POLICE BHAVAN KALABURAGI

POLICE BHAVAN KALABURAGI

21 November 2016

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ರೇವೂರ ಠಾಣೆ : ಶ್ರೀಮತಿ ಹೀರಾಬಾಯಿ ಗಂಡ ಜಗದೇವಪ್ಪ ಬಿರಾದಾರ ಸಾ|| ಅತನೂರ ತಾ|| ಅಫಜಲಪೂರ ಇವರ ಗಂಡನಾದ ಜಗದೇವಪ್ಪ ಬಿರಾದಾರ ಈತನು ಸುಮಾರು 10 ವರ್ಷಗಳ ಹಿಂದೆ ಮೃತಪಟ್ಟಿದ್ದು ನನಗೆ 1) ರೇಷ್ಮಾ 2) ಭಾಗ್ಯಶ್ರೀ 3) ಸಾವಿತ್ರಿ 4) ಸಂಗೀತಾ 5) ಗೌಡಪ್ಪಗೌಡ ಅಂತಾ ಹೀಗೆ ಒಟ್ಟು 05 ಜನರು ಮಕ್ಕಳಿದ್ದು ನನ್ನ ಎರಡನೆಯ ಮಗಳಾದ ಭಾಗ್ಯಶ್ರೀ ಇವಳಿಗೆ ದಿನಾಂಕ 17-02-2016 ರಂದು ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಕೂಡಲಗಿ ಗ್ರಾಮದ ಪ್ರಭುಲಿಂಗ ಸಾಹು ಕೊ‍ಣ್ಣೂರ ಇವರ ಮಗನಾದ ಶಶಿಕುಮಾರ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ಶಶಿಕುಮಾರನು ಬೆಂಗಳೂರಿನ ಕೋರಮಂಗಲ ಕೆ.ಎಸ್.ಆರ್.ಪಿ ಯಲ್ಲಿ ಪೊಲೀಸ್ ಪೇದೆ ಅಂತಾ ಕೆಲಸ ಮಾಡುತ್ತಾನೆ. ನನ್ನ ಮಗಳ ಮದುವೆಗಿಂತ ಮುಂಚೆ ಮಾತುಕತೆ ವರನ ಮನೆಯಲ್ಲಿ ನಡೆದಿದ್ದು ನಿಶ್ಚೀತಾರ್ತ ಕಾರ್ಯಕ್ರಮವು ಮದುವೆಗಿಂತ 4-5 ತಿಂಗಳ ಮೊದಲು ಅತನೂರ ಗ್ರಾಮದಲ್ಲಿಯೆ ಆಗಿರುತ್ತದೆ. ಆ ಸಮಯದಲ್ಲಿ ವರನಿಗೆ ನಾವು ಹಾಕುವ ಬಂಗಾರ, ಬಟ್ಟೆ ಮತ್ತು ಗೃಹ ಬಳಕೆಯ ವಸ್ತುಗಳಿಗೆ ವರ ಮತ್ತು ವರನ ಮನೆಯವರು ಒಪ್ಪಿಕೊಂಡಿರುತ್ತಾರೆ. ನಮ್ಮ ಮಗಳ ಮೈ ಮೇಲೆ ವರನ ಮನೆಯವರು ಹಾಕುವ ಆಬರಣಗಳಿಗೆ ನಾವು ನಮ್ಮ ಒಪ್ಪಿಗೆ ನೀಡಿರುತ್ತೇವೆ. ದಿನಾಂಕ 17-02-2016 ರಂದು ಸುರಪೂರ ತಾಲೂಕಿನ ಕೂಡಲಗಿ ಗ್ರಾಮದ ಶ್ರೀ ಸದ್ಗುರು ಶಾಂತಾನಂದ ಸರಸ್ವತಿಸ್ವಾಮಿ ಬಾಬಾ ಮಾಹಾರಾಜರ ಶ್ರೀ ಮಠದಲ್ಲಿ ನಮ್ಮ ಹಿಂದೂ ಸಂಪ್ರದಾಯದಂತೆ ಮದುವೆ ಆಗಿರುತ್ತದೆ. ಮದುವೆಯಾದ ಒಂದು ತಿಂಗಳ ವರೆಗೆ ನನ್ನ ಮಗಳ ಗಂಡನಾದ 1) ಶಶಿಕಾಂತ ತಂದೆ ಪ್ರಭುಲಿಂಗ ಸಾಹು ಕೊಣ್ಣೂರ, ಅತ್ತೆಯಾದ 2) ವಿಜಯಲಕ್ಷ್ಮೀ ಗಂಡ ಪ್ರಭುಲಿಂಗ ಸಾಹು ಕೊಣ್ಣೂರ, ಮಾವನಾದ 3) ಪ್ರಭುಲಿಂಗ ಸಾಹು ಕೊಣ್ಣೂರ, ನಾದನಿಯಾದ 4) ಶೃತಿ ಗಂಡ ಶಂಕರಗೌಡ ಹಾಗೂ ನಾದನಿಯ ಗಂಡನಾದ 5) ಶಂಕರಗೌಡ ಇವರೆಲ್ಲರೂ ನನ್ನ ಮಗಳಿಗೆ, ಅವಳ ಗಂಡನಾದ ಶಶಿಕಾಂತನ ಪಿ.ಎಸ್.ಐ ಮತ್ತು ಪಿ,ಡಿ,ಒ ನೌಕರಿ ಸಲುವಾಗಿ ತವರು ಮನೆಯಿಂದ 50,00,000/- ರೂ (ಐವತ್ತು ಲಕ್ಷ ರೂಪಾಯಿ) ಹಣ ತರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿರುತ್ತಾರೆ. ಈ ವಿಷಯ ನಮ್ಮ ಮಗಳು ನನಗೆ ತಿಳಿಸಿದ್ದರಿಂದ ಈಗ ಒಂದು ತಿಂಗಳ ಹಿಂದೆ ನಾನು ಸಿದ್ದಾರಾಮ ಹೇರೂರ ಮತ್ತು ಸಿದ್ದಮ್ಮ ಚನ್ನೂರ ಇವರ ಸಮ್ಮುಖದಲ್ಲಿ ನನ್ನ ಮಗಳ ಗಂಡನಿಗೆ ಹತ್ತು ಲಕ್ಷ ರೂಪಾಯಿ ಹಣ ಕೊಟ್ಟಿರುತ್ತೇನೆ. ಆದರೂ ನನ್ನ ಮಗಳ ಗಂಡ ಹಾಗೂ ಗಂಡನ ಮನೆಯವರು ಇನ್ನು 40 ಲಕ್ಷ ರೂಪಾಯಿ ಹಣ ತರುವಂತೆ ಕಿರುಕುಳ ಕೊಡುವುದು ನಿಲ್ಲಿಸದ ಮತ್ತೆ ನನ್ನ ಮಗಳನ್ನು ಕಳುಹಿಸಿದ್ದರು ಆಗ ನಾನು ಮತ್ತು ಸಿದ್ದಾರಾಮ ಹೇರೂರ, ವಿಠಲ ಜಾಮಗೊಂಡ ಹಾಗು ನನ್ನ ಅಕ್ಕ ಚನ್ನಮ್ಮಾ ಅತನೂರ ರವರೆಲ್ಲರೂ ನನ್ನ ಮಗಳ ಗಂಡನಾದ ಶಶಿಕಾಂತನಿಗೆ ಕರೆಯಿಸಿ ನನ್ನ ಮಗಳಿಗೆ ಕಿರುಕುಳ ಕೊಡದೆ ಸರಿಯಾಗಿ ಇಟ್ಟಿಕೊಳ್ಳುವಂತೆ ತಿಳುವಳಿಕೆ ಹೆಳಿ ಕಳುಹಿಸಿಕೊಟ್ಟಿರುತ್ತೆವೆ. ಸುಮಾರು 15 ದಿವಸಗಳ ಹಿಂದೆ ನನ್ನ ಮಗಳ ಗಂಡ, ಅತ್ತೆ, ಮಾವ, ನಾದಿನಿ, ಮತ್ತು ನಾದಿನಿ ಗಂಡ ಇವರೆಲ್ಲರೂ ನನ್ನ ಮಗಳಿಗೆ ನಿನ್ನ ತವರು ಮನೆಯಿಂದ 40 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಂದರೆ ನಿನಗೆ ನಮ್ಮ ಮನೆಯಲ್ಲಿ ಜೀವನ ಮಾಡಲು ಅವಕಾಶ ಇರುತ್ತದೆ. ಇಲ್ಲದಿದ್ದರೆ ನಿನ್ನ ಕೊಲೆ ಮಾಡಿ ಮತ್ತೊಂದು ಮದುವೆ ಮಾಡುತ್ತೆವೆ ಅಂತಾ ಹೊಡೆ ಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದಾರೆ ಅಂತಾ ನನ್ನ ಮಗಳು ನನಗೆ ಫೋನ ಮೂಲಕ ತಿಳಿಸಿದ್ದರಿಂದ ದಿನಾಂಕ;06/11/2016 ರಂದು ನನ್ನ ಹಿರಿಯ ಮಗಳ ಗಂಡನಾದ ಗುರುರಾಜ ದ್ಯಾಮಾ ಈತನಿಗೆ ನನ್ನ ಮಗಳನ್ನು ಕರೆದುಕೊಂಡು ಬರಲು ಕೂಡಲಗಿಗೆ ಕಳುಹಿಸಿದ್ದು ಅವನು ದಿನಾಂಕ;07/11/2016 ರಂದು ನನ್ನ ಮಗಳು ಭಾಗ್ಯಶ್ರಿ ಇವಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ದಿನಾಂಕ;12/11/2016 ರಂದು ಬೆಳಗ್ಗೆ ನನ್ನ ಮಗಳ ಗಂಡ ಶಶಿಕುಮಾರ ನಮ್ಮ ಮನೆಗೆ ಬಂದು ದಿನಾಂಕ;16/11/2016 ರವರೆಗೆ ನಮ್ಮ ಮನೆಯಲ್ಲಿ ಇದ್ದು ನನ್ನ ಮಗಳಿಗೆ ರಂಡಿ ಎಷ್ಟು ದಿವಸಗಳ ವರೆಗೆ ನೀನು ನಿನ್ನ ತವರು ಮನೆಯಲ್ಲಿಯೆ ಇರುವಿ ನನಗೆ ಪಿ,ಎಸ್,ಐ ಪಿ,ಡಿ.ಒ ನೌಕರಿ ಸಲುವಾಗಿ 40 ಲಕ್ಷ ರೂಪಾಯಿ ಹಣ ಬೇಕು. ನಿನ್ನ ತಾಯಿಗೆ ಹೇಳಿ ಹಣ ತೆಗೆದುಕೊಂಡು ಈಗಲೆ ನನ್ನೊಂದಿಗೆ ನಡೆ ಅಂತಾ ದಿನಾಂಕ;16/11/2016 ರಂದು ಕೈಯಿಂದ ಹೊಡೆದು ಚಿನ್ನದ ಮಂಗಳ ಸೂತ್ರ ಹರಿದುಕೊಂಡು ಹೊಗಿರುತ್ತಾನೆ. ಇಲ್ಲಿಂದ ಹೊದಾಗಿನಿಂದಲು ದಿನಾಲು ನನ್ನ ಮಗಳಿಗೆ ಫೊನ ಮಾಡಿ ಫೋನಿನಲ್ಲಿ ಹಣದ ಸಲುವಾಗಿ ಅಶ್ಲೀಲ ಶಬ್ದಗಳಿಂದ ಬೈಯ್ದು ಮಾನಶೀಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ತನ್ನ ಮನಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ;18/11/2016 ರಂದು ಸಾಯಂಕಾಲ 05.00 ಗಂಟೆ ಸುಮಾರಿಗೆ ನನ್ನ ಮಗಳು ನಮ್ಮ ಮನೆಯಲ್ಲಿಯೆ ತಾನು ಧರಿಸುವ ಓಡ್ನಿ ಬಟ್ಟೆಯಿಂದ ಮನೇಯ ಮೇಲ್ಚಾವಣಿಯ ಕಬ್ಬಿಣದ ರಾಡಿಗೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರೇವೂರ ಠಾಣೆ : ಶ್ರೀಮತಿ ಬಾಗಿರತಿ ಗಂಡ ರಾಜಶೇಖರ ಉಡಗೇನವರ ರವರು   ದಿನಾಂಕ;19/11/2016 ರಂದು ನಾನು ಮತ್ತು ನನ್ನ ಮಕ್ಕಳಾದ ಸವಿತಾ ಪ್ರಿಯಾಂಕಾ ಹಾಗು ಶಿವಕುಮಾರ ಮನೆಯಲ್ಲಿದ್ದೇವೂ ನಾನು ಮುಂಜಾನೆ 07.00 ಗಂಟೆ ಸುಮಾರಿಗೆ ಸ್ನಾನ ಮಾಡಲು ಒತ್ತಲದಲ್ಲಿ ನೀರು ಕಾಯಿಸುತ್ತಿರುವಾಗ ನನ್ನ ಮೈದುನನಾದ ಉಲ್ಲಾಸ ಈತನ ಹೆಂಡತಿಯಾದ ಜಗದೇವಿ ಇವಳು ನಾನು ಕಾಯಿಸುತಿದ್ದ ಒತ್ತಲು ಸಮೀಪ ನೀರು ಚೆಲ್ಲಿದರು ಆಗ ನಾನು ನೀನು ನೀರು ನಮ್ಮ ಜಾಗದಲ್ಲಿ ಚೆಲ್ಲಬೇಡಾ ಅಂತಾ ಅಂದಿದ್ದಕ್ಕೆ ಜಗದೇವಿಯ ಗಂಡನಾದ ಉಲ್ಲಾಸ ಇವರು ಅಲ್ಲೆ ಇದ್ದ ಒಂದು ಬಡಿಗೆಯಿಂದ ಎಡಗೈ ಬೆರಳುಗಳಮೇಲೆ, ಕೈಮೇಲೆ, ಬಲಗಾಲ ಮೇಲೆ, ಹಾಗು ಎಡಗಾಲ ತೊಡೆಯ ಮೇಲೆ ಹೊಡದನು ಹಾಗು ಕೈಯಿಂದ ಬೆನ್ನ ಮೇಲೆ ಹೊಡೆಯುತಿದ್ದಾಗ ನನ್ನ ಇನ್ನೊಬ್ಬ ಮೈದುನನಾದ ಮಹಾಂತೇಶ ಇವನು ಬಂದವನೆ ಈ ರಂಡಿಗ ಬಿಡಬ್ಯಾಡ ಹೊಡಿ ಇಕಿದು ಬಹಳ ಆಗ್ಯಾದ ಸುಮ್ಮನೆ ಸುಮ್ಮನೆ ಜಗಳ ತೆಗಿತಾಳ ಅಂತಾ ಅಂದು ಕೈಯಿಂದ ಬೆನ್ನ ಮೇಲೆ ಹಾಗು ಪಕ್ಕಲೆಬ ಮೇಲೆ ಹೊಡದನು. ಉಲ್ಲಾಸ ಹಾಗು ಮಲ್ಲಿಕಾರ್ಜನ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇವೂರ ಠಾಣೆ : ಶ್ರೀ ಉಲ್ಲಾಸ ತಂದೆ ಮಲ್ಲಿಕಾರ್ಜುನ ಉಡಗೇನವರ ರವರು ಒಕ್ಕಲುತನ ಕೆಸಲ ಮಾಡಿಕೊಂಡು ಕುಟುಂಬ ಪರಿವಾರದೊಂದಿಗೆ ವಾಸಿಸುತ್ತಿದ್ದೆನೆ. ನಮ್ಮ ತಂದೆಗೆ ನಾವೂ ಮೂರು ಜನ ಗಂಡು ಮಕ್ಕಳು ಇರುತ್ತೆವೆ. ಮನೆಯ ಜಾಗದ ಹಂಚಿಕೇಯ ಸಲುವಾಗಿ ನನಗು ಹಾಗು ಅಣ್ಣನಾದ ರಾಜಶೇಕರ ಹಾಗು ತಮ್ಮನಾದ ಊಲ್ಲಾಸ ರವರ ಮದ್ಯ ಮೊದಲಿನಿಂದ ವೈಮನಸ್ಸು ಇರುತ್ತದೆ. ರಾಜಶೇಖರ ಈತನು ಹುಚ್ಚನಂತೆ ಇದ್ದು ಇವನ ಹೆಂಡತಿಯಾದ ಭಾಗಿರಥಿ ನಮ್ಮ ಜೊತೆ ಹಗೆತನ ಸಾಗಿಸುತ್ತಾ ಬಂದಿದ್ದು  ದಿನಾಂಕ;19/11/2016 ರಂದು ಮುಂಜಾನೆ ನಾನು ನಮ್ಮ ತಮ್ಮನಾದ ಮಹಾಂತೇಶ ಹಾಗು ನನ್ನ ಹೆಂಡತಿಯಾದ ಜಗದೆವಿ ಮನೆಯಲ್ಲಿ ಇದ್ದೆವೂ. ನನ್ನ ಹೆಂಡತಿಯಾದ ಜಗದೇವಿ ಇವಳು ಮನೇಯ ಬಾಂಡ್ಯಾ ತಿಕ್ಕಿ ನಮ್ಮ ಜಾಗದಲ್ಲಿ ನೀರು ಹಾಕಿರುತ್ತಾಳೆ. ಆಗ ನಮ್ಮ ಅಣ್ಣ ರಾಜಶೇಖರನ ಹೆಂಡತಿಯಾದ ಭಾಗಿರಥಿ ಇವಳು ಇಲ್ಲಿ ಯಾಕ ನೀರು ಚೆಲ್ಲುತ್ತಿ ನಿಮ್ಮ ಜಾಗನಾಗ ಚೆಲ್ಲಿದರೆ ನಮ್ಮ ಜಾಗದಾಗ ನೀರು ಬರ್ತಾವ ರಂಡಿ ಇಲ್ಲಿ ಚೆಲ್ಲಬ್ಯಾಡ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಹಾಗೆ ಅವಾಚ್ಯವಾಗಿ ಬೈಬೇಡಾ ಅಂತಾ ನಾನು ಹೇಳಿದಾಗ ನನಗೆನು ಹೇಳತಿ ನನ್ನ ಹಾಟ್ಯಾ ಅಂತಾ ನನಗೆ ಕೈಯಿಂದ ಕಪಾಳ ಮೇಲೆ ಹೊಡೆದಳು. ಆಗ ನನ್ನ ತಮ್ಮನಾದ ಮಹಾಂತೇಶ ಈತನು ಹೊಡೆಯಬೇಡಾ ಅಂತಾ ಜಗಳ ಬಿಡಿಸಲು ಬಂದಾಗ ಆತನನ್ನು ಕೈಯಿಂದ ಎಡಗೈ ಮೇಲೆ ಹೊಡೆದು ನುಗಿಸಿದಳು ಆಗ ನನ್ನ ತಮ್ಮನ ಕೈಗೆ ತೇರಚಿದ ಗಾಯ ಹಾಗು ಗುಪ್ತ ಗಾಯ ವಾಗಿರುತ್ತದೆ. ಆಗ ನಾನು ನನ್ನ ತಮ್ಮ ನನ್ನು ಎಬ್ಬಿಸಲು ಹೊಗುತ್ತಿದ್ದಾಗ ನನ್ನನ್ನು ತಡೆದು ನಿಲ್ಲಿಸಿ ನನ್ನ ಬಲಗೈ ಮೇಲೆ ಹೊಡೆದು ನನ್ನ ಕಣ್ಣಿನ ಮೇಲೆ ಚೂರಿ ಗಾಯಮಾಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

20 November 2016

KALABURAGI DISTRICT REPORTED CRIMES

ಸುಲಿಗೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ. 19-11-2016 ರಂದು  ಶ್ರೀ ಗುರುಶಾಂತಪ್ಪ ತಂ. ಮಾಣಿಕಪ್ಪಾ ಶಾ:ಜಳಕಿ ರವರು ಹಾಜರಾಗಿ ದಿನಾಂಕ: 06/11/2016 ರಂದು ತನ್ನ ಮೋಟರ ಸೈಕಲ ಕೆಎ-32 ಕೆ-9215ನೇದ್ದರ ಮೇಲೆ ಕಲಬುರಗಿ ಕಡೆ ಬರುತ್ತಿರುವಾಗ ಸಾಯಂಕಾಲ 5-30 ಪಿಎಮ್ ಸುಮಾರಿಗೆ ಸಾವಳಗಿ ಕ್ರಾಸ್ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಾಗ ಹಿಂದಿನಿಂದ ಬರುತ್ತಿದ್ದ ಒಂದು ಮೋಟರ ಸೈಕಲ ನನ್ನ ಮೋಟರ ಸೈಕಲಗೆ ಓವರಟೇಕ ಮಾಡಿ ಮುಂದೆ ಬಂದು ಅಡ್ಡಲಾಗಿ ನಿಂತು ನನ್ನ ಮೋಟರ ಸೈಕಲ ನಿಲ್ಲಿಸಿ ಅದರಲ್ಲಿನ ಒಬ್ಬ ವ್ಯೆಕ್ತಿ ವಿನಾಃಕಾರಣ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆಯಲು ಬಂದಾಗ ನಾನು ಆತನಿಗೆ ತಡೆದಾಗ ಆತನ ಜೊತೆ ಇದ್ದ ಇನ್ನೊಬ್ಬ ವ್ಯೆಕ್ತಿ ತನ್ನ ಕೈಯಲ್ಲಿದ್ದ ಒಂದು ಕಟ್ಟಿಗೆಯಿಂದ ನನ್ನ ತಲೆಯ ಮೇಲೆ ಮತ್ತು ಎಡಗೈ ಮೋಳಕೈಗೆ, ಮುಂಗೈಗೆ ಹಾಗೂ ಎಡಗಾಲು ಮೋಣಕಾಲು ಕೆಳಗೆ ಹೊಡೆದು ಗಾಯಗೊಳಿಸಿ ನನ್ನ ಜೇಬಿನಲ್ಲಿದ್ದ 1) ನಗದು ಹಣ 43000/-ರೂ, 2) ನನ್ನ ಕೈಯಲ್ಲಿದ್ದ 10 ಗ್ರಾಂ ಬಂಗಾರದ ಬ್ರಾಸಲೇಟ ಅ.ಕಿ= 25000/-ರೂ 3) 10ಗ್ರಾಂ ಬಂಗಾರದ ಒಂದು ಕೊರಳಿನ ಚೈನ್ ಅ.ಕಿ= 25000/-ರೂ 4) ಒಂದು 20 ಗ್ರಾಂ ಬಂಗಾರದ ರುದ್ರಾಕ್ಷಿಯ ಸರ ಅ.ಕಿ= 50000/-ರೂ ಹಾಗು 5) ಒಂದು ಸ್ಯಾಮಸಂಗ ಮೋಬೈಲ್ ಅ.ಕಿ= 12000/-ರೂ ಹಾಗೂ ಎರಡು ಎಟಿಎಮ್ ಕಾರ್ಡಗಳು ಅ.ಕಿ= 00 ಹಿಗೆ ಒಟ್ಟು = 1,37,000/-ರೂ ಬೆಲೆಬಾಳುವುಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋಗಿದ್ದು . ನನಗೆ ಸುಲಿಗೆ ಮಾಡಿದ ಆಪಾದಿತರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದ.
ಹಲ್ಲೆ ಪ್ರಕರಣ:
ಗ್ರಾಮೀ ಪೊಲೀಸ್ ಠಾಣೆ: ದಿನಾಂಕ. 19-11-2016 ರಂದು  ಶ್ರೀ. ತಮ್ಮಣ್ಣಾ ತಂದೆ ಹಣಮಂತಪ್ಪಾ ತಾನಕುಮ ಸಾ;ಭಗತಸಿಂಗ ಚೌಕ ವಡ್ಡರ ಗಲ್ಲಿ ಕಲಬುರಗಿ ಇವರು ದಿನಾಂಕ. 17-11-2016 ರಂದು ತಮ್ಮ ಹೊಲಕ್ಕೆ ಹೋಗಿ ಕಂಟಿ ಸಫಾಯಿ ಮಾಡಿಸುತ್ತಿರುವಾಗ ಅಲ್ಲಿಗೆ ಬಂದ ಅಹಮದ ಕಲ್ಯಾಣಿ ಮತ್ತು ಶಾಕೀರ ಕಲ್ಯಾಣಿ  ಮತ್ತು ಅವರ ಸಂಗಡ ಇನ್ನೂ 4-5 ಜನ  ಮೋಟಾರ ಸೈಕಲಗಳ ಮೇಲೆ ನಮ್ಮ ಹೊಲದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಬಂದು  ಅಹಮದ ಕಲ್ಯಾಣಿ ಈತನು ಮಗನೆ ಈ ಹೊಲ ನಮಗೆ ಬಿಟ್ಟು ಕೊಡಬೇಕು ಇಲ್ಲಿ ನೀನು ಯಾವುದೇ ಕೆಲಸ ಮಾಡಬಾರದು  ಮತ್ತು ಕಾಲ ಇಡಬಾರದು  ಎನ್ನುತ್ತಾ ಅವಾಚ್ಯ ಶಬ್ದಗಳಿಂದ ಬೈಯ್ದು  ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ನನ್ನ ಎದೆಯ ಮೇಲೆ ಮುಷ್ಠಿ ಮಾಡಿ ಹೊಡೆದನು  ಮತ್ತು ಶಾಕೀರ ಕಲ್ಯಾಣಿ  ಮತ್ತು ಅವರ ಸಂಗಡ ಇದ್ದ ಜನ ಸಹ ನನಗೆ ಕೈಯಿಂದ ಹೊಡೆದು ಕೆಳಗೆ ಹಾಕಿ ಒದೆಯುತ್ತಿರುವಾಗ ನಾನು ಕೆಳಗೆ ಬಿದ್ದು ಚೀರಾಡುವಾಗ ಶಬ್ದಕೇಳಿ ಮುನಸರ ಚಾವುಸ್ ಮತ್ತು ವಸೀಮ ಎಂಬುವವರು ಓಡಿ ಬರುವಷ್ಟರಲ್ಲಿ ನಿನಗೆ ಜೀವ ಸಹೀತ ಬಿಡುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊರಳ್ಳಲಾಗಿದೆ.
ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ 18.11.2016 ರಂದು ಶ್ರೀ ಬುರಾನ್ ಸಾಬ ತಂ. ಹುಸೇನ್ ಸಾಬ ಸಾ: ಸೊಂತ ರವರು ಮರಮಂಚಿ ಗ್ರಾಮದಿಂದ ಸೊಂತ ಗ್ರಾಮಕ್ಕೆ ಬರುವ ಕುರಿತು ಮರಮಂಚಿ ಗ್ರಾಮದ ಬಸ್ಸ ನಿಲ್ದಾಣದಿಂದ ಮಹಿಂದ್ರಾ ಕಮಾಂಡರ ಜೀಪ ನಂ ಕೆಎ 28 ಎಮ್ 1603 ನೇದರಲ್ಲಿ ಕುಳಿತು ಹೋಗುತ್ತಿರುವಾಗ ಸದರಿ ಜೀಪ ಚಾಲಕ ಮಹಾದೇವನು ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಯಿಸಿಕೊಂಡು ಹೋಗುತ್ತಿರುವಾಗ ನಾನು ಮತ್ತು ಜೀಪಿನಲ್ಲಿ ಕುಳಿತ ಕೆಲವು ಜನ ಜೀಪ ಚಾಲಕ ಮಹಾದೇವನಿಗೆ, ಜೀಪನ್ನು ನಿಧಾನವಾಗಿ ನಡೆಯಿಸಿಕೊಂಡು ಹೋಗಲು ತಿಳಿಸಿದರು ಸಹ ನಮ್ಮ ಮಾತನ್ನು ಕೇಳದೆ ಅದೇ ವೇಗದಲ್ಲಿ ಜೀಪನ್ನ ಚಲಾಯಿಸುತ್ತಾ ಹೊನ್ನಳ್ಳಿ ಕ್ರಾಸ ಹತ್ತಿರ ಎದರುಗಡೆಯಿಂದ ಬರುತ್ತಿದ್ದ ಟಂಟಂ ಅಟೊಕ್ಕೆ ಒಮ್ಮಲೆ ಕಟ್ ಮಾಡಲು ಹೋಗಿ ಜೀಪನ್ನು ರಸ್ತೆಯ ಪಕ್ಕದಲ್ಲಿರುವ ತಗ್ಗಿನಲ್ಲಿ ಹಾಕಿದ್ದು ಆಗ ಜೀಪಿನಲ್ಲಿದ್ದ ನಾನು ಮತ್ತು ನನ್ನ ಪಕ್ಕದಲ್ಲಿ ಕಿಳಿತಿದ್ದ ವ್ಯೆಕ್ತಿ ಕೆಳಗೆ ಬಿದ್ದು ನನ್ನ ಬಲಗಾಲ ತೊಡೆಗೆ ಭಾರಿ ಒಳಪೇಟ್ಟಾಗಿ ಕಾಲು ಮುರಿದಿದ್ದು. ಸದರಿ ಜೀಪ ಚಾಲಕನವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 

19 November 2016

Kalaburagi District Reported Crimes

ಬಾಲ್ಯ ವಿವಾಹ ಮಾಡುತ್ತಿದ್ದವರ ಬಂಧನ :
ಮಹಿಳಾ ಠಾಣೆ : ಶ್ರೀ ಚಿಕ್ಕವೇಂಕಟರಮಣಪ್ಪ ಜಿಲ್ಲಾ ಮಕ್ಕಳ ರಕ್ಷಣಾಧೀಕಾರಿಗಳು (ಪ್ರಭಾರ) ಜಿಲ್ಲಾ ಮಕ್ಕಳ ರಕ್ಷಣಾ ಘಟಕ  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಲಬುರಗಿರವರು ದಿನಾಂಕ: 17/11/2016 ಸಂಜೆ 8 ಗಂಟೆಗೆ ಕರೆ ಬಂದ ಹಿನ್ನೆಯಲ್ಲಿ ಎಸ್.ಟಿ.ಬಿ.ಟಿ ಬಳಿಯ ಆಶ್ರಯ ಕಾಲೋನಿಯಲ್ಲಿ ಸುಮಾರು 15 ರಿಂದ 16 ವರ್ಷದೊಳಗಿನ ಬಾಲಕಿಯಾದ ಕುಮಾರಿ ಶರಣಮ್ಮಾ ತಂದೆ ದಿ|| ಶರಣಪ್ಪಾ ಯಡ್ರಾಮಿ ತಾಯಿ ಲಕ್ಕಮ್ಮಾ ಇವಳ  ಮದುವೆಯನ್ನು ಗುಜರಾತಿನ ಜಾಮ ನಗರದ ರಾಕೇಶ ಜೊತೆ ಈತನ ಜೊತೆ ದಿನಾಂಕ: 18/11/2016 ಮದುವೆ ಏರ್ಪಡಿಸಲಾಗಿತ್ತು  ಸದರಿ ಮದುವೆಯು ಬಾಲ್ಯ ವಿವಾಹವಾಗಿದ್ದಲ್ಲದೇ 30 ಸಾವಿರ ರೂಪಾಯಿ ಕೊಟ್ಟು ದೈಹಿಕ ಸಂಬೋಗ ಮಾಡುವ ಉದ್ದೇಶದಿಂದ ಅಪ್ರಾಪ್ತಬಾಲಕಿಯನ್ನು ಅನೈತಿಕವಾಗಿ ಬೇರೆ ರಾಜ್ಯಕ್ಕೆ ಸಾಗಣಿಕೆ ಮಾಡುವುದು ಕಂಡು ಬಂದಿದೆ ಹಾಗು ಇದಕ್ಕೆ ಮದ್ಯವರ್ತಿಯಾಗಿ ಶಾಹೇದಾ ಗಂಡ ಶೇಖ ದಸ್ತಗಿರ ಈಕೆ ಮದ್ಯಸ್ಥಿಕೆಯಿಂದ   ಗುಜರಾತಿನ ರಾಕೇಶ 1) ಉಮೇದ 2) ಚೆಕ್ಕುದಾಸ 3) ಕಾಂಜಿ 4) ಶಾಂತಲಾಲ ಇವರು ಈ ಒಂದು ಅಪರಾಧದಲ್ಲಿ ಬಾಗಿಯಾಗಿ ಇವರ ಮದ್ಯವರ್ತಿಯಾದ ಶಾಹೇದಾ ಗಂಡ ದಸ್ತಿಗಿರ ಸಹಾಯ ಎಸ್.ಟಿ.ಪಿ.ಬಿ  ಸಂತ್ರಾಸವಾಡಿ ಆಶ್ರಯ ಕಾಲೋನಿಯಿಂದ ಬಾಲಕಿಯನ್ನು ರಕ್ಷಿಸಿ ನೇರವಾಗಿ ರಾಣೇಶಪೀರ ದರ್ಗಾಬಳಿಯಿಂದ ಬಾಲಕಿಯ ತಾಯಿಯನ್ನು ಕರೆದುಕೊಂಡು ಅಲ್ಲಿಂದ ದರ್ಗಾಬಳಿಯ ಕೆ.ಬಿ.ಎನ್. ಮದ್ಯವರ್ತಿಯ ಮನೆಗೆ ತೆರಳಿ ಆಕೆಯನ್ನು ಕರೆದುಕೊಂಡು ಗುಜರಾತಿನ 5 ಜನರನ್ನು ಕೆ.ಬಿ.ಎನ್ ದರ್ಗಾ ಬಳಿಯ ನೂರ ಲಾಡ್ಜದಿಂದ ಇವರನ್ನು ಕರೆದುಕೊಂಡು ಬರಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡಿಸಿ ವಿಷಯವನ್ನು ಪರಿಶೀಲಿಸಿ ಸೂಕ್ತ ಕಾಯ್ದೆ ಅಡಿ ದೂರು ದಾಖಲಿಸಿಕೊಳ್ಳಲು ಹಾಗೂ ಅದರ ಜೊತೆ ಸದರಿ ಬಾಲಕಿ ಅಪ್ರಾಪ್ತ ಹಾಗು ಪರಿಶೀಷ್ಟ ಜಾತಿಯವಳಾಗಿದ್ದು ಎಸ್.ಸಿ./ಎಸ್.ಟಿ ಕಾಯ್ದೆ ಪೋಸ್ಕೋ ಕಾಯ್ದೆ ಬಾಲ್ಯ ವಿವಾಹ ನಿಷೇದ ಕಾಯ್ದೆ ಹಾಗು ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಣಿಕೆ ತಡೆ ಕಾಯ್ದೆ ಪ್ರಕರಣ ದಾಖಲಿಸಿಕೊಳ್ಳಲು ಕೊರಿರುವದಂದ ಸದರಿ ಪಿರ್ಯಾದಿ ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸ್ವಪ್ನಾ ಗಂಡ ರಾಜಶೇಖರ ಮಂಗಲಗಿ ಸಾ: ವಿಜಯ ನಗರ ಕಾಲನಿ ಆಳಂದ ರೋಡ ಕಲಬುರಗಿ ಇವರನ್ನು ದಿನಾಂಕ 28.12.2013 ರಂದು ನಮ್ಮ ತಂದೆ ತಾಯಿಯವರು ಕಲಬುರಗಿಯ ರಾಜಶೇಖರ ಇವರೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ನಂತರ ನನ್ನ ಗಂಡ ನನಗೆ ತಾನು ಕೆಲಸ ಮಾಡುವ ಗುಜರಾತಿನ ವಡೋದರಾಗೆ ಕರೆದುಕೊಂಡು ಹೋಗಿದ್ದು ಇರುತ್ತದ.ಅಲ್ಲಿ ನನ್ನ ಗಂಡ ನನಗೆ ವಿನಾಕಾರಣ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದರು.ನನ್ನ ಗಂಡ ರಾಜಶೇಖರ  ಕುಟುಂಬದ ಸದಸ್ಸರಾದ ಮಾವ ಶಿವಶರಣಪ್ಪ ಅತ್ತೆ ಪುಷ್ವಾವತಿ ಭಾವಂದಿರಾದ ಶಿವರಾಜ,ಶಶಿಧರ ನಾದಿನಿಯರಾದ ರಾಜೇಶ್ವರಿ,ಶೀಲಾ ಸುನಂದಾ,ಸರು ಹಾಗೂ ನಾದಿನಿಯ ಗಂಡಂದಿರಾದ ಕರಬಸಪ್ಪ,ಸತೀಶ, ರಾಜು ಸಿದ್ದು ಹಾಗೂ ನಾದಿನಿಯರ ಮಕ್ಕಳಾದ ಅಭೀಷೇಕ ಮತ್ತು ವಿನಿತಾ ಇವರೆಲ್ಲರೂ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ನನ್ನ ಗಂಡ ರಾಜಶೇಖರ ಇತನು ಕಲಬುರಗಿಯಲ್ಲಿದ್ದಾಗ ನನ್ನ ಗಂಡ ನನಗೆ ಮನ ಬಂದಂತೆ ಹೊಡೆಯುತ್ತಿದ್ದರು. ನನ್ನ ಅತ್ತೆ ಪುಷ್ಪಾವತಿ ನನ್ನ ಗಂಡ ರಾಜಶೇಖರ 1 ವರೆ ವರ್ಷದಿಂದ ಅವರು ಎಲ್ಲಿ ಇರುತ್ತಾರೆ ಎಂಬುವುದು ನನಗೆ ಗೊತ್ತಿರುವದಿಲ್ಲ ನನ್ನ ಗಂಡ ನನಗೆ ಓನವೆ ಡಿವರ್ಸ (ವಿವಾಹ ವಿಚ್ಚೇದನ) ಮಾಡಿದ್ದಾರೆ. 9 ತಿಂಗಳಿಂದ ನನ್ನ ಮಾವ ಶಿವಶರಣಪ್ಪ ಇವರು ಕೂಡ ಮನೆ ಬಿಟ್ಟು ಹೋಗಿರುತ್ತಾರೆ, ದಿನಾಂಕ 16.11.2016 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಯಾರೋ 3,4 ಜನರು ಬಂದು ನಮ್ಮ ಮನೆಯ ಕಂಪೌಂಡ ಜಿಗಿದು ನನಗೆ ಕೇಸ್ ವಾಪಾಸ್ಸು ತೆಗೆದುಕೋ ಅಂತಾ ಬೆದರಿಕೆ ಹಾಕಿ ಮನೆಯ ಬಾಗಿಲು ಮುರಿದು ಅಲ್ಲಿಂದ ಪರಾರಿಯಾದರು. ಕಾರಣ ಮದುವೆ ಆದಾಗಿನಿಂದ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟ ಮೇಲೆ ನಮೂದ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ:- 17/11/2016 ರಂದು ಗುರುವಾರದಂದು ಆಳಂದ ಪಟ್ಟಣದ ಸಂತೆ ಇರುವುದರಿಂದ ಸಂತೆ ಮಾಡಲು ನಾನು ಮತ್ತು ನಮ್ಮೂರಿನ ಶಿವಲಿಂಗಪ್ಪ ತಂದೆ ಮಹಾಂತಪ್ಪ ಇಂಬ್ರಾಂಪೂರ, ಗುಂಡಪ್ಪ ತಂದೆ ಶ್ರೀಮಂತರಾಯ ಕೊಗನೂರ, ಹಣಮಂತ ತಂದೆ ಬಸಣ್ಣ ಟೆಂಗಳಿ ಕೂಡಿಕೊಂಡು ನಮ್ಮೂರಿನ ಶಾಬುದ್ದಿನ್ ತಂದೆ ಫತ್ರುಸಾಬ ಕುಮಸಿ ಈತನಿಗೆ ಸಂಬಂಧಿಸಿದ ಗುಡ್ಸ್ ಟಂ.ಟಂ ವಾಹನ ಸಂ. ಕೆಎ32 ಬಿ-2453 ಇದರಲ್ಲಿ ನಾವೆಲ್ಲರು ಕುಳಿತು ನಮ್ಮೂರಿನಿಂದ ಆಳಂದಕ್ಕೆ ಇಂದು ಬೆಳಿಗ್ಗೆ 9 ಗಂಟೆಗೆ ಹೋಗಿದ್ದು ಆಗ ಟಂ.ಟಂ ಚಾಲಕ ಆದ ಶಾಬುದ್ದಿನ್ ಕುಮಸಿ ಈತನು ತನ್ನ ಫೈಜಾನ ಎಂಬ ಮಗನಿಗೆ ಸಂಗಡ ವಾಹನದಲ್ಲಿ ಕರೆದುಕೊಂಡು ಬಂದಿದ್ದನು ಆಳಂದಲ್ಲಿ ನಮ್ಮೆಲ್ಲರ ಸಂತೆ ಮುಗಿದ ನಂತರ ಮತ್ತೆ ಮರಳಿ ಅದೇ ಟಂ.ಟಂ ವಾಹನದಲ್ಲಿ ನಾವೆಲ್ಲರೂ ಕುಳಿತು ಆಳಂದ ದಿಂದ ಸುಮಾರು 12:45 ಗಂಟೆ ಸುಮಾರಿಗೆ ಆಳಂದ ಬಿಟ್ಟು ಆಲೂರ(ಬಿ)ಗೆ ಬರುವಾಗ ಆಳಂದ ಬಸ್ ನಿಲ್ದಾಣದ ಹತ್ತಿರ ಸುಂಟನೂರ ಗ್ರಾಮದ ಸಿದ್ದಮಲ್ಲಪ್ಪ ಎಂಬುವವರು ನಮ್ಮೊಂದಿಗೆ ನಮ್ಮ ವಾಹನದಲ್ಲಿ ಕುಳಿತುಕೊಂಡರು ನಮ್ಮ ಟಂ.ಟಂ ವಾಹನವು ಶಾಬುದ್ದಿನ್ ಕುಮಸಿ ಈತನು ಚಲಾಯಿಸಿಕೊಂಡು ಆಳಂದ ಕಲಬುರಗಿ ರೋಡಿನಲ್ಲಿ ಬರುತ್ತಿದ್ದಾಗ ಲಾಡ ಚಿಂಚೋಳಿ ಕ್ರಾಸ್ ದಾಟಿ ಮುಂದೆ ನೆಲ್ಲೂರ ಗ್ರಾಮದ ಕ್ರಾಸ್ ದಾಟಿದ ನಂತರ ನಮ್ಮ ಎದರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯ ಉಂಟು ಮಾಡುವ ಹಾಗೇ ಚಲಾಯಿಸಿಕೊಂಡು ಬಂದು ಎಡಬದಿಯಿಂದ ಹೋಗುತ್ತಿದ್ದ ನಮ್ಮ ಟಂ.ಟಂ ವಾಹನಕ್ಕೆ ಒಮ್ಮೆಲೇ ಡಿಕ್ಕಿ ಪಡಿಸಿದನು ಅದರಿಂದ ನಮ್ಮ ಟಂ.ಟಂ ವಾಹನ ಪಲ್ಟಿಯಾಗಿ ಬಿದ್ದುದ್ದರಿಂದ ನನಗೆ ಬೆನ್ನಿಗೆ, ಬಲಗೈಗೆ ರಕ್ತ ಮತ್ತು ಗುಪ್ತ ಗಾಯವಾಗಿರುತ್ತದೆ, ನನ್ನಂತೆ ವಾಹನದಲ್ಲಿದ್ದ ಶಿವಲಿಂಗಪ್ಪ ಇಂಬ್ರಾಂಪೂರ ಇವರ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಮತ್ತು ಗುಂಡಪ್ಪ ಕೊಗನೂರ ಹಣಮಂತ ಟೆಂಗಳಿ ಸಿದ್ದಮಲ್ಲಪ್ಪ ಹಾಗೂ ಟಂ.ಟಂ ವಾಹನದ ಚಾಲಕನಾದ ಶಾಬುದ್ದಿನ್ ಕುಮಸಿ ಮತ್ತು ಅವನ ಮಗ ಫೈಜಾನ ಕುಮಸಿ ಇವರೆಲ್ಲರಿಗು ಭಾರಿ ರಕ್ತ ಮತ್ತು ಗುಪ್ತ ಗಾಯಗಳಾಗಿರುತ್ತವೆ,  ಅಂತಾ ಶ್ರೀ ಖಾಸಿಂ ಸಾಬ @ ಬಾಬು ತಂದೆ ಅಬ್ದುಲ ಸಾಬ ಮುಲ್ಲಾ ಸಾ: ಆಲೂರ(ಬಿ)  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ  17-11-16 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮ ಅನೀಲ, ತಂಗಿ ಭಾಗಮ್ಮ, ಮೂವರು ಕೂಡಿಕೊಂಡು ರೋಡಿನ ಸೈಡಿನಿಂದ ನಡೆದುಕೊಂಡು ನನ್ನ ತಂಗಿಯಾದ  ಭಾಗಮ್ಮಳಿಗೆ ಶಾಲೆಗೆ ಬಿಡಲು ಹೋಗುತ್ತಿದ್ದೇವು. ಮುಂಜಾನೆ 9-30 ಗಂಟೆಗೆ ಸಿಂದಗಿ-ಜೇವರಗಿ ಮೇನ ರೋಡ  ಜೇವರಗಿ ಹೋರವಲಯದ ಎನ್.ಬಿ.ಲೇಔಟ್ ಹತ್ತಿರ ರೋಡಿನ ಸೈಡಿನಿಂದ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಹಿಂದುಗಡೆ ಅಂದರೆ ಸಿಂದಗಿ ರೋಡಿನ ಕಡೆಯಿಂದ ಒಂದು ಬಿಳಿ ಬಣ್ಣದ ಕಾರಿನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಮ್ಮನಾದ ಅನೀಲ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ತಮ್ಮ ಕೆಳಗೆ ಬಿದ್ದನು, ನಂತರ ಅಲ್ಲಿಯೇ ಇದ್ದ ಗಂಗಾರಾಮ ಇತನು ಓಡಿ ಬಂದಾಗ ನಾನು ಮತ್ತು ನನ್ನ ತಂಗಿ ಹಾಗೂ ಗಂಗಾರಾಮ ಮೂವರು ಕೂಡಿ ನನ್ನ ತಮ್ಮನಿನೆ ನೋಡಲಾಗಿ ಅಪಘಾತದಲ್ಲಿ ಅವನಿಗೆ ಎಡ ಮೇಲಕಿಗೆ, ಕಣ್ಣಿಗೆ, ಗದ್ದಕ್ಕೆ, ಎಡಕಪಾಳ ಮೇಲೆ ಎಡಭುಜದ ಮೇಲೆ, ಟೊಂಕದ ಮೇಲೆ ರಕ್ತಗಾಯವಾಗಿ ತಲೆಗೆ ಭಾರಿ ಗುಪ್ತಪೆಟ್ಟಾಗಿ ಮೂಗಿನಿಂದ ರಕ್ತ ಬರುತ್ತಿತ್ತು, ನಂತರ ಕಾರ ನಂಬರ ನೋಡಲಾಗಿ ಕೆಎ-32,ಸಿ-5714 ನೇದ್ದು ಇತ್ತು. ಅದರ ಚಾಲಕನಿಗೆ ನೋಡಲಾಗಿ ನಮ್ಮೂರ ಶಾಂತವೀರ ಪಾಟೀಲಿ ಇದ್ದು ಜನರು ಸೇರು ತ್ತಿದ್ದ ಹಾಗೆ ಅವನು ತನ್ನ ಕಾರನೊಂದಿಗೆ ಓಡಿ ಹೋದನು. ನಂತರ ನಾನು ಮತ್ತು ಗಂಗಾರಾಮ ಹಾಗೂ ಇತರರೂ ಕೂಡಿ ನನ್ನ ತಮ್ಮನಿಗೆ  ರೋಡಿನಲ್ಲಿ ಬರುತ್ತಿದ್ದ ಒಂದು ಅಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೇವು ಆಸ್ಪತ್ರೆಯಲ್ಲಿ 10-15 .ಎಮ್ ಕ್ಕೆ ನನ್ನ ತಮ್ಮ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಶಿವುಕುಮಾರ ತಂದೆ ರಾಜು ಕಲ್ಲೂರ ಸಾ:ಓಂ ನಗರ ಜೇವರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ನಾಗಯ್ಯ ತಂದೆ ಶಿವಶರಣಯ್ಯಾ ಮಟಪತಿ ಸಾ ದೇವಿ ನಗರ ಕಲಬುರಗಿ ರವರು ದಿನಾಂಕ:08/11/2016 ರಂದು ಟಿ.ವಿ.ಎಸ್‌‌ ಜುಪೀಟರ್‌‌ ಡಿಸ್ಕ್‌‌ ಮೋಟಾರ ಸೈಕಲ ಕಲಬುರಗಿ ನಗರದ ಎಸ್‌‌.ಕೆ ಆಟೋಮೊಬೈಲ್ಸ್‌ದಲ್ಲಿ ಖರೀದಿ ಮಾಡಿರುತ್ತೇನೆ. ಇನ್ನೂ ಅದಕ್ಕೆ ಆರ್‌‌.ಟಿ.ಓ ಆಫೀಸನಲ್ಲಿ ನೊಂದಣಿ ಮಾಡಿಸಿರುವದಿಲ್ಲಾ.ಅದರ TP NO.KA32TP024635 ನೇದ್ದು ಇದ್ದು ಅದರ CHASSIS NO.MD626BG46G1K15049, ENGINE NO.BG4KG1708851 ಇರುತ್ತದೆ. ದಿನಾಂಕ:14/11/2016 ರಂದು ಸಾಯಂಕಾಲ 3.00 ಗಂಟೆ ಸುಮಾರಿಗೆ ನಾನು ಈ ಮೋಟಾರ ಸೈಕಲನ್ನು ನನ್ನ ಮನೆಯ ಕಂಪೌಂಡ ಒಳಗಡೆ ನಿಲ್ಲಿಸಿ ನಮ್ಮ ಸ್ವಂತ ಊರಾದ ಆಳಂದ ತಾಲ್ಲೂಕಿನ ಕಣಮಸ ಗ್ರಾಮಕ್ಕೆ ಜಾತ್ರೆ ಸಂಬಂಧ ನನ್ನ ಕುಟುಂಬದೊಂದಿಗೆ ಹೋಗಿರುತ್ತೆನೆ. ದಿನಾಂಕ:17/11/2016 ರಂದು ಮಧ್ಯಾನ 12.00 ಗಂಟೆಗೆ ನಾನು ಮನೆಗೆ ಬಂದು ನೋಡಲು ನನ್ನ ಮೋಟಾರ ಸೈಕಲ ಇರಲಿಲ್ಲಾ ನಾನು ಅಲ್ಲಲ್ಲಿ ಹುಡುಕಾಡಿದರು ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.