ಕಳವು
ಪ್ರಕರಣ :
ರಾಘವೇಂದ್ರ
ನಗರ ಠಾಣೆ : ಶ್ರೀಮತಿ ಆರೀಫಾ ತಹಸೀನ್ ಗಂಡ ಅಖೀಲ ಅಹ್ಮದ ಸಾ:
ನೊರಾನಿ ಮಹೊಲ್ಲಾ ಹಾಗರಗಾ ರೋಡ ಹಾ:ವ: ಮದಿನ ಕಾಲೋನಿ ಕಲಬುರಗಿ ಇವರು ದಿನಾಂಕ 13.03.2018 ರಂದು ಮದೀನಾ
ಕಾಲೋನಿಯಲ್ಲಿರುವ ನಮ್ಮ ತಾಯಿಯ ಮನೆಯಿಂದ ರಾತ್ರಿ 9:30 ಗಂಟೆಗೆ ನಾನು, ನಮ್ಮ ತಂದೆ
ತಾಯಿ, ನನ್ನ ಗಂಡ, ನನ್ನ ತಂಗಿ ಖೂದ್ದಸಿಯಾ ಮತ್ತು ಅವಳ ಗಂಡ ಸೈಯದ ಫಾರುಕ ಕೂಡಿಕೊಂಡು
ಇನೊವಾ ಕಾರನಲ್ಲಿ ಹೈದ್ರಬಾದಕ್ಕೆ ಹೋಗಿದ್ದು ಹೈದ್ರಾಬಾದ ಎರ್ ಪೋರ್ಟನಲ್ಲಿ ನಮ್ಮ ತಂದೆ
ತಾಯಿಯವರನ್ನು ಬಿಟ್ಟು ದಿನಾಂಕ 14.03.2018 ರಂದು ಬೆಳ್ಳಿಗ್ಗೆ 3:00 ಗಂಟೆಗೆ
ಹೈದ್ರಾಬಾದ ಬಿಟ್ಟು ಬೆಳ್ಳಿಗ್ಗೆ 6:30 ಗಂಟೆಗೆ ನಾನು ನಮ್ಮ ತಾಯಿಯ ಮೇನೆಗೆ ಬಂದು ನೋಡಲು ಮನೆಯ ಬಾಗಿಲ
ಕೊಂಡಿ ಒಳಗಿನಿಂದ ಹಾಕಿದ್ದು ನಂತರ ನಾನು ಮನೆಯ ಹಿಂದುಗಡೆ ಹೋಗಿ ಹಿಂದಿನ ಬಾಗಿಲು ನೋಡಲು ಬಾಗಿಲ
ತೆರೆದಿದ್ದು ಮನೆಯ ಒಳಗೆ ಹೋಗಿ ನೋಡಲು ಮನೆಯಲ್ಲಿ ಇದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ
ಬಿದ್ದಿದ್ದು ಮತ್ತು ಮನೆಯಲ್ಲಿ ಇದ್ದ ಎಲ್ಲಾ ಅಲಮಾರಿಗಳು ತೆಗೆದು ಅದರಲ್ಲಿ ಇದ್ದ ಸಾಮಾನುಗಳು
ಹೊರಗೆ ಬಿಸಾಡಿದ್ದು. ನಾವು ಹೈದ್ರಾಬಾದಕ್ಕೆ ಹೋದಾಗ ಯಾರೊ ಕಳ್ಳರು ನಮ್ಮ ಮನೆ ಬಾಗೀಲ ಕೀಲಿ
ಮುರಿದು ಮನೆ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನಂತರ ನಾನು ನನ್ನ ಗಂಡ ಮತ್ತು ನನ್ನ
ತಂಗಿ ಹಾಗೂ ಅವಳ ಗಂಡ ಕೂಡಿಕೊಂಡು ಮನೆಯನ್ನು ಪರಿಶೀಲಿಸಿ ನೋಡಲು ಅಲಮಾರಿಯಲ್ಲಿ ಇಟ್ಟಿದ ನನ್ನ 3 ತೋಲೆ ಬಂಗಾರದ
ನಕ್ಲೇಸ್ ಮತ್ತು ಕೀವಿ ಓಲೆಗಳು, ಒಂದುವರೆ (1.5) ತೋಲೆ ಬಂಗಾರ ಎರಡು ಬಳೆಗಳು, ಒಂದು ಎರಡುವರೆ
(2.5) ತೋಲೆ ಬಂಗಾರದ ಉದ್ದನೆಯ ಹಾರ, ತಲಾ 3 ಗ್ರಾಂ ತೋಕದ 5 ಉಂಗುರಗಳು ನನ್ನ ತಂಗಿಯಾದ ನಾಜಿಯಾ ನೌಸಿನ್ ಇವಳ 3 ತೋಲೆ ಬಂಗಾರದ
ನಕ್ಲೇಸ, 5 ತೋಲೆ ಬಂಗಾರದ ಉದ್ದನೆಯ ಹಾರ, ಅಲಮಾರಿಯಲ್ಲಿಟ್ಟಿದ್ದು ಕಳ್ಳತನವಾಗಿದ್ದು ಇರುತ್ತದೆ. ಕಳ್ಳರು
ಕಳ್ಳತನ ಮಾಡಿದ ಅಲಮಾರಿಯಲ್ಲಿ ನಮ್ಮ ತಾಯಿಯವರ ಬಂಗಾರದ ಆಭರಣಗಳು ಇದ್ದು ಅವರ ಎಷ್ಟು ಬಂಗಾರ ಆಭರಣ
ಕಳ್ಳತನ ಮಾಡಿದೆ ಎನ್ನುವದು ಸಧ್ಯ ನನಗೆ ಗೊತ್ತಿರುವದಿಲ್ಲ ದಿನಾಂಕ 13.03.2018 ರಂದು ರಾತ್ರಿ 9:30 ಗಂಟೆಯಿಂದ
ದಿನಾಂಕ 14.03.2018 ರಂದು ಬೆಳ್ಳಿಗ್ಗೆ 6:30 ಗಂಟೆಯ
ಮಧ್ಯದಲ್ಲಿ ಯಾರೊ ಕಳ್ಳರು ನಮ್ಮ ತಾಯಿ ಮನೆಯ ಬಾಕಿ ಕೀಲಿ ಮೂರಿದು ಮನೆಯಲ್ಲಿ ಇಟ್ಟಿದ ಸುಮಾರು 16.5 ತೋಲೆ ಅಂದಾಜ
ಕಿಮ್ಮತ್ತು 5,00,000/- ರೂ ಬಂಗಾರದ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಡಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಗ್ರಾಮೀಣ ಠಾಣೆ
: ದಿನಾಂಕ
13/03/2018 ರಂದು ರಾತ್ರಿ ಕಲಬುರಗಿ ಆಳಂದ ರೋಡಿಗೆ ಇರುವ ಸುಂಟನೂರ ಕ್ರಾಸ ಹತ್ತಿರ ಮೃತ ಅಂಜನಾಬಾಯಿ
ಗಂಡ ರಾಮು ಚವ್ಹಾಣ ಸಾ:ಸುಂಟನೂರ ತಾ:ಆಳಂದ ಜಿ:ಕಲಬುರಗಿ ಇವಳು ಕಲಬುರಗಿ ಬರುವ ಕುರಿತು ರಾತ್ರಿ
08:15 ಗಂಟೆ ಸುಮಾರಿಗೆ ಸುಂಟನೂರ ಗ್ರಾಮದ ಕ್ರಾಸ ದಾಟುತ್ತಿದ್ದಾಗ ಅದೇ ವೇಳೆಗೆ ಆಳಂದ ರೋಡ ಕಡೆಯಿಂದ
ಕೆ.ಎಸ್.ಆರ್.ಟಿ.ಸಿ ಬಸ್ ನಂ KA-32
F-5127 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಬಸ್ಸನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ
ನಡೆಸಿಕೊಂಡು ಬಂದು ಮೃತ ಅಂಜನಾಬಾಯಿ ಇವಳಿಗೆ ಜೋರಾಗಿ ಅಪಘಾತ ಪಡಿಸಿ ಬಸ್ಸನ್ನು ಸ್ವಲ್ಪ ನಿಲ್ಲಿಸದಂತೆ
ಮಾಡಿ ನಿಲ್ಲಿಸದೇ ಹಾಗೆಯೇ ಓಡಿಸಿಕೊಂಡು ಹೋಗಿದ್ದು ಇದರಿಂದ್ದ ಮೃತ ಅಂಜನಾಬಾಯಿ ಇವಳಿಗೆ ತಲೆಗೆ ಮತ್ತು
ಬಲಗೈಗೆ ಹಾಗು ಇತರೇ ಕಡೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಸದರಿ
ಈ ಮೇಲ್ಕಂಡ ಕೆ.ಎಸ್.ಆರ್.ಟಿ.ಸಿ ಬಸ್ ನಂ KA-32
F-5127 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ
ಬಹದ್ದೂರ ತಂದೆ ರಾಮು ಚವ್ಹಾನ ಸಾ : ಸುಂಟನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ
ವಿಠಲ್ ತಂದೆ ತಿಪ್ಪಣ್ಣ ಬಂದಗೆ ಸಾ||ವಾಗ್ದರಗಿ ರವರು ತಮ್ಮೂರಿನಲ್ಲಿ ನಾನು
ಕೆಲವು ದಿವಸಗಳ ಹಿಂದೆ ಸಿಸಿ ರಸ್ತೆ ಕೆಲಸ ಮಾಡಿಸುತ್ತಿರುವಾಗ ನಮ್ಮ ಜಾತಿಯವರಾದ ರೇವಪ್ಪ ತಂದೆ ಭುಜಂಗಪ್ಪ
ಬಂದಗೆ ಇವರುಗಳು ರಸ್ತೆಯ ಅಗಲಿಕರಣ ಮಾಡಿ ಕೆಲಸ ಮಾಡಬೇಕೆಂದು ನನ್ನೊಂದಿಗೆ ತಕರಾರು ಮಾಡಿದ್ದು ಅದಕ್ಕೆ
ನಾನು ಎಷ್ಟು ರಸ್ತೆ ಅಗಲ ಮಾಡಬೇಕೆಂದು ನಿಗದಿಪಡಿಸಿದೇಯೋ ಅಸ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿರುತ್ತೇನೆ.
ಅದಕ್ಕೆ ಅವರು ಹಾಗೂ ಅವರ ಕಡೆಯವರು ಕೂಡಿ ನನ್ನೊಂದಿಗೆ ತಕರಾರು ಮಾಡಿದ್ದು ಅವಾಗಿನಿಂದ ಅವರು ನನ್ನ
ಮೇಲೆ ಧ್ವೇಷ ಸಾದಿಸುತ್ತಾ ಬಂದಿದ್ದು ದಿನಾಂಕ : 14/03/2018 ರಂದು ಸಂಜೆ
7-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಸುಮಿತ್ರಾಬಾಯಿ ತಾಯಿಯಾದ
ರತ್ನಮ್ಮ ಗಂಡ ತಿಪ್ಪಣ್ಣಾ ಬಂದಗೆ ಮಕ್ಕಳಾದ ಆನಂದ, ತಿಪ್ಪಣ್ಣ,
ಜೈಭೀಮ, ರಾಹುಲ ಮತ್ತು ಶಾರದಾಬಾಯಿ ಗಂಡ ಅನೀಲಕುಮಾರ ಸಂಗೋಳಗಿ
ರವರೆಲ್ಲರೂ ನಮ್ಮ ಹೊಸ ಮನೆಯ ಕೊಟ್ಟಿಗೆಯಾ ಹತ್ತಿರ ಮಾತನಾಡುತ್ತಾ ಕುಳಿತಿರುವಾಗ ನಮ್ಮ ಗ್ರಾಮದ ನಮ್ಮ
ಜಾತಿಯವರೆಯಾದ 1)ರೇವಪ್ಪ ತಂದೆ ಭುಜಂಗಪ್ಪ ಬಂದಗೆ, 2)ಗುಂಡಪ್ಪ ತಂದೆ ಭುಜಂಗಪ್ಪ ಬಂದಗೆ, 3)ಭುಜಂಗಪ್ಪ @ ಹಣಮಂತ ತಂದೆ ರೇವಪ್ಪ ಬಂದಗೆ, 4)ಮಹಾದೇವ ತಂದೆ ಗುಂಡಪ್ಪ ಬಂದಗೆ,
5)ರಾಜಕುಮಾರ ತಂದೆ ಗುಂಡಪ್ಪ ಬಂದಗೆ, 6)ಜೈಭೀಮ ತಂದೆ ಗುಂಡಪ್ಪ
ಬಂದಗೆ, 7)ಪ್ರಭುಲಿಂಗ ತಂದೆ ಕಳಸಪ್ಪ ಬಂದಗೆ, 8)ಪ್ರಕಾಶ ತಂದೆ ರೇವಪ್ಪ ಬಂದಗೆ, 9)ಪ್ರಭುಲಿಂಗ ತಂದೆ ರೇವಪ್ಪ ಬಂದಗೆ.
10)ರವಿಕುಮಾರ ತಂದೆ ಕಳಸಪ್ಪ ಬಂದಗೆ, 11)ಶರಣಪ್ಪ
ತಂದೆ ಸೂರ್ಯಕಾಂತ ಬಂದಗೆ, 12)ಹಣಮಂತರಾಯ ತಂದೆ ಸೂರ್ಯಕಾಂತ ಬಂದಗೆ,
13)ಸೂರ್ಯಕಾಂತ ತಂದೆ ಹಣಮಂತರಾಯ ಬಂದಗೆ, 14)ಸತೀಶ ತಂದೆ
ಶ್ರೀಮಂತ ಬಂದಗೆ, 15)ಆಕಾಶ ತಂದೆ ಹಣಮಂತರಾಯ ಬಂದಗೆ, 16)ಅನೀಲಕುಮಾರ ತಂದೆ ಹಣಮಂತರಾಯ ಬಂದಗೆ, 17)ಅಶೋಕ ತಂದೆ ಹಣಮಂತರಾಯ
ಬಂದಗೆ, 18)ಪ್ರಕಾಶ ತಂದೆ ತಿಪ್ಪಣ್ಣ ಕಾಂಬಳೆ, 19)ಸುರೇಶ ತಂದೆ ತಿಪ್ಪಣ್ಣ ಕಾಂಬಳೆ, 20)ಸಂತೋಷ ತಂದೆ ಶ್ರೀಮಂತ ಸಿಂಗೆ,
21)ಕಮಲಾಬಾಯಿ ಗಂಡ ರೇವಪ್ಪ ಬಂದಗೆ, 22)ಅಂದಮ್ಮ ಗಂಡ ಗುಂಡಪ್ಪ
ಬಂದಗೆ, 23)ಆಶಾ ಗಂಡ ರಾಜಕುಮಾರ ಬಂದಗೆ, 24)ಆಶಾ
ಗಂಡ ಮಹಾದೇವ ಬಂದಗೆ, 25)ತುಳಜಬಾಯಿ ಗಂಡ ಪ್ರಕಾಶ ಬಂದಗೆ, 26)ಅಂಬಿಕಾ ಗಂಡ ಪ್ರಭುಲಿಂಗ ಬಂದಗೆ, 27)ರೇಷ್ಮ ಗಂಡ ಪ್ರಭುಲಿಂಗ
ಬಂದಗೆ, 28)ಶಾಂತಬಾಯಿ ಗಂಡ ಸೂರ್ಯಕಾಂತ ಬಂದಗೆ, 29)ಲಕ್ಷ್ಮೀ ತಂದೆ ರೇವಪ್ಪ ಬಂದಗೆ ಮತ್ತು 30)ಶೋಭಾ ಗಂಡ ಹಣಮಂತ ಬಂದಗೆ
ಇವರೆಲ್ಲರೂ ಕೂಡಿಕೊಂಡು ಬಂದು ಅವರಲ್ಲಿ ರೇವಪ್ಪ, ಗುಂಡಪ್ಪ, ಭುಜಂಗಪ್ಪ ರವರುಗಳು ಏ ಬೋಸಡಿ ಮಗನೆ ನಾವು ಹೇಳಿದ ಹಾಗೆ ಸಿಸಿ ರಸ್ತೆ ಕೆಲಸ ಮಾಡುವುದಿಲ್ಲ
ಅಂತಿಯಾ ಎಂದು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಮಹಾದೇವ ರಾಜಕುಮಾರ ಜೈಭೀಮ ರವರುಗಳು ಬಡಿಗೆಯಿಂದ,
ಕಬ್ಬಿಣದ ರಾಡಿನಿಂದ ನನಗೆ ಹಾಗೂ ನನ್ನ ಮಕ್ಕಳಾದ ಆನಂದ, ತಿಪ್ಪಣ್ಣಾ ರವರಿಗೆ ಹೊಡೆದಿದ್ದರಿಂದ ನನ್ನ ಹಣೆಯ ಬಲಗಡೆ ರಕ್ತಗಾಯ ಮತ್ತು ಮೇಲಿನ ಮುಂಭಾಗದ
ಒಂದು ಹಲ್ಲು ಮುರಿದು ಬಿದ್ದಿದ್ದು ನನ್ನ ಮಗ ಆನಂದನ ತಲೆಯ ಬಲಗಡೆಗೆ ಮತ್ತು ಬಲಗೈ ಮೊಳಕೈಗೆ ಗಾಯವಾಗಿದ್ದು
ತಿಪ್ಪಣ್ಣನ ಎಡಗೈ ರಟ್ಟಿಗೆ ಒಳಪೆಟ್ಟಿ ಆಗಿರುತ್ತದೆ. ಪ್ರಭುಲಿಂಗ, ಪ್ರಕಾಶ,
ಪ್ರಭುಲಿಂಗ, ರವಿಕುಮಾರುಗಳು ನನ್ನ ಮಗಳಾದ ಶಾರದಾಬಾಯಿ
ಗಂಡು ಮಕ್ಕಳಾದ ಜೈಭೀಮ ಮತ್ತು ರಾಹುಲ ಇವರಿಗೆ ಕಬ್ಬಿಣದ ರಾಡು ಚಾಕು ಮತ್ತು ಬಡಿಗೆಯಿಂದ ಹೊಡೆದಿದ್ದರಿಂದ
ನನ್ನ ಮಗಳ ತಲೆಗೆ ಭಾರಿ ರಕ್ತಗಾಯ ಎಡಗೈ ಮುಂಗೈಗೆ ಒಳಪೆಟ್ಟು ಜೈಭೀಮನಿಗೆ ತಲೆಯ ಹಿಂಭಾಗಗಕ್ಕೆ ರಕ್ತಗಾಯ
ಬಲಗಡೆ ಬೆನ್ನಿಗೆ ಎಡಗೈ ರಟ್ಟಿಗೆ ಒಳಪೆಟ್ಟಾಗಿ ಬಾವು ಬಂದಿರುತ್ತದೆ, ರಾಹುಲನ
ಗದ್ದಕ್ಕೆ ರಕ್ತಗಾಯವಾಗಿ ಎದೆಗೆ ಬೆನ್ನಿಗೆ ಒಳಪೆಟ್ಟಾಗಿರುತ್ತದೆ. ರವಿಕುಮಾರ, ಶರಣಪ್ಪ ಹಣಮಂತರಾಯ, ಸೂರ್ಯಕಾಂತ ರವರುಗಳು ನನ್ನ ತಾಯಿಯಾದ ರತ್ನಮ್ಮ ಹಾಗೂ ಹೆಂಡತಿಯಾದ ಸುಮೀತ್ರಾಬಾಯಿ ಇವರಿಗೆ
ಕಬ್ಬಿಣದ ರಾಡು ಮತ್ತು ಬಡಿಗೆಯಿಂದ ಹೊಡೆದಿದ್ದರಿಂದ ನನ್ನ ತಾಯಿಯ ಎಡಗೈ ರಟ್ಟಿಗೆ ಭಾರಿಗಾಯವಾಗಿ ತಲೆಯ
ಹಿಂಭಾಗಗಕ್ಕೆ ಒಳಪೆಟ್ಟಾಗಿರುತ್ತದೆ. ಅಲ್ಲದೇ ನನ್ನ ಹೆಂಡತಿಯ ಬಲಗೈ ರಟ್ಟಿಗೆ ಭಾರಿಗಾಯವಾಗಿ ಬೆನ್ನಿಗೆ
ಒಳಪೆಟ್ಟಾಗಿರುತ್ತದೆ. ಸತೀಶ, ಆಕಾಶ, ಅನೀಲಕುಮಾರ,
ಅಶೋಕ, ಪ್ರಕಾಶ, ಸುರೇಶ,
ಸಂತೋಷ ರವರುಗಳು ಕೂಡಿ ನನಗೆ ಹಾಗು ನಮ್ಮ ಮಕ್ಕಳಿಗೆ ನೆಲಕ್ಕೆ ಕೆಡವಿ ಬಡಿಗೆಯಿಂದ
ಅಡ್ಡಾದಿಡ್ಡಿಯಾಗಿ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಪಡಿಸಿ ಇವತ್ತು ನೀವು ಉಳಿದ್ದಿರಿ ಮಕ್ಕಳೆ
ಮುಂದೆ ಒಂದಾಲ್ಲೊಂದು ದಿವಸ ನಿಮಗೆ ಜೀವ ಸಹಿತ ಬಿಡುವುದಿಲ್ಲ ಖಲಾಸ ಮಾಡುತ್ತೇವೆಂದು ಜೀವದ ಬೆದರಿಕೆ
ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ
ಮಹಾದೇವ ತಂದೆ ಗುಂಡಪ್ಪ ಸಾ||ವಾಗ್ದರಗಿ ರವರ ಜಾತಿಯವರಾದ ವಿಠಲ್ ತಂದೆ ತಿಪ್ಪಣ್ಣ ಬಂದಗೆ ಇವರ ಹೊಸಮನೆಯು
ನಮ್ಮ ಊರಿನ ಸರ್ಕಾರಿ ಶಾಲೆಯ ಹತ್ತಿರ ವಿದ್ದು ಅವರ ಮನೆಯ ಅಥವಾ ಕೊಟ್ಟಿಗೆಯ ಮುಂದಿನಿಂದಲೇ ನಮ್ಮ ಹಾಗೂ
ನಮ್ಮ ಅಣತಮಕಿಯವರಾದ ಭುಜಂಗಪ್ಪ ತಂದೆ ರೇವಪ್ಪ ಬಂದಗೆ ರವರ ಮನೆಗಳಿಗೆ ಹೋಗಿಬರಲು ರಸ್ತೆ ಇರುತ್ತದೆ.
ಆದರೆ ವಿಠಲ್ ಇವರು ಆ ರಸ್ತೆಯಿಂದ ನಮಗೆ ಹೋಗಿಬರಲು ಬಿಡಬಾರದೆಂದು ನಮ್ಮೊಂದಿಗೆ ಆಗಾಗ ತಕರಾರು ಮಾಡುತ್ತಾ
ಬಂದಿರುತ್ತಾರೆ. ದಿನಾಂಕ:14/03/2018 ರಂದು ಸಂಜೆ 7-30 ಗಂಟೆ ಸುಮಾರಿಗೆ ನಾನು ಮತ್ತು ಭುಜಂಗಪ್ಪ ತಂದೆ ರೇವಪ್ಪ ಬಂದಗೆ ರವರುಗಳು ಸಂಡಾಸಕ್ಕೆ ಹೋಗಿ
ವಿಠಲ್ ಇವರ ಕೊಟ್ಟಿಗೆಯ ಮುಂದಿನ ರಸ್ತೆಯಿಂದ ವಾಪಸ್ಸ ನಮ್ಮ ಮನೆಗೆ ಹೋಗುವಾಗ ವಿಠಲ್ ಬಂದಗೆ ಈತನು
ನನಗೆ ಹಾಗೂ ಭುಜಂಗಪ್ಪ ಇವರಿಗೆ ಏ ಸೂಳೆ ಮಕ್ಕಳೆ ಇಲ್ಲಿಂದ ಹೋಗಬೇಡ ಅಂದರು ಸಹ ಏಕೆ ಹೊಗುತ್ತಿದ್ದಿರಿ
ಎಂದು ಅವಾಚ್ಯವಾಗಿ ಬೈಯುತ್ತಾ ನಮ್ಮೊಂದಿಗೆ ಜಗಳ ತಗೆದಿದ್ದು ಅಷ್ಟರಲ್ಲಿಯೇ ನಮ್ಮ ಸಂಬಂದಿಕರಾದ ಪ್ರಕಾಶ
ತಂದೆ ರೇವಪ್ಪ ಬಂದಗೆ, ರಾಜಕುಮಾರ ತಂದೆ ಗುಂಡಪ್ಪ ಬಂದಗೆ, ಗುಂಡಪ್ಪ ತಂದೆ ಭುಜಂಗಪ್ಪ ಬಂದಗೆ, ಪ್ರಭುಲಿಂಗ ತಂದೆ ಕಳಸಪ್ಪ
ಬಂದಗೆ, ಕಮಲಾಬಾಯಿ ಗಂಡ ರೇವಪ್ಪ ಬಂದಗೆ, ಅಂದಮ್ಮ
ಗಂಡ ಗುಂಡಪ್ಪ ಬಂದಗೆ ಹಾಗೂ ನಮ್ಮ ಒಣೆಯ ಪ್ರಕಾಶ ತಂದೆ ತಿಪ್ಪಣ್ಣ ಕಾಂಬಳೆ ರವರುಗಳು ಬಂದು ವಿಠಲ್
ಇವರಿಗೆ ಈ ರೀತಿ ಬೈಯುವುದು ಸರಿಅಲ್ಲಾ ಎಂದು ಹೇಳುತ್ತಿರುವಾಗ ವಿಠಲನ ಪರವಾಗಿ ಜೈಭೀಮ ತಂದೆ ವಿಠಲ್
ಬಂದಗೆ, ರಾಹುಲ್ ತಂದೆ ವಿಠಲ್ ಬಂದಗೆ, ಆನಂದ ತಂದೆ
ವಿಠಲ್ ಬಂದಗೆ, ಪ್ರಕಾಶ ತಂದೆ ವಿಠಲ್ ಬಂದಗೆ, ರತ್ನಾಬಾಯಿ ಗಂಡ ತಿಪ್ಪಣ್ಣ ಬಂದಗೆ, ಸುಮಿತ್ರಾಬಾಯಿ ಗಂಡ ವಿಠಲ್
ಬಂದಗೆ, ಶಾರಾದಾಬಾಯಿ ತಂದೆ ವಿಠಲ್ ಬಂದಗೆ, ಗೌತಮ್ಮ
ತಂದೆ ನಾಮದೇವ ಸಿಂಗೆ, ಸಂಜುಕುಮಾರ ತಂದೆ ನಾಮದೇ ಸಿಂಗೆ, ಮಲ್ಲಿಕಾರ್ಜುನ ತಂದೆ ನಾಮದೇವ ಸಿಂಗೆ ಹಾಗೂ ವಿಠಲ್ ತಂದೆ ಚಂದಪ್ಪ ಬಂದಗೆ ರವರೆಲ್ಲರೂ ಕೂಡಿಕೊಂಡು
ಬಂದು ಬಡಿಗೆ, ಕಬ್ಬಿಣದ ರಾಡು ಮತ್ತು ಕಲ್ಲಿನಿಂದ ನನಗೆ, ಭುಜಂಗಪ್ಪ, ಪ್ರಭುಲಿಂಗ, ಗುಂಡಪ್ಪ,
ರಾಜಕುಮಾರ, ಪ್ರಕಾಶ ಬಂದಗೆ, ಪ್ರಕಾಶ ಕಾಂಬಳೆ ರವರುಗಳಿಗೆ ಹೊಡೆಬಡೆ ಮಾಡಿದ್ದರಿಂದ ನನಗೆ ಕುತ್ತಿಗೆಯ ಕೆಳಭಾಗಕ್ಕೆ ರಕ್ತಗಾಯ
ಭುಜಂಗಪ್ಪ ಇವರಿಗೆ ಬಲಗಡೆ ಸೊಂಡಕ್ಕೆ, ಎಡಗಡೆ ಮೇಲುಕಿನ ಹತ್ತಿರ ಒಳಪೆಟ್ಟು
ಪ್ರಭುಲಿಂಗ ಬಂದಗೆ ಇವರಿಗೆ ಹೊಟ್ಟೆಗೆ ಒಳಪೆಟ್ಟು ಗುಂಡಪ್ಪ ಬಂದಗೆ ಇವರಿಗೆ ಎಡಗೈ ಮೊಳಕೈಗೆ ಹಾಗೂ
ತಲೆಗೆ ರಕ್ತಗಾಯ ರಾಜಕುಮಾರ ಇವರಿಗೆ ಎಡಗೈ ರಟ್ಟೆಗೆ ತಲೆಗೆ ರಕ್ತಗಾಯ ಪ್ರಕಾಶ ಬಂದಗೆ ಇವರಿಗೆ ಬಲಗಡೆ
ಬೆನ್ನಿಗೆ ಒಳಪೆಟ್ಟು ಪ್ರಕಾಶ ಕಾಂಬಳೆ ಇವರಿಗೆ ಹೊಟ್ಟೆಗೆ ಒಳಪೆಟ್ಟು ಆಗಿದ್ದು ಅಲ್ಲದೇ ವಿಠಲ್ ಈತನು
ನನ್ನ ಬಲಗಡೆ ಭುಜದ ಹತ್ತಿರ ಮತ್ತು ಭುಜಂಗಪ್ಪ ಇವರ ಎಡಗೈ ತೋರುಬೆರಳಿಗೆ ಹಲ್ಲಿನಿಂದ ಕಚ್ಚಿದ್ದರಿಂದ
ರಕ್ತಗಾಯಗಳಾಗಿರುತ್ತವೆ. ಕಮಲಾಬಾಯಿ ಮತ್ತು ಅಂದಮ್ಮ ಇವರಿಗೆ ವಿಠಲ್ ಹಾಗೂ ಪ್ರಕಾಶ ಮತ್ತು ಜೈಭೀಮ
ರವರು ನೆಲ್ಲಕ್ಕೆ ನೂಕಿಸಿ ಕಾಲಿನಿಂದ ಒದ್ದಿದ್ದರಿಂದ ಮೊಳಕಾಲಿಗೆ ತರಿಚದ ಗಾಯಗಳಾಗಿ ದೇಹಕ್ಕೆ ಒಳಪೆಟ್ಟಾಗಿರುತ್ತೆವ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment