POLICE BHAVAN KALABURAGI

POLICE BHAVAN KALABURAGI

23 January 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಗುರುಶರಣ ತಂದೆ ಭೀಮರಾವ ಶಿರವಾಳ ಸಾ : ಜವಳಿ (ಡಿ) ತಾ:ಆಳಂದ  ಜಿ: ಕಲಬುರಗಿ ರವರು  ದಿನಾಂಕ. 22-01-2018 ರಂದು ತನ್ನ ಖಾಸಗಿ ಕೆಲಸದ ನಿಮಿತ್ಯ ಜವಳಗಿಯಿಂದ ನಾನು ಕಲಬುರಗಿಗೆ ಬಂದಿರುತ್ತೇನೆ ನನ್ನ ಮಗ ವಿನೋದ ಶಿರವಾಳ ಕೂಡಾ ಕಲಬುರಗಿಯಲ್ಲಿದ್ದನ್ನು  ಸಂಜೆ ನನ್ನ ಮಗ ವಿನೋದನು ಜವಳಗಾಕ್ಕೆ ಹೋಗುತ್ತೆನೆ ಅಂತಾ 7-00 ಗಂಟೆ ಸುಮಾರಿಗೆ  ತನ್ನ ಯಮಹಾ ಎಫ್.ಝಡ್  ನಂ.ಕೆ.ಎ.32 ಇಡಿ.5816 ನೆದ್ದರ ಮೇಲೆ ದೇವಿನಗರನ ಮನೆಯಿಂದ ಒಬ್ಬನೆ ಹೋದನು ರಾತ್ರಿ 7-45 ಪಿ.ಎಂ.ದ ಸುಮಾರಿಗೆ ನಾನು ಮನೆಯಲ್ಲಿರುವಾಗ  ಶರಣಬಸಪ್ಪಾ ನರೋಣಿ ಎಂಬುವವರು ನನಗೆ ಫೋನ ಮಾಡಿ ತಿಳಿಸಿದ್ದು ಏನೆಂದರೆ   ವಿಶ್ವರಾಧ್ಯ ಗುಡಿಯನಂತರ ರೈಲ್ವೆ  ಬ್ರಿಡ್ಜ ನಂತರ ಉತಾರಿಗೆ ನನ್ನ ಮಗ ವಿನೋದ ಶಿರವಾಳ ಇತನಿಗೆ ಮೋಟಾರ ಸೈಕಲ್ ಡಿಕ್ಕಿ ಹೊಡೆದಿದ್ದರಿಂದ ಭಾರಿಗಾಯವಾಗಿರುತ್ತದೆ ಬೇಗನೆ ಸ್ಥಳಕ್ಕೆ ಬರುವಂತೆ ಹೇಳಿದರು ಆಗ ನಾನು ಗಾಬರಿಗೊಂಡು ನಾನು ಮತ್ತು ನಮ್ಮ ಸಮ್ಮಂದಿಕರಾದ ಮಚೇಂದ್ರ ತಂದೆ  ಕರಬಸ್ಸಪ್ಪಾ ನರೋಣಿ ಹಾಗೂ ಶರಣಬಸ್ಸಪ್ಪಾ ತಂದೆ ಬಸವರಾಜ ಭೂಸನೂರ ಎಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಹಕೀಕತ್ ನಿಜವಿದ್ದು  ನನ್ನ ಮಗ ವಿನೋದ ಶಿರವಾಳ ಇತನಿಗೆ  ನೋಡಲಾಗಿ ತಲೆಯ ಎಡಬಾಗದಲ್ಲಿ , ಮೆಲಕಿಗೆ ಭಾರಿ ಪೆಟ್ಟಾಗಿ ರಕ್ತಗಾಯ ಮತ್ತು ಎಡಕಿವಿಯಿಂದ ಬಾಯಿಯಿಂದ ರಕ್ತಸ್ರಾವವಾಗತಿತ್ತು .ಎಡಗೈಭುಜಕ್ಕೆ ಮೋಳಕೈಗೆ ಭಾರಿ  ಪೆಟ್ಟಾಗಿತ್ತು ಆಗ ಅಲ್ಲಿಯೇ ಹಾಜರಿದ್ದ ಶರಣಬಸ್ಸಪ್ಪ ನರೋಣಿ ಮತ್ತು ಚಿದಾನಂದ ಡೊಳ್ಳಿ ಎಂಬುವವರಿಗೆ ವಿಚಾರಿಸಲಾಗಿ 7-30 ಪಿ.ಎಂ.ದ ಸುಮಾರಿಗೆ ಆಳಂದರೋಡಿನ ವಿಶ್ವರಾಧ್ಯ ಗುಡಿಯ ನಂತರ ರೈಲ್ವೆ ಬ್ರಿಡ್ಜ ಉತಾರಿಗೆ ಸ್ವಲ್ಪ ಅಂತರದಲ್ಲಿ ತಮ್ಮಿಂದ ಮುಂದೆ ನನ್ನ ಮಗ ವಿನೋದನು ತನ್ನ ಮೋಟಾರ ಸೈಕಲ್ ಮೇಲೆ ಆಳಂದ ಕಡೆಗೆ ಹೋಗುತ್ತಿರುವಾಗ  ಅದೇ ವೇಳಗೆ ಆಳಂದ ಕಡೆಯಿಂದ ಒಂದು ಮೋಟರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾ ದಿಡ್ಡಿಯಾಗಿ ಓಡಿಸಿಕೊಂಡು ಬಂದು ವಿನೋದನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ವಿನೋದನು ಜೋರಾಗಿ ಕೆಳಗೆ ಬಿದ್ದು ತಲೆಗೆ , ಮೆಲಕಿಗೆ ಬಾರಿಗಾಯಗೊಂಡಿದ್ದು ಇರುತ್ತದೆ ಅಂತಾ ತಿಳಿಸಿದ್ದರು  ಆಗ ರೋಡಿಗೆ ಹೋಗುವ ವಾಹನಗಳ ಬೆಳಕಿನಲ್ಲಿ ಡಿಕ್ಕಿ ಹೊಡೆದ ಮೋಟಾರ ಸೈಕಲ್ ನಂಬರ ನೋಡಲಾಗಿ ಹೀರೋ ಸ್ಪ್ಲೆಂಡರ ನಂ.ಕೆ.ಎ.39 ಜೆ. 0733 ನೆದ್ದು  ಅದರ ಚಾಲಕನು ಕೂಡಾ ಗಾಯಗೊಂಡು ಸೈಡಿಗೆ ಕುಳಿತಿದ್ದು ಆತನ ವಿಚಾರಿಸಲಾಗಿ ಸೈಬಣ್ಣಾ ತಂದೆ ಗುಂಡಪ್ಪಾ ಆಳಂದ ಸಾಚ ದುತ್ತರಗಾಂವ ತಾ/ಆಳಂದ  ಅಂತಾ ತಿಳಿಸಿದು ಅವನಿಗೆ ಹಣೆಯ ಮೇಲೆ ರಕ್ತಗಾಯ, ಬಲಗಣ್ಣಿ ಪಕ್ಕದಲ್ಲಿ ರಕ್ತಗಾಯ , ತುಟಿಯ ಕೆಳಗೆ ಗದಕ್ಕೆ ರಕ್ತಗಾಯ, ಬಲಗೈ ಮೋಳಕಯಗೆ ಗುಪ್ತ ಪೆಟ್ಟಾಗಿದ್ದು ಎಡಗಾಲು ಮೋಳಕಾಲು ಕೆಳಗೆ ರಕ್ತಗಾಯವಾಗಿರುತ್ತದೆ. ನಂತರ ಯಾರೋ ಅಂಬುಲೆನ್ಸಿಗೆ ಫೋನ ಮಾಡಿದರಿಂದ ಸ್ವಲ್ಪ ಹೊತ್ತಿನಲ್ಲಿ 108 ಅಂಬುಲೆನ್ಸ ಬಂದಿದ್ದು ಅವರು ವಿನೋದನನ್ನು ಪರೀಶಿಲಿಸಲಾಗಿ ಮೃತ ಪಟ್ಟಿರುವದಾಗಿ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.         
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 22.01.18 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಮೃತ ಶರಣಪ್ಪಾ ಇತನು ಮೋಟಾರ ಸೈಕಲ ನಂ ಕೆಎ-32-ಇಎ-5109 ನೇದ್ದನ್ನು ಚಲಾಯಿಸಿಕೊಂಡು ವೆಂಕಟೇಶ್ವರ ನಗರದೊಳಗಡೆಯಿಂದ ಹೋಗುವಾಗ ಗುರುನಾಥ ಇತನು ಮೋಟಾರ ಸೈಕಲ ನಂ ಕೆಎ-32-ವಾಯ್-2496 ನೇದ್ದನ್ನು ಎಸವಿಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ಶರಣಪ್ಪ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಶರಣಪ್ಪ ಇತನು ಭಾರಿಗಾಯ ಹೊಂದಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಇರುತ್ತದೆ ಅಂತಾ ಶ್ರೀಮತಿ ಶಂಕುತಾಲ ಗಂಡ ಶರಣಪ್ಪಾ ಕೋಲಾರ ವ: 58 ವರ್ಷ ಉ: ಮನೆ ಕೆಲಸ ಸಾ: ಸಕರ್ಾರಿ ಕಾಲೇಜ್ ಹಿಂದುಗಡೆ ವೆಂಕಟೇಶ ನಗರ  ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಕೇದಾರನಾಥ ತಂದೆ ಶರಣಬಸಪ್ಪಾ ಪಾಟೀಲ ಸಾಃ ಕೋರಳ್ಳಿ ಗ್ರಾಮ ತಾಃ ಆಳಂದ ಹಾಃವಾಃ ಗದಲೆಗಾಂವ್ ಕಲ್ಯಾಣ ಮಂಟಪದ ಹತ್ತಿರ ಕೈಲಾಸ ನಗರ ಕಲಬುರಗಿ ರವರು ದಿನಾಂಕ  21.01.2018 ರಂದು ತನ್ನ ವಯಕ್ತಿಕ ಕೆಲಸದ ಸಲುವಾಗಿ ನಾನು ನನ್ನ ಟವೇರಾ ವಾಹನ ನಂ ಕೆಎ17 ಎಂ8439 ನೇದ್ದನ್ನು ತೆಗೆದುಕೊಂಡು ಊರಲ್ಲಿ ಕಬ್ಬು ಹಚ್ಚಿದ ಲೇಬರಗಳ & ರಸಗೊಬ್ಬರ ಇತ್ಯಾದಿ ಸಲುವಾಗಿ ಸಂಬಳ ಮಾಡಬೇಕಾಗಿದ್ದರಿಂದ ನಾನು ಮನೆಯಿಂದ 2,50,000/- ನಗದು ಹಣವನ್ನು ನನ್ನ ಬಳಿ ಇದ್ದ ನೀಲಿ ಬಣ್ಣದ ಬ್ಯಾಗಿನಲ್ಲಿ ಹಾಕಿಕೊಂಡು ಸದರಿ ಬ್ಯಾಗನ್ನು ಟವೇರಾ ವಾಹನದಲ್ಲಿನ ಬಾಕ್ಸಿನಲ್ಲಿ ಹಾಕಿಕೊಂಡು ಮಧ್ಯಾಹ್ನ ಅಂದಾಜು 2.30 ಗಂಟೆ ಸುಮಾರಿಗೆ ಮನೆಯಿಂದ ಬಂದು, ಸೂಪರ ಮಾರ್ಕೆಟದಲ್ಲಿ ನನ್ನ ಗೆಳೆಯನಾದ ಸಿದ್ದಲಿಂಗ ಡೊಲೆ ಇವರಿಗೆ ಭೇಟಿ ಮಾಡುವ ಸಲುವಾಗಿ ನನ್ನ ವಾಹನವನ್ನು ಹೆಡ್ ಪೋಸ್ಟ ಆಫೀಸ್ ಹತ್ತಿರ ನಿಲ್ಲಿಸಿ ನನ್ನ ವಾಹನಕ್ಕೆ ಲಾಕ್ ಮಾಡಿ ಹೋಗಿದ್ದು, ನಂತರ ಕೆಲಸ ಮುಗಿಸಿಕೊಂಡು ಸಾಯಂಕಾಲ 4.00 ಗಂಟೆ ಸುಮಾರಿಗೆ ಮರಳಿ ನಾನು ಕಾರ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ, ನನ್ನ ಕಾರಿನ್ ಡೋರ್ ಒಪನ್ ಆಗಿದ್ದು, ಪರೀಶಿಲಿಸಿ ನೋಡಿದಾಗ ಕಾರಿನಲ್ಲಿದ್ದ ಬಾಕ್ಸಿನ ಲಾಕ್ ಮುರಿದ್ದು, ಬಾಕ್ಸಿನಲ್ಲಿಟ್ಟ 2,50,000/- ಹಣದ ಬ್ಯಾಗ್ ಇರಲಿಲ್ಲಾ. ನಾನು ಗಾಭರಿಯಾಗಿ ಕೂಡಲೆ ಈ ವಿಷಯವನ್ನು ನನ್ನ ಗೆಳೆಯಂದಿರಾದ ಸಿದ್ದಲಿಂಗ್ ಡೋಲೆ, ಗುರಪ್ಪಾ ನೀಲಾ, ಮಹೇಶ ಹೂಲಸೂರಕರ್ ಇವರಗಳಿಗೆ ಫೋನ ಮಾಡಿ ವಿಷಯ ತಿಳಿಸಿದ್ದು ಅವರು ಸಹಃ ನಾನು ಕಾರ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಹಃ ಹಣದ ಬ್ಯಾಗ್ ಪತ್ತೆ ಆಗಿರುವುದಿಲ್ಲಾ  ನಿನ್ನೆ ದಿಃ 21.01.2018 ರಂದು ಮಧ್ಯಾಹ್ನ 2.30 ರಿಂದ 4.00 ಗಂಟೆಯ ಅವಧಿಯಲ್ಲಿ ಹೆಡ್ ಪೋಸ್ಟ ಆಫೀಸ್ ಹತ್ತಿರ ನನ್ನ ಟವೇರಾ ವಾಹನ ನಂ ಕೆಎ17 ಎಂ8439 ನೇದ್ದನ್ನು ನಿಲ್ಲಿಸಿದ್ದು, ಆ ಕಾರಿನ ಬಾಕ್ಸಿನಲ್ಲಿಟ್ಟಿದ 2,50,000/- ಹಣದ ಬ್ಯಾಗ್ನ್ನು ಯಾರೋ ಕಳ್ಳರು ಕಾರಿನ ಡೋರ್ ಲಾಕನ್ನು ತೆಗೆದು ಕಾರಿನಲ್ಲಿಟ್ಟ ಬಾಕ್ಸಿನ ಲಾಕ್ ಮುರಿದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ: 21/01/2018 ರಂದು ಮಾಹಾಗಾಂವ ಠಾಣಾ ಹದ್ದಿಯ ಸಿರಗಾಪೂರ ಸಿಮಾಂತರದ ಬಬಲಾದಕ್ಕೆ ಹೊಗುವ ರಸ್ತೆ ಬದಿ 500 ಮೀಟರ ಅಂತರದಲ್ಲಿ ಸರಕಾರಿ ಗೈರಾಣಿ ಹೊಲದಲ್ಲಿನ ಮರದ ಕೆಳಗೆ ಇಸ್ಪೀಟ ಜೂಜಾಟ ಆಡುತ್ತಿದ್ದರೆ ಅಂತಾ ಬಾತ್ಮಿ ಮೇರೆಗೆ ಪಿ.ಎಸ್.ಐ. ಮಾಹಾಗಾಂವ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 6 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಗೈರೆ ವಿಚಾರಿಸಲು 1) ರೇವಣಸಿದ್ದಪ್ಪ ತಂದೆ ಮಲ್ಲಿಕಾರ್ಜುನ ಅಂಬಲಿ ಸಾ: ಕುರಿಕೊಟಾ 2) ಗುರುನಾಥ ತಂದೆ ಶರಣಪ್ಪ ಸಿಂಗೆ ಸಾ|| ಡೊಂಗರಗಾಂವ 3) ಸಾಯಿಬಣ್ಣ ತಂದೆ ಮೈಲಾರಿ ಹೊಳಕುಂದಾ ಸಾ|| ಜಗತ ಕಲಬುರಗಿ 4) ರವಿಂದ್ರ ತಂದೆ ಅಣ್ಣಪ್ಪ ಪಾಟೀಲ್ ಸಾ|| ಉದಯ ನಗರ ಕಲಬುರಗಿ 5) ಮಲ್ಲಿಕಾರ್ಜುನ ತಂದೆ ಶರಣಪ್ಪ ಸಾಗರ ಸಾ|| ಭಾಗ್ಯ ನಗರ ಕಲಬುರಗಿ 6) ಸಾಯಿಬಣ್ಣ ತಂದೆ ಅಣ್ಣಪ್ಪ ಮಿಂಚನಾಕರ ಸಾ|| ಎಸ್.ಬಿ. ಕಾಲೇಜ ಹತ್ತಿರ ರಾಮನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52  ಇಸ್ಪೀಟ ಎಲೆಗಳು ನಗದು ಹಣ 10120-00 ರೂ. ಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.                                         

20 January 2018

KALABURAGI DISTRICT REPORTED CRIMES

ವರದಕ್ಷಣೆ ಹಣಕ್ಕೆ  ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ  ಮುತ್ತಮ್ಮ ಗಂಡ ಭೀಮರಾಯ ಆನೆಕ್ಕಿ ಸಾ: ಸೋಮನಾಥ ಹಳ್ಳಿ ರವರು ಮಗಳಾದ ಮಂಜುಳಾ ಇವಳಿಗೆ ಮೂರು ವರ್ಷಗಳ ಹಿಂದೆ ಭಂಕೂರ ಗ್ರಾಮದ ಸಾಯಿಬಣ್ಣ ತಂದೆ ಶರಣಪ್ಪ ಹೊಸಮನಿ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆಯಲ್ಲಿ 50 ಸಾವಿರ ರೂಪಾಯಿ ಮತ್ತು 5 ತೊಲೆ ಬಂಗಾರ ಹಾಗೂ ಇತರೆ ಗೃಹ ಬಳಿಕೆ ಸಾಮಾನುಗಳು ಕೊಟ್ಟು ಮದುವೆ ಮಾಡಿಕೊಟ್ಟಿದ್ದು. ನಂತರ ದಿನಗಳಲ್ಲಿ ನನ್ನ ಮಗಳ ಗಂಡನ ಮನೆಯವರಾದ ಗಂಡ ಸಾಯಿಬಣ್ಣ 2) ಮಹಾದೇವಿ ಗಂಡ ಶರಣಪ್ಪ  3) ಶೀಲಮ್ಮ ಗಂಡ ಕುಪ್ಪಣ್ಣ ಹೊಸಮನಿ 4) ಮಲ್ಲಪ್ಪ ತಂದೆ ಶರಣಪ್ಪ ಹೊಸಮನಿ 5) ರೇವಸಿದ್ದಪ್ಪ ಅವರಾದಿ 6) ಚಂದಮ್ಮ ಗಂಡ ರೇವಣಸಿದ್ದಪ್ಪ ಅವರಾದಿ 7) ಕಾಶಿಬಾಯಿ ಗಂಡ ಶರಣಪ್ಪ ಹೊಸಮನಿ 8) ಮಹಾದೇವ ತಂದೆ ಬಸಣ್ಣ 9) ರಾಚಮ್ಮ ಗಂಡ ಮಹಾದೇವ ನಾಟಿಕರ 10) ಶ್ರೀದೇವಿ ಗಂಡ ಮಲ್ಲಪ್ಪ ಹೊಸಮನಿ 11) ಕುಪ್ಪಣ್ಣ ತಂದೆ ಶರಣಪ್ಪ ಹೊಸಮನಿ ರವರೆಲ್ಲಾರೂ ಸೇರಿ ನನ್ನ ಮಗಳಿಗೆ ಬೈಯುವುದು ಮತ್ತು ಮಾನಸಿಕವಾಗಿ , ದೈಹಿಕವಾಗಿ ಹಿಂಸೆ ನೀಡುತಿರುವುದು. ಮಾಡುತ್ತಿದ್ದು ನಾನು ನಮ್ಮ ಸಂಬಂಧಿಕರು ಈ ರೀತಿ ನನ್ನ ಮಗಳಿಗೆ ಕಿರಿಕಿರಿ ಮಾಡುವುದು ಸರಿ ಅಲ್ಲ ಅಂತಾ ತಿಳಿ ಹೇಳಿದ್ದು ಇರುತ್ತದೆ. ಅಲ್ಲದೆ ನನ್ನ ಮಗಳ ಕುಪ್ಪಾಸ ಕಾರ್ಯಕ್ರಮದಲ್ಲಿ ಒಂದು ತೊಲೆ ಬಂಗಾರ ಕೊಟ್ಟಿರುತ್ತೇನೆ. ಅದರೂ ಸಹ ನನ್ನ ಮಗಳಿಗೆ ವರದಕ್ಷಿಣೆ ಹಣ ತರಬೇಕು ಅಂತಾ ಕಿರುಕುಳ ಕೊಡುತ್ತಿದರಿಂದ ನನ್ನ ಮಗಳು ಮಂಜುಳಾ ಇವಳು ಒಂದು ವರ್ಷಗಳ ಕಾಲ ನಮ್ಮ ಮನೆಗೆ ಕರೆದುಕೊಂಡು ಹೋಗಿರುತ್ತೇನೆ. ಹೀಗಿದ್ದು ದಿನಾಂಕ: 17/01/2018 ರಂದು ನನ್ನ ಅಳಿಯ ಸಾಯಿಬಣ್ಣ ಸೋಮನಾಥ ಹಳ್ಳಿಗೆ ಬಂದು ನನ್ನ ಮಗಳಿಗೆ ಮಗಳು ಮಂಜುಳಯೊಂದಿಗೆ ಬೇರೆ ಮನೆಮಾಡಿಕೊಡು ಚನ್ನಾಗಿ ಸಂಸಾರ ಮಾಡಿಕೊಂಡಿರುತ್ತೇನೆ ಅಂತಾ ಹೇಳಿ ಕರೆದುಕೊಂಡು ಹೋಗಿದ್ದನು ದಿನಾಂಕ: 19/01/2018 ರಂದು ಮುಂಜಾನೆ 7-00 ನನ್ನ ಅಳಿಯ ಸಾಯಿಬಣ್ಣ ಪೋನ ಮಾಡಿ ನಾನು ಸಂಡಾಸಕ್ಕೆ ಹೋಗಿ ಬರುವಷ್ಟರಲ್ಲಿ ಮಂಜುಳಾ ಇವಳು ಊರಲು ಹಾಕಿಕೊಂಡಿದ್ದಾಳೆ ಎಂದು ತಿಳಿಸಿದನು ಆಸ್ಪತ್ರೆ ಕರೆದುಕೊಂಡು ಹೋಗುತ್ತಿದೇವೆ  ಜಿ ಜಿ ಹೆಚ್ ಕಲಬುರಗಿಗೆ ಬರಲು ತಿಳಿಸಿದರಿಂದ ನಾನು ನನ್ನ ಮಗ ಚಂದ್ರಶೇಖರ , ನಮ್ಮ ಅಣ್ಣತಮ್ಮಕೀಯ ನಾಗಮ್ಮ ಆನೇಕ್ಕಿ , ಕಮಲಾಬಾಯಿ ಆನೆಕ್ಕಿ , ಗುರು ಆನೆಕ್ಕಿ , ಶಾಮರಾಜ ಆನೆಕ್ಕಿ ರವರು ಕೂಡಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗಳು ಮೃತ ಪಟ್ಟಿದಳು . ನನ್ನ ಮಗಳಿಗೆ ಅಳಿಯ ಸಾಯಿಬಣ್ಣ ಮತ್ತು ಸಂಗಡ 10 ಜನರು ಸೇರಿ ವರದಕ್ಷಿಣೆ ಹಣ ತರಬೇಕು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ನೇಣು ಹಾಕಿ ಕೊಲೆ ಮಾಡಿದ್ದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಮಹ್ಮದ ಅಜೀಮ್ ತಂದೆ ಮಹ್ಮದ ಯೂಸೂಫ್ ಜಮಾದಾರ ಸಾ: ಸಡಕ ಕಿಣ್ಣಿ ತಾ:ಜಿ: ಕಲಬುರಗಿ ಹಾ:ವ: ಇಸ್ಲಾಂಬಾದ ಕಾಲನಿ ಕಲಬುರಗಿ ಇವರು ಹುಮನಾಬಾದ ರಿಂಗ ರೋಡನಲ್ಲಿ ನಿಂತ ತನಗೆ ಪರಿಚಯದ ಶ್ರೀಮತಿ ರಹೇಮತಬೀ ಲದಾಫ ಇವಳಿಗೆ ತನ್ನ ಮೋಟಾರ ಸೈಕಲ ನಂ ಕೆಎ 33 ಜೆ 1497 ನೇದ್ದರ ಹಿಂದೆ ಕೂಡಿಸಿಕೊಂಡು ಅವರಾದ ಗ್ರಾಮಕ್ಕೆ ಬಿಡಲು ಹೊರಟಾಗ ಸಂಜೆ 07-30 ಗಂಟೆ ಸುಮಾರಿಗೆ ಉಪಳಾಂವ ಸೀಮಾಂತರದಲ್ಲಿ ಇರುವ ಬಿರಾದಾರ ಪೆಟ್ರೋಲ ಪಂಪ ದಾಟಿ ಇರುವ ಒಂದು ಬ್ರೀಡ್ಜ ಹತ್ತಿರ ಬಂದಾಗ ಆಗ ಎದುರುನಿಂದ ಅಂದರೆ ಹುಮನಾಬಾದ ರೋಡ ಕಡೆಯಿಂದ ಒಂದು ನೀಲಿ ಬಣ್ಣದ ಕಾರು ಚಾಲಕನು ತನ್ನ ವಶದಲ್ಲಿದ್ದ ಕಾರನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ತನ್ನ ಸೈಡಿಗೆ ಹೋಗದೇ ಫಿರ್ಯಾದಿ ಸೈಡಿಗೆ ಬಂದು ಅವನ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದನು. ಇದರಿಂದಾಗಿ ಫಿರ್ಯಾದಿ ಮತ್ತು ಹಿಂದೆ ಕುಳಿತ ರಹೇಮತಬೀ ಇಬ್ಬರು ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದಿದ್ದದ್ದು, ಫಿರ್ಯಾದಿ ಮತ್ತು ರಹೇಮತಬೀ ಇವರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ರಹೇಮತಬೀ ಇವಳಿಗೆ ತಲೆ ಭಾರಿ ಒಳಪೆಟ್ಟಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದು. ಅವರಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಯಲ್ಲಿ ಹಾಕಿಕೊಂಡು ರಾತ್ರಿ 08-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದಾಗ ವೈದ್ಯರು ರಹೇಮತಬೀ ಇವಳಿಗೆ ನೋಡಿ ಈಗಾಗಲೇ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. . ಸದರಿ ಅಪಘಾತವು ಈ ಮೇಲೆ ಹೇಳಿದಂತೆ ಕಾರ  ಕೆಎ 32 ಎನ್ 2086 ಚಾಲಕನ ತಪ್ಪಿನಿಂದ ಅಪಘಾತ ಸಂಭವಿಸಿದ್ದರಿಂದ ಅವನ  ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 19/01/2018 ರಂದು ಸುಧಾರಿತ ಗಸ್ತು ಸಂ 23 ಕರಜಗಿ ಗ್ರಾಮದ ಬೀಟ್ ಸಿಬ್ಬಂದಿಯಾದ ಸಂತೋಷ ಸಿಪಿಸಿ-657 ರವರು ಕರಜಗಿ ಗ್ರಾಮದ ಖ್ವಾಜಾ ಸೈಫನ್ ಮುಲ್ಕ ದರ್ಗಾ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ್ದು  ಪಿಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕರಜಗಿ ಗ್ರಾಮದ ಖ್ವಾಜಾ ಸೈಫನ್ ಮುಲ್ಕ ದರ್ಗಾ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ದರ್ಗಾ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ನಾಗಪ್ಪ ತಂದೆ ಶರಣಪ್ಪ ನಾದ ಸಾ||ಕರಜಗಿ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 800/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

19 January 2018

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ  ವಿರೇಶ ತಂದೆ ವೀರುಪಾಕ್ಷಪ್ಪ ಸರಡಗಿ ಸಾ;ಹರಸೂರ ತಾ:ಜಿ:ಕಲಬುರಗಿ ಇವರು ಭಾರತ ಪೈನಾನ್ಸ ಇನಕ್ಲೂಶನ ಲಿಮಿಟೆಡ್‌‌ (ಎಸ್.ಕೆ.ಎಸ್.ಮೈಕ್ರೋ ಪೈನಾನ್ಸ ಲಿಮಿಟೆಡ್) ಸ್ವಾಮಿ ವಿವೇಕಾನಂದ ನಗರದಲ್ಲಿ ಸುಮಾರು 5 ವರ್ಷದಿಂದ ಇದ್ದು ಸದರಿ ನಮ್ಮ ಕಛೇರಿಯನ್ನು ದಿನಾಂಕ:13/01/2018 ರಂದು ಮಧ್ಯಾನ 3.30 ಗಂಟೆಗೆ ಬಂದ ಮಾಡಿಕೊಂಡು ಕಛೇರಿಗೆ ಕೀಲಿ ಹಾಕಿಕೊಂಡು ನಾವು ಹೋಗಿದ್ದು ಇರುತ್ತದೆ. ದಿನಾಂಕ:14/01/2018 ರಂದು ರಾತ್ರಿ 8.00 ಗಂಟೆಗೆ ನಮ್ಮ ಫೀಲ್ಡ ಸಹಾಯಕರಾದ ಶ್ರೀ ಆನಂದ ಗಂಜಗೋಳ ಮತ್ತು ಕ್ಯಾಶಿಯರಾದ ಅನೀಲ ಶೇರಿಕಾರ ಇವರು ನಮ್ಮ ಕಛೇರಿಗೆ ಬಂದು ನೋಡಿದಾಗ ನಮ್ಮ ಕಛೇರಿಯ ಬಾಗಿಲಕ್ಕೆ ಹಾಕಿರು ಕೀಲಿ ಮೂರಿದಿದ್ದು ಆಗ ಸದರಿ ಆನಂದ ಇವರು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದು ಆಗ ನಾನು ಅವರಿಗೆ ನನಗೆ ಸಧ್ಯ ಬರುವದು ಆಗುವದಿಲ್ಲ ನಾನು ನಮ್ಮ ಗ್ರಾಮದಲ್ಲಿ ಇದ್ದೇನೆ ನೀವು ಕಛೇರಿಗೆ ಒಳಗಡೆ ಹೋಗಿ ನೋಡಿರಿ ಅಂತ ಹೇಳಿದ್ದು ಆಗ ಆನಂದ ಮತ್ತು ಅನೀಲ ಇಬ್ಬರೂ ಕಛೇರಿಯ ಒಳಗಡೆ ಹೋಗಿ ನೋಡಿ ನನಗೆ ಮತ್ತೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನಮ್ಮ ಕಛೇರಿಯಲ್ಲಿದ್ದ 1) 3 ಸ್ಯಾಮಸಂಗ್ ಗ್ಯಾಲಕ್ಷಿ ಟ್ಯಾಬ್ಗಳು ಒಂದರ ಅಂದಾಜ ಕಿಮ್ಮತ್ತು 7000/-ರೂ 2)ಒಂದು ಸ್ಯಾಮಸಂಗ್ ಮೊಬೈಲ್ ಮೌಲ್ಯ ರೂ.1000/-ರೂ ಹಾಗೂ ನಗದು ಚಿಲ್ಲರೆ ಹಣ 400/-ರೂ ಹೀಗೆ ಒಟ್ಟು 22400/- ರೂ ಕಿಮ್ಮತ್ತಿನ ವಸ್ತುಗಳು ಕಳ್ಳತನವಾಗಿರುತ್ತವೆ ಅಂತಾ ತಿಳಿಸಿದ್ದು ಇರುತ್ತದೆ. ದಿನಾಂಕ:15/01/2018 ರಂದು ನಾನು ನಮ್ಮ ಕಛೇರಿಗೆ ಬಂದು ನೋಡಲು ಕಳ್ಳತನವಾಗಿರುವದು ನಿಜವಾಗಿದ್ದು ನಂತರ ನಾನು ನಮ್ಮ ಮೇಲಾಧಿಕಾರಿಗಳಿಗೆ ನಮ್ಮ ಕಛೇರಿ ಕಳ್ಳತನವಾದ ಬಗ್ಗೆ ಮಾತನಾಡಿ ದಿನಾಂಕ:18/01/2018/ ರಂದು ಠಾಣೆಗೆ ಬಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಮಹ್ಮದ ಕರೀಮ್ ತಂದೆ ಜೈನೊದ್ದಿನ್ ಮಂಗಲಗಿರಿ ಸಾ|| ಮಣೂರ ಇವರು ತಮ್ಮೂರಿನ ವ್ಯೆವಸಾಹ ಸೇವಾ ಸಹಕಾರ ಸಂಘ ಇದರ ಮೂಖಾಂತರ ತಮ್ಮ ಹೊಲದಲ್ಲಿ ಪೈಪಲೈನ್ ಕೋಳವೆ ಹಾಗೂ ವಿದ್ಯೂತ್ ಮೋಟಾರ ಹಾಗೂ ಅದರ ಉಪಕರಣಗಳ ಖರೀದಿಗಾಗಿ ಸಾಲಕ್ಕಾಗಿ ಅರ್ಜಿಸಲ್ಲಿಸಿದ ಮೇರೆಗೆ, ನನಗೆ ದಿನಾಂಕ 25-09-2012 ರಂದು 4,33,000/- ರೂ ಸಾಲ ಮಂಜೂರಾಗಿದ್ದು, ಮಂಜೂರಾತಿ ಆದೇಶ ದಿನಾಂಕ 09-04-2013 ರಂದು ನಿಡಲಾಗಿರುತ್ತದೆ.  ನನಗೆ ಮಂಜೂರಾದ ಒಟ್ಟು 4,33,000/- ರೂಪಾಯಿಗಳಲ್ಲಿ 1,56,000/- ರೂಪಾಯಿಗಳನ್ನು ಗುಲಬರ್ಗಾ ಮತ್ತು ಯಾದಗಿರ ಜಿಲ್ಲಾ ಸಹಕಾರಿ ಕೆಂದ್ರ ಬ್ಯಾಂಕ ನಿ. ಕಲಬುರಗಿಯ ನನ್ನ ಬ್ಯಾಂಕ ಖಾತೆ ನಂಬರ 697050023999 ನೇದ್ದಕ್ಕೆ ಜಮಾ ಮಾಡಿರುತ್ತಾನೆ. ಸದರಿ ಜಮಾ ಮಾಡಿದ ಹಣವನ್ನು ನಾನು ಬಿಡಿಸಿಕೊಂಡು ಕೃಷಿ ಕಾರ್ಯಕ್ಕೆ ಉಪಯೋಗಿಸಿಕೊಂಡಿರುತ್ತೇನೆ. ಉಳಿದ 3,53,000/- ರೂ ಸಾಲದ ಹಣವನ್ನು ವಿದ್ಯೂತ್ ಉಪಕರಣ, ಪೈಪುಗಳು ಒದಗಿಸುವಂತೆ ಮೇ: ಡೆಕ್ಕನ್ ಇರಿಗೇಷನ್ ಸಿಸ್ಟಂ ಅಫಜಲಪೂರ ಅಂಗಡಿಯವರಿಗೆ, ಮಣೂರ ಸಹಕಾರ ಸಂಘದ (ಸೋಸೈ         ಟಿ) ಯ ಕಾರ್ಯದರ್ಶಿಗಳಾದ 1) ಬಸವರಾಜ ತಂದೆ ಬುದ್ದಪ್ಪ ಬೇನೂರ 2) ಜಗು ತಂದೆ ಬಸವರಾಜ ಬೇನೂರ ಸಾ|| ಇಬ್ಬರು ಮಣೂರ ಇವರಿಬ್ಬರೂ ಕೂಡಿ ನನಗೆ ವಿದ್ಯೂತ್ ಉಕರಣಗಳನ್ನು ಹಾಗೂ ಪೈಪುಗಳನ್ನು ಒದಗಿಸುವಂತೆ ನನಗೆ ಮಂಜೂರಾದ ಸಾಲದ ಹಣದಲ್ಲಿ 3,53,000/- ರೂ ಹಣವನ್ನು ಸಂದಾಯ ಮಾಡುತ್ತೇವೆ ಅಂತಾ ತಿಳಿಸಿರುತ್ತಾರೆ. ಆದರೆ ಸದರಿ ಅಂಗಡಿಯವರು ನನಗೆ ಯಾವುದೆ ರೀತಿ ಉಪಕರಣಗಳನ್ನು ಕೊಟ್ಟಿರುವುದಿಲ್ಲ. ಸದರಿ ಮಣೂರ ವ್ಯೆವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿಗಳಾದ 1) ಬಸವರಾಜ ತಂದೆ ಬುದ್ದಪ್ಪ ಬೇನೂರ 2) ಜಗು ತಂದೆ ಬಸವರಾಜ ಬೇನೂರ ಸಾ|| ಇಬ್ಬರು ಮಣೂರ ಇವರು ನನಗೆ ಮಂಜೂರಾದ ಸಾಲದ ಹಣದಲ್ಲಿ 1,56,000/- ರೂ ಹಣವನ್ನು ನನ್ನ ಖಾತೆಗೆ ಜಮಾ ಮಾಡಿ ಉಳಿದ 3,53,000/- ರೂ ಹಣವನ್ನು ತಮ್ಮ ಸ್ವಂತಕ್ಕೆ ಉಯೋಗಿಸಿಕೊಂಡು ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುತ್ತಾರೆ. ಸದರಿ ಸೋಸೈಟಿ ಕಾರ್ಯದರ್ಶೀಗಳಾದ ಬಸವರಾಜ ಮತ್ತು ಜಗು ಇವರು ನನಗೆ ಮೋಸ ಮಾಡಿದ ಹಾಗೆ ಸಿದ್ದಪ್ಪ ತಂದೆ ಶಂಕ್ರೇಪ್ಪ ರಾವಳೆ ಸಾ|| ಮಣೂರ ಹಾಗೂ ರೇವಣಸಿದ್ದ ತಂದೆ ಪರಶೆಟ್ಟೆಪ್ಪ ನಾಗೂರ ಸಾ|| ಹೈದ್ರಾ ಇವರಿಗೂ ಸಹ ಮೋಸ ಮಾಡಿ ಅವರ ಸಾಲದ ಹಣವನ್ನು ಸಹ ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡಿರುತ್ತಾರೆ. ಈ ವಿಷಯವಾಗಿ ನಾವು ಮೂರು ಜನರು ಕೂಡಿ ಸದರಿ ಬಸವರಾಜ ಮತ್ತು ಜಗು ಇವರಿಬ್ಬರ ಮೇಲೆ ಲೋಕಾಯುಕ್ತ ರವರಿಗೆ ಅರ್ಜಿ ಸಲ್ಲಿಸಿರುತ್ತೇವೆ. ದಿನಾಂಕ 18-01-2018 ರಂದು ತಾವುಗಳು ನನ್ನನ್ನು ಪೊಲೀಸ್ ಠಾಣೆಗೆ ಕರೆಸಿ, ನಾನು ಈಗಾಗಲೆ ಲೋಕಾಯುಕ್ತ ರವರಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆ ವಿಚಾರಿಸಿದ್ದು, ಲೋಕಾಯುಕ್ತ ಬೆಂಗಳೂರ ರವರಿಂದ ಸದರಿ ವಿಷಯದ ದಾಖಲಾತಿಗಳು ಬಂದಿರುತ್ತವೆ. ಮಣೂರ ವ್ಯೆವಸಾಹ ಸೇವಾ ಸಹಕಾರ ಸಂಘದ ಕಾರ್ಯದರ್ಶಿಗಳಾದ 1) ಬಸವರಾಜ ತಂದೆ ಬುದ್ದಪ್ಪ ಬೇನೂರ 2) ಜಗು ತಂದೆ ಬಸವರಾಜ ಬೇನೂರ ಸಾ|| ಇಬ್ಬರು ಮಣೂರ ಇವರು ನನಗೆ ಮಂಜೂರಾದ ಸಾಲದ ಹಣದಲ್ಲಿ 1,56,000/- ರೂ ಹಣವನ್ನು ನನ್ನ ಖಾತೆಗೆ ಜಮಾ ಮಾಡಿ ಉಳಿದ 3,53,000/- ರೂ ಹಣವನ್ನು ತಮ್ಮ ಸ್ವಂತಕ್ಕೆ ಉಯೋಗಿಸಿಕೊಂಡಿರುತ್ತಾರೆ. ನನ್ನಂತೆ ಸಿದ್ದಪ್ಪ ತಂದೆ ಶಂಕ್ರೇಪ್ಪ ರಾವಳೆ ಸಾ|| ಮಣೂರ ಹಾಗೂ ರೇವಣಸಿದ್ದ ತಂದೆ ಪರಶೆಟ್ಟೆಪ್ಪ ನಾಗೂರ ಸಾ|| ಹೈದ್ರಾ ಇವರಿಗೂ ಸಹ ಸೋಸೈಟಿಯಲ್ಲಿ ಮಂಜೂರಾದ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ-17/01/2018 ರಂದು 7-30 ಗಂಟೆ ಸುಮಾರಿಗೆ ಶ್ರೀಮತಿ ಮಮ್ತಾಜ ಬೇಗಂ ಗಂಡ ಹಸನ ಪಟೇಲ ಸಾ ಸಿದ್ದೇಶ್ವರ ನಗರ ಗಾಜಿಪೂರ ಕಲಬುರಗಿ ರವರ ಗಂಡನಾದ ಹಸನ ಪಟೇಲ್ ಈತನು ಕೆ.ಜಿ.ಎನ್ ಕಾಂಪ್ಲೇಕ್ಸ್ ಕಡೆಯಿಂದ ನ್ಯಾಶನಲ್ ಕಾಲೇಜ ಗೇಟ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಮೋಟಾರ ಸೈಕಲ ನಂ: ಕೆಎ-32 ಇಎಂ-4064 ನೇದ್ದರ ಸವಾರ ಗೌಸ್ ಪಟೇಲ್ ಈತನು ತನ್ನ ಮೋಟಾರ ಸೈಕಲ ಮೇಲೆ ಹಿಂದುಗಡೆ ಅಲ್ಲಾವುದ್ದೀನ ಪಟೇಲ್ ಈತನಿಗೆ ಕೂಡಿಸಿಕೊಂಡು ತನ್ನ ಮೋಟಾರ ಸೈಕಲನ್ನು ಸಂತ್ರಾಸವಾಡಿ ರೋಡ ಕಡೆಯಿಂದ ಅತಿವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಸನ ಪಟೇಲ್ ಈತನಿಗೆ ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಕೆಳಗೆ ಬಿಳಿಸಿದ್ದರಿಂದ  ಅಲ್ಲಾವುದ್ದೀನ ಪಟೇಲ್ ಈತನಿಗೆ ರಕ್ತಗಾಯಗೊಳಿಸಿ  ಹಸನ ಪಟೇಲ್ ಈತನ ತಲೆಗೆ ಭಾರಿ ಪೆಟ್ಟುಗೊಳಿಸಿ ತಾನು ಕೂಡ ಭಾರಿ ಗಾಯಹೊಂದಿದ್ದು ಇರುತ್ತದೆ. ಹಸನ ಪಟೇಲ್ ಈತನು ದಿನಾಂಕ 17/01/2018 ರಂದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಹೊಂದುತ್ತಾ ರಸ್ತೆ ಅಪಘಾತದಲ್ಲಿ  ಆದ ಗಾಯ ವಾಸಿಯಾಗದೆ ಇಂದು ದಿನಾಂಕ  18/01/2018 ರಂದು ಬೆಳಿಗ್ಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.