POLICE BHAVAN KALABURAGI

POLICE BHAVAN KALABURAGI

10 June 2016

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಜಯಕುಮಾರ ತಂದೆ ಸಿದ್ದಣ್ಣಗೌಡ ಪೊಲೀಸ್ ಪಾಟೀಲ ಸಾ : ಹವಳಗಾ ಇವರು ದಿನಾಂಕ 09-06-2016 ರಂದು ಸಾಯಂಕಾಲ ಮನೆಯಲ್ಲಿದ್ದಾಗ ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ ಪೂಜಾರಿ ಈತನು ನನಗೆ ಪೋನ ಮಾಡಿ ನಮ್ಮೂರಿನ ರೇಣುಕಾ ಸಕ್ಕರೆ ಕಾರ್ಖಾನೆಯ ಹತ್ತಿರ ಬಾ ಅಂತಾ ತಿಳಿಸಿದ ಮೇರೆಗೆ, ನಾನು ಕಾರ್ಖಾನೆಯ ಮುಂದೆ ಹೋದೆನು. ಅಲ್ಲಿ ನನಗೆ ಪೋನ ಮಾಡಿ ಕರೆಸಿದ ಮಾಳಪ್ಪ ಪೂಜಾರಿ ಹಾಗೂ ಅವನ ಗೆಳೆಯನಾದ ಭಗವಂತ ನಾಟಿಕಾರ ಸಾ : ಘತ್ತರಗಾ ಈತನು ಇದ್ದನು, ನಾನು ಅವರ ಹತ್ತಿರ ಹೋಗಿ ಮಾಳಪ್ಪನಿಗೆ ಯಾಕೋ ಏನೊ ಕೆಲಸ ಇತ್ತು ಬಾಂ ಅಂತಾ ಹೇಳಿದಿ ಅಂತಾ ಕೇಳಿದೆನು, ಆಗ ಮಾಳಪ್ಪನು ಏನೋ ಬೋಸಡಿ ಮಗನೆ ಊರಲ್ಲಿ ನಿಂದು ಮತ್ತು ನಿಮ್ಮ ಅಣ್ಣ ವಕೀಲಂದು ತಿಂಡಿ ಜಾಸ್ತಿ ಆಗ್ಯದಾ, ಊರಾಗ ನೀವು ಹ್ಯಾಂಗ ಸಂಸಾರ ಮಾಡ್ತಿರಿ ನೋಡ್ತನಿ ಅಂತಾ ಹೇಳಿದನು, ಆಗ ನಾನು ಯಾಕ ಬೈತಿ ಅಂತಾ ಕೇಳಿದಕ್ಕೆ, ಸದರಿ ಮಾಳಪ್ಪ ಮತ್ತು ಅವನ ಜೋತೆಗೆ ಇದ್ದ ಭಗವಂತ ಇಬ್ಬರು ಬೋಸಡಿ ಮಗನೆ ನಿನಗೆ ಬೈಯಲ್ಲಾ ಹೊಡಿತಿವಿ ಏನು ಮಾಡ್ಕೊತಿ ಮಾಡ್ಕೊ ಅಂತಾ ಇಬ್ಬರು ಕೂಡಿ ನನಗೆ ಕೈಯಿಂದ ಹೊಡೆದನು, ಮಾಳಪ್ಪ ಈತನು ಚಪ್ಪಲಿ ಬಿಚ್ಚಿ ಚಪ್ಪಲಿಯಿಂದ ಹೊಡೆದನು. ಆಗ ನಾನು ಕೇಳಗೆ ಬಿದ್ದಾಗ ಇಬ್ಬರು ಕೂಡಿ ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಹಾಗೂ ಬೆನ್ನಿನ ಮೇಲೆ ಒದ್ದರು, ಸದರಿಯವರು ನನಗೆ ಒದೆಯುತ್ತಿದ್ದಾಗ ಅಲ್ಲೆ ಇದ್ದ ನಮ್ಮೂರಿನ ಅಡಿವೆಪ್ಪ ತಂದೆ ಸಿದ್ದಪ್ಪ ಪೂಜಾರಿ ಹಾಗೂ ಕಾರ್ಖಾನೆಯಲ್ಲಿ ಕೆಲಸ ಮಾಡುವ ಬಸಣ್ಣಗೌಡ ಬೋರಗಿ ಇಬ್ಬರು ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿದರು, ಆಗ ಸದರಿಯವರು ಮಗನೆ ನಿಮ್ಮ ಅಣ್ಣನಿಗೆ ಹೇಳು ನಿನಗೂ ಮತ್ತು ನಿನ್ನ ಅಣ್ಣನಿಗೂ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಅಲ್ಲಿಂದ ಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸಂಗೀತಾ ಗಂಡ ಲೋಹಿತ ಖರಟಮಲ್ ಸಾ: ಮಹಾದೇವ ನಗರ ಲೋಹಾರಗಲ್ಲಿ ಪ್ರಕಾಶ ಟಾಕೀಜ ಹಿಂದುಗಡೆ ಸುಪರ ಮಾರ್ಕೇಟ ಕಲಬುರಗಿ ಇವರನ್ನು 2011 ರಲ್ಲಿ ಕಲಬುರಗಿಗೆ ಉಶೋದಯ ಕಂಪನಿ ಪ್ಲಾಟ ನಂ 19 ಯಲ್ಲಾಲಿಂಗೇಶ್ವರ ಕಾಲೋನಿ ಕೊಟನೂರ ಮಠದ ಹಿಂದುಗಡೆ ಕೆಲಸ ಮಾಡುತ್ತಿದ್ದೆ. ಲೋಹಿತ ತಂದೆ ಸೈದಪ್ಪ ಖರಟಮಲ್ ಎನ್ನುವನೊಂದಿಗೆ ಪರಿಚಯವಾಗಿ ಪ್ರೀತಿ ಪ್ರೇಮವಾಗಿ ಹುಮನಾಬಾದ ರಿಂಗ ರೋಡಿನ ತಾಜನಗರದಲ್ಲಿ ಬಾಡಿಗೆ ಮನೆಯಲ್ಲಿ 2013 ರಲ್ಲಿ ದೇವರೆದುರಿಗೆ ತಾಳಿ ಕಟ್ಟಿಕೊಂಡು ಅಂದಿನಿಂದ ಇಂದಿನವರೆಗೂ ಗಂಡ ಹೆಂಡತಿಯಾಗಿ ಸಂಸಾರ ಮಾಡಿಕೊಂಡು ಬರುತ್ತಿದ್ದೆನೆ. ನನ್ನ ಮದುವೆಯ ವಿಷಯ ದಾವಣಗೆರೆಯ ನನ್ನ ತಂದೆ ತಾಯಿಯವರಿಗೆ ಗೊತ್ತಾಗಿ ನನಗೆ ಮನೆಗೆ ಬಾರದಂತೆ ನಿರ್ಬಂದ ವಿದಿಸಿದ್ದಾರೆ. ಮೂರು ವರ್ಷಗಳವರೆಗೆ ಚೆನ್ನಾಗಿಯೇ ಇದ್ದೆ. ನನ್ನ ಗಂಡ ಲೋಹಿತ ಮೂರು ನಾಲ್ಕು ತಿಂಗಳಿಂದ ನನಗೆ ಕಿರುಕುಳ ಕೊಡಲು ಪ್ರಾರಂಬಿಸಿ ಹಣಕ್ಕಾಗಿ ಪೀಡಿಸ ತೊಡಗಿದ್ದ ಮತ್ತು ಬಿಜನೆಸ್ ಗಾಗಿ  1 ಲಕ್ಷ ರೂಪಾಯಿ ಎಲ್ಲಿಂದಾದರು ತಂದುಕೊಡು ಎಂದು ದೈಹಿಕ ಹಲ್ಲೆ ಮಾಡಿ ವರದಕ್ಷಿಣೆ ಕಿರುಕುಳ ನೀಡತೊಡಗಿದ್ದಾನೆ, ತಂದೆ ತಾಯಿಯವರು ಇಲ್ಲ ದುಡಿಯಲು ಈಗ ಕೆಲಸವೂ ಇಲ್ಲ ಇಂಥದರಲ್ಲಿ ನಾನು ಗಂಡನಿಗೆ ದುಡ್ಡು ಕೊಡಲು ಆಗುತ್ತಿಲ್ಲ ಈ ಮೊದಲು ನಾನು ದುಡಿದಿದ್ದಲ್ಲವನ್ನು ಲೋಹಿತನೇ ತೆಗೆದುಕೊಳ್ಳೂತ್ತಿದ್ದ ತಿಂಗಳಿಗೆ 9 ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ಈಗ ನನಗೆ ತಿಳಿಯದ ಹಾಗೆ ದಿನಾಂಕ 22.04.2016 ರಂದು ಪ್ರಿಯಂಕಾ ಎನ್ನುವವರೊಂದಿಗೆ ಎರಡನೆಯ ಮದುವೆಯಾಗಿ ನನಗೆ ದ್ರೋಹ ಮಾಡಿದ್ದಾನೆ. ಯಾಕೆ ಹೀಗೆ ಮೋಸ ನಂಬಿಕೆ ದ್ರೋಹ ಮಾಡಿದೆ ಎಂದು ಕೇಳಿದಕ್ಕೆ ದಿನಾಂಕ 02.06.2016 ರಂದು ರಾತ್ರಿ 8-30 ಪಿ.ಎಂಕ್ಕೆ ನನಗೆ ಹೊಡೆದು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ದೂರು ಸಲ್ಲಿಸಿದರೆ ಕೊಂದು ಹಾಕುವದಾಗಿ ಜೀವ ಭಯ ಹಾಕಿದ್ದಾನೆ. ಈ ವಿಷಯ ಕಾವೇರಿ ಗಂಡ ಸಂಜುಕುಮಾರ ಪಾಂಚಾಳ ಮತ್ತು ಸುಹಾಸಿನಿ ತಂದೆ ರಾಜೇಂದ್ರ ಇವರಿಗೆ ಹೇಳಿದ್ದೆನೆ. ಅವರೂ ಲೋಹಿತನಿಗೆ ಬುದ್ದಿವಾದ ಹೇಳಿದ್ದಾರೆ ಅಲ್ಲದೇ ನಾಲ್ಕು ಸಲ ಗರ್ಭಪಾತ ಮಾಡಿಸಿದ್ದಾನೆ. ಕಾರಣ ನನಗೆ ದೈಹಿಕ ಕಿರುಕುಳ ನೀಡಿ ವರದಕ್ಷಿಣೆಗಾಗಿ ಮಾನಸಿಕ ಹಿಂಸೆ ನೀಡಿ ಜೀವ ಭಯ ಹಾಕುತ್ತಿರುವ ಮತ್ತು ನನಗೆ ತಿಳಿಯದಂತೆ ಎರಡನೆಯ ಮದುವೆಯಾದ ಲೋಹಿತ ತಂದೆ ಸೈದಪ್ಪ ಖರಟಮಲ್ ಸಾ: ಗಣಜಲಖೇಡ ತಾ;ಜಿ; ಗುಲಬರ್ಗಾ ಇವರ ಮೇಲೆ ಮತ್ತು ಲೋಹಿತನ ಅಣ್ಣ ಶ್ರೀಶೈಲ ಇತನು ಹೋಗಲಿ ಬಿಡಮ್ಮ ನಿನಗೆ ಮತ್ತೊಂದು ಮದುವೆ ಮಾಡುತ್ತೇವೆ. ಎಂದು ಹೆದರಿಸಿದ್ದು ಅವರಿಬ್ಬರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಚತ್ರೇಪ್ಪ ತಂದೆ ರಾಣಪ್ಪ ಬೌದ ಸಾ: ಪ್ಲಾಟ ನಂ. ಎಫ್-2 ದರ್ಶನ ಅಪಾರ್ಟಮೆಂಟ ಹಳೆ ಜೇವರ್ಗಿ ರಸ್ತೆ ಕಲಬುರಗಿ ರವರು ದಿನಾಂಕ. 08/06/2016  ರಂದು 9.00 ಎ.ಎಂ ಸುಮಾರಿಗೆ ನಾನು ನನ್ನ ಸ್ಯಾಮಸಾಂಗ ಜೆ-2 ಮೋಬೈಲ್  ಐ.ಎಮ್.ಇ.ಐ ನಂ. 359268071895783 ವಡಾಪೋನ್ ಸೀಮ್ ನಂ. 9513242568 ಬಿ.ಎಸ್.ಎನ್.ಎಲ್ ಸೀಮ್ ನಂ. 9448586152 ಅ.ಕಿ. 7590/- ರೂ ನೇದ್ದು ನಮ್ಮ ಮನೆಯ ಟೇಬಲ ಮೇಲೆ ಇಟ್ಟು ನಾನು ಕಟಿಂಗ ಮಾಡಿಸಿಕೊಂಡು ಮರಳಿ 10 ಎ.ಎಂ.ಕ್ಕೆ ಮರಳಿ ಬಂದು ನೋಡಲಾಗಿ ನನ್ನ ಮೋಬೈಲ್ ಇರಲಿಲ್ಲಾ. ಮನೆಯಲ್ಲಿ ಎಲ್ಲಾ ಕಡೆ ಹುಡಿಕಾಡಿದರೂ ಸಿಕ್ಕಿರುವುದಿಲ್ಲಾ. ಯಾರೋ ಕಳ್ಳರು ನನ್ನ ಮೋಬೈಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

09 June 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ನಿತ್ಯಾನಂದ ಮತ್ತು ಪಾಶಾಮಿಯ್ಯಾ @ ಪಾಶಾಪಟೇಲ ಇಬ್ಬರು ಕೆಸರಟಗಿ ಅಯ್ಯಪ್ಪ ಗುಡಿಯಿಂದ ತಮ್ಮೂರಾದ ಇಲ್ಲಾಳ ಗ್ರಾಮಕ್ಕೆ ಹೋಗುವ ಕುರಿತು ನಿತ್ಯಾನಂದ ಇತನು ತನ್ನ ಬಜಾಜ ಡಿಸ್ಕವರಿ ಮೋಟಾರ ಸೈಕಲ  KA 56 E 6031 ನೇದ್ದರ ಹಿಂದೆ ಪಾಶಾಮಿಯ್ಯಾ@ ಪಾಶಾಪಟೇಲ ಇತನಿಗೆ ಕೂಡಿಸಿಕೊಂಡು ಅತಿವೇಗದಿಂದ ನಡೆಸುತ್ತಾ ರಾತ್ರಿ 08-00 ಗಂಟೆ ಸುಮಾರಿಗೆ  ಆಲಗೂಡ ಕ್ರಾಸ ದಾಟಿ ಸ್ವಲ್ಪ ಮುಂದೆ ಬಂದಾಗ ಎದುರುನಿಂದ  ಬರುತ್ತಿದ್ದ ಯಾವುದೋ ವಾಹನ ಲೈಟ ಮುಖದ ಮೇಲೆ ಬೀಳಲುವೇಗದ ನಿಯಂತ್ರಣ ತಪ್ಪಿದಾಗ, ಮೋಟಾರ ಸೈಕಲ ಎಡಕ್ಕೆ ತಿರುಗಿಸಿದಾಗ ರೋಡಿನ ಎಡಭಾಗದಲ್ಲಿ ಇರುವ ತೆಗ್ಗಿನಲ್ಲಿ ನಾವಿಬ್ಬರು ಮೋಟಾರ ಸೈಕಲದೊಂದಿಗೆ ಬಿದ್ದೇವು. ಪಾಶಾಮಿಯ್ಯಾ ಇತನಿಗೆ ತಲೆಗೆ, ಬಲಕಿವಿಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತಸೋರಿ ಸ್ಥಳದಲ್ಲಿ ಮೃಪಟ್ಟಿದ್ದು ಇರುತ್ತದೆ. ನಿತ್ಯಾನಂದ ಇತನಿಗೂ ಕೂಡಾ ಹಣೆಗೆ ಮತ್ತು ಬಲಭುಜದ ಮೇಲೆ ಭಾರಿ ರಕ್ತಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ: 08-06-2016 ರಂದು ನನ್ನ ಮಗನಾದ ಲಕ್ಕಪ್ಪ ಪೂಜಾರಿ ಮತ್ತು ಅವನ ಗೆಳೆಯ ಸಿದ್ದಪ್ಪ ತಂದೆ ಕಾಳಪ್ಪ ಮಾಂಗ ಸಾ: ಕಟ್ಟಿ ಸಂಗಾವಿ ಇವರಿಬ್ಬರು ಕೂಡಿ ಮೊಟಾರ ಸೈಕಲ ನಂ ಕೆಎ-32, ಕ್ಯೂ-7927 ನೇದ್ದರ ಮೇಲೆ ಕುಳಿತು ತಮ್ಮ ಕೆಲಸದ ಸಲುವಾಗಿ ಜೇವರಗಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾರೆ. ನಾನು ಮತ್ತು ನನ್ನ ಮಗ ರಾಜಕುಮಾರ ಇಬ್ಬರು ಮನೆಯಲ್ಲಿದ್ದಾಗ ರಾತ್ರಿ 9 ಗಂಟೆ ಸುಮಾರಿಗೆ ನಮ್ಮೂರ ಚಾಂದಪಾಶಾ ತಂದೆ ಅಬ್ದುಲರಹಿಮಾನ ಕೊಳಕೂರ ಇತನು ಫೋನ ಮಾಡಿ ನಿಮ್ಮ ಮಗ ಲಕ್ಕಪ್ಪ ಮತ್ತು ಸಿದ್ದಪ್ಪ ಮಾಂಗ ಇವರಿಗೆ ಬೀಮಾ ಬ್ರೀಡ್ಜ ಚಕ್ ಪೋಸ್ಟ ಹತ್ತಿರ ರೋಡಿನಲ್ಲಿ ಎಕ್ಸ್ಸಿಡೆಂಟ ಆಗಿ ನಿಮ್ಮ ಮಗ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಮಗ ರಾಜಕುಮಾರ ಇಬ್ಬರು ಸ್ಥಳಕ್ಕೆ ಬಂದು ನೋಡಲು ನನ್ನ ಮಗ ಲಕ್ಕಪ್ಪ ಇತನಿಗೆ ನೋಡಲು ಅವನ ತಲೆಯ ಎಡಭಾಗದಲ್ಲಿ ಭಾರಿ ರಕ್ತಗಾಯ, ಎಡಗದ್ದಕ್ಕೆ, ಬಲಭಾಗ ಎದೆಯಿಂದ ರಟ್ಟೆ ವರೆಗೆ ಪೂರ್ತಿ ಜಜ್ಜಿ ಭಾರಿ ರಕ್ತಗಾಯವಾಗಿ ಮಾಂಸ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಸಿದ್ದಪ್ಪನಿಗೂ ಕೂಡಾ ಬಾರಿ ಗಾಯಗಳಾಗಿದ್ದವು. ಅಲ್ಲಿಯೇ ಒಂದು ಲಾರಿ ನಿಂತಿದ್ದು ಅದರ ನಂಬರ ನೋಡಲು ಎಪಿ-02-ಎಕ್ಸ್-6099 ನೇದ್ದು ಇತ್ತು. ಮತ್ತು ಮೊಟಾರ ಸೈಕಲ ನಂಬರ ನೋಡಲು ಕೆಎ-32-ಕ್ಯೂ-7927 ಇತ್ತು. ಅಲ್ಲಿ ಜನರು ಸಹ ನರೆದಿದ್ದು, ಈ ಘಟನೆ ಬಗ್ಗೆ ಚಾಂದಪಾಶಾ ಇತನಿಗೆ ಕೇಳಲು ಅವನು ಹೇಳಿದೆನಂದರೆ ನಾನು ಬೀಮಾ ಬ್ರೀಡ್ಜ ಚಕ್ ಪೊಸ್ಟ ಹತ್ತಿರ ಇದ್ದಾಗ ರಾತ್ರಿ ನಿಮ್ಮ ಮಗ ಲಕ್ಕಪ್ಪ ಇತನು ತನ್ನ ಮೊಟಾರ ಸೈಕಲದ ಮೇಲೆ ಸಿದ್ದಪ್ಪ ಮಾಂಗ ಇತನಿಗೆ ಕೂಡಿಸಿಕೊಂಡು ರೋಡಿನ ಸೈಡಿನಿಂದ ಬರುತ್ತಿದ್ದಾಗ ಅದೆ ಸಮಯಕ್ಕೆ ಕಲಬುರಗಿ ಕಡೆಯಿಂದ ಲಾರಿಯನ್ನು ಅದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಿಮ್ಮ ಮಗನು ನಡೆಯಿಸುತ್ತಿದ್ದ ಮೊಟಾರ ಸೈಕಲಕ್ಕೆ ಎದುರಾಗಿ ಡಿಕ್ಕಿ ಪಡಿಸಿದರಿಂದ ಅವರು ತಮ್ಮ ಮೊಟಾರ ಸೈಕಲದೊಂದಿಗೆ ಬಿದ್ದರು. ನಂತರ ನಾನು ಓಡಿ ಹೋಗಿ ಎಬ್ಬಿಸಲು ನಿಮ್ಮ ಮಗನು ಮೃತಪಟ್ಟಿದ್ದನು ಅಂತಾ ತಿಳಿಸಿರುತ್ತಾನೆ ಅಂತಾ ಶ್ರೀ ಭೀಮರಾಯ ತಂದೆ ಯಲ್ಲಪ್ಪ ಹಚಗೇರಿ ಸಾಃ ಹಸನಾಪೂರ ತಾಃಜಿಃ ಕಲಬುರಗಿ ಹಾಃವಃ ಕಟ್ಟಿಸಂಗಾವಿ ಬೀಮಾ ಬ್ರೀಡ್ಜ್ ತಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಮೈಹಿಬೂಬ ತಂದೆ ಸೈಪನಸಾಬ ನದಾಫ ಸಾ : ಗೌರ (ಕೆ) ರವರು ತಮ್ಮ ಗ್ರಾಮದಲ್ಲಿ ಮದರಸಾ ಶಾಲೆಯಲ್ಲಿ ತರಕಾರಿ ತರುವುದು ಹಾಗೂ ಶಾಲೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿರುತ್ತೇನೆ. ಸದರಿ ಶಾಲೆಯನ್ನು ನಮ್ಮ ಅಣ್ಣನಾದ ಮೋಹಿದ್ದಿನ ಈತನು ನಡೆಸಿಕೊಂಡು ಹೋಗುತ್ತಾನೆ. ಸದರಿ ಶಾಲೆಯ ವಿಚಾರವಾಗಿ ನಮಗೂ ಮತ್ತು ನಮ್ಮ ದೂರದ ಅಣ್ಣ ತಮ್ಮಕಿಯವರಾದ ಅಕ್ರಮ ತಂದೆ ಜಾಫರಸಾಬ ನದಾಫ ಹಾಗೂ ಅವನ ಅಣ್ಣ ತಮ್ಮರು ನಮ್ಮ ಮೇಲೆ ಜಗಳ ಮಾಡುತ್ತಾ ಬಂದಿದ್ದು, ನಮ್ಮ ಮೇಲೆ ದ್ವೇಷ ಸಾದಿಸುತ್ತಿರುತ್ತಾರೆ. ದಿನಾಂಕ 08-06-2016 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದೆ ನೀರು ತಗೆದುಕೊಂಡು ಬರಲು ಕೊಡ ತಗೆದುಕೊಂಡು ಹೊಗುತ್ತಿದ್ದಾಗ ಸದರಿ ನಮ್ಮ ಮೇಲೆ ದ್ವೇಷ ಸಾದಿಸುತ್ತಿದ್ದ ಅಕ್ರಮ ನದಾಫ ಈತನ ಮನೆಯ ಮುಂದೆ ನಾನು ತಗೆದುಕೊಂಡು ಹೊದ ಕೊಡದಲ್ಲಿ ಸ್ವಲ್ಪ ನೀರು ಇದ್ದು ಅವನ್ನು ಚೆಲ್ಲಿದೆನು, ಆಗ ಮನೆಯ ಮುಂದೆ ನಿಂತಿದ್ದ ಆರೀಫ್ ಈತನು ಬೋಸಡಿ ಮಗನೆ ನಮಗೆ ನೋಡಿ ನಮ್ಮ ಮನೆಯ ಮುಂದೆ ನೀರು ಚೆಲ್ಲುತ್ತಿ ಅಂತಾ ಜಗಳ ಮಾಡಿರುತ್ತಾನೆ. ಮದ್ಯಾಹ್ನ 3:00 ಗಂಟೆ ಸುಮಾರಿಗೆ ನಾನು ಮತ್ತು ಸೋಲ್ಲಾಪೂರದಿಂದ ಬಂದು ನಮ್ಮ ಸಂಭಂದಿಕರಾದ 1) ಹಸನ ತಂದೆ ಬಾಬು ನದಾಪ 2) ಆರೀಫ್ ತಂದೆ ಆದಮ್ಮ ಶೇಖ 3) ಬಾಬಾ ತಂದೆ ಸೈಯದ ಶೇಖ 4) ಅಲ್ತಾಫ ತಂದೆ ಸಲೀಂ ನದಾಫ 5) ರಿಯಾಜ ತಂದೆ ರಸೂಲ ನಧಾಪ ಸಾ|| ಎಲ್ಲರೂ ಸೋಲ್ಲಾಪೂರ ಇವರು ಬಂದಿದ್ದು, ಎಲ್ಲರೂ ಕೂಡಿ ನಮ್ಮ ಮನೆಯ ಮುಂದೆ ಮಾತಾಡುತ್ತಾ ನಿಂತಿದ್ದಾಗ, ನಮ್ಮ ಜೋತೆಗೆ ಜಗಳ ಮಾಡುತ್ತಿದ್ದ 1) ಅಕ್ರಮ ತಂದೆ ಜಾಫರಸಾಬ ನಧಾಪ 2) ಸಾದಿಕ ತಂದೆ ಜಾಫರಸಾಬ ನಧಾಫ 3) ಮನ್ನೂರಸಾಬ ತಂದೆ ಜಾಫರಸಾಬ ನಧಾಫ 4) ಬಾಕರ ತಂದೆ ಜಾಫರಸಾಬ ನಧಾಫ 5) ಮಲಂಗ ತಂದೆ ಮುಲ್ಕಾಸಾಬ ನಧಾಫ 6) ಇರ್ಫಾನ ತಂದೆ ಮುಬಾರಕ್ ನಧಾಪ ಸಾ|| ಎಲ್ಲರೂ ಗೌರ (ಕೆ) ಇವರೆಲ್ಲರೂ ಮತ್ತು ಇನ್ನು ಕೆಲವು ಜನರು ಕೂಡಿ ಗುಂಪುಕಟ್ಟಿಕೊಂಡು ಬಡಿಗೆ ಮತ್ತು ಕಲ್ಲು ಹಿಡಿಸಿಕೊಂಡು ನಮ್ಮ ಹತ್ತಿರ ಬಂದು ನನಗೆ ಏನೊ ಸೂಳೆ ಮಗನೆ ನಮ್ಮ ಜೋತೆಗೆನೆ ಜಗಳ ಮಾಡ್ತಿ ಅಂತಾ ಬೈದರು, ಆಗ ನನ್ನ ಜೋತೆಗೆ ಇದ್ದ ನನ್ನ ಸಂಭಂದಿಕರು ಯಾಕ ಇವರ ಜೋತೆಗೆ ಜಗಳ ಮಾಡ್ತಿರಿ ಅಂತಾ ಕೇಳಿದಕ್ಕೆ, ಅವರಿಗೆ ಬೋಸಡಿ ಮಕ್ಕಳ್ಯಾ ಅವರ ಪರವಾಗಿ ನಮ್ಮ ಮೇಲೆ ಗುಂಡಾಗಿರಿ ಮಾಡಕಾ ಬಂದಿರಿ ಅಂತಾ ಎಲ್ಲರೂ ಕೂಡಿ ನನ್ನ ಜೋತೆಗೆ ಇದ್ದ ಹಸನ ನದಾಫ, ಆರೀಫ್ ಶೇಖ, ಬಾಬಾ ಶೇಖ್, ಅಲ್ತಾಫ್ ನಧಾಪ, ರಿಯಾಜ ನಧಾಫ್ ಇವರಿಗೆ ಅವಾಚ್ಯ ಶಬ್ದಳಿಂದ ಬೈಯುತ್ತಾ ಕೈಯಿಂದ ಹಾಗೂ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆಯುವುದು, ಕಾಲಿನಿಂದ ಒದೆಯುವುದು ಮಾಡುತ್ತಿದ್ದರು, ಹಾಗೂ ನಮ್ಮ ಮೂರು ಮೋಟರ ಸೈಕಲಗಳ ಮೇಲೆ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆದು ಮೂರು ಮೋಟರ ಸೈಕಲಗಳನ್ನು ಜಕಂ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಉಸ್ಮಾನಲಿ ತಂದೆ ಜಾಫರಸಾಬ ನಧಾಪ ಸಾ : ಗೌರ (ಕೆ) ಇವರ ಊರಿನಲ್ಲಿ ಮೋಹಿದ್ದಿನ ತಂದೆ ಸೈಫನಸಾಬ ನದಾಫ ಈತನು ಮದರಸಾ ಶಾಲೆ ನಡೆಸುತ್ತಿರುತ್ತಾನೆ. ಸದರಿ ಮೋಹಿದ್ದಿನ ಈತನು ತನ್ನ ಶಾಲೆಯ ಹುಡಗರಿಗೆ ಸ್ಮಶಾನದಲ್ಲಿ ಬರ್ಹಿರದೆಸೆಗೆ ಕಳುಹಿಸುತ್ತಿರುತ್ತಾನೆ. ಇದರಿಂದ ನಾನು ಮತ್ತು ನನ್ನ ಅಣ್ಣನಾದ ಅಕ್ರಮ ಇಬ್ಬರು ಮೋಹಿದ್ದಿನ ಈತನಿಗೆ ಇಲ್ಲಿ ಹುಡುಗರಿಗೆ ಬರ್ಹಿರದೆಸೆಗೆ ಕಳುಹಿಸಬೇಡ ಅಂತಾ ಹೇಳೀದಕ್ಕೆ ಸದರಿ ಮೋಹಿದ್ದಿನ ಈತನು ನಮ್ ಮೇಲೆ ದ್ವೇಷ ಮಾಡಿಕೊಂಡು ದಿನಾಂಕ 08-06-2016 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಣ್ಣನಾದ ಅಕ್ರಮ ಇಬ್ಬರು ನಮ್ಮ ಮನೆಯ ಮುಂದೆ ನಿಂತಿದ್ದಾಗ ಸದರಿ ಮೋಹಿದ್ದಿನ ಈತನ ತಮ್ಮನಾದ ಮೈಹಿಬೂಬ ಈತನು ಕೊಡದಲ್ಲಿ ನೀರು ತಗೆದುಕೊಂಡು ಬಂದು ನಮ್ಮ ಮನೆಯ ಮುಂದೆ ನೀರು ಚೆಲ್ಲಿದನು ಅದಕ್ಕೆ ನಾನು ಮತ್ತು ನನ್ನ ಅಣ್ಣ ಇಬ್ಬರು ಮೈಹಿಬೂಬನಿಗೆ ಯಾಕ ನೀರು ಚೆಲ್ಲುತ್ತಿ ಕೆಸರು ಆಗುತ್ತದೆ ಅಂತ ಹೇಳಿದಕ್ಕೆ ಮೈಹಿಬೂಬನು ನಮ್ಮ ಜೋತೆಗೆ ಜಗಳ ಮಾಡಿರುತ್ತಾನೆ. ಮದ್ಯಾಹ್ನ 3:00 ಗಂಟೆ ಸುಮಾರಿಗೆ ನಮ್ಮ ಮನೆಯ ಹತ್ತಿರ ನಾನು ಮತ್ತು ನನ್ನ ಅಣ್ಣ ತಮ್ಮರಾದ 1) ಸಾದಿಕ ತಂದೆ ಜಾಫರಸಾಬ ನಧಾಫ 2) ಮನ್ಸೂರಅಲಿ ತಂದೆ ಜಾಫರಸಾಬ ನದಾಫ 3) ಅಕ್ರಮ ತಂದೆ ಜಾಫರಸಾಬ ನದಾಫ ನಾಲ್ಕು ಜನರು ನಿಂತಿದ್ದಾಗ ನಮ್ಮ ಜೋತೆಗೆ ಜಗಳ ಮಾಡುತ್ತಿದ್ದ 1) ಮೋಹಿದ್ದಿನ ತಂದೆ ಸೈಫನಸಾಬ ನದಾಫ ಅವನ ತಮ್ಮನಾದ 2) ಮೈಹಿಬೂಬ ತಂದೆ ಸೈಫನಸಾಬ ನದಾಫ ಸಾ|| ಇಬ್ಬರು ಗೌರ (ಕೆ) ಹಾಗೂ ಇವರ ಸಂಭಂದಿಕರಾದ 3) ಹಸನ ತಂದೆ ಬಾಬು ನದಾಪ 4) ಆರೀಫ್ ತಂದೆ ಆದಮ್ಮ ಶೇಖ 5) ಬಾಬಾ ತಂದೆ ಸೈಯದ ಶೇಖ 6) ಅಲ್ತಾಫ ತಂದೆ ಸಲೀಂ ನದಾಫ 7) ರಿಯಾಜ ತಂದೆ ರಸೂಲ ನಧಾಪ ಸಾ|| ಎಲ್ಲರೂ ಸೋಲ್ಲಾಪೂರ ಇವರೆಲ್ಲರೂ ಕೂಡಿ ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ನಮ್ಮ ಹತ್ತಿರ ಬಂದು ನಮಗೆ ಏನ್ರೊ ಬೋಸಡಿ ಮಕ್ಕಳೆ ಮನೆಯ ಮುಂದೆ ನೀರು ಚೆಲ್ಲಿದರೆ ಏನು ಆಯ್ತು, ನಮ್ಮ ಜೋತೆನೆ ಜಗಳ ಮಾಡ್ತಿರಿ ಅಂತಾ ಎಲ್ಲರೂ ಕೂಡಿ ನನಗೆ ಮತ್ತು ನನ್ನ ಅಣ್ಣಂದಿರಾದ ಸಾದಿಕ ಹಾಗೂ ಮನ್ಸುರಲಿ ಮೂರು ಜನರಿಗೂ ಕೈಯಿಂದ ಹಾಗೂ ಬಡಿಗೆಯಿಂದ ಮತ್ತು ಕಲ್ಲಿನಿಂದ ಹೊಡೆಯುವುದ ಕಾಲಿನಿಂದ ಒದೆಯುವುದು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-06-2016 ರಂದು ಮಣೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಆವರಣದ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಎರಡು ಜನರನ್ನು ಹಿಡಿದು ಕೊಂಡಿದ್ದು ಒಬ್ಬನು ಓಡಿ ಹೋಗಿದ್ದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ನಾಗಪ್ಪ ತಂದೆ ಶಾಂತಪ್ಪ ಪಾಟೀಲ ಸಾ|| ಮಣೂರ ಗ್ರಾಮ 2) ಮಲ್ಲಪ್ಪ @ ಮಲ್ಲು ತಂದೆ ಶಿವರಾಯ ದುಧನಿ ಸಾ|| ಮಾಶಾಳ ಗ್ರಾಮ ಅಂತಾ ತಿಳಿಸಿದರು. ಸದರಿಯವರನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿರಿ, ಯಾರಿಗೆ ಕೊಡುತ್ತಿರಿ ಎಂಬುದರ ಬಗ್ಗೆ ವಿಚಾರಿಸಿದ್ದು, ಸದರಿಯವರು ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು ಈಗ ಓಡಿ ಹೋದ ರಾಜಕುಮಾರ @ ರಾಜು ತಂದೆ ಶಾಂತಪ್ಪ ಎಮ್ಮಿ ಸಾ|| ಮಣೂರ ಈತನಿಗೆ ಕೊಡುತ್ತೇವೆ ಅಂತಾ ತಿಳಿಸಿದರು.. ನಂತರ ಸದರಿಯವರ ಅಂಗ ಶೋದನೆ ಮಾಡಲಾಗಿ ನಾಗಪ್ಪ ಪಾಟೀಲ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 950/- ರೂ ನಗದು ಹಣ, ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ, ಒಂದು ಪೇನ್ನ ದೋರೆತವು. ಮಲ್ಲಪ್ಪ ದುಧನಿ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 840/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಹೀಗೆ ಒಟ್ಟು 1790/- ರೂ ನಗದು ಹಣ, 2 ಮಟಕಾ ಚೀಟಿ, 2 ಪೆನ್ನ ದೊರೆತವು. ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

08 June 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 07-06-2016 ರಂದು ರಾತ್ರಿ 09-00 ಗಂಟೆ ಸುಮಾರಿಗೆ ನನ್ನ ಮಗ ಸಿದ್ಧಲಿಂಗ@ ಸಿದ್ಧಪ್ಪ ಉಮ್ಮರಗಿ ಮತ್ತು ನಮ್ಮ ಮನೆಯ ಪಕ್ಕದಲ್ಲಿ ಇರುವ ನಾಗರಾಜ ತಂದೆ ಅಂಬಾರಾಯ ಪರೀಟ್ ಇವರಿಬ್ಬರು ಅಂಬಾರಾಯ ಪರೀಟ ಇತನಿಗೆ ಕಾಮಲೆ ರೋಗ ಆಗಿದ್ದರಿಂದ ಪಟ್ಟಣ ಗ್ರಾಮದಲ್ಲಿ ಕಾಮಲೆ ರೋಗಕ್ಕೆ ಬುಧವಾರ ದಿವಸ ಔಷಧಿ ಕೊಡುವ ಸಂಗಪ್ಪ ಬಿಸಗೊಂಡ ಇವರ ಮನೆಗೆ ಹೋಗಿ ನಾಳೆ ಬೆಳಿಗ್ಗೆ ಔಷಧಿ ಕೊಡುವ ಸಮಯ ತಿಳಿದುಕೊಂಡು ಬರಲು ನಮ್ಮೂರಿನ ರಾಜು ಪಟ್ಟಣ ಇವರ ಹಿರೋ ಹೊಂಡಾ ಸ್ಪೆಂಡರ ಕೆಎ 32 EK 4288 ಮೇಲೆ ಇಬ್ಬರು ಕುಳಿತುಕೊಂಡು ಸುಂಟನೂರದಿಂದ  ಪಟ್ಟಣ ಗ್ರಾಮಕ್ಕೆ ಹೋಗಿ ಬರುತ್ತೇವೆ ಎಂದು ಹೇಳಿ ಹೋದರು. ಮೋಟಾರ ಸೈಕಲ ನನ್ನ ಮಗ ಸಿದ್ಧಲಿಂಗ@ಸಿದ್ಧಪ್ಪ ಇತನು ನಡೆಸುತ್ತಿದ್ದನು. ಅವನ ಹಿಂದೆ ನಾಗರಾಜ ಇತನು ಕುಳಿತುಕೊಂಡಿದ್ದು. ರಾತ್ರಿ 11-30  ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಆಗ ನಮ್ಮೂರಿನ ಅರ್ಜುನ ವಗ್ಗನ ಇತನು ನಮ್ಮ ಮನೆಗೆ ಬಂದು ನನಗೆ ಮತ್ತು ನಾಗರಾಜನ ಅಣ್ಣ ಶರಣಪ್ಪ ಇಬ್ಬರು ತಿಳಿಸಿದ್ದೆನೆಂದೆರೆ, ನಮ್ಮೂರಿನ ಸೂರ್ಯಕಾಂತ ಪಟ್ಟಣ ಮತ್ತು ನಾಗರಾಜ ಬಿರಾದಾರ ಇವರಿಬ್ಬರು ತನ್ನ ಮೋಬಾಯಿಲಿಗೆ ಪೋನ ಮಾಡಿ,  ನಿಮ್ಮ  ಮಗ ಸಿದ್ಧಪ್ಪ ಇತನು ಹಿರೋ ಹೊಂಡಾ ಸ್ಪೆಂಡರ ಕೆಎ 32 EK 4288 ನೇದ್ದರ ಹಿಂದೆ ನಾಗರಾಜ ಇತನಿಗೆ ಕೂಡಿಸಿಕೊಂಡು ಪಟ್ಟಣದಿಂದ ಸುಂಟನೂರ ಕಡೆಗೆ ಹೊರಟಿದ್ದು, ರಾತ್ರಿ 11-00 ಗಂಟೆ ಸುಮಾರಿಗೆ ಪಟ್ಟಣ ಸೀಮಾಂತರದಲ್ಲಿ ಬರುವ ಜವಳಿ ದಾಬಾ ದಾಟಿ ಇರುವ ಮಹೇಶ್ವರಿ ಗುರುರಾಜ ಪಾಟೀಲ ಇವರ ಹೊಲದ ಎದುರಿನ ಕಲಬುರಗಿ-ಅಳಂದ ರೋಡಿನ ಮೇಲೆ ತಮ್ಮ ಸೈಡ ಹಿಡಿದುಕೊಂಡು ಹೊರಟಾಗ ಅವರ ಹಿಂದಿನಿಂದ ಒಬ್ಬ ಲಾರಿ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಸಿದ್ಧಲಿಂಗ@ಸಿದ್ಧಪ್ಪ ನಡೆಸುತ್ತಿದ್ದ  ಮೋಟಾರ ಸೈಕಲಿಗೆ ಅತಿವೇಗದಿಂದ ಓವರ ಟೇಕ ಮಾಡಿ ಸ್ವಲ್ಪ ಮುಂದೆ ಹೋಗಿ ಯಾವುದೇ ಮುನ್ಸೂಚನೇ ಮತ್ತು ಇಂಡಿಕೇಟರ ಹಾಕದೇ ವೇಗದಲ್ಲಿ ಒಮ್ಮಿಂದ ಒಮ್ಮೇಲೆ ಬ್ರೇಕ ಹಾಕಿ ಲಾರಿ ನಿಲ್ಲಿಸಿದಾಗ ಲಾರಿ ಹಿಂದೆಯೇ ಮೋಟಾರ ಸೈಕಲ ಮೇಲೆ ಹೊರಟ ಸಿದ್ಧಲಿಂಗ@ಸಿದ್ಧಪ್ಪ ಇತನು ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆಯಲು ಲಾರಿಯ ಹಿಂಭಾಗದ ಬಾಡಿ ಸಿದ್ಧಲಿಂಗ@ಸಿದ್ಧಪ್ಪ ಮತ್ತು  ನಾಗರಾಜ ಇವರಿಬ್ಬರ  ತಲೆಗೆ ಮತ್ತು ಮುಖಕ್ಕೆ ಬಡಿದು ಭಾರಿ ರಕ್ತಗಾಯವಾಗಿ ಲಾರಿ ಹಿಂಭಾಗದಲ್ಲಿ ಮೋಟಾರ ಸೈಕಲದೊಂದಿಗೆ ಬಿದ್ದಿರುತ್ತಾರೆ. ಸಿದ್ಧಲಿಂಗ@ಸಿದ್ಧಪ್ಪ ಇತನ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯವಾಗಿ ರಕ್ತಸ್ರಾವದಿಂದ ಸ್ಥಳದಲ್ಲಿ ಸತ್ತಿರುತ್ತಾನೆ. ಮತ್ತು ನಾಗರಾಜ ಇತನಿಗೆ ಮುಖಕ್ಕೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತ ಸೋರಿ ಬೇಹುಷ ಸ್ಥಿತಿಯಲ್ಲಿ ಬಿದ್ದಿರುತ್ತಾನೆ ಅಂತಾ ತಿಳಿಸಿದನು. ಈ ವಿಷಯ ಕೇಳಿ ಗಾಬರಿಗೊಂಡು ನಾನು ಮತ್ತು ನಾಗರಾಜ ಅಣ್ಣ ಶರಣಪ್ಪ ಹಾಗೂ ನಮ್ಮೂರಿನ ಸಂಗಯ್ಯ ಮಠಪತಿ, ವಿಠಲ ತಂದೆ ನಿಂಗಪ್ಪ ತಳವಾರ, ವಿನೋದ ತಂದೆ ಮಲ್ಲಿಕಾರ್ಜುನ ಮುರಬ  ಮತ್ತು ಇತರೇ ಗ್ರಾಮ ಜನರು ಮೋಟಾರ ಸೈಕಲಗಳು ಮೇಲೆ ಕುಳಿತುಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ಸಿದ್ಧಲಿಂಗ@ಸಿದ್ಧಪ್ಪ ಇತನು ಲಾರಿ ಹಿಂದುಗಡೆ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ದತ್ತಪ್ಪ ತಂದೆ ಧರ್ಮಣ್ಣಾ ಉಮ್ಮರಗಿ ಸಾ: ಸುಂಟನೂರ ಗ್ರಾಮ ತಾ:ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ರಾಜು ತಂದೆ ಹಣಮಂತ ನೀಲಗಲ್ಲ ಸಾ|| ನಾಲವಾರ ತಾ|| ಚಿತ್ತಾಪುರ ಇವರು ದಿನಾಂಕ 05.06.2016 ರಂದು ನಾನು ಹಾಗು ನನ್ನ ಹೆಂಡತಿ ರೇಣುಕಾ, ದೊಡ್ಡಮ್ಮ ದ್ಯಾವಮ್ಮ, ಕವಿತಾ ಎಲ್ಲರು ಕೂಡಿಕೊಂಡು ನಾಲವಾರದಿಂದ ಗೈಬಸಾಬ ಈತನು ನಡೆಸುವ ಟಂಟಂ ನಂ ಕೆ.ಎ32 ಬಿ 9367 ನೇದ್ದರಲ್ಲಿ ಕುಳಿತುಕೊಂಡು ನಾಲವಾರಕ್ಕೆ ಹೋಗಿ ಅಲ್ಲಿ ದೇವರ ದರ್ಶನ ಮುಗಿಸಿಕೊಂಡು ದಿನಾಂಕ 06.06.2016 ರಂದು ಗೈಬಸಾಬ ಈತನು ನಡೆಸುವ ಟಂಟಂ ನೇದ್ದರಲ್ಲಿ ಕುಳಿತುಕೊಂಡು ವಾಪಸ ನಮ್ಮೂರಿಗೆ ಬರುತ್ತಿದ್ದಾಗ ಇಜೇರಿ ಸಮೀಪ ಇಜೇರಿ ಯಡ್ರಾಮಿ ರಸ್ತೆಯ ಮೇಲೆ ರಾತ್ರಿ 08:45 ಗಂಟೆಯ ಸುಮಾರಿಗೆ ಬರುತ್ತಿದ್ದಾಗ ಅದೇ ವೇಳೆಗೆ ಎದುರುಗಡೆಯಿಂದ 108 ಅಂಬ್ಯುಲೇನ್ಸ ನಂ ಕೆ.ಎ40 ಜಿ168 ನೇದ್ದರ ಚಾಲಕ ರಾಜಶೇಖರ ಎಮ್. ಬಡಿಗೇರ ಈತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾವು ಕುಳಿತುಕೊಂಡು ಹೋಗುತಿದ್ದ ಟಂಟಂ ಗೆ ಡಿಕ್ಕಿ ಪಡಿಸಿದಾಗ ನಮ್ಮೆಲ್ಲರಿಗೆ ಸಾದಾ ಮತ್ತು ಭಾರಿ ಗಾಯಗೊಳಿಸಿದ್ದು ನಂತರ ತನ್ನ ಅಂಬ್ಯೂಲೆನ್ಸನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ನಾವೇಲ್ಲರು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗುವಾಗ ಮಾರ್ಗದ ಮಧ್ಯ ಹಸನಾಪುರ ಕ್ರಾಸ್ ಹತ್ತಿರ ರಾತ್ರಿ 11:45 ಗಂಟೆಗೆ ನಮ್ಮ ದೊಡ್ಡಮ್ಮ ದ್ಯಾವಮ್ಮ ಇವಳು ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲುಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮನೋಹರ ತಂದೆ ಬಸವಣಪ್ಪಾ ಪ್ಯಾಟಿ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ ಇವರು ದಿನಾಂಕ: 07-06-2016 ರಂದು ಬೆಳಗ್ಗೆ ರಾತ್ರಿ 10.00 ಗಂಟೆಗೆ ನನ್ನ ಅಂಗಡಿಯ ಬೀಗ ಹಾಕಿ ನಾನು ಮತ್ತು ನನ್ನ ಗೆಳೆಯನಾದ ಸಂತೋಷ ತಂದೆ ಸಿದ್ದಾರೂಢ ಸಂಗೋಳಗಿ ಇಬ್ಬರೂ ಕೂಡಿಕೊಂಡು ಹೇರಿಟೇಜ ಹೊಟೇಲಕ್ಕೆ ಹೋಗಿ ಅಲ್ಲಿ ಊಟ ಮಾಡಿಕೊಂಡು ಮೋಟಾರ ಸೈಕಲ ಮೇಲೆ ಮನೆಗೆ ಹೋಗುತ್ತಿರುವಾಗ ಕಾಳೆ ಲೇ ಔಟದಲ್ಲಿ ಲೆಂಗಟೆ ಮನೆಯ ಮುಂದುಗಡೆ ರಾತ್ರಿ 11.00 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ಮೋಟಾರ ಸವಾರರು ನಮ್ಮ ಮುಂದೆ ಬಂದು ಮೋಟಾರ ಸೈಕಲ ಅಡ್ಡ ನಿಲ್ಲಿಸಿ ನಮಗೆ ಅವರು ಹೇಳಿದೆನೆಂದರೆ, ಏ ಕಹಾ ಜಹಾರಹೆ ಹೈ ಕೇಳಿದಾಗ ನಾವು ಅವರಿಗೆ ನಮ್ಮ ಮನೆಗೆ ಹೋಗುತ್ತಿದ್ದೇವೆ ಅಂತಾ ಹೇಳಿದಾಗ ಅವರು ಕೆಳಗೆ ಇಳಿದು ನಮ್ಮ ಪ್ಯಾಂಟಿನ ಜೇಬ ಮತ್ತು ಶರ್ಟ ಜೇಬಿನಲ್ಲಿ ಕೈ  ಹಾಕುತ್ತಿದ್ದರು ಆಗ ನಾವು ಅವರಿಗೆ ಏ ಈ ರೀತಿ ಯಾಕೆ ಮಾಡುತ್ತಿದ್ದಿರಿ ಅಂತಾ ಹೇಳಿದಾಗ ಒಬ್ಬನು ಕೈಯಲ್ಲಿ ಪಂಚಹಾಕಿಕೊಂಡು ನನ್ನ ಮುಖಕ್ಕೆ ಎರಡು ಮೂರು ಏಟು ಹೊಡೆದಿದ್ದರಿಂದ ನನ್ನ ಕೇಳ ತುಟಿ ಒಡೆದು ರಕ್ತಗಾಯ ಆಗಿರುತ್ತದೆ. ನನ್ನ ಪ್ಯಾಂಟಿನ ಜೇಬಿನಲ್ಲಿ 20000/-ರೂ ದೋಚಿಕೊಂಡಿರುತ್ತಾನೆ. ಅವರಲ್ಲಿ ಇನ್ನೊಬ್ಬ ಹುಡುಗ ಸಂತೋಷನಿಗೆ ಕೈಯಲ್ಲಿ ಪಂಚಹಾಕಿಕೊಂಡು ಬಲ ಕಣ್ಣಿನ ಹುಬ್ಬಿನ ಮೇಲೆ ಮತ್ತು ಮುಖದ ಮೇಲೆ ಹೊಡೆದು ರಕ್ತಗಾಯ ಪಡಿಸಿ ಕೊರಳಲಿದ್ದ 30 ಗ್ರಾಂ ಬಂಗಾರದ ಲಾಕೇಟ ಅದರ ಅ.ಕಿ.70000/-ರೂ ಮತ್ತು ಒಂದು ಪರ್ಸ ತೆಗೆದುಕೊಂಡಿದ್ದು ಅದರಲ್ಲಿ ಅ.ಕಿ.2500/-ರೂ ಇದ್ದಿತ್ತು ಅವರಿಬ್ಬರೂ ಒಂದು ಒಂದು ಪಲ್ಸರ್‌‌‌ ಕಪ್ಪು ಬಣ್ಣದ ಮೋಟಾರ ಸೈಕಲ ಮೇಲೆ ಬಂದಿದ್ದು ನಾವು ಮೋಟಾರ ಸೈಕರ ನಂಬರ ನೋಡಿರುವದಿಲ್ಲಾ ಅವರಿಬ್ಬರ ಅಂದಾಜು ವಯಸ್ಸು 25 ರಿಂದ 27 ಇರಬಹುದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 07.06.2016 ರಂದು  ಮದ್ಯಾಹ್ನ ಜೇವರಗಿ ಪಟ್ಟಣದ ಜೊಪಡ ಪಟ್ಟಿ ಏರಿಯಾದ ಸೀತಾರ ಟೇಲರ್ ಅಂಗಡಿಯ  ಹತ್ತಿರ ಸಾರ್ವಜನಿಕ ರೋಡನಲ್ಲಿ ಒಬ್ಬ ಮನುಷ್ಯನು ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮೀ ಇದ್ದ ಸ್ಥಳಕ್ಕೆ ಹೋಗಿ ಗೊಡೆ  ಮರೆಯಲ್ಲಿ ನಿಂತು ನೋಡಲಾಗಿ ಜೊಪಡಪಟ್ಟಿ ಸಿತಾರಾ ಟೇಲರ್ ಅಂಗಡಿಯ  ಹತ್ತಿರ  ಸಾರ್ವಜನಿಕ ರಸ್ತೆ ಮೇಲೆ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅಂತಾ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ದಾವೂದ ಅಹೇಮದ್ ತಂದೆ ಮಹಿಬೂಬಸಾಬ ಕಾಸರಬೊಸಗಾ ಸಾಃ ಜೊಪಡ ಪಟ್ಟಿ ಜೇವರಗಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 45540/-ರೂ. ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು, ಒಂದು ಮೊಬೈಲ್ ಅಂ.ಕಿ 500/- ರೂ ನೇದ್ದವುಗಳು ಸಿಕ್ಕಿರುತ್ತವೆ. ನಂತರ ಸದರಿ ಮಟಕಾ ಹಣ ಯಾರಿಗೆ ಕೊಡುತ್ತಿ ಅಂತಾ ಕೇಳಿದಾಗ  ಪೀರೊಜ ತಂದೆ ಶರ್ಮೊದ್ದೀನ್ ಚಿಕ್ಕಜೇವರಗಿ ಇತನಿಗೆ ಕೊಡುತ್ತೆನೆ ಅಂತಾ ತಿಳಿಸಿದನು. ನಂತರ ಸದರಿಯವನ ಹತ್ತಿರ ಇದ್ದ ಹಣ ಮತ್ತು ಮಟಕಾ ಚೀಟಿ, ಪೆನ್ನು, ಹಾಗೂ ಮೊಬೈಲ್  ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ದಿನಾಂಕ 07.06.2016 ರಂದು ಮುಂಜಾನೆ  ಚಿಗರಳ್ಳಿ ಕ್ರಾಸ್  ಹತ್ತಿರ ಸಾರ್ವಜನಿಕ ರೋಡನಲ್ಲಿ ಒಬ್ಬ ಮನುಷ್ಯನು ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ, ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮೀ ಇದ್ದ ಕಡೆಗೆ ನಡೆದುಕೊಂಡು ಹೋಗಿ ಒಂದು ಹೊಟೇಲ ಗೊಡೆ  ಮರೆಯಲ್ಲಿ ನಿಂತು ನೋಡಲಾಗಿ ಚಿಗರಳ್ಳಿ ಕ್ರಾಸ್ ಹತ್ತಿರ  ಸಾರ್ವಜನಿಕ ರಸ್ತೆ ಮೇಲೆ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅಂತಾ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಯ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಭೀಮರಾಯ ತಂದೆ ಶಿವಪ್ಪ ಮೂಡಬೂಳ  ಸಾ: ಸೋಮನಾಥಹಳ್ಳಿ ತಾಃ :ಜೇವರ್ಗಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 2600/-ರೂ. ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ನೇದ್ದವುಗಳು ವಶಪಡಿಸಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ :ಶ್ರೀ ದಯಾನಂದ ತಂದೆ ಗುಲಾಬರಾವ ದುರುವೆ ಇವರ ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದರೆ ತಮ್ಮ ಮನೆಯಗೆ ಯಾರೊ ಕಳ್ಳರು ಬಂದು ಮನೆಯ ಮುಂದಿನ ನಮ್ಮ ಕಾರ ಡ್ಯಾಮೇಜ ಮಾಡಿ ಮನೆಯಲ್ಲಿ ಇಟ್ಟಿದ ಅಂಗಿಯ ಜೇಬಿನಿಂದ ನಗದು ಹಣ 5 ಸಾವೀರ ರೂಪಾಯಿ ಕಳ್ಳತನ ಮಾಡಿಕೊಂಡು ಹೊಗಿದ್ದಾರೆ ಅಂತ ತಿಳಿಸಿದ್ದು ಅದರಂತೆ ನಾನು ಸದರಿಯವರ ಮನೆಗೆ ಹೋಗಿ ನೋಡಲು ಅವರ ಮನೆಯ ಮುಂದೆ ನಿಲ್ಲಿಸಿದ ಅವರ ಕಾರ ನಂ ಎಮ್ ಹೆಚ್. 15 ಇಬಿ 7103 ನೇದ್ದ ಶೀಟ ಹರಿದು ಕಾರ ಮೇಲೆ ಉಗಳಿದ್ದು ಅವರ ಮನೆಯಲ್ಲಿ ಹೋಗಿ ನೋಡಲು ಯಾರೊ ಕಳ್ಳರು ಅವರ ಮನೆ ಮಾಳಿಗೆಯಿಂದ ಒಳಗೆ ಪ್ರವೇಶ ಮಾಡಿ ಅವರ ಮನೆಗೆ ಗೂಟಕ್ಕೆ ಸಿಗಿಸಿದ ಅಂಗಿಯ ಜೇಬಿನಲ್ಲಿ ಅವರು ಇಟ್ಟಿದ ನಗದು ಹಣ 5 ಸಾವೀರ ರುಪಾಯಿ ಮತ್ತು ಒಂದು ಮೋಬೈಲ ಅ:ಕಿ: 1000/- ರೂ ನೇದ್ದು ಯಾರೊ ಕಳ್ಳರು ಕಳ್ಳತ ಮಾಡಿಕೊಂಡು ಹೋಗಿದ್ದು ನಂತರ ನಾವು ಎಲ್ಲಾ ಕಡೆಗೆ ಹುಡುಕಾಡಿದ್ದು ಯಾರು ಪತ್ತೆ ಯಾಗಿರುವದಿಲ್ಲ ಬೆಳ್ಳಿಗ್ಗೆ 4 ಗಂಟೆಯ ಸುಮಾರಿಗೆ ನಾನು ಮರಳಿ ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯಲ್ಲಿ ಸಾಮಾನುಗಳೂ ಅಸ್ತವೇಸ್ತವಾಗಿ ಬಿದ್ದಿದ್ದು ಗಾಬರಿಗೊಂಡು ನಾನು ನಮ್ಮ ಮನೆಯ ಒಳಗೆ ಹೋಗಿ ನೋಡಲು ಮನೆಯಲ್ಲಿ ಇಟ್ಟಿದ ನನ್ನ ಅಂಗಿಯ ಜೇಬಿನಲ್ಲಿ ಇಟ್ಟಿದ ನಗದು ಹಣ 4 ಸಾವೀರ ರುಪಾಯಿ ಮತ್ತು ಬ್ಯಾಗಿನಲ್ಲಿ ಇಟ್ಟಿದ 11 ಸಾವೀರ ರುಪಾಯಿ ಹಾಗೂ ಕೇನರ ಬ್ಯಾಂಕ ಬದಲಾಪೂರ ಖಾತೆ ನಂ 0215101039714 ನೇದ್ದರ ಎಟಿಎಮ್ ಮತ್ತು ಸಿಡಿಕೇಟ ಬ್ಯಾಂಕ ಕಲಬುರಗಿ ಖಾತೆ ನಂ 13002010015031 ನೇದ್ದರ ಎಟಿಎಮ್ ಕಾರ್ಡಗಳು ಕಾಣುತ್ತಿಲ್ಲ ಎಲ್ಲಾ ಕಡೆಗೆ ಹುಡುಕಾಡಿದ್ದು ಸದರಿ ನನ್ನ ಹಣ ಮತ್ತು ಎಟಿಎಮ್ ಕಾರ್ಡಗಳು ಪತ್ತೆಯಾಗಿರುವದಿಲ್ಲ ಯಾರೊ ಕಳ್ಳರುನಮ್ಮ ಮನೆಯ ಒಳಗೆ ಪ್ರವೇಶ ಮಾಡಿ ಹಣ ಮತ್ತು ಎಟಿಎಮ್ ಕಾರ್ಡಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.