ವರದಕ್ಷಣೆ ಹಣಕ್ಕೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಮುತ್ತಮ್ಮ ಗಂಡ ಭೀಮರಾಯ ಆನೆಕ್ಕಿ ಸಾ: ಸೋಮನಾಥ ಹಳ್ಳಿ
ರವರು ಮಗಳಾದ ಮಂಜುಳಾ ಇವಳಿಗೆ ಮೂರು ವರ್ಷಗಳ ಹಿಂದೆ ಭಂಕೂರ ಗ್ರಾಮದ ಸಾಯಿಬಣ್ಣ ತಂದೆ ಶರಣಪ್ಪ
ಹೊಸಮನಿ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆಯಲ್ಲಿ 50 ಸಾವಿರ ರೂಪಾಯಿ ಮತ್ತು 5 ತೊಲೆ
ಬಂಗಾರ ಹಾಗೂ ಇತರೆ ಗೃಹ ಬಳಿಕೆ ಸಾಮಾನುಗಳು ಕೊಟ್ಟು ಮದುವೆ ಮಾಡಿಕೊಟ್ಟಿದ್ದು. ನಂತರ ದಿನಗಳಲ್ಲಿ
ನನ್ನ ಮಗಳ ಗಂಡನ ಮನೆಯವರಾದ ಗಂಡ ಸಾಯಿಬಣ್ಣ 2) ಮಹಾದೇವಿ ಗಂಡ ಶರಣಪ್ಪ 3) ಶೀಲಮ್ಮ ಗಂಡ ಕುಪ್ಪಣ್ಣ ಹೊಸಮನಿ 4) ಮಲ್ಲಪ್ಪ ತಂದೆ
ಶರಣಪ್ಪ ಹೊಸಮನಿ 5) ರೇವಸಿದ್ದಪ್ಪ ಅವರಾದಿ 6) ಚಂದಮ್ಮ ಗಂಡ ರೇವಣಸಿದ್ದಪ್ಪ ಅವರಾದಿ 7)
ಕಾಶಿಬಾಯಿ ಗಂಡ ಶರಣಪ್ಪ ಹೊಸಮನಿ 8) ಮಹಾದೇವ ತಂದೆ ಬಸಣ್ಣ 9) ರಾಚಮ್ಮ ಗಂಡ ಮಹಾದೇವ ನಾಟಿಕರ 10)
ಶ್ರೀದೇವಿ ಗಂಡ ಮಲ್ಲಪ್ಪ ಹೊಸಮನಿ 11) ಕುಪ್ಪಣ್ಣ ತಂದೆ ಶರಣಪ್ಪ ಹೊಸಮನಿ ರವರೆಲ್ಲಾರೂ ಸೇರಿ
ನನ್ನ ಮಗಳಿಗೆ ಬೈಯುವುದು ಮತ್ತು ಮಾನಸಿಕವಾಗಿ , ದೈಹಿಕವಾಗಿ ಹಿಂಸೆ ನೀಡುತಿರುವುದು.
ಮಾಡುತ್ತಿದ್ದು ನಾನು ನಮ್ಮ ಸಂಬಂಧಿಕರು ಈ ರೀತಿ ನನ್ನ ಮಗಳಿಗೆ ಕಿರಿಕಿರಿ ಮಾಡುವುದು ಸರಿ ಅಲ್ಲ
ಅಂತಾ ತಿಳಿ ಹೇಳಿದ್ದು ಇರುತ್ತದೆ. ಅಲ್ಲದೆ ನನ್ನ ಮಗಳ ಕುಪ್ಪಾಸ ಕಾರ್ಯಕ್ರಮದಲ್ಲಿ ಒಂದು ತೊಲೆ
ಬಂಗಾರ ಕೊಟ್ಟಿರುತ್ತೇನೆ. ಅದರೂ ಸಹ ನನ್ನ ಮಗಳಿಗೆ ವರದಕ್ಷಿಣೆ ಹಣ ತರಬೇಕು ಅಂತಾ ಕಿರುಕುಳ
ಕೊಡುತ್ತಿದರಿಂದ ನನ್ನ ಮಗಳು ಮಂಜುಳಾ ಇವಳು ಒಂದು ವರ್ಷಗಳ ಕಾಲ ನಮ್ಮ ಮನೆಗೆ ಕರೆದುಕೊಂಡು
ಹೋಗಿರುತ್ತೇನೆ. ಹೀಗಿದ್ದು ದಿನಾಂಕ: 17/01/2018 ರಂದು ನನ್ನ ಅಳಿಯ ಸಾಯಿಬಣ್ಣ ಸೋಮನಾಥ
ಹಳ್ಳಿಗೆ ಬಂದು ನನ್ನ ಮಗಳಿಗೆ ಮಗಳು ಮಂಜುಳಯೊಂದಿಗೆ ಬೇರೆ ಮನೆಮಾಡಿಕೊಡು ಚನ್ನಾಗಿ ಸಂಸಾರ
ಮಾಡಿಕೊಂಡಿರುತ್ತೇನೆ ಅಂತಾ ಹೇಳಿ ಕರೆದುಕೊಂಡು ಹೋಗಿದ್ದನು ದಿನಾಂಕ: 19/01/2018 ರಂದು
ಮುಂಜಾನೆ 7-00 ನನ್ನ ಅಳಿಯ ಸಾಯಿಬಣ್ಣ ಪೋನ ಮಾಡಿ ನಾನು ಸಂಡಾಸಕ್ಕೆ ಹೋಗಿ ಬರುವಷ್ಟರಲ್ಲಿ
ಮಂಜುಳಾ ಇವಳು ಊರಲು ಹಾಕಿಕೊಂಡಿದ್ದಾಳೆ ಎಂದು ತಿಳಿಸಿದನು ಆಸ್ಪತ್ರೆ ಕರೆದುಕೊಂಡು
ಹೋಗುತ್ತಿದೇವೆ ಜಿ ಜಿ ಹೆಚ್ ಕಲಬುರಗಿಗೆ ಬರಲು
ತಿಳಿಸಿದರಿಂದ ನಾನು ನನ್ನ ಮಗ ಚಂದ್ರಶೇಖರ , ನಮ್ಮ ಅಣ್ಣತಮ್ಮಕೀಯ ನಾಗಮ್ಮ ಆನೇಕ್ಕಿ , ಕಮಲಾಬಾಯಿ
ಆನೆಕ್ಕಿ , ಗುರು ಆನೆಕ್ಕಿ , ಶಾಮರಾಜ ಆನೆಕ್ಕಿ ರವರು ಕೂಡಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು
ನೋಡಲಾಗಿ ನನ್ನ ಮಗಳು ಮೃತ ಪಟ್ಟಿದಳು . ನನ್ನ ಮಗಳಿಗೆ ಅಳಿಯ ಸಾಯಿಬಣ್ಣ ಮತ್ತು ಸಂಗಡ 10 ಜನರು
ಸೇರಿ ವರದಕ್ಷಿಣೆ ಹಣ ತರಬೇಕು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ನೇಣು ಹಾಕಿ ಕೊಲೆ
ಮಾಡಿದ್ದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಮಹ್ಮದ ಅಜೀಮ್ ತಂದೆ ಮಹ್ಮದ ಯೂಸೂಫ್ ಜಮಾದಾರ ಸಾ: ಸಡಕ ಕಿಣ್ಣಿ ತಾ:ಜಿ: ಕಲಬುರಗಿ ಹಾ:ವ:
ಇಸ್ಲಾಂಬಾದ ಕಾಲನಿ ಕಲಬುರಗಿ ಇವರು ಹುಮನಾಬಾದ ರಿಂಗ ರೋಡನಲ್ಲಿ ನಿಂತ ತನಗೆ ಪರಿಚಯದ ಶ್ರೀಮತಿ
ರಹೇಮತಬೀ ಲದಾಫ ಇವಳಿಗೆ ತನ್ನ ಮೋಟಾರ ಸೈಕಲ ನಂ ಕೆಎ 33 ಜೆ 1497 ನೇದ್ದರ ಹಿಂದೆ ಕೂಡಿಸಿಕೊಂಡು
ಅವರಾದ ಗ್ರಾಮಕ್ಕೆ ಬಿಡಲು ಹೊರಟಾಗ ಸಂಜೆ 07-30 ಗಂಟೆ ಸುಮಾರಿಗೆ ಉಪಳಾಂವ ಸೀಮಾಂತರದಲ್ಲಿ ಇರುವ
ಬಿರಾದಾರ ಪೆಟ್ರೋಲ ಪಂಪ ದಾಟಿ ಇರುವ ಒಂದು ಬ್ರೀಡ್ಜ ಹತ್ತಿರ ಬಂದಾಗ ಆಗ ಎದುರುನಿಂದ ಅಂದರೆ
ಹುಮನಾಬಾದ ರೋಡ ಕಡೆಯಿಂದ ಒಂದು ನೀಲಿ ಬಣ್ಣದ ಕಾರು ಚಾಲಕನು ತನ್ನ ವಶದಲ್ಲಿದ್ದ ಕಾರನ್ನು
ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ತನ್ನ ಸೈಡಿಗೆ
ಹೋಗದೇ ಫಿರ್ಯಾದಿ ಸೈಡಿಗೆ ಬಂದು ಅವನ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿ ಹೊಡೆದು
ಅಪಘಾತಪಡಿಸಿದನು. ಇದರಿಂದಾಗಿ ಫಿರ್ಯಾದಿ ಮತ್ತು ಹಿಂದೆ ಕುಳಿತ ರಹೇಮತಬೀ ಇಬ್ಬರು ಮೋಟಾರ
ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದಿದ್ದದ್ದು, ಫಿರ್ಯಾದಿ ಮತ್ತು ರಹೇಮತಬೀ ಇವರಿಗೆ ಭಾರಿ
ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ರಹೇಮತಬೀ ಇವಳಿಗೆ ತಲೆ ಭಾರಿ ಒಳಪೆಟ್ಟಾಗಿ ಬೇಹುಷ
ಸ್ಥಿತಿಯಲ್ಲಿ ಬಿದ್ದಿದ್ದು. ಅವರಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಯಲ್ಲಿ ಹಾಕಿಕೊಂಡು
ರಾತ್ರಿ 08-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದಾಗ ವೈದ್ಯರು ರಹೇಮತಬೀ
ಇವಳಿಗೆ ನೋಡಿ ಈಗಾಗಲೇ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. . ಸದರಿ ಅಪಘಾತವು ಈ ಮೇಲೆ
ಹೇಳಿದಂತೆ ಕಾರ ಕೆಎ 32 ಎನ್ 2086 ಚಾಲಕನ ತಪ್ಪಿನಿಂದ
ಅಪಘಾತ ಸಂಭವಿಸಿದ್ದರಿಂದ ಅವನ ಮೇಲೆ ಕಾನೂನು
ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 19/01/2018 ರಂದು ಸುಧಾರಿತ ಗಸ್ತು ಸಂ 23 ಕರಜಗಿ ಗ್ರಾಮದ ಬೀಟ್ ಸಿಬ್ಬಂದಿಯಾದ ಸಂತೋಷ ಸಿಪಿಸಿ-657 ರವರು ಕರಜಗಿ ಗ್ರಾಮದ ಖ್ವಾಜಾ ಸೈಫನ್ ಮುಲ್ಕ ದರ್ಗಾ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ
ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ್ದು ಪಿಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಕರಜಗಿ ಗ್ರಾಮದ ಖ್ವಾಜಾ ಸೈಫನ್ ಮುಲ್ಕ ದರ್ಗಾ ಹತ್ತಿರ ಸ್ವಲ್ಪ ದೂರು ನಮ್ಮ
ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ದರ್ಗಾ ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು
ವಿಳಾಸ ವಿಚಾರಿಸಲಾಗಿ ನಾಗಪ್ಪ ತಂದೆ ಶರಣಪ್ಪ ನಾದ ಸಾ||ಕರಜಗಿ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 800/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ
ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment