ಅಪಘಾತ ಪ್ರಕರಣಗಳು :
ನೆಲೋಗಿ ಠಾಣೆ : ಶ್ರೀ ಬಸಪ್ಪ ತಂದೆ ಸೋಮಪ್ಪ ದೊಡ್ಡಮನಿ
ಸಾ : ಕೆಲ್ಲೂರ ತಾ : ಜೇವರಗಿ ಇವರು ದಿನಾಂಕ: 23-06-2016
ರಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿ ಮಲ್ಲಮ್ಮಾ ಹಾಗೂ ನಮ್ಮ ಸಡಕ್ ಶಂಕರೆಪ್ಪ ಮಲ್ಲಾಬಾದ
ಮೂವರು ಕೂಡಿ ನಮ್ಮೂರಿನಿಂದ ನಮ್ಮ ಸಡಕನ ಊರಾದ ಬಟಗೇರಾ ಗ್ರಾಮಕ್ಕೆ ಹೊರಟೆವು ನಾವೆಲ್ಲರೂ ಅಂಕಲಗಿ
ಗ್ರಾಮದವರಿಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಬಟಗೇರಾಕ್ಕೆ ಹೋಗುವ ಸಲುವಾಗಿ ಅಲ್ಲಿಯೆ ನಿಂತಿದ್ದ
ಗಾಣಗಾಪೂರ ಕಡೆಗೆ ಹೊಗುವ ಟಂ ಟಂ ನಂ:KA-32-B-3252 ನೇದ್ದರಲ್ಲಿ ನಾವೆಲ್ಲರೂ ಕುಳಿತುಕೊಂಡು ಹೊಗುತ್ತಿದ್ದೇವು. ನಾವು ಕುಳಿತುಕೊಂಡು
ಹೊಗುತ್ತಿದ್ದ ಟಂಟಂ ನೇದ್ದರ ಚಾಲಕನು ತನ್ನ ಟಂಟಂ ಅನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ
ನಡೆಸುತ್ತಿದ್ದನು ಆಗ ನಾನು ನಿದಾನವಾಗಿ ಟಂ ಟಂ ನಡೆಸು ಅಂತಾ ಹೇಳಿದರು ಸಹ ಕೇಳದೆ ಮದ್ಯಾಹ್ನ
3:00 ಗಂಟೆ ಸುಮಾರಿಗೆ ಬೋಸಗಾ ಕ್ರಾಸ ಹತ್ತಿರ ಅಂಕಲಗಾ ಗಾಣಗಾಪೂರ ರೋಡಿನ ಮೇಲೆ ಅತೀ ವೇಗದಿಂದ
ನಡೆಯಿಸಿ ಟಂಟಂ ಒಮ್ಮಲೆ ಕಟ್ಟ ಹೊಡೆದ್ದಿದ್ದರಿಂದ ಟಂ ಟಂ ವಾಹನ ರಸ್ತೆ ಎಡಬದಿ ತೆಗ್ಗಿನಲ್ಲಿ
ಪಲ್ಟಿಯಾಗಿ ಬಿದ್ದಿತು. ನಾನು ಮತ್ತು ಶಂಕರೆಪ್ಪ ಇಬ್ಬರೂ ಟಂಟಂದಿಂದ ಹೊರಗೆ ಜಿಗಿದೇವು ನನ್ನ
ಹೆಂಡತಿ ಮಲ್ಲಮ್ಮಾ ಇವಳಿಗೆ ಟಂ ಟಂ ಬಾಗಿಲು ಬಡಿದು ಅವಳ ಎಡ ತೋಡೆ ಮತ್ತು ಎಡಕಾಲು ಮೋಳಕಾಲು ಕೈಗೆ
ಬಾರಿ ರಕ್ತಗಾಯವಾಗಿದ್ದು ತಲೆಯ ಎಡ ಭಾಗದಲ್ಲಿ ಮತ್ತು ಬೆನ್ನಿಗೆ ರಕ್ತಗಾಯವಾಗಿದ್ದವು ನಂತರ ಟಂ
ಟಂಚಾಲಕನಿಗೆ ಹೆಸರು ಕೆಳಲಾಗಿ ಅವನು ನನ್ನ ಹೆಂಡತಿಗೆ ಆದ ಗಾಯ ನೋಡಿ ತನ್ನ ಟಂ ಟಂ ಸ್ಥಳದಲ್ಲಿ
ಬಿಟ್ಟು ಓಡಿ ಹೊದನು ಮುಂದೆ ನೋಡಿದರೆ ಅವನಿಗೆ ಗುರುತಿಸುತ್ತೇನೆ. ನಂತರ ನಾನು ಮತ್ತು ಶಂಕರೆಪ್ಪ ಇಬ್ಬರೂ ಕೂಡಿ ನನ್ನ ಹೆಂಡತಿ
ಮಲ್ಲಮ್ಮಾ ಇವಳಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಕಾಮರೇಡ್ಡಿ ಆಸ್ಪತ್ರೆಗೆ
ತಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತೇವೆ. ಕಾಮರೇಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ
ಉಪಚಾರ ಫಲಕಾರಿಯಾಗದೆ ಇದ್ದುದ್ದರಿಂದ ವೈದ್ಯರ ಸಲಹೇ ಮೇರೆಗೆ ನಿನ್ನೆ ದಿನಾಂಕ: 06/07/2016
ರಂದು ಸಾಯಂಕಾಲ ನನ್ನ ಹೆಂಡತಿ ಮಲ್ಲಮ್ಮಾ ಇವಳಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು
ನಮ್ಮೂರಿಗೆ ಕರೆದುಕೊಂಡು ಬಂದಿರುತ್ತೇವೆ ರಾತ್ರಿ 9:30 ಗಂಟೆ ಸುಮಾರಿಗೆ ನನ್ನ ಹೆಂಡತಿ
ಮಲ್ಲಮ್ಮಾ ಇವಳು ರಸ್ತೆ ಅಪಘಾತದಲ್ಲಿ ಆದ ಗಾಯಗಳಿಂದ ಮೃತಪಟ್ಟಿರುತ್ತಾಳೆ ಅಂಥಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ :
ಶ್ರೀ ಮಲ್ಲಣ್ಣಗೌಡ ತಂದೆ ಸಿದ್ದಪ್ಪಗೌಡ ಬಿರಾದಾರ ಸಾ: ಬೇಲೂರ ಹಾ :ವ : ಜೇವರಗಿ
ಇವರು ದಿನಾಂಕ: 07.07.2016 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ
ಅಖಂಡೇಶ್ವರ ಚೌಕ ಹತ್ತಿರ ನಾನು ಮತ್ತು ಇಮಾಮಾಸಾಬ ತಂದೆ ಕಾಸಿಂಸಾಬ ತೇಲಿ ಇಬ್ಬರು ಕೂಡಿಕೊಂಡು
ರೋಡಿನ ಬಾಜು ಮಾತನಾಡುತ್ತಾ ನಿಂತಾಗ ಅದೇ ವೇಳೆಗೆ ಸಿಂದಗಿ ಕ್ರಾಸ್ ಕಡೆಯಿಂದ ಒಂದು ಮೋಟಾರ ಸೈಕಲ
ಸವಾರನು ಅತೇವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು
ನನ್ನ ಎಡಗಾಲಿಗೆ ಜೋರಾಗಿ ಡಿಕ್ಕಿ ಪಡಿಸಿದನು. ಆಗ ನಾನು ರೋಡಿನ ಮೇಲೆ ಬಿದ್ದೇನು ಅಲ್ಲಿಯೇ ಇದ್ದ
ಇಮಾಮಾಸಾಬ ಮತ್ತು ನನಗೆ ಪರಿಚಯದ ಅಮರ ತಂದೆ ಹರಿಶಚಂದ್ರ ಬಿಟ್ನಾಳ ಇವರು ಎಬ್ಬಸಿದಾಗ ನನಗೆ
ನೋಡಲಾಗಿ ನನ್ನ ಬಲಗಾಲಿನ ಹಿಮ್ಮಡಿ ಹತ್ತಿರ ಭಾರಿ ರಕ್ತ ಗಾಯವಾಗಿತ್ತು ನಂತರ ನನಗೆ ಡಿಕ್ಕಿ
ಪಡೆಸಿದ ಮೋಟಾರ ಸೈಕಲ ನಂ ನೋಡಲಾಗಿ ಕೆಎ.32.ಎಸ್.6139 ಇತ್ತು ಅದರ ಸವಾರನಿಗೆ ಹೆಸರು ಕೇಳಲಾಗಿ
ಅನು ತನ್ನ ಹೆಸರು ಸೋಮಶೇಖರ ತಂದೆ ಬಸಲಿಂಗಪ್ಪ ಗೋಪಾಲಕರ್ ಸಾ: ಜೇವರಗಿ (ಕೆ) ಅಂತಾ ಹೇಳಿ ಅಲ್ಲಿ
ಜನರು ಸೇರುವದನ್ನು ಕಂಡು ಸದರಿಯವನು ಮೋಟಾರ ಸೈಕಲ ಅಲ್ಲಿಯೇ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀಮತಿ
ಶಿವಕಾಂತಮ್ಮ ಗಂಡ ಗುಂಡಪ್ಪ ಪೂಜಾರಿ ಸಾ: ಇಜೇರಿ ತಾಃ ಜೇವರಗಿ ಇವರು ಈಜೇರಿ ಗ್ರಾಮದಲ್ಲಿ
ನಮ್ಮದೊಂದು ಇನ್ನೊಂದು ಮನೆ ಇದ್ದು ಆ ಮನೆಯಲ್ಲಿ ದೇವಿಂದ್ರಪ್ಪ ಆಂದೋಲಾ ಇತನ ಮೊದಲನೆ ಹೆಂಡತಿ
ಶಂಕರುಬಾಯಿ ಮತ್ತು ಅವಳ ಮಗಳು ಭೀಮಬಾಯಿ ಇವಳು ಈಗ ಒಂದು ವರ್ಷದಿಂದ ನಮ್ಮ ಮನೆಯಲ್ಲಿ ಬಾಡಿಗೆಯಿಂದ
ಇರುತ್ತಾರೆ. ದೇವಿಂದ್ರಪ್ಪ ಇತನು ನನ್ನ ಹೆಂಡತಿ ಶಂಕರುಬಾಯಿ ಇವಳಿಗೆ ನಿಮ್ಮ ಮನೆಯಲ್ಲಿ ಯಾಕೆ ? ಬಾಡಿಗೆ ಕೊಟ್ಟಿದ್ದಿರಿ ಅಂತ ನಮ್ಮ ಸಂಗಡ ಜಗಳ ಮಾಡುತ್ತಾ
ಬಂದಿರುತ್ತಾರೆ, ಅದರಿಂದ ನಮಗೂ ಮತ್ತು ದೇವಿಂದ್ರಪ್ಪ
ಆಂದೋಲಾ ಇಬ್ಬರ ನಡುವೆ ವೈಮನಸ್ಸು ಇರುತ್ತದೆ. ಇಂದು ದಿ. 07.07.2016 ರಂದು
ಮುಂಜಾನೆ 09.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ
ಮಗ ಬಾಬುರಾಯ ನಮ್ಮ ಮನೆ ಮುಂದೆ ಮಾತಾಡುತ್ತಾ ನಿಂತಾಗ 1. ದೇವಿಂದ್ರಪ್ಪ
ತಂದೆ ಈರಣ್ಣಾ ಆಂದೋಲಾ 2. ಈರಣ್ಣ ತಂದೆ ದೇವಿಂದ್ರಪ್ಪ ಆಂದೋಲಾ 3. ಸಿದ್ರಾಮವ್ವ ಗಂಡ ಪ್ರಭು ಆಂದೋಲಾ 5. ಭೀರಲಿಂಗ ತಂದೆ ಕರಣಪ್ಪ ಆಂದೋಲಾ ಇವರೆಲ್ಲರೂ ಕೂಡಿ ನಮ್ಮ ಮನೆ
ಮುಂದಿನ ಅಂಗಳದಲ್ಲಿ ಬಂದು ಅವರೆಲ್ಲರೂ ರಂಡಿ ನಿನಗೆ ಎಷ್ಟು ಸಲ ಹೇಳಿದರು ಶಂಕರುಬಾಯಿ ಆಂದೋಲಾ
ಇವಳಿಗೆ ನಿಮ್ಮ ಮನೆಯಿಂದ ಬಾಡಿಗೆ ಬಿಡಿಸು ಅಂತ ಹೇಳಿದರು ಬಿಡಿಸುತ್ತಿಲ್ಲಾ ಅಂತ ಬೈಯುತ್ತಿದ್ದಾಗ
ನನ್ನ ಮಗ ಬಾಬುರಾಯ ಇತನು ನಮ್ಮ ತಾಯಿಗೆ ಯಾಕೆ ಬೈಯುತ್ತಿದ್ದರಿ ? ಅಂತಾ
ಕೇಳಿದಕ್ಕೆ ದೇವಿಂದ್ರಪ್ಪ ಇತನು ನನ್ನ ಮಗನಿಗೆ ಹಿಡಿದು ಕೈಯಿಂದ ಬೆನ್ನ ಮೇಲೆ ಹೊಡೆದನು.
ಸಿದ್ರಾಮವ್ವ ಆಂದೋಲಾ ಇವಳು ನನ್ನ ಕೂದಲು ಹಿಡಿದು ಜಗ್ಗಾಡಿದಳು. ಈರಣ್ಣ ಆಂದೋಲಾ ಇತನು ಕೂಡಾ
ನನ್ನ ಮಗನಿಗೆ ಕಾಲಿನಿಂದ ಬಲ ತೊಡೆಯ ಹತ್ತಿರ ಒದ್ದಿರುತ್ತಾನೆ. ಅಂಜಿ ಓಡುತ್ತಿದ್ದ ನನ್ನ ಮಗನಿಗೆ
ಭೀರಲಿಂಗ ಆಂದೋಲಾ ಈತನು ತಡೆದು ನಿಲ್ಲಸಿದಾಗ ದೇವಿಂದ್ರಪ್ಪ ಇತನು
ಕೈಯಿಂದ ಬೆನ್ನ ಮೇಲೆ ಹೊಡೆದು ಶಂಕರುಬಾಯಿ ಇವಳಿಗೆ ಬಾಡಿಗೆ ಮನೆ ಬಿಡಿಸದೇ ಇದ್ದರೆ ನಿಮ್ಮ ಜೀವ
ಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿರುತ್ತಾರೆ, ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ದೇವಿಂದ್ರಪ್ಪ ತಂದೆ ಈರಣ್ಣಾ ಆಂದೊಲಾ ಸಾ: ಇಜೇರಿ ತಾಃ
ಜೇವರಗಿ ಇವರಿಗೆ ಇಬ್ಬರೂ ಹೆಂಡತಿಯರು ಇದ್ದು, ಮೊದಲನೆ ಹೆಂಡತಿ ಶಂಕರಬಾಯಿ ಇದ್ದು ಅವಳ ಹೊಟ್ಟೆಯಿಂದ ಭೀಮಬಾಯಿ
ಅಂತಾ 18 ವರ್ಷದ ಮಗಳು ಇರುತ್ತಾಳೆ, ಎರಡನೆ ಹೆಂಡತಿಯ ಚನ್ನಮ್ಮ ಅಂತಾ ಇದ್ದು ಅವಳು ಸತ್ತಿರುತ್ತಾಳೆ, ಅವಳ ಹೊಟ್ಟೆಯಿಂದ ಈರಣ್ಣಾ, ಬಸ್ಸಮ್ಮ, ಭೀಮಾಶಂಕರ, ಅಂತಾ
ಮೂವರು ಮಕ್ಕಳಿರುತ್ತಾರೆ, ನನ್ನ ಮಗಳು ಬಸ್ಸಮ್ಮ ಇವಳ
ಮದುವೆಯಾಗಿದ್ದು ಅವಳು ತನ್ನ ಗಂಡನ ಮನೆಯಲ್ಲಿರುತ್ತಾಳೆ,
ನಾನು ಮತ್ತು ನನ್ನ ಮಕ್ಕಳು ಬೇರೆ ಮನೆ ಮಾಡಿಕೊಂಡು ಇರುತ್ತೆವೆ. ನನ್ನ ಮೊದಲನೆ ಹೆಂಡತಿ ಮತ್ತು
ಅವಳ ಮಗಳು ಈಗ ನಾಲ್ಕು ವರ್ಷದಿಂದ ನನ್ನ ಅಣ್ಣನಾದ ಗುಂಡಪ್ಪ ಈತನ ಮನೆಯಲ್ಲಿ ಬಾಡಿಗೆ ಹಿಡಿದುಕೊಂಡು
ಬೇರೆ ಕಡೆಗೆ ವಾಸವಾಗಿರುತ್ತಾಳೆ, ಅದರಿಂದ
ನನಗೂ ಮತ್ತು ನನ್ನ ಅಣ್ಣನಿಗೂ ವೈಮನಸ್ಸು
ಇರುತ್ತದೆ. ನನ್ನ ಅಣ್ಣನು ಮತ್ತು ನಮ್ಮ ಹೊಲ ಅಕ್ಕಪಕ್ಕದಲ್ಲಿ ಇರುತ್ತವೆ. ಹೀಗಿದ್ದು ದಿ. 06.07.2016 ರಂದು ಮದ್ಯಾಹ್ನ ವೇಳೆಗೆ ಹೊಲದಲ್ಲಿ ನನ್ನ ಮಗ ಈರಣ್ಣನ ಸಂಗಡ
ನನ್ನ ಅಣ್ಣನ ಮಗ ದೇವಪ್ಪ ಇತನು ಹೊಲದಲ್ಲಿ ಹೋಗಿ ಬರುವ ವಿಷಯದಲ್ಲಿ ಜಗಳ ಮಾಡಿದ್ದು ಇರುತ್ತದೆ.
ಇಂದು ದಿ. 07.07.2016 ರಂದು ಮುಂಜಾನೆ 9.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗ ಈರಣ್ಣಾ ಅಕ್ಕ
ಸಿದ್ರಾಮವ್ವಾ ಎಲ್ಲರೂ ನಮ್ಮ ಮನೆಯ ಮುಂದೆ ಇದ್ದಾಗ. 1. ದೇವಪ್ಪ
ತಂದೆ ಗುಂಡಪ್ಪ ಆಂದೊಲಾ, 2. ಬಾಬುರಾವ ತಂದೆ ಗುಂಡಪ್ಪ ಆಂದೊಲಾ, 3. ಶಂಕರೇಪ್ಪ ತಂದೆ ಗುಂಡಪ್ಪ ಆಂದೊಲಾ, 4. ಶರಣಪ್ಪ ತಂದೆ ಗುಂಡಪ್ಪ ಆಂದೊಲಾ,
5. ಗುಂಡಪ್ಪ ತಂದೆ ಹೊನ್ನಪ್ಪ ಆಂದೊಲಾ, 6. ಶಿವಕಾಂತಮ್ಮ
ಗಂಡ ಗುಂಡಪ್ಪ ಆಂದೊಲಾ, 7. ಶಂಕರಬಾಯಿ ಗಂಡ ದೇವಿಂದ್ರಪ್ಪ ಆಂದೊಲಾ, 8. ಭೀಮಬಾಯಿ ತಂದೆ ದೇವಿಂದ್ರ ಆಂದೊಲಾ ಇವರೆಲ್ಲರೂ ಕೂಡಿಕೊಂಡು
ಬಂದು ನನ್ನ ಮಗನಿಗೆ ಅವಾಚ್ಯವಾಗಿ ಬೈಯಹತ್ತಿದ್ದರು. ಆಗ ನಾನು ಅವರಿಗೆ ನನ್ನ ಮಗನಿಗೆ ಯಾಕೆ? ಬೈಯುತ್ತಿದ್ದಿರಿ ಅಂತಾ ಕೇಳಿದಾಗ ದೇವಪ್ಪ ಇತನು ಏ ಬೊಸಡಿ
ಮಗನೆ ಹೊಲದಲ್ಲಿಯೇ ಹೊದರೆ ನೀನ್ನ ಮಗ ಈರಣ್ಣಾ ಯಾಕೆ? ಜಗಳ
ಮಾಡುತ್ತಾನೆ ಅಂತಾ ಅವಾಚ್ಯವಾಗಿ ಬೈಯ್ದು ಕಾಲಿನಿಂದ ನನ್ನ ಟೊಂಕದ ಮೇಲೆ ಒದ್ದಿರುತ್ತಾನೆ, ಅಲ್ಲದೆ ಬಾಬುರಾವ ಈತನು ಬಡಿಗೆಯಿಂದ ನನ್ನ ಬೇನ್ನು ಮೇಲೆ
ಹೊಡೆದಿರುತ್ತಾನೆ, ನನ್ನ ಮಗ ಈರಣ್ಣಾ ಇತನು ನಮ್ಮ ಹೊಲದಲ್ಲಿ
ಬಂದು ನಮಗೆ ಜಗಳ ಮಾಡಿರುತ್ತಿರಿ, ಅಂತಾ
ಅಂದು ನನಗೆ ಬಿಡಿಸಿಕೊಳಲು ಬಂದಾಗ ಶಂಕರೇಪ್ಪ ಇತನು ನನ್ನ ಮಗ ಈರಣ್ಣನಿಗೆ ಕೈಯಿಂದ ಕಪಾಳದ ಮೇಲೆ
ಹೊಡೆದು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾನೆ, ಶಿವಕಾಂತಮ್ಮ
ಇವಳು ಕಲ್ಲಿನಿಂದ ನನ್ನ ಅಕ್ಕ ಸಿದ್ರಾಮವ್ವಾ ಇವಳ ಬಲಕಾಲಿನ ಪಾದದ ಹತ್ತಿರ ಹೊಡೆದಿರುತ್ತಾಳೆ, ಶಂಕ್ರುಬಾಯಿ ಮತ್ತು ಭೀಮಬಾಯಿ ಇವರು ನನ್ನ ಅಕ್ಕಳ ತಲೆಯಲ್ಲಿನ
ಕೂದಲೂ ಹಿಡಿದು ಜಗ್ಗಿರುತ್ತಾರೆ. ಗುಂಡಪ್ಪ ಈತನು ಈ ಬೊಸಡಿ ಮಕ್ಕಳಿಗೆ ಸೊಕ್ಕು ಬಹಳ ಇದೆ ಅಂತಾ
ಅವಾಚ್ಯವಾಗಿ ಬೈಯ್ದಿರುತ್ತಾನೆ, ಮತ್ತು ಅವರೆಲ್ಲರೂ ನಮಗೆ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ
ಹೊಲದಲ್ಲಿ ಹೋಗಿ ಬರುವ ವಿಷಯದಲ್ಲಿ ಬಂದರೆ ನೀಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ
ಬೇದರಿಕೆ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ನಿರ್ಲಕ್ಷದಿಂದ ರೋಗಿಯ
ಸಾವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರಿ. ರಾಜಕುಮಾರ ತಂದೆ ತುಳಜಾರಾಂ ಬಬಲಾದಕರ್ ಸಾಃ ರಾಜೀವಗಾಂಧಿ ನಗರ ಕಲಬುರಗಿ ರವರ ತಂಗಿಯಾದ ರಾಣಮ್ಮ ಇವಳು ಈಗ 4-5 ದಿವಸಗಳ
ಹಿಂದೆ ತಲೆನೋವು ಮತ್ತು ಜ್ವರದಿಂದ ಬಳಲುತ್ತಿದ್ದು, ದಿನಾಂಕಃ 06/07/2016
ರ ರಾತ್ರಿ ತಲೆನೋವು ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಇಂದು ದಿನಾಂಕಃ 07/07/2016
ರಂದು ಬೆಳಿಗಿನ ಜಾವ 3.15 ಎ.ಎಂ ಕ್ಕೆ ಬಸವೇಶ್ವರ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು, ಉಪಚಾರ ಕಾಲಕ್ಕೆ ಬಸವೇಶ್ವರ ಆಸ್ಪತ್ರೆಯ ಆಡಳಿತಾಧಿಕಾರಿಗಳು, ಕರ್ತವ್ಯದ
ಮೇಲಿದ್ದ ವೈದ್ಯಾಧಿಕಾರಿಗಳು ಹಾಗೂ ನರ್ಸುಗಳು ನನ್ನ ತಂಗಿಯಾದ ರಾಣಮ್ಮ ಇವಳಿಗೆ ಸೂಕ್ತ ಕಾಲಕ್ಕೆ
ಸರಿಯಾದ ಚಿಕಿತ್ಸೆ ಕೊಡದೇ ನಿರ್ಲಕ್ಷತನ ವಹಿಸಿದ್ದರಿಂದ ನನ್ನ ತಂಗಿ ರಾಣಮ್ಮ ಇವಳು ಇಂದು
ದಿನಾಂಕಃ 07/07/2016 ರಂದು ಬೆಳಿಗ್ಗೆ 6.00 ಎಎಂಕ್ಕೆ ಮೃತಪಟ್ಟಿರುತ್ತಾಳೆ ನನ್ನ ತಂಗಿಯಾರ ರಾಣಮ್ಮ ಇವಳ ಸಾವಿಗೆ ಬಸವೇಶ್ವರ ಆಸ್ಪತ್ರೆಯ ಆಡಳಿತಾಧಿಕಾರಿಗಳು, ಕರ್ತವ್ಯದ ಮೇಲಿದ್ದ
ವೈದ್ಯಾಧಿಕಾರಿಗಳು ಹಾಗೂ ನರ್ಸುಗಳ ನಿರ್ಲಕ್ಷತನವೇ ಕಾರಣವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment