POLICE BHAVAN KALABURAGI

POLICE BHAVAN KALABURAGI

26 February 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 25/2/2018 ರಂದು ಬೆಳಿಗ್ಗೆ ಸಿರನೂರ ಗ್ರಾಮಕ್ಕೆ ಔಷದ ಹಾಕಿ ಕೊಂಡು ಬರುವ ಕುರಿತು ತನ್ನ ಮಗನೊಂದಿಗೆ ಪಾಣೆಗಾಂವ ಕ್ರಾಸ ದಿಂದ ರಾಷ್ಟ್ರಿಯ ಹೆದ್ದಾರಿ 218 ರ ಮಹ್ಮದ ಬಿ.ಎಡ್.ಕಾಲೇಜು ಎದುರು ಗಡೆ ರೋಡಿನ ಮೇಲೆ ನಡೆದು ಕೊಂಡು ಹೋಗುತ್ತಿರುವಾಗ ಕಲಬುರಗಿ ಕಡೆಯಿಂದ ಕ್ರೂಜರ ವಾಹನ ನಂ ಕೆಎ-37/3785 ನೇದ್ದರ ಚಾಲಕ ನು ತನ್ನ ವಾಹನವನ್ನು ಚಲಾಯಿಸಿ ಕೊಂಡು ಬಂದು ರೋಡಿನ ಪಕ್ಕದಲ್ಲಿ ನಡೆದುಕೊಂಡುಹೋಗುತ್ತಿರುವ ಪಿಪಳಾಬಾಯಿ&ಉಮೇಶ ಇತನಿಗೆ ಡಿಕ್ಕಿ ಪಡೆಯಿಸಿದ್ದರಿಂದ ಪಿಪಳಾಬಾಯಿ ಇವಳಿಗೆ ತಲೆಗೆ ಬಲಗಡೆ ಮುಖಕ್ಕೆ ಭಾರಿ ರಕ್ತಗಾಯ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಉಮೇಶ ಇತನಿಗೆ ತಲೆಗೆ & ಎರಡು ಕಾಲುಗಳಿಗೆ ಭಾರಿ ರಕ್ತಗಾಯ ಗುಪ್ತಗಾಯಗಳಾಗಿರುತ್ತವೆ ಅಂತಾ ಶ್ರೀ ಸಂತೋಷ ತಂದೆ ಗೋಪು ರಾಠೋಡ ಸಾ// ಬಸವನ ತಾಂಡಾ ಪಾಣೆಗಾಂವ ತಾ/ಜಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ : ದಿನಾಂಕ:- 24/02/2017 ರಂದು ಕಡಗಂಚಿ ಗ್ರಾಮದಲ್ಲಿ ಸಂತೆ ಕಟ್ಟೆಯ ಹತ್ತಿರ ಇರುವ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನೀಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ ಗಜಾನನ.ಕೆ.ನಾಯಕ ಪಿಎಸ್ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಕಡಗಂಚಿ ಗ್ರಾಮದ ಸಂತೆ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಸಂತೆ ಕಟ್ಟೆಯ ಮೇಲೆ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನೀಕರಿಂದ ಹಣ ಪಡೆದು ಒಪನ್ ನಂಬರ್ ಬಂದರೆ ಒಂದು ರೂಪಾಯಿಗೆ ಎಂಟು ರೂಪಾಯಿ ಗೆಲ್ಲಿರಿ ಜಾಯಿಂಟ್ ನಂಬರ ಬಂದರೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆಲ್ಲಿರಿ ಎಂದು ಕೂಗುತ್ತಾ ಸಾರ್ವಜನೀಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಿದ್ದುದ್ದನ್ನು ಖಚೀತ ಪಡೆಸಿಕೊಂಡು ದಾಳಿಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ತೀರ್ಥಪ್ಪಾ ತಂದೆ ರೇವಪ್ಪಾ ಹರಶೆಟ್ಟಿ ಸಾ: ಕಡಗಂಚಿ ಅಂತ ತಿಳಿಸಿದ್ದು ಸದರಿಯವನನ್ನು ಚೆಕ್ ಮಾಡಲಾಗಿ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 320/- ರೂ, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ ದೊರೆತಿದ್ದು ಅವುಗಳನ್ನು ವಶಕ್ಕೆ ಪಡೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

24 February 2018

KALABURAGI DISTRICT REPORTED CRIMES

ಅಪಹರಣ ಪ್ರಕರಣ :
ಅಫಜಲಪೂರ ಠಾಣೆ :ಶ್ರೀ ಮಹೇಶ ತಂದೆ ನಾಮದೇವ ಜಾಧವ ಸಾ||ಅರ್ಜುಣಗಿ ತಾಂಡಾ  ತಾ||ಅಫಜಲಪೂರ ರವರ ಮಗ ಓಂಕಾರ ಈತನು ನನ್ನ ಹೆಂಡತಿ ತವರು ಮನೆಯಾದ ಬಡದಾಳ ತಾಂಡಾದಲ್ಲಿ ನಮ್ಮ ಅತ್ತೆ ಮಾವನ ಮನೆಯಲ್ಲಿಯೆ ಇದ್ದು ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾರೆ ಸಧ್ಯ ನನ್ನ ಮಗ ಬಡದಾಳ ಗ್ರಾಮದ ಶ್ರೀ ಚನ್ನಮಲ್ಲೇಶ್ವರ(ಮಠದ) ಶಾಲೆಯಲ್ಲಿ  ಏಳನೇ ತರಗತಿಯಲ್ಲಿ ಓದುತಿದ್ದಾನೆ. ದಿನಾಂಕ 19/02/2018 ರಂದು ಮದ್ಯಾಹ್ನ 1.00 ಗಂಟೆ ಸುಮಾರಿಗೆ ನಮ್ಮ ಮಾವನಾದ ಹರಿಚಂದ್ರ ರವರು ನನಗೆ ಪೋನ ಮೂಲಕ ವಿಷಯ ತಿಳಿಸಿದ್ದೆನೆಂದರೆ ಓಂಕಾರನು ಇಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಕಟಿಂಗ್ ಮಾಡಿಕೊಂಡು ಬರುತ್ತೇನೆ ಅಂತ ಹೇಳಿ ಬಡದಾಳ ಗ್ರಾಮಕ್ಕೆ ಹೋದವನು ಮರಳಿ ಬಂದಿರುವುದಿಲ್ಲ ನಾವು ಬಡದಾಳ ಗ್ರಾಮ ಹಾಗು ತಾಂಡಾದಲ್ಲಿ ತಿರುಗಾಡಿ ನೋಡಿದರು ಕಂಡಿರುವುದಿಲ್ಲ ಯಾರೋ ಯಾವುದೋ ಉದ್ದೇಶಕ್ಕೆ ಓಂಕಾರನನ್ನು ಅಫಹರಿಸಿಕೊಂಡು ಹೋಗಿರುತ್ತಾರೆ ಅಂತ ತಿಳಿಸಿದ ಬಳಿಕ ನಾನು ಹಾಗು ನಮ್ಮ ತಮ್ಮನಾದ ಶ್ರೀಕಾಂತ ಜಾಧವ ನಮ್ಮ ತಾಂಡಾದ ಸೀನು ತಂದೆ ನಾತು ರಾಠೋಡ ಮೂರು ಜನರು ಬಡದಾಳ ತಾಂಡಾಕ್ಕೆ ಬಂದು ನಮ್ಮ ಅತ್ತೆ ಮಾವನಿಗೆ ವಿಚಾರಿಸಿ ನಾನು ಹಾಗು  ಶ್ರೀಕಾಂತ, ಸೀನು ಮತ್ತು ನಮ್ಮ ಅಳಿಯಂದಿರಾದ ಶ್ರೀಕಾಂತ ರಾಠೋಡ, ಗುರುನಾಥ ರಾಠೋಡ ಎಲ್ಲರು ಕೂಡಿ ನನ್ನ ಮಗನ ಪತ್ತೆಗಾಗಿ ದುಧನಿ, ಅಕ್ಕಲಕೋಡ, ಪುಣೆ, ವಿಜಯಪೂರ, ಸಿಂದಗಿ ಆಲಮೇಲ್ , ಘತ್ತರಗಾ, ದೇವಲ ಗಾಣಗಾಪೂರಗಳಿಗೆ ಹೋಗಿ ನನ್ನ ಮಗನ ಬಗ್ಗೆ ವಿಚಾರಿಸಿದ್ದು ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಹಾಗು ನಮ್ಮ ಸಂಬಂದಿಕರಿಗೆಲ್ಲರಿಗೂ ನನ್ನ ಮಗನ ಬಗ್ಗೆ ವಿಚಾರಿಸಿದ್ದು ಯಾವುದೇ ಮಾಹಿತಿ ದೊರೆತಿರುವುದಿಲ್ಲ.ನನ್ನ ಮಗನಾದ ಓಂಕಾರ ||13 ವರ್ಷ ಈತನನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ದಿನಾಂಕ 19/02/2018 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಬಡದಾಳ ಗ್ರಾಮದಿಂದ ಅಫಹರಿಸಿಕೊಂಡು ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 22/02/2018 ರಂದು ಮಹಾಗಾಂವ ಕ್ರಾಸಿನಲ್ಲಿ ಶ್ರೀಮತಿ ನಸಿರಿನ ಬೇಗಂ ಗಂಡ ಎಂ.ಡಿ ಯಕಬಾಲ ಮುಲ್ಲಾ ಸಾ|| ಅಂಬಲಗಾ ತಾ|| ಆಳಂದ ಜಿ|| ಕಲಬುರಗಿ ರವರು  ಹೈದ್ರಾಬಾದಕ್ಕೆ ಹೋಗಲು ನಿಂತಾಗ 1) ಎಂ.ಡಿ ರೌಫ್ 2) ಎಂ.ಡಿ ಫಾರುಕ ಮತ್ತು ರೌಫನ ಹೆಂಡತಿ 3) ಹಸಿನಾ ಬೇಗಂ ಸಾ|| ಎಲ್ಲರೂ ಅಂಬಲಗಾ ತಾ|| ಆಳಂದ ಜಿ|| ಕಲಬುರಗಿ ರವರು   ತೊಗರಿ  ಕೊಡುವ ವಿಷಯದಲ್ಲಿ ಅವಾಚ್ಯವಾಗಿ ಬೈದು ಕೈ ಮುಷ್ಠಿ ಮಾಡಿ ಹೊಡೆದು ರಕ್ತಗಾಯ ಪಡಿಸಿದ್ದಲ್ಲದೇ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು  ಸಾರಾಂಶದ  ಮೇಲಿಂದ  ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 February 2018

Kalaburagi District Press Note

ಪತ್ರಿಕಾ ಪ್ರಕಟಣೆ
ಚೌಕ ಠಾಣೆ : ಎರಡು ಜನರ ಬಂಧನ, ಅಂದಾಜು 6 ಲಕ್ಷ ಮೌಲ್ಯದ 21 ದ್ವಿಚಕ್ರ ವಾಹನಗಳು ಜಪ್ತಿ
ಮಾನ್ಯ ಎಸ್.ಪಿ. ಸಾಹೇಬರು ಕಲಬುರಗಿ, ಹೆಚ್ಚುವರಿ ಎಸ್.ಪಿ. ಸಾಹೇಬರು ಕಲಬುರಗಿ ಮತ್ತು ಶ್ರೀ ಬಿ ಪಾಂಡುರಂಗಯ್ಯ ಡಿ.ಎಸ್.ಪಿ. ಬಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಎಸ್.ಎಸ್.ಹಿರೇಮಠ ಪಿ.ಐ. ಚೌಕ ಠಾಣೆ, ಶ್ರೀಮತಿ ನರಸಮ್ಮ ಮ.ಪಿ.ಎಸ್.ಐ. ಚೌಕ ಠಾಣೆ ಹಾಗು ಸಿಬ್ಬಂದಿಯವರಾದ ರಮೇಶ, ಉಮೇಶ ಮತ್ತು ಸಿದ್ರಾಮಯ್ಯಾ  ರವರೊಂದಿಗೆ ಕಾರ್ಯಾಚರಣೆ ಮಾಡಿ ಆರೋಪಿತರಾದ 1. ಸೈಯದ ಮಕಬೂಲ @ ರಾಹೀಲ ತಂದೆ ಸೈಯದ ಇಲಾಹಿ ಸಾ : ಅರ್ಫತ ಕಾಲೂನಿ 2. ಹಬೀಬ ತಂದೆ ಮಹಿಬೂಬಸಾಬ ಶರ್ತಿವಾಲೆ ಸಾ : ಅಬೂಬಕರ ಕಾಲೂನಿ ಕಲಬುರಗಿ ಇವರುಗಳನ್ನು ದಸ್ತಗೀರ ಮಾಡಿ ಆರೋಪಿತರಿಂದ 6 ಲಕ್ಷ ಮೌಲ್ಯದ 21 ದ್ವಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು ಸದರಿ ಇಬ್ಬರು ಮತ್ತು ಇನ್ನೋರ್ವ ಸಹಚರನೊಂದಿಗೆ ಸೇರಿ ಕಲಬುರಗಿ ನಗರದ ವಿವಿಧ ಕಡೆಗಳಲ್ಲಿ ಮೋಟಾರ ಸೈಕಲ್ ಗಳನ್ನು ಕಳವು ಮಾಡಿದ್ದು ಅವರಿಂದ ಕೇರೋ ಹೊಂಡಾ ಕಂಪನಿಯ ಸ್ಪ್ಲೆಂಡರ ಪ್ಲಸ್ ಹೀರೋ ಹೊಂಡಾ,  ಫ್ಯಾಶನ ಹೀರೋ ಹೊಂಡಾ,  ಹೀರೋ ಹೊಂಡಾ ಸಿಡಿ – 100 ಹೀಗೆ ಒಟ್ಟು 18 ಮೋಟಾರ ಸೈಕಲ್ ಗಳನ್ನು ಒಂದು ಬಜಾಜ ಪಲ್ಸರ, 2 ಡಿಯೊ ಹೀಗೆ ಒಟ್ಟು 21 ಮೋಟಾರ ಸೈಕಲ್ ಗಳನ್ನು ಜಪ್ತಿ ಮಾಡಿಕೊಂಡಿದ್ದು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಇನ್ನೊರ್ವ ಸಹಚರ ಪರಾರಿ ಇದ್ದು  ಪತ್ತೆ ಕಾರ್ಯ ಮುಂದುವರೆದಿದೆ.