ಸುಲಿಗೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:
ದಿನಾಂಕ.
19-11-2016 ರಂದು ಶ್ರೀ ಗುರುಶಾಂತಪ್ಪ ತಂ.
ಮಾಣಿಕಪ್ಪಾ ಶಾ:ಜಳಕಿ ರವರು ಹಾಜರಾಗಿ ದಿನಾಂಕ: 06/11/2016 ರಂದು ತನ್ನ ಮೋಟರ ಸೈಕಲ ಕೆಎ-32
ಕೆ-9215ನೇದ್ದರ ಮೇಲೆ ಕಲಬುರಗಿ ಕಡೆ ಬರುತ್ತಿರುವಾಗ ಸಾಯಂಕಾಲ 5-30 ಪಿಎಮ್ ಸುಮಾರಿಗೆ ಸಾವಳಗಿ
ಕ್ರಾಸ್ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಾಗ ಹಿಂದಿನಿಂದ ಬರುತ್ತಿದ್ದ ಒಂದು ಮೋಟರ ಸೈಕಲ ನನ್ನ
ಮೋಟರ ಸೈಕಲಗೆ ಓವರಟೇಕ ಮಾಡಿ ಮುಂದೆ ಬಂದು ಅಡ್ಡಲಾಗಿ ನಿಂತು ನನ್ನ ಮೋಟರ ಸೈಕಲ ನಿಲ್ಲಿಸಿ
ಅದರಲ್ಲಿನ ಒಬ್ಬ ವ್ಯೆಕ್ತಿ ವಿನಾಃಕಾರಣ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆಯಲು ಬಂದಾಗ ನಾನು
ಆತನಿಗೆ ತಡೆದಾಗ ಆತನ ಜೊತೆ ಇದ್ದ ಇನ್ನೊಬ್ಬ ವ್ಯೆಕ್ತಿ ತನ್ನ ಕೈಯಲ್ಲಿದ್ದ ಒಂದು ಕಟ್ಟಿಗೆಯಿಂದ
ನನ್ನ ತಲೆಯ ಮೇಲೆ ಮತ್ತು ಎಡಗೈ ಮೋಳಕೈಗೆ, ಮುಂಗೈಗೆ ಹಾಗೂ ಎಡಗಾಲು ಮೋಣಕಾಲು ಕೆಳಗೆ ಹೊಡೆದು
ಗಾಯಗೊಳಿಸಿ ನನ್ನ ಜೇಬಿನಲ್ಲಿದ್ದ 1) ನಗದು ಹಣ 43000/-ರೂ, 2) ನನ್ನ ಕೈಯಲ್ಲಿದ್ದ 10 ಗ್ರಾಂ
ಬಂಗಾರದ ಬ್ರಾಸಲೇಟ ಅ.ಕಿ= 25000/-ರೂ 3) 10ಗ್ರಾಂ ಬಂಗಾರದ ಒಂದು ಕೊರಳಿನ ಚೈನ್ ಅ.ಕಿ=
25000/-ರೂ 4) ಒಂದು 20 ಗ್ರಾಂ ಬಂಗಾರದ ರುದ್ರಾಕ್ಷಿಯ ಸರ ಅ.ಕಿ= 50000/-ರೂ ಹಾಗು 5) ಒಂದು
ಸ್ಯಾಮಸಂಗ ಮೋಬೈಲ್ ಅ.ಕಿ= 12000/-ರೂ ಹಾಗೂ ಎರಡು ಎಟಿಎಮ್ ಕಾರ್ಡಗಳು ಅ.ಕಿ= 00 ಹಿಗೆ ಒಟ್ಟು =
1,37,000/-ರೂ ಬೆಲೆಬಾಳುವುಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋಗಿದ್ದು . ನನಗೆ ಸುಲಿಗೆ
ಮಾಡಿದ ಆಪಾದಿತರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ
ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ.
19-11-2016 ರಂದು ಶ್ರೀ. ತಮ್ಮಣ್ಣಾ ತಂದೆ
ಹಣಮಂತಪ್ಪಾ ತಾನಕುಮ ಸಾ;ಭಗತಸಿಂಗ ಚೌಕ ವಡ್ಡರ ಗಲ್ಲಿ ಕಲಬುರಗಿ ಇವರು ದಿನಾಂಕ. 17-11-2016
ರಂದು ತಮ್ಮ ಹೊಲಕ್ಕೆ ಹೋಗಿ ಕಂಟಿ ಸಫಾಯಿ ಮಾಡಿಸುತ್ತಿರುವಾಗ ಅಲ್ಲಿಗೆ ಬಂದ ಅಹಮದ ಕಲ್ಯಾಣಿ
ಮತ್ತು ಶಾಕೀರ ಕಲ್ಯಾಣಿ ಮತ್ತು ಅವರ ಸಂಗಡ ಇನ್ನೂ
4-5 ಜನ ಮೋಟಾರ ಸೈಕಲಗಳ ಮೇಲೆ ನಮ್ಮ ಹೊಲದಲ್ಲಿ ಅತೀಕ್ರಮಣ
ಪ್ರವೇಶ ಮಾಡಿ ಬಂದು ಅಹಮದ ಕಲ್ಯಾಣಿ ಈತನು ಮಗನೆ
ಈ ಹೊಲ ನಮಗೆ ಬಿಟ್ಟು ಕೊಡಬೇಕು ಇಲ್ಲಿ ನೀನು ಯಾವುದೇ ಕೆಲಸ ಮಾಡಬಾರದು ಮತ್ತು ಕಾಲ ಇಡಬಾರದು ಎನ್ನುತ್ತಾ ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ನನ್ನ ಎದೆಯ
ಮೇಲೆ ಮುಷ್ಠಿ ಮಾಡಿ ಹೊಡೆದನು ಮತ್ತು ಶಾಕೀರ
ಕಲ್ಯಾಣಿ ಮತ್ತು ಅವರ ಸಂಗಡ ಇದ್ದ ಜನ ಸಹ ನನಗೆ
ಕೈಯಿಂದ ಹೊಡೆದು ಕೆಳಗೆ ಹಾಕಿ ಒದೆಯುತ್ತಿರುವಾಗ ನಾನು ಕೆಳಗೆ ಬಿದ್ದು ಚೀರಾಡುವಾಗ ಶಬ್ದಕೇಳಿ
ಮುನಸರ ಚಾವುಸ್ ಮತ್ತು ವಸೀಮ ಎಂಬುವವರು ಓಡಿ ಬರುವಷ್ಟರಲ್ಲಿ ನಿನಗೆ ಜೀವ ಸಹೀತ ಬಿಡುವದಿಲ್ಲಾ
ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊರಳ್ಳಲಾಗಿದೆ.
ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್
ಠಾಣೆ: ದಿನಾಂಕ 18.11.2016
ರಂದು ಶ್ರೀ ಬುರಾನ್ ಸಾಬ ತಂ. ಹುಸೇನ್ ಸಾಬ ಸಾ: ಸೊಂತ ರವರು ಮರಮಂಚಿ ಗ್ರಾಮದಿಂದ ಸೊಂತ
ಗ್ರಾಮಕ್ಕೆ ಬರುವ ಕುರಿತು ಮರಮಂಚಿ ಗ್ರಾಮದ ಬಸ್ಸ ನಿಲ್ದಾಣದಿಂದ ಮಹಿಂದ್ರಾ ಕಮಾಂಡರ ಜೀಪ ನಂ ಕೆಎ
28 ಎಮ್ 1603 ನೇದರಲ್ಲಿ ಕುಳಿತು ಹೋಗುತ್ತಿರುವಾಗ ಸದರಿ ಜೀಪ ಚಾಲಕ ಮಹಾದೇವನು
ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಯಿಸಿಕೊಂಡು ಹೋಗುತ್ತಿರುವಾಗ ನಾನು ಮತ್ತು
ಜೀಪಿನಲ್ಲಿ ಕುಳಿತ ಕೆಲವು ಜನ ಜೀಪ ಚಾಲಕ ಮಹಾದೇವನಿಗೆ, ಜೀಪನ್ನು ನಿಧಾನವಾಗಿ
ನಡೆಯಿಸಿಕೊಂಡು ಹೋಗಲು ತಿಳಿಸಿದರು ಸಹ ನಮ್ಮ ಮಾತನ್ನು ಕೇಳದೆ ಅದೇ ವೇಗದಲ್ಲಿ ಜೀಪನ್ನ ಚಲಾಯಿಸುತ್ತಾ
ಹೊನ್ನಳ್ಳಿ ಕ್ರಾಸ ಹತ್ತಿರ ಎದರುಗಡೆಯಿಂದ ಬರುತ್ತಿದ್ದ ಟಂಟಂ ಅಟೊಕ್ಕೆ ಒಮ್ಮಲೆ ಕಟ್ ಮಾಡಲು
ಹೋಗಿ ಜೀಪನ್ನು ರಸ್ತೆಯ ಪಕ್ಕದಲ್ಲಿರುವ ತಗ್ಗಿನಲ್ಲಿ ಹಾಕಿದ್ದು ಆಗ ಜೀಪಿನಲ್ಲಿದ್ದ ನಾನು ಮತ್ತು
ನನ್ನ ಪಕ್ಕದಲ್ಲಿ ಕಿಳಿತಿದ್ದ ವ್ಯೆಕ್ತಿ ಕೆಳಗೆ ಬಿದ್ದು ನನ್ನ ಬಲಗಾಲ ತೊಡೆಗೆ ಭಾರಿ
ಒಳಪೇಟ್ಟಾಗಿ ಕಾಲು ಮುರಿದಿದ್ದು. ಸದರಿ ಜೀಪ ಚಾಲಕನವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment