POLICE BHAVAN KALABURAGI

POLICE BHAVAN KALABURAGI

17 March 2017

KALABURAGI DISTRICT REPORTED CRIMES

ವಾಹನ ಕಳವು ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ :- ದಿನಾಂಕ:16-03-2017 ರಂದು ಶ್ರೀ ಸುಭಾಷಚಂದ್ರ ತಂದೆ ಕರಬಸ್ಸಪ್ಪಾ ನೀರವಾಣಿ ಸಾ:ಮನೆ ನಂ. 2108, ಹೀರಾ ಕಾಂಪ್ಲೆಕ್ಸ ಆಳಂದ ರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತನ್ನ ಚಾವರಲೇಟ್ ಟವೇರಾ ಜೀಪ ನಂ. KA 02 AC 2508 ನೇದ್ದನ್ನು ಕಲಬುರಗಿ ನಗರದ ಕೆಪಿಟಿಸಿಎಲ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೊಟ್ಟಿದ್ದು ನನ್ನ ವಾಹನದ ಚಾಲಕನಾಗಿ ಸದ್ದಾಮ ತಂದೆ ಮುಕಬಾಲ ಪಟೇಲ್ ಸಾ: ಕುನ್ನುರ ತಾ:ಚಿತ್ತಾಪೂರ ಹಾ.ವಾ|| ಎಂ.ಎಸ್.ಕೆ ಮಿಲ್ ಮದಿನಾ ಕಾಲೋನಿ ಕಲಬುರಗಿ ಇವರಿದ್ದು. ಈತನಿಗೆ ನಾನೇ ಸಂಬಳ ಕೊಟ್ಟು ಇಟ್ಟಿಕೊಂಡಿದ್ದು. ನನ್ನ ವಾಹನವನ್ನು ನಮ್ಮ ಚಾಲಕ ದಿನಾ ಬೆಳಗ್ಗೆ 10 ಗಂಟೆಗೆ ಮನೆಯಿಂದ ತೆಗೆದುಕೊಂಡು ಹೋಗಿ ಕೆ.ಇ.ಬಿ ಕಾರ್ಯಾಲಯಕ್ಕೆ ಹೋಗಿ ಅಲ್ಲಿ ಇದ್ದಂತಹ ಕೆಲಸವನ್ನು ಮುಗಿಸಿ ಮತ್ತೆ ಸಾಯಂಕಾಲ 7-8 ಗಂಟೆಗೆ ನಮ್ಮ ಮನೆ ಮುಂದೆ ನಿಲ್ಲಿಸಿ ಹೋಗುತ್ತಾನೆ. ಎಂದಿನಂತೆ ದಿನಾಂಕ 14-3-2017 ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮ ವಾಹನದ ಚಾಲಕ ವಾಹನವನ್ನು ತೆಗೆದುಕೊಂಡು ಹೋಗಿ ರಾತ್ರಿ 8-00 ಗಂಟೆಗೆ ನಮ್ಮ ಮನೆ ಮುಂದೆ ನಿಲ್ಲಿಸಿ ವಾಹನದ ಡೊರ ಲಾಕ್ ಮಾಡಿ ಚಾವಿ ನನ್ನ ಕೈಯಲ್ಲಿ ಕೊಟ್ಟು ಹೋಗಿದ್ದು. ನಾನು ದಿನಾಂಕ: 15/03/2017 ರಂದು ಬೆಳಗ್ಗೆ 05-00 ಗಂಟೆಗೆ ನೋಡಲಾಗಿ  ನಮ್ಮ ವಾಹನ ಇರಲಿಲ್ಲಾ ನಾನು ನಮ್ಮ ವಾಹನದ ಚಾಲಕ ಇಬ್ಬರು ಎಲ್ಲಾ ಕಡೆ ಹುಡುಕಾಡಿದರು ವಾಹನ ಸಿಕ್ಕಿರುವುದಿದಲ್ಲಾ ಕಾರಣ ಕಳುವಾ ನನ್ನ ಚೆವರಲೇಟ್ ಟವೇರಾ ವಾಹನ ಸಿಲ್ವರ ಬಣ್ಣದ್ದು ಇದ್ದು ನಂ. KA 02 AC 2508, ಅದರ Engine No.3LL139606, Chassis No. MA6ABCM5BAH138295 ಅದರ ಅಂ.ಕಿ- 4,50,000/-ರೂ ಬೇಲೆ ಬಾಳುವುದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿ ಕೋಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:

ಜೇವರಗಿ ಪೊಲೀಸ್ ಠಾಣೆ : ದಿ. 16.03.2017 ರಂದು ಶ್ರೀ ಶರಣಪ್ಪ ತಂದೆ ಈರಣ್ಣಾ ವಾಲಿ ಸಾಃ ರಾಜವಾಳ ಠಾಣೆಗೆ ಹಾಜರಾಗಿ  ನನ್ನ ಮಗ ಶಿವಲಿಂಗಪ್ಪನು ಈಗ ಸುಮಾರು 6 ತಿಂಗಳದ ಹಿಂದೆ ನಮ್ಮೂರ ಅಪ್ಪಾಸಾಬಗೌಡ ತಂದೆ ಈಶ್ವರಪ್ಪ ತೊನಸಳ್ಳಿ ಇವರಿಗೆ ಅವರ ಮನೆ ಅಡಚಣೆಗಾಗಿ 18,000/-ರೂ ಕೈಗಡದ ರೂಪದಲ್ಲಿ ಕೊಟ್ಟಿದ್ದು . ನನ್ನ ಮಗನು ಅಪ್ಪಾಸಾಗೌಡನಿಗೆ ಹಣ ಮರಳಿ ಕೊಡು ಅಂತ ಕೇಳಿದಾಗ ಅವನು ನಾಳೆ ನಾಡಿದು ಕೊಡುವದಾಗಿ ಹೇಳುತ್ತಾ ಬಂದಿರುತ್ತಾನೆ. ಅಲ್ಲದೇ ಈ ವಿಷಯದಲ್ಲಿ ನನ್ನ ಮಗನ ಸಂಗಡ ತಕಾರು ಕೂಡಿ ಮಾಡಿದ್ದು. ದಿನಾಂಕ: 24.02.2017 ರಂದು ನಾನು ಮತ್ತು ನನ್ನ ಹೆಂಡತಿ ಇಬ್ಬರು ಹೊಲಕ್ಕೆ ಹೋಗಿದ್ದಾಗ ನನ್ನ  ಮಗ ಶಿವಲಿಂಗಪ್ಪ ಮನೆಯಲ್ಲಿ ಇದ್ದಾಗ ಅಪ್ಪಾಸಾಬಗೌಡ ನನ್ನ ಮಗನ ಸಂಗಡ ಜಗಳ ತೆಗೆದಿದ್ದು ಆಗ ನಮ್ಮ ಸೊಸೆ ನನಗೆ ಫೋನ ಮಾಡಿ ನನ್ನ ಗಂಡನಿಗೆ ಅಪ್ಪಾಸಾಬಗೌಡ ಮತ್ತು ಅವರ ಮನೆಯವರು ನನ್ನ ಗಂಡನಿಗೆ ಹೊಡೆದಿರುವ ಬಗ್ಗೆ ತಿಳಿಸಿದ್ದು. ಸಾಯಂಕಾಲ ಮನೆಗೆ ಬಂದು ನನ್ನ ಮಗ ಶಿವಲಿಂಗಪ್ಪ ವಿಚಾರಿಸಲಾಗಿ ಇಂದು ಸಾಯಾಂಕಾಲ 4.00 ಗಂಟೆ ಸುಮಾರಿಗೆ ನಮ್ಮ ಮಗ ಈತನು ಗ್ರಾಮದ ಗಂಗಮ್ಮ ಇವರ ಅಂಗಡಿ ಹತ್ತಿರ ಹೋಗಿದ್ದಾಗ ಅಲ್ಲಿದ್ದ  ಅಪ್ಪಾಸಾಬನಿಗೆ ಹಣದ ಮರಳಿ ಕೊಡುವಂತೆ ಕೇಳಿದಕ್ಕೆ ಅಪ್ಪಾಸಾಬನು ತನ್ನ ಅಣ್ಣ ತಮ್ಮಂದಿರಾದ  ಆನಂದ ತಂದೆ ಈಶ್ವರಪ್ಪ ತೊನಸಳ್ಳಿ ಸಂತೋಷ ತಂದೆ ಈಶ್ವರಪ್ಪ ತೊನಸಳ್ಳಿ, ಅವರ ತಾಯಿ ಗಂಗಮ್ಮ ಇವರಿಗೆ  ಕರೆಯಿಸಿ ಈ ಮಗನ ನಮಗೆ ಹಣ ಮರಳಿ ಕೊಡುವಂತೆ ಕೇಳುತ್ತಾ ಅವಮಾನ ಮಾಡುತ್ತಿದ್ದಾನೆ ಎನ್ನುತ್ತಾ ಅಪ್ಪಸಾಬ, ಆನಂದ, ಉಮೇಶ, ಸಂತೋಷ ಎಲ್ಲರೊ  ಜಗಳಕ್ಕೆ ಬಿದ್ದು ಕೈಯಿಂದ ,ಕಲ್ಲಿನಿಂದ , ಚಪ್ಪಲಿಂದ , ಬಡಿಗೆಯಿಂದ ಹೊಡೆದ ಬಗ್ಗೆ ತಿಳಿಸಿದ್ದು  ಅದೆ ದಿವಸ ನರಬೋಳಿ ಖಾಸಗಿ ಆಸ್ಪತ್ರೆಯಲ್ಲಿ ಇಲಾಜ ಮಾಡಿಸಿದ್ದು. ಊರಿನ ಪ್ರಮುಖರಲ್ಲಿ ಹೇಳಿ ಬಗೆ ಹರಿಸಿಕೊಳ್ಳೋಣಾ ಅಂತ 5-6 ದಿವಸಗಳವರೆಗೆ  ನಾವು ಕಾದಿದ್ದು. ಈಗ ನನ್ನ ಮಗನಿಗೆ ತಲೆ ತುಂಬಾ ನೋವಾಗುತ್ತಿರಲು ದಿನಾಂಕ: 04.03.2017 ರಂದು ಕಲಬುರಗಿ ಗಂಗಾ ಆಸ್ಪತ್ರೆಯಲ್ಲಿ ಸೇರ್ಪಡೆ ಮಾಡಿದ್ದು. ಅಲ್ಲಿನ ವೈದ್ಯರು ನನ್ನ ಮಗನ ತಲೆಯ ಆಪರೇಷನ್ ಮಾಡಿಸಬೇಕಾಗುತ್ತದೆ ಅಂತ ಹೇಳಿದರಿಂದ ನಾವು ನನ್ನ ಮಗನಿಗೆ ಉಪಚಾರ ಕೊಡಿಸಿ ಇಂದು ತಡವಾಗಿ ದೂರು ಸಲ್ಲಿಸಿರುತ್ತುವುದಾಗಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

16 March 2017

KALABURAGI DISTRICT REPORTED CRIMES

ಸಿಡಿಲು ಬಡಿದು ಸಾವು ಪ್ರಕರಣ:
ಅಫಜಲಪೂರ ಠಾಣೆ:- ದಿ: 15-03-2017 ರಂದು ಶ್ರೀಮತಿ ರಹಮತ ಬೀ ಗಂ. ದಾವೂದ ಸಾ: ಕರಜಗಿ ಇವರು ಠಾಣೆಗೆ ಹಾಜರಾಗಿ ಇಂದು ಬೆಳಿಗ್ಗೆ  ನನ್ನ ಗಂಡನಾದ ದಾವೂದ ತಂ ರಸೂಲಸಾಬ ಇವರು ನಮ್ಮ ಗ್ರಾಮದ ಶರಣು ಹಳಗೋಧಿ ರವರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಸಾಯಂಕಾಲ 6 ಗಂಡೆ ಸುಮಾರಿಗೆ ಮಳೆ ಬರುವಾಗ ಹೊಲದಲ್ಲಿರುವ ಬೇವಿನ ಗಿಡದ ಕೆಳಗಡೆ ನಿಂತಿರುವಾಗ ನನ್ನ ಗಂಡನಿಗೆ ಸಿಡಿಲು ಬಡೆದು ಮೃತಪಟ್ಟಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ:


ಗ್ರಾಮೀಣ ಪೊಲೀಸ್ ಠಾಣೆ : ದಿನಾಂಕ:-15/03/2017 ರಂದು ಶ್ರೀಮತಿ ತಯ್ಯಬಾ ಗಂಡ ಹುಸೇನಪಾಶಾ ಸಾ:ಬುಲಂದ ಪರ್ವೆಜ್  ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ 22/04/2009 ರಂದು ಸಂಪ್ರದಾಯದಂತೆ ಮಹಮ್ಮದ ಹುಸೇನ ಪಾಶಾ @ ಬಾಬಾ ಇತನೊಂದಿಗೆ ತನ್ನ ಮದುವೆ ಆಗಿದ್ದು, ಮದುವೆ ಕಾಲಕ್ಕೆ ಉಡುಗೊರೆಯಾಗಿ 2 ತೋಲಿ ಬಂಗಾರ ಹಾಗು 25,000/-ರೂ ನಗದು ಹಣ ಸಂಸಾರಕ್ಕೆ ಬೇಕಾಗುವ ಸಾಮಾನುಗಳನ್ನು ಕೊಟ್ಟಿದ್ದು ಇರುತ್ತದೆ. ಮದುವೆ ಆಗಿ 1 ತಿಂಗಳವರೆಗೆ ಫಿರ್ಯಾದಿಗೆ ಆಪಾದಿತರೆಲ್ಲರೂ ಚೆನ್ನಾಗಿ ನೋಡಿಕೊಂಡು ನಂತರ ಫಿರ್ಯಾದಿಯ ಗಂಡ ಮಹಮ್ಮದ ಹುಸೇನಪಾಶಾ @ ಬಾಬಾ, ಮಾವ ನಸೀರುದ್ದಿನ. ಅತ್ತೆ ಪುತಳಿ ಬೇಗಂ, ನಾದಿನಿಯರಾದ, ಜಬೀನಾ, ಹೀನಾ ತಯ್ಯಾಬಾ ಸುಮಯ್ಯಾ, ಹಾಗು ಮೈದುನರಾದ ಖಾಜಾಪಾಶಾ, ಅನ್ವರ ಪಾಶಾ, ಹಪೀಜಪಾಶಾ ಇವರುಗಳು ದಿನಾಲು ನಿನಗೆ ಅಡಿಗೆ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ, ಮನೆಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ ನೀನು ಇನ್ನು ತವರು ಮನೆಯಿಂದ 2 ಲಕ್ಷ ರೂಪಾಯಿ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ದಿನಾಂಕ:-10/03/2017 ರಂದು ಎಲ್ಲರೂ ಕೂಡಿಕೊಂಡು ಅವಾಚ್ಯವಾಗಿ ಬೈಯ್ದು ನೀನು ನಮ್ಮ ಮನೆಯಲ್ಲಿ ಬರಬೇಕಾದರೇ 2 ಲಕ್ಷ ರೂ ವರದಕ್ಷಿಣೆ ತೆಗೆದುಕೊಂಡು ಬಾ ಆಂತಾ ಮತ್ತೆ ಹಾಗೆಯೇ ಬಂದಿಯಾ ಅಂತಾ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಭಯ ಹಾಕಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

13 March 2017

Kalaburagi District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀ. ರಾಜೇಂದ್ರ ತಂದೆ ಮುಖ್ಯಪ್ರಾಣ ಉಪಾಧ್ಯಯ, :ಮ್ಯಾಜೇಜರ್ & ಮಾಲಿಕರು ಅಶೋಕ ಲಾಡ್ಜ್, ಸೇಡಂ, ಸಾ:ಮನೆ ನಂ-4-8-35/4-7-35/1 ಹನುಮಾನ ಗುಡಿಯ ಹಿಂದುಗಡೆ, ಕೆ..ಬಿ ಕಾಲೋನಿ, ಸೇಡಂ. ತಾ:ಸೇಡಂ, ಜಿಲ್ಲೆ:ಕಲಬುರಗಿ. ಇವರು ಸೇಡಂ ಪಟ್ಟಣದ ರೈಲ್ವೆಸ್ಟೇಶನ್ ಎದುರುಗಡೆ ಅಶೋಕಾ ಲಾಡ್ಜ್ ಎಂಬ ಹೆಸರಿನ ಲಾಡ್ಜ ಇಟ್ಟುಕೊಂಡಿದ್ದು ನಿನ್ನೆ ದಿನಾಂಕ:11-03-2017 ರಂದು ರಾತ್ರಿ 09-30 ಗಂಟೆ ಸುಮಾರಿಗೆ ಒಬ್ಬ ವ್ಯಕ್ತಿಯು ತನ್ನೊಂದಿಗೆ ಒಬ್ಬ ಹೆಣ್ಣುಮಗಳನ್ನು ಸಂಗಡ ಕರೆದುಕೊಂಡು ಬಂದು ಅವಳು ತನ್ನ ಹೆಂಡತಿ ಇದ್ದು ಆಕೆಯ ಹೆಸರು ಹೇಳಿರುವದಿಲ್ಲ ತಾನು ಕೊಡ್ಲಾ ಗ್ರಾಮದಿಂದ ಬಂದಿದ್ದು ಬೆಳಗ್ಗೆ ತಾಂಡೂರಿಗೆ ಹೋಗಬೇಕಾಗಿದೆ ವಸತಿ ಕುರಿತು ಒಂದು ರೂಮ್ ಬೇಕಾಗಿದೆ ಅಂತ ಹೇಳಿದ್ದರಿಂದ ಆತನಿಗೆ ಐ.ಡಿ ಪ್ರೂಫ್ ಕೇಳಲು ತಾನು ಸಂಗಡ ಐ.ಡಿ ಪ್ರೂಫ್ ತಂದಿರುವದಿಲ್ಲ ಅಂತ ವಗೈರೆ ಹೇಳಿದನು. .ಡಿ ಫ್ರೂಫ್ ಇರಲಾರದೇ ರೂಮ್ ಕೊಡಲು ಆಗುವದಿಲ್ಲ ಅಂತ ಹೇಳಿದಾಗ ರಾತ್ರಿ ಹೊತ್ತಿನಲ್ಲಿ ಹೆಂಡತಿಯನ್ನು ರೈಲ್ವೆ ಸ್ಟೇಶನದಲ್ಲಿ ಕೂಡಿಸಿಕೊಳ್ಳುವದು ಸರಿಕಾಣುವದಿಲ್ಲ ಆದ್ದರಿಂದ ಒಂದು ರೂಮ್ ನೀಡಬೇಕೆಂದು ಕೇಳಿಕೊಂಡ ಮೇರೆಗೆ ಆತನಿಗೆ ರೂಮಿಗೆ 350/- ರೂಪಾಯಿ ಬಾಡಿಗೆ ಆಗುತ್ತದೆ ಅಂತ ಹೇಳಿದಾಗ ಆತನು ಹಣ ಕೊಟ್ಟು ತನ್ನ ಹೆಸರು ನರಸಪ್ಪ ತಂದೆ ಭೀಮಪ್ಪ ದೊಡ್ಮನಿ, ಸಾ:ಲಖ್ನಾಪೂರ ತಾಂಡೂರ. ಅಂತ ಹೇಳಿದ್ದು ಆತನು ಹೇಳಿದಂತೆ ಲಾಡ್ಜಿನ ರಜಿಸ್ಟರನಲ್ಲಿ ನಮೂದು ಮಾಡಿ ಅವರಿಗೆ ಲಾಡ್ಜಿನ ರೂಮ್ ನಂ-5 ನೇದ್ದನ್ನು ಬುಕ್ ಮಾಡಿ ಬೀಗದಕೈ ನೀಡಿ ರೂಮಿಗೆ ಕಳೂಹಿಸಿಕೊಟ್ಟೇನು. ರಾತ್ರಿ 11-00 ಗಂಟೆಯವರೆಗೆ ಎಚ್ಚರವಿದ್ದು ನಂತರ ಲಾಡ್ಜಿನ ಆಫೀಸಿನಲ್ಲಿ ಮಲಗಿಕೊಂಡಿದ್ದು ರಾತ್ರಿ 03-00 ಗಂಟೆ ಸುಮಾರಿಗೆ ಸದರಿ ವ್ಯಕ್ತಿಯು ಆಫೀಸಿನ ಬಾಗಿಲು ಬಡಿಯಲು ನನಗೆ ಎಚ್ಚರವಾಗಿ ವಿಚಾರಿಸಲು ತಿಳಿಸಿದ್ದೇನೆಂದರೆ, ತಾನು ರೈಲ್ವೆಸ್ಟೇಶನಗೆ ಟ್ರೇನ್ ಟೈಮ್ ತಿಳಿದುಕೊಂಡು ಬರಲು ಹೋಗಬೇಕಾಗಿದೆ. ಲಾಡ್ಜಿನ ಹೊರಬಾಗಿಲು ತೆಗೆಯಿರಿ ಅಂತ ಹೇಳಿದಾಗ ನಾನು ಅವನಿಗೆ ಹೊರಗೆ ಹೋಗಬೇಕಾದರೆ ಇಬ್ಬರೂ ಹೋಗಿರಿ ಅಂತ ಹೇಳಿದಾಗ ಆತನು ಈ ಅಪರಾತ್ರಿಯಲ್ಲಿ ಹೆಣ್ಣುಮಗಳನ್ನು ರೈಲ್ವೆಸ್ಟೇಶನವರೆಗೆ ಹೇಗೆ ಕರೆದುಕೊಂಡು ಹೋಗುವದು, ನನಗೆ ಕೇವಲ ಟ್ರೇನ್ ಟೈಮ್ ತಿಳಿದುಕೊಂಡು ಬರಬೇಕಾಗಿದೆ ವಾಪಸ್ ಬಂದ ನಂತರ ಟ್ರೇನ ಟೈಮಗೆ ಹೆಂಡತಿಯನ್ನು ಕರೆದುಕೊಂಡು ಹೋಗುವದಾಗಿ ಹೇಳಿದ್ದರಿಂದ ನಾನು ಲಾಡ್ಜಿನ ಹೊರ ಬಾಗಿಲನ್ನು ತೆರೆದಾಗ ಆತನು ರೈಲ್ವೆಸ್ಟೇಶನ ಕಡೆಗೆ ಹೋದನು. ಅವನು ಹೋದ ನಂತರ ಮೂತ್ರವಿಸರ್ಜನೆ ಕುರಿತು ಲಾಡ್ಜಿನ ಮೊದಲೇ ಅಂತಸ್ತಿಗೆ ಹೋಗಿ ವಾಪಸ್ ಬರುವಾಗ ಸದರಿ ವ್ಯಕ್ತಿಯು ಮರಳಿ ಲಾಡ್ಜಿಗೆ ಬರದೇ ಇದ್ದುದ್ದರಿಂದ ಅನುಮಾನಗೊಂಡು ಆತನು ಉಳಿದುಕೊಂಡಿದ್ದ ರೂಮ್ ನಂ-5 ರವರೆಗೆ ಹೋಗಿ ನೋಡಲಾಗಿ ರೂಮಿನ ಬಾಗಿಲು ಮುಂದಕ್ಕೆ ಮಾಡಿದ್ದು ಬಾಗಿಲು ತೆರೆದು ನೋಡಲಾಗಿ ರೂಮಿನ ಪಶ್ಚಿಮ ದಿಕ್ಕಿಗೆ ಇರುವ ಪಲಂಗ ಮೇಲೆ ಹೆಣ್ಣುಮಗಳು ಸತ್ತು ಬಿದ್ದಿದ್ದು ಆಕೆಯ ಕುತ್ತಿಗೆಯ ಹತ್ತಿರ ರಕ್ತಬಂದಂತೆ ಕಾಣುತಿತ್ತು. ನಾನು ಗಾಭರಿಗೊಂಡು ರೈಲ್ವೆಸ್ಟೇಶನ್ ವರೆಗೆ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಎಲ್ಲಿಯೂ ಕಾಣಲಿಲ್ಲ.ಸದರಿ ವ್ಯಕ್ತಿಯು ತನ್ನ ಹೆಸರು ನರಸಪ್ಪ ತಂದೆ ಭೀಮಪ್ಪ ದೊಡ್ಮನಿ ಸಾ:ಲಖ್ನಾಪೂರ, ತಾಂಡೂರ ಅಂತ ಹೇಳಿಕೊಂಡು ತನ್ನೊಂದಿಗೆ ಬಂದಿರುವ ಹೆಣ್ಣುಮಗಳು ತನ್ನ ಹೆಂಡತಿ ಅಂತ ಹೇಳಿ ನಮ್ಮ ಲಾಡ್ಜಿನಲ್ಲಿಯ ಒಂದು ರೂಮನ್ನು ಪಡೆದು ಯಾವುದೋ ಕಾರಣಕ್ಕಾಗಿ ಆಕೆಯ ಕುತ್ತಿಗೆಗೆ ಯಾವುದೊ ವಸ್ತುವಿನಿಂದ ಬಿಗಿದು ಕೊಲೆ ಮಾಡಿ ಓಡಿಹೋಗಿರುತ್ತಾನೆ. ಈ ಘಟನೆಯು ನಿನ್ನೆ ದಿನಾಂಕ:11-03-2017 ರಂದು ರಾತ್ರಿ 09-30 ಗಂಟೆಯಿಂದ 03-00 ..ಎಮ್ ಅವಧಿಯಲ್ಲಿ ಜರುಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ