ಕೊಲೆ ಪ್ರಕರಣ :
ಗ್ರಾಮೀಣ
ಠಾಣೆ : ದಿನಾಂಕ 03/12/18 ರಂದು ಬೆಳಿಗ್ಗೆ 7 ಗಂಟೆ ಸಮಾರಿಗೆ
ನಮ್ಮ ಮಾವ ರಾಜಶೇಖರ ತಂದೆ ಮಲ್ಲೇಶಪ್ಪ ಇವರು ಮನೆಗೆ ಪೋನ ಮಾಡಿ ಮಾಹಿತಿ ತಿಳೀಸಿದೆನೆಂದರೆ ಪಾಟೀಲ್
ಸರಡಗಿ ದಾಲ್‌ಮಿಲ್‌ದಲ್ಲಿ ಇನ್ನೊಬ್ಬ ವಾಚ್‌ಮ್ಯಾನ್ ಕೆಲಸ ಮಾಡುತ್ತಿರುವ ಇವರು ಮಗ ಬಂದು ತಿಳೀಸಿದೆನೆಂದರೆ
ಮಾವ ಸುಭಾಷಚಂದ್ರ ಇವರಿಗೆ ಯಾರೋ ಹೊಡೆದು ರಕ್ತಗಾಯಗೊಳಿಸಿದ್ದು ಅವರ ಉಪಚಾರಕ್ಕಾಗಿ ಚೈತನ್ಯ ಆಸ್ಪತ್ರೆಗೆ
ನಮ್ಮ ಮಾಲಿಕ ಸುನೀಲ ಪಾಟೀಲ ಮತ್ತು ಇತರರು ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ನಾವು ಆಸ್ಪತ್ರೆಗೆ
ಹೊಗುತ್ತಿದ್ದು ಬೆಗನೆ ಬರುವಂತೆ ತಿಳಿಸಿದ್ದಕ್ಕೆ ಕೂಡಲೆ ನಾನು ನನ್ನ ತಾಯಿ ಮಹಾದೇವಿ ಕೂಡಿಕೊಂಡು
ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಸುಪರ್ ಮಾರ್ಕೆಟದಲ್ಲಿರುವ ಚೈತನ್ಯ ಆಸ್ಪತ್ರೆಗೆ ಬಂದು ನೋಡಲಾಗಿ
ನಮ್ಮ ತಂದೆಯವರು ಹೆಣೆಯ,ತಲೆಗೆ ಗಟ್ಟಬಾಯಿಗೆ ಹಾಗು ಕೈಯಿಗೆ ಭಾರಿ ಪ್ರಮಾಣದ ಗಾಯಗಳಾಗಿ ಮೃತಪಟ್ಟಿದ್ದರು
ಅಲ್ಲೆ ಇರುವ ನಮ್ಮ ಮಾಮ ರಾಜಶೇಖರ ಹಾಗು ನಮ್ಮ ತಂಗಿಯರಾದ ಜಯಶ್ರೀ, ಸಂಗಿತಾ, ಕವಿತಾ ಮತ್ತು ದಾಲ್‌ಮಿಲ್
ಮಾಲಿಕ ಸುನೀಲ ಇವರಿಗೆ ವಿಚಾರಿಸಲಾಗಿ ಮಾಲಿಕ ಸುನೀಲ ಇವರು ಇಳಿಸಿದನೆಂದರೆ ಇಂದು ಬೆಳಗಿನ ಜಾವ ಯಾರೋ
2 ಗಂಟೆಯಿಂದ 4 ಗಂಟೆಯ ಅವದಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಮತ್ತು ಯಾವುದೋ ದುರುದ್ದೇಶದಿಂದ
ದಾಲ್‌ಮಿಲ್‌ಗೆ ಬಂದು ವಾಚ್‌ಮ್ಯಾನ ರೂಮಿನಲ್ಲಿದ್ದ ಸುಬಾಷಚಂದ್ರ ಇವರಿಗೆ ಯಾವುದೋ ಹರಿತವಾದ ಆಯುಧಗಳಿಂದ
ಹೊಡೆಬಡೆ ಮಾಡಿ ಭಾರಿ ರಕ್ತಗಾಯ ಗೋಳಿಸಿರುತ್ತಾರೆ. ಉಪಚಾರಕಾಲಕ್ಕೆ 8:35 ಗಂಟೆಗೆ ಮೃತಪಟ್ಟಿರುತ್ತಾರೆ
ಎಂದು ತಿಳಿಸಿರುತ್ತಾರೆ. ಕಾರಣ ಯಾರೋ
ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಮತ್ತು ದುರುದ್ಧೇಶದಿಂದ ಪಾಟೀಲ ಸರಡಗಿ ಇವರ ದಾಲ್‌ಮಿಲ್‌ಗೆ
ಇಂದು ಬೆಳಿಗಿನ ಜಾವ 2 ಗಂಟೆಯಿಂದ 4 ಗಂಟೆಯ ಅವದಿಯಲ್ಲಿ ಬಂದು ವಾಚ್‌ಮ್ಯಾನ್ ರುಮನಲ್ಲಿರುವ ನಮ್ಮ
ತಂದೆಯವರಿಗೆ ಹರಿತವಾದ ಆಯುದಗಳಿಂದ ಹಣೆಗೆ , ತಲೆಗೆ , ಗಟ್ಟಬಾಯಿಗೆ, ಇತರೆ ಕಡೆಗಳಲ್ಲಿ ಹೊಡೆಬಡೆ
ಮಾಡಿ ಉಪಚಾರ ಕಾಲದಲ್ಲಿ ಮೃತಪಟ್ಟಿದು ನಮ್ಮ ತಂದೆಯವರಿಗೆ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಪತ್ತೆ
ಮಾಡಿ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಶ್ರೀ ಶರಣಬಸಪ್ಪ ತಂದೆ ಸುಭಾಷಚಂದ್ರ
ನಿಗ್ಗುಡಗಿ ಮು: ಬೀಮನಾಳ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ
ನಗರ ಠಾಣೆ : ದಿನಾಂಕ 04.12.2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ
ಹನುಮಾನ ಗುಡಿ ಹತ್ತಿರ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತು ಕೊಂಡು ರಸ್ತೆಯ ಮೇಲೆ
ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮೊಸ ಮಾಡಿ ಮಟಕಾ
ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ
ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ
ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಮರೆಯಲ್ಲಿ ನಿಂತು ಹನುಮಾನ ದೇವರ ಗುಡಿ ಮುಂದಿನ ರಸ್ತೆಯ
ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ
ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ
ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮೊಸ ಮಾಡಿ ಮಟಕಾ ಚೀಟಿ
ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ
ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ
ವಿಚಾರಿಸಲು ಸದರಿಯರು ತಮ್ಮ ಹೆಸರು 1. ಶರಣು ತಂದೆ ಗುರಪ್ಪ ಮರತುರ ಸಾ:
ಗಂಗಾನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 375/-ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. 2.
ಬಸವರಾಜ ತಂದೆ ಮೈಲಾರಿ ನಾಟಿಕಾರ ಸಾ: ಮೀಣಜಗಿ ತಾ:ಜಿ: ಕಲಬುರಗಿ ಇತನ ಹತ್ತಿರ
ನಗದು ಹಣ 270/- ರೂ 1 ಮಟಕಾ ಚೀಟಿ ಮತ್ತು
ಒಂದು ಬಾಲ ಪೇನ್ ದೊರೆತಿದ್ದು ಹೀಗೆ ಒಟ್ಟು 645/-ರೂ 2 ಮಟಕಾ ಚೀಟಿ ಮತ್ತು 2 ಬಾಲ ಪೇನ್ನ್ಗಳನ್ನು ಪಂಚರ ಸಮಕ್ಷಮ
ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ
ಠಾಣೆ : ಶ್ರೀಮತಿ ಮಹಾನಂದ ಗಂಡ ಕುಪಿಂದ್ರ ಗುಜ್ಜೆ ಸಾ: ಹುಲ್ಲೂರ ತಾ: ಜೇವರ್ಗಿ ಜಿ: ಕಲಬುರ್ಗಿ ಇವರ ಗಂಡನ ಹೆಸರಿನಿಂದ ನಮ್ಮೂರ ಸೀಮಾಂತರದಲ್ಲಿ ಹೊಲ
ಸರ್ವೆ ನಂ. 70 ವಿಸ್ತಿರ್ಣ 3 ಎಕರೆ 20 ಗುಂಟೆ ಜಮೀನು ಇರುತ್ತದೆ. ಆ ಹೊಲದ ಮೇಲೆ ನನ್ನ ಗಂಡ
ಕ.ಜಿ.ಬಿ ಬ್ಯಾಂಕ ಅಂಕಲಗಿ 1,00,000=00 ರೂಪಾಯಿ ಸಾಲ ಮಾಡಿದ್ದು, ಮತ್ತು ವ್ಯವಸಾಯ ಸೇವಾ
ಸಹಕಾರಿ ಸಂಘ ಇಟಗಾದಲ್ಲಿ 40,000=00 ರೂಪಾಯಿ ಸಾಲ ತಗೆದುಕೊಂಡಿದ್ದು
ಅಲ್ಲದೆ ಮೆಣಸಿನ ಹೊಲಕ್ಕೆ ಪೈಪಲೈನ ಮಾಡಲು ಊರ ಮನೆಯವರ ಹತ್ತಿರ ಕೈಗಡದ ಹಾಗೆ 6 ಲಕ್ಷ ರೂಪಾಯಿ
ಪಡೆದುಕೊಂಡಿದ್ದು ಹೀಗೆ ಒಟ್ಟು 7,40,000=00
ರೂಪಾಯಿ ಸಾಲ ಮಾಡಿದ್ದು ಇರುತ್ತದೆ. ಈ ವರ್ಷ ನಮ್ಮ ಹೊಲದಲ್ಲಿ ಮೇಣಸಿನ ಅಗಿ ಹಚ್ಚಿದ್ದು ಅದಕ್ಕೆ
ಮೆಣಸಿನಕಾಯಿಗಳು ಆಗದೆ ಪೂರ್ತಿ ಲಾಸ ಆಗಿದ್ದರಿಂದ ನನ್ನ ಗಂಡನು ಬಾರಿ ನೊಂದುಕೊಂಡಿದ್ದನು.ಅವನಿಗೆ
ನಮ್ಮ ಮನೆಯವರೆಲ್ಲರೂ ಸಾಂತ್ವನ ಹೇಳಿದ್ದೆವು. ದಿನಾಂಕ: 03-12-2018 ರಂದು ರಾತ್ರಿ 10-00
ಗಂಟೆಯ ಸುಮಾರಿಗೆ ನಾನು ನನ್ನ ಗಂಡ, ಅತ್ತೆ ಮಾವ ಎಲ್ಲರೂ ಎಂದಿನಂತೆ ಊಟ
ಮಾಡಿ ನಾವು ಮನೆಯಲ್ಲಿ ಮಲಗಿಕೊಂಡೆವು ನನ್ನ ಗಂಡ ಮಾಳಿಗೆ ಮೇಲೆ ಮಲಗುತ್ತೇ ಅಂತಾ ಹೋದನು. ನಂತರ
ಇಂದು ದಿನಾಂಕ: 04-12-2018 ರಂದು ಬೆಳಿಗ್ಗೆ 06-00 ಗಂಟೆಯಾದರು ನನ್ನ ಗಂಡ ಎದ್ದು ಕೆಳಗೆ ಬರದೆ
ಇದ್ದರಿಂಧ ನಾನು ಮಾಳಿಗೆ ಮೇಲೆ ಹೋಗಿ ನನ್ನ ಗಂಡನಿಗೆ ಎಬ್ಬಸಲು ಹೋದಾಗ ನನ್ನ ಗಂಡನು ವಿಷ ಸೇವನೆ
ಮಾಡಿ ಸತ್ತಿದ್ದನು ಅವನ ಬಾಯಿಯಿಂದ ನೊರೆ ಬಂದಿತ್ತು ನಂತರ ನಾನು ಚಿರಾಡುತಿದ್ದಾಗ ನಮ್ಮ ಪಕ್ಕದ
ಮನೆಯ ಸುರೇಶ ಮಾಲಿಪಾಟೀಲ, ಈರಪ್ಪ ಪಿರೋಜಿ ಇತರರು ಬಂದರು. ನನ್ನ ಗಂಡನು
ನಿನ್ನೆ ದಿನಾಂಕ: 03-1-2018 ರಿಂದ ಇಂದು ದಿನಾಂಕ: 04-12-2018 ರ ಬೆಳಿಗ್ಗೆ 06-00 ಗಂಟೆಯ
ಮದ್ಯದ ಅವದಿಯಲ್ಲಿ ನಮ್ಮ ಮನೆಯ ಮಾಳಿಗೆಯ ಮೇಲೆ ವಿಷ ಸೇವನೆ ಮಾಡಿ ಸತ್ತಿರುತ್ತಾನೆ. ನನ್ನ ಗಂಡನು
ಮೆಣಸಿನ ಹೊಲಕ್ಕೆ ಪೈಪಲೈನ ಮಾಡಲು ಹಾಗೂ ಹೊಲದ ಕೆಲಸಕ್ಕೆ ಮತ್ತು ಸಂಸಾರದ ಅಡಚಣೆಗಾಗಿ ಕೆ.ಜಿ.ಬಿ
ಬ್ಯಾಂಕ ಹುಲ್ಲೂರ ದಲ್ಲಿ, ವ್ಯವಸಾಯ ಸೇವಾ ಸಹಕಾರಿ ಸಂಘ ಇಟಗಾದಲ್ಲಿ ಊರ
ಮನೆಯವರ ಹತ್ತಿರ ಕೈಗಡದ ಹಾಗೆ ಹಣ ತಗೆದುಕೊಂಡಿದ್ದು ಹೊಲದಲ್ಲಿ ಹಾಕಿದ ಮೆಣಸಿನ ಗಿಡಕ್ಕೆ
ಕಾಯಿಗಳು ಆಗದೆ ಪೂರ್ತಿ ಲಾಸ ಆಗಿದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕು ಅಂತಾ ಮನಃನೊಂದು ನಮ್ಮ
ಮನೆಯ ಮಾಳಿಗೆಯ ಮೇಲೆ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಧಾನಯ್ಯ ತಂದೆ ಸಿದ್ದಯ್ಯ
ಹಿರೇಮಠ ಸಾ: ಅಫಜಲಪೂರ ರವರು ಅಫಜಲಪೂರದ ಎ.ಪಿ.ಎಮ್.ಸಿ ಯಾರ್ಡನಲ್ಲಿ ನನ್ನ ಸ್ವಂತದ ಶ್ರೀ ಗುರುಕೃಪಾ
ಟ್ರೇಡಿಂಗ್ ಕಂಪನಿ ಎಂಬ ಹೆಸರಿನ ಅಡತಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುತ್ತೇನೆ. ನನ್ನ ತಂದೆಯವರಾದ
ಶ್ರೀ ಸಿದ್ದಯ್ಯ ತಂದೆ ರೇವಯ್ಯ ಹಿರೇಮಠ ರವರ ಹೆಸರಿನಲ್ಲಿ ಶ್ರೀ ಶಿವಕೃಪಾ ಟ್ರೇಡಿಂಗ್ ಕಂಪನಿ ಅಡತಿ
ಅಂಗಡಿ ಇದ್ದು, ಎರಡು ಅಡತಿ ಅಂಗಡಿಗಳ ವ್ಯೆವಹಾರ ಒಂದೆ ಅಂಗಡಿಯಲ್ಲಿ ಮಾಡುತ್ತೇವೆ. ಅಡತಿ ಅಂಗಡಿಗಳ
ವ್ಯೆವಹಾರವನ್ನು ನಾನು ಮತ್ತು ನನ್ನ ತಂದೆ ಇಬ್ಬರು ನೋಡಿಕೊಳ್ಳುತ್ತೇವೆ. ದಿನಾಂಕ 28-11-2018 ರಂದು
ಅಫಜಲಪೂರದ ಎಸ್.ಬಿ.ಐ ಬ್ಯಾಂಕಿನಿಂದ ನಮ್ಮ ಅಡತಿ ಅಂಗಡಿಯ ವ್ಯೆವಹಾರದ ಸಲುವಾಗಿ 5,00,000/- ರೂ
(ಐದು ಲಕ್ಷ ರೂಪಾಯಿಗಳು) ಹಣ ಡ್ರಾ ಮಾಡಿಕೊಂಡು ಬಂದು ನಮ್ಮ ಅಡತಿ ಅಂಗಡಿಯ ಟ್ರಜರಿಯಲ್ಲಿ ಇಟ್ಟಿರುತ್ತೇನೆ.
ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ 30,000/- ರೂ ಹಣ ಇಟ್ಟಿರುತ್ತೇನೆ. ಇದಲ್ಲದೆ ನಮ್ಮ ಹೆಣ್ಣು ಮಕ್ಕಳು
ಹಾಗೂ ಮನೆಯವರು ಉಪಯೋಗಿಸುವ ಚಿನ್ನಾಭರಣಗಳನ್ನು
ಅಂಗಡಿಯಲ್ಲಿ ಇಟ್ಟಿರುತ್ತೇನೆ. ದಿನಾಂಕ 03-12-2018 ರಂದು ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ
10:00 ಗಂಟೆಯವರೆಗೆ ಅಡತಿ ಅಂಗಡಿಯ ವ್ಯೆವಹಾರ ಮಾಡಿ 11:00 ಗಂಟೆಯವರೆಗೆ ಲೆಕ್ಕ ಪತ್ರ ಮುಗಿಸಿ ಅಡತಿ
ಮುಚ್ಚಿ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ 04-12-2018 ರಂದು ಬೆಳಿಗ್ಗೆ ನಮ್ಮ ಮನೆಯಲ್ಲಿದ್ದಾಗ ನಮ್ಮ
ಅಡತಿ ಅಂಗಡಿಯಲ್ಲಿ ಹಮಾಲಿ ಕೆಲಸ ಮಾಡುವ ಶ್ರೀಶೈಲ ತಂದೆ ಚಂದಪ್ಪ ಹಳೆಮನಿ ಎಂಬಾತನು ನನಗೆ ಪೋನ್ ಮಾಡಿ
ಅಡತಿ ಅಂಗಡಿಯ ಶಟರ್ ಮೇಲೆತ್ತಿದ್ದು ಮದ್ಯದಲ್ಲಿ ಬೆಂಡ್ ಆಗಿರುತ್ತದೆ ಅಂತಾ ತಿಳಿಸಿದನು. ಆಗ ನಾನು
ನಮ್ಮ ಅಡತಿ ಅಂಗಡಿಗೆ ಬಂದು ಶಟರ್ ಬೆಂಡ್ ಮಾಡಿ ಅರ್ದಕ್ಕೆ ಎತ್ತಿದ್ದು ನೋಡಿದೆನು. ನಂತರ ಈ ವಿಷಯವನ್ನು
ನಾನು ನಮ್ಮ ತಂದೆಯವರಿಗೂ ತಿಳಿಸಿದ್ದು, ಬಳಿಕ ನಮ್ಮ ತಂದೆ ಹಾಗೂ ನಮ್ಮಲ್ಲಿ ಕೆಲಸ ಮಾಡುವ ಯುನುಸ್
ಪಠಾಣ, ಮಳೇಂದ್ರ ವಾಳಿ, ಗೊಲ್ಲಾಳ ಕೋರಳ್ಳಿ, ರಾಜಶೇಖರ ಗುಳೇದ ಮತ್ತು ನಮ್ಮಲ್ಲಿ ಕೆಲಸ ಮಾಡುವ ಇನ್ನಿತರರು
ಹಾಗೂ ಅಕ್ಕ ಪಕ್ಕದ ಅಡತಿ ಅಂಗಡಿಯವರು ಬಂದಿರುತ್ತಾರೆ. ಆಗ ನಾನು ಮತ್ತು ನಮ್ಮ ತಂದೆಯವರು ಅಡತಿ ಅಂಗಡಿಯಲ್ಲಿ
ಒಳಗೆ ಹೋಗಿ ನೋಡಲು ಟ್ರಜರಿ ಮತ್ತು ಗಲ್ಲದ ಪೇಟಿ ಎರಡು ತೆರೆದಿದ್ದವು. ಟ್ರಜರಿಯ ಲಾಕರ ಸಹ ತೆರೆದಿದ್ದು
ಅದರಲ್ಲಿ ಇಟ್ಟಿದ್ದ ನಗದು ಹಣ ಮತ್ತು ಬಂಗಾರದ ಆಭರಣಗಳನ್ನು ದಿನಾಂಕ 03-12-2018 ರ ರಾತ್ರಿ
11:00 ಗಂಟೆಯಿಂದ ದಿನಾಂಕ 04-12-2018 ರ ಬೆಳಗಿನ ಜಾವ 05:00 ಗಂಟೆಯ ಮದ್ಯದ ಅವದಿಯಲ್ಲಿ ಯಾರೊ ಕಳ್ಳರು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಮಾನ್ಯ ರವರು ನಮ್ಮ ಅಡತಿ ಅಂಗಡಿಯಲ್ಲಿನ ಹಣ ಮತ್ತು ಬಂಗಾರದ
ಆಭರಣಗಳನ್ನು 9,50,000/- ರೂ ಕಿಮ್ಮತ್ತಿನದನ್ನು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment