ಅಪಹರಣ ಪ್ರಕರಣ :
ಅಫಜಲಪೂರ ಠಾಣೆ :ಶ್ರೀ ಮಹೇಶ ತಂದೆ ನಾಮದೇವ ಜಾಧವ ಸಾ||ಅರ್ಜುಣಗಿ ತಾಂಡಾ
ತಾ||ಅಫಜಲಪೂರ ರವರ ಮಗ ಓಂಕಾರ ಈತನು ನನ್ನ ಹೆಂಡತಿ ತವರು ಮನೆಯಾದ ಬಡದಾಳ ತಾಂಡಾದಲ್ಲಿ ನಮ್ಮ ಅತ್ತೆ ಮಾವನ ಮನೆಯಲ್ಲಿಯೆ ಇದ್ದು ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾರೆ ಸಧ್ಯ ನನ್ನ ಮಗ ಬಡದಾಳ ಗ್ರಾಮದ ಶ್ರೀ ಚನ್ನಮಲ್ಲೇಶ್ವರ(ಮಠದ) ಶಾಲೆಯಲ್ಲಿ
ಏಳನೇ ತರಗತಿಯಲ್ಲಿ ಓದುತಿದ್ದಾನೆ. ದಿನಾಂಕ 19/02/2018 ರಂದು ಮದ್ಯಾಹ್ನ 1.00 ಗಂಟೆ ಸುಮಾರಿಗೆ ನಮ್ಮ ಮಾವನಾದ ಹರಿಚಂದ್ರ ರವರು ನನಗೆ ಪೋನ ಮೂಲಕ ವಿಷಯ ತಿಳಿಸಿದ್ದೆನೆಂದರೆ ಓಂಕಾರನು ಇಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಕಟಿಂಗ್ ಮಾಡಿಕೊಂಡು ಬರುತ್ತೇನೆ ಅಂತ ಹೇಳಿ ಬಡದಾಳ ಗ್ರಾಮಕ್ಕೆ ಹೋದವನು ಮರಳಿ ಬಂದಿರುವುದಿಲ್ಲ ನಾವು ಬಡದಾಳ ಗ್ರಾಮ ಹಾಗು ತಾಂಡಾದಲ್ಲಿ ತಿರುಗಾಡಿ ನೋಡಿದರು ಕಂಡಿರುವುದಿಲ್ಲ ಯಾರೋ ಯಾವುದೋ ಉದ್ದೇಶಕ್ಕೆ ಓಂಕಾರನನ್ನು ಅಫಹರಿಸಿಕೊಂಡು ಹೋಗಿರುತ್ತಾರೆ ಅಂತ ತಿಳಿಸಿದ ಬಳಿಕ ನಾನು ಹಾಗು ನಮ್ಮ ತಮ್ಮನಾದ ಶ್ರೀಕಾಂತ ಜಾಧವ ನಮ್ಮ ತಾಂಡಾದ ಸೀನು ತಂದೆ ನಾತು ರಾಠೋಡ ಮೂರು ಜನರು ಬಡದಾಳ ತಾಂಡಾಕ್ಕೆ ಬಂದು ನಮ್ಮ ಅತ್ತೆ ಮಾವನಿಗೆ ವಿಚಾರಿಸಿ ನಾನು ಹಾಗು
ಶ್ರೀಕಾಂತ, ಸೀನು ಮತ್ತು ನಮ್ಮ ಅಳಿಯಂದಿರಾದ ಶ್ರೀಕಾಂತ ರಾಠೋಡ, ಗುರುನಾಥ ರಾಠೋಡ ಎಲ್ಲರು ಕೂಡಿ ನನ್ನ ಮಗನ ಪತ್ತೆಗಾಗಿ ದುಧನಿ, ಅಕ್ಕಲಕೋಡ, ಪುಣೆ, ವಿಜಯಪೂರ, ಸಿಂದಗಿ ಆಲಮೇಲ್ , ಘತ್ತರಗಾ, ದೇವಲ ಗಾಣಗಾಪೂರಗಳಿಗೆ ಹೋಗಿ ನನ್ನ ಮಗನ ಬಗ್ಗೆ ವಿಚಾರಿಸಿದ್ದು ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಹಾಗು ನಮ್ಮ ಸಂಬಂದಿಕರಿಗೆಲ್ಲರಿಗೂ ನನ್ನ ಮಗನ ಬಗ್ಗೆ ವಿಚಾರಿಸಿದ್ದು ಯಾವುದೇ ಮಾಹಿತಿ ದೊರೆತಿರುವುದಿಲ್ಲ.ನನ್ನ ಮಗನಾದ ಓಂಕಾರ ವ||13 ವರ್ಷ ಈತನನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ದಿನಾಂಕ 19/02/2018 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಬಡದಾಳ ಗ್ರಾಮದಿಂದ ಅಫಹರಿಸಿಕೊಂಡು ಹೋಗಿದ್ದು ಇರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 22/02/2018 ರಂದು ಮಹಾಗಾಂವ
ಕ್ರಾಸಿನಲ್ಲಿ ಶ್ರೀಮತಿ ನಸಿರಿನ ಬೇಗಂ ಗಂಡ ಎಂ.ಡಿ ಯಕಬಾಲ ಮುಲ್ಲಾ ಸಾ|| ಅಂಬಲಗಾ ತಾ|| ಆಳಂದ ಜಿ|| ಕಲಬುರಗಿ ರವರು ಹೈದ್ರಾಬಾದಕ್ಕೆ ಹೋಗಲು ನಿಂತಾಗ 1) ಎಂ.ಡಿ ರೌಫ್ 2) ಎಂ.ಡಿ ಫಾರುಕ ಮತ್ತು ರೌಫನ ಹೆಂಡತಿ 3) ಹಸಿನಾ ಬೇಗಂ ಸಾ|| ಎಲ್ಲರೂ ಅಂಬಲಗಾ ತಾ|| ಆಳಂದ ಜಿ|| ಕಲಬುರಗಿ ರವರು ತೊಗರಿ ಕೊಡುವ ವಿಷಯದಲ್ಲಿ ಅವಾಚ್ಯವಾಗಿ ಬೈದು ಕೈ ಮುಷ್ಠಿ ಮಾಡಿ
ಹೊಡೆದು ರಕ್ತಗಾಯ ಪಡಿಸಿದ್ದಲ್ಲದೇ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment