ಅಪಘಾತ
ಪ್ರಕರಣ :
ಗ್ರಾಮೀಣ
ಠಾಣೆ : ದಿನಾಂಕ:- 11/09/2018 ರಂದು ಸಾಯಂಕಾಲ 07:30 ಗಂಟೆ ಸುಮಾರಿಗೆ ಮೃತ
ಬಾಬರಮಿಯ್ಯಾ ಮತ್ತು ಮಹಮ್ಮದ ಆಸೀಫ ತಂದೆ ಮಹಮ್ಮದ ಇಸಾಕ ಇಬ್ಬರು ಕೂಡಿಕೊಂಡು ಹಿರೋ ಹೊಂಡಾ
ಸ್ಪ್ಲೇಂಡರ್ ಮೋಟಾರ ಸೈಕಲ್ ನಂ ಕೆಎ-32 ಇಕೆ-5308 ನೇದ್ದರ
ಮೇಲೆ ಗೌಂಡಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವ ಕುರಿತು ರಿಂಗ ರೋಡನ ಫೀರ ಬಂಗಾಲಿ ದರ್ಗಾದ
ಹತ್ತಿರ ಬರುತ್ತಿದ್ದಾಗ ಅದೇ ವೇಳಗೆ ಹಿಂದುಗಡೆಯಿಂದ ಒಂದು ಮೋಟಾರ ಸೈಕಲ್ ನಂ ಕೆಎ-32 ಇಎಲ್-9340 ನೇದ್ದರ ಸವಾರನು ಅತೀವೇಗದಿಂದ ಮತ್ತು
ಅಲಕ್ಷತನದಿಂದ ನಡೆಸಿಕೊಂಡು ಮುಂದೆ ಹೋಗುತ್ತಿರುವ ಮೃತ ಬಾಬರಮಿಯ್ಯಾ ಮತ್ತು ಮಹಮ್ಮದ ಆಸೀಫ
ಇಬ್ಬರು ಕೂಡಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲ್ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ ಸೈಕಲ್
ಸಮೇತ ರೋಡಿನ ಡಿವೈಡರ್ ಮೇಲೆ ಬಿದಿದ್ದರಿಂದ ಬಾಬರಮಿಯ್ಯಾ ಇತನಿಗೆ ಹಣೆಗೆ, ಮೂಗಿಗೆ, ಎಡಕಿವಿಗೆ, ಹಾಗು ಕಾಲು, ಕಯಗಳಿಗೆ ಭಾರಿ
ಪ್ರಮಾಣದ ಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದು ,ಮಹ್ಮದ ಆಸೀಫನಿಗೆ ಮುಖಕ್ಕೆ ಕಿವಿಗೆ
ತಲೆ ಹಿಂದುಗಡೆ ಭಾರಿ ಗಾಯವಾಗಿದ್ದು ಇರುತ್ತದೆ ಕಾರಣ ಮೋಟಾರ ಸೈಕಲ್ ನಂ ಕೆಎ-32
ಇಎಲ್-9340 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ
ನಡೆಸಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಜರುಗಿದ್ದು ಸದರಿ ಈ ಮೇಲ್ಕಂಡ ಮೋಟಾರ ಸೈಕಲ ಸವಾರನಿಗೆ
ಪತ್ತೆ ಮಾಡಿ ಆತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಅಂತಾ ಶ್ರೀಮತಿ ತಬಸುಮ
ಬೇಗಂ ಗಂಡ ಬಾಬರಮಿಯ್ಯಾ ಮು:ಉಮರಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ
ಸಾವು ಪ್ರಕರಣ :
ಯಡ್ರಾಮಿ
ಠಾಣೆ : ಶ್ರೀ ಗುರುನಾಥಗೌಡ ತಂದೆ ಗೊಲ್ಲಾಳಪ್ಪಗೌಡ
ಪಾಟೀಲ ಸಾ|| ಯಲಗೊಡ ತಾ|| ಜೇವರ್ಗಿ
ರವರ ಮಗನಾದ ನಾನಾಗೌಡನ ಹೆಸರಿನಲ್ಲಿ ನಮ್ಮೂರ ಸಿಮಾಂತರದಲ್ಲಿ ಹೊಲಗಳಿದ್ದು, ಅದರ ಸರ್ವೆ ನಂ 116, 119
ನೇದ್ದರಲ್ಲಿ 6 ಎಕರೆ ಜಮೀನು ಇರುತ್ತದೆ, ಹೊಲದ ಸಲುವಾಗಿ ನನ್ನ ಮಗ ಜೇವರ್ಗಿ ಎಸ್.ಬಿ.ಐ ಬ್ಯಾಂಕನಲ್ಲಿ
ಸುಮಾರು 2 ಲಕ್ಷ ರೂ, ನಮ್ಮುರ
ಸೋಸೈಟಿಯಲ್ಲಿ 1 ಲಕ್ಷ ರೂ ಮತ್ತು ಡಿಸಿಸಿ ಬ್ಯಾಂಕನಲ್ಲಿ 7 ಲಕ್ಷ ರೂ ಹಾಗೂ ಖಾಸಗಿಯಾಗಿ 5 ಲಕ್ಷ
ರೂಪಾಯಿ ಸಾಲ ಮಾಡಿಕೊಂಡಿದ್ದರು, ನನ್ನ ಮಗ ಆಗಾಗ
ನಮ್ಮ ಮುಂದೆ ನಮಗೆ ಸಾಲ ಬಹಳಾಗಿದೆ, ಈ ಸಲ ಮಳೆ
ಬರದೇ ಇದ್ದಿದ್ದರಿಂದ ಹೊಲದಲ್ಲಿ ಬೆಳೆಯು ಸಹ ಸರಿಯಾಗಿ ಬೆಳೆದಿಲ್ಲಾ, ಊರಲ್ಲಿ
ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಸತ್ತರೆ
ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದನು, ಆಗ ನಾವು ಅವರಿಗೆ
ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 10-09-2018 ರಂದು 4;00 ಪಿ.ಎಮ ಕ್ಕೆ ಸುಮಾರಿಗೆ ನನ್ನ ಮಗ ಮನೆಯಲ್ಲಿ ಯಾವುದೋ ಕ್ರಿಮಿನಾಶಕ
ವಿಷ ಸೇವನೆ ಮಾಡಿ ಒದ್ದಾಡುತ್ತಿದ್ದನು, ಆಗ ನಾನು ಮತ್ತು
ನನ್ನ ಸೊಸೆ ಶ್ರೀದೇವಿ, ಹಾಗು ನಮ್ಮ ಅಣ್ಣತಮ್ಮಕಿಯ ದುಂಡಪ್ಪಗೌಡ
ತಂದೆ ಮಲ್ಲಿನಾಥಗೌಡ ಪಾಟೀಲ ರವರು ಕೂಡಿ ಒಂದು ಖಾಸಗಿ ವಾಹನದಲ್ಲಿ ನನ್ನ ಮಗನಿಗೆ ಹಾಕಿಕೊಂಡು ದವಾಖಾನೆಗೆ
ಯಡ್ರಾಮಿಗೆ ಬರುವಾಗ ಮಾರ್ಗ ಮದ್ಯದಲ್ಲಿ ಕುಕ್ಕನೂರ ಕ್ರಾಸ್ ಹತ್ತಿರ ಅಂದಾಜ 5;00 ಪಿ.ಎಂ ಸುಮಾರಿಗೆ
ನನ್ನ ಮಗ ಮೃತ ಪಟ್ಟರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment