POLICE BHAVAN KALABURAGI

POLICE BHAVAN KALABURAGI

13 July 2016

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12/07/2016 ರಂದು ಭೂಸನೂರ ಗ್ರಾಮದ ಬಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ನಾನು ಈ ಬಗ್ಗೆ ಮಾನ್ಯ ಪಿ.ಡಿ ಗಜಕೋಶ ಡಿ.ಎಸ್.ಪಿ ಸಾಹೇಬ ಆಳಂದ, ಮಾನ್ಯ ಭಾಷು ಚವ್ಹಾಣ ಸಿಪಿಐ ಆಳಂದ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಭೂಸನೂರ ಗ್ರಾಮಕ್ಕೆ ಹೋಗಿ ಬಸ ನಿಲ್ದಾಣದ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಬಸ ನಿಲ್ದಾಣದ ಮುಂದೆ ಡಾಂಬರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರಿಗೆ ಕೂಗತ್ತಾ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಆತನು ತನ್ನ ಹೆಸರು ಗೈಬಗಿರಿ ತಂದೆ ಗೋವಿಂದಗಿರಿ ಗೋಸಾಯಿ ಸಾ|| ಭೂಸನೂರ ಅಂತ ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 1110/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ಜಪ್ತಿಮಾಡಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 11-07-2016 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಶರಣಕುಮಾರ ಮತ್ತು ಅವರ ತಾಯಿಯಾದ ಪಾರ್ವತಿ ಇಬ್ಬರು ಸುಪರ ಮಾರ್ಕೆಟಕ್ಕೆ ಹೋಗುವ ಕುರಿತು ನಾನು ಚಲಾಯಿಸುತ್ತಿರುವ ಮೋಟಾರ ಸೈಕಲ ನಂ ಕೆಎ-32-ಹೆಚ್-4342 ನೇದ್ದರ ಹಿಂದುಗಡೆ ನನ್ನ ತಾಯಿಯವರೆಗೆ ಕೂಡಿಸಿಕೊಂಡು ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಸುಪರ ಮಾರ್ಕೆಟಕ್ಕೆ ಹೋಗಿ ಮರಳಿ ಮನೆಗೆ ಹೋಗುವ ಕುರಿತು ನಾನು ಮೋಟಾರ ಸೈಕಲ ಚಲಯಿಸಿಕೊಂಡು ಜಗತ ಸರ್ಕಲ ಮುಖಾಂತರ ಬರುತ್ತೀರುವಾಗ ದಾರಿ ಮದ್ಯ ರಂಗ ಮಂದಿರ ಹತ್ತೀರ ಬರುವ ಗ್ಯಾಲೇಕ್ಸಿ ಹೊಟೇಲ ಎದುರಿನ ರೋಡ ಮೇಲೆ ಆಟೋರಿಕ್ಷಾ ನಂ ಕೆಎ-32-ಎ-8500 ನೇದ್ದರ ಚಾಲಕನು ಆನಂದ ಹೊಟೇಲ ಕಡೆಯಿಂದ ರಂಗ ಮಂದಿರ ಕಡೆಗೆ ಹೋಗುವ ಕುರಿತು ತನ್ನ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಬಲಗಾಲು ಪಾದದ ಮೇಲ್ಭಾಗದಲ್ಲಿ ಭಾರಿ ಗುಪ್ತಗಾಯಗೊಳಿಸಿ ತನ್ನ ಆಟೋರಿಕ್ಷಾ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 12-07-2016 ರಂದು ಶ್ರೀ  ಭೀಮಪ್ಪಾ ಇವರು ತಮ್ಮೂರಿನಿಂದ ಸುಪರ ಮಾರ್ಕೆಟಕ್ಕೆ ಸಾಮಾನುಗಳನ್ನು ತರಲು ಬಂದು ಸಮಾನು ಖರಿದಿ ಮಾಡಿಕೊಂಡು ವಾಪಸ್ಸ ಖರ್ಗೆ ಪೆಟ್ರೊಲ ಪಂಪದಿಂದ ಬಸ್ಸ ಮೂಲಕ ನಮ್ಮೂರಿಗೆ ಹೋಗುವ ಸಲುವಾಗಿ ಸುಪರ ಮಾರ್ಕೆಟ ಆಟೋಸ್ಟ್ಯಾಂಡನಲ್ಲಿ ನಿಂತಿದ್ದ ಆಟೋರಿಕ್ಷಾ ವಾಹನ  ನಂ ಕೆಎ-32-ಎ-2202 ನೇದ್ದರಲ್ಲಿ ಕೂಳಿತಿಕೊಂಡಾಗ ಆಟೋರಿಕ್ಷಾ ಚಾಲಕನು ಆಟೋರಿಕ್ಷಾ ವಾಹನವನ್ನು ಜಗತ ಸರ್ಕಲ ಟೌನ ಹಾಲ ಮುಖಾಂತರ ಚಲಾಯಿಸಿಕೊಂಡು ಬಂದು ಜಿಜಿಹೆಚ್ ಸರ್ಕಲ ಹತ್ತಿರ ಬಂದಾಗ ಆಟೊರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದನ್ನು ನಾನು ಆತನಿಗೆ ನಿಧಾನವಾಗಿ ಚಲಾಯಿಸುವಂತೆ ತಿಳಿಸಿದರು ಕೂಡಾ ಆತ ಕೇಳದೆ ರೋಡ ಎಡ ಬಲ ಕಟ್ ಹೊಡೆಯುತ್ತಾ ಹೋಗಿ ಸರ್ಕಾರಿ ಆಸ್ಪತ್ರೆಯ ಎದುರುಗಡೆ ಬರುವ ಗುಮ್ಮಜ್ ಹತ್ತಿರ ರೋಡ ಮೇಲೆ ಒಮ್ಮಲೆ ಬ್ರೇಕ ಹಾಕಿ ಅಟೋರಿಕ್ಷಾ ವಾಹನ ಪಲ್ಟಿ ಮಾಡಿ ಅಪಘಾತ ಮಾಡಿ ನನ್ನ ಎಡ ಭುಜಕ್ಕೆ ಭಾರಿ ಗುಪ್ತ ಪೆಟ್ಟು ಮತ್ತು ತರಚಿದಗಾಯ ಹಾಗೂ ಎಡ ಮೊಳಕಾಲಿಗೆ ತರಚಿದಗಾಯಗೊಳಿಸಿ ತನ್ನ ಆಟೋರಿಕ್ಷಾ ಸಮೇತ ಓಡಿ ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಪ್ರವೀಣ ಕುಮಾರ ಬಿ ಕುಂಟೋಜಿ ಮಠ ಸಾ|| ಜೇರಟಗಿ ರವರು ದಿನಾಂಕ: 12/07/2016 ರಂದು ಮುಂಜಾನೆ 10 ಎ.ಎಂಕ್ಕೆ ನಾಣು ಮತ್ತು ಪೀರಪ್ಪ ಯಾತನೂರ ರೇವಣಸಿದ್ದಪ್ಪ ತಳವಾರ, ರುದ್ರಮುನಿ ಹಾದಿಮನಿ, ಮಹಾಂತಯ್ಯಾ ಮಠಪತಿ ಮಡಿವಾಳಯ್ಯಾ ಕುಕನೂರ ಹೊಲಕ್ಕೆ ಹೋಗಿದ್ದು ಹೊಲದಲ್ಲಿ ಗಳೆ ಹೋಡೆಯುವದು ಕಂಟಿ ಕಡಿಯುವುದು ಮಾಡುತ್ತಿದ್ದೇವು. 11 ಎ.ಎಂ ಗೆ ಮೋರಟಗಿ ಗ್ರಾಮದವರಾದ ಮಿಠ್ಠೆಸಾಬ ತಂದೆ ದುಂಡೆಸಾಬ ಮೊರಟಗಿ ಪತ್ನಿ ಜೈನಾಬಿ ಗಂಡ ಮೀಠ್ಠೆಸಾಬ, ಹುಸೇನಿ ತಂದೆ ಮಿಠ್ಠೆಸಾಬ, ಪರವೀನ ತಂದೆ ಮಿಠ್ಠೆಸಾಬ , ಫಾತೀಮಾ ತಂದೆ ಮಿಠ್ಠೆಸಾಬ ಇವರೆಲ್ಲರೂ ನಮ್ಮ ಹೊಲದಲ್ಲಿ ಬಂದು ನಿನಗೆ ನಾವು ಹಿಂದೆ ಕಮ್ಮಿರೇಟಲ್ಲಿ ಹೋಲ ನೀಡಿದ್ದು ಈಗ ನಡೆದ ರೇಟು ಕೊಟ್ಟು ಹೊಲದಲ್ಲಿ ಕಾಲಿಡಲೇ ಭೋಸಡಿ ಮಗನೆ ನಿನ್ನವ್ವನ ಹೀಗೆ ಹೇಳಲಿ ಅಸಹ್ಯವಾಗುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ನಂತರ ಕೆಲಸ ಬಂದ ಮಾಡು ಎಂದು ಹೇಳಿದಾಗ ಊರಲ್ಲಿ ಪಂಚರ ಮುಂದೆ ತಿಳಿಸಿದರಾಯಿತು ಎಂದು ಮರಳಿ ಊರಲ್ಲಿ ಬಂದು ಅದನ್ನು ನಮ್ಮೂರ ಮುಂದೆ (ಪಂಚರ)  ತಿಳಿಸಿ ಮರಳಿ ಮದ್ಯಾಹ್ನ 3 ಪಿ.ಎಂಗೆ ಹೋಲಕ್ಕೆ ಮತ್ತೆ ಸಾಯಂಕಾಲ 4 :30 ಕ್ಕೆ ಈ ಮೇಲೆ ನಮೂದಿಸಿದ ಎಲ್ಲರೂ ಮತ್ತು ಅವನ ಸಹಚರರು ಜೋತೆ ಬಂದು ಮತ್ತು ಅವಾಚ್ಯ ಶಬ್ದದಿಂದ ನಿಂದಿಸಿ ಭೋಸಡಿ ಮಗನೆ ಮುಂಜಾನೆ ಹೇಳಿ ಹೋಗಿದ್ದರು ಮತ್ತೆ ಹೊಲಕ್ಕೆ ಬಂದು ಕೆಲಸ ಚಾಲು ಮಾಡಿದಿ ಎಂದು ಮೀಠ್ಠೆಸಾಬ ನನಗೆ ಕೈಯಿಂದ ಹೊಡೆದು ತಕ್ಕೆ ಕುಸ್ತಿಗೆ ಬಿದ್ದು ಅವನ ಹೆಂಡತಿ ಮಕ್ಕಳು ನನ್ನ ಕೈಗಳನ್ನು ಹಿಂಬದಿಯಿಂದ ತಿರುವಿ ಹಿಡಿದು ಮೀಠ್ಠೆಸಾಬ ಹಗ್ಗದಿಂದ ಕುತ್ತಿಗೆಗೆ ಹಾಕಿ ನಿನ್ನನ್ನು ಕಲಾಸ ಮಾಡುವೆ ನೆಂದು ನನ್ನ ಕುತ್ತಿಗೆಗೆ ಬಿಗಿದು ಜೀವ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬಾಲ್ಯ ವಿವಾಹ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ತುಳಸಾಬಾಯಿ ಎಮ್ ಮಾನು ಉ:ಪ್ರಭಾರ ಸಿ.ಡಿ.ಪಿ.ಒ ಆಳಂದ ವರದಿ ಸಲ್ಲಿಸುವುದೆನೆಂದರೆ ಶ್ರೀ ರೇವಣಸಿದ್ದಪ್ಪ ಕಲಶೆಟ್ಟಿ ಸಾ: ಶಿವಾಜಿ ನಗರ ಕಲಬುರಗಿ ಇವರ ಮಗಳಾದ ನೀಲಮ್ಮ ಇವಳಿಗೆ 13/05/2011 ರಂದು ಆಳಂದ ತಾಲೂಕಿನ ಕೋತನ ಹಿಪ್ಪರಗಾ ಗ್ರಾಮದ ಶ್ರೀಮಂತ ತಂದೆ ಶಿವಣಪ್ಪ ಕಲಶೆಟ್ಟಿ ಇವರೊಂದಿಗೆ ಮದುವೆಯಾಗಿದ್ದು ನೀಲಮ್ಮಳ ಗಂಡ ಶ್ರೀಮಂತ ಆಕೆ ಅತ್ತೆ ಶಾಂತಾಬಾಯಿ ಮಾವ ಶಿವಣಪ್ಪ ಮೈದುನ ವಿರುಪಾಕ್ಷಿ ,ನೆಗೆಣಿ ಸಪ್ನಾ ಗಂಡ ವಿರುಪಾಕ್ಷಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದರಿಂದ ದಿ 13/12/2014 ರಂದು ಸದರಿಯವರ ವಿರುದ್ದ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದೆ.ನಂತರ ಶ್ರೀಮಂತನ ತಂದೆ ತಾಯಿ ತಮ್ಮ ಹಾಗೂ ತಮ್ಮನ ಹೆಂಡತಿ ಹಾಗೂ ಶ್ರೀಮಂತ ಇವರುಗಳು ಈ ಒಂದು  ವರ್ಷದ ಹಿಂದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘಿಸಿ ಉಮರ್ಗಾದ ಅಶ್ವಿನಿ ತಂದೆ ಕಾಶಿನಾಥ ಶಾಸ್ತೂರ ವಯ: 14 ವರ್ಷ ಇವರೊಂದಿಗೆ ಶ್ರೀಮಂತ ತಂದೆ ಶಿವಣಪ್ಪ ಕಲಶೆಟ್ಟಿ ಸಾ: ಕೋತನ ಹಿಪ್ಪರಗಾ ರವರ ಸಂಗಡ ಬಾಲ್ಯ ವಿವಾಹ ಮೇಲಿನ ಶ್ರೀಮಂತನ ಸಂಭಂದಿಕರು ಮಾಡಿದ ಬಗ್ಗೆ ಗ್ರಾಮದಲ್ಲಿ ಹೋಗಿ ವಿಚಾರಿಸಲಾಗಿ ಅಶ್ವಿನಿಯೊಂದಿಗೆ ಬಾಲ್ಯವಿವಾಹವಾದ ಬಗ್ಗೆ ಧೃಡ ಪಟ್ಟಿರುತ್ತದೆ. ಶ್ರೀಮಂತ ತಂದೆ ಶಿವಣಪ್ಪ ಇತನು 30 ವರ್ಷ ಮೇಲ್ಪಟ್ಟವನಿದ್ದು ಬಾಲ್ಯ ವಿವಾಹ ಕಾಯ್ದೆ ಉಲ್ಲಂಘನೆ ಮಾಡಿ ಅಶ್ವಿನಿ ವಯ:14 ವರ್ಷ ರವರೊಂದಿಗೆ ಮದುವೆಯಾಗಿದ್ದು ಸದರಿ ಮದುವೆಗೆ ಶ್ರೀಮಂತನ ತಂದೆ ತಾಯಿ ಹಾಗೂ ತಮ್ಮ ರವರು ಅಶ್ವಿನಿ ಅಪ್ರಾಪ್ತ ವಯಸ್ಸಿನ ಬಾಲಕಿಯಿದ್ದರೂ ಕೂಡಾ ಸದರಿಯವಳೊಂದಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿ ಮದುವೆ ಮಾಡಿದ್ದು ಕಂಡುಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ 

12 July 2016

Kalaburagi District Reported Crimes

ಮಟಕಾ ಜೂಜುಕೊರರ ಬಂಧನ :
ಫರತಾಬಾದ ಠಾಣೆ : ದಿನಾಂಕ: 11/07/2016 ರಂದು ಪಿರೋಜಾಬಾದ ಗ್ರಾಮದಲ್ಲಿ ನೀರಿನ ಟ್ಯಾಂಕ ಹತ್ತಿರ ಮಟಕಾ ಬರೆದು ಕೊಳ್ಳುತ್ತಿದ್ದ  ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು ಅಶೋಕ ತಂದೆ ಸೈಬಣ್ಣ ಪರೀಟ ಸಾ:ಪಿರೋಜಾಬಾದ ಅಂತಾ ತಿಳಿಸಿದ್ದು ಸದರಿಯವನಿಂದ ಜುಜಾಟಕ್ಕೆ ಬಳಸಿದ ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ನ & ನಗದು ಹಣ 3500/- ರೂಪಾಯಿ ಗಳನ್ನು ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಫರತಾಬಾದ ಠಾಣೆ : ದಿನಾಂಕ: 11/07/2016 ರಂದು ಗೆ ನದಿ ಸಿನ್ನೂರ ಗ್ರಾಮದಲ್ಲಿ ಚನ್ನಬಸಪ್ಪ ಗೊಬ್ಬುರ ಇವರ ಹೊಟೇಲ  ಹತ್ತಿರ ಕಟ್ಟೆಯ ಸಾರ್ವ ಜನಿಕ ಸ್ಥಳದಲ್ಲಿ ಮಟಕಾ ಬರೆದು ಕೊಳ್ಳುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು  ಅನ್ವರಮಿಯ್ಯಾ ತಂದೆ ಶಹಾಬೋದ್ದಿನ ಹಸರಗುಂಡಗಿ ಸಾ: ನದಿ ಸಿನ್ನೂರ  ಅಂತಾ ತಿಳಿಸಿದ್ದು ಸದರಿಯವನಿಂದ ಜುಜಾಟಕ್ಕೆ ಬಳಸಿದ ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ನ & ನಗದು ಹಣ 4750/- ರೂಪಾಯಿಗಳನ್ನು ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.. 
ಫರತಾಬಾದ ಠಾಣೆ : ದಿನಾಂಕ: 11/07/2016 ರಂದು ಫರಹತಾಬಾದ ಗ್ರಾಮದ ಅಗಸಿಯ ಹತ್ತಿರ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ  ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು  ಸದಾಶಿವ ತಂದೆ ಕಲ್ಲಪ್ಪಾ ಮಮ್ಮಣಿ ಸಾ: ಫರಹತಾಬಾದ ಅಂತಾ ತಿಳಿಸಿದ್ದು ಸದರಿಯವನಿಂದ ಜುಜಾಟಕ್ಕೆ ಬಳಸಿದ ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ನ & ನಗದು ಹಣ 945/- ರೂಪಾಯಿಗಳನ್ನು ಜಪ್ತಿಪಡಿಸಿಕೊಂಡು ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.. 
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶಂಕ್ರಯ್ಯಾ ತಂದೆ ಸಿದ್ದರಾಮಯ್ಯಾ ಹಿರೇಮಠ  ಸಾ : ಸಮತಾ ಕಾಲೂನಿ ಕಲಬುರಗಿ ರವರು ದಿನಾಂಕ 11-7-2016 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಶ್ರೀ ಶರಣಬಸವೇಶ್ವರ ಗುಡಿಗೆ ದರ್ಶನ ಕುರಿತು ಹೊಗುತ್ತಿರುವಾಗ ಬ್ರಹ್ಮಪೂರ ಬಡಾವಣೆಯ ಮುಗಳನಾಗಾಂವ ಮಠದ ಮುಂದೆ ಶಿವಶರಣಯ್ಯಾ  ಮಠಪತಿ. ಶಿವಪುತ್ರಯ್ಯಾ ಮಠಪತಿ  ವೀರುಪಾಕ್ಞಯ್ಯಾ ಮಠಪತಿ ಇವರು ನನಗೆ ತಡೆದು ಶಿವಶರಣಯ್ಯಾ ಮಠಪತಿ ಇವನು ಏ ಶಂಕ್ರಪ್ಪಾ ನಿನ್ನ  ತಮ್ಮ ವಿರೇಶ ಇವನು ನನ್ನ ತಮ್ಮನಾದ ಶಿಪುತ್ರಯ್ಯಾ ಇತನ ಜೊತೆ ವಿನಾಕಾರಣ ಜಗಳ ತೆಗೆದು ಕೈಯಿಂದ ಹೊಡೆ ಬಡೆ ಮಾಡಿರುತ್ತಾನೆ ಅವನು ಎಲ್ಲ ಇದ್ದಾನೆ ಅಂತ ಕೇಳಿದಾಗ ನನ್ನ ತಮ್ಮ ವಿರೇಶ ಇವರು ಲಗ್ನಕ್ಕೆ ಹೊಗಿರುತ್ತಾನೆ ಮನೆಯಲ್ಲಿ ಇರುವದಿಲ್ಲಾ ಅಂತ ಹೇಳಿದಾಗ ನೀನು ಅವನಿಗೆ ಕರೆಯಿಸಿಬೆಕು ಅಂತ ಶಿವಶರಣಯ್ಯಾ ಮಠಪತಿ ಇವನು ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆ ಬಡೆ ಮಾಡಿ ಗುಪ್ತಗಾಯ ಮಾಡಿರುತ್ತಾನೆ ಶಿವಪುತ್ರಯ್ಯಾ ಇತನು ಕಾಲಿನಿಂದ ಹೊಟ್ಟೆಯ  ಮೇಲೆ ಒದ್ದಿರುತ್ತಾನೆ.ವೀರುಪಾಕ್ಷಯ್ಯಾ ಇವನು ಏ ರಂಡಿ ಮಗನೆ ಭೊಷಡಿ ಮಗನೆ ನಿಮ್ಮದು ಬಹಳದಾದಾಗಿರಿ ನಡೆದಿದೆ ಸುಳೆ ಮಕ್ಕಳೆ ಅಂತ ಕೈಯಿಂದಿ ಹೊಟ್ಟೆಯ ಹೊಡೆ ಬಡೆ ಮಾಡಿರುತ್ತಾನೆ ವೀರುಪಾಕ್ಷಯ್ಯನ ಇವನ ಮಗ ಜಗು ಇತನು ಬಂದವನೆ ಹೊಡೆಯಿರಿ ಈ ಮಗನಿಗೆ ಖಲಾಸ ಮಾಡಿರಿ ಅಂತ ಜಿವದ ಭಯ ಹಾಕಿ ಒಂದು ಫರ್ಸಿ ಕಲ್ಲಿನಿಂದ ನನ್ನ ಟೊಂಕದ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಮತ್ತು ಶಿವಶರಣಯ್ಯಾ ಇತನು ಕೈಯಿಂದ ನನ್ನ ಬಾಯಿ ಮೆಲೆ ಹೊಡೆದಿದ್ದರಿಂದ ನನ್ನ ಮೇಲಿನ ತುಟಿ ಒಡೆದು ರಕ್ತಗಾಯ ಆಗಿರುತ್ತದೆ. ಮತ್ತು ನೀಲಮ್ಮ  ಶರಣಮ್ಮಾ ಇವರು ಬಂದವರೆ ನನಗೆ ಕೈಯಿಂದ ಬೆನ್ನಿನ ಮೆಲೆ ಹೊಡೆಬಡೆ ಮಾಡಿರುತ್ತಾರೆ ಸಿದ್ದು ತಂದೆ ವೀರುಪಾಕ್ಷಯ್ಯಾ ಬಂದವನೆ ಒಂದು ಬಡಿಗೆಯಿಂದ ನನ್ನ ಎರಡು ತೊಡೆಯ ಜಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಆಗ ನನ್ನ ಹೆಚ್.ಟಿ ಸಿ ಮೊಬಾಯಿ ಫೊನ ಬಿದ್ದಿದ್ದು ಸದರಿ ಸಿದ್ದು ಇತನು ತೆಗದು ಕೊಂಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾಥ ಹೆಣ್ಣುಮಗಳ ಶವ ಪತ್ತೆ :
ಮಾಹಾಗಾಂವ ಠಾಣೆ : ಶ್ರೀ ಗಿರೇಪ್ಪಾ ತಂದೆ ಬಸಲಿಂಗಪ್ಪಾ ಬಸವಣ ಸಾ: ಕುರಿಕೋಟಾ ತಾ:ಜಿ: ಕಲಬುರಗಿ ರವರು ದಿನಾಂಕ: 11/07/2016 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು, ಹಾಗು ನಮ್ಮೂರಿನ ರಮೇಶ ತಂದೆ ಗುಂಡಪ್ಪಾ ಸಾಹು ಇಬ್ಬರು ಕೂಡಿಕೊಂಡು ಕೆಲಸವಿದ್ದ ಪ್ರಯುಕ್ತ ರಮೇಶ ಸಾಹು ರವರ ಮೋ.ಸೈಕಲ ಮೇಲೆ ಕಲಬುರಗಿಗೆ ಹೊರಟಿದ್ದು ನಮ್ಮೂರಿನ ಸೇತುವೆ ಮೇಲೆ ಹೋಗುತ್ತಿರುವಾಗ ಸೇತುವೆಯ ಎಡಬದಿ ನೀರಿನಲ್ಲಿ ಬೋರಲಾಗಿ ಒಂದು ಹೆಣ್ಣು ಮಗಳ ಶವ ತೆಲಾಡುತ್ತಿರುವುದನ್ನು ನೋಡಿ, ನೀರಿನ ಹತ್ತಿರ ಹೋಗಿ ನೋಡಲಾಗಿ, ಒಂದು ಹೆಣ್ಣು ಮಗಳ ಶವ ಬೋರಲಾಗಿ ಬಿದ್ದು ತೆಲಾಡುತ್ತಿದ್ದು. ಅದನ್ನು ಖಚಿತ ಪಡಿಸಿಕೊಂಡು ನಮಗೆ ಪರಿಚಯದವರಾದ ಮಂಜುನಾಥ ಬಾಳಿ ಮತ್ತು ಸುರೇಶ ಮುಗಳಿ ಇವರನ್ನು ಕರೆಯಿಸಿಕೊಂಡು ಅವರ ಸಹಾಯದಿಂದ ಶವವನ್ನು ನೀರಿನಿಂದ ಹೊರಗೆ ತೆಗೆದು ನೋಡಲಾಗಿ, ಆಕೆಯ ವಯಸ್ಸು ಅಂದಾಜು 60 ರಿಂದ 65 ವರ್ಷ, ಸಾಧಾರಣ ಮೈಕಟ್ಟು, ನೀಟಾದ ಮೂಗು, ಅಂದಾಜು 5`2” ಎತ್ತರ, ಬಿಳಿಯ ಮೈ ಬಣ್ಣ ಹೊಂದಿದ್ದು. ಬಲಗಾಲಿನ ಪಾದದ ಕಿರುಬೆರಳಿಗೆ, ಕಣ್ಣು, ಮೂಗು ಹಾಗು ಕಿವಿಗೆ ಜಲಚರ ಪ್ರಾಣಿಗಳು ತಿಂದಂತೆ ಆಗಿದ್ದು ಕಂಡು ಬಂದಿದ್ದು. ಮೃತಳ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಮೃತಳು ಯಾವುದೋ ವಿಷಯದ ಸಂಬಂಧ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನಿನ್ನೆ ದಿನಾಂಕ: 10/07/2016 ರಂದು ರಾತ್ರಿ ವೇಳೆಯಲ್ಲಿ ಮೃತಪಟ್ಟಿರಬಹುದು. ಅವಳ ಸಾವಿನ ಬಗ್ಗೆ ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 July 2016

Kalaburagi District Reported Crimes

ಜೂಜುಕೊರರ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 10/07/2016 ರಂದು ಜವಳಿ (ಡಿ) ಗ್ರಾಮದ ಹಳೆಯ ಅಂಗನವಾಡಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀ ಉದಂಡಪ್ಪ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜವಳಿ (ಡಿ) ಗ್ರಾಮಕ್ಕೆ ಹೋಗಿ ಹಳೆಯ ಅಂಗನವಾಡಿ ಮರೆಯಲ್ಲಿ ನಿಂತು ನೋಡಲಾಗಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 07 ಜನ ವ್ಯಕ್ತಿಗಳು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 07 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 01) ಹಣಮಂತ ತಂದೆ ಶ್ರೀಮಂತ ವಡ್ಡರ 02) ಹಣಮಂತ ತಂದೆ ಮಾಳಪ್ಪ ಹರಳಯ್ಯ 03) ಅನೀಲ ತಂದೆ ನಾಗಪ್ಪಾ ವಡ್ಡರ 04) ಶಿವರಾಯ ತಂದೆ ಮಾಯಪ್ಪ ಪೂಜಾರಿ 05) ಶರಣಬಸಪ್ಪ ತಂದೆ ಗುರುಸಿದ್ದಪ್ಪಾ ರಾಚೂರ 06) ಬಸವಂತ ತಂದೆ ಭೀಮಶಾ ವಡ್ಡರ 07] ಖಾಜಾಲಾಲ ತಂದೆ ದಸ್ತಗಿರ ಬಂದ್ರಾಡ ಸಾ : ಎಲ್ಲರು ಜವಳಿ(ಡಿ) ಅಂತಾ ಹೇಳಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 5410/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 10/07/2016 ರಂದು ಸುಂಟನೂರ ಗ್ರಾಮದ ರಾಮಲಿಂಗ ಮಠದ ಸಾರ್ವಜನಿಕ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಈಗಾಗಲೇ ಬಾತ್ಮಿ ಬಂದ ಮೇರೆಗೆ ಶ್ರೀ ಉದಂಡಪ್ಪ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸುಂಟನೂರ ಗ್ರಾಮಕ್ಕೆ ಹೋಗಿ ಸುಂಟನೂರ ಗ್ರಾಮದ ರಾಮಲಿಂಗ ಮಠದ ಮರೆಯಲ್ಲಿ ನಿಂತು ನೋಡಲಾಗಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 06 ಜನ ವ್ಯಕ್ತಿಗಳು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 06 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 01) ಅಶೋಕ ತಂದೆ ಶರಣಪ್ಪ ನ್ಯಾಮನ 02) ಸುಭಾಷ ತಂದೆ ರಾಮಚಂದ್ರ ನ್ಯಾಮನ 03) ರಾಜಕುಮಾರ ತಂದೆ ಹಣಮಂತ್ರಾಯ ದಣ್ಣೂರೆ 04) ಶಿವಪುತ್ರ ತಂದೆ ಭೀಮಶಾ ನ್ಯಾಮನ 05) ಶರಣಬಸಪ್ಪ ತಂದೆ ದುರ್ಗಪ್ಪ ಚಿಂಚನಸೂರ 06) ವಿಠ್ಠಲ ತಂದೆ ಶರಣಪ್ಪ ಬಿದನಕರ ಸಾ : ಎಲ್ಲರು ಸುಂಟನೂರ  ಅಂತಾ ಹೇಳಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 1410/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 10/07/2016 ರಂದು ಆಲೂರ (ಬಿ) ಗ್ರಾಮದ ಹನುಮಾನ ದೇವರ ಗುಡಿಯ ಸಾರ್ವಜನಿಕ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಈಗಾಗಲೇ ಬಾತ್ಮಿ ಬಂದ ಮೇರೆಗೆ ಶ್ರೀ ಉದಂಡಪ್ಪ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆಲೂರ (ಬಿ) ಗ್ರಾಮಕ್ಕೆ ಹೋಗಿ ಆಲೂರ (ಬಿ) ಗ್ರಾಮದ ಹನುಮಾನ ದೇವರ ಗುಡಿಯ ಮರೆಯಲ್ಲಿ ನಿಂತು ನೋಡಲಾಗಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 05 ಜನ ವ್ಯಕ್ತಿಗಳು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 05 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 01) ಸುರೇಶ ತಂದೆ ಯಶವಂತ ಕೋಗನೂರ 02) ಲಕ್ಷ್ಮಣ ತಂದೆ ಭೀಮಶಾ ಹಡಪಾದ 03) ಜಿಂದಾವಲಿ ತಂದೆ ಲಾಡ್ಲೆಸಾಬ ಮುಲ್ಲಾ 04) ಇಮಾಮಸಾಬ ತಂದೆ ಮಹಿಬೂಬಸಾಬ ಕಿಣಗಿ 05) ಮೌಲಾ ತಂದೆ ಹುಸೇನಸಾಬ ಮೂಮಿನ ಸಾ : ಎಲ್ಲರು ಆಲೂರ (ಬಿ) ಅಂತಾ ಹೇಳಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 990/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.