POLICE BHAVAN KALABURAGI

POLICE BHAVAN KALABURAGI

17 September 2018

KALABURAGI DISTRICT REPORTED CRIMES

ಸರ್ಕಾರಿ ಕರ್ತವ್ಯಕ್ಕೆ ಅಡ ತಡೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 15-9-2018 ರಂದು ಪ್ರಕರಣದಲ್ಲಿ ಇಬ್ಬರು ಆಪಾದಿತರಾದ 1) ಗಣೇಶ ತಂದೆ ನಾಮದೇವ ಜಮದಾರ  ಸಾ- ಶಿವಾಜನಗರ ಕಲಬುರಗಿ. 2) ಮಹಾಂತೇಶ ತಂದೆ ಯಶ್ವಂತಪ್ಪಾ ಊಡಗಿ ಸಾ- ಶಿವಾಜನಗರ ಕಲಬುರಗಿ  ಇವರಿಗೆ ದಸ್ತಗೀರ ಮಾಡಿದ್ದು   ದಸ್ತಗೀರ ಸಮಯದಲ್ಲಿ ಆಪಾದಿತರಿಗೆ ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ಸದರಿ ಪ್ರಕರಣದ ಪ್ರಮುಖ ಆರೋಪಿ ನಾಗೇಶ ಊರ್ಪ ನಾಗರಾಜ ತಂದೆ ಕಲ್ಯಾಣಿ  ಸಾ- ಶಿವಾಜಿನಗರ ಕಲಬುರಗಿ ಇತನ ಇರುವಿಕೆಯ ಬಗ್ಗೆ ವಿಚಾರಣೆ ಮಾಡಿದಾಗ  ಸದರಿ ಆಪಾದಿತನು ಆಳಂದ ರೋಡಿನ ಬೋಸಗಾ ಕ್ರಾಸ ಸಮೀಪ  ಒಂದು ಹಳೆ ಮನೆಯಲ್ಲಿ ಇರುವದಾಗಿ  ಮತ್ತು ಸದರಿಯವನ ಹತ್ತಿರ ಮಾರಕಾಸ್ತ್ರಗಳು ಇರುವದಾಗಿ ಕೊಟ್ಟ ಖಚಿತ ಮಾಹಿತಿಯ ಸುಳಿವಿನ ಮೇರೆಗೆ ಸದರಿ ಮಾಹಿತಿಯನ್ನು ಮಾನ್ಯ ಎಸ್.ಪಿ.ಸಾಹೇಬರು ಕಲಬುರಗಿ ಹಾಗೂ ಮಾನ್ಯ ಅಪರ ಎಸ್.ಪಿ.ಸಾಹೇಬರು ಕಲಬುರಗಿ ಮತ್ತು ಮಾನ್ಯ ಡಿ.ಎಸ್.ಪಿ.ಸಾಹೇಬರು ಬಿ. ಉಪವಿಭಾಗ ಕಲಬುರಗಿ ಇವರಿಗೆ ಮಾಹಿತಿಯನ್ನು ತಿಳಿಸಿದ್ದು ನಂತರ ಮಾನ್ಯ ಎಸ್.ಪಿ.ಸಾಹೇಬರು, ªÀiÁ£Àå ಅಪರ ಎಸ.ಪಿ.ಸಾಹೇಬರು ಕಲಬುರಗಿ ಹಾಗೂ ನಮ್ಮ ಡಿ.ಎಸ್.ಪಿ.ಸಾಹೇಬರ ಆದೇಶ ಮತ್ತು ಮಾರ್ಗದರ್ಶನದಂತೆ ಸದರಿ ಆರೋಪಿತನ ದಸ್ತಗೀರ ಕುರಿತು  ನಾನು ಮತ್ತು  ನನ್ನ ಜೊತೆಯಲ್ಲಿ ನಮ್ಮ ಠಾಣೆ ಸಿಹೆಚಸಿ.220 ಮೋಹನಕುಮಾರ, ಸಿಪಿಸಿ.1239 ರಮೇಶ, ಸಿಪಿಸಿ. 1210 ಸಿದ್ರಾಮಯ್ಯಾ, ಸಿಪಿಸಿ.557 ಆಶೀಫ್  ಮತ್ತು ಜೀಪ ಚಾಲಕ ಮಾಳಪ್ಪಾ ಎ.ಪಿ.ಸಿ.383 ಎಲ್ಲರೂ ಕೂಡಿಕೊಂಡು ಸರಕಾರಿ ಜೀಪ ನಂ.ಕೆ.ಎ.32. ಜಿ.1029 ನೆದ್ದರಲ್ಲಿ ಇಂದು ದಿನಾಂಕ. 16-9-2018 ರಂದು ಬೆಳಗ್ಗೆ 6-00 ಎ.ಎಂ.ಕ್ಕೆ. ಠಾಣೆಯಿಂದ ಬಿಟ್ಟು ಆಳಂದ ಚಕ್ಕ ಪೋಸ್ಟ ಮಾರ್ಗವಾಗಿ  ಆರೋಪಿತರ ನೀಡಿದ ಮಾಹಿತಿಯಂತೆ ಆಳಂದ ರೋಡಿನ ಕೆರಿಬೋಸಗಾ ಕ್ರಾಸ ಸಮೀಪ  ರೋಡಿ ಪಕ್ಕದಲ್ಲಿ  ನಮ್ಮ ಜೀಪನ್ನು ನಿಲ್ಲಿಸಿ   ಅಲ್ಲಿಯ ಜಮೀನದಲ್ಲಿರುವ ಹಳೆಯ ಫಾರ್ಮ ಹೌಸಗಳನ್ನು ಶೋಧನೆ ಮಾಡುತ್ತಾ ಹೋಗುತ್ತಿರುವಾಗ ಕೊನೆಗೆ ಇರುವ ಒಂದು ಹಳೆಯ ಹಾಳುಬಿದ್ದ ಮನೆಯಲ್ಲಿ ಯಾರೋ ಕೆಮ್ಮಿದಂತೆ ಸಪ್ಪಳ ಬಂದಾಗ ಆಗ ನಾನು ನನ್ನ ಸಿಬ್ಬಂದಿಯವರನ್ನು ಅರ್ಲಟ ಮಾಡಿ ಸದರಿ ಮನೆಯ ಸುತ್ತುವರೆದು  ಕಿಡಕಿಯಿಂದ ಇಣಿಕಿ ನೋಡಲಾಗಿ ಸದರಿ ಮನೆಯಲ್ಲಿ ಒಬ್ಬ ವ್ಯಕ್ತಿ ಹಾಸಿಗೆ ಮೇಲೆ ಕುಳಿತಿದ್ದನು ಆತನನ್ನು ನೋಡಲಾಗಿ ಸದರಿ ವ್ಯಕ್ತಿ ನಾಗೇಶ ಊರ್ಫ ನಾಗರಾಜ ಪೂಜಾರಿ ಇರುವದಾಗಿ ಖಾತ್ರಿ ಪಡಿಸಿಕೊಂಡು ಆಗ ನಾನು ಮತ್ತು ರಮೇಶ , ಸಿದ್ದರಾಮಯ ಕಿಡಕಿಯ ಹತ್ತಿರ ನಿಂತಿದ್ದು ಮತ್ತು  ಮನೆಯ ಬಾಗಿಲ ಹತ್ತಿರ ಮೊಹನ ಸಿಹೆಚಸಿ.220 ಮತ್ತು ಆಶೀಫ್. ಸಿಪಿಸಿ. 557  ನಿಂತಿದ್ದು ಆಗ ನಾನು ಸದರಿ ಆಪಾದಿತನಿಗೆ ನೀನು ಸಿದ್ದಾಜಿ ಇತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವಿ ಸರೆಂಡರ ಆಗು ಅಂತಾ ಹೇಳಿದಾಗ ಸದರಿಯವನು ತನ್ನ ಹತ್ತಿರ ಇದ್ದ ಹರಿತವಾದ ಮಾರಕಾಸ್ತ್ರವನ್ನು ತೆಗೆದುಕೊಂಡು ಕಿಡಕಿಯ ಮುಖಾಂತರ ಫರಾರಿಯಾಗಲು ನನಗೆ  ನೂಕಿಸಿಕೊಟ್ಟಿದ್ದು ಆಗ ನಾನು ಕೆಳಗೆ ಬಿದ್ದಾಗ  ಆ ವೇಳೆಯಲ್ಲಿ ನಮ್ಮ ಸಿಬ್ಬಂದಿ ರಮೇಶ ಸಿಪಿಸಿ 1239 ರವರು ಆತನಿಗೆ ಹಿಡಿಯಲು ಹೋದಾಗ ಆಪಾದಿತನು ತನ್ನ ಹತ್ತಿರ ಇದ್ದ ಮಾರಕಾಸ್ತ್ರದಿಂದ ರಮೇಶನಿಗೆ ಹೊಡೆದಾಗ ಆತನು ತಪ್ಪಿಸಿಕೊಳ್ಳುವಾಗ ಆತನ ಬಲಗೈ ಮೋಳಕೈ ಮೇಲೆ ಭಾರಿ ರಕ್ತಗಾಯವಾಗಿದ್ದು  ಆಗ ನಮ್ಮ ಸಿಬ್ಬಂದಿಯವರ  ಮತ್ತು ನನ್ನ ಆತ್ಮ ರಕ್ಷಣೆಗಾಗಿ  ಆರೋಪಿತನಿಗೆ ಎಚ್ಚರಿಕೆ ನೀಡುವದಕ್ಕಾಗಿ ನನ್ನ ಸರ್ವಿಸ ರಿವಾಲ್ವರದಿಂದ ಒಂದು ಸುತ್ತು ಗುಂಡನ್ನು ಗಾಳಿಯಲ್ಲಿ ಹಾರಿಸಿದ್ದು ಆಗ ಸಿದ್ರಾಮಯ್ಯಾ ಸಿಪಿಸಿ.1210 ಇತನು  ಆರೋಪಿತನಿಗೆ ಹಿಡಿಯಲು ಹೋದಾಗ  ಆತನಿಗೂ ಕೂಡಾ ಅದೇ ಆಯುಧದಿಂದ  ಕೊಲೆ ಮಾಡುವ  ಉದ್ದೇಶದಿಂದ ಕುತ್ತಿಗೆಯ ಹತ್ತಿರ ಹೊಡೆಯಲು ಹೋದಾಗ ಸಿದ್ರಾಮಯ್ಯಾ ತಪ್ಪಿಸಿಕೊಂಡಾಗ ಆತನ ಎಡಗೈ ರಟ್ಟೆಗೆ ತಗಲಿ ಭಾರಿ ರಕ್ತಗಾಯವಾಗಿದ್ದು ಆಗ ನಾನು ಹಲ್ಲೆ ಮಾಡಬೇಡಾ ಶರಣಾಗು ಅಂತಾ ಅವನಿಗೆ ಎಚ್ಚರಿಕೆ ನೀಡಿ ಹೀಡಿಯವದಕ್ಕಾಗಿ  ಆತನ ಹಿಂದಿನಿಂದ ಅವನಿಗೆ ಬೆನ್ನು ಹತ್ತಿದ್ದಾಗ ಸದರಿ ಆಪಾದಿತ ನಾಗೇಶನು ಇತನು ನಮ್ಮ ಸಿಬ್ಬಂದಿಯವರಾದ  ಮೋಹನ ಮತ್ತು ಆಶೀಫ್ ಇವರಿಗೆ ಹೋಡೆಯಲು ಓಡುತಿದ್ದಾಗ ಆಪಾದಿತನಿಗೆ ಶರಣಾಗು ಅಂತಾ ಮುನ್ನೆಚ್ಚರಿಕೆ ನೀಡಿದರೂ ಕೂಡಾ ಶರಣಾಗಲಿಲ್ಲಾ,ಸದರಿಯವನು ನಮ್ಮ ಸಿಬ್ಬಂದಿಯರಿಗೆ ಕೊಲೆ ಮಾಡುತ್ತಾನೆ ಅನ್ನುವ ಬಗ್ಗೆ ಖಚಿತ ಪಡಿಸಿಕೊಂಡು ನನ್ನ ಸಿಬ್ಬಂದಿಯವರ ಪ್ರಾಣ ರಕ್ಷಣೆ ಮಾಡುವ ಕುರಿತು ಫೈರಿಂಗ ಮಾಡುವದು ಅತೀ ಅವಶ್ಯಕತೆ ಕಂಡು ಬಂದಿದ್ದರಿಂದ ಪ್ರಾಣ ರಕ್ಷಣೆ ಕುರಿತು ನನ್ನ ಸರ್ವಿಸ ರಿವಾಲ್ವರದಿಂದ ಒಂದು ಗುಂಡನ್ನು ಆರೋಪಿ ನಾಗೇಶನ ಎಡಗಾಲಿಗೆ ಹೊಡೆದನು  ಆದರೂ ಕೂಡಾ ಆಪಾದಿತ ಎದ್ದು ಮುಂದೆ ಇದ್ದ  ನಮ್ಮ ಸಿಬ್ಬಂದಿಯವರಾದ ಮೊಹನ ಮತ್ತು ಆಶೀಫ ಇವರ ಹಲ್ಲೆ ಮಾಡಲು ಮುಂದಾಗಿದ್ದು  ಆಗ ಇನ್ನೊಂದು ಸುತ್ತು ರೌಂಡ್ಸ  ಆರೋಪಿಯ  ಎಡಗಾಲಿಗೆ ಫೈರ ಮಾಡಿದನು ಆಗ ಆತನು ಕೆಳಗೆ  ಕುಸಿದು ಬಿದ್ದಾಗ ಎಲ್ಲರೂ ಕೂಡಿ ಸುತ್ತುವರೆದು ಆತನಿಗೆ  ವಶಕ್ಕೆ ತೆಗೆದುಕೊಂಡೆವು.ಆ ನಂತರ ನಾನು ಮೊದಲು ಜಿಲ್ಲಾ ಕಂಟ್ರೂಲ್ ರೂಮಿಗೆ ನಂತರ ನಮ್ಮ ಡಿ.ಎಸ್.ಪಿ. ಬಿ. ಉಪವಿಭಾಗ ರವರಿಗೆ ಘಟನೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ನಂತರ ಸದರಿ ಆರೋಪಿತ ನಾಗೇಶನಿಗೆ ರಕ್ತಸ್ರಾವವಾಗುತಿರುವದರಿಂದ ನನ್ನ ಸರಕಾರಿ ಜೀಪನಲ್ಲಿ ಕೂಡಿಸಿ ಆಶೀಫ ಸಿಪಿಸಿ. 557 ರವರ ಬೆಂಗಾವಲಿನಲ್ಲಿ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು  ಕಳುಹಿಸಿ ನಂತರ 108 ಅಂಬುಲೇನ್ಸ್ಗೆಗೆ ಮಾಹಿತಿ ತಿಳಿಸಿ ಆ. ನಂತರ ಗಾಯಗೊಂಡ ನನ್ನ ಸಿಬ್ಬಂದಿವಯರಾದ ಸಿಪಿಸಿ. 1239 ರಮೇಶ ಹಾಗೂ ಸಿಪಿಸಿ. 1210 ಸಿದ್ರಾಮಯ್ಯಾ ಇವರಿಗೆ ಯುನೈಟೆಡ  ಆಸ್ಪತ್ರೆಗೆ ಉಪಚಾರ ಕುರಿತು ಕಳುಹಿಸಿಕೊಟ್ಟಿದ್ದು ಇರುತ್ತದೆ. ನನಗೂ ಕೂಡಾ ಬಲಗೈ ಮಣಿಕಟ್ಟಿನ ಹತ್ತಿರ ಗುಪ್ತ ಪೆಟ್ಟಾಗಿ ಬಾವು ಬಂದಿರುತ್ತವೆ. ಈ ಘಟನೆಯು ಇಂದು ದಿನಾಂಕ 16-9-2018 ರಂದು ಬೆಳಿಗ್ಗೆ 6:40 ರಿಂದ 06:50 ಎ.ಎಂ.ದ ಅವಧಿಯಲ್ಲಿ ಜರುಗಿರುತ್ತದೆ ನಾವು ಸರಕಾರಿ ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಹಲ್ಲೆ ಮತ್ತು ಬಲ ಪ್ರಯೋಗ ಮಾಡಿ ಗಂಭೀರ ಸ್ವರೂಪದ ಗಾಯ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ಕಾನೂನು ಬದ್ದವಾದ ದಸ್ತಗಿರಿಯನ್ನು ತಪ್ಪಿಸುವ ಸಲುವಾಗಿ ನನ್ನ ಮೇಲೆ ಮತ್ತು ನನ್ನ ಸಿಬ್ಬಂದಿವಯರಾದ ಸಿಪಿಸಿ. 1239 ರಮೇಶ ಹಾಗೂ ಸಿಪಿಸಿ. 1210 ಸಿದ್ರಾಮಯ್ಯಾ ಇವರ ಮೇಲೆ ಮಾರಕಸ್ತ್ರದಿಂದ ಮರಣಾಂತಿಕ ಹಲ್ಲೆ  ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದ ಆರೋಪಿ ನಾಗೇಶ ಊರ್ಫ ನಾಗರಾಜ ತಂದೆ ಕಲ್ಯಾಣಪ್ಪಾ ಪೂಜಾರಿ ಸಾ-ಶಿವಾಜಿನಗರ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಸಂಗಮನಾಥ ತಂದೆ ಸಿದ್ದವೀರಯ್ಯಾ ಹೀರೆಮಠ ಆರಕ್ಷಕ ನಿರೀಕ್ಷಕರು ಚೌಕ ಠಾಣೆ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನರೋಣಾ ಠಾಣೆ : ಶ್ರೀ ಚಂದ್ರಕಾಂತ ತಂದೆ ಹೂನಾ ಚಿನ್ನಿ ರಾಠೋಡ ಸಾ||ವ್ಹಿ,ಕೆ,ಸಲಗರ ತಾಂಡಾ ರವರು 16 ವರ್ಷಗಳಿಂದ ವ್ಹಿ,ಕೆ,ಸಲಗರ ಗ್ರಾಮದಲ್ಲಿರುವ ಸರ್ದಾರ ತಂದೆ ಬಸಯ್ಯಾ ಗುತ್ತೆದಾರ ಸಾ: ತಡಕಲ ರವರ ವಜ್ರೇಶ್ವರಿ ಮದ್ಯದ ಅಂಗಡಿಯಲ್ಲಿ ವ್ಯವಸ್ಥಾಪಕನಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದೆನೆ. ನನ್ನಂತೆಯೆ ಈ ಮದ್ಯದ ಅಂಗಡಿಯಲ್ಲಿ ಸಿದ್ರಾಮಪ್ಪಾ ತಂದೆ ಬಸವಣಪ್ಪಾ ರಂಜೇರಿ ಸಾ: ಸುಕ್ರವಾಡಿ ಇವರು ಸಹ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.ಪ್ರತಿ ದಿವಸ ಮುಂಜಾನೆ 9 ಗಂಟೆಗೆ ಮದ್ಯದ ಅಂಗಡಿ ತೆರೆದು ರಾತ್ರಿ 10 ಗಂಟೆಗೆ ಬಂದ ಮಾಡುತ್ತೆವೆ. ಅದರಂತೆ ದಿನಾಂಕ 14/09/2018 ರಂದು ಮುಂಜಾನೆ 9 ಗಂಟೆಗೆ ನಾನು ಮದ್ಯದ ಅಂಗಡಿಯನ್ನು ತೆಗೆದು ರಾತ್ರಿ 10 ಗಂಟೆಗೆ ಬಂದ ಮಾಡಿ ವಾಪಸ ನಮ್ಮ ತಾಂಡಾಕ್ಕೆ ಹೋಗಿರುತ್ತೆನೆ. ಮದ್ಯರಾತ್ರಿ 3 ಗಂಟೆಯ ಸುಮಾರಿಗೆ ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವವರಾದ ತುಳಜಪ್ಪಾ ಅಣಕಲ ಸಾ: ವ್ಹಿ,ಕೆ,ಸಲಗರ ಇವರು ಫೊನಮಾಡಿ ನಮ್ಮ ಮದ್ಯದ ಅಂಗಡಿಯ ಬಾಗಿಲು ಕೊಂಡಿಯನ್ನು ಯಾರೊ ಕಳ್ಳರು ಮುರಿದು ಮದ್ಯದ ಅಂಗಡಿಯಲ್ಲಿರುವ ಮದ್ಯದ ಬಾಕ್ಸಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿದ ಮೇರೆಗೆ ನಾನು ಮತ್ತು ಇನ್ನೊರ್ವ ಮ್ಯಾನೇಜರ ಆದ ಸಿದ್ರಾಮಪ್ಪಾ ರಂಜೆರಿ ರವರು ಕೂಡಿ ನಸುಕಿನ ಜಾವ 4 ಗಂಟೆಯ ಸುಮಾರಿಗೆ ನಾವು ಹೋಗಿ ನೋಡಲಾಗಿ ನಮ್ಮ ಮದ್ಯದ ಅಂಗಡಿಯ ಬಾಗಿಲಿನ ಕೊಂಡಿ ಮುರಿದಿದ್ದು ನಾವಿಬ್ಬರು ಒಳಗೆ ಹೋಗಿ ನೋಡಿ ಚೆಕ ಮಾಡಲಾಗಿ ಅಂಗಡಿಯಲ್ಲಿದ್ದ ಮದ್ಯದ ಬಾಕ್ಸಗಳಲ್ಲಿ 5 ಬಾಕ್ಸ ಮದ್ಯದ ಬಾಕ್ಸಗಳನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೊಗಿದ್ದರು. ನಗದು ಹಣ ರಾತ್ರಿ ವೆಳೆಯಲ್ಲಿ ಮದ್ಯದ ಅಂಗಡಿಯಲ್ಲಿ ಇಡುವದಿಲ್ಲಾ ಹೀಗಾಗಿ ಯಾವುದೇ ನಗದು ಹಣ ಕಳವು ಆಗಿರುವದಿಲ್ಲಾ.   ದಿನಾಂಕ 14/09/2018 ರಂದು 11 ಪಿ,ಎಮ್,ದಿಂದ ದಿನಾಂಕ 15/09/2018 ರಂದು 2 ,ಎಮ್, ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ನಮ್ಮ ಮಾಲಿಕರಾದ ಸರ್ದಾರ ಇವರ ವಜ್ರೇಶ್ವರಿ ಮದ್ಯದ ಅಂಗಡಿಯ ಬಾಗಿಲ ಕೊಂಡಿ ಮುರಿದು ಒಳಗಡೆ ಇದ್ದ ಈ ಮೇಲೆ ನಮೂದಿಸಿದ ಒಟ್ಟು 22,094/- ರೂಪಾಯಿ ಮೌಲ್ಯದ ಮದ್ಯದ ಬಾಟಲಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸೈದಪ್ಪ ತಂದೆ ಶಿವಪ್ಪ ಹರೇಕುರುಬ ಸಾ: ಅಫಜಲಪೂರ  ವರ ಹೆಂಡತಿ ಈ ಕಳೆದ ಪುರಸಭೆ ಚುನಾವಣೆಯಲ್ಲಿ ಆರೋಪಿ ಜಕ್ಕಪ್ಪನ ಸೊಸೆಯ ವಿರುದ್ದ ಸ್ಪರ್ದಿಸಿ ಚುಬನಾವನೆಯಲ್ಲ ಗೆದ್ದಿರುತ್ತಾಳೆ. ಚುನಾವಣೆಯಲ್ಲಿ ಆದ ವೈಶಮ್ಯದಿಂ ರೋಪಿತರು ನಿನ್ನೆ ದಿನಾಂಕ 15-09-2018 ರಂದು 7:00 ಪಿ.ಎಮ್ ಕ್ಕೆ ಅಫಜಲಪೂರ ಪಟ್ಟಣದ ಅಮೋಘಸಿದ್ದ ಗುಡಿಯ ಮುಂದೆ ಪಿರ್ಯಾದಿದಾರನಿಗೆ ಹಾಗೂ ಅವನ ಕಡೆಯವರಾದ ಮಲ್ಲಪ್ಪ ಮತ್ತು ಭೀಮಣ್ಣ ಇವರಿಗೆ ಅತಿಕ್ರಮವಾಗಿ ಗುಂಪುಕಟ್ಟಿಕೊಂಡು ಎಲ್ಲರೂ ಏಕೊದ್ದೇಶದಿಂದ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗೂ ಬಡಿಗೆಯಿಂದ ಕಲ್ಲಿನಿಂದ ಹಲ್ಲೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯಗಳನ್ನು ಪಡಿಸಿ ಜಿವ ಬೆದರಿಕೆ ಹಾಕಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 September 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 14-09-2018 ರಂದು ಉಡಚಾಣ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀ ಮಾರುತಿ ಎಎಸ್ ಐ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಉಡಚಾಣ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಉಡಚಾಣ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದಿನ ಸಾರ್ವಜನಿಕ ರಸ್ತೆಯ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದರು. ಆಗ ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ ಪೈಗಂಬರ ತಂದೆ ಶೇಖ ಬಾಬು ಮುಲ್ಲಾ ಸಾ|| ಉಡಚಾಣ ತಾ|| ಅಫಜಲಪೂರ  ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋಧನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 590/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಗಿದೆ
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಪದ್ಮಾವತಿ ಗಂಡ ಗುರುಲಿಂಗಯ್ಯ ಒಡೇಯರ ಸಾ||ಅಮೋಘಿಸಿದ್ದ ಗುಡಿ ಹತ್ತಿರ ಅಫಜಲಪೂರ ರವರ ಮಗನಾದ ಸಾಗರ ಇತನು ನಮ್ಮ ಓಣಿಯ ಅಮೋಘಿಸಿದ್ದ ಗುಡಿ ಹತ್ತಿರ ಪಾಸ ಶಾಪ್ ಇಟ್ಟು ವ್ಯಾಪಾರ ಮಾಡಿಕೊಂಡಿರುತ್ತಾನೆ. ನಮ್ಮ ಓಣಿಯವರೇಯಾದ ವಿಠ್ಠಲ ತಂದೆ ಸಿದ್ರಾಮ ಇಂಗಳಗಿ ರವರು ಅಮೋಘಿಸಿದ್ದ ಗುಡಿ ಹತ್ತಿರ ಹೊಟೇಲ ಇಟ್ಟುಕೊಂಡಿರುತ್ತಾರೆ ವಿಠ್ಠಲ ಹಾಗು ಅವರ ಮಗ ಮಲ್ಲಪ್ಪ ಇಬ್ಬರು ನನ್ನ ಮಗನೊಂದಿಗೆ ಆಗಾಗ ನೀ ಇಲ್ಯಾಕ ಪಾನಶಾಪ್ ಹಾಕಿದಿ ನಮ್ಮ ಹೊಟೇಲ ಕೆಲಸಕ್ಕೆ ತೊಂದರೆಯಾಗುತ್ತಿದೆ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜಗಳ ಮಾಡುತ್ತಾ ಬಂದಿರುತ್ತಾರೆ. ನಿನ್ನೆ  ದಿನಾಂಕ 14/09/2018 ರಂದು ಅಮೋಘಸಿದ್ದ ಗುಡಿಯ ಮುಂದೆ ಜನರು ಬಾಯಿ ಮಾಡುವ ಸಪ್ಪಳ ಕೇಳಿ ನಾನು ಹಾಗು ನಮ್ಮ ಅಕ್ಕಳಾದ ಸಾಮಬಾಯಿ ಗಂಡ ಬಸಣ್ಣ ಒಡೇಯರ ಇಬ್ಬರು ಕೂಡಿ ಓಡಿ ಹೋಗಿ ನೋಡಲಾಗಿ ಅಮೋಘಿಸಿದ್ದ ಗುಡಿಯ ಮುಂದೆ ನಮ್ಮ ತಮ್ಮನಾದ ಬಿಳಿಯಣಿಸಿದ್ದ ತಂದೆ ಅಮೋಘೆಪ್ಪ ಒಡೇಯರ ಈತನೋಂದಿಗೆ ವಿಠ್ಠಲ ಹಾಗು ಮಲ್ಲಪ್ಪ ಇಬ್ಬರು ರಂಡಿ ಮಕ್ಕಳ್ಯಾ ನಿಮ್ಮ ಅಳಿಯ ಸಾಗರನ ಪಾನ ಶಾಪ್ ತಗಸ್ರಿ ಅಂತ ಹೇಳಿದರು ಕೇಳಲ್ಲ ಅಂತ ಬೈಯುತಿದ್ದಾಗ ಅಲ್ಲೆ ಇದ್ದ ಭೀಮಣ್ಣ ತಂದೆ ಬಸಣ್ಣ ಅಂದೋಡಗಿ, ಲಕ್ಷ್ಮಿಪುತ್ರ ತಂದೆ ಪರೇಪ್ಪ ಬಳೂರ್ಗಿ ಹಾಗು ನನ್ನ ಮಗನಾದ ಸಾಗರ ಮೂರು ಜನರು ಸದರಿಯವರಿಗೆ ತಿಳುವಳಿಕೆ ಹೇಳುತಿದ್ದಾಗ ನಾವು ನಡುವೆ ಬಿಡಿಸಲು ಹೋದರೆ ವಿಠ್ಠಲ ಇತನು ಒಂದು ಬಡಿಗೆಯಿಂದ ನಮ್ಮ ತಮ್ಮನ ಹೆಡಕಿಗೆ ಜೋರಾಗಿ ಹೊಡೆದನು ನಮ್ಮ ತಮ್ಮ ನೆಲಕ್ಕೆ ಬಿದ್ದಾಗ ಮಲ್ಲಪ್ಪ ಈತನು ನಮ್ಮ ತಮ್ಮನಿಗೆ ಕಾಲಿನಿಂದ ಒದೆಯುತಿದ್ದಾಗ ನಾನು ಬಿಡಿಸುವಾಗ ವಿಠ್ಠಲ ಈತನು ಬಡಿಗೆ ಅಲ್ಲೆ ಬಿಸಾಡಿ ತನ್ನ ಕೈಯಿಂದ ನನ್ನ ಕಪಾಳಕ್ಕೆ ಒಡೆದಿರುತ್ತಾನೆ ನಂತರ ವಿಠ್ಠಲ ಹಾಗು ಮಲ್ಲಪ್ಪ ಅಲ್ಲಿಂದ ಹೋಗುವಾಗ ರಂಡಿ ಮಕ್ಕಳ್ಯಾ ಪಾನ ಶಾಪ್ ಇಲ್ಲಿಂದ ತಗೆದ್ರಿ ಚೊಲೋ ಅದಾ ಇಲ್ಲಂದ್ರ ನಿಮಗ ಖಲಾಸ ಮಾಡ್ತಿವಿ ಅಂತ ಅಂದು ಅಲ್ಲಿಂದ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಮಹಾದೇವ ತಂದೆ ಭೀಮಣ್ಣಾ ಚಿಣಮಗೇರಿ ಸಾ:ನಾಗರ ಕಟ್ಟಾ ಹತ್ತಿರ ಗಂಗಾನಗರ ಕಲಬುರಗಿ ಇವರು ದಿನಾಂಕ:15/09/2018 ರಂದು ನಾನು ಲಾಲಗೇರಿ ಕ್ರಾಸದಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಜಂಗೇ ಬ್ರದರ್ಸ್‌ ಹತ್ತಿರ ಸಿದ್ದು ಯಾದವ ಇತನು ನಿಂತಿದ್ದನು ನನಗೆ ತಡೆದು ಏ ಭೋಸಡಿ ಮಗನೆ ನಿನ್ನೆ ನಾನು ಕುಡಿಯಲು ಹಣ ಕೇಳಿದರೆ ಇಲ್ಲಾ ಅಂತಾ ಹೇಳುತ್ತಿಯಾ ನಿನ್ನ ಸೊಕ್ಕ ಬಹಳ ಆಗಿದೆ ಅಂತಾ ಬೈದನು ಆಗ ನಾನು ಯಾಕೆ ಬೈಯುತ್ತಿಯಾ ನನ್ನ ಹತ್ತಿರ ಹಣ ಇದ್ದಾಗ ಕೊಟ್ಟಿದ್ದೆನೆಲ್ಲಾ ಅಂದಾಗ ನನಗೆ ಎದರು ಮಾತನಾಡುತ್ತಿಯಾ ಅಂತಾ ಅಂದವನೆ ಅಲ್ಲೆ ಬಿದ್ದಿದ್ದ ಬಡಿಗೆ ತೆಗೆದುಕೊಂಡು ನನ್ನ ತಲೆಯ ಮೇಲೆ ಎಡಗಡೆಗೆ ಹೋಡೆದನು ರಕ್ತ ಬರಹತ್ತಿತ್ತು ಆಗ ಮತ್ತೆ ಹೊಡೆಯಲು ಬಂದಾಗ ನನ್ನ ಬಲಗೈ ಅಡ್ಡ ವೈದಾಗ ಬಲಗೈಗೆ ಬಡಿಗೆ ಬಡೆದು ಗುಪ್ತಗಾಯವಾಯಿತು. ಆಗ ಅಲ್ಲೆ ಹೊರಟಿದ್ದ ನನ್ನ ತಮ್ಮ ನಿಂಗಪ್ಪಾ ಹಾಗೂ ಆನಂದ ಜಮಾದಾರ ಕೂಡಿ ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ಇನ್ನೂ ಹೊಡೆಬಡೆ ಮಾಡುತ್ತಿದ್ದನು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

14 September 2018

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು  ಪ್ರಚೋದಿಸಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶಿವಮ್ಮ ಗಂ ಸುಬಂಜಪ್ಪಗೌಡ ಮಾಲಿಪಾಟೀಲ್ ಸಾ: ರೇವನೂರ ತಾ:ಜೇವರಗಿ ರವರ ಮಗಳಾದ ಜಯಶ್ರೀ ಇವಳಿಗೆ ಕಡಕೋಳ ಗ್ರಾಮದ ಮಲ್ಲಿಕಾರ್ಜುನ ತಂ ಮಡಿವಾಳಪ್ಪ ಪೊಲೀಸ್ ಪಾಟೀಲ್ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ಆಗಾಗ ನನ್ನ ಮಗಳಿಗೆ ಅವಳ ಗಂಡ ಮತ್ತು ಅತ್ತೆ ಜಗದೇವಿ , ಮಾವ ಮಡಿವಾಳಪ್ಪಗೌಡ , ಮೈದುನ ಮಹಾಂತಪ್ಪ ಇವರು ನನ್ನ ಮಗಳಿಗೆ ನಿನಗೆ ಮದುವೆ ಮಾಡಿಕೊಂಡಿದ್ದರಿಂದ ನಮಗೆ ಲುಖಸಾನ ಆಗಿರುತ್ತದೆ. ನನ್ನ ಮಗನಿಗೆ ಬೇರೆಕೆಡೆ ಮದುವೆ ಮಾಡಿದ್ದರೆ ಸರಿಯಾಗಿ ವರೋಪಚಾರ ಕೊಡುತ್ತಿದ್ದರು. ಈಗ ನೀನು ಸತ್ತರೆ ಎಲ್ಲಾ ಸರಿ ಹೋಗುತ್ತದೆ ಅಂತಾ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದ ಬಗ್ಗೆ ನನ್ನ ಮಗಳು ನನ್ನ ಮುಂದೆ ನಮ್ಮ ಮನೆಗೆ ಬಂದಾಗ ಹೇಳಿರುತ್ತಾಳೆ ಈಗ ಒಂದು ತಿಂಗಳ ಹಿಂದೆ ನನ್ನ ಮಗಳಿಗೆ ಗಂಡನ ಮನೆಗೆ ಕಳುಹಿಸಿರುತ್ತೇವೆ. ನನ್ನ ಮಗಳ ಗಂಡನ ಮನೆ ಕಡಕೋಳ ಸಿಮೇಯ ಅವರ ಹೊಲದಲ್ಲಿರುತ್ತದೆ.  ದಿನಾಂಕ: 13-09-18 ರಂದು  ಕಡಕೋಳ ಗ್ರಾಮದ ಸಂಬಂದಿಕರಾದ ಆನಂದ ತಂ ಯಮನಪ್ಪ ಮಾಲಿಪಾಟೀಲ್ ಇವರು ಪೋನ್ ಮಾಡಿ ನಿಮ್ಮ ಮಗಳು ಜೈಯಶ್ರೀ ಇವಳು ವಿಷ ಕುಡಿದು ಮೃತಪಟ್ಟಿರುತ್ತಾಳೆ ಅಂತಾ ಹೇಳಿರುವದರಿಂದ ನಾನು ಮತ್ತು ನನ್ನ ಮಗ ಶ್ರೀಶೈಲ ಮತ್ತು ಸಂಬಂದಿಕರಾದ ದೇವಪ್ಪಗೌಡ ಮಾಲಿಪಾಟೀಲ್ , ರೇವಣಸಿದ್ದಪ್ಪಗೌಡ ಮಾಲಿಪಾಟೀಲ್ ಅವರವರು ಕೂಡಿಕೊಂಡು ಕಡಕೋಳ ಗ್ರಾಮಕ್ಕೆ ಹೋಗಿ ನನ್ನ ಮಗಳ ಶವವನ್ನು ನೋಡಿದ್ದು ನನ್ನ ಮಗಳಿಗೆ ಅವಳ ಗಂಡ ಮಲ್ಲಿಕಾರ್ಜುನ , ಮಾವ ಮಡಿವಾಳಪ್ಪಗೌಡ , ಅತ್ತೆ ಜಗದೇವಿ , ಮೈದುನ ಮಹಾಂತಪ್ಪ ಇವರೆಲ್ಲರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ಕಿರುಕುಳ ತಾಳಲಾರದೆ ನನ್ನ ಮಗಳು ಅವರ ಮನೆಯಲ್ಲಿ ಇಂದು ದಿನಾಂಕ: 13-09-18 ರಂದು 12 ಪಿ.ಎಂ ದಿಂದ 3 ಪಿ.ಎಂ ಮಧ್ಯದಲ್ಲಿ ಯಾವುದೊ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 15/08/2018 ರಂದು ಸಾಯಂಕಾಲ 06:30 ಗಂಟೆಗೆ ಮೃತ ಭೂಸಣ್ಣಾ @ ಬೂಸಪ್ಪ ಗೊಬ್ಬುರ ಇವರು ಸಂಡಾಸಕ್ಕೆ ಹೋಗಿ ಮರಳಿ ತಾನು ಪಾಲಿಗೆ ಮಾಡಿದ ಹೋಲದ ಕಡೆಗೆ ಬರುವ ಕುರಿತು ಕಲಬುರಗಿ-ಅಫಜಲಪೂರ ರೋಡಿನ ಶರಣಸಿರಸಗಿ ತಾಂಡಾದ ಕೆಇಬಿ ಗೋದಮ ಹತ್ತಿರ ನಡೆದುಕೊಂಡು ಸದರಿ ರೋಡ ಕ್ರಾಸ ಮಾಡುತ್ತಿದ್ದಾಗ ಅದೇ ವೇಳೆಗೆ ಕಲಬುರಗಿ ಕಡೆಯಿಂದ ಒಬ್ಬ ಮೋಟಾರ ಸೈಕಲ್ ನಂ KA-32 Y-6499 ನೇದ್ದರ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಯಾವುದೇ ಹಾರ್ನ ವಗೈರೇ ಹಾಕದೇ ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಮೃತನಿಗೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲನ್ನು ಸ್ವಲ್ಪ ಮುಂದೆ ಒಯ್ದು ನಿಲ್ಲಿಸಿದ್ದು ಆತನಿಗೆ ತಲೆಯ ಹಿಂದುಗಡೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯ, ಬಲಗಾಲು ಮುಂಗಾಲಿಗೆ ತರಚಿದ ರಕ್ತಗಾಯಗಳಾದ್ದರಿಂದ್ದ ಆತನಿಗೆ ಕಲಬುರಗಿ ನಗರದ ಗಂಗಾ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದ್ದು ನಂತರ ದಿನಾಂಕ:- 16/08/2018 ರಂದು ರಾತ್ರಿ ಗಂಗಾ ಆಸ್ಪತ್ರೆಯಿಂದ ಡಿಚಾರ್ಚ ಮಾಡಿಸಿಕೊಂಡು ದಿನಾಂಕ:- 17/08/2018 ರಂದು ಸೋಲಾಪುರದ ಗಂಗಾ ಮಯ್ಯ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು ಮೃತ ಭೂಸಣ್ಣಾ @ ಬೂಸಪ್ಪ ಇವರು ದಿನಾಂಕ:- 17/08/2018 ರಿಂದ ದಿನಾಂಕ:- 31/08/2018 ರವರೆಗೆ ಗಂಗಾ ಮಯ್ಯಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ದಿನಾಂಕ:- 31/08/2018 ರಂದು ಮದ್ಯಾಹ್ನ ರಸ್ತೆ ಅಪಘಾತದಲ್ಲಿ ನನ್ನ ತಂದೆಗೆ ಆದ ಗಾಯಗಳಿಂದ ಗುಣಮುಖ ಹೊಂದದೇ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ರಾಜೇಶ ತಂದೆ ಭೂಸಣ್ಣಾ ಸಾ : ಶರಣಶಿರಸಗಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಅಲ್ಲಿಸಾಬ ತಂದೆ ಹಸನಸಾಬ ಕವಾಲ್ದಾರ ಸಾ|| ಬಳಬಟ್ಟಿ ತಾ|| ಜೇವರ್ಗಿ ರವರು 4 ಜನ ಅಣ್ಣತಮ್ಮಂದಿರರಿದ್ದು, ನಮ್ಮೂರ ಸಿಮಾಂತರದಲ್ಲಿ ನಮ್ಮ ಪಿತ್ರಾರ್ಜಿತ ಆಸ್ತಿಗಳಿದ್ದು, ಸರ್ವೆ ನಂ 62 ನೇದ್ದರಲ್ಲಿ 6 ಎಕರೆ ಮತ್ತು ಸರ್ವೆ ನಂ 63 ನೇದ್ದರಲ್ಲಿ 5 ಎಕರೆ, ಸರ್ವೆ ನಂ 83 ನೇದ್ದರಲ್ಲಿ 22 ಎಕರೆ ಜಮೀನು ಇರುತ್ತದೆ, ಹಿರಿಯರು ವಾಟನಿ ಮಾಡಿ ಕೊಟ್ಟಿದ್ದ ಪ್ರಕಾರ ನಾವುಗಳು ಉಪಭೋಗ ಮಾಡುತ್ತಾ ಬಂದಿರುತ್ತೇವೆ, ಆದರೆ ಸರ್ವೆ ನಂ 63 ನೇದ್ದರಲ್ಲಿ ನಮ್ಮ ತಮ್ಮಂದಿರಾದ ಲಾಲಸಾಬ ಮತ್ತು ಚಂದಾಸಾಬ ರವರ ಹೆಸರಿಗೆ ಇದ್ದು ಅವರ ಪಹಣಿಯಲ್ಲಿ ತಲಾ 3 ಎಕರೆ 20 ಗುಂಟೆ ಜಮೀನು ಇರುತ್ತದೆ, ಪಹಣಿಯಲ್ಲಿ 2 ಎಕರೆ ಜಮಿನು ಹೆಚ್ಚಿಗೆ ನಮೂದು ಇರುತ್ತದೆ, ಸರ್ವೆ ನಂ 63 ನೇದ್ದರಲ್ಲಿ ನಮ್ಮ ಎರಡನೇ ಅಣ್ಣತಮ್ಮಂದಿರರಿಗೆ ಮೇಲ್ಕಂಡ ಲಾಲಸಾಬ ಮತ್ತು ಚಂದಾಸಾಬ ರವರು 2 ಎಕರೆ ಹೊಲ ಬಿಟ್ಟು ಕೊಡಬೇಕು ಅದರಂತೆ ನಮ್ಮ ಎರಡನೇ ಅಣ್ಣತಮ್ಮಂದಿರು ಸರ್ವೆ ನಂ 62 ನೇದ್ದರಲ್ಲಿ ನಮಗ 2 ಎಕರೆ ಬಿಟ್ಟು ಕೊಡಬೇಕು, ಅಂತಾ ಹಿರಿಯರು ಮಾತನಾಡಿದ್ದು ಇರುತ್ತದೆ, ಆದರೇ ನಮ್ಮ ತಮ್ಮಂದಿರಾದ ಲಾಲಸಾಬ ಮತ್ತು ಚಂದಾಸಾಬ ರವರು ಹೊಲ ಬಿಟ್ಟು ಕೊಡುತ್ತಿಲ್ಲಾ, ಆದ್ದರಿಂದ ನಮ್ಮ ಎರಡನೇ ಅಣ್ಣತಮ್ಮಂದಿರರುಸಹ ನಮಗೆ 2 ಎಕರೆ ಹೊಲ ಬಿಟ್ಟು ಕೊಡುತ್ತಿಲ್ಲಾ, ಈ ಬಗ್ಗೆ ನಮ್ಮ ತಮ್ಮಂದಿರಾದ ಲಾಲಸಾಬ ಮತ್ತು ಚಂದಾಸಾಬ ರವರಿಗೆ ಸುಮಾರು ಸಲ ಹೇಳಿದರು ಅವರು ಕೇಳದೆ ನನ್ನೊಂದಿಗೆ ತಕರಾರು ಮಾಡಿಕೊಳ್ಳುತ್ತಾ ಬಂದಿರುತ್ತಾರೆ. ದಿನಾಂಕ 11-09-2018 ರಂದು ರಾತ್ರಿ 10;00 ಗಂಟೆಗೆ ನಮ್ಮ ಮನೆಯ ಹತ್ತಿರ ಜಟ್ಟೆಪ್ಪದೇವರ ಗುಡಿ ಹತ್ತಿರ ನಾನು ನನ್ನ ಮಗ ರಜಾಕ ಇಬ್ಬರು ಕೂಡಿ ಮನೆಗೆ ಹೊಗುತ್ತಿದ್ದಾಗ ನಮ್ಮ ತಮ್ಮಂದಿರಾದ 1] ಚಂದಾಸಾಬ ತಂದೆ ಹಸನಸಾಬ ಕವಾಲ್ದಾರ, 2] ಮಹಿಬೂಬ ತಂದೆ ಹಸನಸಾಬ ಕವಾಲ್ದಾರ, 3] ಲಾಲಸಾಬ ತಂದೆ ಹಸನಸಾಬ ಕವಾಲ್ದಾರ, 4] ರಸೂಲ ತಂದೆ ಚಂದಾಸಾಬ ಕವಾಲ್ದಾರ, 5] ರಸೂಲಬಿ ಗಂಡ ಮಹಿಬೂಬ ಕವಾಲ್ದಾರ, 6] ಖಾಜಾಬಿ ಗಂಡ ಲಾಲಸಾಬ ಕವಾಲ್ದಾರ ಹಿಗೆಲ್ಲರು ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು ನಮಗೆ ತಡೆದು ನಿಲ್ಲಿಸಿ, ಏ ಸೂಳಿ ಮಕ್ಕಳ್ಯಾ ನಮಗೇ ಹೊಲ ಬಿಟ್ಟು ಕೊಡು ಅಂತಾ ಹೇಳತಿರಾ, ಇವತ್ತ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಅಂದು ಚಂದಾಸಾಬ ಈತನು ಬಡಿಗೆಯಿಂದ ನನ್ನ ಎಡಗೈ ಮೊಳಕೈ ಕೇಳಗೆ ಜೋರಾಗಿ ಹೊಡೆದು ಭಾರಿ ಗುಪ್ತಪೆಟ್ಟು ಪಡಿಸಿದನು, ನಂತರ ಬೆನ್ನಿನ ಮೇಲೆ ಬಲಗಾಲ ತೊಡೆಯ ಮೇಲೆ ಹೊಡೆದು ಗುಪ್ತ ಪೆಟ್ಟು ಪಡಿಸಿದನು, ನನ್ನ ಮಗ ರಜಾಕನಿಗೆ ಮಹಿಬೂಬ ಈತನು ಕಲ್ಲಿನಿಂದ ಎಡಹಣೆಗೆ ಹೊಡೆದು ರಕ್ತಗಾಯ ಪಡಿಸಿದನು, ಲಾಲಸಾಬ ಈತನು ಬಡಿಗೆಯಿಂದ ನನ್ನ ಮಗನ ಬೆನ್ನಿನ ಮೇಲೆ 2-3 ಸಲ ಹೊಡೆದು ಗುಪ್ತ ಗಾಯಪಡಿಸಿರುತ್ತಾನೆ, ಆ ಮೇಲೆ ಅದೇ ಬಡಿಗೆಯಿಂದ ನನ್ನ ಮಗನ ಎಡಗಾಲ ಮೇಲೆ ಹೊಡೆದಿರುತ್ತಾನೆ, ಆಗ ಜಗಳ ಬಿಡಿಸಲು ಬಂದ ನನ್ನ ಹೆಂಡತಿ ರೆಹಮಾನಬಿ ಇವಳಿಗೆ ರಸೂಲಬಿ ಇವಳು ಚೂಪಾದ ಕಲ್ಲಿನಿಂದ ಎಡಗೈಗೆ ಹೊಡೆದು ರಕ್ತಗಾಯಪಡಿಸಿದಳು, ನಂತರ ಖಾಜಾಬಿ ಇವಳು ಕೈಯಿಂದ ನನ್ನ ಹೆಂಡತಿ ಬೆನ್ನಿನ ಮೇಲೆ ಹೊಡೆ ಬಡೆ ಮಾಡಿರುತ್ತಾಳೆ, ರಸೂಲ ಇವನು ಈ ರಂಡಿ ಮಕ್ಕಳಿಗೆ ಇವತ್ತ ಬಿಡುವುದಿಲ್ಲಾ ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಕೈಯಿಂದ ನನ್ನ ತೊರಡಿನ ಹತ್ತಿರ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿರುತ್ತೇನೆ ಇಲ್ಲದಿದ್ದರೆ ನನಗೆ ಹೊಡೆದು ಖಲಾಸೆ ಮಾಡುತ್ತಿದ್ದನು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.