರ ಪಡೆಯುತ್ತಿದ್ದಾಗ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಚಂದ್ರಶೇಖರ ತಂದೆ ದೇವಿಂದ್ರಪ್ಪ ದೊರೆ ಸಾ|| ವಡಗೇರಾ ಗ್ರಾಮ ತಾ|| ಜೇವರ್ಗಿ ಇವರು ಸುಮಾರು 2 ವರ್ಷಗಳಿಂದ ನಮ್ಮೂರ ಹಣಮಂತ್ರಾಯ ತಂದೆ ಹಳ್ಳಿರಾಯ ಹವಾಲ್ದಾರ ರವರ ಯಡ್ರಾಮಿಯಲ್ಲಿರುವ ಅಡತಿಯಲ್ಲಿ ಲೆಕ್ಕಪತ್ರದ ಕೆಲಸ ಮಾಡಿಕೊಂಡಿರುತ್ತೇನೆ, ಹತ್ತಿ ಸೀಜನ ಸಮಯದಲ್ಲಿ ನಮ್ಮ ಮಾಲಿಕರು, ನಾಗರಳ್ಳಿ ಗ್ರಾಮದ ಬಸಂತ್ರಾಯ ತಂದೆ ದುಂಡಪ್ಪಗೌಡ ಅಂಗಡಿ ರವರ ಹೊಲದಲ್ಲಿರವ ಖುಲ್ಲಾ ಜಾಗದಲ್ಲಿ ರೋಡಿನ ಸಮೀಪ ರೈತರ ಹತ್ತಿ ಖರಿದಿಮಾಡಿಕೊಳ್ಳುತ್ತಾ ಬಂದಿರುತ್ತಾರೆ. ಬಸಂತ್ರಾಯ ಅಂಗಡಿ ರವರ ಹೊಲದ ಸರ್ವೆ ನಂ 25 ನೇದ್ದು ಇರುತ್ತದೆ. ಈ ಮುಂಚೆ 2-3 ಸಲ ಹದನೂರ ಗ್ರಾಮದ ರೆಡ್ಡಪ್ಪಗೌಡ ತಂದೆ ಭೀಮನಗೌಡ ಸಾಸನೂರ ಎಂಬುವನು ನಮ್ಮ ಅಡತಿಗೆ ಬಂದು ಹತ್ತಿ ಮಾರಾಟ ಮಾಡುವ ವಿಷಯದಲ್ಲಿ ನಮ್ಮೊಂದಿಗೆ ತಕರಾರುಗಳು ಮಾಡುತ್ತಾ ಬಂದಿರುತ್ತಾರೆ, ದಿನಾಂಕ 29-11-2018 ರಂದು ಸಾಯಂಕಾಲ 6;00 ಗಂಟೆ ಸುಮಾರಿಗೆ ನಾಗರಳ್ಳಿಯಲ್ಲಿ ನಾನು ಮತ್ತು ನಮ್ಮ ಮಾಲಿಕರ ತಮ್ಮ ಪ್ರಕಾಶ ಹವಾಲ್ದಾರ ರವರು ಕೂಡಿ ರೈತರ ಹತ್ತಿ ಖರಿದಿಮಾಡಿಕೊಳ್ಳುತ್ತಿದ್ದಾಗ 1] ರೆಡ್ಡಪ್ಪಗೌಡ ತಂದೆ ಭೀಮನಗೌಡ ಸಾಸನೂರ ಸಾ|| ಹದನೂರ ಗ್ರಾಮ ತಾ|| ಸುರಪೂರ ಹಾಗು 2] ಸಂಗನಗೌಡ ಬಿರಾದಾರ, 3] ಈರಣಗೌಡ ತಂದೆ ಚನ್ನಪ್ಪ ರಾಯಚೂರ ಸಾ|| ಇಬ್ಬರು ಮಾಡಬೋಳ ತಾ|| ಸಿಂದಗಿ ರವರು ತಮ್ಮ ಹತ್ತಿಯನ್ನು ನಮ್ಮ ಅಡತಿಗೆ ತಂದು ನಮಗೆ ಏ ಸೂಳಿ ಮಕ್ಕಳ್ಯಾ ನಮ್ಮ ಹತ್ತಿಯನ್ನು ನಾವು ಹೇಳಿದ ರೇಟಿಗೆ ಖರಿದಿಮಾಡಿಕೊಳ್ಳಬೇಕು, ಅಂತಾ ಅಂದರು ಆಗ ನಾನು ನಿಮ್ಮ ರೇಟಿಗೆ ನಾವು ಹತ್ತಿ ಖರಿದಿ ಮಾಡಿಕೊಳ್ಳುವುದಿಲ್ಲಾ ಅಂತಾ ಅಂದಾಗ ನನಗೆ ರೆಡ್ಡಪ್ಪಗೌಡ ಈತನು ಏ ಬೇಡ ಸೂಳಿಮಗನೆ ಈ ಅಡತ್ಯಾಗ ನಿಂದೇ ಬಹಳಾಗ್ಯಾದ ಮಗನಾ ಅಂತಾ ಅಂದು ಕೈಯಿಂದ ನನಗೆ ಕಪಾಳ ಮೇಲೆ ಹೊಡೆದನು, ಆಗ ಬಿಡಿಸಲು ಬಂದು ಪ್ರಕಾಶ ಹವಾಲ್ದಾರ ರವರಿಗೆ ಸಂಗನಗೌಡ ಮತ್ತು ಈರಣಗೌಡ ರವರು ತಡೆದು ನಿಲ್ಲಿಸಿ, ನೀನ್ಯಾರೋ ಸುಳಿ ಮಗನೆ ಅಂತಾ ಅಂದು ಕೈಯಿಂದ ಅವರ ಕಪಾಳ ಮೇಲೆ ಹೊಡೆದರು, ಆಗ ಅಲ್ಲೆ ಇದ್ದ ನಮ್ಮ ಮಾಲಿಕ ಹಣಮಂತ್ರಾಯ ಹವಾಲ್ದಾರ, ಹಾಗು ನಮ್ಮ ಅಡತಿಯಲ್ಲಿ ಕೆಲಸ ಮಾಡುತ್ತಿದ್ದ ತಿಪ್ಪಯ್ಯಾ ತಂದೆ ಶಂಕ್ರೆಯ್ಯಾ ಟಣಕೇದಾರ, ನಿಂಗಪ್ಪ ತಂದೆ ಲಕ್ಕಪ್ಪ ಚಲವಾದಿ, ಭೀಮರಾಯ ತಂದೆ ನಿಂಗಪ್ಪ ಹೊಸಗೇರಿ ರವರೆಲ್ಲರೂ ಕೂಡಿ ಬಿಡಿಸಿಕೊಂಡಿರುತ್ತಾರೆ, ಇಲ್ಲದಿದ್ದರೆ ನಮಗೆ ಇನ್ನು ಹೊಡೆ ಬಡೆ ಮಾಡುತ್ತಿದ್ದರು, ನಂತರ ಅವರು ಅಲ್ಲಿಂದ ಹೋಗುವಾಗ ನನಗೆ, ಏ ಬೇಡಜಾತಿಗೆ ಸೇರಿದವನೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನಗ ಖಲಾಸೆ ಮಾಡುತ್ತೇವೆ ಅಂತಾ ಅಂದು ಅಲ್ಲಿಂದ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಲ್ಲೇಶ ತಂದೆ ಚನ್ನಪ್ಪ ಗೋಪನಪಲ್ಲಿ ಸಾ:ಲಕ್ಷ್ಮೀ ಅಪಾರ್ಟಮೆಂಟ್‌ ಸಂಗಮೇಶ್ವರ ಕಾಲೋನಿ ಕಲಬುರಗಿರವರು ರವರು ರಸ್ತೆ ಬದಿಯಲ್ಲಿ ಟೀ ಬಂಡಿ ಇಟ್ಟುಕೊಂಡು ಉಪಜೀವನ ಸಾಗಿಸುತ್ತಿದ್ದೇನೆ. ಹೀಗಿರುವಾಗ ರೌಡಿಶೀಟರ ವೆಂಕಟೇಶ ಯಾದವ ಹಾಗೂ ಅವನ ತಮ್ಮನಾದ ಉಮೇಶ ಯಾದವರಿಗೆ ಹೆದರಿ 2012 ರಿಂದ ದಿ:11/11/2018 ರವರೆಗೆ ಪ್ರತಿ ದಿನ 300/-ರೂ ಹಣ ಹಫ್ತಾ ಕೊಡುತ್ತಲೆ ಬಂದಿದ್ದೇನೆ ದಿ:11/11/2018 ರಿಂದ ನಾನು ಇನ್ನೂ ಮುಂದೆ ಹಫ್ತಾ ಕೊಡುವುದು ಆಗುವದಿಲ್ಲಾ ಎಂದಾಗ ನಿನ್ನ ಸಮಯ ಸರಿದು ಬಂದಿದೆ ಮಗನೇ ಈಗ ನೋಡು ಮಾಡುತ್ತೇನೆ ಎಂದು ಬೈಯುತ್ತ ಹೋಗಿ ತನ್ನ ತಮ್ಮ ಉಮೇಶ ಯಾದವ ಮತ್ತು 6-7 ಜನಗಳನ್ನು ಮನೆಗೆ ಕಳುಹಿಸಿ ಜೀವ ಬೆದರಿಕೆ ಹಾಕಿ ಹೋಗಿದ್ದಾನೆ. ವೆಂಕಟೇಶ ಯಾದವನ ಮಾತಿನಂತೆ ಅವನ ತಮ್ಮ ಉಮೇಶ ಯಾದವ ಮತ್ತು ಇತರ 6-7 ಜನರು ದಿನಾಂಕ:30/11/18 ಮುಂಜಾನೆ 10.00 ಗಂಟೆ ಸುಮಾರಿಗೆ ಮಾರಕಾಸ್ತ್ರಗಳನ್ನು ತೆಗೆದುಕೊಂಡು ನಮ್ಮ ಮನೆಗೆ ನುಗ್ಗಿ ಮೊಲಿನಂತೆ ದಿನಾಲು 300/-ರೂ ಹಫ್ತಾ ಕೊಡಬೇಕು ಮತ್ತು ನಾನು ಕೊಡುವ ಹಾಲನ್ನೇ ಖದೀದಿಸಬೇಕು ಇಲ್ಲದಿದ್ದರೆ ಭೋಸಡಿ ಮಗನೆ ಕತ್ತರಿಸಿ ಹಾಕುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅವರು ಬಿಳಿ ಬಣ್ಣದ ಫಾರ್ಚುನರ ವಾಹನಗಳಲ್ಲಿ ಬಂದಿದ್ದರು ಮತ್ತು ಮನೆಯಲ್ಲಿದ್ದ ನಮ್ಮಣ್ಣ ದೇವಿಂದ್ರಪ್ಪ ಬಂದ ಜನರಿಗೆ ಹೊಡೆಬಡೆ ಮಾಡದಂತೆ ಮನವಿ ಮಾಡಿಕೊಂಡಿದ್ದರಿಂದ ಈ ಸೂಳೆ ಮಗನಿಗೆ ಸರಿಯಾಗಿ ಬುದ್ದಿ ಹೇಳು ಇಲ್ಲದಿದ್ದರೆ ಹಾದಿ ಹೆಣ ಆಗ್ತಾನ ನೋಡು ಎನ್ನುತ್ತ ಜೀವ ಬೆದರಿಕೆ ಹಾಕಿ ಹೊರಟು ಹೋಗಿದ್ದಾರೆ ಇದ್ದಕ್ಕೆಲ್ಲಾ ಮುಖ್ಯ ಕಾರಣ ವೆಂಕಟೇಶ ಯಾದವ ಹಾಗೂ ಅವನ ತಮ್ಮನಾದ ಉಮೇಶ ಯಾದವ ಇರುತ್ತಾರೆ ಕಾರಣ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

29 November 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಉತ್ತುಮ್ಮಬಾಯಿ ಗಂಡ ಹುಸನಪ್ಪಾ ಬಡಿಗೇರ ಸಾ: ಬೇಲೂರ (ಜೆ) ತಾ:ಜಿ: ಕಲಬುರಗಿ ರವರ ಗಂಡ ಹುಸನಪ್ಪ ಇತನು KIDB ದಲ್ಲಿ ವೈರ ಮೇನ ಅಂತ ಸುಮಾರು 18 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಸಲ ಮಾಡುತ್ತಾ ಬಂದಿರುತ್ತಾನೆ. ದಿನಾಂಕ 28/11/2018 ರಂದು ನನ್ನ ಗಂಡ ಎಂದಿನಂತೆ KIDB ಬೇಲೂರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಕೆಲಸ ಮಾಡಲು ಹೋಗಿದ್ದು  ಮಧ್ಯಾಹ್ನ 02-30 ಘಂಟೆ ಸುಮಾರಿಗೆ ಇವನೊಂದಿಗೆ ಇದ್ದ ಬಾಬು ತಂದೆ ಅರ್ಜುನ ಕ್ಷೇತ್ರಿ ಇವರು ತಿಳಿಸಿದ್ದೆನೆಂದೆರೆ, ನಿಮ್ಮ ಗಂಡ ಹುಸನಪ್ಪ ಹಾಗೂ ನಾವು ಕೂಡಿಕೊಂಡು ಸಹರ ದಾಲಮಿಲ್ಲ ಹತ್ತಿರ ಇರುವ  ಒಂದು ವಿದ್ಯುತ ಕಂಬದ ಕೆಲಸ ಮಾಡುವಾಗ ಹುಸನಪ್ಪಾ ಇತನು ಭಾರವಾದ ಸಲಕರಣೆ ತೆಗೆದುಕೊಂಡು ಸಿಡಿ ಏರುವಾಗ  ಕೆಳಗಡೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಬೇಹೋಸ ಆಗಿ ಬಿದ್ದಿರುತ್ತಾನೆ ಅಂತಾ ತಿಳಿಸಿದಾಗ ನಾನು ಹಾಗೂ ನನ್ನ ಮೈದನ ಹಾಗೂ ಇತರರು ಕೂಡಿಕೊಂಡು ಘಟನೆ ಸ್ಥಳಕ್ಕೆ ಹೋಗಿ ನೋಡಲು ಘಟನೆ ನಿಜ ಇದ್ದು, ನನ್ನ ಗಂಡನಿಗೆ ತಲೆಗೆ ರಕ್ತಗಾಯವಾಗಿ  ರಕ್ತ ಬರುತ್ತಿದ್ದು ಮತ್ತು ಬಲಗೈ ಅಂಗೈ ಮೇಲ್ಬಾಗದಲ್ಲಿ ಬಡೆದು ಗಾಯವಾಗಿದ್ದು ಇದಕ್ಕೆ KIDB ಅಧಿಕಾರಿಗಳಾದ ಸುಭಾಷ ನಾಯ್ಕ AW DO   ಪ್ರಕಾಶ ಗುತ್ತಿಗೆದಾರ ನಾಗಪ್ಪ ಬಿದಿರಿ ಇವರು ನನ್ನ ಗಂಡ ದಲಿತನಾಗಿದ್ದರಿಂದ ಅವನನ್ನು ಯಾವುದೇ ಸಲಕರಣೆಗಳು ಕೊಡದೇ ಮುಂಜಾಗ್ತುತೆ ವಹಿಸದೇ ಹಾಗೂ LC  ತೆಗೆದುಕೊಳ್ಳದೇ ನಿರ್ಲಕ್ಷತನ ವಹಿಸಿದ್ದರಿಂದ ಈ ಘಟನೆ ಜರುಗಿರುತ್ತದೆ. ನಂತರ ನಾವು ನನ್ನ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿ ಆಗದೇ ಮಧ್ಯಾಹ್ನ 03-40 ಗಂಟೆಗೆ ಮೃತಪಟ್ಟಿರುತ್ತಾನೆ.      ಕಾರಣ ನನ್ನ ಗಂಡ ಹುಸನಪ್ಪ ಇತನು ವಿದ್ಯುತ ಕಂಬಕ್ಕೆ ಹತ್ತಿ ಕೆಲಸ ಮಾಡಲು ಹೋಗಿ ಸಿಡಿಯಿಂದ ಬಿದ್ದು ಭಾರಿ ಗಾಯ ಹೊಂದಿ ಮರಣ ಹೊಂದಲು ಯಾವುದೇ ಸೂಕ್ತ ಸಲಕರಣೆಗಳು ಕೊಡದೇ ಮುಂಜಾಗ್ರತೆ ವಹಿಸದೇ ದಲಿತನ ಮೇಲೆ ದೌರ್ಜನ್ಯ ಎಸಗಿದ್ದರಿಂದ ಸದರಿ 3 ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶರಣಮ್ಮ ಗಂಡ ಗೋವಿಂದಪ್ಪ ಅರಳಗುಂಡಗಿ ಸಾ|| ಜಂಬೇರಾಳ ಗ್ರಾಮ ತಾ|| ಜೇವರ್ಗಿ ರವರು ಊರ ಸಿಮಾಂತರದಲ್ಲಿ ನಮ್ಮ ಮಾವ ಶರಣಪ್ಪ ರವರ ಹೆಸರಿಗೆ ಹೊಲ ಇದ್ದು, ಅದರ ಸರ್ವೆ ನಂ 48 ನೇದ್ದರಲ್ಲಿ 3 ಎಕರೆ 30 ಗುಂಟೆ ಜಮೀನು ಇರುತ್ತದೆ, ಆ ಹೊಲವನ್ನು ನಮ್ಮ ಪಾಲಿಗೆ ಬಂದಿದ್ದು ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೇವೆ, ಹೊಲದ ಸಲುವಾಗಿ ಮತ್ತು ಮಕ್ಕಳ ಮದುವೆ ಸಲುವಾಗಿ ನನ್ನ ಗಂಡ ಅರಳಗುಂಡಗಿ ಕೆ.ಜಿ.ಬಿ ಬ್ಯಾಂಕನಲ್ಲಿ ಅಂದಾಜು 40,000/-ರೂ, ಹಾಗು ಖಾಸಗಿಯಾಗಿ 10 ಲಕ್ಷ ರೂಪಾಯಿಗಳು ಸಾಲ ಮಾಡಿಕೊಂಡಿದ್ದನು, ನನ್ನ ಗಂಡ ಆಗಾಗ ನನಗೆ ಸಾಲ ಬಹಳಾಗಿದೆ, ನಾನು ಜನರಲ್ಲಿ ತಲೆ ಎತ್ತಿ ತಿರುಗಾಡಲು ಆಗುತ್ತಿಲ್ಲಾ ನಾನು ಸತ್ತರೆ ಎಲ್ಲಾ ಸರಿ ಹೋಗುತ್ತೇ ಅಂತಾ ಅನ್ನುತ್ತಿದ್ದರು, ಈ ಬಗ್ಗೆ ನನ್ನ ಗಂಡನಿಗೆ ನಾನು ಸಮಾಧಾನ ಹೇಳುತ್ತಾ ಬಂದಿರುತ್ತೇನೆ. ದಿನಾಂಕ 26-11-2018 ರಂದು ರಾತ್ರಿ 9;00 ಗಂಟೆಗೆ ನಾನು ನನ್ನ ಗಂಡ ಇಬ್ಬರು ಊಟ ಮಾಡಿ ಮಲಗಿಕೊಂಡೆವು, ನಂತರ 10;00 ಪಿ.ಎಂ ಸುಮಾರಿಗೆ ಯಾರೋ ಚೀರಿದ ಸಪ್ಪಳ ಕೇಳ ಎದ್ದು ನೋಡಿದಾಗ ನನ್ನ ಗಂಡ ನೇಣು ಹಾಕಿಕೊಂಡಿದ್ದನು, ನಾನು ಜೋರಾಗಿ ಚಿರಾಡಿದ್ದರಿಂದ ಅಲ್ಲೇ ಬಾಜು ಇದ್ದ ನಮ್ಮ ಅಣ್ಣತಮ್ಮಂದಿರಾದ ಶಂಕ್ರೆಪ್ಪ ತಂದೆ ಶರಣಪ್ಪ ಅರಳಗುಂಡಗಿ, ಮಲ್ಲನಗೌಡ ತಂದೆ ಮಡಿವಾಳಪ್ಪಗೌಡ ಪೊಲೀಸ ಪಾಟೀಲ, ಏಸಪ್ಪ ತಂದೆ ಚಂದಪ್ಪ ಅರಳಗುಂಡಗಿ ರವರು ಬಂದು ನನ್ನ ಗಂಡನಿಗೆ ಕೇಳಗೆ ಇಳಿಸಿ ನಂತರ ಉಪಚಾರ ಕುರಿತು ಆಸ್ಪತ್ರೆಗೆ ಒಯುವಾಗ ಮಾರ್ಗಮದ್ಯದಲ್ಲಿ ಕಡಕೋಳ ಹತ್ತಿರ 10;30 ಪಿ.ಎಂ ಕ್ಕೆ ನನ್ನ ಗಂಡ ಮೃತ ಪಟ್ಟನು, ನಂತರ ನನ್ನ ಗಂಡನ ಶವವನ್ನು ಮನೆಗೆ ತೆಗೆದುಕೊಂಡು ಹೋಗಿ ಹಾಕಿರುತ್ತೇವೆ, ನನ್ನ ಗಂಡ ಸಾಲದ ಬಾಧೇಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ  26-10-2018 ರಂದು 10;00 ಪಿ.ಎಂ ಸುಮಾರಿಗೆ ನಮ್ಮ ಮನೆಯಲ್ಲಿ ಕಬ್ಬಿಣದ ಪೈಪಿನ ಅಡ್ಡಿಗೆ ಪ್ಲಾಸ್ಟೀಕ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.