POLICE BHAVAN KALABURAGI

POLICE BHAVAN KALABURAGI

15 November 2017

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ:14.11.2017 ರಂದು ಭೀಮಶಪ್ಪಾ ನಗರದಲ್ಲಿ ಒಬ್ಬ ಮನುಷ್ಯ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದು ಚೀಟಿ ಕೊಡುತಿದ್ದಾನೆ ಅಂತಾ ಮಾಹಿತಿ ಬಂದಮೇರೆಗೆ ಪಿಐ ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಬರೆದುಕೊಳ್ಳುತಿರುವುದನ್ನು ಖಚಿತ ಪಡೆಸಿಕೊಂಡು ದಾಳಿ ಮಾಡಿ ಹಣಮಂತ ತಂದೆ ರಂಗಪ್ಪಾ ಸಾ:ಭೀಮಶಪ್ಪಾ ನಗರ ಇತನಿಗೆ ಹಿಡಿದು ಆತನಲ್ಲಿದ್ದ ಮಟಕಾ ಬರೆದುಕೊಂಡ ನಗದು ಹಣ 12170/- ರೂ ಹಾಗೂ ನಾಲ್ಕು ಮಟಕಾ ನಂಬರ ಬರೆದ ಚೀಟಿ ಒಂದು ಬಾಲ ಪೆನ್ನು ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ  : ಶ್ರೀ ರಾಜಕುಮಾರ ತಂದೆ ದಯಾನಂದ ಬಿರಾದಾರ ಸಾ: ಮಲ್ಲಾಬಾದ ರವರು ರವರು ಮತ್ತು ತಮ್ಮನಾದ ಬಸವರಾಜ ಇಬ್ಬರು ಕೂಡಿಕೊಂಡು ನಮ್ಮ ಟಿ.ವಿ.ಎಸ್ ಎಕ್ಸಲ್- ನಂ ಕೆಎ-32-ಇ.ಡಿ-0765 ನೇದ್ದರ ಮೇಲೆ ಕುಳಿತುಕೊಂಡು ಮಲ್ಲಾಬಾದ ಸೀಮೇಯ ಹೊಲಕ್ಕೆ ಹೋಗಿದ್ದು  ದಿನಾಂಕ 13-11-2017 ರಂದು ಸಾಯಂಕಾಲ 07:00 ಗಂಟೆಯ ಸುಮಾರಿಗೆ ಸಂತೋಷ ದಾಮಾ ಇವರ ಹೊಲದ ಹತ್ತಿರ ಅಫಜಲಪೂರ ಕಲಬುರಗಿ ರೋಡ ಮಲ್ಲಾಬಾದ ದಿಂದ 02 ಕಿ.ಮೀ ಅಂತರದಲ್ಲಿ ಅಫಜಲಪೂರ ಕಡೆಗೆ ಅಲ್ಲಿ ನಾನು ಹಾಗೂ ನನ್ನ ತಮ್ಮನಾದ ಬಸವರಾಜ ಇಬ್ಬರು ರೋಡಿನ ಎಡ ಬದಿಗೆ ಗಾಡಿಯ ಹತ್ತಿರ ನಿಂತುಕೊಂಡಿದ್ದು ಅದೇ ಸಮಯದಲ್ಲಿ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲ್ ಅನ್ನು ಅತೀವೇಗ ದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹಿಂದಿನಿಂದ ಬಂದು ಒಮ್ಮೆಲೆ ನಮಗೆ ಡಿಕ್ಕಿ ಪಡೆಸಿದ್ದು ನಾವಿಬ್ಬರು ಕೆಳಗೆ ಬಿದ್ದೇವು ಡಿಕ್ಕಿ ಪಡೆಸಿದ ಮೋಟಾರ ಸೈಕಲ ಸವಾರನು ಕೆಳಗೆ ಬಿದ್ದನು ಎದ್ದು ನೋಡಲು ನನಗೆ ಎಡಗಾಲಿಗೆ ಮೋಳಕಾಲ ಕೆಳಗೆ ಎಲಬು ಮುರದಿದ್ದು ಮೋಳಕಾಲಿಗೆ, ಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಬಸವರಾಜನಿಗೆ ಬಲಗಾಲಿನ ಚಪ್ಪಿಗೆ ಒಳ ಪೆಟ್ಟು ಗಾಯ ವಾಗಿರುತ್ತದೆ. ಸದರಿ ಮೋಟಾರ ಸೈಕಲ್ ನಂ ನೋಡಲು ಎಮ್.ಹೆಚ್-30-ಬಿಎ-9806 ಹೀರೋ ಹೊಂಡಾ ಇದ್ದು ಸದರಿಯವನ ಹೆಸರು ಕೇಳಲಾಗಿ ದತ್ತು ತಂದೆ ಮಾಹಾದೇವಪ್ಪ ಕನ್ನೋಳ್ಳಿ ಸಾ: ಉಡಚಾಣ  ಅಂತಾ ತಿಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ರುದ್ರಯ್ಯ ತಂದೆ ಹಂಪಯ್ಯ ಮಠಪತಿ ಸಾಃ ಧುತ್ತರಗಾಂವ, ತಾಃ ಆಳಂದ ಇವರು ದಿನಾಂಕ 09/11/2017 ರಂದು ನಾನು ಹಾಗೂ ನನ್ನ ಹೆಂಡತಿ ನಮ್ಮ ಸ್ವಂತ ಕಾರಿನಲ್ಲಿ ಹಲಕರ್ಟಿ ಶ್ರೀ ವೀರಭದ್ರೆಶ್ವರ ಜಾತ್ರೆಗೆ ಹೋಗಿರುತ್ತೇವೆ. ದಿನಾಂಕ  09/11/2017 ಮತ್ತು 10/11/2017 ರಂದು ಜಾತ್ರೆಯಲ್ಲಿಯೆ ಇದ್ದು ದಿನಾಂಕ 11/11/2017 ರಂದು ಕಲಬುರಗಿಗೆ ಬಂದು ದಿನಾಂಕ 13/11/2017 ರವರಗೆ ನಮ್ಮ ಸಂಭಂಧಿಕರ ಮನೆಯಲ್ಲಿ ಇದ್ದೇವು. ಹೀಗಿರುವಾಗ ದಿನಾಂಕ 14/11/2017 ರಂದು ಬೆಳಿಗ್ಗೆ 08.30 ಎ.ಎಮ ಕ್ಕೆ ನಮ್ಮೂರಿನ ಹಾಗೂ ನಮ್ಮ ಮನೆಯ ಬಾಜು ಇರುವ ಶ್ರೀ ವೀರೆಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ಯೂನ ಕೆಲಸ ಮಾಡುವ ಚಂದ್ರಕಾಂತ ತಂದೆ ಶಾಂತಪ್ಪ ಬಂಗರಗಿ ಇವರು ನನ್ನ ಮೊಬೈಲಗೆ ಫೋನ ಮಾಡಿ ನಿಮ್ಮ ಮನೆಯ ಮುಖ್ಯ ಬಾಗಿಲು ಅರ್ಧ ತೆರೆದಿದ್ದು ಇರುತ್ತದೆ. ನೀವು ಎಲ್ಲಿದ್ದಿರಿ ಅಂತ ಕೇಳಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಕಲಬುರಗಿಯಲ್ಲಿ ಇರುವದಾಗಿ ತಿಳಿಸಿರುತ್ತೇವೆ. ಅವನಿಗೆ ಸಂಶಯ ಬಂದು ನಮಗೆ ಬೇಗ ಬರಲು ತಿಳಿಸಿದ ಮೇರೆಗೆ ನಾನು  ಮತ್ತು ನನ್ನ ಹೆಂಡತಿ ಊರಿಗೆ ಬಂದು ನನ್ನ ಮನೆಯನ್ನು ಪರಿಶೀಲಿಸಲಾಗಿ ನನ್ನ ಮನೆಯ ಮುಖ್ಯ ಗೇಟಿನ ಬೀಗದ ಕೈ ಮುರಿದಿದ್ದು ನಂತರ ಮುಖ್ಯ ದ್ವಾರದ ಬಾಗಿಲಿನ ಬೀಗದ ಕೈ ಮುರಿದಿದ್ದು ಇರುತ್ತದೆ. ಒಳಗೆ ಹೋಗಿ ಪರಿಶೀಲಿಸಲಾಗಿ ಡೈನಿಂಗ ಹಾಲದಲ್ಲಿ ಸಜ್ಜಾದ ಮೇಲೆ ಸ್ಟೀಲಿನ ಡಬ್ಬಿಯಲ್ಲಿ ಇಟ್ಟಂತಹ 1,64,000/- ರೂಪಾಯಿ ಮೌಲ್ಯದ ಬೆಳ್ಳಿಯ ಮೂರ್ತಿ ಮತ್ತು ಬಂಗಾರದ ಆಭರಣಗಳು ಹಾಗೂ ನಗದು ಹಣ 25,000/- ಗಳನ್ನು ಹೀಗೆ ಒಟ್ಟು 1,89,000/- ರೂಪಾಯಿ ಮೌಲ್ಯದ ಹಣ, ಬಂಗಾರ, ಬೆಳ್ಳಿ ಸಾಮಾನುಗಳನ್ನು ದಿನಾಂಕ 13/11/2017 ರಂದು ರಾತ್ರಿ 0800 ಗಂಟೆಯಿಂದ ದಿನಾಂಕ 14/11/2017 ರ ಬೆಳಿಗ್ಗೆ 0800 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿನ ಬೀಗದ ಕೈ ಮುರಿದು ಒಳಗೆ ಹೋಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

14 November 2017

KALABURAGI DISTRICT REPORTED CRIMES

ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ ಕಾಶಿನಾಥ ತಂದೆ ನರಸಪ್ಪ ಜೇವರ್ಗಿ ಸಾಃ ಮಾಡಿಯಾಳ, ತಾಃ ಆಳಂದ ರವರು ಪ್ರತಿ ವರ್ಷ ನಾನು ನನ್ನ ಕುಟುಂಬದ ಉಪಜೀವನಕ್ಕಾಗಿ ಮಹಾರಾಷ್ಟ್ರದ ಕಪೊಲಿಗೆ ಹೋಗಿ ಇಟ್ಟಂಗಿ ಭಟ್ಟಿಯಲ್ಲಿ ಇಟ್ಟಂಗಿ ಭಟ್ಟಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಸುಮಾರು 2 ವರ್ಷಗಳ ಹಿಂದೆ ಕಪೊಲಿಯಲ್ಲಿ ನಿರಗುಡಿ ಗ್ರಾಮದ ನಮ್ಮದೆ ಜಾತಿಯ ಧನರಾಜ ತಂದೆ ಕಾಶಿನಾಥ ಕಾಂಬಳೆ, ಸೀತಾರಾಮ ತಂದೆ ಕಾಶಿನಾಥ ಕಾಂಬಳೆ ಸಹೋದರರು ಅದೇ ಇಟ್ಟಂಗಿ ಭಟ್ಟಿಯಲ್ಲಿ ನನಗೆ ಪರಿಚಯವಾಗಿರುತ್ತಾರೆ. ನಮಗೂ ಮತ್ತು ಅವರಿಗೂ ಒಳ್ಳೆಯ ಸ್ನೇಹ ಬೆಳೆದು ಹೋದ ವರ್ಷ ಭಟ್ಟಿ ಮಾಲೀಕನಿಂದ ಮುಂಗಡ ಹಣ ತಮ್ಮ ಮುಖಾಂತರ ನನಗೆ ಕೊಡಿಸಿರುತ್ತಾರೆ. ಹೀಗಾಗಿ ಮುಂಗಡ ಹಣ ಪಡೆದ ನಾನು ಈ ವರ್ಷ ನನ್ನ ಕುಟುಂಬದೊಂದಿಗೆ ಕಪೊಲಿಗೆ ಹೋಗಿ ಇಟ್ಟಂಗಿ ಕೆಲಸ ಮಾಡಿರುತ್ತೇನೆ. ಕಪೊಲಿಯಲ್ಲಿ ಕೆಲಸ ನಿರ್ವಹಿಸುತ್ತಾ ನನ್ನ ಕುಟುಂಬ ನಿರ್ವಹಣೆಗೆ ಹಣದ ಅವಶ್ಯಕತೆ ಇದ್ದಾಗ ಮಾಲೀಕರಿಗೆ ಹಣ ಕೇಳಲು ಹೋದಾಗ ಭಟ್ಟಿ ಮಾಲೀಕನು ಯಾವುದೇ ಹಣ ಕೊಟ್ಟಿರುವದಿಲ್ಲ, ಇದರ ಬಗ್ಗೆ ನನ್ನ ಗೆಳೆಯರಾದ ಧನರಾಜ ಮತ್ತು ಸೀರಾರಾಮ ಇಬ್ಬರಿಗೆ ವಿಚಾರಿಸಲಾಗಿ ಅವರು ಕೂಡ ಯಾವುದೆ ಲೆಕ್ಕ ಪತ್ರ ವಗೈರೆ ಮಾಡಿರುವದಿಲ್ಲ. ನನಗೆ ಹಣದ ಅಡಚಣೆಯಾಗಿ ಕುಟುಂಬ ನಿರ್ವಹಣೆಗೆ ತೊಂದರೆ ಆಗಿದ್ದರಿಂದ ನಾನು ಬೇಸತ್ತು ಇನ್ನು ಒಂದು ತಿಂಗಳು ಕೆಲಸ ಬಾಕಿ ಇರುವಾಗಲೆ ನನ್ನ ಕುಟುಂಬ ಸಮೇತ ಊರಿಗೆ ಬಂದಿರುತ್ತೇನೆ. ಆ ನಂತರ ಧನರಾಜ ಮತ್ತು ಸೀತಾರಾಮ ಇಬ್ಬರೂ ನನಗೆ ಫೋನ ಮುಖಾಂತರ ನಿನ್ನಿಂದ ಇನ್ನು ನಮಗೆ ಹಣ ಬರುವದು ಬಾಕಿ ಇದೆ ಅಂತ ವಿಚಾರಿಸಿದ್ದು ಅದಕ್ಕೆ ನಾನು ಲೆಕ್ಕಾ ಪತ್ರ ಮಾಡಿ ನಾನು ಕೊಡಬೇಕಾದರೆ ಹಣ ನಿಮಗೆ ಮರಳಿಸುತ್ತೇನೆ ಇಲ್ಲವಾದಲ್ಲಿ ಇಲ್ಲ ಅಂತ ತಿಳಿಸಿದ್ದು ಅದಕ್ಕೆ ಅವರು ಇಲ್ಲಿಯತನಕ ಯಾವುದೇ ಲೆಕ್ಕ ಪತ್ರ ಮಾಡದೆ ಧನರಾಜ ತಂದೆ ಕಾಶಿನಾಥ ಕಾಂಬಳೆ, ಸೀತಾರಾಮ ತಂದೆ ಕಾಶಿನಾಥ ಕಾಂಬಳೆ ಇಬ್ಬರೂ ದಿನಾಂಕ 11/11/2017 ರಂದು ರಾತ್ರಿ 10.00 ಪಿ.ಎಮ ನಂತರ ನಮ್ಮೂರಿನ ಬಾಲಕರ ವಸತಿ ನಿಲಯದಲ್ಲಿ ಇದ್ದ ನನ್ನ ಅಪ್ರಾಪ್ತ ವಯಸ್ಸಿನ ಮಗನಾದ ಕುಮಾರ ತಂದೆ ಕಾಶಿನಾಥ ಜೇವರ್ಗಿ ವಃ 16 ವರ್ಷ, ಇತನಿಗೆ ಏನೊ ಪುಸಲಾಯಿಸಿ ಯಾವುದೊ ಒಂದು ವಾಹನದಲ್ಲಿ ಕೂಡಿಸಿಕೊಂಡು ಅಪಹರಣ ಮಾಡಿಕೊಂಡು ಮಹಾರಾಷ್ಟ್ರ ರಾಜ್ಯಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಈ ವಿಚಾರ ನನಗೆ ದಿನಾಂಕ 12/11/2017ರಂದು ಬೆಳಿಗ್ಗೆ ಅವರೆ ಫೊನ ಮುಖಾಂತರ ತಿಳಿಸಿದ್ದೇನೆಂದರೆ ನಿನ್ನಿಂದ ಇನ್ನು ಒಂದು ಲಕ್ಷ ಹಣ ಬರುವದು ಬಾಕಿ ಇದ್ದು ಆ ಹಣ ಕೊಟ್ಟು ನಿನ್ನ ಮಗನಿಗೆ ಬಿಡಿಸಿಕೊಂಡು ಹೋಗು ಅಂತ ತಿಳಿಸಿರುತ್ತಾರೆ. ಕಾರಣ ದಿನಾಂಕ 11/11/2017 ರಂದು ರಾತ್ರಿ 10.00 ಪಿ.ಎಮ ನಂತರದ ವೇಳೆಯಲ್ಲಿ ಮಾಡಿಯಾಳ ಗ್ರಾಮದ ಬಾಲಕರ ವಸತಿ ನಿಲಯದಲ್ಲಿ ಇದ್ದ ನನ್ನ ಅಪ್ರಾಪ್ತ ವಯಸ್ಸಿನ ಮಗನಾದ ಕುಮಾರನಿಗೆ ಏನೊ ಸುಳ್ಳು ಹೇಳಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋದ ಧನರಾಜ ಮತ್ತು ಸೀತಾರಾಮ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನ ಮಗನನ್ನು ನನಗೆ ಮರಳಿಸಿ ಕೊಡಲು ವಿನಂತಿ ಅದೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಹಣಮಂತ ತಂದೆ ಭೀಮರಾಯ ಸಾ: ಮಡ್ಡಿ ನಂಬರ 01 ಶಹಾಬಾದ ಇವರು ದಿನಾಂಕ: 12/11/2017 ರಂದು ಮುಂಜಾನೆ ತಮ್ಮ ಟಿ.ವಿ.ಎಸ್ ಎಕ್ಸಲ್ ಮೋಟಾರ ಸೈಕಲ ನಂಬರ ಕೆ.ಎ 32 ಇ ಎಮ್ 9557 ನೇದ್ದರ ಮೇಲೆ ನಾನು ಮತ್ತು ನನ್ನ ಹಿಂದುಗಡೆ ಗಳೆಯನಾದ ವಾಸು ತಂದೆ ಸುಬ್ರಮಣ್ಯಂ ಇಬ್ಬರು ಕೂಡಿಕೊಂಡು ಅಲಸ್ಟಾಮ ಕಾಲೋನಿಗೆ ಹಾಲು ಮಾರಲು ಮಡ್ಡಿ ನಂಬರ 01 ನಿಂದ ಅಲಸ್ಟಾಮ ಕಾಲೋನಿಗೆ ಹೋಗುತ್ತಿದ್ದಾಗ ಅಲಸ್ಟಾಮ ಕಾಲೋನಿಯ ಕ್ರಾಸ ಹತ್ತಿರ ರೋಡಿನಲ್ಲಿ ಭಂಕೂರ ಕಡೆಯಿಂದ ಕಾರ ನಂಬರ ಕೆ.ಎ. 32 ಎನ್ 1520 ನೇದ್ದರ ಚಾಲಕನ್ನು ತನ್ನ ಕಾರ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾವು ಅಲಸ್ಠಾಮ ಕಾಲೋನಿಯ ಒಳಗೆ ಹೋಗಲು ತಿರುವು ತೆಗೆದುಕೊಳ್ಳೂತ್ತಿದ್ದಾಗ ನಮ್ಮ ಮೋಟಾರ ಸೈಕಲ ಡಿಕ್ಕಿಪಡಿಸಿದರಿಂದ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ನನಗೆ ಮುಖದ ಮೇಲೆ ಬಲ ಮೆಲಕಿನ ಹತ್ತಿರ ಮತ್ತು ಎರಡು ಮೊಳಕಾಲಿಗೆ ರಕ್ತಗಾಯಾವಾಗಿ ಕೈಗಳಿಗೆ ಅಲ್ಲಲ್ಲಿ ತರಚಿದಂತಾಗಿರುತ್ತದೆ ಮತ್ತು ವಾಸು ಇತನಿಗೆ ನೋಡಲಾಗಿ ಎಡಗಾಲ ತೊಡೆಯ ಹತ್ತಿರ ಮತ್ತು ಮೊಳಕಾಲಿನಗೆ ಭಾರಿ ಗಾಯ ಪೆಟ್ಟಾಗಿದ್ದು ಹಾಗೂ ಎರಡು ಕೈಗಳು ಮುಂಗೈಗೆ ತರಚಿದ ರಕ್ತಗಾಯಾವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಲ್ಲಿನಾಥ ತಂದೆ ಸಂಗಣ್ಣ ಮುರುಡ ಮು|| ಬೆಳಮಗಿ ಇವರಿಗೆ ಜ್ಞಾನರಾಜ ಮತ್ತು ಶಂಭುಲಿಂಗ ಅಂತಾ ಇಬ್ಬರೂ ಗಂಡು ಮಕ್ಕಳಿದ್ದು ನಮ್ಮ ಅಣ್ಣನಾದ ಕಲ್ಯಾಣಿಯವರು ಕಲಬುರಗಿ ನಗರದ ಜೆ.ಆರ್‌ ನಗರದಲ್ಲಿ ಮನೆ ಮಾಡಿಕೊಂಡಿದ್ದು ನನ್ನ ಹಿರಿಯಮಗ ಜ್ಞಾನರಾಜ ಇತನು ನಮ್ಮ ಅಣ್ಣನ ಹತ್ತಿರ ಉಳಿದುಕೊಂಡು ಸಂತೋಷ ಕಾಲೋನಿಯಲ್ಲಿರುವ ಭೋಗೆಶ್ವರ ಫ್ರೌಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಹಿಂದೆ ದಿನಾಂಕ:08/11/2017 ರಂದು ನನ್ನ ಮಗ ಶಾಲೆಗೆ ಹೋಗಿದ್ದು ಮಧ್ಯಾನ 3.30 ಗಂಟೆ ಸುಮಾರಿಗೆ 3ನೇ ಅಂತಸ್ತಿನಲ್ಲಿದ್ದ ಶಾಲೆಯಿಂದ ಕೆಳಗೆ ಬರುವ ಕುರಿತು ಸ್ಟೇರಕೆಸ ಮೇಲೆ ನಡೆದುಕೊಂಡು ಬರುತ್ತಿದ್ದಾಗ ಆಕಸ್ಮಿಕವಾಗಿ ಅವನ ಕಾಲು ಜಾರಿ ಸ್ಟೇರಕೇಸ ಮೇಲಿಂದ ಕಾಲುಜಾರಿ ಮೂರು ಅಂತಸ್ತಿನ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದು ಬಿದ್ದ ಪರಿಣಾಮ ನನ್ನ ಮಗನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿದ್ದು ಮತ್ತು ಕುತ್ತಿಗೆಗೆ ಬಲಗಾಲ ಚಪ್ಪೆಗೆ ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ. ನನ್ನ ಮಗನಿಗೆ ಉಪಚಾರ ಕುರಿತು ದಿನಾಂಕ:8/11/2017 ರಂದು ಯುನೈಟೆಡ್‌ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಉಪಚಾರದಿಂದ ನನ್ನ ಮಗ ಜ್ವಾನರಾಜ ವ:16 ವರ್ಷ ಇತನು ಗುಣಮುಖ ಹೊಂದದೆ ಇಂದು ದಿನಾಂಕ:11/11/2017 ರಂದು ಯುನೈಟೆಡ್‌ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 November 2017

KALABURAGI DISTRICT REPORTED CRIMES

ದ್ವೀಚಕ್ರ ವಾಹನಗಳ ಕಳವು ಪ್ರಕರಣಗಳು :
ನೆಲೋಗಿ ಠಾಣೆ : ಶ್ರೀ ಸಂತೋಷ ತಂದೆ ಶಿವಶರಣಪ್ಪ ನೌಟಾಕ ಸಾ|| ಬಗಲೂರ ತಾ|| ಸಿಂದಗಿ ಜಿ|| ವಿಜಯಪೂರ ಇವರು ದಿನಾಂಕ: 09/11/2017 ರಂದು ಜೇರಟಗಿ ಗ್ರಾಮದಲ್ಲಿ ರೇವಣಾಸಿದ್ದೇಶ್ವರ ಜಾತ್ರೆ ಇದ್ದ ಪ್ರಯುಕ್ತ ನಮ್ಮ ಅಣ್ಣನಾದ ರಾಜಕುಮಾರ ಇವರ ಸೈಕಲ ಮೋಟರ ನಂ: KA28 EH 6042 ನೇದ್ದನ್ನು  ತಗೆದುಕೊಂಡು ನಾನು ನಮ್ಮ ಮಾಮಾ ಗುಪರಾಯ ಮುದ್ದಾ, ಕೂಡಿಕೊಂಡು ಜೇರಟಗಿಗೆ 2:00 ಪಿ.ಎಂಕ್ಕೆ ಬಂದು ಯು.ಕೆ.ಕ್ಯಾಂಪಿನಲ್ಲಿ ನಿಲ್ಲಿಸಿ ಜಾತ್ರೆ ನೋಡಲು ಹೋಗಿದ್ದೇವು, ನಂತರ ಜಾತ್ರೆ ಮುಗಿಸಿಕೊಂಡು ಸಾಯಂಕಾಲ 7:00 ಪಿ.ಎಂಕ್ಕೆ ಬಂದು ನೋಡಲಾಗಿ ನನ್ನ ಸೈಕಲ ಮೋಟರ ಇರಲಿಲ್ಲಾ. ಸೈಕಲ ಮೋಟರ ||ಕಿ|| 30,000/- ರೂ ಆಗಬಹುದು ಯಾರೋ ಕಳ್ಳರು 2:00 ಪಿ.ಎಂ ದಿಂದ 7 :00 ಪಿ.ಎಂದ ಅವಧಿಯಲ್ಲಿ ಯು,ಕೆ.ಪಿ ಕ್ಯಾಂಪನಲ್ಲಿ ನಿಲ್ಲಿಸಿದ ನನ್ನ ಸೈಕಲ ಮೋಟರ ನಂ: KA28 EH 6042 ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ ದೇವಪ್ಪ ತಂದೆ ಶಿವರಾಯ ಬಿರೆದಾರ ಸಾ|| ಗನಟಗಾ ತಾ|| ಜೇವರ್ಗಿ ಜಿ|| ಕಲಬುರಗಿ  ಇವರು ದಿನಾಂಕ: 09/11/2017 ರಂದು ಜೇರಟಗಿ ಗ್ರಾಮದಲ್ಲಿ ರೇವಣಾಸಿದ್ದೇಶ್ವರ ಜಾತ್ರೆ ಇದ್ದ ಪ್ರಯುಕ್ತ ನಾನು ನನ್ನ ಮಗನ ಹೆಸರಿನಲ್ಲಿರುವ ಸೈಕಲಮೋಟರ ನಂ: KA32 EC 5658 ನೇದ್ದು ತಗೆದುಕೊಂಡು ನಾನು ನನ್ನ ಹೆಂಡತಿ ಲಕ್ಷ್ಮಿಬಾಯಿ ಕೂಡಿಕೊಂಡು ಜೇರಟಗಿಗೆ 4:00 ಪಿ.ಎಂಕ್ಕೆ ಬಂದು ರಾಷ್ಟ್ರೀಯ ಹೇದ್ದಾರಿ 218 ಜೇರಟಗಿ ಬಸ ನಿಲ್ದಾಣದ ಹತ್ತಿರ ಇರುವ ದೇಸಾಯಿ ಇವರ ಅಂಗಡಿಯ ಮುಂದೆ ನನ್ನ ಸೈಕಲ ಮೋಟರ ನಿಲ್ಲಿಸಿ ಜಾತ್ರೆ ನೋಡಲು ಹೋಗಿದ್ದೇವು, ನಂತರ ಜಾತ್ರೆ ಮುಗಿಸಿಕೊಂಡು ಸಾಯಂಕಾಲ 7:00 ಪಿ.ಎಂಕ್ಕೆ ಬಂದು ನೋಡಲಾಗಿ ನನ್ನ ಸೈಕಲ ಮೋಟರ ಇರಲಿಲ್ಲಾ. ಸೈಕಲ ಮೋಟರ ||ಕಿ|| 30,000/- ರೂ ಆಗಬಹುದು ಯಾರೋ ಕಳ್ಳರು 4:00 ಪಿ.ಎಂ ದಿಂದ 7 :00 ಪಿ.ಎಂದ ಅವಧಿಯಲ್ಲಿ ರಾಷ್ಟ್ರೀಯ ಹೇದ್ದಾರಿ 218 ಜೇರಟಗಿ ಬಸ ನಿಲ್ದಾಣದ ಹತ್ತಿರ ಇರುವ ದೇಸಾಯಿ ಇವರ ಅಂಗಡಿಯ ಮುಂದೆ ನಿಲ್ಲಿಸಿದ ನನ್ನ ಸೈಕಲ ಮೋಟರ ನಂ: KA32 EC 5658 ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಪ್ರಚೋದನೆ ಮಾಡಿದ ಪ್ರಕರಣ  :
ಜೇವರಗಿ ಠಾಣೆ : ಶ್ರೀ ಚಾಂದಪಾಶಾ ತಂದೆ ಖಾಜಾಲಾಲ್‌ ಜಮದಾರ ಸಾ: ಮಾರಡಗಿ ಗ್ರಾಮ ತಾ: ಜೇವರ್ಗಿ ಜಿ: ಕಲಬುರಗಿ ಇವರು 01) ಸಂಗಣ್ಣ ತಂದೆ ನಾಗಣ್ಣ ಸಾ: ಮಾರಡಗಿ ಗ್ರಾಮ 02) ದೇವಿಂದ್ರಪ್ಪಾ ತಂದೆ ನಾಗಣ್ಣ ಸಾ: ಮಾರಡಗಿ ಗ್ರಾಮ ತಾ; ಜೇವರ್ಗಿ ಇವರು ಫಿರ್ಯಾದಿ ಹೊಲದಲ್ಲಿ ಹಾದು ಹೋದ ಕ್ಯಾನಲ್‌ಗೆ ಅಡ್ಡವಾಗಿ ತಾಡಪತ್ರಿ ಕಟ್ಟಿ ಮುಂದಿನ ಹೊಲಗಳಿಗೆ ನೀರು ಹೋಗದಂತೆ ಮಾಡಿ ಅಕ್ರಮವಾಗಿ ಇಂಜಿನ್‌ ಬಳಸಿ ನೀರು ಪಡೆಯುತ್ತಿದ್ದರಿಂದ ಫಿರ್ಯಾದಿ ಮತ್ತು ಇತರರು ಕೂಡಿ ಕೇಳಿದ್ದಕ್ಕೆ ತಕರಾರು ಮಾಡಿರುತ್ತಾರೆ. ಫಿರ್ಯಾದಿದಾರರು ದಿನಾಂಕ; 30/11/2016 ರಂದು ಈ ಕುರಿತು ನಿರಾವರಿ ಇಲಾಖೆಯ ಜೆ.ಇ ಮತ್ತು ಇ.ಇ ರವರಿಗೆ ದೂರು ನೀಡಿದ್ದು, ಅವರು ಅಕ್ರಮವಾಗಿ ಕ್ಯಾನಲ್‌ ದಿಂದ ಇಂಜಿನ ಮೂಲಕ ನೀರು ಬಳಸುವವರ ವಿರುದ್ದ ಕ್ರಮ ಕೈಗೊಂಡು ಇಂಜಿನ್‌ ಬಂದ ಮಾಡಿಸಿರುತ್ತಾರೆ. ಅಲ್ಲದೆ ಅಕ್ರಮವಾಗಿ ನೀರು ಬಳಸದಂತೆ ಸೂಚಿಸಿರುತ್ತಾರೆ. ಇದರಿಂದ ಆರೋಪಿತರು ಫಿರ್ಯಾದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಭಾರಿ ಘಾಯಗೊಳಿಸಿದ್ದರಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 299/2016 ಪ್ರಕರಣ ಧಾಖಲಾಗಿರುತ್ತದೆ, ನಂತರ ದಿನಾಂಕ; 11/12/2016 ರಂದು 10-30 ಘಂಟೆಗೆ ಫಿರ್ಯಾದಿ ಮನೆಯ ಮುಂದೆ ಆರೋಪಿತರು ಫಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಪದೆ ಪದೆ ಅವಾಚ್ಯವಾಗಿ ಬೈಯುವದು ಜೀವ ಭೆದರಿಕೆ ಹಾಕುವದು ಕರೆ ಮಾಡುವ ಮೂಲಕ ಕೊಲೆ ಮಾಡುವ ಬೇದರಿಕೆ ಹಾಕುವದು ಮಾಡುತ್ತಾ ಬಂದಿರುತ್ತಾರೆ. ಇದರಿಂದ ದೂರುದಾರನ ಜೀವನ ಅಪಾಯದಲ್ಲಿರುತ್ತದೆ. ಈ ಕುರಿತು ಠಾಣೆಗೆ ಅರ್ಜಿ ನೀಡಿದರು ಕೂಡ ಆಪಾದಿತರನ್ನು ಬಂದಿಸಿರುವದಿಲ್ಲ, ಗ್ರಾಮದಲ್ಲಿ ಮುಕ್ತವಾಗಿ ಭಯವಿಲ್ಲದೆ ಒಡಾಡುತ್ತಿದ್ದಾರೆ. ಮತ್ತು ಗ್ರಾಮದಲ್ಲಿ ಅವಾಚ್ಯವಾಗಿ ಬೈದು ಮುಸ್ಲಿಂ ಸುಮುಧಾಯದ ಜನರ ಧಾರ್ಮಿಕ ಬಾವನಗಳಿಗೆ ನೋವುಂಟು ಮಾಡಿ ಧಾರ್ಮಿಕ ಸಮುದಾಯದಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧಿಕೃತವಾಗಿ ಪ್ಲೇಕ್ಸ ಬೋರ್ಡ ಹಾಕಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 10/11/2017 ರಂದು ಬೆಳ್ಳಿಗೆ 10-00 ಗಂಟೆಗೆ ಶ್ರೀ ಅರ್ಜುನ ಪಿಸಿ 1075 ರವರು ಮುತ್ತಾಗಾ ಗ್ರಾಮಕ್ಕೆ ಬೀಟ ಕರ್ತವ್ಯಕ್ಕೆ ಹೋದಾಗ ಮುತ್ತಾಗಾ ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿನ್ನೆ ದಿನಾಂಕ: 09/11/2017 ರಂದು ರಾತ್ರಿ ವೇಳೆಯಲ್ಲಿ ಗ್ರಾಮದ ಯಾರೋ ಮುಸ್ಲಿಂ ಜನಾಂಗದವರು ಒಂದು ಕಟ್ಟಿ ಕಟ್ಟಿ ಕಟ್ಟೆಯ ಮೇಲೆ ಕಬ್ಬಿಣದ  ಆಂಗಲ್ ಬೋರ್ಡ ತಯಾರಿಸಿ ಅದಕ್ಕೆ ಟಿಪ್ಪು ಸುಲ್ತಾನ ಭಾವಚಿತ್ರದ ಪ್ಲೇಕ್ಸ ಬ್ಯಾನರ್ ಅಂಟಿಸಿರುತ್ತಾರೆ ಯಾರೋ ಸಾರ್ವಜನಿಕ ಸ್ಥಳದಲ್ಲಿ ಮುತ್ತಗಾ ಗ್ರಾಮದಲ್ಲಿ ಟಿಪ್ಪು ಸುಲ್ತಾನ ಭಾವಚಿತ್ರ ಇರುವ ಪ್ಲೇಕ್ಸ ಬ್ಯಾನರ ಹಾಕಿ ಕೋಮು ಭಾವನೆ ಕೆರಳಿಸುವ ಉದ್ದೆಶದಿಂದ ಕಟ್ಟಿ ಕಟ್ಟಿ ಗ್ರಾಮದಲ್ಲಿ ಶಾಂತತಾ ಭಂಗವನುಂಟು ಮಾಡುವ ಉದ್ದೇಶದಿಂದ ಯಾರೋ ಮುಸ್ಲಿಂ ಜನಾಂಗದವರು ಕಟ್ಟೆ ಕಟ್ಟಿ ಅದರ ಮೇಲೆ ಟಿಪ್ಪು ಸುಲ್ತಾನ ಭಾವಚಿತ್ರದ ಪ್ಲೇಕ್ಸ ಬ್ಯಾನರ್ ಹಾಕಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 29/10/2017 ರಂದು ಶ್ರೀ ಸೈಫನಸಾಬ ತಂದೆ ಶಹಾಬುದ್ದೀನ ಮುಲ್ಲಾ ಸಾ: ಅಂಕಲಗಾ ಇವರು ಸಿದ್ನಾಳ ಸೀಮಾಂತರ ಯಮನಪ್ಪ ಗುಳ್ಯಾಳ, ಮಲ್ಕಪ್ಪ ಸಿದ್ನಾಳ ಇವರ ಹೊಲಗಳ ಬಾಂದಾರಿಯಲ್ಲಿ ಇರುವ ಕೇನಾಲ ಕಾಲುವೆಯಲ್ಲಿ ಒಂದು ಹೆಣ್ಣು ಮಗಳ ಶವ ಬೋರಲಾಗಿ ಬಿದ್ದಿದ್ದು, ಅಲ್ಲಲ್ಲಿ ಮೈ ಮೇಲಿನ ಚರ್ಮ ಸುಲಿದು ಬೆಳ್ಳಗೆ ಆಗಿರುತ್ತದೆ. ಅವಳ ವಯಸ್ಸು: 45-50 ವರ್ಷ ಇರಬಹುದು. ಅವಳ ನೀರಿನಲ್ಲಿ ಬಿದ್ದು ಸುಮಾರು 4-5 ದಿನಗಳ ಆಗಿರಬಹುದು. ಅವಳ ಮೈ ಮೇಲೆ ಯಾವುದೇ ಬಟ್ಟೆ ಬರೆ ಇರುವದಿಲ್ಲಾ. ಅವಳು ಯಾವ ಕಾರಣಕ್ಕಾಗಿ ನೀರಿನಲ್ಲಿ ಬಿದ್ದು ಸತ್ತಿರಬಹುದು ಅವಳ ಸಾವಿನಲ್ಲಿ ಸಂಶಯ ಇದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.