POLICE BHAVAN KALABURAGI

POLICE BHAVAN KALABURAGI

07 November 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 05.11.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ವಿವೇಕಾನಂದ ನಗರದ ಓಂಕಾರೇಶ್ವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂಸ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿಯಂತೆ ವಿವೇಕಾನಂದ ನಗರ ಓಂಕಾರೇಶ್ವರು ಗುಡಿ ಯಿಂದ ಸ್ವಲ್ಪ ದೂರದಲ್ಲಿ ಹೋಗಿ ಜೀಪನ್ನು ನಿಲ್ಲಿಸಿ ನಂತರ ಎಲ್ಲರು ಕೂಡಿಕೊಂಡು ನಡೆದುಕೊಂಡು ಓಂಕಾರೇಶ್ವರ ಗುಡಿಯ ಹತ್ತಿರ ಹೋಗಿ ನೋಡಲು ಗುಡಿಯ ಮುಂದಿನ ಸಾರ್ವಜನಿಕ ಸ್ಥಳಲ್ಲಿ 7 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದುಸನ್ನು ಖಚಿತಪಡಿಸಿಕೊಂಡು  ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ನಾಗರಾಜ ತಂದೆ ಸಿದ್ರಾಮಪ್ಪ ಪಾಟೀಲ ಸಾ: ಜೆ.ಆರ್.ನಗರ ಕಲಬುರಗಿ  2. ಆನಂದ ತಂದೆ ಅಣ್ಣರಾವ ಪಾಟೀಲ ಸಾ: ಸಂತೋಷ ಕಾಲೋನಿ ಕಲಬುರಗಿ  3. ಅಣವೀರಪ್ಪ ತಂದೆ ಸಿದ್ರಾಮಪ್ಪ ಪಾಟೀಲ ಸಾ: ಸಂತೋಷ ಕಾಲೋನಿ ಕಲಬುರಗಿ 4. ಬಸಪ್ಪ ತಂದೆ ಶಿವಪ್ಪ ಕರ್ ಸಾ: ಸಂತೋಷ ಕಾಲೋನಿ ಕಲಬುರಗಿ 5. ಸಿದ್ದಪ್ಪ ತಂದೆ ಚಂದ್ರಶ್ಯಾ ಕೋಟೆ ಸಾ: ಆಳಂದ ಕಾಲೋನಿ ಕಲಬುರಗಿ ಇತನ  6. ಜಗನ್ನಾಥ ತಂದೆ ಭೀಮಶ್ಯಾ ವಾಡಿ ಸಾ: ಶಹಾಬಜಾರ ಕಲಬುರಗಿ. 7. ಹಣಮಂತ ತಂದೆ ಕಲ್ಯಾಣಿ ನಗರೆ ಸಾ: ಸಂತೋಷ ಕಾಲೋನಿ ಕಲಬುರಗಿ. ಅಂತಾ ತಿಳಿಸಿದ್ದು ಸದರಿಯವರಿಂದ  ಜೂಜಾಟಕ್ಕೆ ಬಳಸಿದ  ಒಟ್ಟು ನಗದು ಹಣ 5140/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು. ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ.ಶಿವಪುತ್ರ ಎ.ಎಸ್.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫೀರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಾಂಶವೇನೆಂದರೆ. ನಮ್ಮ ರಾಘವೇಂದ್ರ ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿಯ ರೌಡಿ ಜನರ ಪರೇಡ ಪ್ರತಿ ತಿಂಗಳು ಕೈಗೊಳ್ಳುತ್ತಾ ಬಂದಿದ್ದು ಠಾಣಾ ವ್ಯಾಪ್ತಿಯಲ್ಲಿಯ ಹಲವಾರು ರೌಡಿ ಜನರು ಪ್ರತಿತಿಂಗಳದ ರೌಡಿ ಪರೇಡಗೆ ಹಾಜರಾಗಿದ್ದು ಇರುತ್ತದೆ. ಕೊನೆ ಬಾರಿಗೆ ಅಕ್ಟೋಬರ ತಿಂಗಳಿನಲ್ಲಿ ನಾವು ರೌಡಿ ಪರೇಡ ನಿಯೋಜನೆ ಮಾಡಿದ್ದು ಆ ವೇಳೆಗೆ ಠಾಣೆಯ ರೌಡಿಶೀಟರನಾದ ಪ್ರದೀಪ @ 7 ಸ್ಟಾರ ಪ್ರದೀಪ ತಂದೆ ವೈಜನಾಥ ಭಾವೆ ಸಾ:ಬೋರಾಬಾಯಿ ನಗರ ಕಲಬುರಗಿ ಇತನಿಗೆ ರೌಡಿ ಪರೇಡಗೆ ಹಾಜರಾಗಲು ಸೂಚಿಸಿದ್ದು ಇರುತ್ತದೆ. ಆದರೆ ರೌಡಿ ಪರೇಡಗೆ ಹಾಜರರಾಗದೇ ಗೈರಹಾಜರಾಗಿದ್ದು ಇರುತ್ತದೆ. ಸದರಿಯವನು ರಾಘವೇಂದ್ರ ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಅಲ್ಲದೆ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ  ಭಾಗಿಯಾದ ಬಗ್ಗೆ ಹಲವಾರು ಪ್ರಕರಣಗಳು ದಾಖಲಾಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ:05/11/2018 ರಂದು ರಾತ್ರಿ 8.30 ಪಿ.ಎಂ ಸುಮಾರಿಗೆ ಠಾಣೆಯ ರೌಡಿಶೀಟರನಾದ ಪ್ರದೀಪ @ 7 ಸ್ಟಾರ ಪ್ರದೀಪ ತಂದೆ ವೈಜನಾಥಭಾವೆ ಸಾ:ಬೋರಾಬಾಯಿ ನಗರ ಕಲಬುರಗಿ ಇತನಿಗೆ ರೌಡಿ ಪರೇಡಗೆ ಕರೆಯಿಸಿ ಆತನ ಚಟುವಟಿಕೆಯ ಮೇಲೆ ಮುಂಜಾಗೃತವಾಗಿ ನಿಗಾ ಇಡುವದಗೋಸ್ಕರ ಆತನ ಇರುವಿಕೆ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಮಾನ್ಯ ಪಿ.ಎಸ್.ಐ ಸಾಹೇಬರು ನನಗೂ ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರು ಎಲ್ಲರೂ ಕೂಡಿಕೊಂಡು ಜೀಪನಲ್ಲಿ ಠಾಣೆಯಿಂದ ರೌಡಿಶೀಟರನಾದ ಪ್ರದೀಪ @ 7 ಸ್ಟಾರ ಪ್ರದೀಪ ತಂದೆ ವೈಜನಾಥಭಾವೆ ವ:28 ವರ್ಷ ಜಾ:ಮಾದಿಗ ಸಾ:ಬೋರಾಬಾಯಿ ನಗರ ಕಲಬುರಗಿ ಇತನಿಗೆ ಚೆಕ್  ಮಾಡುವ ಸಲುವಾಗಿ ಹೊರಟಿದ್ದು ಅದೆ ರೀತಿ ಪಿ.ಎಸ್.ಐ ಸಾಹೇಬರು ಪ್ರಮೋದ ಸಿಪಿಸಿ-249 ಇತನಿಗೆ ಠಾಣೆಗೆ ಒದಗಿಸಿದ ಮೋಟಾರ ಸೈಕಲ ನಂ.ಕೆಎ-32 ಜಿ-629 ನೇದ್ದನ್ನು ತೆಗೆದುಕೊಂಡು ಬರಲು ಮಾನ್ಯ ಪಿ.ಎಸ್.ಐ ಸಾಹೇಬರು ತಿಳಿಸಿದ ಮೇರೆಗೆ ಪ್ರಮೋದ ಸಿಪಿಸಿ-249 ಇತನು ಸಹ ಮೋಟಾರ ಸೈಕಲ ತೆಗೆದುಕೊಂಡು ನಮ್ಮ ಜೀಪಿನ ಹಿಂದೆ ಬಂದನು ನಾವುಗಳೆಲ್ಲರೂ ರಾತ್ರಿ 9.00 ಪಿ.ಎಂ ಸುಮಾರಿಗೆ ಬೋರಾಬಾಯಿ ನಗರದ ಪ್ರದೀಪ @ 7 ಸ್ಟಾರ ಪ್ರದೀಪ ಇತನ ಮನೆಯ ಎದರುಗಡೆ ಇರುವ ಜಟಿಂಗರಾಯ ಗುಡಿಯ ಹತ್ತಿರ ಹೋಗಿ ನಮ್ಮ ಜೀಪ ನಿಲ್ಲಿಸಿದ್ದು ಪ್ರಮೋದ ಸಿಪಿಸಿ-249 ಸಹ ಮೋಟಾರ ಸೈಕಲ ತೆಗೆದುಕೊಂಡು ಬಂದು ಜೀಪಿನ ಹತ್ತಿರ ನಿಲ್ಲಿಸಿದ್ದು ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಯ ರೌಡಿಶೀಟರನಾದ ಪ್ರದೀಪ @ 7 ಸ್ಟಾರ ಪ್ರದೀಪ ತಂದೆ ವೈಜನಾಥಭಾವೆ ಇತನಿಗೆ ಬರಲು ತಿಳಿಸಿದ ಮೇರೆಗ ಇತನು ಮನೆಯಿಂದ ಹೊರಗಡೆ ಬಂದನು. ಪಿ.ಎಸ್.ಐ ಸಾಹೇಬರು ನೀನು ಅಕ್ಟೋಬರ ತಿಂಗಳಿನಲ್ಲಿ ರೌಡಿ ಪರೇಡಗೆ ಹಾಜರಾಗಿಲ್ಲ ಅಲ್ಲದೆ ಹಿಂದಿನ ರೌಡಿ ಪರೇಡಗಳಿಗೂ ಸಹ ಹಾಜರಾಗಿಲ್ಲ ಅದಕ್ಕಾಗಿ ನಾವು ಮುಂದೆ ನಿಯೋಜನೆ ಗೊಳಿಸುವ ರೌಡಿ ಪರೇಡಗೆ ತಪ್ಪದೆ ಹಾಜರಾಗಬೇಕು ಅಂತಾ ತಿಳಿಸಿದಾಗ ಪ್ರದೀಪ @ 7 ಸ್ಟಾರ ಪ್ರದೀಪ ಇತನು ಏ ಭೋಸಡಿ ಮಗನೆ ಪಿ.ಎಸ್.ಐ ಹೋಸದಾಗಿ ಬಂದಿದ್ದಿ ಈಗೇ ನಿನಗೆ ಇಷ್ಟೊಂದು ಸೊಕ್ಕು ಬಂದಿದೆ ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ನನ್ನ ಹಿಂದೆ ದೊಡ್ಡ ಗ್ಯಾಂಗ್ ಇದೆ ನೀವು ಪೊಲೀಸರು ಏನು ಮಾಡಲು ಸಾದ್ಯ ಇಲ್ಲಾ ಭೋಸಡಿ ಮಗನೆ ಅಂತಾ ನಮ್ಮ ಪಿ.ಎಸ್.ಐ ಸಾಹೇಬರಿಗೆ ಬೈಯಲು ಪ್ರಾರಂಭಿಸಿದನು. ಆಗ ಆತನ ಮನೆಯಿಂದ ಆತನ ತಾಯಿಯಾದ ಸರೋಜಾ ಹಾಗೂ ಆತನ ತಂಗಿಯಾದ ಪ್ರತಿಮಾ ಹಾಗೂ ಪ್ರತಿಮಾಳ ಗಂಡ ಸ್ವರಾಜ ಮತ್ತು ಆತನ ಸಹಚರರಾದ 1)ಅಮರ, 2)ಸಂತೋಷ, 3)ರಾಘು, 4)ಸಚಿನ ತಂದೆ ಸೋಮಣ್ಣಾ 5)ಲೋಹಿತ ತಂದೆ ಸಂಬಣ್ಣಾ ಗಡಸೆ ಹಾಗೂ ಇತರರು ಕೂಡಿಕೊಂಡು ಬಂದವರೆ ಅವರಲ್ಲಿ ಪ್ರದೀಪ @ 7 ಸ್ಟಾರ ಪ್ರದೀಪನ ತಾಯಿಯಾದ ಸರೋಜಾ ಇವಳು ಬಂದವಳೆ ನನ್ನ ಮಗನಿಗೆ ನೀವು ಪೊಲೀಸರು ಏನು ಮಾಡಿಕೊಳ್ಳಲು ಆಗುವದಿಲ್ಲಾ ಅಂತಾ ಅವಾಚ್ಯವಾಗಿ ಬೈಯಹತ್ತಿದಳು ಆಗ ನಮ್ಮ ಜೊತೆಗಿದ್ದ ಶೋಬಾ ಮಪಿಸಿ-35 ಇವರು ಹಾಗೆಲ್ಲಾ ಬೈಯಬಾರದು ಅಂತಾ ಅಂದಾಗ ಸರೋಜಾ ಹಾಗೂ ಪ್ರತಿಮಾ ಇಬ್ಬರೂ ಕೂಡಿ ಏ ರಂಡಿ  ಇಲ್ಯಾಕ್ ಬಂದಿದಿ ಅಂತಾ ಅವಾಚ್ಯವಾಗಿ ಬೈಯುತ್ತಾ ತಮ್ಮ ಕೈಯಲ್ಲಿದ್ದ ಬಡಿಗೆಯಿಂದ ಮನಬಂದಂತೆ ಹೊಡೆಯಹತ್ತಿದರು ಆಗ ನಮ್ಮ ಪಿ.ಎಸ್.ಐ ಸಾಹೇಬರು ಬಿಡಿಸಿಕೊಳ್ಳಲು ಹೋದರೆ ಪ್ರದೀಪ @ 7 ಸ್ಟಾರ ಪ್ರದೀಪ ಇತನು ನಮ್ಮ ಪಿ.ಎಸ್.ಐ ಸಾಹೇಬರ ಎದೆಯ ಮೇಲಿನ ಅಂಗಿ ಹಿಡಿದು ಮಗನೆ ನಾನು ದೊಡ್ಡ ಕೇಬಲ್ ಚಾನಲ ನಡೆಸುತ್ತಿದ್ದು ನನಗೆ ನೀವು ಏನು ಮಾಡಿಕೊಳ್ಳಲು ಸಾದ್ಯವಿಲ್ಲಾ ಮಕ್ಕಳೆ ಅಂತಾ ಬೈದು ಮೈಮೇಲಿನ ಬಟ್ಟೆ ಹಿಡಿದು ಮನಬಂದಂತೆ ಜಗ್ಗಾಡಿದನು. ಆಗ ಉಮೇಶ ಪಿಸಿ-834 ಇತನು ಬಿಡಿಸಿಕೊಳ್ಳಲು ಹೋದರೆ ಆತನಿಗೆ ಅಮರ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹೊಡೆದನು. ಸಂತೋಷ ಇತನು ಕೈಯಿಂದ ಹೊಡೆಬಡೆ ಮಾಡಹತ್ತಿದನು. ರಾಘು, ಸಚಿನ, ಲೋಹಿತ ಹಾಗೂ ಓಣಿಯಲ್ಲಿಯ ಸುಮಾರು 80 ರಿಂದ 100 ಜನ ಗುಂಪುಕಟ್ಟಿಕೊಂಡು ಬಂದು ನಮ್ಮ ಮೇಲೆ ಕಲ್ಲು ತೂರಾಟ ಮಾಡ ಹತ್ತಿದರು ಪ್ರದೀಪ @ 7 ಸ್ಟಾರ ಪ್ರದೀಪ ಇತನು ಅಲ್ಲಿಯೇ ನಿಲುಗಡೆ ಮಾಡಿದ ಪ್ರಮೋದ ಸಿಪಿಸಿ-249 ಇತನು ತಂದಿದ್ದ ಠಾಣೆಯ ಮೋಟಾರ ಸೈಕಲಗೆ ಬಡಿಗೆಯಿಂದ ಹೊಡೆದು ಹಾನಿಗೊಳಿಸಿದನು. ಆಗ ಪ್ರದೀಪ @ 7 ಸ್ಟಾರ ಪ್ರದೀಪ ಇತನ ತಂಗಿಯಾದ ಪ್ರತಿಮಾ ಇವಳು ತನ್ನ ಮೈ, ಕೈ, ತಲೆ ನೆಲಕ್ಕೆ ಗುದ್ದುತ್ತಾ ಗಾಯ ಮಾಡಿಕೊಂಡು ನಾವು ನಿಮ್ಮ ಮೇಲೆ ಕೇಸಮಾಡಿ ನಿಮಗೆ ಜೈಲಿಗೆ ಕಳುಹಿಸುತ್ತೇವೆ ಹಾಟ್ಯಾನ ಮಕ್ಕಳೆ ಪೊಲೀಸರೇ ಅಂತಾ ಬೈಯುತ್ತಿದ್ದಳು ಆಗ ನಾವು ಹೆಚ್ಚಿನ ಸಂಖ್ಯೇಯ ಪೊಲೀಸರನ್ನು ಸ್ಥಳಕ್ಕೆ ಕರೆಸಿದಾಗ ಸದರಿಯವರೇಲ್ಲರು ಓಡಿ ಹೋದರು. ಕಾರಣ ನಾವು ರೌಡಿಶೀಟರದಾರನಾದ ಪ್ರದೀಪ @ 7 ಸ್ಟಾರ ಪ್ರದೀಪ ಇತನ ಚಟುವಟಿಕೆ ಬಗ್ಗೆ ತಿಳಿದುಕೊಂಡು ಮುಂಜಾಗೃತ ಕ್ರಮಕ್ಕಾಗಿ ರೌಡಿ ಪರೇಡಗೆ ಹಾಜರಾಗುವಂತೆ ತಿಳಿಸಿದಾಗ ಪ್ರದೀಪ @ 7 ಸ್ಟಾರ ಪ್ರದೀಪ ಇತನು ಹಾಗೂ ಇತನ ತಾಯಿ ಸರೋಜಾ ಇತನ ತಂಗಿ ಪ್ರತಿಮಾ ಹಾಗೂ ಪ್ರತಿಮಾಳ ಗಂಡ ಸ್ವರಾಜ ಮತ್ತು ಅಮರ, ಸಂತೋಷ, ರಾಘು, ಸಚಿನ, ಲೋಹಿತ ಹಾಗೂ 80 ರಿಂದ 100 ಜನರು ಗುಂಪುಕಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ನಮ್ಮೆಲ್ಲರ ಮೇಲೆ ಬಡಿಗೆ, ಕಲ್ಲು ಕೈಯಿಂದ ಹೊಡೆಬಡೆಮಾಡಿ ಭಾರಿ ರಕ್ತಗಾಯ, ಗುಪ್ತಗಾಯ ಪಡಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಠಾಣೆಯ ಮೋಟಾರ ಸೈಕಲ ಜಖಂ ಗೊಳಿಸಿದ್ದು ಅಲ್ಲದೇ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘೌಏಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಬಸವರಾಜ ತಂದೆ ಶರಣಪ್ಪ ಅವಟೆ ಸಾ|| ಅಫಜಲಪೂರ ರವರ  ಅಫಜಲಪೂರ  ಪಟ್ಟಣದ ವ್ಯಾಪ್ತಿಯಲ್ಲಿ ಗುಲಬರ್ಗಾ ರಸ್ತೆಯ ಕಡೆ ಶಿವಶರಣಪ್ಪ ಸರಸಂಬಾ ರವರ ಹೊಲದಿಂದ ಹೋಗುವ ಹಳ್ಯಾಳ ಉಪ ರಸ್ತೆಗೆ ಹೊಂದಿಕೊಂಡ 7 ಎಕರೆ ತೋಟವನ್ನು ಹೊಂದಿದ್ದು ಅದನ್ನು ನಾವೆ ನಿರ್ವಹಣೆ ಮಾಡುತಿದ್ದೇವೆ.  ಸೈಕಲ್ ಮೇಲೆ ನಿನ್ನೆ ಮದ್ಯಾಹ್ನ 3 ಪಿಎಮ್ ಸುಮಾರಿಗೆ ತೋಟದ ಹೊಲದಿಂದ ಮನಿಗೆ ಬರುವಾಗ ಅಫಜಲಪೂರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎದುರುಗಡೆಯಿಂದ ಬಂದ ಭಾರತಬ್ರೇಂಜ್ ಸಿಮೆಂಟ್ ಟ್ಯಾಂಕರ ಲಾರಿ ನಂ ಎಮ್ ಹೆಚ್ 12 ಕ್ಯೂ ಜಿ-0250 ಇದ್ದ ವಾಹನವು ಚಾಲಕನ ನಿರ್ಲಕ್ಷ ಹಾಗು ಬೆಜವ್ದಾರಿಯಿಂದ ರಭಸವಾಗಿ ಬಂದು ರೋಡಿನ ಪಕ್ಕದಿಂದ ಹೊಗುತಿದ್ದ ನನಗೆ ಡಿಕ್ಕಿ ಹೊಡೆದ ಫರಿಣಾಮ ಸೈಕಲದಿಂದ ಕೆಳಗೆ ಬಿದ್ದೇನು. ಅವಾಗ ಅಲ್ಲಿಯೇ ಇದ್ದ  ಧಾನು ತಂದೆ ಮಹಾಂತಪ್ಪ ನೂಲಾ, ಹಾಗು ಶಶಿ ತಂದೆ ಶಿವಪುತ್ರ ಡಾಂಗೆ ಇವರು ತಕ್ಷಣ ಸುತ್ತಮುತ್ತಲಿನ ಜನರನ್ನು ಸೇರಿಸಿ ಆ ಡಿಕ್ಕಿ ಹೊಡೆದ ಲಾರಿಯನ್ನು ನಿಲ್ಲಿಸಿ ನನಗೆ ಡಾ||ಶಂಕರ ಮನಮಿ ರವರ ಹತ್ತಿರ ಪ್ರಥಮ ಚಿಕಿತ್ಸೆಯನ್ನು ನೀಡಿ ಹೇಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಪಿಜಿ ಶಾಹ ಅರ್ಥೋಪಿಡಿಕ ಆಸ್ಪತ್ರೆಯಲ್ಲಿ ಖಾಸಗಿ ವಾಹನದಲ್ಲಿ  ಸಂಗು ತಂದೆ ಶರಣಪ್ಪ ಶಿರವಾಳ ನನ್ನ ಹೆಂಡತಿಯಾದ ಶ್ರೀಮತಿ ಶಾಂತಾಬಾಯಿ ಕುಡಿಕೊಂಡು ಸದರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸುತಿದ್ದಾರೆ ಲಾರಿ ಡಿಕ್ಕಿ ಹೊಡೆದು ಬಿದ್ದ ಪರಿಣಾಮ ನನಗೆ ಬಲಗೈ, ಮೊಣಕೈ, ಮೆಲ್ಬಾಗದ ಮುಳೆ ಮುರಿದಿದ್ದು ಹಾಗು ಮುಡ್ಡಿ ಹಾಗು ರಟ್ಟೆಯ ಕಿಲು ಮುರಿದಿದ್ದು ಮೊಣಕೈ ಕೆಳಭಾಗದ ಮುಳೆ ಮುರಿದು ಭಾರಿ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 November 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 04.11.2018 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ಮೃತ ಪೂರ್ವಿಕಾ ಇವಳು ಕೈಲಾಸ ನಗರದಲ್ಲಿರುವ ಪುಷ್ಕರ್ ಪ್ಲಾಜಾ ಅಪಾರ್ಟಮೆಂಟ್ ಪಕ್ಕದ ರೋಡಿನ ಮೇಲೆ ಆಟವಾಡುತ್ತೀರುವಾಗ ಆರೋಪಿತನು ಖಾಲಿ ನಿವೇಶನದಲ್ಲಿ ನಿಲ್ಲಿಸಿದ ಬುಲೆರೋ ಜೀಪ ನಂ ಕೆಎ-32/ಸಿ-1724 ನೇದ್ದರ ಚಾಲಕನಾದ ರುದ್ರಯ್ಯಾ ಮಠಪತಿ ಇವನು ಚಾಲು ಮಾಡಿ ನಿಷ್ಕಾಳಜಿತನದಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರಿವರ್ಸ ಚಲಾಯಿಸಿ ಆಟ ಆಡುತ್ತೀರುವ ಪೂರ್ವಿಕಾ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿದ್ದರಿಂದ ಪೂರ್ವಿಕಾ ಇವಳಿಗೆ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ಮದ್ಯಾಹ್ನ 12-00 ಗಂಟೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ನೋಡಿ ಆಸ್ಪತ್ರೆಗೆ ಬರುವದಕ್ಕಿಂತ ಮುಂಚಿತವಾಗಿ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದ್ದು ಪೂವರ್ಿಕಾ ಇವಳಿಗೆ ಅಪಘಾತದಲ್ಲಿ ಭಾರಿಗಾಯವಾಗಿದ್ದರಿಂದ ಬೆಳಿಗ್ಗೆ 11-15 ಗಂಟೆಯಿಂದ ಮದ್ಯಾಹ್ನ 12-00 ಗಂಟೆಯ ಮದ್ಯಾಹ್ಷನದಲ್ಲಿ ಆಸ್ಪತ್ರೆಗೆ ಹೋಗುವಾಗ ದಾರಿ ಮದ್ಯ ಮೃತಪಟ್ಟಿದ್ದು ಇರುತ್ತದೆ .ಅಂತಾ ಶ್ರೀ ರಾಜೇಂದ್ರ ತಂದೆ ಪಾರಪ್ಪಾ ಬಿರಾದಾರ  ಸಾ: ಪುಷ್ಕರ್ ಪ್ಲಾಜಾ  ಅಪಾರ್ಟಮೆಂಟ್ ಶೆಟ್ಟಿ ಟಾಕೀಜ್ ಹಿಂದುಗಡೆ ಕೈಲಾಸ ಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ನರೋಣಾ ಠಾಣೆ : ದಿನಾಂಕ:04/11/2018 ರಂದು ಬೆಳಮಗಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಒಬ್ಬ ವ್ಯಕ್ತಿಯು ಅಕ್ರಮವಾಗಿ ಸರಾಯಿ ತುಂಬಿದ ಪೌಚಗಳು ತನ್ನ ಅಧೀನದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ.ರುಕ್ಮೊದ್ದನ  ಎ.ಎಸ್‌.ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಬೆಳಮಗಿ ಗ್ರಾಮದ ಹನುಮಾನ ದೇವಸ್ಥಾನದಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಹನುಮಾನ ದೇವಸ್ಥಾನದ ಮುಂದಿನ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ತನ್ನ ಮುಂದೆ ಒಂದು ರಟ್ಟಿನ ಡಬ್ಬಾದಲ್ಲಿ ಮದ್ಯ ತುಂಬಿ ಪ್ಯಾಕ್ ಮಾಡಿದ ಪೌಚಗಳನ್ನು ಸಂಗ್ರಹಿಸಿ ಇಟ್ಟಿಕೊಂಡು ಜನರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಲಾಗಿ ಸಾರಾಯಿ ಖರೀದಿಸಲು ಬಂದ ಜನರು ಓಡಿಹೋಗಿದ್ದು ಸರಾಯಿ ಮಾರಾಟ ಮಾಡುತ್ತಿದ್ದ   ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ರಮೇಶ ತಂದೆ ಶರಣಪ್ಪಾ ತೋಳನೂರ @ ಶಟಗಾರ, ಸಾ:ಬೆಳಮಗಿ ಗ್ರಾಮ ಅಂತಾ ಹೇಳಿದನು, ಸದರಿಯವನಿಗೆ ಮದ್ಯ ಮಾರಾಟ ಮಾಡಲು ಪರವಾನಿಗೆ ಅಥವಾ ದಾಖಲಾತಿಗಳ ಬಗ್ಗೆ ವಿಚಾರಿಸಲು ಅನಧಿಕೃತವಾಗಿ ತನ್ನ  ಅಧೀನದಲ್ಲಿ ಇಟ್ಟುಕೊಂಡು ಮಾರಾಟ ಮತ್ತು ಸಾಗಾಣೆ ಮಾಡುತ್ತಿರುವ ಬಗ್ಗೆ ತಿಳಿಸಿದನು. ಸದರಿಯವನ ಮುಂದೆ ಒಂದು ರಟ್ಟಿನ ಡಬ್ಬಾದಲ್ಲಿ ಸಂಗ್ರಹಿಸಿ ಇಟ್ಟಿರುವ ಮದ್ಯದ ಡಬ್ಬಿಗಳನ್ನು ನಾವುಗಳು ಪರಿಶೀಲಿಸಿ ನೋಡಲಾಗಿ 180 ಎಂ.ಎಲ್ ಮದ್ಯ ತುಂಬಿದ Original choice Deluxe Whisky ಎಂಬ 32 ಮದ್ಯದ ಪೌಚಗಳು ಅಂದಾಜು ಕಿಮತ್ತು 1940/- ರೂಪಾಯಿ ಹಾಗೂ ಸದರಿಯವನ ಅಂಗ ಶೋದನೆ ಮಾಡಲಾಗಿ ಈತನ ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ 150/- ರೂ. ದೊರೆತವು ಅವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

04 November 2018

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಂಗ್ರಹಿಸದ್ದರ ಮೇಲೆ ದಾಳಿ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 28 ನೇದ್ದರ ಪಟ್ಟೇದಾರರಾದ 1) ಬಸವರಾಜ ತಂದೆ ಶರಣಪ್ಪ ಮೇಲ್ಕೇರಿ 2)ಬಸವರಾಜ ತಂದೆ ತೋಪಣ್ಣ ತಳವಾರ 3)ದತ್ತಪ್ಪ ತಂದೆ ಲಚ್ಚಪ್ಪ 4) ನಿಂಗಪ್ಪ ತಂದೆ ಲಚ್ಚಪ್ಪ 5)ಲಕ್ಷ್ಮಿಬಾಯಿ ಗಂಡ ಮಹಾದೇವಪ್ಪ ರವರು 225 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 03/11/2018 ರಂದು  ಬೆಳಿಗ್ಗೆ 11.45 ಗಂಟೆಯಿಂದ 12.45 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 11,25,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 28 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು 10.00 ಎಎಮ್ ಗಂಟೆಗೆ ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 33 ನೇದ್ದರ ಪಟ್ಟೇದಾರರಾದ 1)ಸುರೇಶ ತಂದೆ ಮಲ್ಕಪ್ಪ ತಳವಾರ 2)ಭಾಗವ್ವ ಗಂಡ ಶರಣಪ್ಪ ತಳವಾರ ರವರು 140 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 7,00,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 33 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು 10.00 ಎಎಮ್ ಗಂಟೆಗೆ ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 38 ನೇದ್ದರ ಪಟ್ಟೇದಾರರಾದ 1) ಭೀಮಶ್ಯಾ ತಂದೆ ಲಚ್ಚಪ್ಪ ಸರ್ವೇ ನಂ 39 ನೇದ್ದರ ಪಟ್ಟೇದಾರರಾದ 2) ಪ್ರಧಾನಿ ತಂದೆ ಶಂಕರ ರವರು 70 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 3,50,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 38,39 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ದತ್ತು ಧನಸಿಂಗ್ ಪವಾರ ಸಾ|| ಗೋಬ್ಬುರವಾಡಿ ರವರದು 1998ರಲ್ಲಿ ಬಳುರ್ಗಿ ತಾಂಡಾದ ಬೇಬಿಬಾಯಿ ಎಂಬುವವಳೊಂದಿಗೆ ಮದುವೆಯಾಗಿದ್ದು ನನಗೆ 1) ಪೂರ್ಣಚಂದ್ರ 2) ಬಸವರಾಜ 3) ಮಂಜುನಾಥ  ಅಂತಾ 3 ಮಕ್ಕಳಿರುತ್ತಾರೆ. 13 ವರ್ಷಗಳಹಿಂದೆ ನನಗೂ ಮತ್ತು ನನ್ನ ಹೆಂಡತಿಗೂ ಸಂಸಾರದ ವಿಷಯದಲ್ಲಿ ಜಗಳವಾಗಿ ಅಂದಿನಿಂದ ನನ್ನ ಹೆಂಡತಿ ಮೂರು ಜನ ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆಯಾದ ಬಳುರ್ಗಿ ತಾಂಡಾದಲ್ಲಿ ಮಕ್ಕಳೊಂದಿಗೆ ವಾಸವಿರುತ್ತಾಳೆ 2004ರಲ್ಲಿ ನನ್ನ ಹೆಂಡತಿ ನನ್ನ ಮೇಲೆ ಕಿರುಕುಳ ಕೋಡುತ್ತಿದ್ದಾನೆ ಅಂತಾ ಕೇಸ ಮಾಡಿದ್ದು ಸದರಿ ಕೇಸ ನ್ಯಾಯಾಲಯದಲ್ಲಿ ಸುಳ್ಳು ಅಂತಾ ಆದೇಶವಾಗಿರುತ್ತದೆ. ಪುನಃ 2012 ರಲ್ಲಿ ನನ್ನ ಹೆಂಡತಿ ನನ್ನ ಮೇಲೆ ನಾನು ಎರಡನೇಯ ಮದುವೇಯಾಗಿದ್ದೇನೆ ಅಂತಾ ನ್ಯಾಯಾಲಯದಲ್ಲಿ ಕೇಸ ಮಾಡಿದ್ದು ಸದರಿ ಕೇಸ ನ್ಯಾಯಾಲಯದ ವಿಚಾರಣೆಯಲ್ಲಿದ್ದು ದಿನಾಂಕ 27-10-2018 ರಂದು ಅಂತಿ ಆಧೇಶದಲ್ಲಿರುತ್ತದೆ. ದಿನಾಂಕ 27-10-2018 ರಂದು ನಾನು ನನ್ನ ಹೆಂಡತಿ ಮಾಡಿದ ಕೇಸಿನ ವಿಚಾರವಾಗಿ ಅಫಜಲಪೂರದ ಜೆಎಮ್ಎಫ್ಸಿ ನ್ಯಾಯಾಲಯಕ್ಕೆ ಬಂದು ನ್ಯಾಯಾಲಯದಲ್ಲಿ ಹಾಜರಿ ಮುಗಿಸಿಕೊಂಡು ನ್ಯಾಯಾಲಯದಿಂದ 2.15 ಪಿಎಮ್ ಸುಮಾರಿಗೆ ಹೊರಗೆ ನ್ಯಾಯಾಲಯದ ಮುಂದೆ ನಾನು ಮತ್ತು 1) ಶಂಖರ ತಂದೆ ರಾಮು ರಾಠೋಡ 2) ರಾಘವೇಂದ್ರ ತಂದೆ ಗುರಣ್ಣಾ ರಾಠೋಡ ಮೂರು ಜನರು ಹೋಗುತ್ತಿದ್ದಾಗ ನನ್ನ ಹೆಂಡತಿಯಾದ 1) ಬೇಬಿಬಾಯಿ ನನ್ನ ಹೆಂಡತಿಯ ಅಣ್ಣನಾದ 2) ಮನೋಹರ ತಂದೆ ರತನಸಿಂಗ ರಾಠೋಡ ಹಾಗೂ ನನ್ನ ಮಕ್ಕಳಾದ 3) ಬಸವರಾಜ 4) ಪೂರ್ಣಚಂದ್ರ ಮತ್ತು ನನ್ನ ಹೆಂಡತಿಯ ಅತ್ತೆಯ ಮಗನಾದ 5) ಲಾಲು ತಂದೆ ಹೀರು ರಾಠೋಡ ಸಾ|| ಎಲ್ಲರೂ ಬಳೂರ್ಗಿ ತಾಂಡಾ ಇವರೆಲ್ಲರೂ ನನ್ನ ಹತ್ತಿರ ಬಂಧು ನನಗೆ ಅವಾಚ್ಯ ಶಬ್ದಗಳಿಂದ ಬೈದು ನೀನು ನ್ಯಾಯಾಲಯದಲ್ಲಿ ಕೇಸ ಗೆಲ್ಲಬಹುದು ಆದರೆ ನಾವು ನಿನಗೆ  ಸುಮ್ಮನೆ ಬಿಡುವುದಿಲ್ಲಾ ಅಂತಾ ಹೇಳಿ ಎಲ್ಲರೂ ಕೂಡಿ ಜಗಳ ತೆಗೆದು ನನ್ನ ಹೆಂಡತಿ ಚಪ್ಪಲಿಯಿಂದ ಹೊಡೆದಿರುತ್ತಾಳೆ, ಮತ್ತು ಮಕ್ಕಳು ನನ್ನನ್ನು ಕೈಯಿಂದ ಹೊಡೆದು ನೆಲ್ಲಕೆ ಕೇಡುವಿ ಕಾಲಿನಿಂದ ಒದ್ದಿರುತ್ತಾರೆ, ಮನೋಹರ ರಾಠೋಡ ಇತನು ಅಲ್ಲೆ ಕಂಪೌಂಡ ಹತ್ತಿರ ಬಿದ್ದಿದ್ದ ರಾಡನ್ನು ತೆಗೆದುಕೊಂಡು ಬಂದು ರಾಡಿನಿಂದ ನನ್ನ ಸೊಂಟದ ಮೇಲೆ ಹೊಡೆದಿರುತ್ತಾನೆ, ಸದರಿಯವರು ನನಗೆ ಹೊಡೆಯುತ್ತಿದ್ದಾಗ ನನ್ನ ಜೋತೆಗೆಯಿದ್ದ ಶಂಕರ ರಾಠೋಡ ರಾಘವೇಂದ್ರ ರಾಠೋಡ ಇನ್ನೂ ಕೆಲವು ಜನರು ಕೂಡಿ ಹೊಡೆಯುವುದನ್ನು ಬಿಡಿಸಿರುತ್ತಾರೆ, ಆಗ ನನ್ನ ಹೆಂಡತಿ ಮತ್ತು ಮಕ್ಕಳು ಹಾಗೂ ಮನೋಹರ ರಾಠೊಡ ಲಾಲು ರಾಠೋಡ ಎಲ್ಲರೂ ನನಗೆ ಮುಂದೆ ನೀನು ಹೇಗೆ ನೌಕರಿ ಮಾಡುತ್ತಿ ನೋಡುತ್ತೇವೆ ನಿನಗೆ ಜೀವಸಹಿತ ಬಿಡುವುದಿಲ್ಲಾ ಎಂದು ಜೀವ ಭಯಹಾಕಿ ರಾಡನಿಂದ ಮತ್ತು ನನ್ನ ಹೆಂಡತಿ ಚಪ್ಪಲಿಯಿಂದ ಹೊಡೆದಾಗ ಚಪ್ಪಲಿ ಹರಿದಿದ್ದರಿಂದ ಅಲ್ಲೆ ಬಿಸಾಕಿ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಶಿವಕುಮಾರ ತಂದೆ ಭೀಮರಾಯ ವಸ್ತಾರಿ ಸಾಃ ಮಾರಡಗಿ (ಎಸ್.ಎ) ಗ್ರಾಮ ತಾಃ ಜೇವರಗಿ ರವರ ಊರವನಾದ ದೇವಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ, ಈತನು ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಸಿದ್ದಮ್ಮ ಇವಳಿಗೆ ಚುಡಾಯಿಸುವದು ಮತ್ತು ಅವಳು ಹೋದಲೆಲ್ಲ ಹಿಂದೆ ಹಿಂದೆ ಹೋಗುವದು ಮಾಡಿ ನಮ್ಮ ಮಗಳಿಗೆ ಸಲುಗೆಯಿಂದ ಮಾತನಾಡಿ ನಾನು ನಿನಗೆ ಪ್ರೀತಿ ಮಾಡುತ್ತಿದ್ದೆನೆ ಮತ್ತು ನಿನಗೆ ಮದುವೆಯಾಗುತ್ತೆನೆ ಎಂದು ಹೇಳಿ ಅವಳಿಗೆ ಸುಮಾರು 2 ವರ್ಷದಿಂದ ತೊಂದರೆ ಕೊಟ್ಟಿರುತ್ತಾನೆ. ಈ ವಿಷಯ ನಮ್ಮ ಮಗಳು ನಮಗೆ ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ದೇವಪ್ಪನ ಮನೆಗೆ ಹೋಗಿ ದೇವಪ್ಪನಿಗೆ ಮತ್ತು ಅವನ ಅಣ್ಣಂದಿರರಿಗೆ ಹಾಗೂ ತಾಯಿಯವರಿಗೆ ನಮ್ಮ ಮಗಳು ಚಿಕ್ಕವಳಿರುತ್ತಾಳೆ. ಹೀಗೆ ಮಾಡುವುದು ಸರಿಯಲ್ಲಾ ಎಂದು ಬುದ್ದಿವಾದ ಹೇಳಿದ್ದು ದಿನಾಂಕ 30.10.2018 ರಂದು ರಾತ್ರಿ ನಾನು ಮತ್ತು ನನ್ನ ನನ್ನ ಹೆಂಡತಿ ಹಾಗೂ ಮಕ್ಕಳು ಮನೆಯಲ್ಲಿ ಊಟ ಮಾಡಿ ಮನೆಯಲ್ಲಿ ಮಗಿಕೊಂಡಿರುತ್ತೆವೆ. ರಾತ್ರಿ 11-45 ಗಂಟೆಯ ಸುಮಾರಿಗೆ ಮನೆಯಲ್ಲಿ ಸಪ್ಪಳ ಆಗಿದ್ದರಿಂದ ಎದ್ದು ನೋಡಲಾಗಿ ನನ್ನ ಮಗಳು ಸಿದ್ದಮ್ಮ ಇವಳು ಏಕಿ ಮಾಡಲು ಎದ್ದಿರುತ್ತೆನೆಂದು ಹೇಳಿ ಮನೆಯಿಂದ ಹೊರಗೆ ನಮ್ಮ ಮನೆಯ ದೊಡ್ಡಿಯ ಕಡೆಗೆ ಹೋದಳು. ಅವಳು ಬಹಳ ಸಮಯವಾದರು ಮರಳಿ ಮನೆಯೊಳಗೆ ಬರಲಿಲ್ಲ ಅದಕ್ಕೆ ನಾನು ಮನೆಯಿಂದ ಹೊರಗೆ ಬಂದು ದೊಡ್ಡಿಯ ಕಡೆಗೆ ಹೋಗಿ ನೋಡಲು ನಮ್ಮ ಮಗಳು ಅಲ್ಲಿ ಕಾಣಲಿಲ್ಲ. ನಾನು ನನ್ನ ಹೆಂಡತಿಗೆ ವಿಷಯ ತಿಳಿಸಿ ನಾವಿಬ್ಬರು ಅಕ್ಕಪ್ಪಕ್ಕದ ಮನೆಯವರಿಗೆ ಕೇಳಿ ಊರಲ್ಲಿ ಹುಡುಕಾಡಿದರು ನಮ್ಮ ಮಗಳು ಸಿಕ್ಕಿರುವುದಿಲ್ಲ. ದಿನಾಂಕ;. 31.10.2018 ರಂದು ಮುಂಜಾನೆ 6.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ನಮ್ಮ ಮಗಳಿಗೆ ಹುಡುಕುತ್ತಾ ನಮ್ಮೂರ ಮಸೂದಿಯ ಹತ್ತಿರ ಬಂದಾಗ ಅಲ್ಲಿ ನಮ್ಮ ಸಂಭಂಧಿಕರಾದ ಬಸವರಾಜ ತಂದೆ ಚಂದಪ್ಪ ಹೇರೂರ ಈತನು ಸಿಕ್ಕಾಗ ಅವನಿಗೆ ನಮ್ಮ ಮಗಳು ಸಿದ್ದಮ್ಮಳು ರಾತ್ರಿ ಮನೆಯಿಂದ ಏಕಿ ಮಾಡಲು ಹೊರಗೆ ಬಂದು ಮರಳಿ ಬಂದಿರುವುದಿಲ್ಲಾ ಎಲ್ಲಿಗೆ ಹೋಗಿರುತ್ತಾಳೆಂಬುದು ಗೊತ್ತಾಗಿರುವುದಿಲ್ಲಾ ಎಲ್ಲಿಯಾದರು ನೋಡಿದ್ದಿಯೇನು ಎಂದು ಕೇಳಿದಾಗ ಅವನು ಹೇಳಿದ್ದೆನೆಂದರೆ ದಿನಾಂಕ; 31/10/2018 ರಂದು ರಾತ್ರಿ 12-05 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಹೊರಗಡೆ ಎತ್ತುಗಳಿಗೆ ಮೇವು ಹಾಕಲು ಬಂದಿದ್ದಾಗ “ನಮ್ಮೂರ ದೇವಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ ಇತನು ತನ್ನ ಟಂ-ಟಂ ದಲ್ಲಿ ಸಿದ್ದಮ್ಮಳಿಗೆ ಕೂಡಿಸಿಕೊಂಡು ಮುದಬಾಳ(ಬಿ) ಕ್ರಾಸ್ ಕಡೆಗೆ ಹೋಗುವುದು ನಾನು ನೊಡಿರುತ್ತೇನೆ. ನಾನು ಕೈ ಮಾಡಿದರು ಟಂ-ಟಂ ನಿಲ್ಲಿಸದೆ ಹಾಗೇ ನಡೆಯಿಸಿಕೊಂಡು ಹೋಗಿರುತ್ತಾನೆ. ಕತ್ತಲಲ್ಲಿ ಟಂಟಂ ವಾಹನದ ನಂಬರ ಕಂಡಿರುವುದಿಲ್ಲ. ಎಂದು ತಿಳಿಸಿದನು. ನಂತರ ದಿನಾಂಕ; 31/10/2018 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ದೇವಪ್ಪ ಈತನ ಮನೆಗೆ ಹೋಗಿ ವಿಚಾರಿಸಲು ದೇವಪ್ಪ ಇತನು ಮನೆಯಲ್ಲಿ ಇದ್ದಿರಲಿಲ್ಲ. ನಮ್ಮ ಮಗಳ ಬಗ್ಗೆ ಅವರಿಗೆ ಕೇಳಲಾಗಿ, ದೇವಪ್ಪನ ಅಣ್ಣಂದಿರಾದ 1) ಸಾಯಿಬಣ್ಣಾ ತಂದೆ ಭೀಮರಾಯ ಸೊಮನಾಥಹಳ್ಳಿ, 2) ಸಿದ್ದಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 3) ಮಲ್ಲಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 4) ಅಂಬಮ್ಮ ಗಂಡ ಭೀಮರಾಯ ಸೊಮನಾಥಹಳ್ಳಿ 5) ಲಕ್ಷ್ಮೀಬಾಯಿ ಗಂಡ ಭೀಮರಾಯ ಸೊಮನಾಥಹಳ್ಳಿ ಇವರೆಲ್ಲರೂ ಕೂಡಿ ನನಗೆ “ಏ ಬೊಸಡಿ ಮಗನೆ ದೇವಪ್ಪ ನಿನ್ನ ಮಗಳಿಗೆ ತೆಗೆದುಕೊಂಡು ಹೋಗಿದ್ದರೆ ನಾವೇನು ಮಾಡಬೇಕು?. ನಾವೇ ಕಳಿಸಿದ್ದೆವೆ. ರಂಡಿ ಮಕ್ಕಳೆ ನೀವು ನಮ್ಮದು ಏನು ಕಿತ್ತಿಕೊಳಲಿಕ್ಕೆ ಆಗುವುದಿಲ್ಲ. ನಮ್ಮ ಹಿಂದೆ ಮಹಾದೇವಯ್ಯ ತಂದೆ ಮಹಾಂತಯ್ಯ ಸ್ವಾಮಿ ಇದ್ದಾನೆ ನೀವು ನಮ್ಮ ತಂಟೆಗೆ ಬಂದರೆ ಉಳಿಯುವದಿಲ್ಲ ಎಂದು ಜೀವದ ಭೆದರಿಕೆ ಹಾಕಿರುತ್ತಾರೆ, ನಂತರ ನಮ್ಮೂರ ಭೀಮರಾಯ ತಂದೆ ಹುಲೇಪ್ಪ ಹೇರೂರ, ಭೀಮರಾಯ ತಂದೆ ದೇವಪ್ಪ ವಸ್ತಾರಿ ಇವರು ಬಂದು ತಿಳಿ ಹೇಳಿ ಅಲ್ಲಿಂದ ಕಳಿಸಿರುತ್ತಾರೆ. \ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಸಿದ್ದಮ್ಮ ಇವಳಿಗೆ ಚುಡಾಯಿಸಿ, ಪ್ರೀತಿ ಮಾಡುತ್ತೆನೆ ಮತ್ತು ಮದುವೆ ಮಾಡಿಕೊಳುತ್ತೆನೆ ಎಂದು ಅವಳಿಗೆ ನಂಬಿಸಿ ತಲೆ ಕೆಡಿಸಿ ಪುಸಲಾಯಿಸಿ ಅಪಹರಿಸಿಕೊಂಡು ಟಂ-ಟಂದ ಲ್ಲಿ ಕರೆದುಕೊಂಡು ಹೋಗಿರುತ್ತಾನೆ. ಅದಕ್ಕೆ 1) ಸಾಯಿಬಣ್ಣಾ ತಂದೆ ಭೀಮರಾಯ ಸೊಮನಾಥಹಳ್ಳಿ, 2) ಸಿದ್ದಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 3) ಮಲ್ಲಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 4) ಅಂಬಮ್ಮ ಗಂಡ ಭೀಮರಾಯ ಸೊಮನಾಥಹಳ್ಳಿ 5) ಲಕ್ಷ್ಮೀಬಾಯಿ ಗಂಡ ಭೀಮರಾಯ ಸೊಮನಾಥಹಳ್ಳಿ ಮತ್ತು 6) ಮಹಾದೇವಯ್ಯ ತಂದೆ ಮಹಾಂತಯ್ಯ ಸ್ವಾಮಿ ಇವರೆಲ್ಲರು ಕುಮ್ಮಕ್ಕು ನೀಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.