ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ.ಚೆನ್ನವೀರಯ್ಯಾ ತಂದೆ ಬಸಯ್ಯಾ ಹಿರೇಮಠ ಸಾ:
ಜಿಡಗಾ ತಾ:ಆಳಂದ ರವರು ಶ್ರೀ ಕ್ಷೇತ್ರ ಜಿಡಗಾ ಗ್ರಾಮದ ಶ್ರೀ ಸಿದ್ದರಾಮೇಶ್ವರ ನವ ಕಲ್ಯಾಣ ಮಠ
ಸುಪ್ರಸಿದ್ದ ಮಠವಿದ್ದು 2004 ನೇ ಸಾಲಿನಲ್ಲಿ ಪರಮ ಪೂಜ್ಯ
ಶ್ರೀ.ಸಿದ್ಧಾರಾಮೇಶ್ವರ ಮಾಹಾಸ್ವಾಮಿಗಳು ಲಿಂಗೈಕೆರಾಗಿದ್ದು ಸದರಿ ಸ್ಥಳದಲ್ಲಿ ಯೋಗ
ಸಮಾಧಿಯ ದೇವಸ್ಥಾನದ ಕಟ್ಟಡ ನಡೆದಿದ್ದು ಸದರಿ ದೇವಾಸ್ಥಾನದಲ್ಲಿ ಶ್ರೀ ಸಿದ್ದರಾಮೇಶ್ವರ ಬೆಳ್ಳಿ
ಮೂರ್ತಿ ಸ್ಥಾಪನೆ ಮಾಡಿದ್ದು ದಿನಾಲೂ ದೇವಸ್ಥಾನಕ್ಕೆ ಭಕ್ತಾಧಿಗಳು ದರ್ಶನ ಪಡೆದುಕೊಂಡು
ಹೋಗುತ್ತಾರೆ. ಗದ್ದಿಗೆಯ ಪ್ರಧಾನ ಅರ್ಜಕರಾದ ಗುರುಲಿಂಗಯ್ಯಾ ಮಠಪತಿ ಇವರು ದಿನಾಲೂ ಬೆಳ್ಳಿಗ್ಗೆ
5:00 ಗಂಟೆಗೆ ಗದ್ದುಗೆಗೆ ಪೂಜೆ ಪ್ರಾರಂಬಿಸುತ್ತಿದರು. ಮತ್ತು ಪ್ರತಿನಿತ್ಯ ದೇವಸ್ಥಾನದ
ಆವರಣವನ್ನು ನಾಗಲಿಂಗ ಎಂಬ ವ್ಯಕ್ತಿ ಸ್ವಚ್ಛತೆ ಮಾಡಿ ಅಲ್ಲಿಯೇ ಮಲಗುತ್ತಿದ್ದನು. ದಿನಾಂಕ:
08/06/2017 ರಂದು ಬೆಳಿಗ್ಗೆ 05:20 ಗಂಟೆಗೆ ನನಗೆ ಗದ್ದಿಗೆಯ ಪ್ರಧಾನ ಅರ್ಚಕರಾದ
ಗುರುಲಿಂಗಯ್ಯಾ ಮಠಪತಿ ಇವರು ಪೋನ ಮೂಲಕ ವಿಷಯ ತಿಳಿಸಿದೆನೆಂದರೆ ನಾನು ಎಂದಿನಂತೆ
ಶ್ರೀ.ಸಿದ್ದರಾಮೇಶ್ವರ ದೇವರ ಗದ್ದುಗೆ ಪೂಜೆ ಮಾಡಬೇಕೆಂದು ದೇವಸ್ಥಾನದ ಗದ್ದುಗೆ ಕಡೆಗೆ ಬಂದಾಗ
ದೇವಸ್ಥಾನ ಮುಖ್ಯ ದ್ವಾರದ ಕೀಲಿ ಕೈ ಮುರಿದು ಕೆಳಗಡೆ ಬಿದಿದ್ದು ನಂತರ ಒಳಗಡೆ ಇರುವ ಗರ್ಭಗುಡಿಯ ಬಾಗಿಲಿನ
ಕೀಲಿಯು ಮುರಿದು ಬಿದಿದ್ದು ಗರ್ಭ ಗುಡಿಯ ಒಳಗಡೆ ಇರುವ ಸಿದ್ದರಾಮೇಶ್ವರ ಬೆಳ್ಳಿಯ ಮೂರ್ತಿ ಹಾಗೂ
ಇತರೇ ಪೂಜಾ ಸಾಮಾನುಗಳು ಹಾಗೂ ಎರಡು ಕಾಣಿಕೆಯ ಹುಂಡಿಯಲ್ಲಿನ ಹಣ ಯಾರೋ ಕಳ್ಳರು ರಾತ್ರಿ
ಸಮಯದಲ್ಲಿ ಕಳ್ಳತನ ಮಾಡಿರುತ್ತಾರೆ ಅಂತಾ ತಿಳಿಸಿದರಿಂದ ನಾನು ಜಿಡಗಾ ಮಠಕ್ಕೆ ಬಂದು ನೋಡಲು 1)
ಒಂದು ಸಿದ್ಧಾರಾಮೇಶ್ವರ ಬೆಳ್ಳಿ ಮೂರ್ತಿ 05 ಕೆಜಿ 2) ಒಂದು ಬೆಳ್ಳಿ ಕೀರಿಟ 01 ಕೆಜಿ 3) 100
ಗ್ರಾಂ.ದ ಒಂದು ಮಾವಿನಕಾಯಿ ಲಿಂಗ 4) 400 ಗ್ರಾಂ. ಒಂದು ರುದ್ರಾಕ್ಷಿ ಸರ 5) 02 ಕೆ.ಜಿ.ಯ 12
ಬೆಳ್ಳಿಯ ಬಟ್ಟಲುಗಳು 6) 04 ಕೆ.ಜಿ.ಯ 04 ಬೆಳ್ಳಿಯ ಸಮಾಯಿಗಳು 7) 07 ಕೆ.ಜಿ.ಯ 05 ಬೆಳ್ಳಿಯ
ಪೂಜೆಯ ತಾಟುಗಳು 8) 25 ಗ್ರಾಂ. ಒಂದು ತೀರ್ಥ ಬಟ್ಟಲು ಮತ್ತು ಚಮಚ 9) 500 ಗ್ರಾಂ ಒಂದು ಬೆಳ್ಳಿಯ ಬೆತ್ತಾ 10) 02 ಕೆ.ಜಿ.ಯ
ಒಂದು ಧಾರ ಪಾತ್ರೆ (ರುದ್ರ ಬಿಂದಿಗೆ ) 11)
ಒಂದು ಬೆಳ್ಳಿಯ ಶಂಖ 25 ಗ್ರಾಂ 12) 02 ಕೆ.ಜಿ.ಯ ಒಂದು ಶರಣಬಸವೇಶ್ವರ ಬೆಳ್ಳಿ ಮೂರ್ತಿ 13) 1/2
ಕೆ.ಜಿ.ಯ ಬೆಳ್ಳಿಯ ಆರತಿ 14) 1/2 ಕೆ.ಜಿ.ಯ ಪಂಚಮುಖದ ಘಂಟೆ 15) 200 ಗ್ರಾಂ ಬೆಳ್ಳಿಯ 12 ತೀರ್ಥ
ಚಮಚಗಳು 16) 01 ಕೆ.ಜಿ.ಯ ಬೆಳ್ಳಿಯ ಆರ್ಶೀವಾದ ಕೀರಿಟ
ಹೀಗೆ ಒಟ್ಟು.28 ಕೆ.ಜಿ. 250 ಗ್ರಾಂ.ದ ಬೆಳ್ಳಿಯ ಮೂರ್ತಿಗಳು ಹಾಗೂ ಪೂಜಾ ಸಾಮಾನುಗಳು
ಅ.ಕೀ.09 ಲಕ್ಷ 17) 05 ಕೆ.ಜಿ.ಯ ಹನುಮಾನ ದೇವರ ಹಿತ್ತಾಳೆ ಮೂರ್ತಿ 18) 02 ಕೆ.ಜಿ.ಯ
ಹಿತ್ತಾಳೆಯ ನಂದಾದೀಪಗಳು ಹೀಗೆ ಒಟ್ಟು 07 ಕೆ.ಜಿ.ಯ ಹಿತ್ತಾಳೆ ಸಾಮಾನುಗಳು ಅ.ಕೀ.5000/-ರೂ 19) 01 ತೊಲೆಯ ಬಂಗಾರದ ಕಡ್ಡಿ ಅ.ಕೀ.20,000/-ರೂ 20) 02 ಕಾಣಿಕೆಯ ಹುಂಡಿಯಲ್ಲಿದ್ದ ಹಣ
ಅ.ಕೀ.1,10,000/-ರೂ ಹೀಗೆ ಒಟ್ಟು. 10,35,000/-ರೂ
ಕೀಮ್ಮತಿನ ಸಿದ್ದಾರಾಮೇಶ್ವರ ಬೆಳ್ಳಿಯ ಮೂರ್ತಿ ಹಾಗೂ ಬೆಳ್ಳಿ-ಬಂಗಾರ ಮತ್ತು ಹಿತ್ತಾಳೆ ಪೂಜಾ
ಸಾಮಾನುಗಳು ಹಾಗೂ ಕಾಣಿಕೆಯ ಹುಂಡಿಯಲ್ಲಿದ್ದ ಹಣವನ್ನು ಯಾರೋ ಕಳ್ಳರು ದಿನಾಂಕ:07/06/2017 ರಂದು
ರಾತ್ರಿ 11:00 ಗಂಟೆಯಿಂದ ದಿ:08/06/2017 ರ ಬೇಳಗಿನ 05:00 ಗಂಟೆಯ ಮಧ್ಯದ ಅವಧಿಯಲ್ಲಿ
ಸಿದ್ದಾರಾಮೇಶ್ವರ ದೇವಸ್ಥಾನದ ಮುಖ್ಯ ದ್ವಾರ ಮತ್ತು ಗರ್ಭ ಗುಡಿಯ ಕೀಲಿ ಕೈ ಮುರಿದು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ಗೌತಮ ತಂದೆ ನಾಮದೇವ ಸಿಂಗೆ ಸಾ||ವಾಗ್ದರಗಿ
ಇವರು ನಮ್ಮ ಮನೆಯ ಪಕ್ಕದಲ್ಲಿಯೇ ನಮ್ಮ ಅಣ್ಣತಮ್ಮಕಿಯವರಾದ ಪಾಂಡುರಂಗ ತಂದೆ ಹಣಮಂತ ಸಿಂಗೆ ಇವರ ಮನೆ
ಇರುತ್ತದೆ. ನಾವು ನಮ್ಮ ಮನೆಯ ಅಂಗಳದ ಸುತ್ತಲೂ ಒಣಕಲ್ಲಿನ ಕಂಪೌಂಡ ಕಟ್ಟಿಕೊಂಡಿರುತ್ತೇವೆ. ಪಾಂಡುರಂಗ
ಇವರು ಸಹ ಕಾಂಪೌಂಡ ಗೋಡೆ ಕಟ್ಟಿಕೊಂಡಿದ್ದು. ಮೊನ್ನೆ ಮಳೆ ಬಂದಿದ್ದರಿಂದ ಅವರ ಕಂಪೌಂಡ ಗೋಡೆ ಕುಸಿದು
ಬಿದ್ದಿರುತ್ತದೆ. ಸದರಿ ಕುಸಿದು ಬಿದ್ದಿರುವ ಗೋಡೆಯನ್ನು ನಿನ್ನೆ ದಿನಾಂಕ: 07/06/2017 ರಂದು
ಕಟ್ಟುತ್ತಿರುವಾಗ ಅವರ ಕಲ್ಲುಗಳನ್ನು ನಮ್ಮ ಕಾಂಪೌಂಡ ಮೇಲೆ ಇಡುತ್ತಿದ್ದರು ಅದಕ್ಕೆ ನಾನು ನಮ್ಮ ಕಾಂಪೌಂಡ
ಮೇಲೆ ಇಡಬೇಡಿ ಕೆಳಗೆ ಇಡಿ ಎಂದು ಹೇಳುತ್ತಿರುವಾಗ ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ
ಸದರಿ ಪಾಂಡುರಂಗ ತಂದೆ ಹಣಮಂತ ಸಿಂಗೆ, ಪ್ರಭುಲಿಂಗ ತಂದೆ ಪಾಂಡುರಂಗ ಸಿಂಗೆ, ಕಮಲಾಬಾಯಿ
ಗಂಡ ಪಾಂಡುರಂಗ ಸಿಂಗೆ, ಜಯಶ್ರೀ ತಂದೆ ಪ್ರಭುಲಿಂಗ ಸಿಂಗೆ, ಹಣಮಂತ ತಂದೆ ಪಾಂಡುರಂಗ
ಸಿಂಗೆ ಇವರುಗಳೆಲ್ಲರೂ ಕೂಡಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವರಲ್ಲಿ
ಪಾಂಡುರಂಗ ಹಾಗೂ ಪ್ರಭುಲಿಂಗ ಇವರುಗಳು ನನಗೆ ಏ ಸೂಳೆ
ಮಗನ್ಯಾ ನಿಮ್ಮ ಕಂಪೌಂಡ ಮೇಲೆ ಕಲ್ಲು ಇಟ್ಟಿದ್ದರೆ ನೀನಗೇನಾಗತದ ಎಂದು ಅವಾಚ್ಯ ಶಬ್ದಗಳಿಂದ ಬೈಯುದ್ದರು
ಅದಕ್ಕೆ ನಾನು ನಮ್ಮ ಕಾಂಪೌಂಡ ಒಣಕಲ್ಲಿನಿಂದ ಕಟ್ಟಿದ್ದು ಉರಳಿ ಬಿಳುತ್ತದೆಂದು ತಿಳಿಸಿ ಹೇಳುವಷ್ಟರಲ್ಲಿಯೇ
ಪ್ರಭುಲಿಂಗ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಎಡಗೆ ಹೊಡೆದಿದ್ದರಿಂದ ಭಾರಿರಕ್ತ ಗಾಯವಾಗಿದೆ
ಆಗ ನನ್ನ ತಾಯಿಯಾದ ಪಾರ್ವತಿ ಇವರು ಜಗಳ ಬಿಡಿಸಲು ಬಂದಾಗ ಕಮಲಾಬಾಯಿ, ಜಯಶ್ರೀ ಇವರುಗಳು
ಅವಳಿಗೆ ಕೈಯಿಂದ ಹೊಡೆಬಡಿಮಾಡಿ ನೆಲಕ್ಕೆ ಕೆಡವಿದಾಗ ಹಣಮಂತ ಸಿಂಗೆ ಈತನು ಕೈಯಿಂದ ನನ್ನ ತಾಯಿಯ ಹೊಟ್ಟೆಗೆ
ಹೊಡೆದು ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದಿರುತ್ತಾನೆ. ಆಗ ನಾನು ನಮ್ಮ ತಾಯಿಗೆ ಹೊಡೆಯಬೇಡರಿ
ಎಂದು ಚಿರಾಡುವಾಗ ಪಾಂಡುರಂಗನು ಕಲ್ಲಿನಿಂದ ನನ್ನ ಎಡಗೈ ರಟ್ಟೆಗೆ ಹಾಗೂ ಬಲಗೈ ಮೊಳಕೈಗೆ ಹೊಡೆದಿದ್ದರಿಂದ
ರಕ್ತಗಾಯಗಳು ಆಗಿರುತ್ತವೆ. ಆಗ ಅಲ್ಲಿಯೇ ಇದ್ದ ನನ್ನ ಅಣ್ಣ ಸಂಜುಕುಮಾರನು ಜಗಳ ಬಿಡಿಸಲು ಬಂದಾಗ ಹಣಮಂತ
ಮತ್ತು ಪ್ರಭುಲಿಂಗ ಇವರು ಕೈಯಿಂದ ಅವನ ಬೆನ್ನಮೇಲೆ ಮತ್ತು ಕಪಾಳ ಮೇಲೆ ಹೊಡೆದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment