POLICE BHAVAN KALABURAGI

POLICE BHAVAN KALABURAGI

08 July 2016

Kalaburagi District Reported Crimes

ಅಪಘಾತ ಪ್ರಕರಣಗಳು :
ನೆಲೋಗಿ ಠಾಣೆ : ಶ್ರೀ ಬಸಪ್ಪ ತಂದೆ ಸೋಮಪ್ಪ ದೊಡ್ಡಮನಿ ಸಾ : ಕೆಲ್ಲೂರ ತಾ : ಜೇವರಗಿ ಇವರು ದಿನಾಂಕ: 23-06-2016 ರಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿ ಮಲ್ಲಮ್ಮಾ ಹಾಗೂ ನಮ್ಮ ಸಡಕ್ ಶಂಕರೆಪ್ಪ ಮಲ್ಲಾಬಾದ ಮೂವರು ಕೂಡಿ ನಮ್ಮೂರಿನಿಂದ ನಮ್ಮ ಸಡಕನ ಊರಾದ ಬಟಗೇರಾ ಗ್ರಾಮಕ್ಕೆ ಹೊರಟೆವು ನಾವೆಲ್ಲರೂ ಅಂಕಲಗಿ ಗ್ರಾಮದವರಿಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಬಟಗೇರಾಕ್ಕೆ ಹೋಗುವ ಸಲುವಾಗಿ ಅಲ್ಲಿಯೆ ನಿಂತಿದ್ದ ಗಾಣಗಾಪೂರ ಕಡೆಗೆ ಹೊಗುವ ಟಂ ಟಂ ನಂ:KA-32-B-3252 ನೇದ್ದರಲ್ಲಿ ನಾವೆಲ್ಲರೂ ಕುಳಿತುಕೊಂಡು ಹೊಗುತ್ತಿದ್ದೇವು. ನಾವು ಕುಳಿತುಕೊಂಡು ಹೊಗುತ್ತಿದ್ದ ಟಂಟಂ ನೇದ್ದರ ಚಾಲಕನು ತನ್ನ ಟಂಟಂ ಅನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸುತ್ತಿದ್ದನು ಆಗ ನಾನು ನಿದಾನವಾಗಿ ಟಂ ಟಂ ನಡೆಸು ಅಂತಾ ಹೇಳಿದರು ಸಹ ಕೇಳದೆ ಮದ್ಯಾಹ್ನ 3:00 ಗಂಟೆ ಸುಮಾರಿಗೆ ಬೋಸಗಾ ಕ್ರಾಸ ಹತ್ತಿರ ಅಂಕಲಗಾ ಗಾಣಗಾಪೂರ ರೋಡಿನ ಮೇಲೆ ಅತೀ ವೇಗದಿಂದ ನಡೆಯಿಸಿ ಟಂಟಂ ಒಮ್ಮಲೆ ಕಟ್ಟ ಹೊಡೆದ್ದಿದ್ದರಿಂದ ಟಂ ಟಂ ವಾಹನ ರಸ್ತೆ ಎಡಬದಿ ತೆಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿತು. ನಾನು ಮತ್ತು ಶಂಕರೆಪ್ಪ ಇಬ್ಬರೂ ಟಂಟಂದಿಂದ ಹೊರಗೆ ಜಿಗಿದೇವು ನನ್ನ ಹೆಂಡತಿ ಮಲ್ಲಮ್ಮಾ ಇವಳಿಗೆ ಟಂ ಟಂ ಬಾಗಿಲು ಬಡಿದು ಅವಳ ಎಡ ತೋಡೆ ಮತ್ತು ಎಡಕಾಲು ಮೋಳಕಾಲು ಕೈಗೆ ಬಾರಿ ರಕ್ತಗಾಯವಾಗಿದ್ದು ತಲೆಯ ಎಡ ಭಾಗದಲ್ಲಿ ಮತ್ತು ಬೆನ್ನಿಗೆ ರಕ್ತಗಾಯವಾಗಿದ್ದವು ನಂತರ ಟಂ ಟಂಚಾಲಕನಿಗೆ ಹೆಸರು ಕೆಳಲಾಗಿ ಅವನು ನನ್ನ ಹೆಂಡತಿಗೆ ಆದ ಗಾಯ ನೋಡಿ ತನ್ನ ಟಂ ಟಂ ಸ್ಥಳದಲ್ಲಿ ಬಿಟ್ಟು ಓಡಿ ಹೊದನು ಮುಂದೆ ನೋಡಿದರೆ ಅವನಿಗೆ ಗುರುತಿಸುತ್ತೇನೆ. ನಂತರ ನಾನು ಮತ್ತು ಶಂಕರೆಪ್ಪ  ಇಬ್ಬರೂ ಕೂಡಿ ನನ್ನ ಹೆಂಡತಿ ಮಲ್ಲಮ್ಮಾ ಇವಳಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಕಾಮರೇಡ್ಡಿ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತೇವೆ. ಕಾಮರೇಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ಇದ್ದುದ್ದರಿಂದ ವೈದ್ಯರ ಸಲಹೇ ಮೇರೆಗೆ ನಿನ್ನೆ ದಿನಾಂಕ: 06/07/2016 ರಂದು ಸಾಯಂಕಾಲ ನನ್ನ ಹೆಂಡತಿ ಮಲ್ಲಮ್ಮಾ ಇವಳಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ನಮ್ಮೂರಿಗೆ ಕರೆದುಕೊಂಡು ಬಂದಿರುತ್ತೇವೆ ರಾತ್ರಿ 9:30 ಗಂಟೆ ಸುಮಾರಿಗೆ ನನ್ನ ಹೆಂಡತಿ ಮಲ್ಲಮ್ಮಾ ಇವಳು ರಸ್ತೆ ಅಪಘಾತದಲ್ಲಿ ಆದ ಗಾಯಗಳಿಂದ ಮೃತಪಟ್ಟಿರುತ್ತಾಳೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರಗಿ ಠಾಣೆ : ಶ್ರೀ ಮಲ್ಲಣ್ಣಗೌಡ ತಂದೆ ಸಿದ್ದಪ್ಪಗೌಡ ಬಿರಾದಾರ ಸಾ: ಬೇಲೂರ ಹಾ : : ಜೇವರಗಿ ಇವರು ದಿನಾಂಕ: 07.07.2016 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಅಖಂಡೇಶ್ವರ ಚೌಕ ಹತ್ತಿರ ನಾನು ಮತ್ತು ಇಮಾಮಾಸಾಬ ತಂದೆ ಕಾಸಿಂಸಾಬ ತೇಲಿ ಇಬ್ಬರು ಕೂಡಿಕೊಂಡು ರೋಡಿನ ಬಾಜು ಮಾತನಾಡುತ್ತಾ ನಿಂತಾಗ ಅದೇ ವೇಳೆಗೆ ಸಿಂದಗಿ ಕ್ರಾಸ್ ಕಡೆಯಿಂದ ಒಂದು ಮೋಟಾರ ಸೈಕಲ ಸವಾರನು ಅತೇವೇಗ ಮತ್ತು  ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಎಡಗಾಲಿಗೆ ಜೋರಾಗಿ ಡಿಕ್ಕಿ ಪಡಿಸಿದನು. ಆಗ ನಾನು ರೋಡಿನ ಮೇಲೆ ಬಿದ್ದೇನು ಅಲ್ಲಿಯೇ ಇದ್ದ ಇಮಾಮಾಸಾಬ ಮತ್ತು ನನಗೆ ಪರಿಚಯದ ಅಮರ ತಂದೆ ಹರಿಶಚಂದ್ರ ಬಿಟ್ನಾಳ ಇವರು ಎಬ್ಬಸಿದಾಗ ನನಗೆ ನೋಡಲಾಗಿ ನನ್ನ ಬಲಗಾಲಿನ ಹಿಮ್ಮಡಿ ಹತ್ತಿರ ಭಾರಿ ರಕ್ತ ಗಾಯವಾಗಿತ್ತು ನಂತರ ನನಗೆ ಡಿಕ್ಕಿ ಪಡೆಸಿದ ಮೋಟಾರ ಸೈಕಲ ನಂ ನೋಡಲಾಗಿ ಕೆಎ.32.ಎಸ್.6139 ಇತ್ತು ಅದರ ಸವಾರನಿಗೆ ಹೆಸರು ಕೇಳಲಾಗಿ ಅನು ತನ್ನ ಹೆಸರು ಸೋಮಶೇಖರ ತಂದೆ ಬಸಲಿಂಗಪ್ಪ ಗೋಪಾಲಕರ್ ಸಾ: ಜೇವರಗಿ (ಕೆ) ಅಂತಾ ಹೇಳಿ ಅಲ್ಲಿ ಜನರು ಸೇರುವದನ್ನು ಕಂಡು ಸದರಿಯವನು ಮೋಟಾರ ಸೈಕಲ ಅಲ್ಲಿಯೇ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀಮತಿ ಶಿವಕಾಂತಮ್ಮ ಗಂಡ ಗುಂಡಪ್ಪ ಪೂಜಾರಿ ಸಾ: ಇಜೇರಿ ತಾಃ ಜೇವರಗಿ ಇವರು ಈಜೇರಿ ಗ್ರಾಮದಲ್ಲಿ ನಮ್ಮದೊಂದು ಇನ್ನೊಂದು ಮನೆ ಇದ್ದು ಆ ಮನೆಯಲ್ಲಿ ದೇವಿಂದ್ರಪ್ಪ ಆಂದೋಲಾ ಇತನ ಮೊದಲನೆ ಹೆಂಡತಿ ಶಂಕರುಬಾಯಿ ಮತ್ತು ಅವಳ ಮಗಳು ಭೀಮಬಾಯಿ ಇವಳು ಈಗ ಒಂದು ವರ್ಷದಿಂದ ನಮ್ಮ ಮನೆಯಲ್ಲಿ ಬಾಡಿಗೆಯಿಂದ ಇರುತ್ತಾರೆ. ದೇವಿಂದ್ರಪ್ಪ ಇತನು ನನ್ನ ಹೆಂಡತಿ ಶಂಕರುಬಾಯಿ ಇವಳಿಗೆ ನಿಮ್ಮ ಮನೆಯಲ್ಲಿ ಯಾಕೆ ? ಬಾಡಿಗೆ ಕೊಟ್ಟಿದ್ದಿರಿ ಅಂತ ನಮ್ಮ ಸಂಗಡ ಜಗಳ ಮಾಡುತ್ತಾ ಬಂದಿರುತ್ತಾರೆ, ಅದರಿಂದ ನಮಗೂ ಮತ್ತು ದೇವಿಂದ್ರಪ್ಪ ಆಂದೋಲಾ ಇಬ್ಬರ ನಡುವೆ ವೈಮನಸ್ಸು ಇರುತ್ತದೆ. ಇಂದು ದಿ. 07.07.2016 ರಂದು ಮುಂಜಾನೆ 09.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗ ಬಾಬುರಾಯ ನಮ್ಮ ಮನೆ ಮುಂದೆ ಮಾತಾಡುತ್ತಾ ನಿಂತಾಗ 1. ದೇವಿಂದ್ರಪ್ಪ ತಂದೆ ಈರಣ್ಣಾ ಆಂದೋಲಾ 2. ಈರಣ್ಣ ತಂದೆ ದೇವಿಂದ್ರಪ್ಪ ಆಂದೋಲಾ 3. ಸಿದ್ರಾಮವ್ವ ಗಂಡ ಪ್ರಭು ಆಂದೋಲಾ 5. ಭೀರಲಿಂಗ ತಂದೆ ಕರಣಪ್ಪ ಆಂದೋಲಾ ಇವರೆಲ್ಲರೂ ಕೂಡಿ ನಮ್ಮ ಮನೆ ಮುಂದಿನ ಅಂಗಳದಲ್ಲಿ ಬಂದು ಅವರೆಲ್ಲರೂ ರಂಡಿ ನಿನಗೆ ಎಷ್ಟು ಸಲ ಹೇಳಿದರು ಶಂಕರುಬಾಯಿ ಆಂದೋಲಾ ಇವಳಿಗೆ ನಿಮ್ಮ ಮನೆಯಿಂದ ಬಾಡಿಗೆ ಬಿಡಿಸು ಅಂತ ಹೇಳಿದರು ಬಿಡಿಸುತ್ತಿಲ್ಲಾ ಅಂತ ಬೈಯುತ್ತಿದ್ದಾಗ ನನ್ನ ಮಗ ಬಾಬುರಾಯ ಇತನು ನಮ್ಮ ತಾಯಿಗೆ ಯಾಕೆ ಬೈಯುತ್ತಿದ್ದರಿ ? ಅಂತಾ ಕೇಳಿದಕ್ಕೆ ದೇವಿಂದ್ರಪ್ಪ ಇತನು ನನ್ನ ಮಗನಿಗೆ ಹಿಡಿದು ಕೈಯಿಂದ ಬೆನ್ನ ಮೇಲೆ ಹೊಡೆದನು. ಸಿದ್ರಾಮವ್ವ ಆಂದೋಲಾ ಇವಳು ನನ್ನ ಕೂದಲು ಹಿಡಿದು ಜಗ್ಗಾಡಿದಳು. ಈರಣ್ಣ ಆಂದೋಲಾ ಇತನು ಕೂಡಾ ನನ್ನ ಮಗನಿಗೆ ಕಾಲಿನಿಂದ ಬಲ ತೊಡೆಯ ಹತ್ತಿರ ಒದ್ದಿರುತ್ತಾನೆ. ಅಂಜಿ ಓಡುತ್ತಿದ್ದ ನನ್ನ ಮಗನಿಗೆ ಭೀರಲಿಂಗ ಆಂದೋಲಾ ಈತನು ತಡೆದು ನಿಲ್ಲಸಿದಾಗ ದೇವಿಂದ್ರಪ್ಪ  ಇತನು ಕೈಯಿಂದ ಬೆನ್ನ ಮೇಲೆ ಹೊಡೆದು ಶಂಕರುಬಾಯಿ ಇವಳಿಗೆ ಬಾಡಿಗೆ ಮನೆ ಬಿಡಿಸದೇ ಇದ್ದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ದೇವಿಂದ್ರಪ್ಪ ತಂದೆ ಈರಣ್ಣಾ ಆಂದೊಲಾ ಸಾ: ಇಜೇರಿ ತಾಃ ಜೇವರಗಿ  ಇವರಿಗೆ ಇಬ್ಬರೂ ಹೆಂಡತಿಯರು ಇದ್ದು, ಮೊದಲನೆ ಹೆಂಡತಿ ಶಂಕರಬಾಯಿ ಇದ್ದು ಅವಳ ಹೊಟ್ಟೆಯಿಂದ ಭೀಮಬಾಯಿ ಅಂತಾ 18 ವರ್ಷದ ಮಗಳು ಇರುತ್ತಾಳೆ, ಎರಡನೆ ಹೆಂಡತಿಯ ಚನ್ನಮ್ಮ ಅಂತಾ ಇದ್ದು ಅವಳು ಸತ್ತಿರುತ್ತಾಳೆ, ಅವಳ ಹೊಟ್ಟೆಯಿಂದ ಈರಣ್ಣಾ, ಬಸ್ಸಮ್ಮ, ಭೀಮಾಶಂಕರ, ಅಂತಾ ಮೂವರು ಮಕ್ಕಳಿರುತ್ತಾರೆ, ನನ್ನ ಮಗಳು ಬಸ್ಸಮ್ಮ ಇವಳ ಮದುವೆಯಾಗಿದ್ದು ಅವಳು ತನ್ನ ಗಂಡನ ಮನೆಯಲ್ಲಿರುತ್ತಾಳೆ, ನಾನು ಮತ್ತು ನನ್ನ ಮಕ್ಕಳು ಬೇರೆ ಮನೆ ಮಾಡಿಕೊಂಡು ಇರುತ್ತೆವೆ. ನನ್ನ ಮೊದಲನೆ ಹೆಂಡತಿ ಮತ್ತು ಅವಳ ಮಗಳು ಈಗ ನಾಲ್ಕು ವರ್ಷದಿಂದ ನನ್ನ ಅಣ್ಣನಾದ ಗುಂಡಪ್ಪ ಈತನ ಮನೆಯಲ್ಲಿ ಬಾಡಿಗೆ ಹಿಡಿದುಕೊಂಡು ಬೇರೆ ಕಡೆಗೆ ವಾಸವಾಗಿರುತ್ತಾಳೆ, ಅದರಿಂದ ನನಗೂ ಮತ್ತು ನನ್ನ ಅಣ್ಣನಿಗೂ  ವೈಮನಸ್ಸು ಇರುತ್ತದೆ. ನನ್ನ ಅಣ್ಣನು ಮತ್ತು ನಮ್ಮ ಹೊಲ ಅಕ್ಕಪಕ್ಕದಲ್ಲಿ ಇರುತ್ತವೆ. ಹೀಗಿದ್ದು ದಿ. 06.07.2016 ರಂದು ಮದ್ಯಾಹ್ನ ವೇಳೆಗೆ ಹೊಲದಲ್ಲಿ ನನ್ನ ಮಗ ಈರಣ್ಣನ ಸಂಗಡ ನನ್ನ ಅಣ್ಣನ ಮಗ ದೇವಪ್ಪ ಇತನು ಹೊಲದಲ್ಲಿ ಹೋಗಿ ಬರುವ ವಿಷಯದಲ್ಲಿ ಜಗಳ ಮಾಡಿದ್ದು ಇರುತ್ತದೆ. ಇಂದು ದಿ. 07.07.2016 ರಂದು ಮುಂಜಾನೆ 9.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗ ಈರಣ್ಣಾ ಅಕ್ಕ ಸಿದ್ರಾಮವ್ವಾ ಎಲ್ಲರೂ ನಮ್ಮ ಮನೆಯ ಮುಂದೆ ಇದ್ದಾಗ. 1. ದೇವಪ್ಪ ತಂದೆ ಗುಂಡಪ್ಪ ಆಂದೊಲಾ, 2. ಬಾಬುರಾವ ತಂದೆ ಗುಂಡಪ್ಪ ಆಂದೊಲಾ, 3. ಶಂಕರೇಪ್ಪ ತಂದೆ ಗುಂಡಪ್ಪ ಆಂದೊಲಾ, 4. ಶರಣಪ್ಪ ತಂದೆ ಗುಂಡಪ್ಪ ಆಂದೊಲಾ,  5. ಗುಂಡಪ್ಪ ತಂದೆ ಹೊನ್ನಪ್ಪ ಆಂದೊಲಾ, 6. ಶಿವಕಾಂತಮ್ಮ ಗಂಡ ಗುಂಡಪ್ಪ ಆಂದೊಲಾ, 7. ಶಂಕರಬಾಯಿ ಗಂಡ ದೇವಿಂದ್ರಪ್ಪ ಆಂದೊಲಾ, 8. ಭೀಮಬಾಯಿ ತಂದೆ ದೇವಿಂದ್ರ ಆಂದೊಲಾ ಇವರೆಲ್ಲರೂ ಕೂಡಿಕೊಂಡು ಬಂದು ನನ್ನ ಮಗನಿಗೆ ಅವಾಚ್ಯವಾಗಿ ಬೈಯಹತ್ತಿದ್ದರು. ಆಗ ನಾನು ಅವರಿಗೆ ನನ್ನ ಮಗನಿಗೆ ಯಾಕೆ? ಬೈಯುತ್ತಿದ್ದಿರಿ ಅಂತಾ ಕೇಳಿದಾಗ ದೇವಪ್ಪ ಇತನು ಏ ಬೊಸಡಿ ಮಗನೆ ಹೊಲದಲ್ಲಿಯೇ ಹೊದರೆ ನೀನ್ನ ಮಗ ಈರಣ್ಣಾ ಯಾಕೆ? ಜಗಳ ಮಾಡುತ್ತಾನೆ ಅಂತಾ ಅವಾಚ್ಯವಾಗಿ ಬೈಯ್ದು ಕಾಲಿನಿಂದ ನನ್ನ ಟೊಂಕದ ಮೇಲೆ ಒದ್ದಿರುತ್ತಾನೆ, ಅಲ್ಲದೆ ಬಾಬುರಾವ ಈತನು ಬಡಿಗೆಯಿಂದ ನನ್ನ ಬೇನ್ನು ಮೇಲೆ ಹೊಡೆದಿರುತ್ತಾನೆ, ನನ್ನ ಮಗ ಈರಣ್ಣಾ ಇತನು ನಮ್ಮ ಹೊಲದಲ್ಲಿ ಬಂದು ನಮಗೆ ಜಗಳ ಮಾಡಿರುತ್ತಿರಿ, ಅಂತಾ ಅಂದು ನನಗೆ ಬಿಡಿಸಿಕೊಳಲು ಬಂದಾಗ ಶಂಕರೇಪ್ಪ ಇತನು ನನ್ನ ಮಗ ಈರಣ್ಣನಿಗೆ ಕೈಯಿಂದ ಕಪಾಳದ ಮೇಲೆ ಹೊಡೆದು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾನೆ, ಶಿವಕಾಂತಮ್ಮ ಇವಳು ಕಲ್ಲಿನಿಂದ ನನ್ನ ಅಕ್ಕ ಸಿದ್ರಾಮವ್ವಾ ಇವಳ ಬಲಕಾಲಿನ ಪಾದದ ಹತ್ತಿರ ಹೊಡೆದಿರುತ್ತಾಳೆ, ಶಂಕ್ರುಬಾಯಿ ಮತ್ತು ಭೀಮಬಾಯಿ ಇವರು ನನ್ನ ಅಕ್ಕಳ ತಲೆಯಲ್ಲಿನ ಕೂದಲೂ ಹಿಡಿದು ಜಗ್ಗಿರುತ್ತಾರೆ. ಗುಂಡಪ್ಪ ಈತನು ಈ ಬೊಸಡಿ ಮಕ್ಕಳಿಗೆ ಸೊಕ್ಕು ಬಹಳ ಇದೆ ಅಂತಾ ಅವಾಚ್ಯವಾಗಿ ಬೈಯ್ದಿರುತ್ತಾನೆ, ಮತ್ತು  ಅವರೆಲ್ಲರೂ ನಮಗೆ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಹೊಲದಲ್ಲಿ ಹೋಗಿ ಬರುವ ವಿಷಯದಲ್ಲಿ ಬಂದರೆ ನೀಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿರ್ಲಕ್ಷದಿಂದ ರೋಗಿಯ ಸಾವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರಿ. ರಾಜಕುಮಾರ ತಂದೆ ತುಳಜಾರಾಂ ಬಬಲಾದಕರ್  ಸಾಃ  ರಾಜೀವಗಾಂಧಿ ನಗರ ಕಲಬುರಗಿ ರವರ ತಂಗಿಯಾದ  ರಾಣಮ್ಮ ಇವಳು ಈಗ 4-5 ದಿವಸಗಳ ಹಿಂದೆ ತಲೆನೋವು ಮತ್ತು ಜ್ವರದಿಂದ ಬಳಲುತ್ತಿದ್ದು, ದಿನಾಂಕಃ 06/07/2016 ರ ರಾತ್ರಿ ತಲೆನೋವು ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಇಂದು ದಿನಾಂಕಃ 07/07/2016 ರಂದು ಬೆಳಿಗಿನ ಜಾವ 3.15 .ಎಂ ಕ್ಕೆ ಬಸವೇಶ್ವರ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು, ಉಪಚಾರ ಕಾಲಕ್ಕೆ ಬಸವೇಶ್ವರ ಆಸ್ಪತ್ರೆಯ ಆಡಳಿತಾಧಿಕಾರಿಗಳು, ಕರ್ತವ್ಯದ ಮೇಲಿದ್ದ ವೈದ್ಯಾಧಿಕಾರಿಗಳು ಹಾಗೂ ನರ್ಸುಗಳು ನನ್ನ ತಂಗಿಯಾದ ರಾಣಮ್ಮ ಇವಳಿಗೆ ಸೂಕ್ತ ಕಾಲಕ್ಕೆ ಸರಿಯಾದ ಚಿಕಿತ್ಸೆ ಕೊಡದೇ ನಿರ್ಲಕ್ಷತನ ವಹಿಸಿದ್ದರಿಂದ ನನ್ನ ತಂಗಿ ರಾಣಮ್ಮ ಇವಳು ಇಂದು ದಿನಾಂಕಃ 07/07/2016 ರಂದು ಬೆಳಿಗ್ಗೆ 6.00 ಎಎಂಕ್ಕೆ ಮೃತಪಟ್ಟಿರುತ್ತಾಳೆ ನನ್ನ ತಂಗಿಯಾರ ರಾಣಮ್ಮ ಇವಳ ಸಾವಿಗೆ ಬಸವೇಶ್ವರ ಆಸ್ಪತ್ರೆಯ ಆಡಳಿತಾಧಿಕಾರಿಗಳು, ಕರ್ತವ್ಯದ ಮೇಲಿದ್ದ ವೈದ್ಯಾಧಿಕಾರಿಗಳು ಹಾಗೂ ನರ್ಸುಗಳ ನಿರ್ಲಕ್ಷತನವೇ ಕಾರಣವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 July 2016

Kalaburagi District Reported Crimes

ನಾಡ ಪಿಸ್ತೂಲ ವಶ :
ಮಾಹಾಗಾಂವ ಠಾಣೆ : ದಿನಾಂಕ:03/07/2016 ರಂದು, ಕಲಬುರಗಿ ಹುಮನಾಬಾದ ಎನ್.ಹೆಚ್. 218 ನೇದ್ದರ ದಸ್ತಾಪೂರ ಕ್ರಾಸ ಹತ್ತಿರ ಇರುವ ರೇಲ್ವೆ ಮೇಲ್ಸೇತುವೆ ಮೇಲೆ ನಾಲ್ಕು ಜನರು ಒಂದು ಕಾರ ನಿಲ್ಲಿಸಿ ದರೋಡೆ ಅಥವಾ ಸುಲಿಗೆ ಮಾಡುವ ಉದ್ದೇಶದಿಂದ ಪಿಸ್ತೂಲ ತೋರಿಸಿ ಹೋಗಿ ಬರುವ ವಾಹನಗಳಿಗೆ ಹಾಗು ಜನರಿಗೆ ಹೆದರಿಸುತ್ತಿದ್ದಾರೆ ಅಂತಾ ಮಾಹಿತಿ  ಬಂದ ಮೇರೆಗೆ,  ಪಿ.ಎಸ್.ಐ. ಮಾಹಾಗಾಂವ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಸ್ತಾಪೂರ ಕ್ರಾಸಿನ ರೇಲ್ವೆ ಮೇಲ್ಸೇತುವೆ ಮೇಲೆ ಒಂದು ಕಾರ ನಿಂತಿದ್ದು ಅದರ ಹತ್ತಿರ 4 ಜನ ವ್ಯಕ್ತಿಗಳು ನಿಂತುಕೊಂಡಿದ್ದು. ಅವರು ಜೀಪನ್ನು ನೋಡಿ, ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದರು. ಕಾರ  ಹತ್ತಿರ ಹೋಗಿ ನೋಡಲಾಗಿ ಒಂದು ಟಾಟಾ ಇಂಡಿಕಾ ಕಾರ ನಂ. ಎಪಿ:09 ಬಿಎಲ್:1546 ನೇದ್ದು ಇದ್ದು. ಅದರ :ಕಿ: 50000-00 ರೂ.  ಕಾರಿನಲ್ಲಿ ಪರಿಶೀಲಿಸಿ ನೋಡಲಾಗಿ ಕಾರಿನ ಹಿಂದಿನ ಸೀಟಿನಲ್ಲಿ ಯಾವುದೇ ದಾಖಲಾತಿ ಇರದ 1) ಒಂದು ನಾಡ ಪಿಸ್ತೂಲ, :ಕಿ: 5000-00 ರೂ. 2) ಒಂದು ಸ್ಯಾಮಸಾಂಗ ಕಂಪನಿ ಮೊಬೈಲ, :ಕಿ: 500-00 ರೂ. 3) ಒಂದು ಲ್ಯಾಪಟ್ಯಾಪ ಹೋಲುವ ಡಿವಿಡಿ ಪ್ಲೇಯರ್ :ಕಿ: 1000-00 ರೂ. ನೇದ್ದವುಗಳು ದೊರೆತ್ತಿದ್ದು ಹೀಗೆ ಒಟ್ಟು :ಕಿ: 56500-00 ರೂ. ನೇದ್ದುವುಗಳನ್ನು ಮುಂದಿನ ಪುರಾವೆಗಾಗಿ ಜಪ್ತಿಪಡಿಸಿಕೊಂಡು ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳದಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಆಳಂದ ಠಾಣೆ : ಶ್ರೀ ರಾಜೇಂದ್ರ ತಂದೆ ಬಾಬುರಾವ ಮೂಲಗೆ ಸಾ: ಕಿಣ್ಣಿಸುಲ್ತಾನ ತಾ:ಆಳಂದ ಜಿ: ಕಲಬುರಗಿ ಇವರ ಮಗಳಾದ ಸುಕನ್ಯಾ ಇವಳಿಗೆ ದಿನಾಂಕ; 15/05/2015 ರಂದು ಆಳಂದ ಪಟ್ಟಣದಲ್ಲಿರುವ ಎ.ವಿ ಪಾಟಿಲ್ ಮಂಗಲ ಕಾರ್ಯಾಲಯದಲ್ಲಿ ಸಂಪ್ರದಾಯದಂತೆ ಮಟಗಿ ಗ್ರಾಮದ ಯಶವಂತರಾಯ ತಂದೆ ಮಲ್ಲಿಕಾರ್ಜುನ್ ಬಿರಾದಾರ ಇತನ ಜೊತೆ ಸುಮಾರು 12 ಲಕ್ಷ ರೂ ಖರ್ಚು ಮಾಡಿ ಮದುವೆ ಮಾಡಿ ಕೊಟ್ಟಿರುತ್ತೇನೆ. ಮದುವೆ ಕಾಲದಲ್ಲಿ 210 ಗ್ರಾಂ ಬಂಗಾರ 2 ಲಕ್ಷ ರೂ ವರದಕ್ಷಿಣೆ ಕೊಟ್ಟಿದ್ದು ನನ್ನ ಅಳಿಯನು ಝಾರ್ಕಂಡ ರಾಜ್ಯದ ಇಟಾವ ದಲ್ಲಿ ಇಂಜಿನಿಯರ್‌ ಅಂತಾ ಖಾಸಗಿ ಕಂಪನಿಯಲ್ಲಿ  ಕೆಲಸ ಮಾಡುತ್ತಾನೆ. ಮದುವೆಯಲ್ಲಿ ಬೆಳ್ಳಿಯ ತಾಟು ಮತ್ತು ಬೆಳ್ಳಿಯ ಸಮಯ ಕೇಳಿದ್ದು ಕೊಟ್ಟಿರುವದಿಲ್ಲ ನನ್ನ ಅಳಿಯ ಹಾಗು ಅವನ ತಾಯಿ ಜಗದೇವಿ ಅವನ ತಂದೆ ಮಲ್ಲಿಕಾರ್ಜುನ್ ನಮ್ಮ ಅಳಿಯನ ಅಣ್ಣ ಬಸವಂತ್ರಾಯ ಇವರುಗಳು ಯಾವಾಗಲು ನನ್ನ ಮಗಳಿಗೆ ಬೆಳ್ಳಿ ಸಾಮಾನುಗಳು ಕೊಟ್ಟಿಲ್ಲ ಎಂದು ಬೈಯುವದು ಹೊಡೆಬಡೆ ಮಾಡುವದು ಮಾಡುತ್ತಿದ್ದರು ಕೂಡ ಸಹಿಸಿಕೊಂಡಿರುತ್ತಾಳೆ. ಸುಮಾರು 03 ತಿಂಗಳ ಹಿಂದೆ. ತನ್ನ ಗಂಡನು ಒತ್ತಾಯ ಪೂರ್ವಕವಾಗಿ ನಾನು ಸತ್ತರೆ ಯಾರು ಕಾರಣರಲ್ಲ ಅಂತಾ ಪತ್ರ ಬರೆದುಕೊಡು ಎಂದು ಅವಳಿಂದ ಬರೆಯಿಸಿಕೊಂಡಿ ರುತ್ತಾನೆ. ಎಂದು ನಮಗೆ ತಿಳಿಸಿರುತ್ತಾಳೆ. ಅಲ್ಲಿಂದ ಇಲ್ಲಿಯವರೆಗೆ ಮಗಳ ಸಮಸ್ಯಯನ್ನು ಬಗೆ ಹರಿಸಬೇಕು ಅಂತಾ ಪ್ರಯತ್ನ ಮಾಡಿದ್ದು ನಿನ್ನೆ ದಿನಾಂಕ: 03/07/2016 ರಂದು ಮದ್ಯಾಹ್ನ ನನ್ನ ಮಗಳ ಗಂಡ, ಅತ್ತೆ, ಮಾವ , ಬಾವ ಇವರುಗಳಿಗೆ ಆಳಂದಕ್ಕೆ ಕರೆಯಿಸಿ ಶರಣು ಹತ್ತರಕಿ ಇವರ ಕಟಗಿ ಅಡ್ಡಾದಲ್ಲಿ ಪಂಚಾಯತಿ ಮಾಡಿದ್ದು ನಾನು ಮತ್ತು ನನ್ನ ಹೆಂಡತಿ ಉಮಾಬಾಯಿ ಹಾಗು ಪಂಚರಾದ ಶರಣಪ್ಪಾ ಹತ್ತರಕಿ ಸಾ: ಬಾಳೇನಕೇರಿ, ಪರಮೇಶ್ವರ ಮೂಲಗೆ,ಸಾ: ಕಿಣ್ಣಿಸುಲ್ತಾನ ಹಾಗು ನಮ್ಮ ಅಣ್ಣ ಮಲ್ಲಿಕಾರ್ಜುನ್‌ ರವರ ಸಮಕ್ಷಮದಲ್ಲಿ ಪಂಚಾಯತ ಮಾಡಿ ಬೆಳ್ಳಿ ಸಮೆ ಹಾಗು ತಾಟಿನ ಬಗ್ಗೆ ವಿಚಾರಿಸಲಾಗಿ ಬೆಳ್ಳಿ ಸಾಮಾನುಗಳು ತಂದು ಕೊಟ್ಟರೆ ಆಕೆಯನ್ನು ಇಟ್ಟುಕೊಳ್ಳುವದಾಗಿ ತಿಳಿಸಿರುತ್ತಾರೆ. ಹಾಗೇ ಕಳುಹಿಸಿಕೊಟ್ಟರೆ ಆಕೆಯ ಜೀವ ಸಹಿತ ಇಡುವದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಮೇಲಿನ ಎಲ್ಲವನ್ನು ನನ್ನ ಮಗಳು ಸಹಿಸದೆ ಇಂದು ದಿನಾಂಕ 04/07/2016 ರಂದು ನಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಮ್ಮ ಮಗಳು ಮನೆಯ ಚೆತ್ತಿಗೆ ಇರುವ ಕೊಂಡಿಗೆ ತನ್ನ ಸಿರೆಯಿಂದ ನೇಣು ಹಾಕಿಕೊಂಡು ಜೋತಾಡುವಾಗ ನನ್ನ ಹೆಂಡತಿ ನೋಡಿ ಜನರಿಗೆ ಕರೆದು ಜೀವ ಇರಬಹುದು ಅಂತಾ ಕೆಳಗಿಳಿಸಿದಾಗ ಜೀವ ಇರುವದು ಕಂಡು ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ಮದ್ಯಾಹ್ನ 12-40 ಗಂಟೆಗೆ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ ಕಾರಣ ಆಕೆಯ ಅತ್ತೆ, ಗಂಡ, ಮಾವ, ಭಾವ ರವರು ಕೊಟ್ಟ ವರದಕ್ಷಿಣೆ ಕಿರುಕುಳದಿಂದ ಮನನೊಂದುಕೊಂಡು ಮನಸಿನ ಮೇಲೆ ಪರಿಣಾಮ ಮಾಡಿಕೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

04 July 2016

KALABURAGI DISTRICT REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಜೇವರ್ಗಿ ಪೊಲೀಸ ಠಾಣೆ :-  ದಿ:- 02.07.2016 ರಂದು ಶ್ರೀಮತಿ ಅಶ್ವ್ವಿನಿರಡ್ಡಿ ಗಂಡ ಸುರೇಶ ಬೊಮ್ಮನ ಸಾ: ಶಾಸ್ತ್ರಿ ಚೌಕ ಜೇವರಗಿರವರು ಬಂದು ನನಗೆ ಸುಮಾರು 10 ವರ್ಷಗಳ ಹಿಂದೆ ಯಾದಗಿರ ಪಟ್ಟಣದ ಸುರೇಶ ಬೊಮ್ಮನ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ನನ್ನ ಗಂಡನು ಪ್ರೌಡ ಶಾಲೆಯಲ್ಲಿ ಶಿಕ್ಷಕನಾಗಿರುತ್ತಾನೆ.  ಮದೆವೆಯಾಗಿನಿಂದ ನನ್ನ ಗಂಡ ಮತ್ತು ಅವನ ಅಕ್ಕ ತಂಗಿಯಾರಾದ ಸುಜಾತ ಗಂಡ ಶರಣಪ್ಪ, ಸುಮಾಂಗಲಾ ಗಂಡ ಹಿರಗಪ್ಪ, ನಾಗಮ್ಮ ಗಂಡ ಮರೆಪ್ಪ ಅನ್ವರ, ಶಾರದ ಗಂಡ ಬಸವರಾಜ ಕರದಳ್ಳಿ, ಹಾಗೂ ಮರೆಪ್ಪ ಅನ್ವರ, ಶರಣಪ್ಪ, ಬಸವರಾಜ ಕರದಳ್ಳಿ, ಇವರು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ನಿನ್ನ ಹೆಂಡತಿ ತವರು ಮನೆಯಿಂದ ಹಣ ಬಂಗಾರ ತಗೆದುಕೊಂಡು ಬಾ ಅಂತ ಮಾನಸಿಕ ದೈಹಿಕ ಕಿರುಕುಳ ಕೊಡುವದು ಮಾಡುತ್ತಾ ಬಂದಿದ್ದು.  ನನ್ನ ಗಂಡನು ಅವರ ಮಾತು ಕೇಳಿ ನನಗೆ ದಿನ ನಿತ್ಯ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. 2015 ಸಾಲಿನ ಅಕ್ಟೋಬರ ತಿಂಗಳಲ್ಲಿ ಜೇವರಗಿ ಪಟ್ಟಣದಲ್ಲಿ ಮಹಾಲಕ್ಷಿ ಜಾತ್ರೆ ಇದ್ದಾಗ ನನ್ನ ಗಂಡನು ನನ್ನ ಸಂಗಡ ನನ್ನ ಮಕ್ಕಳಿಗೆ ಕಳುಹಿಸದೇ ನನ್ನೋಬ್ಬಳಿಗೆ ಕಳುಹಿಸಿದರಿಂದ ನಾನು ನನ್ನ ತವರು ಮನೆಗೆ ಬಂದಿರುತ್ತೇನೆ. ಸದ್ಯೆ ಜೇವರಗಿಯಲ್ಲಿ ನನ್ನ ತಾಯಿಯೊಂದಿಗೆ ವಾಸವಾಗಿರುತ್ತೆನೆ. ದಿನಾಂಕ 18.06.2016 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ನಾನು ಜೇವರಗಿಯಲ್ಲಿ  ನನ್ನ ತವರು ಮನೆಯಲ್ಲಿದ್ದಾಗ ನನ್ನ ಗಂಡನಾದ  1. ಸುರೇಶ ತಂದೆ ಶರಣಪ್ಪ ಬೊಮ್ಮನ್, ಮತ್ತು 2.  ಸುಮಂಗಲ ಗಂಡ ಹಿರಗಪ್ಪ, 3. ಸುಜಾತ ಗಂಡ ಶಿವಶರಣಪ್ಪ ಮಂಗಲೆ, 4. ನಾಗಮ್ಮ ಗಂಡ ಮರೆಪ್ಪ ಅನ್ವರ್, 5. ಮರೆಪ್ಪ ಅನ್ವರ್, 6. ಶಿವಶರಣಪ್ಪ ಮಂಗಲೆ, 7. ಶಾರದಾ ಗಂಡ ಬರಸರಾಜ ಕರದಳ್ಳಿ, 8. ಬಸವರಾಜ ಕರದಳ್ಳಿ ಇವರೆಲ್ಲರೂ ಕೂಡಿಕೊಂಡು, ನಮ್ಮ ಮನೆಗೆ ಬಂದು ಅವರೆಲ್ಲರೂ ನನಗೆ ಅವಾಚ್ಯವಾಗಿ ಬೈದು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದು ಕೂದಲು ಹಿಡಿದು ಎಳೆದಾಡಿ ಹೊಟೆಗೆ ಒದ್ದಿರುತ್ತಾರೆ. ಎಲ್ಲರೂ ಈಕೆಗೆ  ಸೊಕ್ಕು ಬಹಳ ಇದೆ ಇವತ್ತು ಜೀವಸಹಿತ ಬಿಡ್ಯಾರದು ಎಂದು ಜೀವದ ಬೇದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಜೂಜುಕೋರರ ಬಂಧನ:
ನಿಂಬರ್ಗಾ ಪೊಲೀಸ ಠಾಣೆ :- ದಿನಾಂಕ 03/07/2016 ರಂದು ಶ್ರೀ ಉದಂಡಪ್ಪ ಪಿ.ಎಸ್.ಐ ನಿಂಬರ್ಗಾ ಠಾಣೆರವರು ನಿಂಬರ್ಗಾ ಗ್ರಾಮದ ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ  ಸ್ಥಳದಲ್ಲಿ  ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಪಂಚರಾದ 1) ಬಸವರಾಜ ತಂದೆ ನಾಗಪ್ಪ ಕೋರೆ ಸಾ: ನಿಂಬರ್ಗಾ, 2)  ಈರಯ್ಯ ತಂದೆ ಶರಣಯ್ಯ  ಹಿರೇಮಠ  ಸಾ: ನಿಂಬರ್ಗಾ ಇವರನ್ನು ಮತ್ತು ಸಿಬ್ಬಂದಿ 1) ವಿಧ್ಯಾಸಾಗರ ಸಿಪಿಸಿ 411, 2) ಶಿವಶರಣ ಸಿಪಿಸಿ 1153, 3) ಶಿವಪುತ್ರ ಸಿಪಿಸಿ 1139 ರವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 07 ಜನರನ್ನು ಬಂಧಿಸಿ ವಿಚಾರಿಸಲಾಗಿ ಅವರ ಹೆಸರು 01) ಮೈನೂದ್ದೀನ ತಂದೆ ನಬಿಸಾಬ ಬಡೇಗರ 02] ಮಡಿವಾಳಯ್ಯ ತಂದೆ ಶರಣಯ್ಯ ಗಣಾಚಾರಿ 03) ಚಂದ್ರಕಾಂತ ತಂದೆ ಕಲ್ಯಾಣಪ್ಪ ಮಾನೆ 04) ಶಂಕರ ತಂದೆ ಮಾರುತಿ ಭಜಂತ್ರಿ 05) ಭೀಮಶಾ ತಂದೆ ಮಲ್ಲಪ್ಪ ಜಮಾದಾರ 06) ಅಶೋಕ ತಂದೆ ಈರಣ್ಣಾ ಜಮಾದಾರ 07) ಶರಣಪ್ಪ ತಂದೆ ಧರ್ಮರಾಯ ಹುಗೊಂಡ ಸಾ|| ಎಲ್ಲರೂ ನಿಂಬರ್ಗಾ ಇವರಿಂದ  52 ಇಸ್ಪಿಟ ಎಲೆಗಳು ಮತ್ತು ನಗದು ಹಣ ರೂ. 2350/- ಜಪ್ತಿಪಡಿಸಿಕೊಂಡು ಆಪಾದಿತರ ವಿರುದ್ದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: :  ದಿನಾಂಕ 03/07/16 ರಂದು ಸೈಯ್ಯದ ಸಲೀಮ ಶಹಾ ಇತನು ಇಂಡಸ್ಟ್ರೀಯಲ ಏರಿಯಾ ಒಳಗಡೆಯಿಂದ ನಡೆದುಕೊಂಡು ಹುಮನಾಬಾದ- ಸೇಡಂ ರಿಂಗ ರೋಡಿಗೆ ಇರುವ ಇಂಡಸ್ಟ್ರೀಯಲ ಏರಿಯಾ ಕ್ರಾಸನಲ್ಲಿ ರೋಡ ದಾಟುವಾಗ ಖರ್ಗೆ ಪೆಟ್ರೋಲ ಪಂಪ ಕಡೆಯಿಂದ KA28-M4060  ಕಾರು ಚಾಲಕ ತನ್ನ ಕಾರನ್ನು ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ನಡೆಯಿಸಿಕೊಂಡು ರೋಡ ಬದಿಯಲ್ಲಿ ನಿಂತ ಸೈಯ್ಯದ ಸಲೀಮಶಹಾ ಇವರಿಗೆ ಜೋರಾಗಿ  ಡಿಕ್ಕಿ ಹೊಡೆದು ಅಪಘಾತಪಡಿಸಿ, ಕಾರು ಹಾಗೇ ಓಡಿಸಿಕೊಂಡು ಹೋಗಿರುತ್ತಾನೆ. ಇದರಿಂದಾಗಿ ಸೈಯ್ಯದ ಸಲೀಮ ಶಹಾನಿಗೆ ಹಣೆಗೆ ಮತ್ತು ಬಲಗಣ್ಣಿಗೆ, ಮುಖಕ್ಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಮೂಗಿನಿಂದ ರಕ್ತ ಸೋರಿ, ಸ್ಥಳದಲ್ಲಿ ಮೃತಪಟ್ಟ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ದಿನಾಂಕ 03/07/16 ರಂದು ವಿಚಯಕುಮಾರ ಇತನು ತನ್ನ ಮೋ.ಸೈಕಲ್ ನಂ KA32-R9444 ನೇದ್ದನ್ನು ಕೇಂದ್ರ ಬಸ್ ನಿಲ್ದಾಣಕಡೆಯಿಂದ ಎಸ್.ವಿ.ಪಿ ಸರ್ಕಲ್ ಕಡೆಗೆ ಹೋಗುವಾಗ ಮೋಹನ ಲಾಡ್ಜ ಹತ್ತಿರ ಸದರಿಯವನ ಮೋಟಾರ್ ಸೈಕಲ್ ಅಡ್ಡಲಾಗಿ ಹಂದಿ ಬಂದಿದ್ದರಿಂಧ ಒಮ್ಮೆಲೆ ಕಟ್ ಮಾಡಿ ಬ್ರೆಕ್ ಹಾಕಿದಾಗ ಮೋ.ಸೈಕಲ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದ ಮೃತಪಟ್ಟ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.