ಸಿಡಿಲು ಬಡಿದು ಸಾವು ಪ್ರಕರಣ:
ಅಫಜಲಪೂರ ಠಾಣೆ:- ದಿ: 15-03-2017 ರಂದು ಶ್ರೀಮತಿ ರಹಮತ ಬೀ ಗಂ.
ದಾವೂದ ಸಾ: ಕರಜಗಿ ಇವರು ಠಾಣೆಗೆ ಹಾಜರಾಗಿ ಇಂದು ಬೆಳಿಗ್ಗೆ ನನ್ನ ಗಂಡನಾದ ದಾವೂದ ತಂ ರಸೂಲಸಾಬ ಇವರು ನಮ್ಮ ಗ್ರಾಮದ
ಶರಣು ಹಳಗೋಧಿ ರವರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಸಾಯಂಕಾಲ 6 ಗಂಡೆ ಸುಮಾರಿಗೆ ಮಳೆ
ಬರುವಾಗ ಹೊಲದಲ್ಲಿರುವ ಬೇವಿನ ಗಿಡದ ಕೆಳಗಡೆ ನಿಂತಿರುವಾಗ ನನ್ನ ಗಂಡನಿಗೆ ಸಿಡಿಲು ಬಡೆದು
ಮೃತಪಟ್ಟಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ : ದಿನಾಂಕ:-15/03/2017 ರಂದು
ಶ್ರೀಮತಿ ತಯ್ಯಬಾ ಗಂಡ ಹುಸೇನಪಾಶಾ ಸಾ:ಬುಲಂದ ಪರ್ವೆಜ್ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ 22/04/2009
ರಂದು ಸಂಪ್ರದಾಯದಂತೆ ಮಹಮ್ಮದ ಹುಸೇನ ಪಾಶಾ @ ಬಾಬಾ ಇತನೊಂದಿಗೆ ತನ್ನ ಮದುವೆ ಆಗಿದ್ದು, ಮದುವೆ ಕಾಲಕ್ಕೆ ಉಡುಗೊರೆಯಾಗಿ
2 ತೋಲಿ ಬಂಗಾರ ಹಾಗು 25,000/-ರೂ ನಗದು ಹಣ ಸಂಸಾರಕ್ಕೆ ಬೇಕಾಗುವ ಸಾಮಾನುಗಳನ್ನು ಕೊಟ್ಟಿದ್ದು
ಇರುತ್ತದೆ. ಮದುವೆ ಆಗಿ 1 ತಿಂಗಳವರೆಗೆ ಫಿರ್ಯಾದಿಗೆ ಆಪಾದಿತರೆಲ್ಲರೂ ಚೆನ್ನಾಗಿ ನೋಡಿಕೊಂಡು
ನಂತರ ಫಿರ್ಯಾದಿಯ ಗಂಡ ಮಹಮ್ಮದ ಹುಸೇನಪಾಶಾ @ ಬಾಬಾ, ಮಾವ ನಸೀರುದ್ದಿನ. ಅತ್ತೆ ಪುತಳಿ ಬೇಗಂ, ನಾದಿನಿಯರಾದ, ಜಬೀನಾ, ಹೀನಾ ತಯ್ಯಾಬಾ ಸುಮಯ್ಯಾ, ಹಾಗು ಮೈದುನರಾದ ಖಾಜಾಪಾಶಾ, ಅನ್ವರ ಪಾಶಾ, ಹಪೀಜಪಾಶಾ ಇವರುಗಳು ದಿನಾಲು
ನಿನಗೆ ಅಡಿಗೆ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ, ಮನೆಕೆಲಸ ಸರಿಯಾಗಿ ಮಾಡಲು
ಬರುವುದಿಲ್ಲಾ ನೀನು ಇನ್ನು ತವರು ಮನೆಯಿಂದ 2 ಲಕ್ಷ ರೂಪಾಯಿ ವರದಕ್ಷಣೆ ತೆಗೆದುಕೊಂಡು ಬಾ ಅಂತಾ
ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ದಿನಾಂಕ:-10/03/2017 ರಂದು ಎಲ್ಲರೂ
ಕೂಡಿಕೊಂಡು ಅವಾಚ್ಯವಾಗಿ ಬೈಯ್ದು ನೀನು ನಮ್ಮ ಮನೆಯಲ್ಲಿ ಬರಬೇಕಾದರೇ 2 ಲಕ್ಷ ರೂ ವರದಕ್ಷಿಣೆ
ತೆಗೆದುಕೊಂಡು ಬಾ ಆಂತಾ ಮತ್ತೆ ಹಾಗೆಯೇ ಬಂದಿಯಾ ಅಂತಾ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಭಯ
ಹಾಕಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment