ಅಪಘಾತ
ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 04.11.2018 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ಮೃತ ಪೂರ್ವಿಕಾ ಇವಳು
ಕೈಲಾಸ ನಗರದಲ್ಲಿರುವ ಪುಷ್ಕರ್ ಪ್ಲಾಜಾ ಅಪಾರ್ಟಮೆಂಟ್ ಪಕ್ಕದ ರೋಡಿನ ಮೇಲೆ ಆಟವಾಡುತ್ತೀರುವಾಗ ಆರೋಪಿತನು
ಖಾಲಿ ನಿವೇಶನದಲ್ಲಿ ನಿಲ್ಲಿಸಿದ ಬುಲೆರೋ ಜೀಪ ನಂ ಕೆಎ-32/ಸಿ-1724 ನೇದ್ದರ ಚಾಲಕನಾದ ರುದ್ರಯ್ಯಾ ಮಠಪತಿ ಇವನು ಚಾಲು ಮಾಡಿ ನಿಷ್ಕಾಳಜಿತನದಿಂದ ಅತಿವೇಗವಾಗಿ
ಮತ್ತು ಅಲಕ್ಷತನದಿಂದ ರಿವರ್ಸ ಚಲಾಯಿಸಿ ಆಟ ಆಡುತ್ತೀರುವ ಪೂರ್ವಿಕಾ ಇವಳಿಗೆ ಡಿಕ್ಕಿಪಡಿಸಿ ಅಪಘಾತ
ಮಾಡಿ ಭಾರಿಗಾಯಗೊಳಿಸಿದ್ದರಿಂದ ಪೂರ್ವಿಕಾ ಇವಳಿಗೆ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ಮದ್ಯಾಹ್ನ
12-00 ಗಂಟೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ನೋಡಿ ಆಸ್ಪತ್ರೆಗೆ
ಬರುವದಕ್ಕಿಂತ ಮುಂಚಿತವಾಗಿ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದ್ದು ಪೂವರ್ಿಕಾ ಇವಳಿಗೆ ಅಪಘಾತದಲ್ಲಿ
ಭಾರಿಗಾಯವಾಗಿದ್ದರಿಂದ ಬೆಳಿಗ್ಗೆ 11-15 ಗಂಟೆಯಿಂದ ಮದ್ಯಾಹ್ನ 12-00 ಗಂಟೆಯ ಮದ್ಯಾಹ್ಷನದಲ್ಲಿ ಆಸ್ಪತ್ರೆಗೆ ಹೋಗುವಾಗ ದಾರಿ ಮದ್ಯ ಮೃತಪಟ್ಟಿದ್ದು ಇರುತ್ತದೆ
.ಅಂತಾ ಶ್ರೀ ರಾಜೇಂದ್ರ ತಂದೆ ಪಾರಪ್ಪಾ ಬಿರಾದಾರ ಸಾ: ಪುಷ್ಕರ್ ಪ್ಲಾಜಾ ಅಪಾರ್ಟಮೆಂಟ್ ಶೆಟ್ಟಿ ಟಾಕೀಜ್ ಹಿಂದುಗಡೆ ಕೈಲಾಸ ಲಬುರಗಿ
ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ
ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ನರೋಣಾ ಠಾಣೆ : ದಿನಾಂಕ:04/11/2018
ರಂದು ಬೆಳಮಗಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಒಬ್ಬ ವ್ಯಕ್ತಿಯು ಅಕ್ರಮವಾಗಿ ಸರಾಯಿ ತುಂಬಿದ
ಪೌಚಗಳು ತನ್ನ ಅಧೀನದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ
ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ.ರುಕ್ಮೊದ್ದನ ಎ.ಎಸ್.ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಬೆಳಮಗಿ ಗ್ರಾಮದ ಹನುಮಾನ
ದೇವಸ್ಥಾನದಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಹನುಮಾನ ದೇವಸ್ಥಾನದ ಮುಂದಿನ ರಸ್ತೆಯ ಬದಿಯಲ್ಲಿ
ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ತನ್ನ ಮುಂದೆ ಒಂದು ರಟ್ಟಿನ ಡಬ್ಬಾದಲ್ಲಿ ಮದ್ಯ ತುಂಬಿ
ಪ್ಯಾಕ್ ಮಾಡಿದ ಪೌಚಗಳನ್ನು ಸಂಗ್ರಹಿಸಿ ಇಟ್ಟಿಕೊಂಡು ಜನರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು
ದಾಳಿ ಮಾಡಲಾಗಿ ಸಾರಾಯಿ ಖರೀದಿಸಲು ಬಂದ ಜನರು ಓಡಿಹೋಗಿದ್ದು ಸರಾಯಿ ಮಾರಾಟ ಮಾಡುತ್ತಿದ್ದ
ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ರಮೇಶ ತಂದೆ ಶರಣಪ್ಪಾ ತೋಳನೂರ @ ಶಟಗಾರ, ಸಾ:ಬೆಳಮಗಿ
ಗ್ರಾಮ ಅಂತಾ ಹೇಳಿದನು, ಸದರಿಯವನಿಗೆ ಮದ್ಯ ಮಾರಾಟ ಮಾಡಲು ಪರವಾನಿಗೆ ಅಥವಾ ದಾಖಲಾತಿಗಳ ಬಗ್ಗೆ ವಿಚಾರಿಸಲು
ಅನಧಿಕೃತವಾಗಿ ತನ್ನ ಅಧೀನದಲ್ಲಿ ಇಟ್ಟುಕೊಂಡು ಮಾರಾಟ ಮತ್ತು ಸಾಗಾಣೆ ಮಾಡುತ್ತಿರುವ ಬಗ್ಗೆ
ತಿಳಿಸಿದನು. ಸದರಿಯವನ ಮುಂದೆ ಒಂದು ರಟ್ಟಿನ ಡಬ್ಬಾದಲ್ಲಿ ಸಂಗ್ರಹಿಸಿ ಇಟ್ಟಿರುವ ಮದ್ಯದ ಡಬ್ಬಿಗಳನ್ನು
ನಾವುಗಳು ಪರಿಶೀಲಿಸಿ ನೋಡಲಾಗಿ 180 ಎಂ.ಎಲ್ ಮದ್ಯ ತುಂಬಿದ Original choice Deluxe Whisky ಎಂಬ
32 ಮದ್ಯದ ಪೌಚಗಳು ಅಂದಾಜು ಕಿಮತ್ತು 1940/- ರೂಪಾಯಿ ಹಾಗೂ ಸದರಿಯವನ ಅಂಗ ಶೋದನೆ ಮಾಡಲಾಗಿ ಈತನ
ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ 150/- ರೂ. ದೊರೆತವು ಅವುಗಳನ್ನು ಜಪ್ತಿ
ಮಾಡಿಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment