ಅಪಘಾತ ಪ್ರಕರಣಗಳು :
ಗ್ರಾಮೀಣ
ಠಾಣೆ : ಶ್ರೀ ನಿತ್ಯಾನಂದ ಮತ್ತು ಪಾಶಾಮಿಯ್ಯಾ @ ಪಾಶಾಪಟೇಲ ಇಬ್ಬರು ಕೆಸರಟಗಿ ಅಯ್ಯಪ್ಪ ಗುಡಿಯಿಂದ ತಮ್ಮೂರಾದ ಇಲ್ಲಾಳ ಗ್ರಾಮಕ್ಕೆ ಹೋಗುವ ಕುರಿತು ನಿತ್ಯಾನಂದ ಇತನು ತನ್ನ ಬಜಾಜ ಡಿಸ್ಕವರಿ ಮೋಟಾರ ಸೈಕಲ KA 56 E 6031 ನೇದ್ದರ ಹಿಂದೆ ಪಾಶಾಮಿಯ್ಯಾ@ ಪಾಶಾಪಟೇಲ ಇತನಿಗೆ ಕೂಡಿಸಿಕೊಂಡು ಅತಿವೇಗದಿಂದ ನಡೆಸುತ್ತಾ ರಾತ್ರಿ 08-00 ಗಂಟೆ ಸುಮಾರಿಗೆ ಆಲಗೂಡ ಕ್ರಾಸ ದಾಟಿ ಸ್ವಲ್ಪ ಮುಂದೆ ಬಂದಾಗ ಎದುರುನಿಂದ ಬರುತ್ತಿದ್ದ ಯಾವುದೋ ವಾಹನ ಲೈಟ ಮುಖದ ಮೇಲೆ ಬೀಳಲು, ವೇಗದ ನಿಯಂತ್ರಣ ತಪ್ಪಿದಾಗ, ಮೋಟಾರ ಸೈಕಲ ಎಡಕ್ಕೆ ತಿರುಗಿಸಿದಾಗ ರೋಡಿನ ಎಡಭಾಗದಲ್ಲಿ ಇರುವ ತೆಗ್ಗಿನಲ್ಲಿ ನಾವಿಬ್ಬರು ಮೋಟಾರ ಸೈಕಲದೊಂದಿಗೆ ಬಿದ್ದೇವು. ಪಾಶಾಮಿಯ್ಯಾ ಇತನಿಗೆ ತಲೆಗೆ, ಬಲಕಿವಿಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತಸೋರಿ ಸ್ಥಳದಲ್ಲಿ ಮೃಪಟ್ಟಿದ್ದು ಇರುತ್ತದೆ. ನಿತ್ಯಾನಂದ ಇತನಿಗೂ ಕೂಡಾ ಹಣೆಗೆ ಮತ್ತು ಬಲಭುಜದ ಮೇಲೆ ಭಾರಿ ರಕ್ತಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ: 08-06-2016 ರಂದು ನನ್ನ ಮಗನಾದ ಲಕ್ಕಪ್ಪ ಪೂಜಾರಿ ಮತ್ತು ಅವನ ಗೆಳೆಯ
ಸಿದ್ದಪ್ಪ ತಂದೆ ಕಾಳಪ್ಪ ಮಾಂಗ ಸಾ: ಕಟ್ಟಿ ಸಂಗಾವಿ ಇವರಿಬ್ಬರು ಕೂಡಿ ಮೊಟಾರ ಸೈಕಲ ನಂ ಕೆಎ-32, ಕ್ಯೂ-7927 ನೇದ್ದರ ಮೇಲೆ ಕುಳಿತು ತಮ್ಮ ಕೆಲಸದ
ಸಲುವಾಗಿ ಜೇವರಗಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾರೆ. ನಾನು ಮತ್ತು ನನ್ನ ಮಗ
ರಾಜಕುಮಾರ ಇಬ್ಬರು ಮನೆಯಲ್ಲಿದ್ದಾಗ ರಾತ್ರಿ 9 ಗಂಟೆ ಸುಮಾರಿಗೆ ನಮ್ಮೂರ ಚಾಂದಪಾಶಾ ತಂದೆ ಅಬ್ದುಲರಹಿಮಾನ
ಕೊಳಕೂರ ಇತನು ಫೋನ ಮಾಡಿ ನಿಮ್ಮ ಮಗ ಲಕ್ಕಪ್ಪ ಮತ್ತು ಸಿದ್ದಪ್ಪ ಮಾಂಗ ಇವರಿಗೆ ಬೀಮಾ ಬ್ರೀಡ್ಜ
ಚಕ್ ಪೋಸ್ಟ ಹತ್ತಿರ ರೋಡಿನಲ್ಲಿ ಎಕ್ಸ್ಸಿಡೆಂಟ ಆಗಿ ನಿಮ್ಮ ಮಗ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ
ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಮಗ ರಾಜಕುಮಾರ ಇಬ್ಬರು ಸ್ಥಳಕ್ಕೆ ಬಂದು ನೋಡಲು ನನ್ನ
ಮಗ ಲಕ್ಕಪ್ಪ ಇತನಿಗೆ ನೋಡಲು ಅವನ ತಲೆಯ ಎಡಭಾಗದಲ್ಲಿ ಭಾರಿ ರಕ್ತಗಾಯ, ಎಡಗದ್ದಕ್ಕೆ, ಬಲಭಾಗ ಎದೆಯಿಂದ ರಟ್ಟೆ ವರೆಗೆ ಪೂರ್ತಿ
ಜಜ್ಜಿ ಭಾರಿ ರಕ್ತಗಾಯವಾಗಿ ಮಾಂಸ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಸಿದ್ದಪ್ಪನಿಗೂ ಕೂಡಾ
ಬಾರಿ ಗಾಯಗಳಾಗಿದ್ದವು. ಅಲ್ಲಿಯೇ ಒಂದು ಲಾರಿ ನಿಂತಿದ್ದು ಅದರ ನಂಬರ ನೋಡಲು ಎಪಿ-02-ಎಕ್ಸ್-6099 ನೇದ್ದು ಇತ್ತು. ಮತ್ತು ಮೊಟಾರ ಸೈಕಲ
ನಂಬರ ನೋಡಲು ಕೆಎ-32-ಕ್ಯೂ-7927 ಇತ್ತು. ಅಲ್ಲಿ ಜನರು ಸಹ ನರೆದಿದ್ದು, ಈ ಘಟನೆ ಬಗ್ಗೆ ಚಾಂದಪಾಶಾ ಇತನಿಗೆ
ಕೇಳಲು ಅವನು ಹೇಳಿದೆನಂದರೆ ನಾನು ಬೀಮಾ ಬ್ರೀಡ್ಜ ಚಕ್ ಪೊಸ್ಟ ಹತ್ತಿರ ಇದ್ದಾಗ ರಾತ್ರಿ ನಿಮ್ಮ
ಮಗ ಲಕ್ಕಪ್ಪ ಇತನು ತನ್ನ ಮೊಟಾರ ಸೈಕಲದ ಮೇಲೆ ಸಿದ್ದಪ್ಪ ಮಾಂಗ ಇತನಿಗೆ ಕೂಡಿಸಿಕೊಂಡು ರೋಡಿನ
ಸೈಡಿನಿಂದ ಬರುತ್ತಿದ್ದಾಗ ಅದೆ ಸಮಯಕ್ಕೆ ಕಲಬುರಗಿ ಕಡೆಯಿಂದ ಲಾರಿಯನ್ನು ಅದರ ಚಾಲಕನು ಅತಿವೇಗ
ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಿಮ್ಮ ಮಗನು ನಡೆಯಿಸುತ್ತಿದ್ದ ಮೊಟಾರ ಸೈಕಲಕ್ಕೆ
ಎದುರಾಗಿ ಡಿಕ್ಕಿ ಪಡಿಸಿದರಿಂದ ಅವರು ತಮ್ಮ ಮೊಟಾರ ಸೈಕಲದೊಂದಿಗೆ ಬಿದ್ದರು. ನಂತರ ನಾನು ಓಡಿ
ಹೋಗಿ ಎಬ್ಬಿಸಲು ನಿಮ್ಮ ಮಗನು ಮೃತಪಟ್ಟಿದ್ದನು ಅಂತಾ ತಿಳಿಸಿರುತ್ತಾನೆ ಅಂತಾ ಶ್ರೀ ಭೀಮರಾಯ
ತಂದೆ ಯಲ್ಲಪ್ಪ ಹಚಗೇರಿ ಸಾಃ ಹಸನಾಪೂರ ತಾಃಜಿಃ ಕಲಬುರಗಿ ಹಾಃವಃ ಕಟ್ಟಿಸಂಗಾವಿ ಬೀಮಾ ಬ್ರೀಡ್ಜ್
ತಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಮೈಹಿಬೂಬ ತಂದೆ ಸೈಪನಸಾಬ ನದಾಫ ಸಾ : ಗೌರ (ಕೆ) ರವರು ತಮ್ಮ ಗ್ರಾಮದಲ್ಲಿ ಮದರಸಾ
ಶಾಲೆಯಲ್ಲಿ ತರಕಾರಿ ತರುವುದು ಹಾಗೂ ಶಾಲೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿರುತ್ತೇನೆ. ಸದರಿ
ಶಾಲೆಯನ್ನು ನಮ್ಮ ಅಣ್ಣನಾದ ಮೋಹಿದ್ದಿನ ಈತನು ನಡೆಸಿಕೊಂಡು ಹೋಗುತ್ತಾನೆ. ಸದರಿ ಶಾಲೆಯ
ವಿಚಾರವಾಗಿ ನಮಗೂ ಮತ್ತು ನಮ್ಮ ದೂರದ ಅಣ್ಣ ತಮ್ಮಕಿಯವರಾದ ಅಕ್ರಮ ತಂದೆ ಜಾಫರಸಾಬ ನದಾಫ ಹಾಗೂ
ಅವನ ಅಣ್ಣ ತಮ್ಮರು ನಮ್ಮ ಮೇಲೆ ಜಗಳ ಮಾಡುತ್ತಾ ಬಂದಿದ್ದು, ನಮ್ಮ ಮೇಲೆ ದ್ವೇಷ
ಸಾದಿಸುತ್ತಿರುತ್ತಾರೆ. ದಿನಾಂಕ 08-06-2016 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಮ್ಮ
ಮನೆಯ ಮುಂದೆ ನೀರು ತಗೆದುಕೊಂಡು ಬರಲು ಕೊಡ ತಗೆದುಕೊಂಡು ಹೊಗುತ್ತಿದ್ದಾಗ ಸದರಿ ನಮ್ಮ ಮೇಲೆ
ದ್ವೇಷ ಸಾದಿಸುತ್ತಿದ್ದ ಅಕ್ರಮ ನದಾಫ ಈತನ ಮನೆಯ ಮುಂದೆ ನಾನು ತಗೆದುಕೊಂಡು ಹೊದ ಕೊಡದಲ್ಲಿ
ಸ್ವಲ್ಪ ನೀರು ಇದ್ದು ಅವನ್ನು ಚೆಲ್ಲಿದೆನು, ಆಗ ಮನೆಯ ಮುಂದೆ
ನಿಂತಿದ್ದ ಆರೀಫ್ ಈತನು ಬೋಸಡಿ ಮಗನೆ ನಮಗೆ ನೋಡಿ ನಮ್ಮ ಮನೆಯ ಮುಂದೆ ನೀರು ಚೆಲ್ಲುತ್ತಿ ಅಂತಾ
ಜಗಳ ಮಾಡಿರುತ್ತಾನೆ. ಮದ್ಯಾಹ್ನ 3:00 ಗಂಟೆ ಸುಮಾರಿಗೆ ನಾನು ಮತ್ತು ಸೋಲ್ಲಾಪೂರದಿಂದ ಬಂದು
ನಮ್ಮ ಸಂಭಂದಿಕರಾದ 1) ಹಸನ ತಂದೆ ಬಾಬು ನದಾಪ 2) ಆರೀಫ್ ತಂದೆ ಆದಮ್ಮ ಶೇಖ 3) ಬಾಬಾ ತಂದೆ ಸೈಯದ
ಶೇಖ 4) ಅಲ್ತಾಫ ತಂದೆ ಸಲೀಂ ನದಾಫ 5) ರಿಯಾಜ ತಂದೆ ರಸೂಲ ನಧಾಪ ಸಾ|| ಎಲ್ಲರೂ ಸೋಲ್ಲಾಪೂರ
ಇವರು ಬಂದಿದ್ದು, ಎಲ್ಲರೂ ಕೂಡಿ ನಮ್ಮ ಮನೆಯ ಮುಂದೆ ಮಾತಾಡುತ್ತಾ
ನಿಂತಿದ್ದಾಗ, ನಮ್ಮ ಜೋತೆಗೆ ಜಗಳ ಮಾಡುತ್ತಿದ್ದ 1) ಅಕ್ರಮ ತಂದೆ
ಜಾಫರಸಾಬ ನಧಾಪ 2) ಸಾದಿಕ ತಂದೆ ಜಾಫರಸಾಬ ನಧಾಫ 3) ಮನ್ನೂರಸಾಬ ತಂದೆ ಜಾಫರಸಾಬ ನಧಾಫ 4) ಬಾಕರ
ತಂದೆ ಜಾಫರಸಾಬ ನಧಾಫ 5) ಮಲಂಗ ತಂದೆ ಮುಲ್ಕಾಸಾಬ ನಧಾಫ 6) ಇರ್ಫಾನ ತಂದೆ ಮುಬಾರಕ್ ನಧಾಪ ಸಾ||
ಎಲ್ಲರೂ
ಗೌರ (ಕೆ) ಇವರೆಲ್ಲರೂ ಮತ್ತು ಇನ್ನು ಕೆಲವು ಜನರು ಕೂಡಿ ಗುಂಪುಕಟ್ಟಿಕೊಂಡು ಬಡಿಗೆ ಮತ್ತು
ಕಲ್ಲು ಹಿಡಿಸಿಕೊಂಡು ನಮ್ಮ ಹತ್ತಿರ ಬಂದು ನನಗೆ ಏನೊ ಸೂಳೆ ಮಗನೆ ನಮ್ಮ ಜೋತೆಗೆನೆ ಜಗಳ ಮಾಡ್ತಿ
ಅಂತಾ ಬೈದರು, ಆಗ ನನ್ನ ಜೋತೆಗೆ ಇದ್ದ ನನ್ನ ಸಂಭಂದಿಕರು ಯಾಕ
ಇವರ ಜೋತೆಗೆ ಜಗಳ ಮಾಡ್ತಿರಿ ಅಂತಾ ಕೇಳಿದಕ್ಕೆ, ಅವರಿಗೆ ಬೋಸಡಿ
ಮಕ್ಕಳ್ಯಾ ಅವರ ಪರವಾಗಿ ನಮ್ಮ ಮೇಲೆ ಗುಂಡಾಗಿರಿ ಮಾಡಕಾ ಬಂದಿರಿ ಅಂತಾ ಎಲ್ಲರೂ ಕೂಡಿ ನನ್ನ
ಜೋತೆಗೆ ಇದ್ದ ಹಸನ ನದಾಫ, ಆರೀಫ್ ಶೇಖ, ಬಾಬಾ ಶೇಖ್, ಅಲ್ತಾಫ್ ನಧಾಪ, ರಿಯಾಜ ನಧಾಫ್ ಇವರಿಗೆ
ಅವಾಚ್ಯ ಶಬ್ದಳಿಂದ ಬೈಯುತ್ತಾ ಕೈಯಿಂದ ಹಾಗೂ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆಯುವುದು, ಕಾಲಿನಿಂದ ಒದೆಯುವುದು
ಮಾಡುತ್ತಿದ್ದರು, ಹಾಗೂ ನಮ್ಮ ಮೂರು ಮೋಟರ ಸೈಕಲಗಳ ಮೇಲೆ ಕಲ್ಲಿನಿಂದ
ಮತ್ತು ಬಡಿಗೆಯಿಂದ ಹೊಡೆದು ಮೂರು ಮೋಟರ ಸೈಕಲಗಳನ್ನು ಜಕಂ ಮಾಡಿರುತ್ತಾರೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಉಸ್ಮಾನಲಿ ತಂದೆ ಜಾಫರಸಾಬ ನಧಾಪ ಸಾ : ಗೌರ (ಕೆ) ಇವರ ಊರಿನಲ್ಲಿ ಮೋಹಿದ್ದಿನ ತಂದೆ
ಸೈಫನಸಾಬ ನದಾಫ ಈತನು ಮದರಸಾ ಶಾಲೆ ನಡೆಸುತ್ತಿರುತ್ತಾನೆ. ಸದರಿ ಮೋಹಿದ್ದಿನ ಈತನು ತನ್ನ ಶಾಲೆಯ
ಹುಡಗರಿಗೆ ಸ್ಮಶಾನದಲ್ಲಿ ಬರ್ಹಿರದೆಸೆಗೆ ಕಳುಹಿಸುತ್ತಿರುತ್ತಾನೆ. ಇದರಿಂದ ನಾನು ಮತ್ತು ನನ್ನ
ಅಣ್ಣನಾದ ಅಕ್ರಮ ಇಬ್ಬರು ಮೋಹಿದ್ದಿನ ಈತನಿಗೆ ಇಲ್ಲಿ ಹುಡುಗರಿಗೆ ಬರ್ಹಿರದೆಸೆಗೆ ಕಳುಹಿಸಬೇಡ
ಅಂತಾ ಹೇಳೀದಕ್ಕೆ ಸದರಿ ಮೋಹಿದ್ದಿನ ಈತನು ನಮ್ ಮೇಲೆ ದ್ವೇಷ ಮಾಡಿಕೊಂಡು ದಿನಾಂಕ 08-06-2016
ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಣ್ಣನಾದ ಅಕ್ರಮ ಇಬ್ಬರು ನಮ್ಮ
ಮನೆಯ ಮುಂದೆ ನಿಂತಿದ್ದಾಗ ಸದರಿ ಮೋಹಿದ್ದಿನ ಈತನ ತಮ್ಮನಾದ ಮೈಹಿಬೂಬ ಈತನು ಕೊಡದಲ್ಲಿ ನೀರು
ತಗೆದುಕೊಂಡು ಬಂದು ನಮ್ಮ ಮನೆಯ ಮುಂದೆ ನೀರು ಚೆಲ್ಲಿದನು ಅದಕ್ಕೆ ನಾನು ಮತ್ತು ನನ್ನ ಅಣ್ಣ
ಇಬ್ಬರು ಮೈಹಿಬೂಬನಿಗೆ ಯಾಕ ನೀರು ಚೆಲ್ಲುತ್ತಿ ಕೆಸರು ಆಗುತ್ತದೆ ಅಂತ ಹೇಳಿದಕ್ಕೆ ಮೈಹಿಬೂಬನು
ನಮ್ಮ ಜೋತೆಗೆ ಜಗಳ ಮಾಡಿರುತ್ತಾನೆ. ಮದ್ಯಾಹ್ನ 3:00 ಗಂಟೆ ಸುಮಾರಿಗೆ ನಮ್ಮ ಮನೆಯ ಹತ್ತಿರ ನಾನು
ಮತ್ತು ನನ್ನ ಅಣ್ಣ ತಮ್ಮರಾದ 1) ಸಾದಿಕ ತಂದೆ ಜಾಫರಸಾಬ ನಧಾಫ 2) ಮನ್ಸೂರಅಲಿ ತಂದೆ ಜಾಫರಸಾಬ
ನದಾಫ 3) ಅಕ್ರಮ ತಂದೆ ಜಾಫರಸಾಬ ನದಾಫ ನಾಲ್ಕು ಜನರು ನಿಂತಿದ್ದಾಗ ನಮ್ಮ ಜೋತೆಗೆ ಜಗಳ ಮಾಡುತ್ತಿದ್ದ
1) ಮೋಹಿದ್ದಿನ ತಂದೆ ಸೈಫನಸಾಬ ನದಾಫ ಅವನ ತಮ್ಮನಾದ 2) ಮೈಹಿಬೂಬ ತಂದೆ ಸೈಫನಸಾಬ ನದಾಫ ಸಾ||
ಇಬ್ಬರು
ಗೌರ (ಕೆ) ಹಾಗೂ ಇವರ ಸಂಭಂದಿಕರಾದ 3) ಹಸನ ತಂದೆ ಬಾಬು ನದಾಪ 4) ಆರೀಫ್ ತಂದೆ ಆದಮ್ಮ ಶೇಖ 5)
ಬಾಬಾ ತಂದೆ ಸೈಯದ ಶೇಖ 6) ಅಲ್ತಾಫ ತಂದೆ ಸಲೀಂ ನದಾಫ 7) ರಿಯಾಜ ತಂದೆ ರಸೂಲ ನಧಾಪ ಸಾ||
ಎಲ್ಲರೂ
ಸೋಲ್ಲಾಪೂರ ಇವರೆಲ್ಲರೂ ಕೂಡಿ ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ನಮ್ಮ ಹತ್ತಿರ ಬಂದು
ನಮಗೆ ಏನ್ರೊ ಬೋಸಡಿ ಮಕ್ಕಳೆ ಮನೆಯ ಮುಂದೆ ನೀರು ಚೆಲ್ಲಿದರೆ ಏನು ಆಯ್ತು, ನಮ್ಮ ಜೋತೆನೆ ಜಗಳ
ಮಾಡ್ತಿರಿ ಅಂತಾ ಎಲ್ಲರೂ ಕೂಡಿ ನನಗೆ ಮತ್ತು ನನ್ನ ಅಣ್ಣಂದಿರಾದ ಸಾದಿಕ ಹಾಗೂ ಮನ್ಸುರಲಿ ಮೂರು
ಜನರಿಗೂ ಕೈಯಿಂದ ಹಾಗೂ ಬಡಿಗೆಯಿಂದ ಮತ್ತು ಕಲ್ಲಿನಿಂದ ಹೊಡೆಯುವುದ ಕಾಲಿನಿಂದ ಒದೆಯುವುದು
ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ
:
ಅಫಜಲಪೂರ ಠಾಣೆ : ದಿನಾಂಕ 08-06-2016 ರಂದು ಮಣೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಆವರಣದ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದುದನ್ನು
ಖಚಿತಪಡಿಸಿಕೊಂಡು ದಾಳಿ ಮಾಡಿ ಎರಡು ಜನರನ್ನು ಹಿಡಿದು ಕೊಂಡಿದ್ದು ಒಬ್ಬನು ಓಡಿ ಹೋಗಿದ್ದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ನಾಗಪ್ಪ ತಂದೆ ಶಾಂತಪ್ಪ ಪಾಟೀಲ ಸಾ|| ಮಣೂರ ಗ್ರಾಮ 2) ಮಲ್ಲಪ್ಪ @ ಮಲ್ಲು ತಂದೆ ಶಿವರಾಯ ದುಧನಿ ಸಾ|| ಮಾಶಾಳ ಗ್ರಾಮ ಅಂತಾ ತಿಳಿಸಿದರು. ಸದರಿಯವರನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿರಿ, ಯಾರಿಗೆ ಕೊಡುತ್ತಿರಿ ಎಂಬುದರ ಬಗ್ಗೆ ವಿಚಾರಿಸಿದ್ದು, ಸದರಿಯವರು ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು ಈಗ ಓಡಿ ಹೋದ ರಾಜಕುಮಾರ @ ರಾಜು ತಂದೆ ಶಾಂತಪ್ಪ ಎಮ್ಮಿ ಸಾ|| ಮಣೂರ ಈತನಿಗೆ ಕೊಡುತ್ತೇವೆ ಅಂತಾ ತಿಳಿಸಿದರು.. ನಂತರ ಸದರಿಯವರ ಅಂಗ ಶೋದನೆ ಮಾಡಲಾಗಿ ನಾಗಪ್ಪ ಪಾಟೀಲ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 950/- ರೂ ನಗದು ಹಣ, ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ, ಒಂದು ಪೇನ್ನ ದೋರೆತವು. ಮಲ್ಲಪ್ಪ ದುಧನಿ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 840/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಹೀಗೆ ಒಟ್ಟು 1790/- ರೂ ನಗದು ಹಣ, 2 ಮಟಕಾ ಚೀಟಿ, 2 ಪೆನ್ನ ದೊರೆತವು. ಸದರಿಯವರನ್ನು ವಶಕ್ಕೆ
ತೆಗೆದುಕೊಂಡು ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment