POLICE BHAVAN KALABURAGI

POLICE BHAVAN KALABURAGI

12 September 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 11/09/2018 ರಂದು ಸಾಯಂಕಾಲ 07:30 ಗಂಟೆ ಸುಮಾರಿಗೆ ಮೃತ ಬಾಬರಮಿಯ್ಯಾ ಮತ್ತು ಮಹಮ್ಮದ ಆಸೀಫ ತಂದೆ ಮಹಮ್ಮದ ಇಸಾಕ ಇಬ್ಬರು ಕೂಡಿಕೊಂಡು ಹಿರೋ ಹೊಂಡಾ ಸ್ಪ್ಲೇಂಡರ್ ಮೋಟಾರ ಸೈಕಲ್ ನಂ ಕೆಎ-32 ಇಕೆ-5308 ನೇದ್ದರ ಮೇಲೆ ಗೌಂಡಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವ ಕುರಿತು ರಿಂಗ ರೋಡನ ಫೀರ ಬಂಗಾಲಿ ದರ್ಗಾದ ಹತ್ತಿರ ಬರುತ್ತಿದ್ದಾಗ ಅದೇ ವೇಳಗೆ ಹಿಂದುಗಡೆಯಿಂದ ಒಂದು ಮೋಟಾರ ಸೈಕಲ್ ನಂ ಕೆಎ-32 ಇಎಲ್-9340 ನೇದ್ದರ ಸವಾರನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮುಂದೆ ಹೋಗುತ್ತಿರುವ ಮೃತ ಬಾಬರಮಿಯ್ಯಾ ಮತ್ತು ಮಹಮ್ಮದ ಆಸೀಫ ಇಬ್ಬರು ಕೂಡಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲ್ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ ಸೈಕಲ್ ಸಮೇತ ರೋಡಿನ ಡಿವೈಡರ್ ಮೇಲೆ ಬಿದಿದ್ದರಿಂದ ಬಾಬರಮಿಯ್ಯಾ ಇತನಿಗೆ ಹಣೆಗೆ, ಮೂಗಿಗೆ, ಎಡಕಿವಿಗೆ, ಹಾಗು ಕಾಲು, ಕಯಗಳಿಗೆ ಭಾರಿ ಪ್ರಮಾಣದ ಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದು ,ಮಹ್ಮದ ಆಸೀಫನಿಗೆ ಮುಖಕ್ಕೆ ಕಿವಿಗೆ ತಲೆ ಹಿಂದುಗಡೆ ಭಾರಿ ಗಾಯವಾಗಿದ್ದು ಇರುತ್ತದೆ ಕಾರಣ ಮೋಟಾರ ಸೈಕಲ್ ನಂ ಕೆಎ-32 ಇಎಲ್-9340 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಜರುಗಿದ್ದು ಸದರಿ ಈ ಮೇಲ್ಕಂಡ ಮೋಟಾರ ಸೈಕಲ ಸವಾರನಿಗೆ ಪತ್ತೆ ಮಾಡಿ ಆತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಅಂತಾ ಶ್ರೀಮತಿ ತಬಸುಮ ಬೇಗಂ ಗಂಡ ಬಾಬರಮಿಯ್ಯಾ ಮು:ಉಮರಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಗುರುನಾಥಗೌಡ ತಂದೆ ಗೊಲ್ಲಾಳಪ್ಪಗೌಡ ಪಾಟೀಲ ಸಾ|| ಯಲಗೊಡ ತಾ|| ಜೇವರ್ಗಿ ರವರ ಮಗನಾದ ನಾನಾಗೌಡನ ಹೆಸರಿನಲ್ಲಿ ನಮ್ಮೂರ ಸಿಮಾಂತರದಲ್ಲಿ ಹೊಲಗಳಿದ್ದು, ಅದರ ಸರ್ವೆ ನಂ 116, 119 ನೇದ್ದರಲ್ಲಿ 6 ಎಕರೆ ಜಮೀನು ಇರುತ್ತದೆ, ಹೊಲದ ಸಲುವಾಗಿ ನನ್ನ ಮಗ ಜೇವರ್ಗಿ ಎಸ್.ಬಿ.ಐ ಬ್ಯಾಂಕನಲ್ಲಿ ಸುಮಾರು 2 ಲಕ್ಷ ರೂ, ನಮ್ಮುರ ಸೋಸೈಟಿಯಲ್ಲಿ 1 ಲಕ್ಷ ರೂ ಮತ್ತು ಡಿಸಿಸಿ ಬ್ಯಾಂಕನಲ್ಲಿ 7 ಲಕ್ಷ ರೂ ಹಾಗೂ ಖಾಸಗಿಯಾಗಿ 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು, ನನ್ನ ಮಗ ಆಗಾಗ ನಮ್ಮ ಮುಂದೆ ನಮಗೆ ಸಾಲ ಬಹಳಾಗಿದೆ, ಈ ಸಲ ಮಳೆ ಬರದೇ ಇದ್ದಿದ್ದರಿಂದ ಹೊಲದಲ್ಲಿ ಬೆಳೆಯು ಸಹ ಸರಿಯಾಗಿ ಬೆಳೆದಿಲ್ಲಾ, ಊರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಸತ್ತರೆ ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದನು, ಆಗ ನಾವು ಅವರಿಗೆ ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 10-09-2018 ರಂದು 4;00 ಪಿ.ಎಮ ಕ್ಕೆ ಸುಮಾರಿಗೆ ನನ್ನ ಮಗ ಮನೆಯಲ್ಲಿ ಯಾವುದೋ ಕ್ರಿಮಿನಾಶಕ ವಿಷ ಸೇವನೆ ಮಾಡಿ ಒದ್ದಾಡುತ್ತಿದ್ದನು, ಆಗ ನಾನು ಮತ್ತು ನನ್ನ ಸೊಸೆ ಶ್ರೀದೇವಿ, ಹಾಗು ನಮ್ಮ ಅಣ್ಣತಮ್ಮಕಿಯ ದುಂಡಪ್ಪಗೌಡ ತಂದೆ ಮಲ್ಲಿನಾಥಗೌಡ ಪಾಟೀಲ ರವರು ಕೂಡಿ ಒಂದು ಖಾಸಗಿ ವಾಹನದಲ್ಲಿ ನನ್ನ ಮಗನಿಗೆ ಹಾಕಿಕೊಂಡು ದವಾಖಾನೆಗೆ ಯಡ್ರಾಮಿಗೆ ಬರುವಾಗ ಮಾರ್ಗ ಮದ್ಯದಲ್ಲಿ ಕುಕ್ಕನೂರ ಕ್ರಾಸ್ ಹತ್ತಿರ ಅಂದಾಜ 5;00 ಪಿ.ಎಂ ಸುಮಾರಿಗೆ ನನ್ನ ಮಗ ಮೃತ ಪಟ್ಟರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 September 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ 06.09.2018  ರಂದು  ಕಲಬುರಗಿ ನಗರದ ಸುಪರ್ ಮಾರ್ಕೇಟನ ಎಸ್,ಬಿ.ಹೆಚ್ ಬ್ಯಾಂಕ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ದೈವದ್ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ, ಮಾನ್ಯ ಎಸ್.ಪಿ ಕಲಬುರಗಿ, ಮಾನ್ಯ ಪೊಲೀಸ ಉಪಾಧೀಕ್ಷಕರು (ಬಿ) ಉಪ-ವಿಭಾಗ ಕಲಬುರಗಿರವರ ಮಾರ್ಗದರ್ಶನದಲ್ಲಿ ಶ್ರೀ. ಕಪೀಲದೇವ  ಪಿ.ಐ  ಡಿ.ಸಿ.ಬಿ ಘಟಕ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕಲಬುರಗಿ ನಗರದ ಎಸ್.ಬಿ.ಹೆಚ್ ಬ್ಯಾಂಕನ ಹತ್ತಿರ ಹೋಗಿ ಕಂಪೌಂಡ ಗೋಡೆಯ ಮರೆಯಲ್ಲಿ ದೂರದಲ್ಲಿ ಜೀಪ ನಿಲ್ಲಿಸಿ ನಾವು ಜೀಪನಿಂದ ಇಳಿದು ಸ್ವಲ್ಪ ನಡೆದು ಹೋಗಿ ಸದರಿ ಸ್ಥಳಕ್ಕೆ ತಲುಪಿ ಗೋಡೆಯ  ಮರೆಯಲ್ಲಿ ನಿಂತು ನೋಡಲು ಖುಲ್ಲಾ ಜಾಗೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಕಂಬದ ಬೆಳಕಿನಲ್ಲಿ 3-4 ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ 100 ರೂಪಾಯಿ ಬಾಹರ 100 ರೂಪಾಯಿ ಅಂತಾ ಇಸ್ಪೇಟ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ 4 ಜನರನ್ನು ಹಿಡಿದುಕೊಂಡಿದ್ದು ಆಗ ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಲು ತಮ್ಮ ಹೆಸರುಗಳು 1) ಸುನೀಲ ಕುಮಾರ ತಂದೆ ಭಿಮಣ್ಣ ಸಾ: ರಾಮ ನಗರ ಹುಮನಬಾದ ರಿಂಗ ರೋಡ ಕಲಬುರಗಿ 2) ಸುಜೀತಕುಮಾರ ತಂದೆ ಶಂಬುಲಿಂಗಪ್ಪ 3) ಮಹಾನಿಂಗಪ್ಪ ತಂದೆ ಶಿವಶರಣಪ್ಪ ಸಾ: ರಾಮ ನಗರ ಹುಮನಾಬಾದ ರಿಂಗರೋಡ ಕಲಬುರಗಿ 4) ಬಸವರಾಜ ತಂದೆ ಭಗವಂತಪ್ಪ ಸಾ: ಬಸವೇಶ್ವರ ಕಾಲನಿ ಕಲಬುರಗಿಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 13930/-ರೂ ಹಾಗೂ 52 ಇಸ್ಪೆಟ್ ಎಲೆಗಳು ದೊರೆತ್ತಿದ್ದು. ಅವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಬ್ರಹ್ಮಪುರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.:
ನರೋಣಾ ಠಾಣೆ : ದಿನಾಂಕ 06-09-2018 ರಂದು  ನರೋಣಾ ಪೊಲೀಸ್ ಠಾಣೆ ಯ ವ್ಯಾಪ್ತಿಯ  ಕಮಲಾನಗರ  ಗ್ರಾಮದ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ  ಇಸ್ಪೀಟ ಜೂಜಾಟ ನಡೆದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ನರೋಣಾ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಗೆ ಸ್ಥಳಕ್ಕೆ ಹೋಗಿ ಜೂಜಾಟ ನಡೆದ ನಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ 7 ಜನರನ್ನು  ವಶಕ್ಕೆ ಪಡೆದು  ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಪರುಶರಾಮ ತಂದೆ ಗುರಣ್ಣಾ ಪೂಹಾರಿ ಸಾ : ಬೋದನ ವಾಡಿ 2)  ರುದ್ರಶೆಟ್ಟಿ ತಂದೆ ಮಡಿವಾಳಪ್ಪಾ ಪಾಟೀಲ ಸಾ : ಬೋದನ ವಾಡಿ 3) ಶಿವರಾಜ ತಂದೆ ಶ್ರೀಮಂತರಾಯ ಬಾಬನಿ ಸಾ ಕಮಲನಗರ 4) ಪ್ರದೀಪಕುಮಾರ ತಂದೆ ಶಿವಶರಣಪ್ಪಾ ಕುಂಬಾರ ಸಾ : ಕಮಲನಗರ 5) ಬಸವರಾಜ ತಂದೆ ಗುರಲಿಂಗಪ್ಪಾ ಮುನ್ನಳ್ಳಿ  ಸಾ : ಸಾವಳಗಿ ಕೆ 6) ಚನ್ನವೀರ ತಂದೆ ಚಂದ್ರಶಾ ರೋಲೆ ಸಾ : ತೋಳನ ವಾಡಿ 7) ಶಿವಶಂಕರ ತಂದೆ ರಾಜು ಬಿರಾದರ ಸಾ ಬೋದನ ವಾಡಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 3500/- ರೂ ಹಾಗು 52 ಇಸ್ಪೀಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ ಮಹಿಬೂಬ ತಂದೆ ಮೆಹತಾಬಸಾಬ ಅತ್ತಾರ ಸಾ ಬೆಳಂಬಗಿ ರವರು ತಮ್ಮ ಜಾಗೆಯಲ್ಲಿ ಬಾತ್ರರೂಂ ಮತ್ತು ಸಂಡಾಸ ರೂಂ ಕಟ್ಟಿಸುತ್ತಿರುವುದರಿಂದ ಮುರಂ ತರಿಸಿ ನಮ್ಮೂರಿನ ರಮೇಶ ತೋಳನೂರೆ ಇವರ ಕಿರಾಣಿ ಅಂಗಣಿಯ ಮುಂದೆ ಇರುವ ರಸ್ತೆಯ ಮೇಲೆ ಹಾಕಿಸಿದ್ದಲ್ಲಿ ಅಲ್ಲಿಯಿಂದ ನಮ್ಮ ಪ್ಲಾಟಿಗೆ (ಜಾಗೆಗೆ) ತಂದು ಹಾಕಲು ನಮ್ಮೂರಿನ ಹಣಮಂತ ತಂದೆ ನಿಂಗಪ್ಪ ಮೋಟೆ ಇವರಿಗೆ ಕೂಲಿ ಕೆಲಸಕ್ಕೆ ಹೇಳಿದ್ದು ಅದರಂತೆ ಸದರಿ ಹಣಮಂತ ಇವರು ನಿನ್ನೆ ದಿನಾಂಕ:05/09/2018 ರಂದು ಮಧ್ಯಾಹ್ನ 2-30 ಗಂಟೆ ಸುಮರಿಗೆ ಸದರಿ ರಮೇಶ್ ಇವರ ಮನೆಯ ಮುಂದೆ ಹಾಕಿದ ನಮ್ಮ ಮುರಂನ್ನು ತುಂಬುತ್ತಿರುವಾಗ ನಮ್ಮೂರಿನ ಶರಣಪ್ಪಾ ತಂದೆ ವಿಠಲ್ ತಿಮ್ಮಾಜಿ ಹಾಗೂ ಶರಣಪ್ಪ ತಂದೆ ಹಣಮಂತರಾಯ ಹಳಕೆ ಇವರುಗಳು ಕೂಡಿ ಹಣಮಂತ ಇವರೊಂದಿಗೆ ನಕರಿ ಮಾಡುತ್ತಾ ಕೆಲಸಕ್ಕೆ ಅಡೆತಡೆ ಮಾಡುತ್ತಿದ್ದುದರಿಂದ ನಾನು ಅವರಿಗೆ ಕೆಲಸ ಮಾಡುವರಿಗೆ ತೊಂದರೆ ಕೊಡಬೇಡವೆಂದು ಹೇಳುತ್ತಿರುವಾಗ ಸದರಿ ಶರಣಪ್ಪಾ ತಿಮ್ಮಾಜಿ, ಶರಣಪ್ಪ ಹಳಕೆ ಹಾಗೂ ಅಲ್ಲಿಯೇ ಇದ್ದ ಶಾಂತಪ್ಪಾ ರವಿ ಮೋಟೆ ಇವರುಗಳು ಕೂಡಿಕೊಂಡು ಬಂದು ಅವರಲ್ಲಿ ಶರಣಪ್ಪಾ ತಿಮ್ಮಾಜಿ ಇವನು ನನಗೆ ನೀನು ಯಾವಅಲೆ ಬೋಸಡಿ ಮಗನೆ ಕೇಳುವನು ಎಂದು ಅವಾಚ್ಯವಾಗಿ ಬೈಯುತ್ತಾ ನನ್ನೊಂದಿಗೆ ಜಗಳಕ್ಕೆ ಬಿದ್ದು ಶರಣಪ್ಪಾ ಹಳಕೆ ಹಾಗೂ ಶಾಂತಪ್ಪಾ ಮೋಟೆ ರವರು ನನಗೆ  ಒತ್ತಿಹಿಡಿದಿದ್ದು ಶರಣಪ್ಪಾ ತಿಮ್ಮಾಜಿ ಇವನು ನನಗೆ ಅಲ್ಲಿಯೇ ಪಕ್ಕದಲ್ಲಿಯೇ ಇದ್ದ ಸುತ್ತಿಗೆ ತಗೆದುಕೊಂಡು ನನ್ನ ತಲೆಗೆ ಮತ್ತು ಎಡಗಡೆ ಮಗ್ಗಲಿಗೆ ಹೊಡೆದಿದ್ದರಿಂದ ತಲೆಗೆ ರಕ್ತಗಾಯವಾಗಿದ್ದು ನಂತರ ಶರಣಪ್ಪಾ ಹಳಕೆ ಮತ್ತು ಶಾಂತಪ್ಪಾ ಮೋಟೆ ರವರುಗಳು ಕೈಯಿಂದ ಬೆನ್ನಮೇಲೆ ಹೊಡೆಯುತ್ತಿರುವಾಗ ಅಲ್ಲಿಯೇ ಇದ್ದ ನಮ್ಮೂರಿನ ರಮೇಶ ತಂದೆ ಶರಣಪ್ಪಾ ತೋಳನೂರೆ, ಮಲ್ಲಪ್ಪ ಸಜ್ಜನ ಮತ್ತು ಹಣಮಂತ ತಂದೆ ನಾಗಪ್ಪಾ ಮೋಟೆ ರವರುಗಳು ಕೂಡಿ ಜಗಳ ನೋಡಿ ಬಿಡಿಸಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋನಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಅಬ್ದುಲ ಖುದ್ದುಸ ತಂದೆ ಅಬ್ದುಲ ಗಫೂರ  ಸಾ:ಮಹಡಿ ಮೊಹಲ್ಲಾ ಕಲಬುರಗಿ ಇವರು ಬ್ರಹ್ಮಪೂರ ಬಡಾವಣೆಯ .ನಂ.127/1 (ಭಾಗ) ಪ್ಲಾಟ ನಂ.61 ಮಹಾನಗರ ಪಾಲಿಕೆ ನಂ:11-1041/127/1ಪಿ/61 ಇದನ್ನು ಶ್ರೀ ಬಾಬುರಾವ ತಂ: ಧೋಂಡಿಬಾ ಇವರ ಕಡೆಯಿಂದ ಖರೀದಿಸಿದ ಅದಕ್ಕೆ ಸಂಬಂಧಿಸಿದ ಖರೀದಿ ನೋಟರಿ ಪತ್ರ ಸಂ:17.7.2018 ರಂತೆ ಬರೆಸಿಕೊಂಡಿರುತ್ತೇನೆ. ಅದು ಕಟ್ಟಡವಾದ ಸ್ಥಳವಾಗಿರುತ್ತದೆ. ಆದರೆ ಸದರಿ ಪ್ಲಾಟಿಗೆ ಸಂಬಂಧ ಇಲ್ಲದ ಮೇಲೆ ತಿಳಿಸಿದ ದಿಗಂಬರ ಕುಕ್ ಶಾದಾಬಾ (ಸೆಲ್‌‌ ನಂ: 9845609499), ಶಿವು ಯಲಗಾರ (ಸೆಲ್ ನಂ:8867736477) ಒಬ್ಬ ಸ್ತ್ರೀ, ಕಲಿಯಾರ್ (ಸೆಲ್ ನಂ: 9972786724) ಯುಸುಫ್ ಮತ್ತು ಶಾಕೀರ ಇವರೆಲ್ಲರೂ ಕೂಡಿ ಸದರಿ ಜಾಗದಲ್ಲಿ ದಾದಾಗಿರಿ ಮಾಡುತ್ತಾ ಕೈಯಲ್ಲಿ ಚಾಕು ಚೂರಿ, ಕಟ್ಟಿಗೆ ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ನೀವು ಪ್ಲಾಟಿನ ವಿಷಯಕ್ಕೆ ಬಂದರೆ ನಿಮ್ಮ ಜೀವ ತೆಗೆಯುತ್ತೇವೆ ಎಂದು ಜೀವದ ಭಯ ಒಡ್ಡುತ್ತಿದ್ದಾರೆ. ಅಲ್ಲದೆ ಯುಸುಫ್ ಮತ್ತು ಶಾಕೀರ ಎಂಬುವರು ದಿ:31.8.2018 ಸಮಯ ಮಧ್ಯಾನ 1.00 ಗಂಟೆಗೆ ಹಾಗೂ ದಿಗಂಬರ ಶಿವು ಯಲಗಾರ ಒಬ್ಬ ಸ್ತ್ರೀ ಕಲಿಯರಾ ಇವರು ಸಹ ಬಂದು ಬೊರವೆಲ್ ವಾಹನ ನ್ನು ತೆಗೆದುಕೊಂಡು ಬಂದು ಅಲ್ಲಿ ಬೊರವೆಲ್‌‌ ಹಾಕಲು ಯತ್ನಿಸುತ್ತಿದ್ದಾರೆ. ನಾವು ಎಷ್ಟು ಹೇಳಿದರು ಕೇಳುತ್ತಿಲ್ಲ. ಇದರಿಂದ ನಮ್ಮ ಜೀವಕ್ಕೆ ತುಂಬಾ ಅಪಾಯವಿದ್ದು ನಮ್ಮ ಹತ್ತಿರ 1995 ಪೇಪರ ಇದ್ದರೆ ಅವರು 2005 ದಾಖಲೆಗಳು ಪಡೆದುಕೊಂಡು ಬಂದು ಭಯ ಹಾಕುತ್ತಿದ್ದಾರೆ ನೀವು ಇತ್ತ ಕಡೆ ಬಂದರೆ ನಿಮಗೆ ಬಿಡುವುದಿಲ್ಲವೆಂದು ಭಯ ಒಡ್ಡುತ್ತಿದ್ದಾರೆ. ಪ್ರಯುಕ್ತ ಮಾನ್ಯರು ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನಿಜವಾದ ದಾಖಲಾತಿಗಳನ್ನು ತಾವು ಪರಿಶೀಲಿಸಿ ಸದರಿ ದಾಖಲಾತಿಗಳ ಪ್ರಕಾರ ಅವರು ಮುಂದೆ ಪ್ಲಾಟನ ವಿಷಯಕ್ಕೆ ಬರದಂತೆ ಸೂಕ್ತ ಕ್ರಮ ಕೈಕೊಂಡು ನನಗೆ ಅವರಿಂದ ತಮ್ಮ ರಕ್ಷಣೆ ಹಾಗೂ ನ್ಯಾಯ ಒದಗಿಸಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

06 September 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಶಂಕ್ರೆಮ್ಮ ಗಂಡ ಬಸವರಾಜ ಸಾ : ಭಾರತ ಕಾಲೂನಿ ಹುಮನಾಬಾದ ಕಲಬುರಗಿ ರವರ ಗಂಡ  ಬಸವರಾಜ ತಂದೆ ನಿಂಗಪ್ಪಾ ಹೊಡೆಲ್ ರವರು ಕಲಬುರಗಿಯ ಟಿ.ಎ.ಪಿ.ಸಿ.ಎಂ. ಗಂಜ ಕಾರ್ಯಾಲಯದಲ್ಲಿ ಮ್ಯಾನೇಜರೆಂದು ಸುಮಾರು ವರ್ಷಗಳಿಂದ ಸರಕಾರಿ ನೌಕರಿ ಮಾಡಿಕೊಂಡಿರುತ್ತಾರೆ. ನನಗೆ ಮಕ್ಕಳಾಗದ ಕಾರಣ ಸೇಡಂ ತಾಲೂಕಿನ ನನ್ನ ಗಂಡನ ಅಕ್ಕನ ಮಗಳಾದ ಗಾಯತ್ರಿ ಇವಳೊಂದಿಗೆ ಮದುವೆಯಾಗಿದ್ದು ಅವಳಿಗೂ ಕೂಡ ಮಕ್ಕಳಾಗಿರುವದಿಲ್ಲಾ. ನಾನು ಮತ್ತು ನನ್ನ ತಂಗಿ ಗಾಯತ್ರಿ ಹಾಗೂ ನನ್ನ ಗಂಡ ಬಸವರಾಜ ಹೊಡೆಲ ಹಾಗೂ ಗಾಯತ್ರಿಯ ಅಕ್ಕನ ಮಗ ಮಣಿಕಂಠ ವಯಸ್ಸು 10 ವರ್ಷದವನಿದ್ದು ಎಲ್ಲರೂ ಒಂದು ಮನೆಯಲ್ಲಿ ಭಾರತ ಕಾಲೂನಿಯಲ್ಲಿ ವಾಸವಾಗಿರುತ್ತೇವೆ. ನನ್ನ ಗಂಡ ಬಸವರಾಜ ಇವರು ಪ್ರತಿ ದಿವಸ ಅವರಾದ (ಬಿ) ಸೀಮಾಂತರದ ನಮ್ಮ ಹೊಲಕ್ಕೆ ಬಂದು ಹೋಗುತ್ತಾ  ಇದ್ದರು ಇಂದು ದಿನಾಂಕ. 5-9-2018 ರಂದು ಬೆಳಗ್ಗೆ 7-30 ಸುಮಾರಿಗೆ ನನ್ನ ಗಂಡ ಬ ಸ ವ ರಾಜ ಇವರು ಹೊಲದಲ್ಲಿ ಹುಲ್ಲಿಗೆ  ಹೊಡೆಯುವ ಕ್ರಿಮಿನಾಶಕ ಔಷಧ ಕೊಟ್ಟು ಬರಲು ಹೊಲಕ್ಕೆ ಹೋಗಿ ಆಳು ಮನುಷ್ಯ ಶಿವಕುಮಾರ ಮಠಪತಿ ಇತನಿಗೆ ತಿಳಿಸಿ ಬರುತ್ತೇನೆಂದರೆ ಮನೆಯಿಂದ ಅವರಾದ(ಬಿ) ಗ್ರಾಮಕ್ಕೆ ಕಾರಿನಲ್ಲಿ ಹೋದರು  ಬೆಳಗ್ಗೆ 10-00 ಗಂಟೆಯ ಸುಮಾರಿಗೆ ನಮ್ಮ ಅಣ್ಣತಮಕಿಯ  ತಮ್ಮನಾದ  ಶಿವರಾಜ ತಂದೆ ನಾಗೀಂದ್ರಪ್ಪಾ ಮಾಲಿಪಾಟೀಲ್   ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ ನನ್ನ ಗಂಡ ಬಸವರಾಜನಿಗೆ ಯಾರೋ ದುಷ್ಕರ್ಮೀಗಳು ಯಾವುದೋ ದುರುದ್ದೇಶದಿಂದ ಮಾರಕ ಅಸ್ತ್ರದಿಂದ ಹೊಡೆದು ಕೊಲೆ ಮಾಡಿರುತ್ತಾರೆ ಶವ ಸ್ಥಳದಲ್ಲಿಯೇ ಅಂದರೆ ನಮ್ಮ ಕಬ್ಬಿನ ಹೊದ ಬಂದಾರಿಯ ಹತ್ತಿರ ಬಿದ್ದಿರುತ್ತದೆ ಅಂತಾ ತಿಳಿಸಿದರು . ಆಗ ಗಾಬರಿಗೊಂದು ನಾನು ಮತ್ತು ನನ್ನ ತಂಗಿ ಗಾಯತ್ರಿ ಹಾಗೂ ನನ್ನ ಅಕ್ಕ  ಚಂದಮ್ಮಾ ಅವಳ ಗಂಡ ಕಲಪ್ಪಾ ಓಗಿ ನಾಲ್ಕು ಜನ ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನಿಗೆ ತಲೆಯ ಮೇಲೆ ಹಾಗೂ ಬಲಗಣ್ಣಿ ಹುಬ್ಬಿನ ಮೇಲ ಭಾಗದಲ್ಲಿ ಹರಿತವಾದ ಮಾರಕ ಅಸ್ತ್ರಗಳಿಂದ  ಹೊಡೆದು ಭಾರಿ ರಕ್ತಗಾಯ ಮತ್ತು ಬಲಗಲ್ಲಕ್ಕೆ ರಕ್ಕಗಾಯವಾಗಿ ಮೂಗಿನಿಂದ  ಮತ್ತು ಬಾಯಿಯಿಂದ ರಕ್ತ ಸ್ರಾವವಾಗುತ್ತಾ ಇತ್ತು . ಆಗ ಅಲ್ಲಿಯೇ ಹಾಜರಿದ್ದ  ಆಳು ಮನುಷ್ಯ ಶಿವಕುಮಾರ ಮಠಪತಿ ಮತ್ತು ಪಕ್ಕದ ಹೊಲದ ಆಳು ಮನುಷ್ಯ ಸುಭಾಶ ಮಾಳಪ್ಪಾ ಪೂಜಾರಿ  ಇವರಿಗೆ ವಿಚಾರಿಸಿದ್ದು ನನ್ನ ಗಂಡನ ಶವವು ಬಿದಿದ್ದನ್ನು ಮೊದಲು ನೋಡಿ ಎಲ್ಲರಿಗೂ ಮಾಹಿತಿ ತಿಳಿಸಿರುವದಾಗಿ ಹೇಳಿದರು. ದಿನಾಂಕ. 5-9-2018 ರಂದು 8-30 ಎ.ಎಂ.ದಿಂದ 9-30 ಎ.ಎಂ.ದ ಮದ್ಯದ ಅವಧಿಯಲ್ಲಿ ನಮ್ಮ ಕಬ್ಬಿನಶಿರಂಜಿ ಹೊಲದ ಬಂದಾರಿ ಹತ್ತಿರ  ನನ್ನ ಗಂಡ ಬಸವರಾಜ ಹೊಡಲ್ ಇವರಿಗೆ ಯಾರೋ ದುಷ್ಕರ್ಮೀಗಳು ಯಾವುದೋ ದುರುದ್ದೇಶದಿಂದ  ಮಾರಕ ಅಸ್ತ್ರಗಳಿಂದ ಹೊಡೆದು ಭಾರಿಗಾಯಗೊಳಿಸಿ ಕೊಲೆ ಮಾಡಿ ಹೋಗಿದ್ದು  ಸದರಿ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚುವ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿಒ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 05-09-2018 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀ ಮಾರುತಿ ಎಎಸ್ ಐ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮಲ್ಲಿಕಾರ್ಜುನ ಗುಡಿ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ ನಿಂಗಪ್ಪ ತಂದೆ ಸಿದ್ದಣ್ಣ ಬಡಿಗೇರ ಸಾ||ಮಲ್ಲಿಕಾರ್ಜುನ ಚೌಕ ಫಜಲಪೂರ  ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋಧನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2800/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ಮುಧೋಳ ಠಾಣೆ : ಗುರಪ್ಪ ತಂದೆ ಭೀಮಪ್ಪ ಹೂಗಾರ ಸಾ: ಮೊತಕಪಲ್ಲಿ ಗ್ರಾಮ ನತತ್ಉ  ಶಂಕರ ತಂದೆ ಭೀಮಪ್ಪ ಹೂಗಾರ ಸಾ: ಮೊತಕಪಲ್ಲಿ ಗ್ರಾಮ ರವರು ಒಂದೇ ಮನೆಯಲ್ಲಿದ್ದು ಮನೆಯ ಪಾಲಿನ ವಿಷಯದಲ್ಲಿ ತಂಟೆ ತಕರಾರು ಮಾಡಿಕೊಂಡು ಆರೋಪಿತನು ಫಿರ್ಯಾದಿಗೆ ಅಕ್ರಮವಾಗಿ ತಡೆದು ನಿಲ್ಲಸಿ ಕೈಯಿಂದ ಹೊಡೆ ಬಡೆ ಮಾಡಿದ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ  ಶಂಕರ ತಂದೆ ಭೀಮಪ್ಪ ಹೂಗಾರ ಸಾ: ಮೊತಕಪಲ್ಲಿ ಗ್ರಾಮ ಮತ್ತು  ಗುರಪ್ಪ ತಂದೆ ಭೀಮಪ್ಪ ಹೂಗಾರ  ಸಂ: ಇನ್ನೂ ಇಬ್ಬರು  ಸಾ: ಮೊತಕಪಲ್ಲಿ ಗ್ರಾಮ  ರವರು ಒಂದೇ ಮನೆಯಲ್ಲಿದ್ದು ಮನೆಯ ಪಾಲಿನ ವಿಷಯದಲ್ಲಿ ತಂಟೆ ತಕರಾರು ಮಾಡಿಕೊಂಡು ಆರೋಪಿತರು ಫಿರ್ಯಾದಿಗೆ ಅಕ್ರಮವಾಗಿ ತಡೆದು ನಿಲ್ಲಸಿ ಕೈಯಿಂದ ಹೊಡೆ ಬಡೆ ಮಾಡಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಗೆ ಬೆಂಕಿ ಹತ್ತಿ ಲುಕ್ಸಾನ ಅದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮ ತಂದೆ ವಿಠ್ಠಲ ಸಿಂಗೆ ಸಾ||ಬಳೂರ್ಗಿ ತಾ||ಅಫಜಲಪೂರ ರವರು ಬಳೂರ್ಗಿ ಗ್ರಾಮದದ ಹರಿಜನ ವಾಡದಲ್ಲಿ ನಮ್ಮ ಮನೆ ಫತ್ರಾಸ ಸಡ್ಡಿನದು ಇರುತ್ತದೆ ಸದರಿ ಸಡ್ಡಿನಲ್ಲಿ ನಾನು ನನ್ನ ಹೆಂಡತಿಯಾದ ರೇವಮ್ಮಾ ಇಬ್ಬರು ವಾಸವಾಗಿರುತ್ತೇವೆ ನಮ್ಮ ಇಬ್ಬರು ಗಂಡು ಮಕ್ಕಳು ಬಾಂಬೆಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ ನಮ್ಮ ಸಡ್ಡಿನಲ್ಲಿ ಎರಡು ಹಿಟ್ಟಿನ ಗಿರಣಿ, ಒಂದು ಕಾರಕುಟ್ಟುವ ಮಸೀನ್ , ಶಾವಗಿ ಮಶಿನ ಇಟ್ಟುಕೊಂಡು ಅದೇ ದೈನಂದಿನ ಕೆಲಸ ಮಾಡಿಕೊಂಡಿರುತ್ತೇವೆ ದಿನಾಂಕ 30/08/2018 ರಂದು ಬೆಳಿಗ್ಗೆ ನಾನು ನನ್ನ ಹೆಂಡತಿ ಇಬ್ಬರು ನಮ್ಮ ಫತ್ರಾಸ ಸಡ್ಡ ಮುಚ್ಚಿಕೊಂಡು ನಮ್ಮ ಬಳೂರ್ಗಿ ಗ್ರಾಮದಲ್ಲಿ ಹೋದಾಗ 12.30 ಪಿಎಮ್ ಸುಮಾರಿಗೆ ನಮ್ಮ ಓಣಿಯ ಶೈಲಶ್ರೀ ಗಂಡ ವಿಠ್ಠಲ ದೊಡ್ಮನಿ ಇವರು ನನಗೆ ಕಾಲ್ ಮಾಡಿ ತಿಳಿಸಿದ್ದೆನೆಂದರೆ   ನಿಮ್ಮ ಫತ್ರಾಸ ಸಡ್ಡಿನಲ್ಲಿ ಬೆಂಕಿ ಹತ್ತಿದೆ ಬೆಗ ಬನ್ನಿ ಅಂತ ತಿಳಿಸಿದ ಬಳಿಕ ನಾನು ನನ್ನ ಹೆಂಡತಿ ಓಡಿ ಹೋಗಿ ನೋಡಲಾಗಿ ನಾವು ವಾಸವಾಗಿರುವ ಫತ್ರಾಸ ಸಡ್ಡಿಗೆ ಆಕಸ್ಮಿಕವಾಗಿ ವಿದ್ಯೂತ್ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಅತ್ತಿ ಉರಿಯುತಿತ್ತು ನಾನು ನನ್ನ ಹೆಂಡತಿ ನಮ್ಮ ಗ್ರಾಮದ ಶೈಲಶ್ರೀ ಗಂಡ ವಿಠ್ಠಲ ದೊಡ್ಮನಿ, ಶ್ರೀದೇವಿ ಗಂಡ ಮಲ್ಲಪ್ಪ ಜಳಕಿ, ತುಕಾರಾಮ ತಂದೆ ಮಲ್ಲಿಕಾರ್ಜುನ ಹುಣಸಡಲಗಿ, ಸಂಜಯ ಕುಮಾರ ತಂದೆ ರಾಮಚಂದ್ರ ದೊಡ್ಮನಿ ಹಾಗು ಇನ್ನಿತರರು ಕೂಡಿ ಬೆಂಕಿ ನಂದಿಸಲು ಪ್ರಯತ್ನಿಸಿದರು ಬೆಂಕಿ ನಂದದ ಕಾರಣ ಅಗ್ನಿಶಾಮಕಕ್ಕೆ ಕರೆ ಮಾಡಿ ಅಗ್ನಿಶಾಮಕ ವಾಹನದಿಂದ ನಂದಿಸಿದ್ದು ಇರುತ್ತದೆ. ನಮ್ಮ ಫತ್ರಾಸ ಸಡ್ಡಿನ ಮನೆಯಲಿದ್ದ ಎರಡು ಹಿಟ್ಟಿನ ಗಿರಣಿ ಮಶೀನ, ಒಂದು ಕಾರ ಕುಟ್ಟುವ ಮಶಿನ್, ಶಾವಗಿ ಮಶೀನ, ಒಂದು ಎಲ್ ಇ ಡಿ ಟಿವ್ಹಿ ಮನೆಯ ದಿನ ನಿತ್ಯ ಬಳಕೆಯ ಸಾಮಾನುಗಳು, 10 ತೊಲೆ ಬಂಗಾರದ ಆಭರಣಗಳು, 200000/-ರೂಪಾಯಿ ನಗದು ಹಣ  ಆಕಸ್ಮಿಕವಾಗಿ ವಿದ್ಯೂತ್ ಶಾಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಸುಟ್ಟಿರುತ್ತವೆ. ಹೀಗೆ ಒಟ್ಟು ಅಂದಾಜು 10,00,000/-ರೂಪಾಯಿಯಷ್ಟು ಆಕಸ್ಮಿಕ ಬೆಂಕಿಗೆ ಸುಟ್ಟು ಲುಕ್ಸಾನ ಆಗಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.