ಮಟಕಾ ಜೂಜಾಟದಲ್ಲಿ ನಿರತವನ
ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12/07/2016 ರಂದು ಭೂಸನೂರ ಗ್ರಾಮದ ಬಸ ನಿಲ್ದಾಣದ ಹತ್ತಿರ
ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಅಂತ ಮಾಹಿತಿ
ಬಂದ ಮೇರೆಗೆ ನಾನು ಈ ಬಗ್ಗೆ ಮಾನ್ಯ ಪಿ.ಡಿ ಗಜಕೋಶ ಡಿ.ಎಸ್.ಪಿ ಸಾಹೇಬ ಆಳಂದ, ಮಾನ್ಯ ಭಾಷು ಚವ್ಹಾಣ ಸಿಪಿಐ ಆಳಂದ ರವರ
ಮಾರ್ಗದರ್ಶನದಲ್ಲಿ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಭೂಸನೂರ ಗ್ರಾಮಕ್ಕೆ ಹೋಗಿ ಬಸ
ನಿಲ್ದಾಣದ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಬಸ ನಿಲ್ದಾಣದ ಮುಂದೆ ಡಾಂಬರ ರೋಡಿನ ಮೇಲೆ
ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರಿಗೆ ಕೂಗತ್ತಾ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ
ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80
ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ
ಸಾರ್ವಜನಿಕರಿಗೆ ಮೋಸ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ
ಆತನು ತನ್ನ ಹೆಸರು ಗೈಬಗಿರಿ ತಂದೆ ಗೋವಿಂದಗಿರಿ ಗೋಸಾಯಿ ಸಾ|| ಭೂಸನೂರ ಅಂತ
ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 1110/- ರೂಪಾಯಿ ಮತ್ತು ಒಂದು ಮಟಕಾ
ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ಜಪ್ತಿಮಾಡಿಕೊಂಡು ಸದರಿಯವನೊಂದಿಗೆ
ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 11-07-2016 ರಂದು
ಮದ್ಯಾಹ್ನ 2-30 ಗಂಟೆ ಸುಮಾರಿಗೆ ಶರಣಕುಮಾರ ಮತ್ತು ಅವರ ತಾಯಿಯಾದ ಪಾರ್ವತಿ ಇಬ್ಬರು
ಸುಪರ ಮಾರ್ಕೆಟಕ್ಕೆ ಹೋಗುವ ಕುರಿತು ನಾನು ಚಲಾಯಿಸುತ್ತಿರುವ ಮೋಟಾರ ಸೈಕಲ ನಂ ಕೆಎ-32-ಹೆಚ್-4342
ನೇದ್ದರ ಹಿಂದುಗಡೆ ನನ್ನ ತಾಯಿಯವರೆಗೆ ಕೂಡಿಸಿಕೊಂಡು ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಸುಪರ
ಮಾರ್ಕೆಟಕ್ಕೆ ಹೋಗಿ ಮರಳಿ ಮನೆಗೆ ಹೋಗುವ ಕುರಿತು ನಾನು ಮೋಟಾರ ಸೈಕಲ ಚಲಯಿಸಿಕೊಂಡು ಜಗತ ಸರ್ಕಲ
ಮುಖಾಂತರ ಬರುತ್ತೀರುವಾಗ ದಾರಿ ಮದ್ಯ ರಂಗ ಮಂದಿರ ಹತ್ತೀರ ಬರುವ ಗ್ಯಾಲೇಕ್ಸಿ ಹೊಟೇಲ ಎದುರಿನ
ರೋಡ ಮೇಲೆ ಆಟೋರಿಕ್ಷಾ ನಂ ಕೆಎ-32-ಎ-8500 ನೇದ್ದರ ಚಾಲಕನು ಆನಂದ ಹೊಟೇಲ ಕಡೆಯಿಂದ ರಂಗ ಮಂದಿರ
ಕಡೆಗೆ ಹೋಗುವ ಕುರಿತು ತನ್ನ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ
ಬಲಗಾಲು ಪಾದದ ಮೇಲ್ಭಾಗದಲ್ಲಿ ಭಾರಿ ಗುಪ್ತಗಾಯಗೊಳಿಸಿ ತನ್ನ ಆಟೋರಿಕ್ಷಾ ವಾಹನ ಅಲ್ಲಿಯೇ ಬಿಟ್ಟು
ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 12-07-2016 ರಂದು ಶ್ರೀ ಭೀಮಪ್ಪಾ ಇವರು ತಮ್ಮೂರಿನಿಂದ ಸುಪರ ಮಾರ್ಕೆಟಕ್ಕೆ
ಸಾಮಾನುಗಳನ್ನು ತರಲು ಬಂದು ಸಮಾನು ಖರಿದಿ ಮಾಡಿಕೊಂಡು ವಾಪಸ್ಸ ಖರ್ಗೆ ಪೆಟ್ರೊಲ ಪಂಪದಿಂದ ಬಸ್ಸ
ಮೂಲಕ ನಮ್ಮೂರಿಗೆ ಹೋಗುವ ಸಲುವಾಗಿ ಸುಪರ ಮಾರ್ಕೆಟ ಆಟೋಸ್ಟ್ಯಾಂಡನಲ್ಲಿ ನಿಂತಿದ್ದ ಆಟೋರಿಕ್ಷಾ
ವಾಹನ ನಂ ಕೆಎ-32-ಎ-2202
ನೇದ್ದರಲ್ಲಿ ಕೂಳಿತಿಕೊಂಡಾಗ ಆಟೋರಿಕ್ಷಾ ಚಾಲಕನು ಆಟೋರಿಕ್ಷಾ ವಾಹನವನ್ನು ಜಗತ ಸರ್ಕಲ ಟೌನ ಹಾಲ
ಮುಖಾಂತರ ಚಲಾಯಿಸಿಕೊಂಡು ಬಂದು ಜಿಜಿಹೆಚ್ ಸರ್ಕಲ ಹತ್ತಿರ ಬಂದಾಗ ಆಟೊರಿಕ್ಷಾ ವಾಹನವನ್ನು
ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದನ್ನು ನಾನು ಆತನಿಗೆ ನಿಧಾನವಾಗಿ
ಚಲಾಯಿಸುವಂತೆ ತಿಳಿಸಿದರು ಕೂಡಾ ಆತ ಕೇಳದೆ ರೋಡ ಎಡ ಬಲ ಕಟ್ ಹೊಡೆಯುತ್ತಾ ಹೋಗಿ ಸರ್ಕಾರಿ
ಆಸ್ಪತ್ರೆಯ ಎದುರುಗಡೆ ಬರುವ ಗುಮ್ಮಜ್ ಹತ್ತಿರ ರೋಡ ಮೇಲೆ ಒಮ್ಮಲೆ ಬ್ರೇಕ ಹಾಕಿ ಅಟೋರಿಕ್ಷಾ
ವಾಹನ ಪಲ್ಟಿ ಮಾಡಿ ಅಪಘಾತ ಮಾಡಿ ನನ್ನ ಎಡ ಭುಜಕ್ಕೆ ಭಾರಿ ಗುಪ್ತ ಪೆಟ್ಟು ಮತ್ತು ತರಚಿದಗಾಯ
ಹಾಗೂ ಎಡ ಮೊಳಕಾಲಿಗೆ ತರಚಿದಗಾಯಗೊಳಿಸಿ ತನ್ನ ಆಟೋರಿಕ್ಷಾ ಸಮೇತ ಓಡಿ ಹೋಗಿದ್ದು ಇರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಪ್ರವೀಣ ಕುಮಾರ ಬಿ ಕುಂಟೋಜಿ
ಮಠ ಸಾ|| ಜೇರಟಗಿ ರವರು ದಿನಾಂಕ: 12/07/2016 ರಂದು ಮುಂಜಾನೆ 10 ಎ.ಎಂಕ್ಕೆ ನಾಣು ಮತ್ತು
ಪೀರಪ್ಪ ಯಾತನೂರ ರೇವಣಸಿದ್ದಪ್ಪ ತಳವಾರ, ರುದ್ರಮುನಿ ಹಾದಿಮನಿ, ಮಹಾಂತಯ್ಯಾ ಮಠಪತಿ ಮಡಿವಾಳಯ್ಯಾ
ಕುಕನೂರ ಹೊಲಕ್ಕೆ ಹೋಗಿದ್ದು ಹೊಲದಲ್ಲಿ ಗಳೆ ಹೋಡೆಯುವದು ಕಂಟಿ ಕಡಿಯುವುದು ಮಾಡುತ್ತಿದ್ದೇವು.
11 ಎ.ಎಂ ಗೆ ಮೋರಟಗಿ ಗ್ರಾಮದವರಾದ ಮಿಠ್ಠೆಸಾಬ ತಂದೆ ದುಂಡೆಸಾಬ ಮೊರಟಗಿ ಪತ್ನಿ ಜೈನಾಬಿ ಗಂಡ
ಮೀಠ್ಠೆಸಾಬ, ಹುಸೇನಿ ತಂದೆ ಮಿಠ್ಠೆಸಾಬ, ಪರವೀನ ತಂದೆ ಮಿಠ್ಠೆಸಾಬ , ಫಾತೀಮಾ ತಂದೆ ಮಿಠ್ಠೆಸಾಬ
ಇವರೆಲ್ಲರೂ ನಮ್ಮ ಹೊಲದಲ್ಲಿ ಬಂದು ನಿನಗೆ ನಾವು ಹಿಂದೆ ಕಮ್ಮಿರೇಟಲ್ಲಿ ಹೋಲ ನೀಡಿದ್ದು ಈಗ ನಡೆದ
ರೇಟು ಕೊಟ್ಟು ಹೊಲದಲ್ಲಿ ಕಾಲಿಡಲೇ ಭೋಸಡಿ ಮಗನೆ ನಿನ್ನವ್ವನ ಹೀಗೆ ಹೇಳಲಿ ಅಸಹ್ಯವಾಗುವ
ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ನಂತರ ಕೆಲಸ ಬಂದ ಮಾಡು ಎಂದು ಹೇಳಿದಾಗ ಊರಲ್ಲಿ
ಪಂಚರ ಮುಂದೆ ತಿಳಿಸಿದರಾಯಿತು ಎಂದು ಮರಳಿ ಊರಲ್ಲಿ ಬಂದು ಅದನ್ನು ನಮ್ಮೂರ ಮುಂದೆ (ಪಂಚರ) ತಿಳಿಸಿ ಮರಳಿ ಮದ್ಯಾಹ್ನ 3 ಪಿ.ಎಂಗೆ ಹೋಲಕ್ಕೆ ಮತ್ತೆ
ಸಾಯಂಕಾಲ 4 :30 ಕ್ಕೆ ಈ ಮೇಲೆ ನಮೂದಿಸಿದ ಎಲ್ಲರೂ ಮತ್ತು ಅವನ ಸಹಚರರು ಜೋತೆ ಬಂದು ಮತ್ತು
ಅವಾಚ್ಯ ಶಬ್ದದಿಂದ ನಿಂದಿಸಿ ಭೋಸಡಿ ಮಗನೆ ಮುಂಜಾನೆ ಹೇಳಿ ಹೋಗಿದ್ದರು ಮತ್ತೆ ಹೊಲಕ್ಕೆ ಬಂದು
ಕೆಲಸ ಚಾಲು ಮಾಡಿದಿ ಎಂದು ಮೀಠ್ಠೆಸಾಬ ನನಗೆ ಕೈಯಿಂದ ಹೊಡೆದು ತಕ್ಕೆ ಕುಸ್ತಿಗೆ ಬಿದ್ದು ಅವನ
ಹೆಂಡತಿ ಮಕ್ಕಳು ನನ್ನ ಕೈಗಳನ್ನು ಹಿಂಬದಿಯಿಂದ ತಿರುವಿ ಹಿಡಿದು ಮೀಠ್ಠೆಸಾಬ ಹಗ್ಗದಿಂದ
ಕುತ್ತಿಗೆಗೆ ಹಾಕಿ ನಿನ್ನನ್ನು ಕಲಾಸ ಮಾಡುವೆ ನೆಂದು ನನ್ನ ಕುತ್ತಿಗೆಗೆ ಬಿಗಿದು ಜೀವ ಬೇದರಿಕೆ
ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬಾಲ್ಯ ವಿವಾಹ ಮಾಡಿದ ಪ್ರಕರಣ
:
ಆಳಂದ ಠಾಣೆ : ಶ್ರೀಮತಿ ತುಳಸಾಬಾಯಿ ಎಮ್ ಮಾನು ಉ:ಪ್ರಭಾರ ಸಿ.ಡಿ.ಪಿ.ಒ ಆಳಂದ ವರದಿ
ಸಲ್ಲಿಸುವುದೆನೆಂದರೆ ಶ್ರೀ ರೇವಣಸಿದ್ದಪ್ಪ ಕಲಶೆಟ್ಟಿ ಸಾ: ಶಿವಾಜಿ ನಗರ ಕಲಬುರಗಿ ಇವರ ಮಗಳಾದ
ನೀಲಮ್ಮ ಇವಳಿಗೆ 13/05/2011 ರಂದು ಆಳಂದ ತಾಲೂಕಿನ ಕೋತನ ಹಿಪ್ಪರಗಾ ಗ್ರಾಮದ ಶ್ರೀಮಂತ ತಂದೆ
ಶಿವಣಪ್ಪ ಕಲಶೆಟ್ಟಿ ಇವರೊಂದಿಗೆ ಮದುವೆಯಾಗಿದ್ದು ನೀಲಮ್ಮಳ ಗಂಡ ಶ್ರೀಮಂತ ಆಕೆ ಅತ್ತೆ
ಶಾಂತಾಬಾಯಿ ಮಾವ ಶಿವಣಪ್ಪ ಮೈದುನ ವಿರುಪಾಕ್ಷಿ ,ನೆಗೆಣಿ ಸಪ್ನಾ ಗಂಡ
ವಿರುಪಾಕ್ಷಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದರಿಂದ ದಿ 13/12/2014 ರಂದು ಸದರಿಯವರ
ವಿರುದ್ದ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದೆ.ನಂತರ ಶ್ರೀಮಂತನ ತಂದೆ ತಾಯಿ
ತಮ್ಮ ಹಾಗೂ ತಮ್ಮನ ಹೆಂಡತಿ ಹಾಗೂ ಶ್ರೀಮಂತ ಇವರುಗಳು ಈ ಒಂದು ವರ್ಷದ ಹಿಂದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ
ಉಲ್ಲಂಘಿಸಿ ಉಮರ್ಗಾದ ಅಶ್ವಿನಿ ತಂದೆ ಕಾಶಿನಾಥ ಶಾಸ್ತೂರ ವಯ: 14 ವರ್ಷ ಇವರೊಂದಿಗೆ ಶ್ರೀಮಂತ
ತಂದೆ ಶಿವಣಪ್ಪ ಕಲಶೆಟ್ಟಿ ಸಾ: ಕೋತನ ಹಿಪ್ಪರಗಾ ರವರ ಸಂಗಡ ಬಾಲ್ಯ ವಿವಾಹ ಮೇಲಿನ ಶ್ರೀಮಂತನ
ಸಂಭಂದಿಕರು ಮಾಡಿದ ಬಗ್ಗೆ ಗ್ರಾಮದಲ್ಲಿ ಹೋಗಿ ವಿಚಾರಿಸಲಾಗಿ ಅಶ್ವಿನಿಯೊಂದಿಗೆ ಬಾಲ್ಯವಿವಾಹವಾದ
ಬಗ್ಗೆ ಧೃಡ ಪಟ್ಟಿರುತ್ತದೆ. ಶ್ರೀಮಂತ ತಂದೆ ಶಿವಣಪ್ಪ ಇತನು 30 ವರ್ಷ ಮೇಲ್ಪಟ್ಟವನಿದ್ದು ಬಾಲ್ಯ
ವಿವಾಹ ಕಾಯ್ದೆ ಉಲ್ಲಂಘನೆ ಮಾಡಿ ಅಶ್ವಿನಿ ವಯ:14 ವರ್ಷ ರವರೊಂದಿಗೆ ಮದುವೆಯಾಗಿದ್ದು ಸದರಿ
ಮದುವೆಗೆ ಶ್ರೀಮಂತನ ತಂದೆ ತಾಯಿ ಹಾಗೂ ತಮ್ಮ ರವರು ಅಶ್ವಿನಿ ಅಪ್ರಾಪ್ತ ವಯಸ್ಸಿನ ಬಾಲಕಿಯಿದ್ದರೂ
ಕೂಡಾ ಸದರಿಯವಳೊಂದಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿ ಮದುವೆ ಮಾಡಿದ್ದು
ಕಂಡುಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ
No comments:
Post a Comment