ಸರ್ಕಾರಿ
ಕರ್ತವ್ಯಕ್ಕೆ ಅಡ ತಡೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣ :
ಗ್ರಾಮೀಣ
ಠಾಣೆ : ದಿನಾಂಕ. 15-9-2018 ರಂದು ಪ್ರಕರಣದಲ್ಲಿ ಇಬ್ಬರು ಆಪಾದಿತರಾದ 1) ಗಣೇಶ ತಂದೆ
ನಾಮದೇವ ಜಮದಾರ ಸಾ- ಶಿವಾಜನಗರ ಕಲಬುರಗಿ. 2)
ಮಹಾಂತೇಶ ತಂದೆ ಯಶ್ವಂತಪ್ಪಾ ಊಡಗಿ ಸಾ- ಶಿವಾಜನಗರ ಕಲಬುರಗಿ ಇವರಿಗೆ ದಸ್ತಗೀರ ಮಾಡಿದ್ದು ದಸ್ತಗೀರ ಸಮಯದಲ್ಲಿ ಆಪಾದಿತರಿಗೆ ಕೂಲಂಕುಷವಾಗಿ
ವಿಚಾರಣೆ ಮಾಡಲಾಗಿ ಸದರಿ ಪ್ರಕರಣದ ಪ್ರಮುಖ ಆರೋಪಿ ನಾಗೇಶ ಊರ್ಪ ನಾಗರಾಜ ತಂದೆ ಕಲ್ಯಾಣಿ ಸಾ- ಶಿವಾಜಿನಗರ ಕಲಬುರಗಿ ಇತನ ಇರುವಿಕೆಯ ಬಗ್ಗೆ
ವಿಚಾರಣೆ ಮಾಡಿದಾಗ ಸದರಿ ಆಪಾದಿತನು ಆಳಂದ ರೋಡಿನ
ಬೋಸಗಾ ಕ್ರಾಸ ಸಮೀಪ ಒಂದು ಹಳೆ ಮನೆಯಲ್ಲಿ
ಇರುವದಾಗಿ ಮತ್ತು ಸದರಿಯವನ ಹತ್ತಿರ
ಮಾರಕಾಸ್ತ್ರಗಳು ಇರುವದಾಗಿ ಕೊಟ್ಟ ಖಚಿತ ಮಾಹಿತಿಯ ಸುಳಿವಿನ ಮೇರೆಗೆ ಸದರಿ ಮಾಹಿತಿಯನ್ನು ಮಾನ್ಯ
ಎಸ್.ಪಿ.ಸಾಹೇಬರು ಕಲಬುರಗಿ ಹಾಗೂ ಮಾನ್ಯ ಅಪರ ಎಸ್.ಪಿ.ಸಾಹೇಬರು ಕಲಬುರಗಿ ಮತ್ತು ಮಾನ್ಯ
ಡಿ.ಎಸ್.ಪಿ.ಸಾಹೇಬರು ಬಿ. ಉಪವಿಭಾಗ ಕಲಬುರಗಿ ಇವರಿಗೆ ಮಾಹಿತಿಯನ್ನು ತಿಳಿಸಿದ್ದು ನಂತರ ಮಾನ್ಯ
ಎಸ್.ಪಿ.ಸಾಹೇಬರು, ªÀiÁ£Àå ಅಪರ ಎಸ.ಪಿ.ಸಾಹೇಬರು ಕಲಬುರಗಿ ಹಾಗೂ ನಮ್ಮ ಡಿ.ಎಸ್.ಪಿ.ಸಾಹೇಬರ ಆದೇಶ ಮತ್ತು
ಮಾರ್ಗದರ್ಶನದಂತೆ ಸದರಿ ಆರೋಪಿತನ ದಸ್ತಗೀರ ಕುರಿತು
ನಾನು ಮತ್ತು ನನ್ನ ಜೊತೆಯಲ್ಲಿ ನಮ್ಮ
ಠಾಣೆ ಸಿಹೆಚಸಿ.220 ಮೋಹನಕುಮಾರ, ಸಿಪಿಸಿ.1239 ರಮೇಶ, ಸಿಪಿಸಿ. 1210 ಸಿದ್ರಾಮಯ್ಯಾ,
ಸಿಪಿಸಿ.557 ಆಶೀಫ್ ಮತ್ತು ಜೀಪ ಚಾಲಕ ಮಾಳಪ್ಪಾ
ಎ.ಪಿ.ಸಿ.383 ಎಲ್ಲರೂ ಕೂಡಿಕೊಂಡು ಸರಕಾರಿ ಜೀಪ ನಂ.ಕೆ.ಎ.32. ಜಿ.1029 ನೆದ್ದರಲ್ಲಿ ಇಂದು
ದಿನಾಂಕ. 16-9-2018 ರಂದು ಬೆಳಗ್ಗೆ 6-00 ಎ.ಎಂ.ಕ್ಕೆ. ಠಾಣೆಯಿಂದ ಬಿಟ್ಟು ಆಳಂದ ಚಕ್ಕ ಪೋಸ್ಟ
ಮಾರ್ಗವಾಗಿ ಆರೋಪಿತರ ನೀಡಿದ ಮಾಹಿತಿಯಂತೆ ಆಳಂದ
ರೋಡಿನ ಕೆರಿಬೋಸಗಾ ಕ್ರಾಸ ಸಮೀಪ ರೋಡಿನ ಪಕ್ಕದಲ್ಲಿ ನಮ್ಮ ಜೀಪನ್ನು
ನಿಲ್ಲಿಸಿ ಅಲ್ಲಿಯ ಜಮೀನದಲ್ಲಿರುವ ಹಳೆಯ ಫಾರ್ಮ
ಹೌಸಗಳನ್ನು ಶೋಧನೆ ಮಾಡುತ್ತಾ ಹೋಗುತ್ತಿರುವಾಗ ಕೊನೆಗೆ ಇರುವ ಒಂದು ಹಳೆಯ ಹಾಳುಬಿದ್ದ ಮನೆಯಲ್ಲಿ
ಯಾರೋ ಕೆಮ್ಮಿದಂತೆ ಸಪ್ಪಳ ಬಂದಾಗ ಆಗ ನಾನು ನನ್ನ ಸಿಬ್ಬಂದಿಯವರನ್ನು ಅರ್ಲಟ ಮಾಡಿ ಸದರಿ ಮನೆಯ
ಸುತ್ತುವರೆದು ಕಿಡಕಿಯಿಂದ ಇಣಿಕಿ ನೋಡಲಾಗಿ ಸದರಿ
ಮನೆಯಲ್ಲಿ ಒಬ್ಬ ವ್ಯಕ್ತಿ ಹಾಸಿಗೆ ಮೇಲೆ ಕುಳಿತಿದ್ದನು ಆತನನ್ನು ನೋಡಲಾಗಿ ಸದರಿ ವ್ಯಕ್ತಿ
ನಾಗೇಶ ಊರ್ಫ ನಾಗರಾಜ ಪೂಜಾರಿ ಇರುವದಾಗಿ ಖಾತ್ರಿ ಪಡಿಸಿಕೊಂಡು ಆಗ ನಾನು ಮತ್ತು ರಮೇಶ ,
ಸಿದ್ದರಾಮಯ ಕಿಡಕಿಯ ಹತ್ತಿರ ನಿಂತಿದ್ದು ಮತ್ತು
ಮನೆಯ ಬಾಗಿಲ ಹತ್ತಿರ ಮೊಹನ ಸಿಹೆಚಸಿ.220 ಮತ್ತು ಆಶೀಫ್. ಸಿಪಿಸಿ. 557 ನಿಂತಿದ್ದು ಆಗ ನಾನು ಸದರಿ ಆಪಾದಿತನಿಗೆ ನೀನು ಸಿದ್ದಾಜಿ ಇತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವಿ ಸರೆಂಡರ ಆಗು ಅಂತಾ ಹೇಳಿದಾಗ
ಸದರಿಯವನು ತನ್ನ ಹತ್ತಿರ ಇದ್ದ ಹರಿತವಾದ ಮಾರಕಾಸ್ತ್ರವನ್ನು ತೆಗೆದುಕೊಂಡು ಕಿಡಕಿಯ ಮುಖಾಂತರ
ಫರಾರಿಯಾಗಲು ನನಗೆ ನೂಕಿಸಿಕೊಟ್ಟಿದ್ದು ಆಗ ನಾನು
ಕೆಳಗೆ ಬಿದ್ದಾಗ ಆ ವೇಳೆಯಲ್ಲಿ ನಮ್ಮ ಸಿಬ್ಬಂದಿ
ರಮೇಶ ಸಿಪಿಸಿ 1239 ರವರು ಆತನಿಗೆ ಹಿಡಿಯಲು ಹೋದಾಗ ಆಪಾದಿತನು ತನ್ನ ಹತ್ತಿರ ಇದ್ದ ಮಾರಕಾಸ್ತ್ರದಿಂದ
ರಮೇಶನಿಗೆ ಹೊಡೆದಾಗ ಆತನು ತಪ್ಪಿಸಿಕೊಳ್ಳುವಾಗ ಆತನ ಬಲಗೈ ಮೋಳಕೈ ಮೇಲೆ ಭಾರಿ
ರಕ್ತಗಾಯವಾಗಿದ್ದು ಆಗ ನಮ್ಮ ಸಿಬ್ಬಂದಿಯವರ ಮತ್ತು ನನ್ನ ಆತ್ಮ ರಕ್ಷಣೆಗಾಗಿ ಆರೋಪಿತನಿಗೆ ಎಚ್ಚರಿಕೆ ನೀಡುವದಕ್ಕಾಗಿ ನನ್ನ ಸರ್ವಿಸ
ರಿವಾಲ್ವರದಿಂದ ಒಂದು ಸುತ್ತು ಗುಂಡನ್ನು ಗಾಳಿಯಲ್ಲಿ ಹಾರಿಸಿದ್ದು ಆಗ ಸಿದ್ರಾಮಯ್ಯಾ ಸಿಪಿಸಿ.1210
ಇತನು ಆರೋಪಿತನಿಗೆ ಹಿಡಿಯಲು ಹೋದಾಗ ಆತನಿಗೂ ಕೂಡಾ ಅದೇ ಆಯುಧದಿಂದ ಕೊಲೆ ಮಾಡುವ
ಉದ್ದೇಶದಿಂದ ಕುತ್ತಿಗೆಯ ಹತ್ತಿರ ಹೊಡೆಯಲು ಹೋದಾಗ ಸಿದ್ರಾಮಯ್ಯಾ ತಪ್ಪಿಸಿಕೊಂಡಾಗ ಆತನ
ಎಡಗೈ ರಟ್ಟೆಗೆ ತಗಲಿ ಭಾರಿ ರಕ್ತಗಾಯವಾಗಿದ್ದು ಆಗ ನಾನು ಹಲ್ಲೆ ಮಾಡಬೇಡಾ ಶರಣಾಗು ಅಂತಾ ಅವನಿಗೆ
ಎಚ್ಚರಿಕೆ ನೀಡಿ ಹೀಡಿಯವದಕ್ಕಾಗಿ ಆತನ
ಹಿಂದಿನಿಂದ ಅವನಿಗೆ ಬೆನ್ನು ಹತ್ತಿದ್ದಾಗ ಸದರಿ ಆಪಾದಿತ ನಾಗೇಶನು ಇತನು ನಮ್ಮ
ಸಿಬ್ಬಂದಿಯವರಾದ ಮೋಹನ ಮತ್ತು ಆಶೀಫ್ ಇವರಿಗೆ
ಹೋಡೆಯಲು ಓಡುತಿದ್ದಾಗ ಆಪಾದಿತನಿಗೆ ಶರಣಾಗು ಅಂತಾ ಮುನ್ನೆಚ್ಚರಿಕೆ ನೀಡಿದರೂ ಕೂಡಾ ಶರಣಾಗಲಿಲ್ಲಾ,ಸದರಿಯವನು
ನಮ್ಮ ಸಿಬ್ಬಂದಿಯರಿಗೆ ಕೊಲೆ ಮಾಡುತ್ತಾನೆ ಅನ್ನುವ ಬಗ್ಗೆ ಖಚಿತ ಪಡಿಸಿಕೊಂಡು ನನ್ನ
ಸಿಬ್ಬಂದಿಯವರ ಪ್ರಾಣ ರಕ್ಷಣೆ ಮಾಡುವ ಕುರಿತು ಫೈರಿಂಗ ಮಾಡುವದು ಅತೀ ಅವಶ್ಯಕತೆ ಕಂಡು
ಬಂದಿದ್ದರಿಂದ ಪ್ರಾಣ ರಕ್ಷಣೆ ಕುರಿತು ನನ್ನ ಸರ್ವಿಸ ರಿವಾಲ್ವರದಿಂದ ಒಂದು ಗುಂಡನ್ನು ಆರೋಪಿ
ನಾಗೇಶನ ಎಡಗಾಲಿಗೆ ಹೊಡೆದನು ಆದರೂ ಕೂಡಾ ಆಪಾದಿತ
ಎದ್ದು ಮುಂದೆ ಇದ್ದ ನಮ್ಮ ಸಿಬ್ಬಂದಿಯವರಾದ ಮೊಹನ
ಮತ್ತು ಆಶೀಫ ಇವರ ಹಲ್ಲೆ ಮಾಡಲು ಮುಂದಾಗಿದ್ದು
ಆಗ ಇನ್ನೊಂದು ಸುತ್ತು ರೌಂಡ್ಸ
ಆರೋಪಿಯ ಎಡಗಾಲಿಗೆ ಫೈರ ಮಾಡಿದನು ಆಗ
ಆತನು ಕೆಳಗೆ ಕುಸಿದು ಬಿದ್ದಾಗ ಎಲ್ಲರೂ ಕೂಡಿ
ಸುತ್ತುವರೆದು ಆತನಿಗೆ ವಶಕ್ಕೆ ತೆಗೆದುಕೊಂಡೆವು.ಆ
ನಂತರ ನಾನು ಮೊದಲು ಜಿಲ್ಲಾ ಕಂಟ್ರೂಲ್ ರೂಮಿಗೆ ನಂತರ ನಮ್ಮ ಡಿ.ಎಸ್.ಪಿ. ಬಿ. ಉಪವಿಭಾಗ ರವರಿಗೆ
ಘಟನೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ನಂತರ ಸದರಿ ಆರೋಪಿತ ನಾಗೇಶನಿಗೆ
ರಕ್ತಸ್ರಾವವಾಗುತಿರುವದರಿಂದ ನನ್ನ ಸರಕಾರಿ ಜೀಪನಲ್ಲಿ ಕೂಡಿಸಿ ಆಶೀಫ ಸಿಪಿಸಿ. 557 ರವರ
ಬೆಂಗಾವಲಿನಲ್ಲಿ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು
ಕಳುಹಿಸಿ ನಂತರ 108 ಅಂಬುಲೇನ್ಸ್ಗೆಗೆ ಮಾಹಿತಿ ತಿಳಿಸಿ ಆ. ನಂತರ ಗಾಯಗೊಂಡ ನನ್ನ
ಸಿಬ್ಬಂದಿವಯರಾದ ಸಿಪಿಸಿ. 1239 ರಮೇಶ ಹಾಗೂ ಸಿಪಿಸಿ. 1210 ಸಿದ್ರಾಮಯ್ಯಾ ಇವರಿಗೆ ಯುನೈಟೆಡ ಆಸ್ಪತ್ರೆಗೆ ಉಪಚಾರ ಕುರಿತು ಕಳುಹಿಸಿಕೊಟ್ಟಿದ್ದು
ಇರುತ್ತದೆ. ನನಗೂ ಕೂಡಾ ಬಲಗೈ ಮಣಿಕಟ್ಟಿನ ಹತ್ತಿರ ಗುಪ್ತ ಪೆಟ್ಟಾಗಿ ಬಾವು ಬಂದಿರುತ್ತವೆ. ಈ
ಘಟನೆಯು ಇಂದು ದಿನಾಂಕ 16-9-2018 ರಂದು ಬೆಳಿಗ್ಗೆ 6:40 ರಿಂದ 06:50 ಎ.ಎಂ.ದ ಅವಧಿಯಲ್ಲಿ
ಜರುಗಿರುತ್ತದೆ ನಾವು ಸರಕಾರಿ ಕರ್ತವ್ಯ ನಿರ್ವಹಿಸುವುದನ್ನು ತಡೆಯಲು
ಹಲ್ಲೆ ಮತ್ತು ಬಲ ಪ್ರಯೋಗ ಮಾಡಿ ಗಂಭೀರ ಸ್ವರೂಪದ ಗಾಯ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ಕಾನೂನು
ಬದ್ದವಾದ ದಸ್ತಗಿರಿಯನ್ನು ತಪ್ಪಿಸುವ ಸಲುವಾಗಿ ನನ್ನ ಮೇಲೆ ಮತ್ತು ನನ್ನ ಸಿಬ್ಬಂದಿವಯರಾದ
ಸಿಪಿಸಿ. 1239 ರಮೇಶ ಹಾಗೂ ಸಿಪಿಸಿ. 1210 ಸಿದ್ರಾಮಯ್ಯಾ ಇವರ ಮೇಲೆ ಮಾರಕಸ್ತ್ರದಿಂದ ಮರಣಾಂತಿಕ
ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದ ಆರೋಪಿ
ನಾಗೇಶ ಊರ್ಫ ನಾಗರಾಜ ತಂದೆ ಕಲ್ಯಾಣಪ್ಪಾ ಪೂಜಾರಿ ಸಾ-ಶಿವಾಜಿನಗರ ಕಲಬುರಗಿ ಇತನ ಮೇಲೆ ಕಾನೂನು
ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಸಂಗಮನಾಥ ತಂದೆ ಸಿದ್ದವೀರಯ್ಯಾ
ಹೀರೆಮಠ ಆರಕ್ಷಕ ನಿರೀಕ್ಷಕರು ಚೌಕ ಠಾಣೆ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು
ಪ್ರಕರಣ :
ನರೋಣಾ
ಠಾಣೆ : ಶ್ರೀ ಚಂದ್ರಕಾಂತ ತಂದೆ ಹೂನಾ ಚಿನ್ನಿ ರಾಠೋಡ ಸಾ||ವ್ಹಿ,ಕೆ,ಸಲಗರ ತಾಂಡಾ ರವರು 16 ವರ್ಷಗಳಿಂದ ವ್ಹಿ,ಕೆ,ಸಲಗರ ಗ್ರಾಮದಲ್ಲಿರುವ ಸರ್ದಾರ ತಂದೆ ಬಸಯ್ಯಾ ಗುತ್ತೆದಾರ
ಸಾ: ತಡಕಲ ರವರ ವಜ್ರೇಶ್ವರಿ ಮದ್ಯದ ಅಂಗಡಿಯಲ್ಲಿ ವ್ಯವಸ್ಥಾಪಕನಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದೆನೆ.
ನನ್ನಂತೆಯೆ ಈ ಮದ್ಯದ ಅಂಗಡಿಯಲ್ಲಿ ಸಿದ್ರಾಮಪ್ಪಾ ತಂದೆ ಬಸವಣಪ್ಪಾ ರಂಜೇರಿ ಸಾ: ಸುಕ್ರವಾಡಿ ಇವರು
ಸಹ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.ಪ್ರತಿ ದಿವಸ ಮುಂಜಾನೆ 9 ಗಂಟೆಗೆ ಮದ್ಯದ ಅಂಗಡಿ ತೆರೆದು ರಾತ್ರಿ 10 ಗಂಟೆಗೆ ಬಂದ ಮಾಡುತ್ತೆವೆ. ಅದರಂತೆ ದಿನಾಂಕ 14/09/2018 ರಂದು ಮುಂಜಾನೆ 9 ಗಂಟೆಗೆ ನಾನು ಮದ್ಯದ ಅಂಗಡಿಯನ್ನು ತೆಗೆದು ರಾತ್ರಿ 10 ಗಂಟೆಗೆ ಬಂದ ಮಾಡಿ ವಾಪಸ ನಮ್ಮ ತಾಂಡಾಕ್ಕೆ ಹೋಗಿರುತ್ತೆನೆ. ಮದ್ಯರಾತ್ರಿ
3 ಗಂಟೆಯ ಸುಮಾರಿಗೆ ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವವರಾದ ತುಳಜಪ್ಪಾ ಅಣಕಲ
ಸಾ: ವ್ಹಿ,ಕೆ,ಸಲಗರ ಇವರು ಫೊನಮಾಡಿ ನಮ್ಮ ಮದ್ಯದ ಅಂಗಡಿಯ ಬಾಗಿಲು ಕೊಂಡಿಯನ್ನು
ಯಾರೊ ಕಳ್ಳರು ಮುರಿದು ಮದ್ಯದ ಅಂಗಡಿಯಲ್ಲಿರುವ ಮದ್ಯದ ಬಾಕ್ಸಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು
ತಿಳಿಸಿದ ಮೇರೆಗೆ ನಾನು ಮತ್ತು ಇನ್ನೊರ್ವ ಮ್ಯಾನೇಜರ ಆದ ಸಿದ್ರಾಮಪ್ಪಾ ರಂಜೆರಿ ರವರು ಕೂಡಿ ನಸುಕಿನ
ಜಾವ 4 ಗಂಟೆಯ ಸುಮಾರಿಗೆ ನಾವು ಹೋಗಿ ನೋಡಲಾಗಿ ನಮ್ಮ ಮದ್ಯದ ಅಂಗಡಿಯ ಬಾಗಿಲಿನ
ಕೊಂಡಿ ಮುರಿದಿದ್ದು ನಾವಿಬ್ಬರು ಒಳಗೆ ಹೋಗಿ ನೋಡಿ ಚೆಕ ಮಾಡಲಾಗಿ ಅಂಗಡಿಯಲ್ಲಿದ್ದ ಮದ್ಯದ ಬಾಕ್ಸಗಳಲ್ಲಿ
5 ಬಾಕ್ಸ ಮದ್ಯದ ಬಾಕ್ಸಗಳನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೊಗಿದ್ದರು. ನಗದು ಹಣ ರಾತ್ರಿ ವೆಳೆಯಲ್ಲಿ
ಮದ್ಯದ ಅಂಗಡಿಯಲ್ಲಿ ಇಡುವದಿಲ್ಲಾ ಹೀಗಾಗಿ ಯಾವುದೇ ನಗದು ಹಣ ಕಳವು ಆಗಿರುವದಿಲ್ಲಾ. ದಿನಾಂಕ 14/09/2018 ರಂದು 11 ಪಿ,ಎಮ್,ದಿಂದ ದಿನಾಂಕ 15/09/2018 ರಂದು 2 ಎ,ಎಮ್, ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ನಮ್ಮ ಮಾಲಿಕರಾದ ಸರ್ದಾರ
ಇವರ ವಜ್ರೇಶ್ವರಿ ಮದ್ಯದ ಅಂಗಡಿಯ ಬಾಗಿಲ ಕೊಂಡಿ ಮುರಿದು ಒಳಗಡೆ ಇದ್ದ ಈ ಮೇಲೆ ನಮೂದಿಸಿದ ಒಟ್ಟು
22,094/-
ರೂಪಾಯಿ ಮೌಲ್ಯದ ಮದ್ಯದ ಬಾಟಲಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ಅಫಜಲಪೂರ
ಠಾಣೆ : ಶ್ರೀ ಸೈದಪ್ಪ ತಂದೆ ಶಿವಪ್ಪ ಹರೇಕುರುಬ ಸಾ: ಅಫಜಲಪೂರ ರವರ ಹೆಂಡತಿ ಈ ಕಳೆದ ಪುರಸಭೆ ಚುನಾವಣೆಯಲ್ಲಿ ಆರೋಪಿ ಜಕ್ಕಪ್ಪನ ಸೊಸೆಯ ವಿರುದ್ದ ಸ್ಪರ್ದಿಸಿ
ಚುಬನಾವನೆಯಲ್ಲ ಗೆದ್ದಿರುತ್ತಾಳೆ. ಚುನಾವಣೆಯಲ್ಲಿ ಆದ ವೈಶಮ್ಯದಿಂದ ಆರೋಪಿತರು ನಿನ್ನೆ ದಿನಾಂಕ 15-09-2018 ರಂದು 7:00 ಪಿ.ಎಮ್ ಕ್ಕೆ ಅಫಜಲಪೂರ
ಪಟ್ಟಣದ ಅಮೋಘಸಿದ್ದ ಗುಡಿಯ ಮುಂದೆ ಪಿರ್ಯಾದಿದಾರನಿಗೆ ಹಾಗೂ ಅವನ ಕಡೆಯವರಾದ ಮಲ್ಲಪ್ಪ ಮತ್ತು ಭೀಮಣ್ಣ
ಇವರಿಗೆ ಅತಿಕ್ರಮವಾಗಿ ಗುಂಪುಕಟ್ಟಿಕೊಂಡು ಎಲ್ಲರೂ ಏಕೊದ್ದೇಶದಿಂದ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ
ಹಾಗೂ ಬಡಿಗೆಯಿಂದ ಕಲ್ಲಿನಿಂದ ಹಲ್ಲೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯಗಳನ್ನು ಪಡಿಸಿ ಜಿವ ಬೆದರಿಕೆ
ಹಾಕಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment