POLICE BHAVAN KALABURAGI

POLICE BHAVAN KALABURAGI

11 June 2017

Kalaburagi District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ:09-06-2017 ರಂದು ರಾತ್ರಿ ನಾನು ಮತ್ತು ನಮ್ಮ ತಂಗಿಯಾದ ಯಲ್ಲಮ್ಮ ಮನೆಯಲ್ಲಿದ್ದಾಗ ನಮ್ಮ ತಂದೆಯಾದ ಪಾಂಡರಂಗ ತಂದೆ ಭೀಮರಾಯ ರಾವುರ ಇವರು ಮನೆಯಲ್ಲಿ ಊಟ ಮಾಡಿದ ನಂತರ ಮೂತ್ರ ವಿಸರ್ಜನೆ ಕುರಿತು ನಮ್ಮ ಮನೆಯ ಎದುರುಗಡೆ ಇದ್ದ ಸೇಡಂ-ಕೊಡಂಗಲ್ ರೋಡ ದಾಟಿ ಹೊದರು, ಮೂತ್ರ ವಿಸರ್ಜನೆ ಮಾಡಿ ಮರಳಿ ಮನೆಗೆ ರೋಡ ದಾಟಿ ಬರುವಾಗ ಕೊಡಂಗಲ್ ಕಡೆಯಿಂದ ಒಬ್ಬ ಮೊಟಾರು ಸೈಕಲ್ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ತಂದೆಗೆ ಡಿಕ್ಕಿಪಡೆಯಿಸಿದನು ಅಲ್ಲಿಯೇ ಇದ್ದ ನಾವು ಹೋಗಿ ನೋಡಲು ಮೊಟಾರು ಸೈಕಲ್ ನಂ-KA32 EM-6545 ನೇದ್ದು ಇತ್ತು. ಮೊಟಾರ ಸೈಕಲ್ ಸವಾರನು ವಾಹನ ನಿಲ್ಲಿಸದೇ ಅಲ್ಲಿಂದ ಓಡಿಹೋದನು. ಆತನಿಗೆ ನೋಡಲು ನಾವು ಗುರುತಿಸುತ್ತೇವೆ. ನಮ್ಮ ತಂದೆಗೆ ನೋಡಲು ಎಡ ಮೊಳಕಾಲ ಕೆಳಗೆ ಮುರಿದಿದ್ದು, ಬಲಹುಬ್ಬಿನ ಮೇಲೆ ಭಾರಿ ರಕ್ತಗಾಯ, ಮೂಗಿನ ಮೇಲೆ ತರಚಿದ ಗಾಯ, ಬಲಗಾಲ ಮೊಳಕಾಲಿಗೆ ತರಚಿದ ಗಾಯವಾಗಿತ್ತು. ನಂತರ 108 ಅಂಬ್ಯೂಲೆನ್ಸಗೆ ಕರೆಯಿಸಿ ಸೇಡಂ ಸರಕಾರಿ ಆಸ್ಪತ್ರೆಗೆ ನಂತರ ಇಲ್ಲಿಗೆ ತಂದು ಸೇರಿಕೆ ಮಾಡಿದ್ದು ಇಲ್ಲಿ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:10-06-2017 ರಂದು 03-15 ಎ.ಎಮ್.ಕ್ಕೆ ಮೃತಪಟ್ಟಿರುತ್ತಾರೆ. ಅಂತಾ ಶ್ರೀ ಸುರೇಶ ತಂದೆ ಪಾಂಡರಂಗ ರಾವುರ ಸಾ:ಬಟಗೆರಾ (ಕೆ) ಗೇಟ್, ತಾ:ಸೇಡಂ. ರವರು ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮುಧೋಳ ಠಾಣೆ : ದಿನಾಂಕ: 10-06-2017 ರಂದು ನಮ್ಮ ತಂದೆ ಮರಿಸ್ವಾಮಿ ಇವರು ಕಾನಾಗಡ್ಡಾ ಪಶು ಆಸ್ಪತ್ರೆಗೆ ಕರ್ತವ್ಯಕ್ಕೆ ಹೋಗುವದಾಗಿ ಹೇಳಿ ಮನೆಯಿಂದ ತಮ್ಮ ಮೊ/ಸೈ ನಂ ಕೆಎ/33-ಆರ್-6984 ನೇದ್ದರ ಮೇಲೆ ಹೋಗಿದ್ದು ಇರುತ್ತದೆ ನಂತರ ನಾನು ಹಾಗು ನಮ್ಮ ತಾಯಿ ಶಿವಮ್ಮ ಮತ್ತು ನಮ್ಮ ತಮ್ಮ ಸಿದ್ರಾಮೇಶ ಮನೆಯಲ್ಲಿದ್ದಾಗ ನಮ್ಮ ಮನೆಯ ಮಾಲಿಕರಾದ ನಾಗೇಶ ಚೌಧರಿ ಇವರು ನಮ್ಮ ಮನೆಯಲ್ಲಿ ಬಂದು ತಿಳಿಸಿದ್ದೆನೆಂದರೆ, ನಿಮ್ಮ ತಂದೆ ಮರಿಸ್ವಾಮಿ ಇವರಿಗೆ ಗುರುಮಠಕಲದಿಂದ ಕರ್ತವ್ಯಕ್ಕೆ ಹೋಗುವಾಗ ಚಂಡ್ರಕಿ ಕ್ರಾಸ ಸಮೀಪದಲ್ಲಿ ಅಪಘಾತವಾಗಿದೆ ಅಂತಾ ನಮಗೆ ಪರಿಚಯವಿರುವ ಬಸ್ಸರೆಡ್ಡಿ ಬುರುಗಪಲ್ಲಿ ಇವರು ನಮಗೆ ಫೋನ ಮಾಡಿ ತಿಳಿಸಿದ್ದಾರೆ ಅಂತಾ ಹೇಳಿದರು ನಂತರ ಹಾಗು ನಮ್ಮ ತಾಯಿ ಮತ್ತು ನಮ್ಮ ತಮ್ಮ ಎಲ್ಲರೂ ಕೂಡಿ ಇಂದು ಬೆಳಗ್ಗೆ 10:00 ಗಂಟೆ ಸುಮಾರಿಗೆ ಗುರುಮಠಕಲದಿಂದ ಯಾನಾಗುಂದಿಗೆ ಹೋಗುವ ಚಂಡ್ರಕಿ ಕ್ರಾಸ ಹತ್ತಿರ ಬಂದು ನೋಡಲಾಗಿ ನಮ್ಮ ತಂದೆ ಮರಿಸ್ವಾಮಿ ಇವರು ರಸ್ತೆಯ ಎಡಬದಿಯಲ್ಲಿ ಅಪಘಾತದಲ್ಲಿ ಬಾರಿ ಗಾಯಹೊಂದಿ ಮೃತ ಪಟ್ಟಿದ್ದು ನಮ್ಮ ತಂದೆಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತಬಂದಿದ್ದು ಹಾಗು ಎರಡು ಕಾಲುಗಳಿಗೆ ತರುಚಿದ ರಕ್ತಗಾಯಾಗಳಾಗಿದ್ದು ಇವರು ಮೃತ ಪಟ್ಟಿದ್ದು ಅಲ್ಲೆ ರಸ್ತೆಯ ಪಕ್ಕದಲ್ಲಿ ನಮ್ಮ ತಂದೆಯ ಮೊ/ಸೈ ಬಿದಿದ್ದು ಈ ಬಗ್ಗೆ ಅಲ್ಲಿದ್ದ ಜನರಿಗೆ ವಿಚಾರಿಸಲಾಗಿ ತಿಳಿಸಿದೆನೆಂದರೆ, ಇಂದು ಬೆಳಗ್ಗೆ 0930 ಗಂಟೆ ಸುಮಾರಿಗೆ ಸದರಿ ಮೃತ ಮರಿಸ್ವಾಮಿ ಇವರು ತಮ್ಮ  ಮೊ/ಸೈ ನಂಬರ ಕೆಎ33/ಆರ್-6984 ನೇದ್ದರ ಮೇಲೆ ಕುಳಿತು ಗುರುಮಠಕಲ ಕಡೆಯಿಂದ ಯಾನಾಗುಂದಿ ಕಡೆಗೆ ರಸ್ತೆಯ ಎಡಬದಿಯಿಂದ ಹೋಗುತ್ತಿದ್ದಾಗ ಹಿಂದುಗಡೆಯಿಂದ ಒಂದು ಜೀಪನ ಚಾಲಕನು ತನ್ನ ಜೀಪನ್ನು ಅತಿವೇಗ ಹಾಗು ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಬದಿಯಿಂದ ಹೋಗುತ್ತಿದ್ದ ನಿಮ್ಮ ತಂದೆ ಮರಿಸ್ವಾಮಿ ಇವರ ಮೊ/ಸೈಗೆ ಹಿಂದುಗಡೆಯಿಂದ ಡಿಕ್ಕಿ ಪಡಿಸಿದ್ದು ಸದರಿ ಜೀಪನಲ್ಲಿ ಪ್ರಯಾಣಿಕರಿದ್ದು ಸದರಿ ಜೀಪ ನಂಬರ ಸರಿಯಾಗಿ ಕಾಣಿಸಿರುವದಿಲ್ಲಾ ಅದನ್ನು ನೋಡಿದರೆ ಗುರುತಿಸುತ್ತೇವೆ ಸದರಿ ಜೀಪ ಚಾಲಕ ಅಪಘಾತ ಪಡಿಸಿ ತನ್ನ ಜೀಪನ್ನು ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀ ಮಹೇಶ ತಂದೆ ಮರಿ ಸ್ವಾಮಿ ಮೇದರ ಸಾ: ಜಗರಕಲ್ ತಾ:ಜಿ: ರಾಯಚುರ ಹಾವ|| ಲಕ್ಷ್ಮಿನಗರ ಗುರುಮಠಕಲ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 10.06.2017 ರಂದು ರಾತ್ರಿ-10-30 ಗಂಟೆ ಸುಮಾರಿಗೆ ಮೃತ ಅಣವೀರ ಇತನು ತನ್ನ ಗೆಳೆಯ ಶ್ರೀಕಾಂತ ಇತನಿಗೆ ಕೇಂಧ್ರ ಬಸ್ಸ ನಿಲ್ದಾಣಕ್ಕೆ ಬಿಟ್ಟು ಬರುವ ಸಲುವಾಗಿ ತಾನೂ ಚಲಾಯಿಸುತ್ತೀರುವ ಮೋಟಾರ ಸೈಕಲ ನಂ ಕೆಎ-32-ಇಎಲ್-5799 ನೇದ್ದರ ಹಿಂದುಗಡೆ ಶ್ರೀಕಾಂತ ಮತ್ತು ರಾಘವೇಂದ್ರ ಇತನನ್ನು ಕೂಡಿಸಿಕೊಂಡು ಖರ್ಗೆ ಪೆಟ್ರೊಲ ಪಂಪದಿಂದ ಎಸವಿಪಿ ಸರ್ಕಲ ಮುಖಾಂತರವಾಗಿ ಕೇಂದ್ರ ಬಸ್ಸ ನಿಲ್ದಾಣಕ್ಕೆ ಹೋಗುವಾಗ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿ ರೋಡ ಎಡ ಬಲ ಕಟ್ ಹೊಡದು ಹೋಗಿ ದಾರಿ ಮದ್ಯ ಸರ್ಕಾರಿ  ಐಟಿಐ ಕಾಲೇಜ್ ಎದುರಿನ ರೋಡ ಡಿವೈಡರಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಹಿಂದುಗಡೆ ಕುಳಿತಿದ್ದ ಶ್ರೀಕಾಂತ ಮತ್ತು ರಾಘವೇಂಧ್ರ ಇವರಿಗೆ ಗಾಯಗೊಳಿಸಿ ತಾನೂ ಭಾರಿಗಾಯಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.
ಶ್ರೀ ಶ್ರೀಕಾಂತ ತಂದೆ ಅನಂತಯ್ಯಾ ಗುತ್ತೇದಾರ ಸಾ: ಲಕ್ಷ್ಮಿ ಟೆಂಪಲ ಹತ್ತೀರ ರಾಮ ನಗರ ಹುಮನಾಬಾದ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಚೇಂದ್ರ ತಂದೆ ಮಲ್ಲಿಕಾರ್ಜುನ @ ಗ್ರಾಮೀಣ ಠಾಣೆ : ಶ್ರೀ ಮಲ್ಲಪ್ಪ ಕಾಳನೂರ ಸಾ : ಉಪಳಾಂವ ತಾ:ಜಿ: ಕಲಬುರಗಿ ರವರು ದಿನಾಂಕ 09/06/2017 ಸಂಜೆ ಕಾರ ಹುಣ್ಣಿಮೆ ನಿಮಿತ್ಯ ತಮ್ಮಕಾಕಾ ನಾಗೇಂದ್ರ ತಂದೆ ಭೀಮಶ್ಯಾ ಕಾಳನೂರ ಇವರ ಎತ್ತುಗಳು ಮೆರವಣಿಗೆ ಮಾಡಿಸಲು ನಮ್ಮೂರಿನ ಲಕ್ಷ್ಮೀ ಗುಡಿ ಎದುರುಗಡೆ ಎತ್ತುಗಳು ಮೆರವಣಿಗೆ ಮಾಡಲು ಹೋದಾಗ ಮಾಹಾಂತಪ್ಪ ಟೆಂಗಳಿ ಇತನು  ನೋಡಿ ಫಿರ್ಯಾದಿಗೆ ಎ ಹೊಲೆ ಸೂಳೆ ಮಗನೇ ನಿಮ್ಮ ಎತ್ತುಗಳು ಊರಲ್ಲಿ ಮೆರವಣಿಗೆ ಮಾಡಬೇಡಾ ಅಂತಾ ಹೇಳಿದನು. ಅದಕ್ಕೆ ಫಿರ್ಯಾದಿ ನಾವೇಕೆ ಮೆರವಣಿಗೆ ಮಾಡಬಾರದು ಅಂದಿದ್ದಕ್ಕೆ ಮಾಹಾಂತಪ್ಪ ಟೆಂಗಳಿ ಇತನು ನನಗೆ ಹೊಲೆ ಸೂಳೇ ಮಗನೇ ನನಗೆ ಎದುರು ಮಾತಾಡುತ್ತೀ ಭೋಸಡಿ ಮಗನೇ ಅಂತಾ ಬೈದು ಅಲ್ಲೇ ಹತ್ತಿರದಲ್ಲಿ ಇರುವ ತನ್ನ ಮನೆಯಲ್ಲಿ ಹೋಗಿ ಒಂದು ರಾಡು ತೆಗೆದುಕೊಂಡು ಬಂದು ನನ್ನ ಬಲ ಟೊಂಕದ ಮೇಲೆ ಮತ್ತು ಕೆಳೆಗಡೆ ಹೊಡೆದು ಗುಪ್ತಗಾಯಗೊಳಿಸಿದೆನು. ತಮ್ಮ ಅವನ ತಮ್ಮಂದಿರರಾದ ಪೀರಪ್ಪ,ಆಶ್ವಿನ, ರಾಜು ಇವರು ಕೂಡಾ ಬಡಿಗೆ ಮತ್ತು ಬೆಲ್ಟನಿಂದ  ಎಡ ಮತ್ತು ಬಲ ಬೆನ್ನ ಮೇಲೆ ಎಡ ತಲೆಯ ಕಿವಿಯ ಮೇಲೆ ಹೊಡೆದು ಗುಪ್ತಗಾಯಗೊಳಿಸಿ, ಇನ್ನೊಮ್ಮೆ ನಾವು ಹೇಳಿದ ಮಾತು ಕೇಳದೇ ಹೋದರೆ ಜೀವ ಸಹಿತ ಬಿಡುವುದಿಲ್ಲಾ ಜೀವ ಭಯ ಹಾಕಿ ಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಪಿಂಟು ತಂದೆ ಹರಿಶ್ಚಂದ್ರ ಪವಾರ  ಸಾ; ಖಣದಾಳ ತಾಂಡಾ ರವರು ದಿನಾಂಕ 09-03-2017 ರಂದು ತನ್ನ ಮೋ ಸೈಕಲ ಮೇಲೆ ತಾಂಡಾಕ್ಕೆ ಹೊಗುತ್ತಿದ್ದಾಗ ಊರ ಇನ್ನೂ 1 ಕಿಮಿ ದೂರವಿದ್ದಾಗ  1) ರಾಮು ಪವಾರ  2) ಸುಸೀಲಾಬಾಯಿ ಗಂಡ ರಾಮು ಪವಾರ  3) ವೆಂಕಟೇಶ ತಂದೆ ರಾಮು ಪವಾರ ಸಾ; ಎಲ್ಲರೂ ಖಣದಾಳ ತಾಂಡ ರವರು ಫಿರ್ಯಾದಿಗೆ ತಡೆದು ನಿಲ್ಲಿಸಿ ದಿನಾಲು ನಮ್ಮ ಮನೆಯ ಮುಂದೆ ಹೋಗುವಾಗಿ ನನ್ನ ಮಗಳಿಗೆ ಕೇಣಕುತ್ತಿ ರಂಡಿ ಮಗ ನೇ ಅಂತಾ ಅವ್ಯಾಚ್ಚವಾಗಿ ಬೈದು ಕೈಗಳಿಂದ ಹೊಡೆದು ನೆಲಕ್ಕೆ ಹಾಕಿ ಕಾಲಿನಿಂದ ಒದ್ದು  ಹೊಡೆ ಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.  

09 June 2017

Kalaburagi District Reported Crimes

ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ.ಚೆನ್ನವೀರಯ್ಯಾ ತಂದೆ ಬಸಯ್ಯಾ ಹಿರೇಮಠ ಸಾ: ಜಿಡಗಾ ತಾ:ಆಳಂದ ರವರು ಶ್ರೀ ಕ್ಷೇತ್ರ ಜಿಡಗಾ ಗ್ರಾಮದ ಶ್ರೀ ಸಿದ್ದರಾಮೇಶ್ವರ ನವ ಕಲ್ಯಾಣ ಮಠ ಸುಪ್ರಸಿದ್ದ ಮಠವಿದ್ದು 2004 ನೇ ಸಾಲಿನಲ್ಲಿ ಪರಮ ಪೂಜ್ಯ  ಶ್ರೀ.ಸಿದ್ಧಾರಾಮೇಶ್ವರ ಮಾಹಾಸ್ವಾಮಿಗಳು ಲಿಂಗೈಕೆರಾಗಿದ್ದು ಸದರಿ ಸ್ಥಳದಲ್ಲಿ ಯೋಗ ಸಮಾಧಿಯ ದೇವಸ್ಥಾನದ ಕಟ್ಟಡ ನಡೆದಿದ್ದು ಸದರಿ ದೇವಾಸ್ಥಾನದಲ್ಲಿ ಶ್ರೀ ಸಿದ್ದರಾಮೇಶ್ವರ ಬೆಳ್ಳಿ ಮೂರ್ತಿ ಸ್ಥಾಪನೆ ಮಾಡಿದ್ದು ದಿನಾಲೂ ದೇವಸ್ಥಾನಕ್ಕೆ ಭಕ್ತಾಧಿಗಳು ದರ್ಶನ ಪಡೆದುಕೊಂಡು ಹೋಗುತ್ತಾರೆ. ಗದ್ದಿಗೆಯ ಪ್ರಧಾನ ಅರ್ಜಕರಾದ ಗುರುಲಿಂಗಯ್ಯಾ ಮಠಪತಿ ಇವರು ದಿನಾಲೂ ಬೆಳ್ಳಿಗ್ಗೆ 5:00 ಗಂಟೆಗೆ ಗದ್ದುಗೆಗೆ ಪೂಜೆ ಪ್ರಾರಂಬಿಸುತ್ತಿದರು. ಮತ್ತು ಪ್ರತಿನಿತ್ಯ ದೇವಸ್ಥಾನದ ಆವರಣವನ್ನು ನಾಗಲಿಂಗ ಎಂಬ ವ್ಯಕ್ತಿ ಸ್ವಚ್ಛತೆ ಮಾಡಿ ಅಲ್ಲಿಯೇ ಮಲಗುತ್ತಿದ್ದನು. ದಿನಾಂಕ: 08/06/2017 ರಂದು ಬೆಳಿಗ್ಗೆ 05:20 ಗಂಟೆಗೆ ನನಗೆ ಗದ್ದಿಗೆಯ ಪ್ರಧಾನ ಅರ್ಚಕರಾದ ಗುರುಲಿಂಗಯ್ಯಾ ಮಠಪತಿ ಇವರು ಪೋನ ಮೂಲಕ ವಿಷಯ ತಿಳಿಸಿದೆನೆಂದರೆ ನಾನು ಎಂದಿನಂತೆ ಶ್ರೀ.ಸಿದ್ದರಾಮೇಶ್ವರ ದೇವರ ಗದ್ದುಗೆ ಪೂಜೆ ಮಾಡಬೇಕೆಂದು ದೇವಸ್ಥಾನದ ಗದ್ದುಗೆ ಕಡೆಗೆ ಬಂದಾಗ ದೇವಸ್ಥಾನ ಮುಖ್ಯ ದ್ವಾರದ ಕೀಲಿ ಕೈ ಮುರಿದು ಕೆಳಗಡೆ ಬಿದಿದ್ದು ನಂತರ ಒಳಗಡೆ ಇರುವ ಗರ್ಭಗುಡಿಯ ಬಾಗಿಲಿನ ಕೀಲಿಯು ಮುರಿದು ಬಿದಿದ್ದು ಗರ್ಭ ಗುಡಿಯ ಒಳಗಡೆ ಇರುವ ಸಿದ್ದರಾಮೇಶ್ವರ ಬೆಳ್ಳಿಯ ಮೂರ್ತಿ ಹಾಗೂ ಇತರೇ ಪೂಜಾ ಸಾಮಾನುಗಳು ಹಾಗೂ ಎರಡು ಕಾಣಿಕೆಯ ಹುಂಡಿಯಲ್ಲಿನ ಹಣ ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿರುತ್ತಾರೆ ಅಂತಾ ತಿಳಿಸಿದರಿಂದ ನಾನು ಜಿಡಗಾ ಮಠಕ್ಕೆ ಬಂದು ನೋಡಲು 1) ಒಂದು ಸಿದ್ಧಾರಾಮೇಶ್ವರ ಬೆಳ್ಳಿ ಮೂರ್ತಿ 05 ಕೆಜಿ 2) ಒಂದು ಬೆಳ್ಳಿ ಕೀರಿಟ 01 ಕೆಜಿ 3) 100 ಗ್ರಾಂ.ದ ಒಂದು ಮಾವಿನಕಾಯಿ ಲಿಂಗ 4) 400 ಗ್ರಾಂ. ಒಂದು ರುದ್ರಾಕ್ಷಿ ಸರ 5) 02 ಕೆ.ಜಿ.ಯ 12 ಬೆಳ್ಳಿಯ ಬಟ್ಟಲುಗಳು 6) 04 ಕೆ.ಜಿ.ಯ 04 ಬೆಳ್ಳಿಯ ಸಮಾಯಿಗಳು 7) 07 ಕೆ.ಜಿ.ಯ 05 ಬೆಳ್ಳಿಯ ಪೂಜೆಯ ತಾಟುಗಳು 8) 25 ಗ್ರಾಂ. ಒಂದು ತೀರ್ಥ ಬಟ್ಟಲು ಮತ್ತು ಚಮಚ 9)  500 ಗ್ರಾಂ ಒಂದು ಬೆಳ್ಳಿಯ ಬೆತ್ತಾ 10) 02 ಕೆ.ಜಿ.ಯ ಒಂದು ಧಾರ ಪಾತ್ರೆ  (ರುದ್ರ ಬಿಂದಿಗೆ ) 11) ಒಂದು ಬೆಳ್ಳಿಯ ಶಂಖ 25 ಗ್ರಾಂ 12) 02 ಕೆ.ಜಿ.ಯ ಒಂದು ಶರಣಬಸವೇಶ್ವರ ಬೆಳ್ಳಿ ಮೂರ್ತಿ 13) 1/2 ಕೆ.ಜಿ.ಯ ಬೆಳ್ಳಿಯ ಆರತಿ 14) 1/2 ಕೆ.ಜಿ.ಯ ಪಂಚಮುಖದ ಘಂಟೆ 15) 200 ಗ್ರಾಂ ಬೆಳ್ಳಿಯ 12 ತೀರ್ಥ ಚಮಚಗಳು 16) 01 ಕೆ.ಜಿ.ಯ ಬೆಳ್ಳಿಯ ಆರ್ಶೀವಾದ ಕೀರಿಟ  ಹೀಗೆ ಒಟ್ಟು.28 ಕೆ.ಜಿ. 250 ಗ್ರಾಂ.ದ ಬೆಳ್ಳಿಯ ಮೂರ್ತಿಗಳು ಹಾಗೂ ಪೂಜಾ ಸಾಮಾನುಗಳು ಅ.ಕೀ.09 ಲಕ್ಷ 17) 05 ಕೆ.ಜಿ.ಯ ಹನುಮಾನ ದೇವರ ಹಿತ್ತಾಳೆ ಮೂರ್ತಿ 18) 02 ಕೆ.ಜಿ.ಯ ಹಿತ್ತಾಳೆಯ ನಂದಾದೀಪಗಳು ಹೀಗೆ ಒಟ್ಟು 07 ಕೆ.ಜಿ.ಯ ಹಿತ್ತಾಳೆ ಸಾಮಾನುಗಳು ಅ.ಕೀ.5000/-ರೂ  19) 01 ತೊಲೆಯ ಬಂಗಾರದ ಕಡ್ಡಿ ಅ.ಕೀ.20,000/-ರೂ 20) 02 ಕಾಣಿಕೆಯ ಹುಂಡಿಯಲ್ಲಿದ್ದ ಹಣ ಅ.ಕೀ.1,10,000/-ರೂ ಹೀಗೆ ಒಟ್ಟು. 10,35,000/-ರೂ ಕೀಮ್ಮತಿನ ಸಿದ್ದಾರಾಮೇಶ್ವರ ಬೆಳ್ಳಿಯ ಮೂರ್ತಿ ಹಾಗೂ ಬೆಳ್ಳಿ-ಬಂಗಾರ ಮತ್ತು ಹಿತ್ತಾಳೆ ಪೂಜಾ ಸಾಮಾನುಗಳು ಹಾಗೂ ಕಾಣಿಕೆಯ ಹುಂಡಿಯಲ್ಲಿದ್ದ ಹಣವನ್ನು ಯಾರೋ ಕಳ್ಳರು ದಿನಾಂಕ:07/06/2017 ರಂದು ರಾತ್ರಿ 11:00 ಗಂಟೆಯಿಂದ ದಿ:08/06/2017 ರ ಬೇಳಗಿನ 05:00 ಗಂಟೆಯ ಮಧ್ಯದ ಅವಧಿಯಲ್ಲಿ ಸಿದ್ದಾರಾಮೇಶ್ವರ ದೇವಸ್ಥಾನದ ಮುಖ್ಯ ದ್ವಾರ ಮತ್ತು ಗರ್ಭ ಗುಡಿಯ ಕೀಲಿ ಕೈ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ :  ಶ್ರೀ.ಗೌತಮ ತಂದೆ ನಾಮದೇವ ಸಿಂಗೆ ಸಾ||ವಾಗ್ದರಗಿ ಇವರು ನಮ್ಮ ಮನೆಯ ಪಕ್ಕದಲ್ಲಿಯೇ ನಮ್ಮ ಅಣ್ಣತಮ್ಮಕಿಯವರಾದ ಪಾಂಡುರಂಗ ತಂದೆ ಹಣಮಂತ ಸಿಂಗೆ ಇವರ ಮನೆ ಇರುತ್ತದೆ. ನಾವು ನಮ್ಮ ಮನೆಯ ಅಂಗಳದ ಸುತ್ತಲೂ ಒಣಕಲ್ಲಿನ ಕಂಪೌಂಡ ಕಟ್ಟಿಕೊಂಡಿರುತ್ತೇವೆ. ಪಾಂಡುರಂಗ ಇವರು ಸಹ ಕಾಂಪೌಂಡ ಗೋಡೆ ಕಟ್ಟಿಕೊಂಡಿದ್ದು. ಮೊನ್ನೆ ಮಳೆ ಬಂದಿದ್ದರಿಂದ ಅವರ ಕಂಪೌಂಡ ಗೋಡೆ ಕುಸಿದು ಬಿದ್ದಿರುತ್ತದೆ. ಸದರಿ ಕುಸಿದು ಬಿದ್ದಿರುವ ಗೋಡೆಯನ್ನು ನಿನ್ನೆ ದಿನಾಂಕ: 07/06/2017 ರಂದು ಕಟ್ಟುತ್ತಿರುವಾಗ ಅವರ ಕಲ್ಲುಗಳನ್ನು ನಮ್ಮ ಕಾಂಪೌಂಡ ಮೇಲೆ ಇಡುತ್ತಿದ್ದರು ಅದಕ್ಕೆ ನಾನು ನಮ್ಮ ಕಾಂಪೌಂಡ ಮೇಲೆ ಇಡಬೇಡಿ ಕೆಳಗೆ ಇಡಿ ಎಂದು ಹೇಳುತ್ತಿರುವಾಗ ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಸದರಿ ಪಾಂಡುರಂಗ ತಂದೆ ಹಣಮಂತ ಸಿಂಗೆ, ಪ್ರಭುಲಿಂಗ ತಂದೆ ಪಾಂಡುರಂಗ ಸಿಂಗೆ, ಕಮಲಾಬಾಯಿ ಗಂಡ ಪಾಂಡುರಂಗ ಸಿಂಗೆ, ಜಯಶ್ರೀ ತಂದೆ ಪ್ರಭುಲಿಂಗ ಸಿಂಗೆ, ಹಣಮಂತ ತಂದೆ ಪಾಂಡುರಂಗ ಸಿಂಗೆ ಇವರುಗಳೆಲ್ಲರೂ ಕೂಡಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವರಲ್ಲಿ ಪಾಂಡುರಂಗ ಹಾಗೂ ಪ್ರಭುಲಿಂಗ ಇವರುಗಳು ನನಗೆ   ಏ ಸೂಳೆ ಮಗನ್ಯಾ ನಿಮ್ಮ ಕಂಪೌಂಡ ಮೇಲೆ ಕಲ್ಲು ಇಟ್ಟಿದ್ದರೆ ನೀನಗೇನಾಗತದ ಎಂದು ಅವಾಚ್ಯ ಶಬ್ದಗಳಿಂದ ಬೈಯುದ್ದರು ಅದಕ್ಕೆ ನಾನು ನಮ್ಮ ಕಾಂಪೌಂಡ ಒಣಕಲ್ಲಿನಿಂದ ಕಟ್ಟಿದ್ದು ಉರಳಿ ಬಿಳುತ್ತದೆಂದು ತಿಳಿಸಿ ಹೇಳುವಷ್ಟರಲ್ಲಿಯೇ ಪ್ರಭುಲಿಂಗ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಎಡಗೆ ಹೊಡೆದಿದ್ದರಿಂದ ಭಾರಿರಕ್ತ ಗಾಯವಾಗಿದೆ ಆಗ ನನ್ನ ತಾಯಿಯಾದ ಪಾರ್ವತಿ ಇವರು ಜಗಳ ಬಿಡಿಸಲು ಬಂದಾಗ ಕಮಲಾಬಾಯಿ, ಜಯಶ್ರೀ ಇವರುಗಳು ಅವಳಿಗೆ ಕೈಯಿಂದ ಹೊಡೆಬಡಿಮಾಡಿ ನೆಲಕ್ಕೆ ಕೆಡವಿದಾಗ ಹಣಮಂತ ಸಿಂಗೆ ಈತನು ಕೈಯಿಂದ ನನ್ನ ತಾಯಿಯ ಹೊಟ್ಟೆಗೆ ಹೊಡೆದು ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದಿರುತ್ತಾನೆ. ಆಗ ನಾನು ನಮ್ಮ ತಾಯಿಗೆ ಹೊಡೆಯಬೇಡರಿ ಎಂದು ಚಿರಾಡುವಾಗ ಪಾಂಡುರಂಗನು ಕಲ್ಲಿನಿಂದ ನನ್ನ ಎಡಗೈ ರಟ್ಟೆಗೆ ಹಾಗೂ ಬಲಗೈ ಮೊಳಕೈಗೆ ಹೊಡೆದಿದ್ದರಿಂದ ರಕ್ತಗಾಯಗಳು ಆಗಿರುತ್ತವೆ. ಆಗ ಅಲ್ಲಿಯೇ ಇದ್ದ ನನ್ನ ಅಣ್ಣ ಸಂಜುಕುಮಾರನು ಜಗಳ ಬಿಡಿಸಲು ಬಂದಾಗ ಹಣಮಂತ ಮತ್ತು ಪ್ರಭುಲಿಂಗ ಇವರು ಕೈಯಿಂದ ಅವನ ಬೆನ್ನಮೇಲೆ ಮತ್ತು ಕಪಾಳ ಮೇಲೆ ಹೊಡೆದಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

08 June 2017

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 05/06/17 ರಂದು ರಾತ್ರಿ 08-00 ಗಂಟೆಯಿಂದ ದಿನಾಂಕ 07/06/17 ರಂದು ಸಂಜೆ 06-00 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತರು ಫಿರ್ಯಾದಿ  ತಮ್ಮ ಶ್ರೀಕಾಂತ @ ಪಿಂಟು ಮತ್ತು  ಅವನ ಗೆಳೆಯ ಆಕಾಶ ಜಮಾದಾರ ಇವರಿಬ್ಬರಿಗೆ ಪುಸಲಾಯಿಸಿ ಯಾವುದೋ ಒಂದು ಬಲವಾದ ಕಾರಣದಿಂದ ಮತ್ತು ಯಾವುದೋ ದುರದ್ದೇಶದಿಂದ ಅವರಿಬ್ಬರಿಗೆ ಕೊಲೆ ಮಾಡಬೇಕೆಂದು ಸೈಯ್ಯದ ಚಿಂಚೋಳಿ ಕ್ರಾಸ ದಾಟಿ ಇರುವ ತಾಜ ಸುಲ್ತಾನಪೂರ ಸೀಮಾಂತರದಲ್ಲಿ ಬರುವ ಒಂದು ಮಣ್ಣು ಕೆದರಿದ ತಗ್ಗು ಪ್ರದೇಶದಲ್ಲಿ  ಹೇಗೋ ಕರೆದುಕೊಂಡು ಹೋಗಿ ನನ್ನ ತಮ್ಮ ಶ್ರೀಕಾಂತನ  ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮತ್ತು ಕುತ್ತಿಗೆ ಕೊಯಿದು ಕೊಲೆ ಮಾಡಿದ್ದು. ಮತ್ತು ಆಕಾಶ ಜಮಾದಾರ ಇತನಿಗೂ  ಕೂಡಾ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ  ಮುಖ ಗುರುತು ಸಿಗದಂತೆ ಕಲ್ಲಿನಿಂದ ಜಜ್ಜಿ ಗುರುತು ಹಾಳು ಮಾಡಿರುತ್ತಾರೆ. ಕಾರಣ ನನ್ನ ತಮ್ಮ ಶ್ರೀಕಾಂತ ಮತ್ತು ಆಕಾಶ ಜಮಾದಾರ ಇವರಿಗೆ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀ ಶಿವಾನಂದ ಅಷ್ಟಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನೆಲೋಗಿ ಠಾಣೆ : ದಿನಾಂಕ: 7/06/2017 ರಂದು. ಮಾವನೂರ  ಗ್ರಾಮದ ದ್ಯಾವಮ್ಮ  ಗುಡಿಯ  ಹತ್ತಿರ ಒಬ್ಬನು ಕುಳಿತು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಾನೆ ಅಂತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನೇಲೋಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾವನೂರ ಗ್ರಾಮದ ದ್ಯಾವಮ್ಮ ಗುಡಿಯ  ಹತ್ತಿರ ಹೋಗಿ ನೋಡಲಾಗಿ ಅಲ್ಲಿ ಒಬ್ಬನು  ಗುಡಿಯ ಕಟ್ಟೆಯ ಮೇಲೆ ಕುಳಿತು  ಸಾರ್ವಜನಿಕರಿಂದ ಹಣ ಪಡೆದು ಒಂದು ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತ ಒದರಿ ಹೇಳುತ್ತಿರುವಾಗ ನಾವು ಹೋಗಿ ಹಿಡಿದು ಅವನ ಹೆಸರು ವಿಚಾರಿಸಲಾಗಿ ಮಲ್ಲಕಾರ್ಜುನ ತಂದೆ ನಿಜಲಿಂಗಯ್ಯ ಹಿರೇಮಠ  ಸಾ|| ಮಾವನೂರ  ಅಂತ ಹೇಳಿದನು ಅವನ ಹತ್ತಿರ 420/-ರೂ ಮತ್ತು ಮಟಕಾ ಬರೆದ ಚೀಟಿ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ನೆಲೋಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.