POLICE BHAVAN KALABURAGI

POLICE BHAVAN KALABURAGI

16 March 2018

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಆರೀಫಾ ತಹಸೀನ್ ಗಂಡ ಅಖೀಲ ಅಹ್ಮದ ಸಾ: ನೊರಾನಿ ಮಹೊಲ್ಲಾ ಹಾಗರಗಾ ರೋಡ ಹಾ:ವ: ಮದಿನ ಕಾಲೋನಿ ಕಲಬುರಗಿ ಇವರು ದಿನಾಂಕ 13.03.2018 ರಂದು ಮದೀನಾ ಕಾಲೋನಿಯಲ್ಲಿರುವ ನಮ್ಮ ತಾಯಿಯ ಮನೆಯಿಂದ ರಾತ್ರಿ 9:30 ಗಂಟೆಗೆ ನಾನು, ನಮ್ಮ ತಂದೆ ತಾಯಿ, ನನ್ನ ಗಂಡ, ನನ್ನ ತಂಗಿ ಖೂದ್ದಸಿಯಾ ಮತ್ತು ಅವಳ ಗಂಡ ಸೈಯದ ಫಾರುಕ ಕೂಡಿಕೊಂಡು ಇನೊವಾ ಕಾರನಲ್ಲಿ ಹೈದ್ರಬಾದಕ್ಕೆ ಹೋಗಿದ್ದು ಹೈದ್ರಾಬಾದ ಎರ್ ಪೋರ್ಟನಲ್ಲಿ ನಮ್ಮ ತಂದೆ ತಾಯಿಯವರನ್ನು ಬಿಟ್ಟು ದಿನಾಂಕ 14.03.2018 ರಂದು ಬೆಳ್ಳಿಗ್ಗೆ 3:00 ಗಂಟೆಗೆ ಹೈದ್ರಾಬಾದ ಬಿಟ್ಟು ಬೆಳ್ಳಿಗ್ಗೆ 6:30 ಗಂಟೆಗೆ ನಾನು ನಮ್ಮ ತಾಯಿಯ ಮೇನೆಗೆ ಬಂದು ನೋಡಲು ಮನೆಯ ಬಾಗಿಲ ಕೊಂಡಿ ಒಳಗಿನಿಂದ ಹಾಕಿದ್ದು ನಂತರ ನಾನು ಮನೆಯ ಹಿಂದುಗಡೆ ಹೋಗಿ ಹಿಂದಿನ ಬಾಗಿಲು ನೋಡಲು ಬಾಗಿಲ ತೆರೆದಿದ್ದು ಮನೆಯ ಒಳಗೆ ಹೋಗಿ ನೋಡಲು ಮನೆಯಲ್ಲಿ ಇದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಮತ್ತು ಮನೆಯಲ್ಲಿ ಇದ್ದ ಎಲ್ಲಾ ಅಲಮಾರಿಗಳು ತೆಗೆದು ಅದರಲ್ಲಿ ಇದ್ದ ಸಾಮಾನುಗಳು ಹೊರಗೆ ಬಿಸಾಡಿದ್ದು. ನಾವು ಹೈದ್ರಾಬಾದಕ್ಕೆ ಹೋದಾಗ ಯಾರೊ ಕಳ್ಳರು ನಮ್ಮ ಮನೆ ಬಾಗೀಲ ಕೀಲಿ ಮುರಿದು ಮನೆ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನಂತರ ನಾನು ನನ್ನ ಗಂಡ ಮತ್ತು ನನ್ನ ತಂಗಿ ಹಾಗೂ ಅವಳ ಗಂಡ ಕೂಡಿಕೊಂಡು ಮನೆಯನ್ನು ಪರಿಶೀಲಿಸಿ ನೋಡಲು ಅಲಮಾರಿಯಲ್ಲಿ ಇಟ್ಟಿದ ನನ್ನ 3 ತೋಲೆ ಬಂಗಾರದ ನಕ್ಲೇಸ್‌‌ ಮತ್ತು ಕೀವಿ ಓಲೆಗಳು, ಒಂದುವರೆ (1.5) ತೋಲೆ ಬಂಗಾರ ಎರಡು ಬಳೆಗಳು, ಒಂದು ಎರಡುವರೆ (2.5) ತೋಲೆ ಬಂಗಾರದ ಉದ್ದನೆಯ ಹಾರ, ತಲಾ 3 ಗ್ರಾಂ ತೋಕದ 5 ಉಂಗುರಗಳು ನನ್ನ ತಂಗಿಯಾದ ನಾಜಿಯಾ ನೌಸಿನ್ ಇವಳ 3 ತೋಲೆ ಬಂಗಾರದ ನಕ್ಲೇಸ, 5 ತೋಲೆ ಬಂಗಾರದ ಉದ್ದನೆಯ ಹಾರ, ಅಲಮಾರಿಯಲ್ಲಿಟ್ಟಿದ್ದು ಕಳ್ಳತನವಾಗಿದ್ದು ಇರುತ್ತದೆ. ಕಳ್ಳರು ಕಳ್ಳತನ ಮಾಡಿದ ಅಲಮಾರಿಯಲ್ಲಿ ನಮ್ಮ ತಾಯಿಯವರ ಬಂಗಾರದ ಆಭರಣಗಳು ಇದ್ದು ಅವರ ಎಷ್ಟು ಬಂಗಾರ ಆಭರಣ ಕಳ್ಳತನ ಮಾಡಿದೆ ಎನ್ನುವದು ಸಧ್ಯ ನನಗೆ ಗೊತ್ತಿರುವದಿಲ್ಲ ದಿನಾಂಕ 13.03.2018 ರಂದು ರಾತ್ರಿ 9:30 ಗಂಟೆಯಿಂದ ದಿನಾಂಕ 14.03.2018 ರಂದು ಬೆಳ್ಳಿಗ್ಗೆ 6:30 ಗಂಟೆಯ ಮಧ್ಯದಲ್ಲಿ ಯಾರೊ ಕಳ್ಳರು ನಮ್ಮ ತಾಯಿ ಮನೆಯ ಬಾಕಿ ಕೀಲಿ ಮೂರಿದು ಮನೆಯಲ್ಲಿ ಇಟ್ಟಿದ ಸುಮಾರು 16.5 ತೋಲೆ ಅಂದಾಜ ಕಿಮ್ಮತ್ತು 5,00,000/- ರೂ ಬಂಗಾರದ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಡಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 13/03/2018 ರಂದು ರಾತ್ರಿ ಕಲಬುರಗಿ ಆಳಂದ ರೋಡಿಗೆ ಇರುವ ಸುಂಟನೂರ ಕ್ರಾಸ ಹತ್ತಿರ ಮೃತ ಅಂಜನಾಬಾಯಿ ಗಂಡ ರಾಮು ಚವ್ಹಾಣ ಸಾ:ಸುಂಟನೂರ ತಾ:ಆಳಂದ ಜಿ:ಕಲಬುರಗಿ ಇವಳು ಕಲಬುರಗಿ ಬರುವ ಕುರಿತು ರಾತ್ರಿ 08:15 ಗಂಟೆ ಸುಮಾರಿಗೆ ಸುಂಟನೂರ ಗ್ರಾಮದ ಕ್ರಾಸ ದಾಟುತ್ತಿದ್ದಾಗ ಅದೇ ವೇಳೆಗೆ ಆಳಂದ ರೋಡ ಕಡೆಯಿಂದ ಕೆ.ಎಸ್.ಆರ್.ಟಿ.ಸಿ  ಬಸ್ ನಂ KA-32 F-5127 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಬಸ್ಸನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಮೃತ ಅಂಜನಾಬಾಯಿ ಇವಳಿಗೆ ಜೋರಾಗಿ ಅಪಘಾತ ಪಡಿಸಿ ಬಸ್ಸನ್ನು ಸ್ವಲ್ಪ ನಿಲ್ಲಿಸದಂತೆ ಮಾಡಿ ನಿಲ್ಲಿಸದೇ ಹಾಗೆಯೇ ಓಡಿಸಿಕೊಂಡು ಹೋಗಿದ್ದು ಇದರಿಂದ್ದ ಮೃತ ಅಂಜನಾಬಾಯಿ ಇವಳಿಗೆ ತಲೆಗೆ ಮತ್ತು ಬಲಗೈಗೆ ಹಾಗು ಇತರೇ ಕಡೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಸದರಿ ಈ ಮೇಲ್ಕಂಡ ಕೆ.ಎಸ್.ಆರ್.ಟಿ.ಸಿ  ಬಸ್ ನಂ KA-32 F-5127 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಬಹದ್ದೂರ ತಂದೆ ರಾಮು ಚವ್ಹಾನ ಸಾ : ಸುಂಟನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ ವಿಠಲ್ ತಂದೆ ತಿಪ್ಪಣ್ಣ ಬಂದಗೆ ಸಾ||ವಾಗ್ದರಗಿ ರವರು ತಮ್ಮೂರಿನಲ್ಲಿ ನಾನು ಕೆಲವು ದಿವಸಗಳ ಹಿಂದೆ ಸಿಸಿ ರಸ್ತೆ ಕೆಲಸ ಮಾಡಿಸುತ್ತಿರುವಾಗ ನಮ್ಮ ಜಾತಿಯವರಾದ ರೇವಪ್ಪ ತಂದೆ ಭುಜಂಗಪ್ಪ ಬಂದಗೆ ಇವರುಗಳು ರಸ್ತೆಯ ಅಗಲಿಕರಣ ಮಾಡಿ ಕೆಲಸ ಮಾಡಬೇಕೆಂದು ನನ್ನೊಂದಿಗೆ ತಕರಾರು ಮಾಡಿದ್ದು ಅದಕ್ಕೆ ನಾನು ಎಷ್ಟು ರಸ್ತೆ ಅಗಲ ಮಾಡಬೇಕೆಂದು ನಿಗದಿಪಡಿಸಿದೇಯೋ ಅಸ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿರುತ್ತೇನೆ. ಅದಕ್ಕೆ ಅವರು ಹಾಗೂ ಅವರ ಕಡೆಯವರು ಕೂಡಿ ನನ್ನೊಂದಿಗೆ ತಕರಾರು ಮಾಡಿದ್ದು ಅವಾಗಿನಿಂದ ಅವರು ನನ್ನ ಮೇಲೆ ಧ್ವೇಷ ಸಾದಿಸುತ್ತಾ ಬಂದಿದ್ದು ದಿನಾಂಕ : 14/03/2018 ರಂದು ಸಂಜೆ 7-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಸುಮಿತ್ರಾಬಾಯಿ ತಾಯಿಯಾದ ರತ್ನಮ್ಮ ಗಂಡ ತಿಪ್ಪಣ್ಣಾ ಬಂದಗೆ ಮಕ್ಕಳಾದ ಆನಂದ, ತಿಪ್ಪಣ್ಣ, ಜೈಭೀಮ, ರಾಹುಲ ಮತ್ತು ಶಾರದಾಬಾಯಿ ಗಂಡ ಅನೀಲಕುಮಾರ ಸಂಗೋಳಗಿ ರವರೆಲ್ಲರೂ ನಮ್ಮ ಹೊಸ ಮನೆಯ ಕೊಟ್ಟಿಗೆಯಾ ಹತ್ತಿರ ಮಾತನಾಡುತ್ತಾ ಕುಳಿತಿರುವಾಗ ನಮ್ಮ ಗ್ರಾಮದ ನಮ್ಮ ಜಾತಿಯವರೆಯಾದ 1)ರೇವಪ್ಪ ತಂದೆ ಭುಜಂಗಪ್ಪ ಬಂದಗೆ, 2)ಗುಂಡಪ್ಪ ತಂದೆ ಭುಜಂಗಪ್ಪ ಬಂದಗೆ, 3)ಭುಜಂಗಪ್ಪ @ ಹಣಮಂತ ತಂದೆ ರೇವಪ್ಪ ಬಂದಗೆ, 4)ಮಹಾದೇವ ತಂದೆ ಗುಂಡಪ್ಪ ಬಂದಗೆ, 5)ರಾಜಕುಮಾರ ತಂದೆ ಗುಂಡಪ್ಪ ಬಂದಗೆ, 6)ಜೈಭೀಮ ತಂದೆ ಗುಂಡಪ್ಪ ಬಂದಗೆ, 7)ಪ್ರಭುಲಿಂಗ ತಂದೆ ಕಳಸಪ್ಪ ಬಂದಗೆ, 8)ಪ್ರಕಾಶ ತಂದೆ ರೇವಪ್ಪ ಬಂದಗೆ, 9)ಪ್ರಭುಲಿಂಗ ತಂದೆ ರೇವಪ್ಪ ಬಂದಗೆ. 10)ರವಿಕುಮಾರ ತಂದೆ ಕಳಸಪ್ಪ ಬಂದಗೆ, 11)ಶರಣಪ್ಪ ತಂದೆ ಸೂರ್ಯಕಾಂತ ಬಂದಗೆ, 12)ಹಣಮಂತರಾಯ ತಂದೆ ಸೂರ್ಯಕಾಂತ ಬಂದಗೆ, 13)ಸೂರ್ಯಕಾಂತ ತಂದೆ ಹಣಮಂತರಾಯ ಬಂದಗೆ, 14)ಸತೀಶ ತಂದೆ ಶ್ರೀಮಂತ ಬಂದಗೆ, 15)ಆಕಾಶ ತಂದೆ ಹಣಮಂತರಾಯ ಬಂದಗೆ, 16)ಅನೀಲಕುಮಾರ ತಂದೆ ಹಣಮಂತರಾಯ ಬಂದಗೆ, 17)ಅಶೋಕ ತಂದೆ ಹಣಮಂತರಾಯ ಬಂದಗೆ, 18)ಪ್ರಕಾಶ ತಂದೆ ತಿಪ್ಪಣ್ಣ ಕಾಂಬಳೆ, 19)ಸುರೇಶ ತಂದೆ ತಿಪ್ಪಣ್ಣ ಕಾಂಬಳೆ, 20)ಸಂತೋಷ ತಂದೆ ಶ್ರೀಮಂತ ಸಿಂಗೆ, 21)ಕಮಲಾಬಾಯಿ ಗಂಡ ರೇವಪ್ಪ ಬಂದಗೆ, 22)ಅಂದಮ್ಮ ಗಂಡ ಗುಂಡಪ್ಪ ಬಂದಗೆ, 23)ಆಶಾ ಗಂಡ ರಾಜಕುಮಾರ ಬಂದಗೆ, 24)ಆಶಾ ಗಂಡ ಮಹಾದೇವ ಬಂದಗೆ, 25)ತುಳಜಬಾಯಿ ಗಂಡ ಪ್ರಕಾಶ ಬಂದಗೆ, 26)ಅಂಬಿಕಾ ಗಂಡ ಪ್ರಭುಲಿಂಗ ಬಂದಗೆ, 27)ರೇಷ್ಮ ಗಂಡ ಪ್ರಭುಲಿಂಗ ಬಂದಗೆ, 28)ಶಾಂತಬಾಯಿ ಗಂಡ ಸೂರ್ಯಕಾಂತ ಬಂದಗೆ, 29)ಲಕ್ಷ್ಮೀ ತಂದೆ ರೇವಪ್ಪ ಬಂದಗೆ ಮತ್ತು 30)ಶೋಭಾ ಗಂಡ ಹಣಮಂತ ಬಂದಗೆ ಇವರೆಲ್ಲರೂ ಕೂಡಿಕೊಂಡು ಬಂದು ಅವರಲ್ಲಿ ರೇವಪ್ಪ, ಗುಂಡಪ್ಪ, ಭುಜಂಗಪ್ಪ ರವರುಗಳು ಏ ಬೋಸಡಿ ಮಗನೆ ನಾವು ಹೇಳಿದ ಹಾಗೆ ಸಿಸಿ ರಸ್ತೆ ಕೆಲಸ ಮಾಡುವುದಿಲ್ಲ ಅಂತಿಯಾ ಎಂದು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಮಹಾದೇವ ರಾಜಕುಮಾರ ಜೈಭೀಮ ರವರುಗಳು ಬಡಿಗೆಯಿಂದ, ಕಬ್ಬಿಣದ ರಾಡಿನಿಂದ ನನಗೆ ಹಾಗೂ ನನ್ನ ಮಕ್ಕಳಾದ ಆನಂದ, ತಿಪ್ಪಣ್ಣಾ ರವರಿಗೆ ಹೊಡೆದಿದ್ದರಿಂದ ನನ್ನ ಹಣೆಯ ಬಲಗಡೆ ರಕ್ತಗಾಯ ಮತ್ತು ಮೇಲಿನ ಮುಂಭಾಗದ ಒಂದು ಹಲ್ಲು ಮುರಿದು ಬಿದ್ದಿದ್ದು ನನ್ನ ಮಗ ಆನಂದನ ತಲೆಯ ಬಲಗಡೆಗೆ ಮತ್ತು ಬಲಗೈ ಮೊಳಕೈಗೆ ಗಾಯವಾಗಿದ್ದು ತಿಪ್ಪಣ್ಣನ ಎಡಗೈ ರಟ್ಟಿಗೆ ಒಳಪೆಟ್ಟಿ ಆಗಿರುತ್ತದೆ. ಪ್ರಭುಲಿಂಗ, ಪ್ರಕಾಶ, ಪ್ರಭುಲಿಂಗ, ರವಿಕುಮಾರುಗಳು ನನ್ನ ಮಗಳಾದ ಶಾರದಾಬಾಯಿ ಗಂಡು ಮಕ್ಕಳಾದ ಜೈಭೀಮ ಮತ್ತು ರಾಹುಲ ಇವರಿಗೆ ಕಬ್ಬಿಣದ ರಾಡು ಚಾಕು ಮತ್ತು ಬಡಿಗೆಯಿಂದ ಹೊಡೆದಿದ್ದರಿಂದ ನನ್ನ ಮಗಳ ತಲೆಗೆ ಭಾರಿ ರಕ್ತಗಾಯ ಎಡಗೈ ಮುಂಗೈಗೆ ಒಳಪೆಟ್ಟು ಜೈಭೀಮನಿಗೆ ತಲೆಯ ಹಿಂಭಾಗಗಕ್ಕೆ ರಕ್ತಗಾಯ ಬಲಗಡೆ ಬೆನ್ನಿಗೆ ಎಡಗೈ ರಟ್ಟಿಗೆ ಒಳಪೆಟ್ಟಾಗಿ ಬಾವು ಬಂದಿರುತ್ತದೆ, ರಾಹುಲನ ಗದ್ದಕ್ಕೆ ರಕ್ತಗಾಯವಾಗಿ ಎದೆಗೆ ಬೆನ್ನಿಗೆ ಒಳಪೆಟ್ಟಾಗಿರುತ್ತದೆ. ರವಿಕುಮಾರ, ಶರಣಪ್ಪ  ಹಣಮಂತರಾಯ, ಸೂರ್ಯಕಾಂತ ರವರುಗಳು ನನ್ನ ತಾಯಿಯಾದ ರತ್ನಮ್ಮ ಹಾಗೂ ಹೆಂಡತಿಯಾದ ಸುಮೀತ್ರಾಬಾಯಿ ಇವರಿಗೆ ಕಬ್ಬಿಣದ ರಾಡು ಮತ್ತು ಬಡಿಗೆಯಿಂದ ಹೊಡೆದಿದ್ದರಿಂದ ನನ್ನ ತಾಯಿಯ ಎಡಗೈ ರಟ್ಟಿಗೆ ಭಾರಿಗಾಯವಾಗಿ ತಲೆಯ ಹಿಂಭಾಗಗಕ್ಕೆ ಒಳಪೆಟ್ಟಾಗಿರುತ್ತದೆ. ಅಲ್ಲದೇ ನನ್ನ ಹೆಂಡತಿಯ ಬಲಗೈ ರಟ್ಟಿಗೆ ಭಾರಿಗಾಯವಾಗಿ ಬೆನ್ನಿಗೆ ಒಳಪೆಟ್ಟಾಗಿರುತ್ತದೆ. ಸತೀಶ, ಆಕಾಶ, ಅನೀಲಕುಮಾರ, ಅಶೋಕ, ಪ್ರಕಾಶ, ಸುರೇಶ, ಸಂತೋಷ ರವರುಗಳು ಕೂಡಿ ನನಗೆ ಹಾಗು ನಮ್ಮ ಮಕ್ಕಳಿಗೆ ನೆಲಕ್ಕೆ ಕೆಡವಿ ಬಡಿಗೆಯಿಂದ ಅಡ್ಡಾದಿಡ್ಡಿಯಾಗಿ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಪಡಿಸಿ ಇವತ್ತು ನೀವು ಉಳಿದ್ದಿರಿ ಮಕ್ಕಳೆ ಮುಂದೆ ಒಂದಾಲ್ಲೊಂದು ದಿವಸ ನಿಮಗೆ ಜೀವ ಸಹಿತ ಬಿಡುವುದಿಲ್ಲ ಖಲಾಸ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಮಹಾದೇವ ತಂದೆ ಗುಂಡಪ್ಪ ಸಾ||ವಾಗ್ದರಗಿ ರವರ  ಜಾತಿಯವರಾದ ವಿಠಲ್ ತಂದೆ ತಿಪ್ಪಣ್ಣ ಬಂದಗೆ ಇವರ ಹೊಸಮನೆಯು ನಮ್ಮ ಊರಿನ ಸರ್ಕಾರಿ ಶಾಲೆಯ ಹತ್ತಿರ ವಿದ್ದು ಅವರ ಮನೆಯ ಅಥವಾ ಕೊಟ್ಟಿಗೆಯ ಮುಂದಿನಿಂದಲೇ ನಮ್ಮ ಹಾಗೂ ನಮ್ಮ ಅಣತಮಕಿಯವರಾದ ಭುಜಂಗಪ್ಪ ತಂದೆ ರೇವಪ್ಪ ಬಂದಗೆ ರವರ ಮನೆಗಳಿಗೆ ಹೋಗಿಬರಲು ರಸ್ತೆ ಇರುತ್ತದೆ. ಆದರೆ ವಿಠಲ್ ಇವರು ಆ ರಸ್ತೆಯಿಂದ ನಮಗೆ ಹೋಗಿಬರಲು ಬಿಡಬಾರದೆಂದು ನಮ್ಮೊಂದಿಗೆ ಆಗಾಗ ತಕರಾರು ಮಾಡುತ್ತಾ ಬಂದಿರುತ್ತಾರೆ. ದಿನಾಂಕ:14/03/2018 ರಂದು ಸಂಜೆ 7-30 ಗಂಟೆ ಸುಮಾರಿಗೆ ನಾನು ಮತ್ತು ಭುಜಂಗಪ್ಪ ತಂದೆ ರೇವಪ್ಪ ಬಂದಗೆ ರವರುಗಳು ಸಂಡಾಸಕ್ಕೆ ಹೋಗಿ ವಿಠಲ್ ಇವರ ಕೊಟ್ಟಿಗೆಯ ಮುಂದಿನ ರಸ್ತೆಯಿಂದ ವಾಪಸ್ಸ ನಮ್ಮ ಮನೆಗೆ ಹೋಗುವಾಗ ವಿಠಲ್ ಬಂದಗೆ ಈತನು ನನಗೆ ಹಾಗೂ ಭುಜಂಗಪ್ಪ ಇವರಿಗೆ ಏ ಸೂಳೆ ಮಕ್ಕಳೆ ಇಲ್ಲಿಂದ ಹೋಗಬೇಡ ಅಂದರು ಸಹ ಏಕೆ ಹೊಗುತ್ತಿದ್ದಿರಿ ಎಂದು ಅವಾಚ್ಯವಾಗಿ ಬೈಯುತ್ತಾ ನಮ್ಮೊಂದಿಗೆ ಜಗಳ ತಗೆದಿದ್ದು ಅಷ್ಟರಲ್ಲಿಯೇ ನಮ್ಮ ಸಂಬಂದಿಕರಾದ ಪ್ರಕಾಶ ತಂದೆ ರೇವಪ್ಪ ಬಂದಗೆ, ರಾಜಕುಮಾರ ತಂದೆ ಗುಂಡಪ್ಪ ಬಂದಗೆ, ಗುಂಡಪ್ಪ ತಂದೆ ಭುಜಂಗಪ್ಪ ಬಂದಗೆ, ಪ್ರಭುಲಿಂಗ ತಂದೆ ಕಳಸಪ್ಪ ಬಂದಗೆ, ಕಮಲಾಬಾಯಿ ಗಂಡ ರೇವಪ್ಪ ಬಂದಗೆ, ಅಂದಮ್ಮ ಗಂಡ ಗುಂಡಪ್ಪ ಬಂದಗೆ ಹಾಗೂ ನಮ್ಮ ಒಣೆಯ ಪ್ರಕಾಶ ತಂದೆ ತಿಪ್ಪಣ್ಣ ಕಾಂಬಳೆ ರವರುಗಳು ಬಂದು ವಿಠಲ್ ಇವರಿಗೆ ಈ ರೀತಿ ಬೈಯುವುದು ಸರಿಅಲ್ಲಾ ಎಂದು ಹೇಳುತ್ತಿರುವಾಗ ವಿಠಲನ ಪರವಾಗಿ ಜೈಭೀಮ ತಂದೆ ವಿಠಲ್ ಬಂದಗೆ, ರಾಹುಲ್ ತಂದೆ ವಿಠಲ್ ಬಂದಗೆ, ಆನಂದ ತಂದೆ ವಿಠಲ್ ಬಂದಗೆ, ಪ್ರಕಾಶ ತಂದೆ ವಿಠಲ್ ಬಂದಗೆ, ರತ್ನಾಬಾಯಿ ಗಂಡ ತಿಪ್ಪಣ್ಣ ಬಂದಗೆ, ಸುಮಿತ್ರಾಬಾಯಿ ಗಂಡ ವಿಠಲ್ ಬಂದಗೆ, ಶಾರಾದಾಬಾಯಿ ತಂದೆ ವಿಠಲ್ ಬಂದಗೆ, ಗೌತಮ್ಮ ತಂದೆ ನಾಮದೇವ ಸಿಂಗೆ, ಸಂಜುಕುಮಾರ ತಂದೆ ನಾಮದೇ ಸಿಂಗೆ, ಮಲ್ಲಿಕಾರ್ಜುನ ತಂದೆ ನಾಮದೇವ ಸಿಂಗೆ ಹಾಗೂ ವಿಠಲ್ ತಂದೆ ಚಂದಪ್ಪ ಬಂದಗೆ ರವರೆಲ್ಲರೂ ಕೂಡಿಕೊಂಡು ಬಂದು ಬಡಿಗೆ, ಕಬ್ಬಿಣದ ರಾಡು ಮತ್ತು ಕಲ್ಲಿನಿಂದ ನನಗೆ, ಭುಜಂಗಪ್ಪ, ಪ್ರಭುಲಿಂಗ, ಗುಂಡಪ್ಪ, ರಾಜಕುಮಾರ, ಪ್ರಕಾಶ ಬಂದಗೆ, ಪ್ರಕಾಶ ಕಾಂಬಳೆ ರವರುಗಳಿಗೆ ಹೊಡೆಬಡೆ ಮಾಡಿದ್ದರಿಂದ ನನಗೆ ಕುತ್ತಿಗೆಯ ಕೆಳಭಾಗಕ್ಕೆ ರಕ್ತಗಾಯ ಭುಜಂಗಪ್ಪ ಇವರಿಗೆ ಬಲಗಡೆ ಸೊಂಡಕ್ಕೆ, ಎಡಗಡೆ ಮೇಲುಕಿನ ಹತ್ತಿರ ಒಳಪೆಟ್ಟು ಪ್ರಭುಲಿಂಗ ಬಂದಗೆ ಇವರಿಗೆ ಹೊಟ್ಟೆಗೆ ಒಳಪೆಟ್ಟು ಗುಂಡಪ್ಪ ಬಂದಗೆ ಇವರಿಗೆ ಎಡಗೈ ಮೊಳಕೈಗೆ ಹಾಗೂ ತಲೆಗೆ ರಕ್ತಗಾಯ ರಾಜಕುಮಾರ ಇವರಿಗೆ ಎಡಗೈ ರಟ್ಟೆಗೆ ತಲೆಗೆ ರಕ್ತಗಾಯ ಪ್ರಕಾಶ ಬಂದಗೆ ಇವರಿಗೆ ಬಲಗಡೆ ಬೆನ್ನಿಗೆ ಒಳಪೆಟ್ಟು ಪ್ರಕಾಶ ಕಾಂಬಳೆ ಇವರಿಗೆ ಹೊಟ್ಟೆಗೆ ಒಳಪೆಟ್ಟು ಆಗಿದ್ದು ಅಲ್ಲದೇ ವಿಠಲ್ ಈತನು ನನ್ನ ಬಲಗಡೆ ಭುಜದ ಹತ್ತಿರ ಮತ್ತು ಭುಜಂಗಪ್ಪ ಇವರ ಎಡಗೈ ತೋರುಬೆರಳಿಗೆ ಹಲ್ಲಿನಿಂದ ಕಚ್ಚಿದ್ದರಿಂದ ರಕ್ತಗಾಯಗಳಾಗಿರುತ್ತವೆ. ಕಮಲಾಬಾಯಿ ಮತ್ತು ಅಂದಮ್ಮ ಇವರಿಗೆ ವಿಠಲ್ ಹಾಗೂ ಪ್ರಕಾಶ ಮತ್ತು ಜೈಭೀಮ ರವರು ನೆಲ್ಲಕ್ಕೆ ನೂಕಿಸಿ ಕಾಲಿನಿಂದ ಒದ್ದಿದ್ದರಿಂದ ಮೊಳಕಾಲಿಗೆ ತರಿಚದ ಗಾಯಗಳಾಗಿ ದೇಹಕ್ಕೆ ಒಳಪೆಟ್ಟಾಗಿರುತ್ತೆವ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 March 2018

KALABURAGI DISTRICT REPORTED CRIMES

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಕುಮಾರಿ ಇವರಿಗೆ  ಶಹಾಬಾದದ ಚಂದ್ರಶೇಖರ ರಾಠೋಡ ಸಾಃ ಸ್ಟೇಷನ ತಾಂಡ ಶಹಾಬಾದ ಇತನೊಂದಿಗೆ ದಿನಾಂಕಃ 30/12/2016 ರಂದು ಹಿರಿಯರ ಸಮಕ್ಷಮ ನಿಶ್ಚಿತಾರ್ಥ ಆಗಿದ್ದು ಇಲ್ಲಿಯವರೆಗೆ ಮದುವೆ ಆಗಿರುವದಿಲ್ಲಾ. ಹೀಗಿದ್ದು ದಿನಾಂಕಃ 06/03/2018 ರಂದು 11-00 ಎ ಎಮ್  ನಾನು ಒಬ್ಬಳೆ ಮನೆಯಲ್ಲಿದ್ದಾಗ  ಚಂದ್ರಶೇಖರ ರಾಠೋಡ ಮತ್ತು ಅವನಣ್ಣ ರಾಜೇಶ ರಾಠೋಡ ಇಬ್ಬರು ನಮ್ಮ ಮನೆಗೆ ಬಂದು, ನನಗೆ ನಿನ್ನ ತಾಯಿ ಮದುವೆ ಮಾಡುವದಿಲ್ಲಾ ಅಂತಾ ಹೇಳುತ್ತಿದ್ದಾಳೆ ಕೊರ್ಟ ಮ್ಯಾರೇಜ ಮಾಡಿಕೊಳ್ಳೊಣ ಅಂತಾ ಚಂದ್ರಶೇಖರ ಹೇಳಿದನು. ನಾನು ಬರುವದಿಲ್ಲಾ ಅಂತಾ ಹೇಳಿದರೂ ಬಲವಂತವಾಗಿ ಇಲ್ಲಾ ಮದುವೆ ಆಗುತ್ತೇನೆ ಬಾ ಅಂತ ಎಳೆದುಕೊಂಡು ಕರೆದುಕೊಂಡು ತಮ್ಮ ಮನೆಗೆ ಹೋದನು. ಅಲ್ಲಿ ಮನೆಯಲ್ಲಿ ಚಂದ್ರಶೇಖರ, ಅವನ ತಾಯಿ ಸೋನಾಬಾಯಿ ಮತ್ತು ರಾಜೇಶ ಸೇರಿ ಅವರ ವಾಸದ ಮನೆಯಲ್ಲಿ ಇಟ್ಟರು. ನಂತರ ಅಂದು ರಾತ್ರಿ ಚಂದ್ರಶೇಖರನು ನಾನು ಮಲಗಿದ್ದಲ್ಲಿಗೆ ಬಂದು ನಿನಗೆ ನಾನು ಮದುವೆ ಆಗುತ್ತೇನೆ,  ಬಾ ನನ್ನ ಜೊತೆ ಮಲಗು ಅಂತಾ ಒತ್ತಾಯ ಮಾಡಿದನು.  ನಾನು ಮದುವೆ ಮುಂಚೆ ನಿನ್ನ ಜೊತೆ ಮಲಗುವದಿಲ್ಲಾ ಅಂತಾ ಹೇಳಿ ನಿರಾಕರಿಸಿದೆನು.  ಅದಕ್ಕೆ ನೀನು ನನ್ನ ಜೊತೆ ಮಲಗಲಿಲ್ಲಾ ಅಂದರೆ ನಿನಗೆ  ಜೀವ ಸಹಿತ ಬಿಡುವದಿಲ್ಲಾ ಅಂತಾ ಪ್ರಾಣ ಬೆದರಿಕೆ ಹಾಕಿ ನನಗೆ  ಬಲತ್ಕಾರವಾಗಿ ಸಂಭೋಗವನ್ನು ಮಾಡಿರುತ್ತಾನೆ.  ಅವರ ಮನೆಯಲ್ಲಿಯೇ  ಇಟ್ಟುಕೊಂಡಿದ್ದು ನಾನು ನನಗೆ  ಮದುವೆ ಆಗು ಅಂದರೆ ಚಂದ್ರಶೇಖರನು ಮದುವೆ ಆಗುವದಿಲ್ಲಾ ಏನ್ ಮಾಡ್ಕೋತಿ ಮಾಡ್ಕೊ ಅಂತಾ ಹೇಳಿದ್ದು ರಾಜೇಶ ಮತ್ತು ಸೋನಾಬಾಯಿ ಚಂದ್ರಶೇಖರನಿಗೆ ಬೇರೆ ಕಡೆ ಸಂಬಂಧ ಹುಡುಕಿ ಮದುವೆ ಮಾಡುತ್ತೇವೆ  ನಿನ್ನೊಂದಿಗೆ  ಮದುವೆ ಮಾಡುವದಿಲ್ಲಾ  ರಂಡಿ ಅಂತಾ ದುರ್ಭಾಷೆಗಳಿಂದ  ಬೈಯ್ದಿರುತ್ತಾರೆ. ನನ್ನ ತಾಯಿಗೆ  ಚಂದ್ರಶೇಖರ ತಮ್ಮ ಮನೆಯಲ್ಲಿ ನನಗೆ ಇಟ್ಟಿರುವದು ಗೊತ್ತಾಗಿ ಅವಳು ಬಂದು ನನಗೆ ಕರೆದುಕೊಂಡು ಬಂದಿರುತ್ತಾರೆ. ನನಗೆ ಪ್ರಾಣ ಬೇದರಿಕೆ ಹಾಕಿ ಹಠ ಸಂಬೋಗ ಮಾಡಿದ ವಿಷಯ ತಿಳಿಸಿ  ನನ್ನ ಮನೆಯಿಂದ  ಬಲವಂತವಾಗಿ ಕರೆದುಕೊಂಡು ಹೋಗಿ ಪ್ರಾಣ ಬೆದರಿಕೆ ಹಾಕಿ ಹಠ ಸಂಬೋಗ ಮಾಡಿದ ಚಂದ್ರಶೇಖರ ಮತ್ತು ಇದಕ್ಕೆ ಸಹಕರಿಸಿ ದುರ್ಭಾಷೆಗಳಿಂದ ಬೈಯ್ದು ಮನೆಯಲ್ಲಿ ಕೂಡಿ ಹಾಕಿದ ರಾಜೇಶ ಮತ್ತು ಸೋನಾ ಬಾಯಿ ರವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಠಾಣೆ : ಶ್ರೀ ಲಕ್ಕಪ್ಪ ತಂದೆ ಶಂಕರಪ್ಪಾ ಸಾಃ ಹಸನಾಪುರ ಇವರು ಹಸನಾಪೂರ ಗ್ರಾಮದ ಸೀತರಾಮ ತಂದೆ ತಿಪ್ಪಣ್ಣ ಸುಭೇದಾರ ಈತನಿಗೆ ಫಿರ್ಯಾದಿದಾರರ ಈಗ ಸುಮಾರು  ವರ್ಷಗಳ ಹಿಂದೆ 10 ಸಾವಿರ ರೂಪಾಯಿ ಹಣ ಕೈಗಡ ಅಂತಾ ಕೊಟ್ಟಿದ್ದು, ಇಲ್ಲಿಯವರೆಗೆ ಮರಳಿ ಕೊಟ್ಟಿರುವುದಿಲ್ಲ ವಿನಾ ಕಾರಣ ತಂಟೆ ತಕರಾರು ಮಾಡುತ್ತಾ ಬಂದಿದ್ದು, ದಿನಾಂಕ 13/03/2018 ರಂದು ಸಾಯಂಕಾಲ ಫಿರ್ಯಾದಿದಾರರ ಮತ್ತು ಆತನ ಸಂಗಡ ಯಲ್ಲಾಲಿಂಗ, ಹಣಮಂತ, ಯಮನಪ್ಪ ಎಲ್ಲರೂ ಕೂಡಿ  ಹಸನಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಮಾತಾಡುತ್ತಾ ಕುಳಿತುಕೊಂಡಾ ಅದೇ ವೇಳೆಗೆ ಸೀತರಾಮ ಸುಬೇದಾರ ಈತನು ಕಾರ ಚಲಾಯಿಸಿಕೊಂಡು ಬಂದಿದ್ದು, ಆಗ ಫಿರ್ಯಾದಿದಾರರು ಸದರಿಯವನಿಗೆ ಹಣ ಕೊಡುವಂತೆ ಕೇಳಿದಾಗ ಸುಬೇದಾರ ಈತನು ಫಿರ್ಯಾದಿಗೆ ಏ ರಂಡಿ ಮಗನೇ ನಿನಗೆ ಯಾವ ಹಣ ಕೊಡಬೇಕು ನಿನ್ನ ಹತ್ತಿರ ಅದಕ್ಕೆ ಸಾಕ್ಷಿ ಏನು ಇದೆ ಯಾವುದಾದರೂ ಕಾಗದ ಪತ್ರ ಇದ್ದರೆ ತೋರಿಸು ಊರಲ್ಲಿ ನಿಮ್ಮ ಕುರುಬರದು ಬಹಳ ಆಗಿದೆ ಮಕ್ಕಳೇ ನಾನು ಬಂದರೆ ನೀವು ಎದ್ದು ನಿಂತು ನಮಸ್ಕಾರ ಮಾಡಬೇಕು ನನ್ನ ಕಾರ ಬಂದರೆ ದಾರಿ ಬಿಡಬೇಕು ಅಂತೆಲ್ಲಾ ಬೈಯುತ್ತಿದ್ದಾಗ ನಾನು ಯಾಕೆ ಬೈಯುತ್ತಿದ್ದಿ ಅಂತಾ ಕೇಳಿದಾಗ ತಕರಾರು ಮಾಡಿದ್ದು, ನಂತರ ಪೋನ ಮಾಡಿ ತನ್ನಣ್ಣ ದೇವರಾಜ ಹಾಗೂ ಅಳಿಯ ಇಂದ್ರಜೀತ @ ವಿನೂ ಇವರುಗಳಿಗೆ ಕರೆಯಿಸಿದ್ದು, ಸದರಿಯವರು ಬಂದು ನನಗೆ ಕೈಗಳಿಂದ ಹೊಟ್ಟೆಯಲ್ಲಿ, ಬೆನ್ನಿನ ಮೇಲೆ ಸೊಂಟಕ್ಕೆ ಹೊಡೆದಿದ್ದು, ಸೀತರಾಮ ಈತನು ಕೈ ಹಿಡಿದು ಹಿಂದಕ್ಕೆ ತಿರುವಿದ್ದು, ನಂತರ ಮೂರು ಜನರೂ ಕೂಡಿಕೊಂಡು ನನಗೆ ಎಳೆದುಕೊಂಡು ತಮ್ಮ ಕಾರಿನಲ್ಲಿ ಜಬರದಸ್ತಿಯಿಂದ ಎತ್ತಿ ಹಾಕಿ ಹಸನಾಪೂರ ಕ್ರಾಸ ವರೆಗೆ ಅಪಹರಣ ಮಾಡಿಕೊಂಡು ಬಂದು ಅಲ್ಲಿ ಇನ್ನೊಮ್ಮೆ ಹಣ ಕೇಳಿದರೆ ಮತ್ತು ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬೀಡುವುದಿಲ್ಲ ಅಂತಾ ಜೀವದ ಭೇದರಿಕೆ ಹಾಕಿರುತ್ತಾರೆ ಸದರಿ ಸೀತರಾಮ ತಂದೆ ತಿಪ್ಪಣ್ಣ ಸುಬೇದಾರ, ಆತನ ಅಣ್ಣ ದೇವರಾಜ ತಂದೆ ತಿಪ್ಪಣ್ಣ , ಅಳಿಯನಾದ ಇಂದ್ರಜೀತ @ ವಿನೂ ತಂದೆ ಗೌಡಪ್ಪಾ ಇವರುಗಳ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಅಂಬದಾಸ ತಂದೆ ಭಾರತ ಸಾ:ಶಾಸ್ತ್ರಿ ಚೌಕ್ ಲೋಹಾರ ಗಲ್ಲಿ ಇವರು ದಿನಾಂಕ:12.03.2018 ರಂದು 8.30 ಪಿಎಂಕ್ಕೆ ನಮ್ಮ ಮನೆಯ ಮುಂದಿನ ಹೋಟೆಲ ಹತ್ತಿರ ಬರುವಾಗ ಅದೇ ವೇಳೆಗೆ ಮೊಹ್ಮದ ರಫೀಕ್ ಇತನು ಅವಾಚ್ಚವಾಗಿ ಬೈದು ಎದೆ ಮೇಲಿನ ಅಂಗಿ ಹಿಡಿದು ಕೈ ಜೊಗ್ಗಾಡುವಾಗ ಕೇಳಿದ್ದಕ್ಕೆ ಕಾಲಿನಿಂದ ಒದ್ದು ರಫೀಕ್ ಮತ್ತು ಅನ್ವರ ಹಾಗೂ ಇತತರ ಕೂಡಿಕೊಂಡು ಅವಾಚ್ಯವಗಿ ಬೈದು ಗುಂಪು ಕಟ್ಟಿಕೊಂಡು ಕೈಯಿಂದ ಮತ್ತು ಕೋಲೆ ಮಾಡುವ ಉದ್ದೇಶದಿಂದ ಕಬ್ಬಣದ ನಳದ ಪೈಪ್ ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 11-03-2018 ರಂದು  ನನ್ನ ಅಣ್ಣ ನಭಿಲಾಲ ಮತ್ತು ನಮ್ಮ ಓಣಿಯ ಗೌಸೋದ್ದಿನ್ ತಂದೆ ಇಸ್ಮಾಯಿಲ್ ಭಾಗವಾನ ಹಾಗೂ ರೀಯಾನ ಬೇಗಂ ಗಂಡ ಇಸ್ಮಾಯಿಲ್ ಭಾಗವಾನ ರವರೇಲ್ಲರೂ ಭೋಗನಳ್ಳಿ ಗ್ರಾಮದ ಆಸೀಫ್ ತಂದೆ ಜೈನೋದ್ದಿನ್ ಗಿರಣಿ ಎಂಬಾತನು ನಡೆಸುವ ಕಾರ ನಂ ಕೆಎ-05-ಎಮ್.ಸಿ-6064 ನೇದ್ದರಲ್ಲಿ ಮಾಶಾಳ ಗ್ರಾಮಕ್ಕೆ ದೇವರು ಕೇಳಲು ಮನೆಯಿಂದ ಆಸೀಪ್ ಗಿರಣಿ ಎಂಬಾತನೊಂದಿಗೆ ಹೋಗಿದ್ದು ಕಾರನ್ನು ಆಸೀಫನೆ ನಡೆಸಿಕೊಂಡು ಹೋಗಿರುತ್ತಾನೆ. ಬೆಳಿಗ್ಗೆ 09:40 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಮಾತೋಳಿ ಗ್ರಾಮದ ಯಾರೋ ಒಬ್ಬರು ನನ್ನ ಮೋಬಾಯಿಲ್ ಫೋನ್ ಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ಕಲಬುರಗಿ-ಅಫಜಲಪೂರ ರೋಡಿನ ಮೇಲೆ ಮಾತೋಳಿ ಗ್ರಾಮ ದಾಟಿ ಸ್ವಲ್ಪ ಮುಂದೆ ಹೋದ ನಂತರ ನಿಮ್ಮ ಅಣ್ಣ ನಭಿಲಾಲ ಮತ್ತು ಗೌಸೋದ್ದಿನ್ ಭಾಗವಾನ ಹಾಗೂ ರೀಯಾನಾ ಬೇಗಂ ರವರು ಕುಳಿತು ಹೊರಟಿದ್ದ ಕಾರ ನಂ ಕೆಎ-05-ಎಮ್.ಸಿ-6064 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರೋಡಿನ ಪಕ್ಕದ ದಕ್ಷಿಣ ದಿಕ್ಕಿನಲ್ಲಿರುವ ತಗ್ಗಿನಲ್ಲಿ ಪಲ್ಟಿ ಯಾಗಿ ಬಿದ್ದಿರುತ್ತದೆ. ಘಟನೆ ಸಂಭವಿಸಿದ ನಂತರ ಕಾರಿನ ಚಾಲಕನು ಓಡಿ ಹೋಗಿರುತ್ತಾನೆ. ಸದರಿ ಘಟನೆಯಲ್ಲಿ ನಿಮ್ಮ ಅಣ್ಣ ನಭಿಲಾಲನ ಎದೆಗೆ,  ಭಾರಿ ಒಳ ಪೆಟ್ಟಾಗಿದ್ದರಿಂದ ಪ್ರಜ್ಞಾಹಿನ ಸ್ಥಿತಿಯಲ್ಲಿ ಇರುತ್ತಾನೆ. ಗೌಸೋದ್ದಿನ್ ಭಾಗವಾನ ಮತ್ತು ರೀಯಾನಾ ಬೇಗಂ ರವರಿಗೆ ಕೈ, ಕಾಲುಗಳಿಗೆ ಮತ್ತು ಶರೀರದ  ಕೆಲವು ಭಾಗಗಳಲ್ಲಿ ಭಾರಿ ರಕ್ತಗಾಯ ಮತ್ತು ಒಳ ಪೆಟ್ಟುಗಳು ಆಗಿರುತ್ತವೆ ಅಂತಾ ತಿಳಿಸಿದನು ಕೂಡಲೇ ನಾನು ನಮ್ಮೂರಿನಿಂದ ಹೊರಟು ಘಟನೆ ಸ್ಥಳಕ್ಕೆ ಬಂದಿದ್ದು ನಾನು ಬರುವಷ್ಟರಲ್ಲಿ ಯಾರೋ ವ್ಯಕ್ತಿಗಳು 108 ವಾಹನಕ್ಕೆ ಫೋನ್ ಮಾಡಿದ್ದರಿಂದ ಸ್ಥಳಕ್ಕೆ 108 ವಾಹನ ಬಂದು ನಿಂತಿದ್ದರಿಂದ ನಾನು ಮತ್ತು ಘಟನೆ ಸ್ಥಳದಲ್ಲಿ ನೆರದ ಜನರೆಲ್ಲರೂ ನನ್ನ ಅಣ್ಣ ಮತ್ತು ಗೌಸೋದ್ದಿನ್ ಹಾಗೂ ರೀಯಾನಾ ಬೇಗಂ ರವರಿಗೆ 108 ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಕಲಬುರಗಿ ಕರೆದುಕೊಂಡು  ಹೋಗಿ ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋದಾಗ ನನ್ನ ಅಣ್ಣನನ್ನು ಪರೀಕ್ಷಿಸಿದ ವೈಧ್ಯರು ಸದರಿಯವನು ಆಗಲೇ ಮಾರ್ಗ ಮಧ್ಯದಲ್ಲಿ ಸುಮಾರು ½ ಗಂಟೆಯ ಹಿಂದೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಅಂತಾ ಶ್ರೀ ಅಸ್ಪಾಕ ತಂದೆ ಮದರಸಾಬ ಖುರೇಸಿ ಸಾ: ಅತನೂರ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ:12/03/2018 ರಂದು 06-00 ಪಿಎಂ ಸುಮಾರಿಗೆ ಗಾಯಾಳು ಶಂಕರ ಬಾಚಾ ಇವರು ಕಲಬುರಗಿ ಹುಮನಾಬಾದ ರೋಡಿನ ಶರಣಪ್ಪಾ ಹೊಟೇಲ ಹತ್ತಿರ ಸಾಕ್ಷಿದಾರನಾದ ಶಿವಕುಮಾರ ಗೊಬ್ಬುರವಾಡಿ ಇವರು ಬರುವದನ್ನು ಕಾಯುತ್ತಾ ನಿಂತಾಗ ಕಲಬುರಗಿ ಕಡೆಯಿಂದ ಬೊಲೇರೊ ಜೀಪ ನಂ. ಕೆಎ:29 ಎಂ: 4415 ನೇದ್ದರ ಚಾಲಕತನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗಾಯಾಳು ಶಂಕರ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ ಶಂಕರನಿಗೆ ಎದೆಗೆ ಮತ್ತು ತಲೆಗೆ ಭಾರಿ ಗುಪ್ತಗಾಯವಾಗಿರುತ್ತದೆ ಅಂತಾ ರಾಜಕುಮಾರ ತಂದೆ ಶಂಕರ ಬಾಚಾ ಸಾ: ಮಹಾಗಾಂವ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ರಫೀಕ ತಂದೆ ಬುಡೆನ ಸಾಬ ಖುರೇಷಿ ಸಾ: ಶಾಸ್ತ್ರಿ ಚೌಕ ಶಹಾಬಾದ ರವರು ದಿನಾಂಕ: 12/03/2018 ರಂದು ರಾತ್ರಿ 8-30 ಗಂಟೆಗೆ ತಾನು ದಾಬಾ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಹೊರಗಡೆ ನಿಂತಾಗ ನಮ್ಮ ಓಣಿಯ ಪ್ರಧಿಪ ತಂದೆ ದೇವಿದಾಗ ಪವಾರ , ನೇತಾಜಿ , ಜೈನತ ಸಂಗಡ 5-6 ಜನರು ಕೈಯಿಲ್ಲಿ ಬಡಿಗೆ ರಾಡು ಹಿಡಿದುಕೊಂಡು ಬಂದವರೆ ನನಗೆ ಏ ರಂಡಿ ಮಗನೆ ಓಣಿಯಲ್ಲಿ ನಿಂತುಕೊಂಡು ನಮಗೆ ದಿಟ್ಟಿಸಿ ನೋಡತಿ ರಂಡಿ ಮಗನೆ ಅಂತಾ ಬೈದು  ನನಗೆ ಜಗಳ ತೆಗೆದು ಎದೆಯ ಮೇಲಿನ ಅಂಗಿ ಹಿಡಿದು ರಾಂಡಕೆ ಬಚ್ಚೆ ಹಮಾರೆ ಸಾಮನೆ ಆಕಡತೇ ಬೋಸಡಿಕೆ ಅಂತಾ ಬೈಯ್ದು ಕಾಲಿನಿಂದ ಹೊಟ್ಟೆಗೆ ಒದ್ದು ಗುಪ್ತ ಪೆಟ್ಟು ಮಾಡಿದರು ಆಗ ನಾನು ಹೆದರಿ ಮನೆ ಒಳಗೆ ಓಡಿ ಹೋದರು ಕೂಡ ನನ್ನ ಮನೆಯಲ್ಲಿ ಆಕ್ರಮ ಪ್ರವೇಶ ಮಾಡಿ ಬಂದು ನನಗೆ ಹಿಡಿದುಕೊಂಡು ಮನೆಯ ಹೊರಗೆ ಎಳೆದುಕೊಂಡು ಬಂದು ನನಗೆ ಕೊಲೆ ಮಾಡುವ ಉದ್ದೇಶದಿಂದ ಪ್ರದೀಪ ಇತನು ತನ್ನ ಕೈಯಲ್ಲಿದ್ದ ರಾಡಿನಿಂದ ನ್ನ ತಲೆಗೆ ಹೊಡೆದು ಭಾರಿ ರಕ್ತಗಾಯಾ ಮಾಡಿದನು ಮತ್ತು ಜಗಳ ಬಿಡಿಸಲು ಬಂದ ನನ್ನ ತಮ್ಮ ಅನ್ವರನಿಗೂ ಮೈ ಕೈಗೆ ಹೊಡೆದು ಗುಪ್ತ ಗಾಯಾ ಮಾಡಿರುತ್ತಾರೆ ಜಗಳದಲ್ಲಿ ನನಗೆ ಬಲಕೈಗೆ ಒಳಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.